Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಎಸ್‌ಐಆರ್ ಬಗ್ಗೆ ಬಡಾಯಿ...

ಎಸ್‌ಐಆರ್ ಬಗ್ಗೆ ಬಡಾಯಿ ಕೊಚ್ಚಿಕೊಳ್ಳುತ್ತಿರುವ ಚುನಾವಣಾ ಆಯೋಗ ಉತ್ತರಿಸಬೇಕಾದ ಪ್ರಶ್ನೆಗಳಿಗೆ ಯಾಕೆ ಜಾರಿಕೊಳ್ಳುತ್ತಿದೆ?

ಪಿ.ಎಚ್. ಅರುಣ್ಪಿ.ಎಚ್. ಅರುಣ್9 Oct 2025 12:06 PM IST
share
ಎಸ್‌ಐಆರ್ ಬಗ್ಗೆ ಬಡಾಯಿ ಕೊಚ್ಚಿಕೊಳ್ಳುತ್ತಿರುವ ಚುನಾವಣಾ ಆಯೋಗ ಉತ್ತರಿಸಬೇಕಾದ ಪ್ರಶ್ನೆಗಳಿಗೆ ಯಾಕೆ ಜಾರಿಕೊಳ್ಳುತ್ತಿದೆ?

ಬಿಹಾರದಲ್ಲಿ ಚುನಾವಣೆಗಳನ್ನು ಮತದಾರರ ಪಟ್ಟಿಯ ಆಧಾರದ ಮೇಲೆ ಘೋಷಿಸಲಾಗಿದೆ. ಆದರೆ, ಅದರ ಭವಿಷ್ಯ ಸುಪ್ರೀಂ ಕೋರ್ಟ್‌ನ ತೀರ್ಪಿನ ಮೇಲೆ ಅವಲಂಬಿತವಾಗಿದೆ.

ಎಸ್‌ಐಆರ್ ಪಟ್ಟಿ ಅಂತಿಮಗೊಳಿಸಿದೆ ಎಂದ ಮಾತ್ರಕ್ಕೆ ಎಲ್ಲಾ ಸಮಸ್ಯೆಗಳು ಬಗೆಹರಿದಿವೆ ಎಂದೇನಲ್ಲ. ಅನೇಕ ಪ್ರಶ್ನೆಗಳನ್ನು ಹೊಸದಾಗಿ ಎತ್ತಲಾಗುತ್ತಿದೆ ಮತ್ತು ಅವುಗಳಿಗೆ ಉತ್ತರ ಇನ್ನೂ ಸಿಗಬೇಕಿದೆ. ಅವುಗಳಿಗೆ ಉತ್ತರಿಸದೆ ಬದಿಗೆ ಸರಿಸಲಾಗಿದೆಯೇ ಎಂಬ ಅನುಮಾನಗಳೂ ಎದ್ದಿವೆ.

ಮುಖ್ಯ ಚುನಾವಣಾ ಆಯುಕ್ತರು ಎಸ್‌ಐಆರ್ ಬಗ್ಗೆಯೇ ದೊಡ್ಡದಾಗಿ ಹೇಳಿಕೊಳ್ಳುತ್ತಿದ್ದಾರೆ. ಬಿಹಾರದ ಎಸ್‌ಐಆರ್ ಅನ್ನು ದೇಶಕ್ಕೆ ಸ್ಫೂರ್ತಿ ಎಂದೂ ಹೇಳುತ್ತಿದ್ದಾರೆ.

ಆದರೆ ಕೋರ್ಟ್ ಮುಂದೆ ಇರುವ ಮತ್ತು ಬಿಡುಗಡೆಯಾದ ಅಂತಿಮ ಪಟ್ಟಿಯ ಬಗ್ಗೆ ಇರುವ ಪ್ರಶ್ನೆಗಳಿಗೆ ಉತ್ತರ ಎಲ್ಲಿವೆ?

ಯೋಗೇಂದ್ರ ಯಾದವ್ ಹೇಳುವ ಪ್ರಕಾರ, ಬಿಹಾರದ ಜನಸಂಖ್ಯೆಗೆ ಅನುಗುಣವಾಗಿ ಮತದಾರರ ಸಂಖ್ಯೆ ಕನಿಷ್ಠ 8.22 ಕೋಟಿ ಇರಬೇಕು. ಆದರೆ ಅಂತಿಮ ಎಸ್‌ಐಆರ್ ಪಟ್ಟಿಯಲ್ಲಿ ಈ ಪೈಕಿ 80 ಲಕ್ಷ ಮತದಾರರು ಕಾಣೆಯಾಗಿದ್ದಾರೆ. ಇದು ದೊಡ್ಡ ಮಟ್ಟದ ಅನುಮಾನ ಹುಟ್ಟುಹಾಕಿದೆ. ಈ 80 ಲಕ್ಷ ಮತದಾರರು ಎಲ್ಲಿ ಹೋಗಿದ್ದಾರೆ ಮತ್ತು ಅವರನ್ನು ಮತದಾರರ ಪಟ್ಟಿಯಲ್ಲಿ ಏಕೆ ಸೇರಿಸಲಾಗಿಲ್ಲ? ಈ 80 ಲಕ್ಷ ಮತದಾರರು ಕಾಣೆಯಾಗಿರುವ ಬಗ್ಗೆ ಏಕೆ ಏನನ್ನೂ ಹೇಳುತ್ತಿಲ್ಲ?

1.3 ಕೋಟಿಗೂ ಹೆಚ್ಚು ಮತದಾರರ ವಿಳಾಸಗಳೇ ಅನುಮಾನ ಹುಟ್ಟಿಸುತ್ತಿವೆ ಮತ್ತು ಅದರ ಬಗ್ಗೆಯೂ ಯಾವುದೇ ಉತ್ತರವಿಲ್ಲ.

ಯೋಗೇಂದ್ರ ಯಾದವ್ ‘ಇಂಡಿಯನ್ ಎಕ್ಸ್‌ಪ್ರೆಸ್’ನಲ್ಲಿ ಬರೆದಿರುವ ಪ್ರಕಾರ, ಅಂತಿಮ ಪಟ್ಟಿಯಲ್ಲಿ 24,000 ಮತದಾರರ ಉಲ್ಲೇಖವನ್ನು ಮನಸ್ಸಿಗೆ ಬಂದಂತೆ ಮಾಡಲಾಗಿದೆ.

ಅಂದರೆ, ಅ, ಬ, ಕ, ಡ ಎಂದೆಲ್ಲ ಅಸಂಬದ್ಧವಾಗಿ ಉಲ್ಲೇಖಿಸಲಾಗಿದ್ದು, ಕಡೆಗೆ ಅದನ್ನು ಹೇಗೂ ಬದಲಾಯಿಸುವ ಸಾಧ್ಯತೆ ಖಂಡಿತ ಇದೆ. ಅವರು ಪುರುಷ, ಮಹಿಳೆ ಮತ್ತು ಇತರರು ಇವುಗಳಲ್ಲಿ ಯಾವ ವರ್ಗಕ್ಕೆ ಸೇರಿದ್ದಾರೆ ಎಂಬುದು ಕೂಡ ಸ್ಪಷ್ಟವಾಗಿಲ್ಲ.

2,00,000ಕ್ಕೂ ಹೆಚ್ಚು ಮತದಾರರ ವಿಳಾಸಗಳನ್ನೇ ನಮೂದಿಸಿಲ್ಲ. ಇದೆಲ್ಲವನ್ನೂ ಯೋಗೇಂದ್ರ ಯಾದವ್ ತಮ್ಮ ಲೇಖನದಲ್ಲಿ ವಿವರಿಸುತ್ತಾರೆ.

ಬಿಹಾರದಲ್ಲಿ 24 ಲಕ್ಷ ಮನೆಗಳಲ್ಲಿ ತಲಾ 10ಕ್ಕೂ ಹೆಚ್ಚು ಜನರು ವಾಸಿಸುತ್ತಿದ್ದಾರೆ. ಚುನಾವಣಾ ಆಯೋಗ ಅಂತಹ ವಿಳಾಸಗಳನ್ನು ಅನುಮಾನಾಸ್ಪದವೆಂದು ಪರಿಗಣಿಸುತ್ತದೆ. ಆದರೂ, ಅಂತಹ ವಿಳಾಸಗಳನ್ನು ಹೊಂದಿರುವ ಮತದಾರರು ಅಂತಿಮ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

ಈ ಉದಾಹರಣೆಗಳನ್ನು ಉಲ್ಲೇಖಿಸಿರುವ ಯೋಗೇಂದ್ರ ಯಾದವ್, ಅಂತಹ ಪಟ್ಟಿಯನ್ನು ಆದರ್ಶ ಪಟ್ಟಿ ಎಂದು ಕರೆಯಬಹುದೇ ಎಂಬ ಪ್ರಶ್ನೆಯನ್ನು ಎತ್ತುತ್ತಾರೆ.

ನಕಲಿ ಮತದಾರರ ಸಂಖ್ಯೆಯೇ 5,00,000 ಎಂದು ಯೋಗೇಂದ್ರ ಯಾದವ್ ಅಂದಾಜಿಸಿದ್ದಾರೆ.

ಆದರೆ ಇನ್ನೊಂದೆಡೆ, ರಿಪೋರ್ಟರ್ಸ್ ಕಲೆಕ್ಟಿವ್ ತನಿಖೆ 14.35 ಲಕ್ಷ ನಕಲಿ ಮತದಾರರನ್ನು ಪತ್ತೆಹಚ್ಚಿದೆ.

ಅಂದರೆ, ಈ ಮತದಾರರ ಉಲ್ಲೇಖಗಳಲ್ಲಿ ಮತದಾರರ ಸಂಖ್ಯೆಗಳು ಬೇರೆಯಿದ್ದರೂ, ಮತದಾರರ ಹೆಸರು ಮತ್ತು ಪೋಷಕರ ಹೆಸರುಗಳು ಒಂದೇ ಆಗಿರುತ್ತವೆ.

ಆಯೋಗ ಮತ್ತು ಅದರ ಸಿಬ್ಬಂದಿ ವಾಸ್ತವವಾಗಿ ಮನೆಮನೆಗೆ ಹೋಗಿ ಮತದಾರರ ಪರಿಶೀಲನೆ ನಡೆಸಿದ್ದರೆ, ಅಂತಹ ದೋಷಗಳು ಉಂಟಾಗುತ್ತಿರಲಿಲ್ಲ ಎಂದು ರಿಪೋರ್ಟರ್ಸ್ ಕಲೆಕ್ಟಿವ್ ವರದಿ ಪ್ರತಿಪಾದಿಸುತ್ತದೆ.ಅದು ಹೇಳುವ ಪ್ರಕಾರ, ಇಲ್ಲಿ ನಡೆದಿರುವುದು ಸ್ಪಷ್ಟ ವಂಚನೆಯಾಗಿದೆ.

ಈ ಪ್ರಶ್ನೆ ಉದ್ಭವಿಸಿದಾಗ, ಯಾವುದೇ ವಿಳಾಸ ಕಾಲ್ಪನಿಕವಲ್ಲ ಎಂದು ಹೇಳಬೇಕಾದ ಆಯೋಗ ಏನನ್ನೂ ಹೇಳುತ್ತಿಲ್ಲ. ಪತ್ರಕರ್ತರು ಇದರ ಬಗ್ಗೆಲ್ಲ ಹೇಳಿದರೆ, ದಾರಿತಪ್ಪಿಸುವ ಯತ್ನ ಎಂದು ತಳ್ಳಿಹಾಕುತ್ತದೆ.

ನ್ಯೂಸ್ ಲಾಂಡ್ರಿ ವರದಿ ಪ್ರಕಾರ, 2,92,000ಕ್ಕೂ ಹೆಚ್ಚು ಮತದಾರರ ಮನೆ ಸಂಖ್ಯೆಯನ್ನು ಸೊನ್ನೆ ಎಂದು ದಾಖಲಿಸಲಾಗಿದೆ. ಮತದಾರರ ಪಟ್ಟಿಯ ಶುದ್ಧೀಕರಣ ಎನ್ನುತ್ತಿರುವಾಗ, ಒಂದೇ ಮನೆಯ ವಿಳಾಸದಲ್ಲಿ 1,000 ಮತದಾರರು ನೋಂದಾಯಿಸಲ್ಪಟ್ಟಿದ್ದರೂ, ವಿಳಾಸಗಳ ಬದಲಿಗೆ ಚುಕ್ಕೆಗಳನ್ನು ನಮೂದಿಸಲಾಗಿದೆ.

ವರದಿ ಹೇಳುವ ಪ್ರಕಾರ, ಅಲ್ಲಿ ಹೋಗಿ ಪರಿಶೀಲಿಸಿದರೆ, ಎಲ್ಲಿಯೂ ಮನೆ ಸಿಗುವುದಿಲ್ಲ.

ತನ್ನ ತಪ್ಪುಗಳನ್ನು ಹಿಡಿದುಹಾಕುವುದು ಸುಲಭವಾಗಬಹುದು ಎಂಬ ಕಾರಣದಿಂದಾಗಿಯೇ ಆಯೋಗ ಎಸ್‌ಐಆರ್ ಡೇಟಾವನ್ನು ಬಿಡುಗಡೆ ಮಾಡುತ್ತಿಲ್ಲವೇ ಎಂಬ ಪ್ರಶ್ನೆಯೂ ಎದ್ದಿದೆ.

ಶುದ್ಧೀಕರಣ ಎಂದು ಹೇಳಲಾಗುವ ಈ ಪ್ರಕ್ರಿಯೆಯಲ್ಲಿ ಎಷ್ಟು ಜನರನ್ನು ಅಳಿಸಲಾಗಿದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಈ ಡೇಟಾ ಅಗತ್ಯವಾಗಿದೆ.ಹಾಗಾದರೆ, ಬಿಹಾರ ಎಸ್‌ಐಆರ್ ಪ್ರಕರಣದಲ್ಲಿ ಚುನಾವಣಾ ಆಯೋಗ ಇದನ್ನು ಏಕೆ ಬಿಡುಗಡೆ ಮಾಡಿಲ್ಲ?

ಇದಲ್ಲದೆ, ಈ ಅತ್ಯಾಧುನಿಕ ಡೇಟಾ ಜೊತೆಗೆ, ಅಳಿಸಲಾದ ಮತದಾರರ ಹೆಸರುಗಳು ಮತ್ತು ಅಳಿಸುವಿಕೆಗೆ ಕಾರಣಗಳು ಸೇರಿದಂತೆ ಹೆಚ್ಚಿನ ಡೇಟಾವನ್ನು ಕೂಡ ಆಯೋಗ ಹಂಚಿಕೊಳ್ಳಬೇಕು ಎಂಬುದು ಪರಿಣಿತರ ಒತ್ತಾಯ.

ಯಾವುದೇ ಪ್ರಶ್ನೆಗಳನ್ನು ತಪ್ಪಿಸಲು ಮತ್ತು ಪರಿಶೀಲಿಸಲು ಸುಲಭವಾಗುವಂತೆ ಚುನಾವಣಾ ಆಯೋಗ ಅಂತಹ ಡೇಟಾವನ್ನು ಒದಗಿಸುವುದು ನಿರ್ಣಾಯಕವಾಗಿದೆ. ಈ ಪ್ರಶ್ನೆಗಳಿಗೆ ಆಯೋಗದಿಂದ ಉತ್ತರವಿಲ್ಲ.

ಮತದಾರರ ಪಟ್ಟಿಯನ್ನು ಪರಿಶೀಲಿಸುವುದು ಇನ್ನೂ ಬಾಕಿ ಇದೆ. ಆದರೂ, ಆಯೋಗ ಎಸ್‌ಐಆರ್ ಬಗ್ಗೆ ಬಹಳ ದೊಡ್ಡದಾಗಿ ಹೆಳಿಕೊಳ್ಳುತ್ತಿದೆ, ಸಂಭ್ರಮಿಸುತ್ತಿದೆ. ಅಂತಿಮ ಎಸ್‌ಐಆರ್ ಪಟ್ಟಿಯಲ್ಲಿ ಕನಿಷ್ಠ 65 ಲಕ್ಷ ಮತದಾರರ ಹೆಸರುಗಳು ಇಲ್ಲವಾಗಿರುವಾಗ ಇಲ್ಲಿ ಸಂಭ್ರಮಿಸಲು ಏನಿದೆ ಎಂಬ ಪ್ರಶ್ನೆಯನ್ನು ಯೋಗೇಂದ್ರ ಯಾದವ್ ಎತ್ತಿದ್ದಾರೆ.

ಅಂದಾಜಿನ ಪ್ರಕಾರ 2 ಕೋಟಿ ಮತದಾರರ ಹೆಸರುಗಳನ್ನು ಅಳಿಸಲಾಗುತ್ತಿತ್ತು. ಆದರೆ, ಸುಪ್ರೀಂ ಕೋರ್ಟ್ ಜಾಗರೂಕವಾಗಿರುವುದರಿಂದ ಇದು ಆಗಿಲ್ಲ ಎಂದಿದ್ದಾರೆ ಯೋಗೇಂದ್ರ ಯಾದವ್.

ಕೋರ್ಟ್ ಗಮನಿಸುತ್ತಿದೆ ಎಂಬ ಕಾರಣದಿಂದ ಆಯೋಗ ಇದನ್ನೆಲ್ಲ ನಿಯಂತ್ರಿಸಿದೆ. ಹೀಗೆಲ್ಲ ಇರುವಾಗ, ನ್ಯಾಯಾಲಯ ಈ ವಿಷಯದ ಬಗ್ಗೆ ತನ್ನ ಅಂತಿಮ ನಿರ್ಧಾರ ನೀಡಿದ ಬಳಿಕವೇ ಚುನಾವಣೆ ಘೋಷಿಸಿದ್ದರೆ ಒಳ್ಳೆಯದಿತ್ತಲ್ಲವೆ ಎಂಬ ಪ್ರಶ್ನೆಯನ್ನೂ ಅವರು ಎತ್ತಿದ್ದಾರೆ.

ಚುನಾವಣಾ ಆಯೋಗದ ಪತ್ರಿಕಾಗೋಷ್ಠಿಯಲ್ಲಿಯೂ ಈ ಪ್ರಶ್ನೆ ಬಂತು.

ಅಗತ್ಯವಿದ್ದರೆ, ಸಂಪೂರ್ಣ ಪ್ರಕ್ರಿಯೆಯನ್ನು ಕಾನೂನುಬಾಹಿರ ಎಂದು ಘೋಷಿಸಬಹುದು ಎಂದು ನ್ಯಾಯಾಲಯ ಈಗಾಗಲೇ ಹೇಳಿದೆ. ಹಾಗಾದರೆ, ಈಗ ಬಿಹಾರದ ಎಸ್‌ಐಆರ್ ಪ್ರಕ್ರಿಯೆ ಅಂತಿಮ ಅನುಮೋದನೆ ಪಡೆದಿದೆ ಎಂದು ಸುಪ್ರೀಂ ಕೋರ್ಟ್ ನಂಬುತ್ತದೆಯೇ ಎಂಬ ಪ್ರಶ್ನೆಯನ್ನು ಎತ್ತಲಾಯಿತು.

ಈಗ ನಿಜವಾಗಿಯೂ ಕುತೂಹಲ ಇರುವುದು, ಸುಪ್ರೀಂ ಕೋರ್ಟ್ ವಿಚಾರಣೆಯಲ್ಲಿ ಇದರ ಭವಿಷ್ಯ ಏನಾಗಿರುತ್ತದೆ ಎಂಬುದು.

ಈ ಸಂದರ್ಭದಲ್ಲಿ ನ್ಯಾಯಾಲಯ ಎಸ್‌ಐಆರ್ ಅನ್ನು ಕಾನೂನುಬಾಹಿರ ಎಂದು ಘೋಷಿಸಬಹುದೇ?

ಚುನಾವಣೆ ಘೋಷಣೆಯಾದ ನಂತರ, ರಾಜಕೀಯ ಪಕ್ಷಗಳಿಗೆ ಸಮಯವಿಲ್ಲ ಮತ್ತು ಸಾಮಾನ್ಯ ಜನರು ಮತದಾರರ ಪಟ್ಟಿಗಳಂತಹ ತಾಂತ್ರಿಕ ವಿಷಯಗಳ ಬಗ್ಗೆಲ್ಲ ಯೋಚಿಸಲು ಸಾಧ್ಯವಿಲ್ಲ. ಹಾಗಾಗಿಯೇ, ಎಸ್‌ಐಆರ್ ಬಗ್ಗೆ ಚುನಾವಣಾ ಘೋಷಣೆಗೂ ಮೊದಲೇ ಮುಗಿದು ತೀರ್ಪು ಬಂದಿದ್ದರೆ ಉತ್ತಮವಾಗಿತ್ತು.

ವಿಚಾರಣೆಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ, ಆಯೋಗ ಹಲವಾರು ವಿಷಯಗಳಲ್ಲಿ ಸೋಲನ್ನು ಎದುರಿಸಿದೆ ಎಂದು ತಿಳಿದುಬರುತ್ತದೆ.

ಚುನಾವಣಾ ಆಯೋಗ ಆಧಾರ್ ಅನ್ನು ಸ್ವಲ್ಪ ಮಟ್ಟಿಗೆ ವಿರೋಧಿಸಿತು. ಆದರೆ ನ್ಯಾಯಾಲಯ ಆಧಾರ್ ಅನ್ನು 12 ನೇ ದಾಖಲೆಯಾಗಿ ಸೇರಿಸಲು ಆದೇಶಿಸಿತು.

ಅರ್ಜಿದಾರರು ಹೆಸರುಗಳು, ವಿಳಾಸಗಳು ಮತ್ತು ವಯಸ್ಸನ್ನು ಓದಲು ಆಗುವ ರೀತಿಯಲ್ಲಿ ಮತದಾರರ ಪಟ್ಟಿ ಒದಗಿಸಬೇಕೆಂದು ನ್ಯಾಯಾಲಯ ಆದೇಶಿಸಬೇಕಾಯಿತು.

ಮೂರನೆಯದಾಗಿ, ಆಯೋಗ ಹೆಸರುಗಳನ್ನು ಏಕೆ ತೆಗೆದುಹಾಕಲಾಗಿದೆ ಎಂಬುದನ್ನು ವಿವರಿಸಬೇಕಾಗುತ್ತದೆ.

ಆಯೋಗ ತಾನೇ ಇವನ್ನೆಲ್ಲ ಮಾಡಿದ್ದಿದ್ದರೆ ನ್ಯಾಯಾಲಯ ಆದೇಶ ನೀಡಬೇಕಾದ ಅಗತ್ಯ ಬರುತ್ತಿರಲಿಲ್ಲ. ಈಗ ಪತ್ರಕರ್ತರು ಚುನಾವಣಾ ಆಯೋಗದ ವಿಶ್ವಾಸಾರ್ಹತೆಯ ಬಗ್ಗೆ ಕೇಳುತ್ತಿರುವ ಪ್ರಶ್ನೆಗಳಿಗೂ ಉತ್ತರಿಸಲು ಆಯೋಗಕ್ಕೆ ಸಾಧ್ಯವಾಗುತ್ತಿಲ್ಲ.

ಚುನಾವಣಾ ಆಯೋಗದ ವಿಶ್ವಾಸಾರ್ಹತೆ ಅಪಾಯದಲ್ಲಿದೆ ಎನ್ನುವುದು ದೊಡ್ಡ ಸವಾಲು. ಇದು ಕೇವಲ ರಾಜಕೀಯ ಪಕ್ಷಗಳು ಮತ್ತು ಚುನಾವಣಾ ಆಯೋಗದ ನಡುವಿನ ಪ್ರಶ್ನೆಯಲ್ಲ. ಈ ಪ್ರಶ್ನೆಯನ್ನು ಸಾರ್ವಜನಿಕರು ಕೂಡ ಎತ್ತುತ್ತಿದ್ದಾರೆ. ಆಯೋಗ ಹೇಗೆ ಅವೆಲ್ಲದಕ್ಕೆ ಉತ್ತರಿಸುತ್ತದೆ?

ಏಕೆಂದರೆ ಚುನಾವಣಾ ಆಯೋಗ ಸಾರ್ವಜನಿಕರು ತಿಳಿದುಕೊಳ್ಳಲು ಬಯಸುವ ಪ್ರಶ್ನೆಗಳಿಗೆ ಉತ್ತರಿಸುತ್ತಿಲ್ಲ ಎನ್ನುವಂತೆ ಕಾಣುತ್ತದೆ. ಪ್ರಶ್ನೆಗಳನ್ನು ಕೇಳಲು ಅವಕಾಶ ನೀಡಲಾಗುತ್ತದೆ, ಆದರೆ ಅವುಗಳಿಗೆ ಉತ್ತರ ಇರುವುದಿಲ್ಲ.

ಉತ್ತರಗಳ ನೆಪದಲ್ಲಿ ಬೇಡದ ವಿವರಗಳನ್ನು ಹೇಳುವ ಕಲೆಯನ್ನೂ ಆಯೋಗ ಕರಗತ ಮಾಡಿಕೊಂಡಿದೆ.

ಬೂತ್ ಸಂಖ್ಯೆಗಳು ಮತ್ತು ಬಿಎಲ್‌ಒ ಸಂಖ್ಯೆಗಳನ್ನು ಪಟ್ಟಿ ಮಾಡುವ ಮೂಲಕ ಉತ್ತರವನ್ನು ಉದ್ದವಾಗಿಸಲಾಗುತ್ತದೆ. ಸ್ಪಷ್ಟ ಉತ್ತರವನ್ನು ಆಯೋಗ ಏಕೆ ನೀಡುವುದಿಲ್ಲ?

ಪೌರತ್ವ ಪರಿಶೀಲನೆಗಾಗಿ ಎಸ್‌ಐಆರ್ ಅನ್ನು ಘೋಷಿಸಿದಾಗ, ಭಾರತೀಯ ನಾಗರಿಕರಲ್ಲದ ಎಷ್ಟು ಮತದಾರರು ಕಂಡುಬಂದಿದ್ದಾರೆಂದು ವರದಿ ಮಾಡುವುದು ಆಯೋಗ ಮಾಡಬೇಕಾಗಿದ್ದ ಮೊದಲ ಕೆಲಸವಾಗಿತ್ತು. ಅದನ್ನು ಟಿಪ್ಪಣಿಯಲ್ಲಿಯೂ ಉಲ್ಲೇಖಿಸಲಾಗಿಲ್ಲ.

ಕೇಳಿದಾಗ, ಮುಖ್ಯ ಚುನಾವಣಾ ಆಯುಕ್ತರು ಮೌನವಾಗಿದ್ದರು.

ಎಸ್‌ಐಆರ್ ಪ್ರಕ್ರಿಯೆಯ ಕೊನೆಯಲ್ಲಿ ಎಷ್ಟು ಅಕ್ರಮ ವಲಸಿಗರು ಪತ್ತೆಯಾಗಿದ್ದಾರೆ ಎಂಬುದರ ಕುರಿತು ಯಾವುದೇ ಡೇಟಾ ಲಭ್ಯವಿದೆಯೇ?

ಬಿಜೆಪಿ ಒಳನುಸುಳುವಿಕೆಯ ಆಧಾರದ ಮೇಲೆ ಒಂದೇ ಒಂದು ಆಕ್ಷೇಪಣೆಯನ್ನು ಸಲ್ಲಿಸಿಲ್ಲ ಎಂದು ಯೋಗೇಂದ್ರ ಯಾದವ್ ಬರೆದಿದ್ದಾರೆ.

ಆದರೂ, ಅದರ ನಾಯಕರು ಒಳನುಸುಳುವಿಕೆ ವಿಷಯವನ್ನು ಆಗಾಗ ಎತ್ತುತ್ತಾರೆ.

ಒಳನುಸುಳುವಿಕೆಗೆ ಸಂಬಂಧಿಸಿದಂತೆ ಬಿಜೆಪಿ ಒಂದೇ ಒಂದು ಆಕ್ಷೇಪಣೆಯನ್ನೂ ಸಲ್ಲಿಸಿಲ್ಲ ಎಂಬುದು ನಿಜವೇ ಎಂಬುದರ ಬಗ್ಗೆ ಆಯೋಗ ಪ್ರತಿಕ್ರಿಯಿಸಬೇಕು.

ಪಾಟ್ನಾದಿಂದ ದಿಲ್ಲಿಯವರೆಗೆ ಒಳನುಸುಳುವಿಕೆಯ ಬಗ್ಗೆ ಪ್ರಶ್ನೆಗಳನ್ನು ಎತ್ತಲಾಯಿತು, ಭಾಷಣಗಳಲ್ಲೂ ಅದನ್ನೇ ಹೇಳಲಾಯಿತು, ಚರ್ಚೆಗಳು ನಡೆದವು.

ಆದರೆ ಅದಕ್ಕೆ ಸಂಬಂಧಿಸಿದ ಯಾವುದೇ ಉತ್ತರಗಳನ್ನು ಚುನಾವಣಾ ಆಯೋಗ ನೀಡುತ್ತಿಲ್ಲ.

ಬಿಹಾರದ ಜನರಿಗೆ ಮೊದಲಿನಿಂದಲೂ ಒಳನುಸುಳುವಿಕೆಯ ಸುಳ್ಳಿನ ಕಂತೆ ಬಗ್ಗೆ ತಿಳಿದಿತ್ತೆ? ಅಳಿಸಲಾದ ಹೆಸರುಗಳಲ್ಲಿ ಎಷ್ಟು ಬಾಂಗ್ಲಾದೇಶಿಗಳು ಅಥವಾ ರೊಹಿಂಗ್ಯಾಗಳು ಇದ್ದಾರೆ ಎಂದು ಆಯೋಗ ಹೇಳುತ್ತದೆಯೆ?

ಸಾಮಾಜಿಕ ಮಾಧ್ಯಮದಲ್ಲಿ ಸುಳ್ಳು ಸುದ್ದಿಗಳ ಹರಡುವಿಕೆ ತಡೆಯುವುದಾಗಿ ಆಯೋಗ ಹೇಳುತ್ತದೆ. ಆದರೆ ನುಸುಳುಕೋರರ ಬಗ್ಗೆ ಸುಳ್ಳು ಸುದ್ದಿಗಳನ್ನು ಹರಡುತ್ತಿದ್ದ ತನ್ನದೇ ಸೋರ್ಸ್ ವಿಷಯದಲ್ಲಿ ಆಯೋಗ ಏನು ಮಾಡಿದೆ?

ಬಿಹಾರದಲ್ಲಿ, ಈಗ ಟಿಕೆಟ್ ವಿತರಣೆಯ ಮೇಲೆ ಗಮನ ಹರಿಸಲಾಗುತ್ತದೆ.

ಮತದಾರರ ಪಟ್ಟಿಯ ಕಥೆ ಏನಾಗಲಿದೆ ಎನ್ನುವುದನ್ನು ನೋಡಬೇಕಾಗುತ್ತದೆ. ಅಂತಿಮ ಎಸ್‌ಐಆರ್ ಪಟ್ಟಿಯಲ್ಲಿ ಕೋಟಿಗಟ್ಟಲೆ ಮತದಾರರ ವಿಳಾಸಗಳು ಏಕೆ ಅನುಮಾನಾಸ್ಪದವಾಗಿವೆ ಎಂಬಂತಹ ಪ್ರಶ್ನೆಗಳಿಗೆ ಉತ್ತರಗಳನ್ನು ಹೇಗೆ ನಿರೀಕ್ಷಿಸಬಹುದು?

80 ಲಕ್ಷ ಮತದಾರರು ಏಕೆ ಕಾಣೆಯಾಗಿದ್ದಾರೆ ಎಂಬ ಪ್ರಶ್ನೆ ಕೇಳುವವರನ್ನು ಅಪರಾಧಿ ಎಂದು ಘೋಷಿಸಿದರೂ ಆಶ್ಚರ್ಯಪಡಬೇಕಿಲ್ಲ ಎನ್ನುವಂಥ ಸ್ಥಿತಿಯಿದೆ.

ಚುನಾವಣೆಗಳು ಪ್ರಜಾಪ್ರಭುತ್ವದ ಹೆಸರಿನಲ್ಲಿ ನಡೆಯುತ್ತವೆ. ಆದರೆ ನಿಜವಾಗಿಯೂ ಇಲ್ಲಿ ಅಧಿಕಾರದ ಆಟ ಆಡುವವರು ಯಾರು?

share
ಪಿ.ಎಚ್. ಅರುಣ್
ಪಿ.ಎಚ್. ಅರುಣ್
Next Story
X