Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಪ್ರಿಯಾಂಕ್ ಖರ್ಗೆ ಪ್ರಶ್ನೆಗಳಿಗೆ...

ಪ್ರಿಯಾಂಕ್ ಖರ್ಗೆ ಪ್ರಶ್ನೆಗಳಿಗೆ ಉತ್ತರಿಸಲು ಆರೆಸ್ಸೆಸ್ ಏಕೆ ತಿಣುಕಾಡುತ್ತಿದೆ?

ಕಾನಿಷ್ಕ ಬಿ. ಮೌರ್ಯ, ಮೈಸೂರುಕಾನಿಷ್ಕ ಬಿ. ಮೌರ್ಯ, ಮೈಸೂರು28 Jun 2026 11:24 AM IST
share
ಪ್ರಿಯಾಂಕ್ ಖರ್ಗೆ ಪ್ರಶ್ನೆಗಳಿಗೆ ಉತ್ತರಿಸಲು ಆರೆಸ್ಸೆಸ್ ಏಕೆ ತಿಣುಕಾಡುತ್ತಿದೆ?

ಯಾರೂ ಕೂಡ ಪ್ರಶ್ನಾತೀತ ಅಲ್ಲ, ಯಾವುದೂ ಕೂಡ ಪ್ರಶ್ನಾತೀತವಲ್ಲ, ಇದು ಬಾಬಾಸಾಹೇಬ್ ಅಂಬೇಡ್ಕರ್ ಅವರ ಚಿಂತನೆಗಳ ಬರಹಗಳ ಒಂದಂಶದ ತತ್ವ. ಇಂತಹ ಪ್ರಶ್ನೆ ಕೇಳುವ ತತ್ವದ ಭಾಗವಾಗಿಯೇ ಅಂಬೇಡ್ಕರರು ವೇದಗಳು, ಪುರಾಣಗಳು, ಸ್ಮತಿಗಳು, ಶ್ರುತಿಗಳಾದ ರಾಮಾಯಣ ಮಹಾಭಾರತ ಇತ್ಯಾದಿ ಎಲ್ಲಾ ಕೃತಿಗಳನ್ನು ತಮ್ಮ ಬರಹಗಳಲ್ಲಿ ಯಾವುದೇ ಮುಲಾಜಿಗೆ ಒಳಪಡದೆ ವಿಮರ್ಶಿಸಿದರು. ಈ ನಿಟ್ಟಿನಲ್ಲಿ ಸ್ವತಃ ದಲಿತ ಸಮುದಾಯಕ್ಕೆ ಸೇರಿದ ಅಂಬೇಡ್ಕರ್‌ವಾದಿಯೂ ಆಗಿರುವ ಗೃಹ ಸಚಿವ ಪ್ರಿಯಾಂಕ್ ಖರ್ಗೆಯವರು ಈಗ ಅಂಬೇಡ್ಕರ್‌ರ ಇಂತಹದ್ದೇ ತತ್ವದ ಮುಂದುವರಿದ ಭಾಗವಾಗಿ ಆರೆಸ್ಸೆಸ್ ಅನ್ನು ಪ್ರಶ್ನಿಸುತ್ತಿದ್ದಾರೆ. ಆದರೆ ಪ್ರಶ್ನೆ ಎಂದರೆ ಆರೆಸ್ಸೆಸ್ ಏಕೆ ಪ್ರಿಯಾಂಕ್ ಖರ್ಗೆ ಅವರ ಈ ಪ್ರಶ್ನೆಗಳಿಗೆ ಉತ್ತರಿಸುವಲ್ಲಿ ಹಿಂದೆ ಬೀಳುತ್ತಿದೆ ಎಂಬುದು.

ಪ್ರಿಯಾಂಕ್ ಖರ್ಗೆ ಅವರು ಕೇಳಿರುವ ಒಂದಷ್ಟು ಪ್ರಶ್ನೆಗಳು,

1. ಆರೆಸ್ಸೆಸ್‌ನ ಕಾನೂನಾತ್ಮಕ ಅಸ್ತಿತ್ವ ಮತ್ತು ಸಂಘಟನಾತ್ಮಕ ರಚನೆ.

2. ಆರೆಸ್ಸೆಸ್‌ನ ಕಚೇರಿ ಪದಾಧಿಕಾರಿಗಳು ಮತ್ತು ಪ್ರಾಧಿಕಾರಿ ಪ್ರತಿನಿಧಿಗಳು ಯಾರು?

3. ಆರೆಸ್ಸೆಸ್ ಸ್ವೀಕರಿಸಿದ ಕೊಡುಗೆಗಳು ಮತ್ತು ದೇಣಿಗೆಗಳ ಮೂಲಗಳು.

4. ಆಸ್ತಿ ಮತ್ತು ಖರ್ಚಿನ ವಿವರಗಳು.

5. ಕಾನೂನಿನ ಪ್ರಕಾರ ಅನ್ವಯವಾಗುವ ತೆರಿಗೆಗಳನ್ನು ಸಂಘಟನೆ ವತಿಯಿಂದ ಪಾವತಿಸಲಾಗುತ್ತಿದೆಯೇ?

6. ಆರೆಸ್ಸೆಸ್ ಔಪಚಾರಿಕವಾಗಿ ನೋಂದಣಿಯಾಗಿದೆಯೇ? ಸಂಘಟನೆ ಕಾರ್ಯಾಚರಣೆ ನಡೆಸುತ್ತಿರುವ ಕಾನೂನಾತ್ಮಕ ಆಧಾರ.

7. ಸಾರ್ವಜನಿಕ ಉತ್ತರದಾಯಿತ್ವಯಿಲ್ಲದೆ ಸಂಘಟನೆ ಈ ಪರಿ ವ್ಯಾಪಕವಾಗಿ ಕಾರ್ಯನಿರ್ವಹಿಸಲು ಇರುವ ಶಾಸನಾತ್ಮಕ ಮತ್ತು ಸಾಂವಿಧಾನಿಕ ಚೌಕಟ್ಟು.

8. ಆರೆಸ್ಸೆಸ್ ನಡೆಸುವ ಸಂಘಟನಾತ್ಮಕ ಚಟುವಟಿಕೆಗಳಾದ ಪಥಸಂಚಲನ, ಗುಂಪು ಸೇರುವಿಕೆ, ಸಾರ್ವಜನಿಕ ಸಭೆ ಸಮಾರಂಭಗಳಿಗೆ ಪಡೆದಿರುವ ಕಾನೂನುಪಾಲನ ಆಧಾರಗಳು ಮತ್ತು ಅನುಮತಿಗಳು.

ತಾನು ಕೇಳಿರುವ ಈ ಪ್ರಶ್ನೆಗಳಿಗೆ ಪ್ರಿಯಾಂಕ್ ಖರ್ಗೆಯವರು ನೀಡಿರುವ ಸಮರ್ಥನೆ, ಸಾಂವಿಧಾನಿಕ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾವುದೇ ಸಂಘಟನೆ ಅದೆಷ್ಟೇ ಹಳೆಯದಾದರೂ ಅದೆಷ್ಟೇ ದೊಡ್ಡದಾದರೂ ಅದೆಷ್ಟೇ ಪ್ರಭಾವಶಾಲಿಯಾದರೂ ಪರಿಶೀಲನಾ ವ್ಯವಸ್ಥೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂಬುದಾಗಿದೆ. ಆ ಕಾರಣಕ್ಕೆ ಪ್ರಿಯಾಂಕ್ ಖರ್ಗೆ ಅವರು ಎತ್ತಿರುವ ಈ ಪ್ರಶ್ನೆಗಳು ಅದೇನು ಅಂತಹ ಆಘಾತಕಾರಿ ಅಂಶಗಳಲ್ಲ. ಗಾಬರಿ ಹುಟ್ಟಿಸುವಂತಹ ವಿಚಾರಗಳು ಅಲ್ಲ. ಹೇಳಿ ಕೇಳಿ ಆರೆಸ್ಸೆಸ್ ಈಗ 100 ವರ್ಷಗಳನ್ನು ಪೂರೈಸಿದೆ. 101ನೇ ವರ್ಷಕ್ಕೆ ಮುಂದಡಿ ಇಟ್ಟಿದೆ. ಕರ್ನಾಟಕದ ಮಟ್ಟಿಗೆ ಹೇಳುವುದಾದರೆ ಆರೆಸ್ಸೆಸ್‌ನ ನಿರ್ಧಾರಕ ಘಟಕವಾದ ಅಖಿಲ ಭಾರತೀಯ ಪ್ರತಿನಿಧಿ ಸಭಾದ ಮಾಹಿತಿಯಂತೆ 2025-26ರ ಒಂದೇ ವರ್ಷದಲ್ಲಿ ಆರೆಸ್ಸೆಸ್ ನಡೆಸಿರುವ ವಿವಿಧ ಶಾಖೆಗಳು 4,127, ವಾರದ ಸಭೆಗಳು 1,389, ಮಾಸಿಕ ಮಂಡಳಿಗಳು 60. ಈ ನಡುವೆ ಆರೆಸ್ಸೆಸ್ 2,494 ಸಮಾಜೋತ್ಸವಗಳನ್ನು ನಡೆಸಿದೆ. ಇದರಲ್ಲೆಲ್ಲ ಭಾಗವಹಿಸಿದವರ ಒಟ್ಟು ಸಂಖ್ಯೆ ಬರೋಬ್ಬರಿ 19,61,150!

ಈ ನಿಟ್ಟಿನಲ್ಲಿ ಹೇಳುವುದಾದರೆ ಇಷ್ಟೊಂದು ವ್ಯಾಪಕ ಚಟುವಟಿಕೆ ಈ ಸಂಘಟನೆ ನಡೆಸುತ್ತಿರಬೇಕಾದರೆ, ಆ ಸಂಬಂಧ ಮೇಲ್ಕಂಡ ಪ್ರಶ್ನೆಗಳನ್ನು 7 ಕೋಟಿ ಜನಸಂಖ್ಯೆ ಇರುವ ಒಂದು ರಾಜ್ಯದ ಕಾನೂನು ಪಾಲನೆ ಹೊಣೆ ಹೊತ್ತಿರುವ ಜವಾಬ್ದಾರಿಯುತ ಇಲಾಖೆಯ ಸಚಿವರಾಗಿ ಪ್ರಿಯಾಂಕ್ ಖರ್ಗೆಯವರು ಕೇಳಿರುವುದು ಖಂಡಿತ ಅಸಮರ್ಥನೀಯ ಎನಿಸದು.

ದಲಿತರು ಮತ್ತು ಆರೆಸ್ಸೆಸ್

ಒಂದು ಆಕ್ಷೇಪಣೆ ಈ ಸಂದರ್ಭದಲ್ಲಿ ಬರುತ್ತದೆ. ಅದೆಂದರೆ ದಲಿತರಿಗೆ ಆರೆಸ್ಸೆಸ್ ಉಸಾಬರಿ ಏಕೆ ಎಂಬುದು. ಈ ಸಂಬಂಧ ಈ ರೀತಿಯ ಆಕ್ಷೇಪಣೆ ಎತ್ತಿದವರು ಸ್ವತಃ ದಲಿತರಾದ ಸಂಸದ ರಮೇಶ್ ಜಿಗಜಿಣಗಿಯವರು. ಜಿಗಜಿಣಗಿಯವರ ಈ ಪ್ರಶ್ನೆಗೆ ಅಷ್ಟೇ ಖಡಕ್ ಉತ್ತರ ಕೊಟ್ಟ ಪ್ರಿಯಾಂಕ್ ಖರ್ಗೆ ಅವರು ಇದಕ್ಕೆ ನೀಡಿದ ಸಮರ್ಥನೆ ತನ್ನದು ಅಂಬೇಡ್ಕರ್ ರಕ್ತ ಎಂದು.

ಅಂದಹಾಗೆ ಬಾಬಾಸಾಹೇಬ್ ಅಂಬೇಡ್ಕರ್ ಏಕೆ ಇಲ್ಲಿ ಪ್ರಸ್ತುತ ಆಗುತ್ತಾರೆ ಅಥವಾ ಪ್ರಿಯಾಂಕ್ ಖರ್ಗೆಯವರು ಏಕೆ ತನ್ನನ್ನು ಅಂಬೇಡ್ಕರ್ ರಕ್ತ ಎಂದು ಕರೆದರು? ಅಂಬೇಡ್ಕರ್‌ರ

ಚಳವಳಿಯನ್ನು ವಿಶ್ಲೇಷಿಸುವುದಾದರೆ ಬಾಬಾಸಾಹೇಬ್ ಅಂಬೇಡ್ಕರ್ ಅಸ್ಪಶ್ಯತೆ ವಿರುದ್ಧ ಜಾತಿ ತಾರತಮ್ಯದ ವಿರುದ್ಧ, ತಾವು ಮುನ್ನಡೆಸಿದ ಚಳವಳಿಯಲ್ಲಿ ಭಾರತದ ಸಮಾಜವನ್ನು ಎರಡು ಭಾಗವಾಗಿ ವಿಭಜಿಸಿ ನೋಡಿದರು. 1.ಹಿಂದೂಗಳು 2.ಅಸ್ಪಶ್ಯರು.

ಅಂಬೇಡ್ಕರ್ ಅವರು ಅಸ್ಪಶ್ಯ ಸಮುದಾಯಗಳ ಪ್ರತಿನಿಧಿಯಾಗಿ ಶೋಷಿತ ಸಮುದಾಯಗಳಿಗೆ ಸಾಂವಿಧಾನಿಕ ಮತ್ತು ಮಾನವ ಹಕ್ಕುಗಳನ್ನು ದೊರಕಿಸಿಕೊಟ್ಟರು. ಬಂಡಾಯವಾಗಿ ಬೌದ್ಧ ಧರ್ಮವನ್ನು ತೋರಿಸಿಕೊಟ್ಟರು. ಒಂದು ವಿಷಯವೆಂದರೆ 2026 ಈ ಕಾಲಘಟ್ಟದಲ್ಲಿ ಡಾ. ಅಂಬೇಡ್ಕರ್ ಆ ಕಾಲಘಟ್ಟದಲ್ಲಿ ಸಮಾಜವನ್ನು ನೋಡಿದ ಆ ಪರಿ ಈಗೇನು ಬದಲಾಗಿಲ್ಲ. ದಲಿತರ ವಿರುದ್ಧ ಅಸ್ಪಶ್ಯತೆ ಹಾಗೆಯೇ ಮುಂದುವರಿದಿದೆ. ಅದರಲ್ಲೂ ಇಂತಹ ಮುಂದುವರಿಕೆಗೆ ಪ್ರತ್ಯಕ್ಷ ಮತ್ತು ಪರೋಕ್ಷ ಬೆಂಬಲ ನೀಡುತ್ತಿರುವುದು ಆರೆಸ್ಸೆಸ್ ಪ್ರತಿಪಾದಿಸುತ್ತಿರುವ ಹಿಂದುತ್ವ ಎಂದರೆ ತಪ್ಪೆನಿಸದು. ಏಕೆಂದರೆ ಯಾವುದೇ ಅಂಬೇಡ್ಕರ್ ವಿರೋಧಿ ಮೀಸಲಾತಿ ವಿರೋಧಿ ಚಿಂತನೆಗಳಿರಬಹುದು, ದಲಿತರಿಗೆ ಪ್ರಾತಿನಿಧ್ಯ ವಂಚಿಸುವ ವಿಷಯವಿರಬಹುದು ಅಲ್ಲೆಲ್ಲ ಆರೆಸ್ಸೆಸ್ ಪ್ರತಿಪಾದಿಸುವ ಹಿಂದುತ್ವ ಮತ್ತು ಹಿಂದುತ್ವದ ಕಾರ್ಯಕರ್ತರು ಮತ್ತು ಅದು ಮುನ್ನಡೆಸುತ್ತಿರುವ ರಾಜಕೀಯ ಪಕ್ಷವಾದ ಬಿಜೆಪಿ ಮತ್ತದರ ಕಾರ್ಯಕರ್ತರ ವ್ಯವಸ್ಥಿತ ಕಾರ್ಯ ಚಟುವಟಿಕೆ ಮತ್ತು ಕೆಲಸಗಳು ಇದ್ದೇ ಇರುತ್ತದೆ! ಮಾಧ್ಯಮ ಸಂಸ್ಥೆಗಳನ್ನೂ ಇವರ ಅಂತಹ ಆ ಚಟುವಟಿಕೆ ಆವರಿಸಿವೆಯೆಂದರೆ! ದಲಿತರ ರಾಜಕೀಯ ಪ್ರಾತಿನಿಧ್ಯದ ಒಂದು ವಿಷಯವನ್ನೇ ತೆಗೆದುಕೊಳ್ಳುವುದಾದರೆ, ಆರೆಸ್ಸೆಸ್ ನೇರವಾಗಿ ಮುನ್ನಡೆಸುವ ರಾಜಕೀಯ ಪಕ್ಷ ಬಿಜೆಪಿ ಹಾಲಿ 20ಕ್ಕೂ ಹೆಚ್ಚು ರಾಜ್ಯಗಳಲ್ಲಿ ಆಡಳಿತ ನಡೆಸುತ್ತಿದೆ. ಅಷ್ಟು ರಾಜ್ಯಗಳಲ್ಲಿ ಆರೆಸ್ಸೆಸ್ ಅದೆಷ್ಟು ಜನ ದಲಿತರನ್ನು ಮುಖ್ಯಮಂತ್ರಿಗಳನ್ನಾಗಿ ಮಾಡಿಸಿದೆ? ಕೇಂದ್ರ ಮಂತ್ರಿಗಳನ್ನಾಗಿ ಮಾಡಿ ಎಷ್ಟು ಜನ ದಲಿತರಿಗೆ ಆರೆಸ್ಸೆಸ್ ಜನಸಂಖ್ಯಾವಾರು ಪ್ರಾತಿನಿಧ್ಯ ನೀಡಿಸಿದೆ. ಆರೆಸ್ಸೆಸ್ ಮುನ್ನಡೆಸುತ್ತಿರುವ ಬಿಜೆಪಿ ಅಧಿಕಾರಾವಧಿಗಳಲ್ಲಿ, ಅದು ಅಧಿಕಾರ ನಡೆಸುತ್ತಿರುವ ರಾಜ್ಯಗಳಲ್ಲಿ ದಲಿತರು ಅಕ್ಷರಶಃ ತಬ್ಬಲಿಗಳಂತೆ ಬದುಕುತ್ತಾರೆ ಎಂದರೆ ಅದು ಅವಾಸ್ತವವಾಗದು.

ಈ ಕಾರಣಕ್ಕೆ ಪ್ರಿಯಾಂಕ್ ಖರ್ಗೆಯವರು ಅಂಬೇಡ್ಕರ್ ಹಿಂದೂಗಳನ್ನು ಪ್ರಶ್ನಿಸಿರುವ ಪರಂಪರೆಯನ್ನು ಎತ್ತಿ ಹಿಡಿಯುವ ಮಾದರಿಯಲ್ಲಿ ಅಥವಾ ಮುಂದುವರಿಕೆ ಭಾಗವಾಗಿ ಹಿಂದುತ್ವವಾದಿ ಸಂಘಟನೆಗೆ ಮೇಲಿನ ಪ್ರಶ್ನೆಗಳನ್ನು ಕೇಳಿದ್ದಾರೆ.

ಒಂದು ವಾಸ್ತವ

ಪ್ರಿಯಾಂಕ್ ಖರ್ಗೆ ಅವರು ಕೇಳಿರುವ ಪ್ರಶ್ನೆಗಳನ್ನು ಆರೆಸ್ಸೆಸ್ ಉಡಾಫೆ ಮಾಡಬಹುದು. ಆದರೆ ಇತಿಹಾಸದಲ್ಲಿ ಮಿಲಿಂದ ಪ್ರಶ್ನೆ ಎಂಬ ಪ್ರಕರಣ ಬರುತ್ತದೆ. ಆ ಪ್ರಕರಣದಲ್ಲಿ ರಾಜ ಮಿಲಿಂದ ಬೌದ್ಧ ಭಿಕ್ಕುಗಳಿಗೆ ಸೈದ್ಧಾಂತಿಕ ಅನೇಕ ಪ್ರಶ್ನೆಗಳನ್ನು ಕೇಳುತ್ತಾನಂತೆ. ಆತ ಕೇಳಿದ ಪ್ರಶ್ನೆಗಳಿಗೆ ಬೌದ್ಧ ಭಿಕ್ಕುಗಳು ಸೂಕ್ತ ಉತ್ತರ ಕೊಡಲಾಗದೆ ಬೌದ್ಧ ಧರ್ಮ ಹಿಂದೆ ಸರಿಯಿತು ಅಥವಾ ಅವನತಿ ಹೊಂದಿತು, ಬೌದ್ಧ ಧರ್ಮ ಭಾರತದಿಂದ ಕಣ್ಮರೆಯಾಗಲು ಅದು ಕೂಡ ಒಂದು ಕಾರಣ ಎಂದು ಬಾಬಾಸಾಹೇಬ್ ಅಂಬೇಡ್ಕರ್ ಒಂದೆಡೆ ಹೇಳುತ್ತಾರೆ. ಈ ನಿಟ್ಟಿನಲ್ಲಿ ಅಂದು ರಾಜ ಮಿಲಿಂದ ಕೇಳಿದ ಪ್ರಶ್ನೆಗಳ ಮಾದರಿಯಲ್ಲಿ ಇಂದು ಪ್ರಿಯಾಂಕ್ ಖರ್ಗೆಯವರ ಪ್ರಶ್ನೆಗಳಿವೆ. ಉತ್ತರಿಸದಿದ್ದರೆ ಸಂಬಂಧಿತ ಸಂಘಟನೆಯ ಸೈದ್ಧಾಂತಿಕ ತಳಹದಿ ದುರ್ಬಲವಾಗುವ ಅಪಾಯವಿದೆ!

Tags

RSSPriyank Kharge
share
ಕಾನಿಷ್ಕ ಬಿ. ಮೌರ್ಯ, ಮೈಸೂರು
ಕಾನಿಷ್ಕ ಬಿ. ಮೌರ್ಯ, ಮೈಸೂರು
Next Story
X