Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಕಾಂಗ್ರೆಸ್ ವಿರುದ್ಧ ಮುಸ್ಲಿಮರಲ್ಲಿ...

ಕಾಂಗ್ರೆಸ್ ವಿರುದ್ಧ ಮುಸ್ಲಿಮರಲ್ಲಿ ಇಷ್ಟೇಕೆ ಆಕ್ರೋಶ?

ಫಾರೂಕ್ ಎಸ್. ಮೈಸೂರುಫಾರೂಕ್ ಎಸ್. ಮೈಸೂರು12 Jun 2025 11:25 AM IST
share
ಕಾಂಗ್ರೆಸ್ ವಿರುದ್ಧ ಮುಸ್ಲಿಮರಲ್ಲಿ ಇಷ್ಟೇಕೆ ಆಕ್ರೋಶ?
ಎಲ್ಲಾ ಕಡೆ ಮುಸ್ಲಿಮರ ಪ್ರಾತಿನಿಧ್ಯದ ಮಟ್ಟ ಪಾತಾಳದಲ್ಲಿದೆ ಎಂಬುದನ್ನು ಬಿಜೆಪಿಯವರೂ ಒಪ್ಪುತ್ತಾರೆ. ಆದರೆ ಅವರಿಗೆ ತಕ್ಕಮಟ್ಟದಲ್ಲಾದರೂ ಪ್ರಾತಿನಿಧ್ಯ ನೀಡುವ ನಿಟ್ಟಿನಲ್ಲಿ ಕಾಂಗ್ರೆಸ್ ಸರಕಾರ ಕಿಂಚಿತ್ತೂ ಆಸಕ್ತಿ ವಹಿಸುತ್ತಿಲ್ಲ. ನಿಗಮ-ಮಂಡಳಿಗಳ ಅಧ್ಯಕ್ಷ ಸ್ಥಾನಗಳ ವಿಷಯದಲ್ಲೂ ಮುಸ್ಲಿಮರನ್ನು ಬಹುತೇಕ ಕಪ್ಪು ಪಟ್ಟಿಯಲ್ಲಿಡಲಾಗಿದೆ. ಮುಸ್ಲಿಮರಿಗೆ ಪ್ರಾತಿನಿಧ್ಯ ನೀಡುವ ಅವಕಾಶಗಳು ಬಂದಾಗಲೂ ಕಾಂಗ್ರೆಸ್ ಅವರ ಪಾಲಿಗೆ ಬಾಗಿಲು ಮುಚ್ಚುತ್ತಿದೆ.

ಮುಸ್ಲಿಮ್ ಸಮುದಾಯ ರಾಜ್ಯದ ಜನಸಂಖ್ಯೆಯಲ್ಲಿ ಶೇ. 13ರಷ್ಟು ಪಾಲಿರುವ ಮತ್ತು ಪರಿಶಿಷ್ಟ ಜಾತಿಯ ಬಳಿಕ ರಾಜ್ಯದಲ್ಲೇ ಅತ್ಯಧಿಕ ಜನಸಂಖ್ಯೆ ಇರುವ ಸಮುದಾಯ. ಅನುಪಾತಿಕ ಪ್ರಾತಿನಿಧ್ಯದ ದೃಷ್ಟಿಯಿಂದ, ಇಂದು ವಿಧಾನ ಸಭೆಯಲ್ಲಿ 29 ಮುಸ್ಲಿಮ್ ಶಾಸಕರು, ವಿಧಾನ ಪರಿಷತ್ತಿನಲ್ಲಿ 9 ಸದಸ್ಯರು ಮತ್ತು ರಾಜ್ಯ ಮಂತ್ರಿಮಂಡಲದಲ್ಲಿ ಮುಸ್ಲಿಮ್ ಸಮುದಾಯದ ಕನಿಷ್ಠವೆಂದರೂ 5 ಮಂದಿ ಸಚಿವರಿರಬೇಕಿತ್ತು. ಆದರೆ ಇರುವುದು ಕೇವಲ 2 ಮಂದಿ. (ಸಭಾಧ್ಯಕ್ಷರು ಸಂಪುಟ ಸದಸ್ಯರಲ್ಲ). ಒಬ್ಬರಿಗೆ ವಕ್ಫ್, ಅಲ್ಪಸಂಖ್ಯಾತ ವ್ಯವಹಾರ ಮತ್ತು ವಸತಿ ಇಲಾಖೆ. ಇನ್ನೊಬ್ಬರಿಗೆ ಹಜ್ ಮತ್ತು ಪೌರಾಡಳಿತ ಇಲಾಖೆ. ಅಂದರೆ ಮುಸಲ್ಮಾನರಿಗೆ, ಒಂದೋ ಮುಸ್ಲಿಮ್ ಸಂಬಂಧಿ ಇಲಾಖೆ ಅಥವಾ ಹಿರಿಯ ರಾಜಕಾರಣಿಗಳಿಗೆ ಬೇಡದ ಅನಪೇಕ್ಷಿತ ಇಲಾಖೆಗಳು. ಎಲ್ಲಾ ಕಡೆ ಮುಸ್ಲಿಮರ ಪ್ರಾತಿನಿಧ್ಯದ ಮಟ್ಟ ಪಾತಾಳದಲ್ಲಿದೆ ಎಂಬುದನ್ನು ಬಿಜೆಪಿಯವರೂ ಒಪ್ಪುತ್ತಾರೆ. ಆದರೆ ಅವರಿಗೆ ತಕ್ಕಮಟ್ಟದಲ್ಲಾದರೂ ಪ್ರಾತಿನಿಧ್ಯ ನೀಡುವ ನಿಟ್ಟಿನಲ್ಲಿ ಕಾಂಗ್ರೆಸ್ ಸರಕಾರ ಕಿಂಚಿತ್ತೂ ಆಸಕ್ತಿ ವಹಿಸುತ್ತಿಲ್ಲ. ನಿಗಮ-ಮಂಡಳಿಗಳ ಅಧ್ಯಕ್ಷ ಸ್ಥಾನಗಳ ವಿಷಯದಲ್ಲೂ ಮುಸ್ಲಿಮರನ್ನು ಬಹುತೇಕ ಕಪ್ಪು ಪಟ್ಟಿಯಲ್ಲಿಡಲಾಗಿದೆ. ಮುಸ್ಲಿಮರಿಗೆ ಪ್ರಾತಿನಿಧ್ಯ ನೀಡುವ ಅವಕಾಶಗಳು ಬಂದಾಗಲೂ ಕಾಂಗ್ರೆಸ್ ಅವರ ಪಾಲಿಗೆ ಬಾಗಿಲು ಮುಚ್ಚುತ್ತಿದೆ. ಇತ್ತೀಚೆಗೆ ನಾಲ್ಕು ಎಂಎಲ್‌ಸಿ ಸೀಟುಗಳನ್ನು ವಿತರಿಸುವ ಪ್ರಶ್ನೆ ಬಂದಾಗಲೂ ಕಾಂಗ್ರೆಸ್ ಪಕ್ಷವು ಮುಸಲ್ಮಾನರಿಗೆ ಒಂದೇ ಒಂದು ಸದಸ್ಯತ್ವ ಸಿಗದಂತೆ ನೋಡಿಕೊಂಡಿತು.

ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂತೆಂದು ಸಂಭ್ರಮಿಸಿದವರ ಸಂಭ್ರಮವೆಲ್ಲಾ ಅಲ್ಪಾವಧಿಯಲ್ಲೇ ಠುಸ್ ಆಗಿ ಬಿಟ್ಟಿದೆ. ವಿಶೇಷವಾಗಿ ಮುಸಲ್ಮಾನರ ಸಂಭ್ರಮ. ಸಿದ್ದರಾಮಯ್ಯನವರ ಸರಕಾರ ಅಸ್ತಿತ್ವಕ್ಕೆ ಬಂದ ಆರಂಭದ ದಿನಗಳಲ್ಲಂತೂ ಕೆಲವು ಮುಸಲ್ಮಾನರು ತಮ್ಮದೇ ಸರಕಾರ ಬಂದಿದೆ ಎಂಬಂತೆ ಬೀಗಿದ್ದೂ ಉಂಟು. ಆ ಮುಗ್ಧರು ಆ ರೀತಿ ಕಾಂಗ್ರೆಸ್ ಸರಕಾರವನ್ನು ‘ನಮ್ಮ ಸರಕಾರ’ ಅನ್ನುವುದಕ್ಕೆ ಕಾರಣವೂ ಇತ್ತು. ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸುವಲ್ಲಿ ಅತ್ಯಂತ ನಿರ್ಣಾಯಕ ಪಾತ್ರವಹಿಸಿದ್ದು ಮುಸ್ಲಿಮ್ ಸಮಾಜ ಎಂಬುದನ್ನು ಎಲ್ಲರೂ ಒಪ್ಪಿದ್ದರು. ಚುನಾವಣಾ ಫಲಿತಾಂಶಗಳ ವಿಶ್ಲೇಷಣೆ ನಡೆಸಿದ ಹಲವು ತಜ್ಞರು ಕೂಡಾ ಮುಸ್ಲಿಮ್ ಮತದಾರರ ಪೈಕಿ ಶೇ. 88 ಮಂದಿ ಕಾಂಗ್ರೆಸ್‌ಗೆ ಮತ ನೀಡಿದ್ದಾರೆಂದು ಮತ್ತು ಕಾಂಗ್ರೆಸ್ ಪಕ್ಷವು ವಿಜಯ ಸಾಧಿಸಿದ 130 ಕ್ಷೇತ್ರಗಳಲ್ಲಂತೂ ಬಹುತೇಕ ಶೇ. 100 ಮುಸ್ಲಿಮ್ ಮತದಾರರು ಕಾಂಗ್ರೆಸ್ ಪರ ಮತ ಚಲಾಯಿಸಿದ್ದಾರೆಂದು ಅಭಿಪ್ರಾಯ ಪಟ್ಟಿದ್ದರು. ಆದರೆ ಈ ರೀತಿ ಸಗಟಾಗಿ ಕಾಂಗ್ರೆಸ್‌ಗೆ ಬೆಂಬಲ ನೀಡಿದ ಪರಿಣಾಮವಾಗಿ ಮುಸ್ಲಿಮರಿಗಾದ ಪ್ರಯೋಜನವೇನು ಗೊತ್ತೇ?

1. ರಾಜ್ಯದ ಎಲ್ಲಾ ಕಡೆ, ಬಿಜೆಪಿ ಮತ್ತು ಸಂಘ ಪರಿವಾರದವರು ಮುಸ್ಲಿಮರ ವಿರುದ್ಧ ಪ್ರತೀಕಾರ ತೀರಿಸಲು ಹೊರಟರು. ಮುಸ್ಲಿಮರಿಗೆ ಕಿರುಕುಳ ನೀಡುವ ತಮ್ಮ ಅಭಿಯಾನವನ್ನು ಚುರುಕುಗೊಳಿಸಿದರು.

2. ಈ ಹಿಂದೆ ಮುಸ್ಲಿಮರ ಬೆನ್ನಿಗೆ ಚೂರಿ ಇಕ್ಕಿದ್ದ ಜೆಡಿಎಸ್, ಈ ಬಾರಿ ಬಿಜೆಪಿ ಜೊತೆ ಮಾಡಿಕೊಂಡಿದ್ದ ಒಳಒಪ್ಪಂದವನ್ನು ಮುಂದಾಗಿ ಗುರುತಿಸಿಕೊಂಡ ಮುಸ್ಲಿಮರು ಜೆಡಿಎಸ್ ಅನ್ನು ಮಣ್ಣುಮುಕ್ಕಿಸಿದರು. ಇದರಿಂದ ಸೋತು ಹತಾಶರಾದ ಜೆಡಿಎಸ್ ನಾಯಕರು ಎಲ್ಲೆಂದರಲ್ಲಿ ಮುಸ್ಲಿಮರ ವಿರುದ್ಧ ಹರಿಹಾಯತೊಡಗಿದರು. ಬಿಜೆಪಿಯವರಂತೆ ಮುಸ್ಲಿಮರ ವಿರುದ್ಧ ವಿಷ ಉಗುಳತೊಡಗಿದರು.

3. ಬಿಜೆಪಿ ಸಖ್ಯವನ್ನು ವಿರೋಧಿಸಿ, ಜೆಡಿಎಸ್ ನಲ್ಲಿದ್ದ ಪ್ರಮುಖ ಮುಸ್ಲಿಮ್ ಹಾಗೂ ಸೆಕ್ಯುಲರ್ ನಾಯಕರೆಲ್ಲಾ ಜೆಡಿಎಸ್ ತೊರೆದರು. ಅಷ್ಟಕ್ಕೇ ಜೆಡಿಎಸ್ ಸೊಂಟ ಮುರಿಯಿತು. ಈ ರೀತಿ ಕಾಂಗ್ರೆಸ್ ಗೆ ಪರ್ಯಾಯವಾಗಿ ಮುಸ್ಲಿಮರ ಬಳಿ ಇದ್ದ ಒಂದು ಆಯ್ಕೆ ಕೂಡಾ ಇಲ್ಲವಾಗಿ ಬಿಟ್ಟಿತು. ರಾಜ್ಯದಲ್ಲಿ ಕಾಂಗ್ರೆಸ್‌ಗೆ ಸೆಕ್ಯುಲರ್ ಪ್ರತಿಸ್ಪರ್ಧಿಯೇ ಇಲ್ಲ ಎಂಬಂತಾಯಿತು. ಒಂದೋ ಬಿಜೆಪಿ ಇಲ್ಲವಾದರೆ ಕಾಂಗ್ರೆಸ್, ಮೂರನೆಯ ಆಯ್ಕೆ ಲಭ್ಯವಿಲ್ಲ ಎಂಬ ಸನ್ನಿವೇಶ ನಿರ್ಮಾಣವಾಯಿತು.

4. ಚುನಾವಣೆ ಗೆದ್ದ ಮರುಕ್ಷಣವೇ ಕಾಂಗ್ರೆಸ್ ಪಕ್ಷವು ಮುಸ್ಲಿಮರಿಗೆ ‘ನಿಮ್ಮ ಪಾತ್ರ ಮುಗಿಯಿತು. ಈಗ ನಮಗೆ ನಿಮ್ಮ ಅಗತ್ಯವಿಲ್ಲ’ ಎಂಬ ಸಂದೇಶವನ್ನು ಪದೇಪದೇ ನೀಡತೊಡಗಿತು. ಈ ರೀತಿ ರಾಜಕೀಯ ಕ್ಷೇತ್ರದಲ್ಲಿ ಮುಸ್ಲಿಮರು ಅನಾಥರಂತಾಗಿಬಿಟ್ಟರು.

ನೀವು ಅನಾಥರು ಎಂದು ಮುಸ್ಲಿಮರಿಗೆ ಮನವರಿಕೆ ಮಾಡಿಸಲು ಕಾಂಗ್ರೆಸ್ ಸರಕಾರ ಕೈಗೊಂಡ ಕೆಲವು ಕ್ರಮಗಳು ಅಧ್ಯಯನ ಯೋಗ್ಯವಾಗಿವೆ:

* ಕಾಂಗ್ರೆಸ್ ನಾಯಕರು, ಸೆಕ್ಯುಲರಿಸಮ್ ನಮ್ಮ ಅಗತ್ಯವಲ್ಲ. ಅದನ್ನು ರಕ್ಷಿಸುವ ಅಥವಾ ಬಲಪಡಿಸುವ ಯಾವ ಹೊಣೆಗಾರಿಕೆಯೂ ನಮಗಿಲ್ಲವೆಂಬಂತೆ ನಟಿಸತೊಡಗಿದರು.

* ಬಿಜೆಪಿಯವರು ಅಧಿಕಾರಕ್ಕೆ ಬಂದೊಡನೆ, ಆಡಳಿತಯಂತ್ರದಲ್ಲಿ ಆಮೂಲಾಗ್ರ ಬದಲಾವಣೆಗಳನ್ನು ಮಾಡಿ, ಆಯಕಟ್ಟಿನ ವಿವಿಧ ಕಚೇರಿ ಮತ್ತು ಹುದ್ದೆಗಳಲ್ಲಿ ಬಿಜೆಪಿ, ಆರೆಸ್ಸೆಸ್‌ಗೆ ನಿಷ್ಠರಾಗಿದ್ದ ಅಧಿಕಾರಿಗಳನ್ನು ನೇಮಿಸಿದ್ದರು. ಕಾಂಗ್ರೆಸ್‌ನವರು ಅಧಿಕಾರಕ್ಕೆ ಬಂದಾಗ, ಅದೇ ಹಳೆಯ ನೇಮಕಾತಿಗಳನ್ನು ಯಥಾವತ್ತಾಗಿ ಮುಂದುವರಿಸುವ ಮೂಲಕ, ಸಂಘ ಪರಿವಾರದ ನಿಲುವು ಮತ್ತು ಪ್ರಾಶಸ್ತ್ಯಗಳೇ ತಮ್ಮ ನಿಲುವು ಮತ್ತು ಪ್ರಾಶಸ್ತ್ಯಗಳೆಂದು ಜಗತ್ತಿಗೆಲ್ಲಾ ಸಾರಿಬಿಟ್ಟರು. ಆದ್ದರಿಂದಲೇ ಸರಕಾರ ಬದಲಾದರೂ ಅಧಿಕಾರಶಾಹಿ ಬದಲಾಗಲಿಲ್ಲ. ಸಚಿವರು ಬದಲಾದರೂ ಅಧಿಕಾರಿಗಳು ಬದಲಾಗಲಿಲ್ಲ. ಪಕ್ಷ ಬದಲಾದರೂ ವಾತಾವರಣ ಬದಲಾಗಲಿಲ್ಲ.

* ಕೋಮುವಾದ ನಿಮ್ಮ ಸಮಸ್ಯೆ, ನಮ್ಮದಲ್ಲ, ಅದನ್ನು ನೀವೇ ನೋಡಿಕೊಳ್ಳಿ ಎಂಬ ಅಲಿಖಿತ ಸಂದೇಶವನ್ನು ಕಾಂಗ್ರೆಸ್ ಸರಕಾರವು ಮುಸ್ಲಿಮರಿಗೆ ನೀಡಿತು.

* ಕೋಮುವಾದಿಗಳ ವಿರುದ್ಧ ಮಾತನಾಡಿದರೆ ಅದೆಲ್ಲಿ ಅಲ್ಪಸಂಖ್ಯಾತರ ಓಲೈಕೆ ಎಂದು ಬ್ರಾಂಡ್ ಆಗಿಬಿಡುತ್ತದೋ ಎಂದು ಅಂಜತೊಡಗಿದರು.

* ಕೇಸರಿ ಪಡೆಗಳ ದ್ವೇಷಭಾಷಣಗಳಿಗೆ ಮತ್ತು ವಿಭಜಕ, ಪ್ರಚೋದಕ ಹಾಗೂ ಹಿಂಸಾತ್ಮಕ ಚಟುವಟಿಕೆಗಳಿಗೆ ಮುಕ್ತ ಅವಕಾಶ ನೀಡತೊಡಗಿದರು.

* ಪೊಲೀಸರ ನಡವಳಿಕೆ ನೋಡಿದರೆ, ಕೋಮುವಾದಿಗಳ ಹಿಂಸೆ, ಅಪರಾಧ ಇತ್ಯಾದಿಗಳ ವಿರುದ್ಧ ಯಾವುದೇ ಕಠಿಣ ಕಾರ್ಯಾಚರಣೆ ನಡೆಸಬಾರದು ಎಂದು ಸರಕಾರವೇ ಅವರಿಗೆ ಆದೇಶ ನೀಡಿದಂತಿತ್ತು.

* ನಮಗೆ ಮುಸ್ಲಿಮರ ಯಾವ ಹಂಗೂ ಇಲ್ಲ ಎಂದು ತೋರಿಸಿಕೊಳ್ಳುವುದಕ್ಕಾಗಿ ಕಾಂಗ್ರೆಸ್ ನಾಯಕರು, ತಾವು ಸರಕಾರ ರಚಿಸಿದ ದಿನದಿಂದಲೇ ಹೆಣಗತೊಡಗಿದರು.

* ಈ ಹಿಂದೆ ತಾವು ಮುಸ್ಲಿಮರಿಗೆ ನೀಡಿದ ಎಲ್ಲ ನೇರ ಹಾಗೂ ಪರೋಕ್ಷ ಆಶ್ವಾಸನೆ, ವಾಗ್ದಾನಗಳನ್ನು ಫ್ರೀಜರ್‌ಗೆ ಹಾಕಿ ಬಿಟ್ಟರು.

* ವಿಧಾನ ಸಭೆ, ವಿಧಾನ ಪರಿಷತ್, ಪಕ್ಷದ ವೇದಿಕೆ, ಸಾರ್ವಜನಿಕ ವೇದಿಕೆ, ಮಾಧ್ಯಮ - ಹೀಗೆ ಎಲ್ಲೂ ಮುಸ್ಲಿಮ್ ಅಥವಾ ಅಲ್ಪಸಂಖ್ಯಾತ ಸಮಾಜಗಳಿಗೆ ಸಂಬಂಧಿಸಿದ ಯಾವುದೇ ಸಮಸ್ಯೆ, ಬೇಡಿಕೆ ಇತ್ಯಾದಿ ಗಂಭೀರ ವಿಷಯವನ್ನು ಪ್ರಸ್ತಾಪಿಸಬಾರದು ಅಥವಾ ಚರ್ಚಿಸಬಾರದು ಎಂಬ ಪ್ರಬಲ ಸೂಚನೆಯನ್ನು ಪಕ್ಷದೊಳಗಿನ ಮುಸ್ಲಿಮ್ ನಾಯಕರಿಗೆ ನೀಡಿದರು. ಮುಸ್ಲಿಮ್ ನಾಯಕರು ಬಹಳ ನಿಷ್ಠೆಯಿಂದ ಅದನ್ನು ಪಾಲಿಸುತ್ತಲೂ ಇದ್ದಾರೆ.

ಈ ಹಿಂದಿನ ಸರಕಾರ ಕೈಗೊಂಡ ಅದೆಷ್ಟೋ ಜನವಿರೋಧಿ, ಅಲ್ಪಸಂಖ್ಯಾತ ವಿರೋಧಿ ನಿರ್ಧಾರ ಮತ್ತು ಧೋರಣೆಗಳನ್ನು ಕಾಂಗ್ರೆಸ್ ಸರಕಾರವು ಬದಲಿಸುವ ಬದಲು ಯಥಾವತ್ತಾಗಿ ಮುಂದುವರಿಸುತ್ತಿದೆ. ಬಿಜೆಪಿಯವರು ರದ್ದುಗೊಳಿಸಿದ್ದ ಶೇ. 4 ಮೀಸಲಾತಿ ಈ ತನಕ ಮತ್ತೆ ಜೀವಂತವಾಗಿಲ್ಲ. ಅಲ್ಪಸಂಖ್ಯಾತ ಸಮುದಾಯಗಳ ಸಬಲೀಕರಣದ ನಿಟ್ಟಿನಲ್ಲಿ ಯಾವುದೇ ಪರಿಣಾಮಕಾರಿ ಯೋಜನೆ ಅಥವಾ ಕಾರ್ಯಕ್ರಮವನ್ನು ಜಾರಿಗೊಳಿಸಿಲ್ಲ. ಕರಾವಳಿ ಪ್ರದೇಶದಲ್ಲಿ ಅಮಾಯಕರ ಹತ್ಯೆ ನಡೆದಾಗಲೂ ಗೃಹ ಸಚಿವರ ಸ್ಥಾನದಲ್ಲಿರುವ ನಾಯಕರು ಕನಿಷ್ಠ ಸಂತಾಪವನ್ನೂ ಪ್ರಕಟಿಸದೆ, ಶುದ್ಧ ಬಜರಂಗಿ ಭಾಷೆಯಲ್ಲಿ ಮಾತನಾಡಿ ಮುಸಲ್ಮಾನರನ್ನು ಅಪರಾಧಿಸ್ಥಾನದಲ್ಲಿ ನಿಲ್ಲಿಸಿದ್ದನ್ನು ಮುಸಲ್ಮಾನರು ಖಂಡಿತ ಮರೆಯಲಾರರು. ಈ ಕುರಿತು ಅಲ್ಲಲ್ಲಿ ಕುದಿಯುತ್ತಿರುವ ಮುಸ್ಲಿಮರ ಆಕ್ರೋಶ ದೊಡ್ಡ ಪ್ರಮಾಣದಲ್ಲಿ ಸ್ಫೋಟಿಸುವ ಮುನ್ನ ಕಾಂಗ್ರೆಸ್ ಪಕ್ಷ ಎಚ್ಚೆತ್ತುಕೊಳ್ಳುವುದು ಒಳ್ಳೆಯದು.

share
ಫಾರೂಕ್ ಎಸ್. ಮೈಸೂರು
ಫಾರೂಕ್ ಎಸ್. ಮೈಸೂರು
Next Story
X