Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಯೋಧರ ಹತ್ಯೆ ಈಗೇಕೆ...

ಯೋಧರ ಹತ್ಯೆ ಈಗೇಕೆ ಮಹತ್ವದ್ದೆನಿಸುತ್ತಿಲ್ಲ?

ಮಹೇಶ್ ಬಿ.ಕೆ.ಮಹೇಶ್ ಬಿ.ಕೆ.19 July 2024 11:55 AM IST
share
ಯೋಧರ ಹತ್ಯೆ ಈಗೇಕೆ ಮಹತ್ವದ್ದೆನಿಸುತ್ತಿಲ್ಲ?

ಜಮ್ಮುವಿನ ದೋಡಾದಲ್ಲಿ ಮಂಗಳವಾರ ನಡೆದ ಭಯೋತ್ಪಾದಕ ದಾಳಿಯಲ್ಲಿ ಕ್ಯಾಪ್ಟನ್ ಬ್ರಿಜೇಶ್ ಥಾಪಾ, ನಾಯಕ್ ಡಿ. ರಾಜೇಶ್, ಸಿಪಾಯಿಗಳಾದ ಬಿಜಯೇಂದ್ರ ಹಾಗೂ ಅಜಯ್ ಕುಮಾರ್ ಸಿಂಗ್ ಹುತಾತ್ಮರಾಗಿದ್ದಾರೆ.

ಆದರೆ ಹುತಾತ್ಮರಿಗೆ ಶ್ರದ್ಧಾಂಜಲಿ ಸಲ್ಲಿಸುವ ಕಾರ್ಯಕ್ರಮದಲ್ಲಿ ರಕ್ಷಣಾ ಮಂತ್ರಿ ರಾಜನಾಥ್ ಸಿಂಗ್ ಇರಲಿಲ್ಲ. ಜಮ್ಮು-ಕಾಶ್ಮೀರ ಲೆಫ್ಟಿನೆಂಟ್ ಜನರಲ್ ಮನೋಜ್ ಸಿನ್ಹಾ ಶ್ರದ್ಧಾಂಜಲಿ ಸಮರ್ಪಿಸಿದರು.

2019ರಲ್ಲಿ ಪುಲ್ವಾಮಾ ದಾಳಿಯ ಬಳಿಕ ರಾಜನಾಥ್ ಸಿಂಗ್ ಶ್ರೀನಗರಕ್ಕೆ ತೆರಳಿದ್ದರು. ಆದರೆ ದೋಡಾ ದಾಳಿಯ ಬಳಿಕ ಟ್ವೀಟ್ ಮೂಲಕ ಹುತಾತ್ಮರಿಗೆ ಅವರು ಶ್ರದ್ಧಾಂಜಲಿ ಸಲ್ಲಿಸಿದರು.

ಜಮ್ಮುವಿನ ಕಟುವಾದಲ್ಲಿಯೂ ಜುಲೈ 8ರಂದು ಸೇನೆಯ ಮೇಲೆ ದಾಳಿಯಾಗಿತ್ತು. ಐವರು ಯೋಧರು ಆ ದಾಳಿಯಲ್ಲಿ ಹುತಾತ್ಮರಾಗಿದ್ದರು.

ಚುನಾವಣೆ ನಡೆಯುತ್ತಿರುವ ಹೊತ್ತಿನಲ್ಲಿ ಸರಕಾರದ ಪ್ರತಿಕ್ರಿಯೆ ಒಂದು ರೀತಿಯಲ್ಲಿರುತ್ತದೆ ಮತ್ತು ಚುನಾವಣೆ ಇಲ್ಲದಿರುವಾಗ ಅದರ ರೀತಿ ಬೇರೆ ಇರುತ್ತದೆಯೇ ಎಂಬ ಅನುಮಾನ ಬಾರದೇ ಇರುವುದಿಲ್ಲ.

ಒಂದು ಘಟನೆಯನ್ನು ರಾಷ್ಟ್ರೀಯ ಮಟ್ಟದ್ದಾಗಿ ಬಿಂಬಿಸಿ ಸದ್ದು ಮಾಡಲಾಗುತ್ತದೆ. ಅಂಥದೇ ಮತ್ತೊಂದು ಘಟನೆ ಸ್ಥಳೀಯ ಮಟ್ಟದ್ದಾಗಿ ಮಾತ್ರ ಉಳಿದುಹೋಗುತ್ತದೆ.

ದೋಡಾದಲ್ಲಿನ ದಾಳಿಯ ಬಗ್ಗೆ ಪ್ರಧಾನಿ ಮೋದಿಯಾಗಲಿ, ಗೃಹಮಂತ್ರಿ ಅಮಿತ್ ಶಾ ಆಗಲಿ ಒಂದು ಟ್ವೀಟ್ ಕೂಡ ಮಾಡಿಲ್ಲ. ಹೇಳಿಕೆಯಂತೂ ಮೊದಲೇ ಇಲ್ಲ.

ಪುಲ್ವಾಮಾ ನಡೆದಾಗ ದಿನಗಟ್ಟಲೆ ಮಾತಾಡುತ್ತಿದ್ದ ಮಡಿಲ ಮೀಡಿಯಾಗಳ ಆ್ಯಂಕರ್‌ಗಳು ಈಗ ನಾಲ್ವರು ಯೋಧರ ಹತ್ಯೆಯಾಗಿರುವ ಬಗ್ಗೆ ಮಾತಾಡುತ್ತಲೇ ಇಲ್ಲ.

ಚುನಾವಣೆ ಇದ್ದರೆ ಅಂಥ ಘಟನೆಗಳ ಬಗ್ಗೆ ತಕ್ಷಣ ಟ್ವೀಟ್ ಮಾಡುವ ಪ್ರಧಾನಿ ಮೋದಿ, ಇಲ್ಲಿ ಮಾತ್ರ ಸಂವೇದನಾರಹಿತರಂತೆ ಮೌನ ವಹಿಸುತ್ತಾರೆ.

ಜಮ್ಮು-ಕಾಶ್ಮೀರದಲ್ಲಿಯೂ ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ಡಿಸೆಂಬರ್ 30ರೊಳಗೆ ಚುನಾವಣೆ ನಡೆಸಬೇಕಿದೆ.

ಅಮೆರಿಕದಲ್ಲಿ ಟ್ರಂಪ್ ಮೇಲೆ ದಾಳಿಯಾದರೆ ತಕ್ಷಣ ಟ್ವೀಟ್ ಮಾಡುವ ಮೋದಿ, ನಮ್ಮದೇ ಕಾಶ್ಮೀರದ ಭಯೋತ್ಪಾದಕ ದಾಳಿಯ ಬಗ್ಗೆ ಮಾತಾಡುತ್ತಿಲ್ಲ. ಟ್ರಂಪ್ ಅವರನ್ನು ತನ್ನ ಗೆಳೆಯ ಎನ್ನುವ ಮೋದಿಗೆ ಈ ದೇಶದ ಯೋಧರು ಮಿತ್ರರಲ್ಲವೆ? ಇಲ್ಲಿ ಭಯೋತ್ಪಾದಕ ದಾಳಿಗಳು ಹೆಚ್ಚುತ್ತಲೇ ಇರುವುದರ ಬಗ್ಗೆ ಏಕೆ ಮೌನ?

ಪುಲ್ವಾಮಾ ದಾಳಿಯಾದಾಗ ಹುತಾತ್ಮ ಯೋಧರ ಪಾರ್ಥಿವ ಶರೀರಗಳನ್ನು ದಿಲ್ಲಿಗೆ ತರಲಾಯಿತು. ಪಾಲಂ ಏರ್‌ಪೋರ್ಟ್ ನಲ್ಲಿ ಕೆಮರಾಗಳ ಎದುರಲ್ಲಿ ಮೋದಿ ಶ್ರದ್ಧಾಂಜಲಿ ಸಲ್ಲಿಸಿದಾಗ ಎಲ್ಲ ಚಾನೆಲ್‌ಗಳಲ್ಲಿ ಅದರ ನೇರ ಪ್ರಸಾರವಾಯಿತು.

ಸ್ವಲ್ಪ ಕಾಲದ ಬಳಿಕ ಅಲ್ಲಿನ ರಾಜ್ಯಪಾಲರಾಗಿದ್ದ ಸತ್ಯಪಾಲ್ ಮಲಿಕ್ ಹೇಳಿದ್ದ ಸತ್ಯಗಳು ಬೆಚ್ಚಿಬೀಳಿಸುವಂತಿದ್ದವು. ಅಲ್ಲಿ ಸರಕಾರ ತೋರಿದ್ದ ಘೋರ ನಿರ್ಲಕ್ಷ್ಯ ಮತ್ತು ಆನಂತರ ಅದನ್ನು ರಾಜಕೀಯವಾಗಿ ಬಳಸಿಕೊಂಡದ್ದರ ಬಗ್ಗೆ ಅವರು ಹೇಳಿದ್ದರು.

ಪುಲ್ವಾಮಾ ದಾಳಿಗೂ ಮುನ್ನವೇ ಸಿಕ್ಕಿದ್ದ ಹಲವು ಸೂಕ್ಷ್ಮ ಬೇಹು ಮಾಹಿತಿಗಳನ್ನು ಹೇಗೆ ನಿರ್ಲಕ್ಷಿಸಲಾಗಿತ್ತು ಎಂದು ‘ಫ್ರಂಟ್‌ಲೈನ್’ ತನಿಖಾ ವರದಿ ಬಯಲು ಮಾಡಿತ್ತು.

‘ಆರ್ಟಿಕಲ್ 370’ ಎಂಬ ಸಿನೆಮಾದಲ್ಲಿ ಪಾಲಂ ಏರ್‌ಪೋರ್ಟ್‌ನಲ್ಲಿನ ಮೋದಿಯ ಈ ರಾಜಕೀಯ ಡ್ರಾಮಾವನ್ನು ಬಳಸಿಕೊಳ್ಳಲಾಗಿತ್ತು.

ಮಾತ್ರವಲ್ಲದೆ, 370ನೇ ವಿಧಿ ರದ್ದುಮಾಡುವುದಾಗಿ ಅಲ್ಲಿ ಪ್ರಧಾನಿ ಪಾತ್ರದ ಬಾಯಲ್ಲಿ ಹೇಳಿಸುವ ಸನ್ನಿವೇಶವಿತ್ತು.

‘ಉರಿ- ದಿ ಸರ್ಜಿಕಲ್ ಸ್ಟ್ರೈಕ್’ ಸಿನೆಮಾದಲ್ಲಿ ಇದ್ದ ‘ಹೌ ಈಸ್ ದ ಜೋಶ್’ ಎಂಬ ಡೈಲಾಗ್ ಅನ್ನು ಆನಂತರ ಮೋದಿ ಚುನಾವಣಾ ಪ್ರಚಾರ ಭಾಷಣದಲ್ಲೂ ಬಳಸಿದ್ದರು.

ಈ ವರ್ಷ ಫೆಬ್ರವರಿಯಲ್ಲಿ ಜಮ್ಮುವಿನಲ್ಲಿ ಮೋದಿ ರಾಜಕೀಯ ಸಭೆಯಲ್ಲಿ ಆರ್ಟಿಕಲ್ 370 ಚಿತ್ರದ ಪ್ರಚಾರ ಮಾಡಿದ್ದರು. ಚಾರ್ ಸೌ ಪಾರ್ ಪ್ರಚಾರದ ಜೊತೆಗೇ ಸಿನೆಮಾ ಪ್ರಚಾರವನ್ನೂ ಮೋದಿ ನಡೆಸಿದ್ದರು. ಪ್ರಧಾನಿ ಪ್ರಚಾರದ ಬಳಿಕ ಆ ಸಿನೆಮಾದ ಗಳಿಕೆಯೂ ಏರಿದ್ದು ಸುದ್ದಿಯಾಗಿತ್ತು.

370ನೇ ವಿಧಿ ರದ್ದತಿ ಬಗ್ಗೆ ಅಷ್ಟೆಲ್ಲ ಹೇಳಿಕೊಂಡಿದ್ದ ಬಿಜೆಪಿಗೆ, ಕಣಿವೆ ರಾಜ್ಯದಲ್ಲಿ ಚುನಾವಣೆ ಎದುರಿಸುವ ಧೈರ್ಯ ಏಕೆ ಬರಲಿಲ್ಲ?

370ನೇ ವಿಧಿ ರದ್ದು ಮಾಡಿ ಕಾಶ್ಮೀರದಲ್ಲಿ ಕ್ರಾಂತಿ ತಂದಿದ್ದೇವೆ ಎಂದವರು ಅಲ್ಲಿ ಹೆಚ್ಚುತ್ತಲೇ ಇರುವ ಭಯೋತ್ಪಾದಕ ದಾಳಿಗಳ ಬಗ್ಗೆ, ನಮ್ಮ ಯೋಧರು ಹುತಾತ್ಮರಾಗುತ್ತಿರುವ ಬಗ್ಗೆ ಏಕೆ ಮಾತಾಡುತ್ತಿಲ್ಲ? ಏಕೆ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ಮೌನ ವಹಿಸಿದ್ದಾರೆ?

ಜಮ್ಮುವಿನಲ್ಲಿ ಭಯೋತ್ಪಾದಕ ದಾಳಿ ನಡೆದಿರುವುದು ಮೊನ್ನೆ ಜುಲೈ 15ರಂದು ಮಾತ್ರವೇ ಅಲ್ಲ. ಅದಕ್ಕೂ ಮೊದಲು 38 ದಿನಗಳಲ್ಲಿ 12 ಯೋಧರು ಹುತಾತ್ಮರಾಗಿದ್ದಾರೆ.

ಅಲ್ಲಿನ ದಾಳಿಗಳ ಬಗ್ಗೆ ದಿನಾಂಕಗಳ ಸಹಿತ ಉಲ್ಲೇಖಿಸಿ ಕಾಂಗ್ರೆಸ್ ಪೋಸ್ಟರ್ ಪ್ರಕಟಿಸಿದೆ. ಈ ದಾಳಿಗಳನ್ನು ಅದು ಮೋದಿ ವೈಫಲ್ಯ ಎಂದು ಹೇಳಿದೆ. ರಾಹುಲ್ ಗಾಂಧಿ ಸೇರಿದಂತೆ ವಿಪಕ್ಷ ನಾಯಕರೆಲ್ಲರೂ ದಾಳಿಯ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

ಇವೇ ದಾಳಿಗಳು ವಿಪಕ್ಷ ಸರಕಾರದ ಸಮಯದಲ್ಲಿ ಆಗಿದ್ದರೆ ಮತ್ತು ಅಂಥ ಹೊತ್ತಲ್ಲಿ ರಾಹುಲ್ ಗಾಂಧಿ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದರೆ ಬಿಜೆಪಿ ಮಂದಿಯ ಪ್ರತಿಕ್ರಿಯೆ ಹೇಗಿರುತ್ತಿತ್ತು? ಮಡಿಲ ಮೀಡಿಯಾಗಳ ಚರ್ಚೆ ಯಾವ ರೀತಿಯಲ್ಲಿ ಇರುತ್ತಿತ್ತು?

ಆದರೆ, ದಾಳಿ ನಡೆದಿರುವಾಗಲೂ ಹರ್ಯಾಣದಲ್ಲಿ ಪ್ರಚಾರದಲ್ಲಿ ತೊಡಗಿದ್ದ ಅಮಿತ್ ಶಾ ವಿರುದ್ಧ ಈ ಮಡಿಲ ಮೀಡಿಯಾಗಳು ಮಾತಾಡುತ್ತಲೇ ಇಲ್ಲ.

ಈ ದಾಳಿಗಳು ಜರ್ಜರಿತ ಜಮ್ಮುವಿನ ಸ್ಥಿತಿಯನ್ನು ಇನ್ನಷ್ಟು ಭಯಾನಕವಾಗಿಸುತ್ತಿವೆ. ಮೊದಿ ಸರಕಾರದ ನೀತಿಯ ಪರಿಣಾಮವಾಗಿ ಯೋಧರು ಮತ್ತವರ ಪರಿವಾರ ಸಂಕಷ್ಟ ಅನುಭವಿಸುತ್ತಿದೆ ಎಂದು ರಾಹುಲ್ ತಮ್ಮ ಪ್ರತಿಕ್ರಿಯೆಯಲ್ಲಿ ಅಲ್ಲಿನ ಜನರಿಗಾಗಿ ಮಿಡಿದಿದ್ದಾರೆ.

2021ರಿಂದ ಜಮ್ಮು-ಕಾಶ್ಮೀರದಲ್ಲಿ ನಡೆದ ಭದ್ರತಾ ಸಿಬ್ಬಂದಿ ಹತ್ಯೆಗಳಲ್ಲಿ ಶೇ.40ರಷ್ಟು ಜಮ್ಮುವಿನಲ್ಲೇ ಆಗಿವೆ ಎನ್ನುತ್ತದೆ ‘ದಿ ಹಿಂದೂ’ ಪ್ರಕಟಿಸಿದ ಒಂದು ವರದಿ.

ದೋಡಾದಲ್ಲಿ ಮೂರು ವಾರಗಳಲ್ಲಿ ಮೂರು ಎನ್‌ಕೌಂಟರ್‌ಗಳಾಗಿವೆ. ಕೇಂದ್ರದ ಅಧೀನದಲ್ಲಿರುವ ಜಮ್ಮುವಿನಲ್ಲಿ ಇವತ್ತಿಗೂ ಪೂರ್ಣ ಪ್ರಮಾಣದ ಪೊಲೀಸ್ ಮಹಾ ನಿರ್ದೇಶಕರ ನೇಮಕವಾಗಿಲ್ಲ. ಅಲ್ಲಿ ಸುರಕ್ಷಾ ವ್ಯವಸ್ಥೆ ಸಮರ್ಪಕವಾಗಿಲ್ಲ ಎಂಬುದಕ್ಕೆ ಭಯೋತ್ಪಾದಕ ದಾಳಿಗಳು ಹೆಚ್ಚುತ್ತಿರುವುದೇ ಸಾಕ್ಷಿ ಎನ್ನುತ್ತಿವೆ ವರದಿಗಳು.

ಈಗಾಗಲೇ ಈ ವರ್ಷ 6 ಬಾರಿ ಸೇನೆಯ ಮೇಲೆ ಭಯೋತ್ಪಾದಕ ದಾಳಿ ನಡೆದಿದೆ. ಈಗ ದಾಳಿ ನಡೆಸುತ್ತಿರುವವರು ಕಳೆದ ಆರು ತಿಂಗಳಿಂದ ಗಡಿಯೊಳಗೆ ನುಸುಳಿದ ಹೊಸ ಉಗ್ರರು ಎನ್ನುತ್ತಿವೆ ವರದಿಗಳು. ಹಾಗಾದರೆ ಆ ನುಸುಳುಕೋರರನ್ನು ತಡೆಯಲು ಮೋದಿ ಸರಕಾರಕ್ಕೆ ಸಾಧ್ಯವಾಗಿಲ್ಲ ಯಾಕೆ?

ಗಲ್ವಾನ್‌ಲ್ಲಿ ಚೀನಾ ದಾಳಿಯ ಬಳಿಕ ಸೇನೆಯೆಲ್ಲ ಪೂರ್ವ ಲಡಾಖ್ ಗಡಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಜಮಾವಣೆಯಾಗಿದೆ.

ಉಗ್ರರನ್ನು ಮಟ್ಟಹಾಕುವ ಬಗ್ಗೆ ಸರಕಾರ ಮಾತಾಡುತ್ತಲೇ ಇರುತ್ತದೆ. ಆದರೆ ಹೇಗೆ ಮಟ್ಟಹಾಕಬೇಕು ಎಂಬುದು ಸರಕಾರಕ್ಕೆ ಗೊತ್ತಿರದ ವಿಚಾರ ಎಂಬ ಆರೋಪಗಳಿರುವುದು ಕೂಡ ಸತ್ಯ. ಇನ್ನೊಂದೆಡೆ ಸೇನೆಯ ರಣನೀತಿ ಬದಲಾಗಿರುವುದು ಮತ್ತದರ ಅಸಹಾಯಕತೆ ಬಗ್ಗೆಯೂ ಚರ್ಚೆಗಳಿವೆ. ಅಲ್ಲಿನ ಪೊಲೀಸರು ರಾಜಕೀಯ ಮಾತಾಡುತ್ತಿರುವುದನ್ನು ಕೂಡ ಪ್ರಶ್ನಿಸಲಾಗುತ್ತಿಲ್ಲ.

ಪೊಲೀಸ್ ಮತ್ತಿತರ ಸೇವೆಗಳ ಮೇಲಿನ ಎಲ್ಲ ಅಧಿಕಾರವನ್ನು ಜಮ್ಮು-ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್‌ಗೆ ಸರಕಾರ ಕೊಟ್ಟುಬಿಟ್ಟಿದೆ. ಅದರ ಅರ್ಥ, ಅಲ್ಲಿ ರಾಜ್ಯ ಸ್ಥಾನಮಾನವನ್ನು ಕೊಡುವ ಸಾಧ್ಯತೆ ಸದ್ಯ ಇಲ್ಲ ಎಂದು ಕಾಂಗ್ರೆಸ್‌ನ ಜೈರಾಮ್ ರಮೇಶ್ ಹೇಳಿದ್ದಾರೆ.

2019ರಿಂದಲೂ ಜಮ್ಮು-ಕಾಶ್ಮೀರದಲ್ಲಿ ವಿಧಾನಸಭೆ ಇಲ್ಲವಾಗಿದೆ. ಐದು ವರ್ಷಗಳಿಂದ ಅಲ್ಲಿ ಚುನಾವಣೆಯನ್ನೇ ನಡೆಸಿಲ್ಲ. ಈಗಲಾದರೂ ಚುನಾವಣೆ ನಡೆದೀತೆ?

ಇದೆಲ್ಲ ರಾಜಕೀಯದ ನಡುವೆ ಜಮ್ಮು-ಕಾಶ್ಮೀರದ ಪಾಡೇನಾಗಲಿದೆ?

share
ಮಹೇಶ್ ಬಿ.ಕೆ.
ಮಹೇಶ್ ಬಿ.ಕೆ.
Next Story
X