Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ದೈಹಿಕ ಚಟುವಟಿಕೆ -ಆಟಗಳು...

ದೈಹಿಕ ಚಟುವಟಿಕೆ -ಆಟಗಳು ವಿದ್ಯಾರ್ಥಿಗಳಿಗೆ ಏಕೆ ಮುಖ್ಯ..?

ಡಾ. ಸತ್ಯಮೂರ್ತಿಡಾ. ಸತ್ಯಮೂರ್ತಿ2 Sept 2024 12:26 PM IST
share
ದೈಹಿಕ ಚಟುವಟಿಕೆ -ಆಟಗಳು ವಿದ್ಯಾರ್ಥಿಗಳಿಗೆ ಏಕೆ ಮುಖ್ಯ..?

ಕ್ರೀಡಾ ಚಟುವಟಿಕೆಗಳಿಲ್ಲದ ಶಿಕ್ಷಣ ಪರಿಪೂರ್ಣ ಶಿಕ್ಷಣವಾಗಲಾರದು. ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ದೈಹಿಕ ಚಟುವಟಿಕೆಗಳು ಅನಿವಾರ್ಯ ಹಾಗೂ ಕಡ್ಡಾಯ. ದೈಹಿಕ ಚಟುವಟಿಕೆಯು ದೇಹಕ್ಕೆ ನೀಡುವ ಶಿಕ್ಷಣವಾಗಿದ್ದು ಇದು ವಿದ್ಯಾರ್ಥಿಗಳಲ್ಲಿ ದೈಹಿಕ, ಮಾನಸಿಕ, ಭಾವನಾತ್ಮಕ ಹಾಗೂ ಸಾಮಾಜಿಕ ಬದಲಾವಣೆಗೆ ಒತ್ತು ನೀಡುತ್ತದೆ.

ವಿದ್ಯಾರ್ಥಿಗಳು ಬೆಳಗ್ಗೆಯಿಂದ ಸಾಯಂಕಾಲದ ವರೆಗೆ ಪಠ್ಯ ಚಟುವಟಿಕೆಗಳಲ್ಲಿ ನಿರತರಾಗಿರುವುದರಿಂದ ಅವರ ಮನಸ್ಸಿಗೆ ಮುದ ಅಥವಾ ಆರಾಮ ಅನಿವಾರ್ಯವಾಗಿರುತ್ತದೆ. ಈ ನಿಟ್ಟಿನಲ್ಲಿ ಮನಸ್ಸನ್ನು ನಿರಾಳಗೊಳಿಸಲು ಸಮಯವನ್ನು ಮೀಸಲಿರಿಸಬೇಕಾಗುತ್ತದೆ. ಹಾಗಾಗಿ ವಿದ್ಯಾರ್ಥಿಗಳು ಆಟೋಟಗಳಲ್ಲಿ ಭಾಗವಹಿಸುವುದು ಗುಂಪುಗಳೊಂದಿಗೆ ಬೆರೆತು ನಲಿಯುವುದನ್ನು ರೂಢಿಸಿಕೊಂಡಾಗ ಮಾನಸಿಕ ಹಾಗೂ ದೈಹಿಕ ನೋವು, ದುಗುಡ, ದುಮ್ಮಾನಗಳು ಎಲ್ಲವೂ ಮಂಜಿನಂತೆ ಕರಗಿ ಮಕ್ಕಳ ಮನಸ್ಸಲ್ಲಿ ನವೋಲ್ಲಾಸ ಮೂಡುತ್ತದೆ. ದೈಹಿಕ ಚಟುವಟಿಕೆ ಹಾಗೂ ಆಟಗಳು ಮಕ್ಕಳ ಆರೋಗ್ಯವನ್ನು ವೃದ್ಧಿಸಿ ಕಾಯಿಲೆಗಳಿಂದ ದೂರವಿರಿಸಿ ಸುಂದರ ಜೀವನ ನಡೆಸಲು ಸಹಕರಿಸುತ್ತವೆ.

ದೈಹಿಕ ಚಟುವಟಿಕೆಗಳಲ್ಲಿ ಒಂದಾದ ಸ್ಕ್ವಾಟ್ ಇದರ ಅಭ್ಯಾಸದಿಂದ ಆಗುವ ಪ್ರಯೋಜನಗಳನ್ನು ಕೆಳಕಂಡಂತೆ ನೋಡೋಣ :-

1) ಸ್ಕ್ವಾಟ್ ಇದರ ಅಭ್ಯಾಸವು ದೇಹದಲ್ಲಿ ಅನವಶ್ಯಕ ಪೋಷಕಾಂಶಗಳನ್ನು ಹೊರದೂಡುತ್ತದೆ.

2) ಇದರ ಅಭ್ಯಾಸದಿಂದ ದೇಹದ ಬಾಗುವಿಕೆಗೆ ಸಹಕಾರಿಯಾಗಿರುವುದರ ಜೊತೆಗೆ ದೇಹದ ಕೆಳಭಾಗವು ಗಟ್ಟಿಯಾಗುತ್ತದೆ.

3). ಜೀರ್ಣಕ್ರಿಯೆಗೆ ಅತ್ಯುತ್ತಮ ವ್ಯಾಯಾಮ ಇದಾಗಿದ್ದು ಹೊಟ್ಟೆಯ ಒಳಭಾಗದ ಅಂಗಾಂಗಗಳು ಹಾಗೂ ಕರುಳಿನ ಕಾರ್ಯಕ್ಷಮತೆಗೆ ಸಹಕರಿಸುತ್ತದೆ. 4) ದೇಹದ ಒಳ ಮಾಂಸ ಖಂಡಗಳು ಬಲಿಷ್ಠಗೊಂಡು ಹೊಟ್ಟೆಯ ಮಾಂಸ ಖಂಡ ಅಥವಾ ಸ್ನಾಯುಗಳು ಶಕ್ತಿಯುತಗೊಂಡು ಕಾರ್ಯ ನಿರ್ವಹಿಸುತ್ತದೆ.

ಈ ನಿಟ್ಟಿನಲ್ಲಿ ದೈಹಿಕ ಚಟುವಟಿಕೆ ಹಾಗೂ ಆಟಗಳ ಹಿನ್ನೆಲೆಯನ್ನು ತಿಳಿಯೋಣ:

ಮನೋಲ್ಲಾಸ ಕ್ರೀಡೆ ಹಾಗೂ ಆಟಗಳು ಮನುಷ್ಯನಿಗೆ ಮಾತ್ರವಲ್ಲದೆ ಪ್ರಾಣಿ ಪಕ್ಷಿಗಳಿಗೂ ಸಹಜವಾಗಿದ್ದು, ಪ್ರಕೃತಿಯು ಕರುಣಿಸಿರುವ ಒಂದು ವರದಾನವಾಗಿದೆ. ಉದಾಹರಣೆಗೆ ಬೆಕ್ಕು ತನ್ನ ಮರಿಗಳೊಂದಿಗೆ ಆಟ ಆಡುವುದು, ನಾಯಿ ತನ್ನ ಮರಿಗಳೊಂದಿಗೆ ಆಟ ಆಡುವುದು ಹಾಗೂ ಪಕ್ಷಿಗಳೂ ಸಹ ತಮ್ಮ ಮರಿಗಳೊಂದಿಗೆ ರೆಕ್ಕೆ ಬಡಿಯಲು ಹಾರಲು ಕಲಿಸುವ ರೂಪದಲ್ಲಿ ಅತ್ಯಂತ ಮೇಲಕ್ಕೆ ಒಯ್ದು ನಂತರ ಬಿಡುತ್ತವೆ. ತದನಂತರ ಹಿಡಿದುಕೊಳ್ಳುತ್ತವೆ. ಈ ರೀತಿಯಾಗಿ ಅವೂ ಸಹ ಪ್ರಕೃತಿಗೆ ಸಹಜವಾಗಿ ಆಟ ಆಡುತ್ತವೆ. ಹೀಗೆ ಹುಲಿ, ಸಿಂಹ ಎಲ್ಲಾ ಪ್ರಾಣಿಗಳು ಕೂಡ ಬೇಟೆ ಕಲಿಸುವ ರೂಪದಲ್ಲಿ ತಮ್ಮ ಮರಿಗಳೊಂದಿಗೆ ಆಟ ಆಡುವುದು ಮಾತ್ರವಲ್ಲದೆ

ವಿವಿಧ ಪ್ರಾಣಿ ಪಕ್ಷಿಗಳಿಗೆ ಆಟಗಳು ಪ್ರಕೃತಿ ನೀಡಿದ ವರದಾನವಾಗಿದೆ.

► ಫಿಟ್ನೆಸ್ ಅಥವಾ ಸದೃಢತೆ ಬಗ್ಗೆ ತಜ್ಞರ ಅಭಿಪ್ರಾಯಗಳು:

1) ಫಿಟ್ನೆಸ್ ಅಥವಾ ಸದೃಢತೆ ಎನ್ನುವುದು ಕೇವಲ ಆಟಗಾರರಿಗೆ ಮಾತ್ರವಲ್ಲ, ಗಾಯಕರಿಂದ ಹಿಡಿದು ಬಿಸಿಲಿನಲ್ಲಿ ವಾಹನ ಸಂಚಾರ ನಿಯಂತ್ರಿಸುವ ಸಂಚಾರ ಪೊಲೀಸರು, ಹೊಲದಲ್ಲಿ ಕಷ್ಟಪಟ್ಟು ದುಡಿಯುವ ರೈತರವರೆಗೂ ಮುಖ್ಯ.

ಸದೃಢತೆ: ಇದು ಕೇವಲ ದೈಹಿಕ ಮತ್ತು ಮಾನಸಿಕ ಸದೃಢತೆಗೆ ಮಾತ್ರವೇ ಸೀಮಿತವಲ, ಸಮಗ್ರ ಮನೋ ದೈಹಿಕ ವ್ಯವಸ್ಥೆಗೆ ಸಂಬಂಧಿಸಿದ್ದಾಗಿದೆ ಎಂದು ಲೇಖಕ ಪದ್ಮನಾಭ ಭಟ್ ಹೇಳುತ್ತಾರೆ.

2) ಯಾವ ವಿದ್ಯಾರ್ಥಿಗಳು ತಮ್ಮನ್ನು ದೈಹಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲವೋ, ಅಂತಹವರಲ್ಲಿ ಸ್ಥೂಲಕಾಯ ಅಥವಾ ಬೊಜ್ಜಿನ ಸಮಸ್ಯೆ ಏರು ಗತಿಯಲ್ಲಿ ಸಾಗುತ್ತದೆ. ಪ್ರತೀ ಶಾಲೆಯಲ್ಲಿ ಶೇ. 30ರಷ್ಟು ಮಕ್ಕಳು ಸ್ಥೂಲಕಾಯ ಸಮಸ್ಯೆಯನ್ನು ಎದುರಿಸುತ್ತಿದ್ದು ಅಂತಹವರಲ್ಲಿ ಮಧುಮೇಹ, ಅಧಿಕ ರಕ್ತದೊತ್ತಡ, ಹೃದಯಾಘಾತ, ಅತೀ ಹೆಚ್ಚು ಜಿಡ್ಡು ಉಂಟಾಗಿ ಅತೀ ಬೇಗನೆ ಅಂತಹವರು ಸಾವಿಗೆ ಶರಣಾಗುತ್ತಾರೆ. ಮೆದುಳಿನಲ್ಲಿ ರಕ್ತಸ್ರಾವ, ಪಾರ್ಶ್ವವಾಯು, ಉಸಿರಾಟದ ಸಮಸ್ಯೆ ಹಾಗೂ ಮಾನಸಿಕ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ ಎಂದು ಪ್ರಖ್ಯಾತ ಲೇಖಕಿ ಹಾಗೂ ಹೃ ದ್ರೋಗ ತಜ್ಞೆ ಡಾ. ವಿಜಯಲಕ್ಷ್ಮೀ ಬಾಳೆಕುಂದ್ರಿ ಕಳವಳ ವ್ಯಕ್ತಪಡಿಸುತ್ತಾರೆ.

ದೇಹ ಹಾಗೂ ಮನಸ್ಸು ಸದಾ ಉಲ್ಲಸಿತ ವಾಗಿರಬೇಕಾದರೆ ಅದಕ್ಕೆ ಪೂರಕವಾದ ವ್ಯಾಯಾಮಗಳನ್ನು ಬಾಲ್ಯದಿಂದಲೇ ರೂಢಿಸಿಕೊಳ್ಳಬೇಕಾಗಿದೆ. ಇದರಿಂದ ದೇಹ ಫಿಟ್ ಆಗುವುದರ ಜೊತೆಗೆ ಮನಸ್ಸಿಗೆ ಮುದ ದೊರೆಯುತ್ತದೆ ಹಾಗಾಗಿ ದೈಹಿಕ ಚಟುವಟಿಕೆ ಅಥವಾ ವ್ಯಾಯಾಮಗಳನ್ನು ಕಷ್ಟಪಟ್ಟು ಮಾಡುವುದಕ್ಕಿಂತ ಇಷ್ಟಪಟ್ಟು ಮಾಡುವುದು ಸೂಕ್ತ ಎಂದಿದ್ದಾರೆ ನಟಿ ಪಾವನಾ.

ಒಟ್ಟಾರೆ ಹೇಳುವುದಾದರೆ ದೈಹಿಕ ಚಟುವಟಿಕೆ ಅಥವಾ ಆಟಗಳಿರುವುದು ಮನುಷ್ಯನ ಏಳಿಗೆಗೆ, ಜೀವನವನ್ನು ಉಪಯುಕ್ತಗೊಳಿಸಿಕೊಂಡು ಬದುಕು ಸಾಧಿಸಲಿಕ್ಕಾಗಿ ಎನ್ನುವ ಮೂಲಕ ವಿದ್ಯಾರ್ಥಿಗಳಲ್ಲಿ ಹೊಸ ಚೈತನ್ಯವನ್ನು ಕಟ್ಟಿಕೊಡಲು ಆಟಗಳು ಪ್ರೇರಣಾತ್ಮಕ ಸಾಧನಗಳಾಗಿದೆ.

ಸರಿಯಾದ ರೀತಿಯಲ್ಲಿ ಸದ್ವಿನಿಯೋಗ ಮಾಡಿಕೊಂಡಾಗ ವಿದ್ಯಾರ್ಥಿಗಳು ಜೀವನದಲ್ಲಿ ಸಾರ್ಥಕ್ಯವನ್ನು ಹೊಂದಬಹುದಾಗಿದೆ.

share
ಡಾ. ಸತ್ಯಮೂರ್ತಿ
ಡಾ. ಸತ್ಯಮೂರ್ತಿ

ಉಪನ್ಯಾಸಕರು ಹಾಗೂ ಚಿಂತಕರು

Next Story
X