Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ರಾಹುಲ್ ಗಾಂಧಿ ಬಿಹಾರ ಚುನಾವಣೆಯಲ್ಲಿ...

ರಾಹುಲ್ ಗಾಂಧಿ ಬಿಹಾರ ಚುನಾವಣೆಯಲ್ಲಿ ಗೇಮ್ ಚೇಂಜರ್ ಆಗಲಿದ್ದಾರೆಯೇ?

ಪ್ರವೀಣ್ ಎನ್.ಪ್ರವೀಣ್ ಎನ್.19 Jun 2025 10:49 AM IST
share
ರಾಹುಲ್ ಗಾಂಧಿ ಬಿಹಾರ ಚುನಾವಣೆಯಲ್ಲಿ ಗೇಮ್ ಚೇಂಜರ್ ಆಗಲಿದ್ದಾರೆಯೇ?

ರಾಹುಲ್ ಗಾಂಧಿ ಈ ದಿನಗಳಲ್ಲಿ ಬಿಹಾರ ಪ್ರವಾಸ ಮಾಡುತ್ತಿದ್ದಾರೆ. ಕಳೆದ ಹಲವಾರು ತಿಂಗಳುಗಳಿಂದ ರಾಹುಲ್ ಗಾಂಧಿಯವರ ಗಮನ ದಲಿತರ ಮೇಲೆ ಇರುವುದನ್ನು ನಾವು ನೋಡುತ್ತಿದ್ದೇವೆ. ದಲಿತ ಮತಗಳು ಈಗ ರಾಹುಲ್ ಗಾಂಧಿಯವರ ಗಮನದ ಕೇಂದ್ರಬಿಂದುವಾಗಿದೆ ಎಂಬುದು ಸ್ಪಷ್ಟವಾಗಿ ಗೋಚರಿಸುತ್ತದೆ.

ಅವರು ಬಿಹಾರಕ್ಕೆ ಹೋದಾಗ, ಮುಜಪ್ಫರ್‌ಪುರದ ದಲಿತ ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿಗಳನ್ನು ಭೇಟಿಯಾಗುತ್ತಾರೆ. ಅಲ್ಲದೆ ದಶರಥ್ ಮಾಂಝಿ ಅವರ ಮಗನನ್ನು ಭೇಟಿಯಾಗಲು ಹೋದರು.

ಕಾಂಗ್ರೆಸ್ ಪಕ್ಷದ ಈ ಪ್ರಯತ್ನಗಳು, ರಾಹುಲ್ ಗಾಂಧಿ ಬಿಹಾರ ಚುನಾವಣೆಯಲ್ಲಿ ಹೊಸ ಸಾಧ್ಯತೆಯನ್ನು ಹುಡುಕುತ್ತಿರುವುದರ ಸೂಚನೆಯಾಗಿದೆ.

ರಾಹುಲ್ ಗಾಂಧಿ ಭಾರತ ಜೋಡೊ ಯಾತ್ರೆಯ ನಂತರ, ಕಾಂಗ್ರೆಸ್ ಪಕ್ಷವನ್ನು ಪುನರುಜ್ಜೀವನಗೊಳಿಸಲು ಮತ್ತೊಮ್ಮೆ ದಲಿತರನ್ನು ಕಾಂಗ್ರೆಸ್‌ನೊಂದಿಗೆ ಜೋಡಿಸುವ ಅಗತ್ಯವನ್ನು ಮನಗಂಡರು.

ಭಾರತ ಜೋಡೋ ಯಾತ್ರೆ ಮತ್ತು ಕಾಂಗ್ರೆಸ್ ಪಕ್ಷ ಮತ್ತು ರಾಹುಲ್ ಗಾಂಧಿ ನಿರಂತರವಾಗಿ ಎತ್ತುತ್ತಿರುವ ವಿಷಯಗಳಿಂದಾಗಿ, ಇಂದು ಮುಸ್ಲಿಮ್ ಸಮುದಾಯದಲ್ಲಿ ಕಾಂಗ್ರೆಸ್ ಹಾಗೂ ರಾಹುಲ್ ಬಗ್ಗೆ ಗೊಂದಲವಿಲ್ಲ. ರಾಷ್ಟ್ರೀಯ ಮಟ್ಟದಲ್ಲಿ ಅವರು ಸಂಪೂರ್ಣವಾಗಿ ಕಾಂಗ್ರೆಸ್ ಜೊತೆ ಇದ್ದಾರೆ. ಕಾಂಗ್ರೆಸ್ ದುರ್ಬಲವಾಗಿರುವಲ್ಲಿ ಅವರು ಇತರ ಜಾತ್ಯತೀತ ಪಕ್ಷಗಳೊಂದಿಗೆ ಹೋಗುತ್ತಾರೆ.

ಇನ್ನು ದಲಿತರು ಬಹಳ ಬಲವಾದ ಸಮುದಾಯ.

ಅವರು ಜನಸಂಖ್ಯೆಯ ಸುಮಾರು ಶೇ. 15ರಿಂದ 17ರಷ್ಟಿದ್ದಾರೆ. ಅವರು ಉತ್ತರ ಭಾರತದಲ್ಲಿ ನಿಜವಾಗಿಯೂ ಪ್ರಬಲರಾಗಿದ್ದಾರೆ.

ಈ ದಲಿತ ಸಮುದಾಯ, ಸಂವಿಧಾನವನ್ನು ಉಳಿಸುವ ಹೋರಾಟದ ಪರಿಣಾಮವಾಗಿ ರಾಹುಲ್ ಗಾಂಧಿಯವರಿಗೆ ಹತ್ತಿರವಾಗುತ್ತಿದೆ.

ಚುನಾವಣೆಗಳ ನಂತರವೂ ರಾಹುಲ್ ಗಾಂಧಿ ನಿರಂತರವಾಗಿ ದಲಿತ ಮತ್ತು ಸಂವಿಧಾನ ಬಚಾವೋ ಸಮ್ಮೇಳನಗಳನ್ನು ಬಹಳ ಎಚ್ಚರಿಕೆಯಿಂದ ಆಯೋಜಿಸುತ್ತಿದ್ದಾರೆ.

ಉತ್ತರ ಪ್ರದೇಶದಲ್ಲಿ ಲೋಕಸಭಾ ಚುನಾವಣೆಯಲ್ಲಿ ದಲಿತರ ಬೆಂಬಲ ‘ಇಂಡಿಯಾ’ ಒಕ್ಕೂಟಕ್ಕೆ ಸಿಗಲು ನಿಜಕ್ಕೂ ಕಾರಣವಾಗಿರುವವರು ರಾಹುಲ್ ಗಾಂಧಿ. ಸುಮಾರು ಶೇ. 88ರಷ್ಟು ಅಲ್ಪಸಂಖ್ಯಾತರ ಬಲ ಸಿಕ್ಕಿರುವುದು ರಾಹುಲ್ ಗಾಂಧಿಯವರ ಕಾರಣದಿಂದಾಗಿ.

ಬಿಹಾರದಲ್ಲಿ ಆರ್‌ಜೆಡಿ ಹಿಂದುಳಿದವರ ಪಕ್ಷವಾಗಿದೆ. ಆದರೆ ರಾಹುಲ್ ಗಾಂಧಿಯವರ ಕ್ರಿಯಾಶೀಲತೆ ದಲಿತರು, ಒಬಿಸಿಗಳು ಮತ್ತು ಮುಸ್ಲಿಮರಲ್ಲಿ ಹೆಚ್ಚಿನ ಭಾಗವನ್ನು ಇಡೀ ಮಹಾಘಟಬಂಧನದ ಪರವಾಗಿ ತರುವಲ್ಲಿ ಯಶಸ್ವಿಯಾಗಬಹುದು.

ರಾಹುಲ್ ಗಾಂಧಿಯವರ ಪ್ರಯತ್ನಗಳು ಮುಂಬರುವ ಚುನಾವಣೆಯಲ್ಲಿ ಮಹಾಘಟಬಂಧನದ ಪರವಾಗಿ ಫಲಿತಾಂಶಗಳನ್ನು ತರಲು ಸಾಧ್ಯವಾಗುತ್ತದೆಯೇ ಎಂಬುದು ಈಗಿನ ಕುತೂಹಲ.

ಇನ್ನು ಬಿಹಾರದ ಫಲವತ್ತಾದ ರಾಜಕೀಯ ಭೂಮಿಯಿಂದ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುವ ಹಾದಿಯಲ್ಲಿ ನಡೆದುಕೊಳ್ಳಲಿದೆಯೇ ಎಂಬುದು ಮತ್ತೊಂದು ಪ್ರಶ್ನೆ.

ಈಗ ರಾಹುಲ್ ಗಾಂಧಿ ಬಿಹಾರದ ರಾಜಕೀಯದಲ್ಲಿ ಮಹತ್ವದ ಬದಲಾವಣೆಯನ್ನು ತರುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿರುವುದು ಸ್ಪಷ್ಟವಾಗಿದೆ. ದಲಿತ ಸಮುದಾಯದ ಮೇಲೆ ಅವರ ಗಮನ, ಪಕ್ಷ ಸಂಘಟನೆಯನ್ನು ಬಲಪಡಿಸುವ ಪ್ರಯತ್ನ ಮತ್ತು ಸೈದ್ಧಾಂತಿಕ ಸ್ಪಷ್ಟತೆಯೊಂದಿಗೆ ಸಾಮಾಜಿಕ ಸಂಪರ್ಕವನ್ನು ಬೆಸೆಯುವ ಕಾರ್ಯತಂತ್ರವು ಬಿಹಾರದ ಚುನಾವಣಾ ಚಿತ್ರಣವನ್ನು ಬದಲಾಯಿಸುವ ಸಾಮರ್ಥ್ಯವನ್ನು ಹೊಂದಿದೆ. ಇದು ಹಿಂದಿ ರಾಜ್ಯಗಳ ಚುನಾವಣೆಗಳನ್ನು ಹತ್ತಿರದಿಂದ ಕಂಡಿರುವ ಹಿರಿಯ ವಿಶ್ಲೇಷಕರ ಅಭಿಪ್ರಾಯ.

ಜಾತಿ ಗಣತಿಯನ್ನು ಖಂಡತುಂಡವಾಗಿ ವಿರೋಧಿಸುತ್ತಿದ್ದ ಮೋದಿ ಸರಕಾರ ಹಾಗೂ ಬಿಜೆಪಿಯೇ ಜಾತಿ ಗಣತಿ ಮಾಡಲು ಮುಂದಾಗಿದ್ದು ರಾಹುಲ್ ಗಾಂಧಿಯವರ ಆಗ್ರಹದ ಪರಿಣಾಮ ಎಂಬುದನ್ನು ಜನ ಗುರುತಿಸುತ್ತಿದ್ದಾರೆ. ಅದರಲ್ಲೂ ವಿಶೇಷವಾಗಿ ದಲಿತರು, ಹಿಂದುಳಿದ ವರ್ಗಗಳು ರಾಹುಲ್ ಗಾಂಧಿಯ ಪಾತ್ರ ಎಷ್ಟು ಮುಖ್ಯವಾಗಿತ್ತು ಎಂಬುದನ್ನು ಗಮನಿಸಿದ್ದಾರೆ. ಆ ಹಿನ್ನೆಲೆಯಲ್ಲಿ ಬಿಹಾರದ ದಲಿತರ ಬಳಿ ರಾಹುಲ್ ಹೋಗುವಾಗ ಅವರಿಗೆ ಉತ್ತಮ ಪ್ರತಿಕ್ರಿಯೆ ಸಿಗುವ ಸಾಧ್ಯತೆ ಬಹಳ ಹೆಚ್ಚಿದೆ.

ಕಾಂಗ್ರೆಸ್ ಸಂಘಟನಾತ್ಮಕವಾಗಿ ಗಟ್ಟಿಯಿಲ್ಲ, ಹಾಗಾಗಿ ಅದು ಬಿಜೆಪಿಗೆ ಪೈಪೋಟಿ ನೀಡಲು ಸಾಧ್ಯವಿಲ್ಲ ಎಂದು ಹೇಳುತ್ತ ಬರಲಾಗಿತ್ತು. ಆದರೆ ಈಗ ಸಂಘಟನಾತ್ಮಕವಾಗಿ ಬಲಗೊಳ್ಳುವ ದಿಕ್ಕಿನಲ್ಲಿ ಕಾಂಗ್ರೆಸ್ ಕೆಲಸ ಮಾಡುತ್ತಿದೆ. ರಾಹುಲ್ ಗಾಂಧಿ ನಿರಂತರವಾಗಿ ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಹೋಗುತ್ತಿದ್ದಾರೆ.

ಒಂದು ಸಂಘಟನೆಯನ್ನು ಕಟ್ಟುವಾಗ, ಓಡಬಲ್ಲ ಮತ್ತು ಬಲವಾಗಿ ಓಡಬಲ್ಲ ಕುದುರೆಗಳ ಕಡೆ ಸಹಜವಾಗಿಯೇ ಗಮನ ಅಗತ್ಯವಾಗುತ್ತದೆ ಮತ್ತು ಆ ನಿಟ್ಟಿನಲ್ಲಿ ರಾಹುಲ್ ಅವರ ನಿಷ್ಠೆ ಯಾವುದೇ ರೀತಿಯಲ್ಲಿ ಪ್ರಶ್ನಾರ್ಹವಲ್ಲದ ಹಾಗೆ ಇರುವುದು ಕಾಣಿಸುತ್ತಿದೆ.

ರಾಹುಲ್ ಗಾಂಧಿಯವರಿಗೆ ಇಂದು ರೇಸ್ ಕುದುರೆಗಳು ಬೇಕಾಗಿವೆ ಮತ್ತು ಅವುಗಳನ್ನು ಹೇಗೆ ಗುರುತಿಸುವುದು ಎಂಬುದು ಅವರಿಗೆ ದೊಡ್ಡ ಪ್ರಶ್ನೆಯಾಗಿದೆ.

ರಾಹುಲ್ ಗಾಂಧಿ ಕಳೆದ 10-11 ವರ್ಷಗಳಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ತುಂಬಾ ಬಲಿಷ್ಠ ಮತ್ತು ಆರೋಗ್ಯಕರವಾಗಿ ಕಾಣುವ ಮತ್ತು ರೇಸ್ ಕುದುರೆಗಳಂತೆ ಕಾಣುವ ಅನೇಕ ಕುದುರೆಗಳಿವೆ ಎಂದು ನೋಡಿದ್ದಾರೆ. ಆದರೆ ವಾಸ್ತವದಲ್ಲಿ ಅವರು ಬಿಜೆಪಿ ವಿರುದ್ಧ ಹೋರಾಡಲು ಬಯಸುವುದಿಲ್ಲ ಅಥವಾ ಅವರ ನಿಷ್ಠೆಯ ಬಗ್ಗೆ ಕೆಲವು ರೀತಿಯ ಪ್ರಶ್ನೆಗಳಿವೆ.

ರಾಹುಲ್ ಗಾಂಧಿಯ ಬಗೆಗಿನ ಅವರ ವೈಯಕ್ತಿಕ ನಿಷ್ಠೆಯ ಬಗ್ಗೆಯೂ ಹಲವು ರೀತಿಯ ಅನುಮಾನಗಳಿವೆ. ಬಿಜೆಪಿಯೊಂದಿಗೆ ನಿಜವಾಗಿಯೂ ಡೀಲ್ ಮಾಡಿಕೊಂಡಿರುವ ಕೆಲವು ಕುದುರೆಗಳಿವೆ ಎಂದು ಅವರು ಭಾವಿಸುತ್ತಾರೆ.

ರಾಹುಲ್ ಗಾಂಧಿ ಯಾವ ರೀತಿಯ ಕಾಂಗ್ರೆಸ್ ಅನ್ನು ತಾನು ಬಯಸುತ್ತಿದ್ದೇನೆ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ ಎಂಬುದಕ್ಕೆ ಇದೊಂದು ಪುರಾವೆ. ಬಿಜೆಪಿಯ ವಿರುದ್ಧ ಹೋರಾಡಲು ಸಾಧ್ಯವಾಗದ ಕುದುರೆಗಳ ಅಗತ್ಯವಿಲ್ಲ ಎಂಬುದು ಸ್ಪಷ್ಟವಾಗಿದೆ. ಭವಿಷ್ಯದ ಬಗ್ಗೆ ಯೋಚಿಸದೆ ಓಟದಲ್ಲಿ ಓಡಬಲ್ಲ ಕುದುರೆಗಳಿಗಾಗಿ ಅವರೀಗ ನೋಡುತ್ತಿದ್ದಾರೆ.

ಇದು ಕಾಂಗ್ರೆಸ್ ಪಕ್ಷಕ್ಕೆ ಹಾನಿಕಾರಕವಲ್ಲ.

ಅವರು ಕಾಂಗ್ರೆಸ್ ಪಕ್ಷದಲ್ಲಿ ಆಂತರಿಕ ಸಂಘರ್ಷಗಳನ್ನು ಉಂಟುಮಾಡುವ ಕುದುರೆಗಳನ್ನು ಗುರುತಿಸಲು ಪ್ರಾರಂಭಿಸಿದ್ದಾರೆ. ಅಂಥ ನಾಯಕರ ಉಪಯೋಗವಿಲ್ಲ ಎಂಬ ಸ್ಪಷ್ಟ ನಿಲುವಿಗೆ ರಾಹುಲ್ ಬಂದಿದ್ದಾರೆ. ಅಗತ್ಯ ಬಿದ್ದರೆ ಅಂಥವರನ್ನು ತೆಗೆದುಹಾಕುವುದಕ್ಕೂ ಸಿದ್ಧ ಎಂಬ ಸುಳಿವನ್ನು ಅವರು ಕೊಟ್ಟಿದ್ದಾರೆ.

ಇನ್ನು ಅವರೆದುರಿನ ಮತ್ತೊಂದು ಸವಾಲೆಂದರೆ, ಪಕ್ಷದೊಳಗಿನ ಗುಂಪುಗಾರಿಕೆಯನ್ನು ಅವರು ಹೇಗೆ ನಿವಾರಿಸುತ್ತಾರೆ ಎನ್ನುವುದು.

ಮಧ್ಯಪ್ರದೇಶ, ಗುಜರಾತ್, ಹರ್ಯಾಣ, ರಾಜಸ್ಥಾನ, ಪಂಜಾಬ್, ಕೇರಳ ಎಲ್ಲ ಕಡೆಯೂ ಪಕ್ಷದಲ್ಲಿ ಗುಂಪುಗಾರಿಕೆ ಇದೆ.

ಆದ್ದರಿಂದ, ಯಾವ ಮಟ್ಟದಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ ಮತ್ತು ರಾಹುಲ್ ಗಾಂಧಿ ಎಷ್ಟು ದೊಡ್ಡ ಬದಲಾವಣೆಯನ್ನು ತರುತ್ತಾರೆ ಎಂಬುದನ್ನು ನೋಡಬೇಕಿದೆ.

ಇಂದು ಕಾಂಗ್ರೆಸ್ ಪಕ್ಷ ಈ ಆಂತರಿಕ ಗುಂಪುಗಾರಿಕೆಯನ್ನು ಸಹಿಸಲು ಸಾಧ್ಯವಿಲ್ಲ. ಗುಂಪುಗಾರಿಕೆ ಇಟ್ಟುಕೊಂಡು, ಬಿಜೆಪಿಯೊಂದಿಗೆ ಸ್ಪರ್ಧಿಸಲು ಸಾಧ್ಯವಿಲ್ಲ.

ಇಂದು ಕಾಂಗ್ರೆಸ್ ಪಕ್ಷಕ್ಕೆ ಸಂಪೂರ್ಣವಾಗಿ ಹೊಸ ರಕ್ತದ ಅವಶ್ಯಕತೆಯಿದೆ.

ಲೋಕಸಭೆ, ವಿಧಾನಸಭೆ ಮತ್ತು ಸ್ಥಳೀಯ ಚುನಾವಣೆಗಳಿಗೆ ಅಭ್ಯರ್ಥಿಗಳ ಆಯ್ಕೆಯಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿಗಳ ಪಾತ್ರಕ್ಕೆ ಪ್ರಾಮುಖ್ಯತೆ ನೀಡಲಾಗುವುದು ಎಂದು ರಾಹುಲ್ ಗಾಂಧಿ ಹೇಳುತ್ತಿದ್ದಾರೆ.

ದೇಶದಲ್ಲಿ ಇಂದಿಗೂ ಕಾಂಗ್ರೆಸ್ ಪಕ್ಷ ಶೇ. 21 ಮತ ಪಾಲನ್ನು ಹೊಂದಿದೆ. ಅದು ಗಣನೀಯ ಮತ ಪಾಲು ಎಂಬುದು ಸ್ಪಷ್ಟ.

ಏನೇ ದೊಡ್ಡದಾಗಿ ಹೇಳಿಕೊಂಡರೂ, ಬಿಜೆಪಿ ಇನ್ನೂ ಶೇ. 36 ಮತ ಪಾಲನ್ನು ಹೊಂದಿದೆ.

2019ರ ಚುನಾವಣೆಯಲ್ಲಿ ಕಾಂಗ್ರೆಸ್‌ನ ಮತಗಳ ಶೇಕಡಾವಾರು 19.46 ಆಗಿತ್ತು. ಕಾಂಗ್ರೆಸ್ ಈಗ ಕಾರ್ಯಕರ್ತರ ಪಡೆಯನ್ನು ಕಟ್ಟಲು ಸಾಧ್ಯವಾದರೆ, ಅದು ಕಾಂಗ್ರೆಸ್‌ಗೆ ಉಪಯುಕ್ತವಾಗಿರುತ್ತದೆ.

ದಲಿತ ಮತದಾರರನ್ನು ತಲುಪುವ ಅವರ ಪ್ರಯತ್ನವು ಕೇವಲ ಬಿಹಾರದ ಚುನಾವಣಾ ಗಣಿತವನ್ನಷ್ಟೇ ಅಲ್ಲದೆ, ಸಾಮಾಜಿಕ ನ್ಯಾಯದ ಆಧಾರದ ಮೇಲೆ ಹೊಸ ರಾಜಕೀಯ ಸಮೀಕರಣಗಳನ್ನು ಹುಟ್ಟುಹಾಕುವ ಸಾಮರ್ಥ್ಯವನ್ನು ಹೊಂದಿದೆ.

ಭಾರತ ಜೋಡೊ ಯಾತ್ರೆಯ ನಂತರ ಅವರು ಕಂಡುಕೊಂಡಿರುವ ಜನಬೆಂಬಲ ಮತ್ತು ಮುಸ್ಲಿಮ್ ಸಮುದಾಯದಲ್ಲಿನ ವಿಶ್ವಾಸವನ್ನು ಮತ್ತಷ್ಟು ಬಲಪಡಿಸಿಕೊಳ್ಳುವ ನಿಟ್ಟಿನಲ್ಲಿ ದಲಿತ ಸಮುದಾಯದೊಂದಿಗೆ ನೇರ ಸಂಪರ್ಕವನ್ನು ಸ್ಥಾಪಿಸುತ್ತಿರುವುದು ಮಹತ್ವದ ಬೆಳವಣಿಗೆಯಾಗಿದೆ.

ಇದು ಕೇವಲ ಪ್ರಾದೇಶಿಕ ಪಕ್ಷಗಳಿಗೆ ಮಾತ್ರವಲ್ಲದೆ, ರಾಷ್ಟ್ರೀಯ ಮಟ್ಟದಲ್ಲಿಯೂ ಬಿಜೆಪಿ ಪ್ರಾಬಲ್ಯಕ್ಕೆ ಸವಾಲೊಡ್ಡುವ ಸಾಧ್ಯತೆ ಇದೆ.

ರಾಹುಲ್ ಗಾಂಧಿಯವರ ಸೈದ್ಧಾಂತಿಕ ಸ್ಪಷ್ಟತೆ ಮತ್ತು ಸಾಮಾಜಿಕ ನ್ಯಾಯದ ಬಗೆಗಿನ ಬದ್ಧತೆಯು ಯುವಕರು ಮತ್ತು ಅಂಚಿನಲ್ಲಿರುವ ಸಮುದಾಯಗಳನ್ನು ಆಕರ್ಷಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಬಹುದು.

ಹಾಗೆಯೇ, ಕಾಂಗ್ರೆಸ್ ಪಕ್ಷವನ್ನು ಮರುಸಂಘಟಿಸುವ ಮತ್ತು ಪಕ್ಷದೊಳಗಿನ ಆಂತರಿಕ ಭಿನ್ನಾಭಿಪ್ರಾಯಗಳನ್ನು ನಿವಾರಿಸುವ ರಾಹುಲ್ ಗಾಂಧಿಯವರ ಪ್ರಯತ್ನಗಳು ಯಶಸ್ವಿಯಾದರೆ, ಪಕ್ಷವು ಮತ್ತಷ್ಟು ಬಲಗೊಳ್ಳುವ ಸಾಧ್ಯತೆ ಇದೆ. ಸಂಘಟನಾತ್ಮಕವಾಗಿ ಸದೃಢವಾದ ಕಾಂಗ್ರೆಸ್, ಮಿತ್ರಪಕ್ಷಗಳೊಂದಿಗೆ ಸೇರಿ ಬಿಹಾರದಲ್ಲಿ ಮಾತ್ರವಲ್ಲದೆ, ಇತರ ಪ್ರಮುಖ ರಾಜ್ಯಗಳಲ್ಲೂ ಬಿಜೆಪಿಗೆ ಗಂಭೀರ ಪೈಪೋಟಿ ನೀಡಲು ಸಜ್ಜಾಗಬಹುದು.

ಬಿಹಾರವು ಹಿಂದಿನಿಂದಲೂ ಭಾರತದ ರಾಜಕೀಯದ ಗತಿ ನಿರ್ಧರಿಸುವಲ್ಲಿ ಮಹತ್ವದ ಪಾತ್ರ ವಹಿಸಿದೆ. ಹೀಗಾಗಿ, ರಾಹುಲ್ ಗಾಂಧಿಯವರ ಈ ನಡೆ ಬಿಹಾರದಲ್ಲಿ ಯಶಸ್ಸು ಕಂಡರೆ, ಅದು ಖಂಡಿತವಾಗಿಯೂ ರಾಷ್ಟ್ರೀಯ ರಾಜಕೀಯದಲ್ಲಿ ದೊಡ್ಡ ಬದಲಾವಣೆಗೆ ಮುನ್ನುಡಿ ಬರೆಯಬಹುದು.

share
ಪ್ರವೀಣ್ ಎನ್.
ಪ್ರವೀಣ್ ಎನ್.
Next Story
X