Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ರಾಹುಲ್ ಗಾಂಧಿಯವರ ಸಮಾಜವಾದ ಮೋದಿ...

ರಾಹುಲ್ ಗಾಂಧಿಯವರ ಸಮಾಜವಾದ ಮೋದಿ ರಾಜಕೀಯಕ್ಕೆ ಮಾರಕವಾಗಲಿದೆಯೇ?

ವಿನಯ್ ಕೆ.ವಿನಯ್ ಕೆ.27 Aug 2024 12:15 PM IST
share
ರಾಹುಲ್ ಗಾಂಧಿಯವರ ಸಮಾಜವಾದ ಮೋದಿ ರಾಜಕೀಯಕ್ಕೆ ಮಾರಕವಾಗಲಿದೆಯೇ?

ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ನ್ಯಾಯದ ಬಗ್ಗೆ ಸಂವಿಧಾನ ರಚನೆಯ ಆರಂಭಿಕ ಹಂತದಿಂದಲೂ ಪ್ರಬಲವಾಗಿ ಪ್ರತಿಪಾದಿಸಿದವರು ಡಾ. ಬಿ.ಆರ್. ಅಂಬೇಡ್ಕರ್.

ಸಂವಿಧಾನ ರಚನೆಯಾದ ಬಳಿಕವೂ ಅವರು ‘‘ಎಲ್ಲಿಯವರೆಗೆ ಈ ದೇಶದಲ್ಲಿ ಆರ್ಥಿಕ ಸಾಮಾಜಿಕ ನ್ಯಾಯ ವಾಸ್ತವ ರೂಪದಲ್ಲಿ ಕಾಣಿಸುವುದಿಲ್ಲವೋ ಅಲ್ಲಿಯವರೆಗೂ ಸಂವಿಧಾನದ ಉದ್ದೇಶ ಬರೀ ಉದ್ದೇಶವಾಗಿಯೇ ಉಳಿಯುತ್ತದೆ’’ ಎಂದಿದ್ದರು.

ಈಗ ರಾಹುಲ್ ಗಾಂಧಿಯವರು ಸಾಮಾಜಿಕ ನ್ಯಾಯದ ಬಗ್ಗೆ ಮಾತಾಡುವಾಗಲೂ ಅವರ ಗಮನವಿರುವುದು ಸಂವಿಧಾನದ ಆಶಯಗಳ ಮೇಲೆ. ಅವರು ಸಾಮಾಜಿಕ ನ್ಯಾಯದ ನೆಲೆಯಲ್ಲಿ ಕಾಣುತ್ತಿರುವ ರಾಜಕೀಯ ಸಮೀಕರಣವನ್ನು ಬೇರಾವ ನಾಯಕರೂ ಚಿಂತಿಸಲು ಸಾಧ್ಯವಿಲ್ಲ.

ರಾಹುಲ್ ಗಾಂಧಿ ಪ್ರತಿಪಾದಿಸುತ್ತಿರುವ ಈ ಸಾಮಾಜಿಕ ನ್ಯಾಯದ ರಾಜಕೀಯವನ್ನು ಈಗಿನ ಪ್ರಧಾನಿ ಮೋದಿ ಅನುಸರಿಸಲೇಬೇಕಾಗುತ್ತದೆ. ಇಲ್ಲವೆ ತಮ್ಮ ಅಧಿಕಾರ ರಾಜಕೀಯಕ್ಕೆ ಕೊನೆ ಹಾಡಬೇಕಾಗುತ್ತದೆ.

ರಾಹುಲ್ ಅವರು ಭಾವಿಸುತ್ತಿರುವುದೇನು ಎಂಬುದು ಸ್ಪಷ್ಟ.

ಆದಿವಾಸಿಗಳಿಗಾಗಲಿ, ದಲಿತರಿಗಾಗಲಿ, ಹಿಂದುಳಿದವರಿಗಾಗಲಿ ರಾಜಕೀಯ ಅಧಿಕಾರದವರೆಗೆ ಮುಟ್ಟಲು ಬೇಕಿರುವ ದಾರಿಯನ್ನು ತೆರೆಯಬೇಕೆನ್ನುವ ಅವರ ನಿಲುವು ಸ್ಪಷ್ಟವಿದೆ. ಒಬ್ಬ ಪ್ರಧಾನಿ, ಒಂದು ರಾಜನೀತಿ ಎಂಬ ಕಳೆದ ಹತ್ತು ವರ್ಷಗಳ ಮೋದಿ ಪ್ರತಿಪಾದನೆಯನ್ನು ರಾಹುಲ್ ತೀವ್ರವಾಗಿ ವಿರೋಧಿಸುತ್ತಿರುವುದೇ ಈ ಹಿನ್ನೆಲೆಯಲ್ಲಿ.

ಮಾಜಿ ಮಿಸ್ ಇಂಡಿಯಾ ವಿಜೇತರ ಪಟ್ಟಿಯಲ್ಲಿ ದಲಿತ, ಬುಡಕಟ್ಟು ಅಥವಾ ಒಬಿಸಿ ಮಹಿಳೆಯರಿಲ್ಲ ಎಂಬುದರ ಕಡೆ ರಾಹುಲ್ ಗಮನ ಸೆಳೆಯುತ್ತಿದ್ದಾರೆ. ಸೌಂದರ್ಯ ಸ್ಪರ್ಧೆಯ ಹಿಂದಿನ ರಾಜಕೀಯ ಎಷ್ಟು ಕರಾಳವಾದುದು ಎಂಬುದನ್ನು ಸೂಕ್ಷ್ಮವಾಗಿ ಗಮನಿಸಿದರೆ ರಾಹುಲ್ ಅವರ ಕಾಳಜಿಯನ್ನು ಗ್ರಹಿಸಬಹುದಾಗಿದೆ.

ಕೆಲವರು ಕ್ರಿಕೆಟ್ ಅಥವಾ ಬಾಲಿವುಡ್ ಬಗ್ಗೆ ಮಾತನಾಡುತ್ತಾರೆ. ಬಾಲಿವುಡ್‌ನಲ್ಲಿ ಚಮ್ಮಾರ ಅಥವಾ ಪ್ಲಂಬರ್ ಅನ್ನು ಯಾರೂ ತೋರಿಸುವುದಿಲ್ಲ. ಮಾಧ್ಯಮಗಳ ಪ್ರಮುಖ ನಿರೂಪಕರ ಸಾಲಿನಲ್ಲೂ ದಲಿತ, ಆದಿವಾಸಿ, ಒಬಿಸಿ ವರ್ಗದವರಿಲ್ಲ ಎನ್ನುತ್ತಾರೆ ಅವರು.

ದೇಶದ ಜನಸಂಖ್ಯೆಯಲ್ಲಿ ಶೇ.90ರಷ್ಟಿರುವ ದಲಿತ, ಆದಿವಾಸಿ ಮತ್ತು ಒಬಿಸಿ ಸಮುದಾಯದ ಜನರ ಭಾಗವಹಿಸುವಿಕೆ ಇಲ್ಲದೆ ದೇಶ ಕಾರ್ಯನಿರ್ವಹಿಸಲು ಸಾಧ್ಯವಿಲ್ಲ ಎಂಬ ರಾಹುಲ್ ಪ್ರತಿಪಾದನೆ ಅತ್ಯಂತ ಮಹತ್ವದ್ದು.

ಆ ಸಮುದಾಯದವರೆಲ್ಲ ಉದ್ಯೋಗವಿಲ್ಲದೆ ಹೈರಾಣಾಗಿರುವಾಗ, ಹಸಿದಿರುವಾಗ ಹೇಗೆ ದೇಶ ಸೂಪರ್ ಪವರ್ ಆಗುತ್ತದೆ ಎಂಬ ರಾಹುಲ್ ಪ್ರಶ್ನೆ ಬಹಳ ಗಂಭೀರವಾದದ್ದು.

ಹಣವುಳ್ಳವರು ಸೂಪರ ಪವರ್ ಆಗುತ್ತಾರೆ ಎಂಬ ಧೋರಣೆಯೊಂದು ಪ್ರಬಲವಾಗಿರುವುದರ ನಡುವೆ ರಾಹುಲ್ ಪ್ರತಿಪಾದಿಸುತ್ತಿರುವ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಸಮಾನತೆ ಭಿನ್ನವಾಗಿದೆ.

ಮೂರನೇ ಆರ್ಥಿಕತೆಯತ್ತ ದೇಶವನ್ನು ಕೊಂಡೊಯ್ಯುವ ಘೋಷಣೆಯಲ್ಲಿಯೇ ಈಗಿನ ಸರಕಾರ ಮುಳುಗಿರುವುದನ್ನು ನೋಡುತ್ತಿದ್ದೇವೆ.

ಹಾಗಾಗಿಯೇ ಯಾವುದನ್ನು ಸಂವಿಧಾನದ ಮೂಲಕ ಅಂಬೇಡ್ಕರ್ ಪ್ರತಿಪಾದಿಸಿದ್ದಾರೋ ಅದನ್ನು ಗಮನದಲ್ಲಿಟ್ಟುಕೊಂಡು ಮಾತಾಡುವ ಮತ್ತು ಆ ದಿಸೆಯಲ್ಲಿ ಬದ್ಧತೆ ತೋರುತ್ತಿರುವ ರಾಹುಲ್ ಎದುರು ಮೋದಿ ರಾಜಕಾರಣ ಕುರಿತ ವಿರೋಧ ಸ್ಪಷ್ಟವಾಗಿದೆ.

ತನಗೆ ರಾಜಕೀಯ ಅಧಿಕಾರ ಮುಖ್ಯವಲ್ಲ ಮತ್ತು ರಾಜಕೀಯವಾಗಿ ನಷ್ಟವಾದರೂ ಸರಿಯೆ. ಆದರೆ ಯಾರಿಗೆ ಸಾಮಾಜಿಕ ಮತ್ತು ಆರ್ಥಿಕ ಹಕ್ಕುಗಳು ಸಿಗಬೇಕಾಗಿದೆಯೊ ಅದು ಅವರಿಗೆ ಅವಶ್ಯವಾಗಿ ಸಿಗಬೇಕೆಂಬುದು ರಾಹುಲ್ ಅವರ ಖಚಿತ ನಿಲುವು.

‘‘ಹಿಂದೂಗಳು ಬಹಳಷ್ಟು ವಿಷಯಗಳ ಬಗ್ಗೆ ಮಾತಾಡುತ್ತಾರೆ. ಆದರೆ ಆರ್ಥಿಕ ಕ್ರಮಗಳ ವಿಚಾರದಲ್ಲಿ ಏನನ್ನೂ ಹೇಳುವುದಿಲ್ಲ. ಧಾರ್ಮಿಕ ವಿಚಾರಗಳನ್ನು ಮಾತ್ರವೇ ಹೇಳಲಾಗುತ್ತದೆ. ಆರ್ಥಿಕತೆ ವಿಚಾರದ ಉಲ್ಲೇಖವಿಲ್ಲ. ಹೀಗಾಗಿಯೇ ಭಾರತದ ಅರ್ಥಶಾಸ್ತ್ರದ ಬಗ್ಗೆ ತಿಳಿಯಲು ವಿದೇಶಿ ಕೃತಿಗಳನ್ನು ಅವಲಂಬಿಸಬೇಕಾಗಿದೆ’’ ಎಂದಿದ್ದರು ಅಂಬೇಡ್ಕರ್.

‘ಹಿಂದೂಗಳು’ ಎಂದು ಅಂಬೇಡ್ಕರ್ ಹೇಳುವುದನ್ನು ಗಮನಿಸಬೇಕು. ಅನ್ಯರ ಬಗ್ಗೆ ಹೇಗೆ ಈ ದೇಶದಲ್ಲಿ ತಾರತಮ್ಯ ನಡೆಯುತ್ತ ಬಂದಿದೆ ಎಂಬುದನ್ನು ಅಂಬೇಡ್ಕರ್ ಆ ಮೂಲಕ ಸ್ಪಷ್ಟವಾಗಿ ನಿರೂಪಿಸಿದ್ದಾರೆ.

ಬಿಜೆಪಿ ಇವತ್ತು ಮಾಡುತ್ತಿರುವುದು ಧ್ರುವೀಕರಣ ರಾಜಕೀಯ. ಹಿಂದೂ-ಮುಸ್ಲಿಮ್ ಎಂಬುದನ್ನು ಅದು ತನ್ನ ರಾಜಕಾರಣದಲ್ಲಿ ಪ್ರಮುಖ ಅಸ್ತ್ರವನ್ನಾಗಿ ಬಳಸುತ್ತಿದೆ.

ಇದಕ್ಕೆ ವಿರುದ್ಧವಾಗಿ ರಾಹುಲ್ ಪ್ರತಿಪಾದಿಸುತ್ತಿರುವ ಜಾತಿ ಜನಗಣತಿ, ಹೇಗೆ ಒಂದು ಸಣ್ಣ, ಆದರೆ ಪ್ರಬಲ ವರ್ಗ ಆರ್ಥಿಕತೆಯ ಮೇಲೆ ಹಿಡಿತ ಸಾಧಿಸಿದೆ ಮತ್ತು ಹೇಗೆ ಜನಸಂಖ್ಯೆಯ ಅತಿ ದೊಡ್ಡ ಭಾಗವಾಗಿರುವ ಆದಿವಾಸಿ, ದಲಿತ ಮತ್ತು ಹಿಂದುಳಿದ ಸಮುದಾಯದವರು ಲೆಕ್ಕಕ್ಕಿಲ್ಲವಾಗಿದ್ದಾರೆ ಎಂಬುದನ್ನು ಖಚಿತವಾಗಿ ಕಾಣಲು ಅಗತ್ಯವಿದೆ.

ಈ ಆದಿವಾಸಿ, ದಲಿತ ಮತ್ತು ಹಿಂದುಳಿದ ಸಮುದಾಯದವರ ರಾಜಕೀಯ ಪಾಲುದಾರಿಕೆ ಕೂಡ ನಗಣ್ಯವಾಗಿದೆ ಎಂಬುದನ್ನು ಗಮನಿಸಬೇಕಾಗುತ್ತದೆ.

ಅಲ್ಪಸಂಖ್ಯಾತರ ಸ್ಥಿತಿಯೂ ಇದೇ ಆಗಿದೆ.

ಅಂಬಾನಿ, ಅದಾನಿ ಸೇರಿದಂತೆ ಕಾರ್ಪೊರೇಟ್ ಮಿತ್ರತ್ವದ ಮೂಲಕ ರಾಜಕಾರಣ ಮಾಡುತ್ತಿರುವವರ ರಾಜಕೀಯಕ್ಕೆ ಅಲ್ಲಿಂದಲೇ ಹಣಬಲವೂ ಹರಿದುಬರುತ್ತದೆ.

ಇಷ್ಟು ಕಾಲ ಅದು ಚುನಾವಣಾ ಬಾಂಡ್ ಹೆಸರಿನಲ್ಲಿ ನಿರಾತಂಕವಾಗಿಯೇ ನಡೆದುಬಂದಿತ್ತು.

ಆರ್ಥಿಕ ಅಪರಾಧ ತಡೆಯಬೇಕಿರುವ ಈ.ಡಿ., ಸಿಬಿಐ ಅಂಥ ಏಜನ್ಸಿಗಳೂ ಆಡಳಿತಾರೂಢ ಪಕ್ಷದ ಅನುಕೂಲಕ್ಕೆ ತಕ್ಕಂತೆ ನಡೆದುಕೊಳ್ಳುತ್ತಿರುವ ವಿಪರ್ಯಾಸವನ್ನೂ ನೋಡುತ್ತಿದ್ದೇವೆ.

ಉತ್ಪಾದನಾ ವಲಯ ಸೇರಿದಂತೆ ಎಲ್ಲ ಪ್ರಮುಖ ವಲಯಗಳು ನೆಗೆಟಿವ್ ಆದ ರೀತಿಯಲ್ಲಿವೆ. ಉದ್ಯೋಗಗಳು ಇಲ್ಲವಾಗಿರುವುದರ ಹಿನ್ನೆಲೆಯೂ ಇದೇ ಆಗಿದೆ.

ಹಾಗಾಗಿಯೇ, ದೇಶದ ಜನಸಂಖ್ಯೆಯ ಶೇ.90ರಷ್ಟಿರುವ ದಲಿತ, ಆದಿವಾಸಿ ಮತ್ತು ಒಬಿಸಿ ಸಮುದಾಯದ ಜನರ ಪಾಲ್ಗೊಳ್ಳುವಿಕೆ ಇಲ್ಲದೆ ಮೂರನೇ ಆರ್ಥಿಕತೆ, ಸೂಪರ್ ಪವರ್ ಎಂದೆಲ್ಲ ಮಾತಾಡುವುದು ಕೇಳಲು ಮಾತ್ರ ಚಂದ ಎಂದು ರಾಹುಲ್ ಹೇಳುತ್ತಿರುವುದು.

ಕೆಲಸವನ್ನು ಜಾತಿ ಗುರುತಾಗಿ ನೋಡುವ ಸ್ವಾತಂತ್ರ್ಯಾನಂತರದ ಭಾರತದಲ್ಲಿನ ರಾಜಕಾರಣದ ಪ್ರಕ್ರಿಯೆಯ ವಿರುದ್ಧ ಪ್ರಶ್ನೆಗಳನ್ನು ಎಡಪಂಥ ಅಥವಾ ಸಮಾಜವಾದಿ ನೆಲೆಯನ್ನೂ ಮೀರಿ ರಾಹುಲ್ ಎತ್ತುತ್ತಿರುವುದು ಮಹತ್ವದ ಬೆಳವಣಿಗೆ. ಇಲ್ಲಿ ಅವರು ಆರ್ಥಿಕ ಸಮಾನತೆಯ ಪರವಾಗಿ ನಿಲ್ಲುತ್ತಿದ್ದಾರೆ ಎಂಬುದು ಗಮನಾರ್ಹ.

ಹಿಂದೂ ಸಮಾಜದಲ್ಲಿ ದಲಿತರು ಹೇಗೆ ಅಲ್ಪಸಂಖ್ಯಾತರಾಗಿದ್ದಾರೆ ಮತ್ತು ಅವರನ್ನು ಒಳಗೊಳ್ಳುವ ಸಾಮಾಜಿಕ ವ್ಯವಸ್ಥೆಯೇ ಇಲ್ಲವಾಗಿದೆ ಎಂಬುದನ್ನು ಸೈಮನ್ ಕಮಿಷನ್ ಎದುರಲ್ಲಿಯೂ ಅಂಬೇಡ್ಕರ್ ಪ್ರತಿಪಾದಿಸಿದ್ದರು. ಅಲ್ಪಸಂಖ್ಯಾತರಿಗೆ ಸಿಗುವ ರೀತಿಯಲ್ಲಿಯೇ ದಲಿತರಿಗೂ ಪ್ರಾತಿನಿಧ್ಯ ಇರಬೇಕೆಂಬ ಬೇಡಿಕೆಯನ್ನು ಅವತ್ತು ಅಂಬೇಡ್ಕರ್ ಇಟ್ಟಿದ್ದರು.

ಈಗ ರಾಹುಲ್ ಅವರು ಈ ಸಮುದಾಯಗಳನ್ನು ಅವುಗಳ ತಾಕತ್ತಿನ ಹಿನ್ನೆಲೆಯಿಂದ ಪ್ರಧಾನ ಧಾರೆಯ ಪಾಲ್ಗೊಳ್ಳುವಿಕೆಯಲ್ಲಿ ಪರಿಗಣಿಸಬೇಕಾದ ಅಗತ್ಯವನ್ನು ಪ್ರತಿಪಾದಿಸುತ್ತಿದ್ದಾರೆ.

ಆದಿವಾಸಿ, ದಲಿತ, ಹಿಂದುಳಿದ ಮತ್ತು ಅಲ್ಪಸಂಖ್ಯಾತ ಸಮುದಾಯಗಳನ್ನು ಹಾಗೆ ಪರಿಗಣಿಸುವುದು ಜಾತಿ ಜನಗಣತಿ ಬಳಿಕ ತಮ್ಮ ಮೊದಲ ಕೆಲಸ ಎನ್ನುವುದನ್ನು ರಾಹುಲ್ ಹೇಳುತ್ತಿದ್ದಾರೆ.

ಮಾಧ್ಯಮ, ನ್ಯಾಯಾಂಗ, ಖಾಸಗಿ ಆಸ್ಪತ್ರೆ ಹಾಗೂ ದೊಡ್ಡ ಕಂಪೆನಿಗಳ ವಲಯಗಳಲ್ಲಿ ದಲಿತ, ಆದಿವಾಸಿ ಹಾಗೂ ಒಬಿಸಿ ಸಮುದಾಯದವರಿಗೆ ನ್ಯಾಯ ಒದಗಿಸುವುದು ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರದ ಮೊದಲ ಅಜೆಂಡಾ ಆಗಲಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ಅದಕ್ಕಾಗಿಯೇ ಅವರು, ಒಬಿಸಿ ಎಂದೊಡನೆ ಅಷ್ಟಕ್ಕೆ ಮುಗಿಯದೆ, ಅದರ ಅಡಿಯಲ್ಲಿನ ವಿವಿಧ ಜಾತಿ ಅಥವಾ ಉಪವರ್ಗಗಳ ಜನಸಂಖ್ಯೆಯ ವಿವರವೂ ಬೇಕೆಂದು ಸರಕಾರವನ್ನು ಕೇಳುತ್ತಿರುವುದು.

ಸ್ವಾತಂತ್ರ್ಯಾನಂತರದ ಅಧಿಕಾರ ಜನಸಂಖ್ಯೆಯ ಅನುಪಾತದ ಆಧಾರದಲ್ಲಿ ಪ್ರಾತಿನಿಧ್ಯ ಹೊಂದಿರಬೇಕು ಎಂಬ ಮಾತನ್ನು ಅಂಬೇಡ್ಕರ್ ಅವರೇ ಹೇಳಿದ್ದರು. ಅದಾಗಿ ಇಷ್ಟು ವರ್ಷಗಳ ನಂತರವೂ ಭಾರತೀಯ ಸಮಾಜದಲ್ಲಿ ಪರಿಸ್ಥಿತಿ ಏಕೆ ಹೀಗಿದೆ?

ಆದರೆ ಜನ ಈಗ ಮನಸ್ಸು ಮಾಡಿದ್ದಾರೆ ಮತ್ತು ತಮ್ಮ ನಿಲುವೇನೆಂಬ ಬಗ್ಗೆ ಈಗಾಗಲೇ ಕಳೆದ ಚುನಾವಣೆಯಲ್ಲಿ ಆದೇಶ ಕೊಟ್ಟುಬಿಟ್ಟಿದ್ದಾರೆ ಎಂಬುದನ್ನು ರಾಹುಲ್ ಹೇಳುತ್ತಿದ್ದಾರೆ.

ಇನ್ನು ಜಾತಿ ಜನಗಣತಿಯನ್ನು ಯಾರೂ ತಡೆಯಲು ಸಾಧ್ಯವಿಲ್ಲ. ಯಾರೂ ಈ ವರೆಗೆ ಕಡೆಗಣಿಸಲ್ಪಟ್ಟಿರುವ ಸಮುದಾಯಗಳ ಪಾಲ್ಗೊಳ್ಳುವಿಕೆಯನ್ನು ತಡೆಯಲು ಸಾಧ್ಯವಿಲ್ಲ. ಮತ್ತಿದನ್ನು ಮೋದಿ ಅನಿವಾರ್ಯವಾಗಿ ಒಪ್ಪಿಕೊಳ್ಳಲೇಬೇಕಾಗಿದೆ ಎಂದಿದ್ದಾರೆ ರಾಹುಲ್. ಒಂದು ವೇಳೆ ಮೋದಿಗೆ ಇದನ್ನು ಮಾಡಲಾಗದಿದ್ದರೆ ಮತ್ತೊಬ್ಬ ಪ್ರಧಾನಿ ಮಾಡುತ್ತಾರೆ ಎಂಬ ರಾಹುಲ್ ಮಾತಿನಲ್ಲಿ ದೃಢತೆಯಿದೆ.

ಪ್ರಸಕ್ತ ವ್ಯವಸ್ಥೆಯಲ್ಲಿ ಇಲ್ಲದೆ ಹೋಗಿರುವ ಜನಸಾಮಾನ್ಯರ ಪಾಲ್ಗೊಳ್ಳುವಿಕೆಗೆ ಹೊಸ ದಾರಿ ತೆರೆಯುವ ನಿಟ್ಟಿನಲ್ಲಿ ರಾಹುಲ್ ಪ್ರತಿಪಾದನೆಯಿದೆ. ರಾಜಕೀಯದ ಪ್ರಧಾನ ಧಾರೆಯಲ್ಲಿ ದಮನಿತ ವರ್ಗಗಳ ಭಾಗೀದಾರಿಕೆಯನ್ನು ಕಾಣುವುದು ರಾಹುಲ್ ಅವರ ಸ್ಪಷ್ಟ ಆಶಯ. ಇಲ್ಲಿ ಅವರು ತಮ್ಮ ರಾಜಕೀಯ ನಷ್ಟವನ್ನು ಎದುರಿಸುವುದಕ್ಕೆ ಕೂಡ ತಯಾರಾಗಿದ್ದಾರೆ.

ರಾಹುಲ್ ಬಯಸುತ್ತಿರುವ ಈ ಬದಲಾವಣೆ ಬರುತ್ತಿದ್ದಂತೆ, ದಲಿತರು, ಆದಿವಾಸಿಗಳು, ಹಿಂದುಳಿದವರು, ಬಡವರು, ಕಾರ್ಮಿಕರ ಪಾಲ್ಗೊಳ್ಳುವಿಕೆ ಈ ವ್ಯವಸ್ಥೆಯಲ್ಲಿ ಕಾಣಿಸುತ್ತದೆ. ಅವರೆಲ್ಲರ ಕೌಶಲ್ಯ ಬಳಕೆ ನಿಜವಾದ ಅರ್ಥದಲ್ಲಿ ಸಾಧ್ಯವಾಗುತ್ತದೆ. ಅವರಿಗೆ ಯಾವುದೇ ರಾಜಕೀಯ ವ್ಯವಸ್ಥೆಯಾಗಲಿ ಕಾರ್ಪೊರೇಟ್ ವ್ಯವಸ್ಥೆಯಾಗಲಿ ತರಬೇತಿ ನೀಡಬೇಕಾದ ಜರೂರು ಬೀಳುವುದಿಲ್ಲ.

ಆರ್ಥಿಕ ಸಮಾನತೆ ಸಾಧಿಸದ ಹೊರತು ಏನು ಮಾಡಿದರೂ ವ್ಯರ್ಥ ಎಂದಿದ್ದ ಅಂಬೇಡ್ಕರ್ ಅವರ ಮಾತು, ಎಲ್ಲ ಕ್ಷೇತ್ರಗಳಲ್ಲಿಯೂ ಬದಲಾವಣೆಯಾಗಬೇಕಿದೆ ಎಂದು ಸಂಪೂರ್ಣ ಕ್ರಾಂತಿಯನ್ನು ಪ್ರತಿಪಾದಿಸಿದ್ದ ಜಯಪ್ರಕಾಶ್ ನಾರಾಯಣ್ ನಿಲುವು, ಪ್ರತಿ ವ್ಯಕ್ತಿಯ ಆದಾಯದ ಬಗ್ಗೆ ಆಗಲೇ ಚಿಂತಿಸಿದ್ದ ಲೋಹಿಯಾ ದೂರದೃಷ್ಟಿ ಇಂಥದೊಂದು ದೊಡ್ಡ ಪರಂಪರೆಯ ಮುಂದುವರಿಕೆಯಾಗಿ ಇವತ್ತು ರಾಹುಲ್ ಪ್ರತಿಪಾದಿಸುತ್ತಿರುವ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಸಮಾನತೆ ಅತಿ ಪ್ರಮುಖ ವಿಚಾರವಾಗಿದೆ.

ಇದಿಷ್ಟನ್ನೂ ಪ್ರತಿಪಾದಿಸುವಾಗ ರಾಹುಲ್ ಒಬ್ಬ ವ್ಯಕ್ತಿಯಾಗಿ ನಿಲ್ಲುತ್ತಾರೆ ಮತ್ತು ಅವರ ಬಲವೆಂದರೆ ಅವರ ಕೈಯಲ್ಲಿರುವ ಸಂವಿಧಾನ.

share
ವಿನಯ್ ಕೆ.
ವಿನಯ್ ಕೆ.
Next Story
X