Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಮಾತೃತ್ವದ ಸೌಲಭ್ಯಗಳಿಂದ ವಂಚಿತ ಮಹಿಳೆಯರು

ಮಾತೃತ್ವದ ಸೌಲಭ್ಯಗಳಿಂದ ವಂಚಿತ ಮಹಿಳೆಯರು

ಜೇನ್ ಡ್ರೀಜ್, ರೀತಿಕಾ ಖೇರಜೇನ್ ಡ್ರೀಜ್, ರೀತಿಕಾ ಖೇರಕನ್ನಡಕ್ಕೆ: ನಾ. ದಿವಾಕರಕನ್ನಡಕ್ಕೆ: ನಾ. ದಿವಾಕರ6 March 2025 1:42 PM IST
share
ಮಾತೃತ್ವದ ಸೌಲಭ್ಯಗಳಿಂದ ವಂಚಿತ ಮಹಿಳೆಯರು
ಪಿಎಂಎಂವಿವೈ ಒಂದು ವಿಫಲ ಯೋಜನೆ ಎನ್ನುವುದು ಸ್ಪಷ್ಟವಾಗಿ ಸಾಬೀತಾಗಿದೆ. ಕೇಂದ್ರ ಸರಕಾರವು ಗರ್ಭಿಣಿಯರಿಗೆ ನೆರವಾಗುವುದಕ್ಕಿಂತಲೂ ಹಣ ಉಳಿತಾಯ ಮಾಡುವ ದಿಕ್ಕಿನಲ್ಲಿ ಯೋಚಿಸುತ್ತಿದೆ. ತತ್ಪರಿಣಾಮವಾಗಿ, ಒಂದು ಜನಪ್ರಿಯವೂ, ಉಪಯುಕ್ತವೂ ಆಗಬಹುದಾಗಿದ್ದ ಯೋಜನೆಯನ್ನು ನಿಷ್ಕ್ರಿಯಗೊಳಿಸಿದೆ. ಇದು ಪಿಎಂಎಂವಿವೈ ನಿಯಮಗಳ ಉಲ್ಲಂಘನೆಯೂ ಆಗಿದೆ. ಇಡೀ ಯೋಜನೆಯನ್ನು ಮರುವಿನ್ಯಾಸಗೊಳಿಸಿ, ಕಾಯ್ದೆಯ ನಿಯಮಗಳ ಅನುಸಾರ ಪುನಃ ಸಕ್ರಿಯಗೊಳಿಸಬೇಕಿದೆ.

ಭಾರತದಲ್ಲಿ ಪ್ರತಿಯೊಂದು ರಾಜ್ಯ ಸರಕಾರವೂ ಮಹಿಳೆಯರಿಗೆ ನೇರ ನಗದು ಪಾವತಿ ಮಾಡುವ ಯೋಜನೆಗಳನ್ನು ಜಾರಿಗೊಳಿಸುತ್ತಿದ್ದರೂ, ಮಹಿಳಾ ಸಮುದಾಯಗಳಲ್ಲಿ ದುರ್ಬಲರಾದವರಿಗೆ, ವಿಶೇಷವಾಗಿ ಗರ್ಭಿಣಿಯರಿಗೆ, ಕಾನೂನಾತ್ಮಕವಾಗಿ ತಲುಪಬೇಕಾದ ಮಾತೃತ್ವದ ಪ್ರಯೋಜನಗಳು ತಲುಪುತ್ತಿಲ್ಲ. ದುರ್ಬಲ ವರ್ಗದ ಬಹುಪಾಲು ಮಹಿಳೆಯರು ಶಾಸನಾತ್ಮಕ ಹಕ್ಕುಗಳಿಂದ ವಂಚಿತರಾಗುತ್ತಿದ್ದಾರೆ. ಇನ್ನೂ ದಯನೀಯ ವಿಚಾರ ಎಂದರೆ ಈಗಾಗಲೇ ಗರ್ಭಿಣಿಯರಿಗೆ ಪಾವತಿ ಮಾಡುತ್ತಿರುವ ಅಲ್ಪ ಹಣದ ಪ್ರಮಾಣವೂ ಸತತವಾಗಿ ಕುಸಿಯುತ್ತಿದೆ. ಈ ಜವಾಬ್ದಾರಿ ಮೂಲತಃ ಕೇಂದ್ರ ಸರಕಾರದ ಮೇಲಿರುತ್ತದೆ.

ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ (ಎನ್‌ಎಫ್‌ಎಸ್‌ಎ) 2003ರ ಅನುಸಾರ, ಔಪಚಾರಿಕ ಕ್ಷೇತ್ರದಲ್ಲಿ ಈಗಾಗಲೇ ಸೌಲಭ್ಯಗಳನ್ನು ಪಡೆಯುತ್ತಿರುವ ಮಹಿಳೆಯರನ್ನು ಹೊರತುಪಡಿಸಿ, ಎಲ್ಲ ಗರ್ಭಿಣಿಯರೂ ಪ್ರತೀ ಮಗುವಿಗೆ 6,000ರೂ.ಗಳ ಮಾತೃತ್ವ ಸೌಲಭ್ಯವನ್ನು ಪಡೆಯಬೇಕಿದೆ. ಇಂದಿನ ಮಾರುಕಟ್ಟೆ ಬೆಲೆಗಳಿಗೆ ಹೋಲಿಸಿದಾಗ, ಇದು ಕನಿಷ್ಠ 12,000 ರೂ. ಗಳಷ್ಟಾದರೂ ಇರಬೇಕಾಗುತ್ತದೆ. ಈ ಮೊತ್ತವೂ ಅತ್ಯಲ್ಪ ಎನ್ನುವುದು ವಾಸ್ತವ. ಆದರೂ ಸಾರ್ವತ್ರಿಕ ಮಾತೃತ್ವ ಸೌಲಭ್ಯಗಳ ನೀತಿಯನ್ನು ಅನುಷ್ಠಾನಗೊಳಿಸಿದ್ದು ಎನ್‌ಎಫ್‌ಎಸ್‌ಎ ಕಾಯ್ದೆಯ ಒಂದು ಚಾರಿತ್ರಿಕ ಹೆಜ್ಜೆ. ಅಲ್ಪ ಮಟ್ಟಿಗೆ ಅನುಕೂಲಕರವಾಗಿರುವ ಕುಟುಂಬಗಳಲ್ಲೂ ಗರ್ಭಿಣಿಯರು ಪೌಷ್ಟಿಕ ಆಹಾರದಿಂದ, ಆರೋಗ್ಯ ಕಾಳಜಿಯಿಂದ ಮತ್ತು ವಿಶ್ರಾಂತಿಯಿಂದ ವಂಚಿತರಾಗಿರುತ್ತಾರೆ. ಹಾಗಾಗಿ ಈ ಮಹಿಳೆಯರಿಗೆ, ಹುಟ್ಟುವ ಮಕ್ಕಳನ್ನು ಮತ್ತು ಸ್ವತಃ ತಮ್ಮನ್ನೂ ಪಾಲನೆ ಮಾಡುವ ನಿಟ್ಟಿನಲ್ಲಿ ಮಾತೃತ್ವ ಸೌಲಭ್ಯಗಳು ನೆರವಾಗುತ್ತವೆ.

ಆದರೆ ಅತ್ಯಲ್ಪ ಎನ್ನಬಹುದಾದ ಈ ಸೌಲಭ್ಯದ ಮೊತ್ತವನ್ನೂ ಅರ್ಹ ಮಹಿಳೆಯರಿಗೆ ತಲುಪಿಸಲಾಗುತ್ತಿಲ್ಲ. ಕೇಂದ್ರ ಸರಕಾರವು ಪ್ರಧಾನಮಂತ್ರಿ ಮಾತೃ ವಂದನಾ ಯೋಜನೆಯ (ಪಿಎಂಎಂವಿವೈ) ಮೂಲಕ ಇದನ್ನು ಪೂರೈಸುವುದಾಗಿ ಹೇಳುತ್ತಿದ್ದರೂ, ವಾಸ್ತವವಾಗಿ ಇದು ನಡೆಯುತ್ತಿಲ್ಲ. ಈ ಯೋಜನೆ ಸೌಲಭ್ಯಗಳು ಒಂದು ಮಗು ಇರುವ ಕುಟುಂಬಗಳಿಗೆ ಮಾತ್ರವೇ ಅನ್ವಯಿಸುತ್ತದೆ. ಇತ್ತೀಚೆಗೆ ಎರಡನೇ ಮಗು ಹೆಣ್ಣಾದರೆ ಮಾತ್ರ ಅಂತಹ ಕುಟುಂಬಗಳಿಗೂ ಇದನ್ನು ವಿಸ್ತರಿಸಲಾಗಿದೆ. ಈ ನಿರ್ಬಂಧದ ನಿಯಮವೇ ಪಿಎಂಎಂವಿವೈ ಕಾಯ್ದೆಯ ಸ್ಪಷ್ಟ ಉಲ್ಲಂಘನೆಯಾಗಿದೆ. ಅಷ್ಟೇ ಅಲ್ಲದೆ ಈ ಯೋಜನೆಯಲ್ಲಿ ಮೊದಲನೆ ಮಗುವಿಗೆ ನೀಡುವ ಮೊತ್ತವನ್ನು ಏಕಾಏಕಿ 5,000 ರೂ.ಗಳಿಗೆ ಇಳಿಸಲಾಗಿದೆ.

ಮಾಹಿತಿ ದತ್ತಾಂಶಗಳ ಅಸ್ಪಷ್ಟತೆ

ಈ ನಿರ್ಬಂಧಿತ, ಕಡಿಮೆ ಮಾಡಲಾಗಿರುವ ಸೌಲಭ್ಯಗಳನ್ನೂ ಅಸಂಖ್ಯಾತ ಅರ್ಹ ಮಹಿಳೆಯರಿಗೆ ನಿರಾಕರಿಸಲಾಗುತ್ತಿದೆ. ಸರಕಾರವು ಈ ವೈಫಲ್ಯವನ್ನು ಮರೆಮಾಚುವುದನ್ನೂ ಗಮನಿಸಬಹುದು. ಏಕೆಂದರೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು ಪಿಎಂಎಂವಿವೈ ಯೋಜನೆಯ ಬಗ್ಗೆ ಹೆಚ್ಚಿನ ಮಾಹಿತಿಯನ್ನೇ ಒದಗಿಸುವುದಿಲ್ಲ. ಮಾಹಿತಿ ಹಕ್ಕು ಕಾಯ್ದೆ (ಆರ್‌ಟಿಐ) ಸೆಕ್ಷನ್ 4ರ ಅನ್ವಯ ಮೂಲ ಮಾಹಿತಿಯನ್ನು ಕ್ರಿಯಾಶೀಲವಾಗಿ ಬಹಿರಂಗಪಡಿಸಬೇಕು ಎಂಬ ನಿಯಮವೇ ಸಚಿವಾಲಯಕ್ಕೆ ತಿಳಿದಿಲ್ಲ ಎನಿಸುತ್ತದೆ. ಈ ಯೋಜನೆಯ ಅತ್ಯಂತ ಸರಳ ದತ್ತಾಂಶಗಳೂ ಸಾರ್ವಜನಿಕ ವಲಯದಲ್ಲಿ ಲಭ್ಯವಾಗುವುದಿಲ್ಲ.

ಆದರೂ ಸಚಿವಾಲಯವು ಪಿಎಂಎಂವಿವೈ ಕುರಿತ ನಮ್ಮ ಆರ್‌ಟಿಐ ಅರ್ಜಿಯ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿತ್ತು. ಈ ಮಾಹಿತಿಯ ಆಧಾರದಲ್ಲಿ ನಾವು ಯೋಜನೆಯ ಪರಿಣಾಮಕಾರಿ ಅನುಷ್ಠಾನವನ್ನು ಅಂದಾಜು ಮಾಡಲು ಸಾಧ್ಯವಾಯಿತು. ಕನಿಷ್ಠ ಪಿಎಂಎಂವಿವೈ ಯೋಜನೆಯ ಒಂದು ಕಂತನ್ನು ಪಡೆದಿರುವ ಗರ್ಭಿಣಿಯರ ಅನುಪಾತವನ್ನು ನಿಷ್ಕರ್ಷೆ ಮಾಡಲು ಸಾಧ್ಯವಾಯಿತು. ಇದು ವಿಶಾಲ ನೆಲೆಯ ಒಂದು ನಿರ್ವಚನೆ ಎಂದು ಹೇಳಬಹುದು: ಮೊದಲನೆಯ ಕಂತು ಕೇವಲ 3,000 ರೂ.ಗಳು. ಎರಡನೇ ಕಂತನ್ನು ಪಡೆಯಲು ಹಲವು ಕಠಿಣ ಷರತ್ತುಗಳು ಅನ್ವಯವಾಗುತ್ತವೆ. ಎರಡನೇ ಹೆಣ್ಣು ಮಗುವಿನ ಸಲುವಾಗಿ ಇದನ್ನು ಅಳವಡಿಸಲಾಗಿದೆ. ನಮ್ಮ ಅಂದಾಜು ಬಹಳ ನಿರಾಶಾದಾಯಕವಾಗಿತ್ತು. ಯೋಜನೆಯ ಪರಿಣಾಮಕಾರಿ ಅನುಷ್ಠಾನವು 2019-20ರಲ್ಲಿ ಪರಾಕಾಷ್ಠೆ ತಲುಪಿದ್ದರೂ ಶೇ. 36ರಷ್ಟು ಮಾತ್ರ ದಾಖಲಾಗಿದ್ದು ಸಮಾಧಾನಕರವಾಗಿ ಕಾಣಲಿಲ್ಲ. ಆನಂತರ ಈ ಪ್ರಮಾಣ ಕಡಿಮೆಯಾಗುತ್ತಲೇ ಬಂದಿದೆ.

2022-23ರಲ್ಲಿ ಮಾತ್ರ ಭಾಗಶಃ ಸುಧಾರಣೆ ಕಂಡುಬಂದಿದೆ. 2023-24ರಲ್ಲಿ ಪರಿಣಾಮಕಾರಿ ಅನುಷ್ಠಾನ ವ್ಯಾಪ್ತಿಯು ಕೇವಲ ಶೇ. 9ರಷ್ಟಿತ್ತು. ಮೊದಲನೇ ಹೆಣ್ಣು ಮಗುವಿಗೆ ಗರ್ಭಿಣಿಯರು ಪಡೆದ ಪಿಎಂಎಂವಿವೈ ಕಂತುಗಳು 2017-18ರಲ್ಲಿ ಶೇ. 8.7, 2018-19ರಲ್ಲಿ ಶೇ. 51.5, 2019-20ರಲ್ಲಿ ಶೇ. 73, 2020-21ರಲ್ಲಿ ಶೇ. 58.4, 2021-22ರಲ್ಲಿ ಶೇ. 46.1, 2022-23ರಲ್ಲಿ ಶೇ. 67.7 ಮತ್ತು 2023-24ರಲ್ಲಿ ಶೇ. 11.7ರಷ್ಟಿತ್ತು. ಎರಡನೇ ಮಗುವಿಗಾಗಿ ಪಡೆದ ಕಂತುಗಳು ಅನುಕ್ರಮವಾಗಿ ಶೇ. 4.2, ಶೇ. 25.5, ಶೇ. 36.1, ಶೇ. 27.6, ಶೇ. 33.2 ಮತ್ತು 2023-24ರಲ್ಲಿ ಶೇ. 8.5ರಷ್ಟಿತ್ತು.

ಈ ಕುಸಿತವು ಬಜೆಟ್ ಅಂಕಿಅಂಶಗಳಲ್ಲೂ ಗೋಚರಿಸುತ್ತದೆ. ಪಿಎಂಎಂವಿವೈ ಯೋಜನೆಗೆ ಕೇಂದ್ರ ಸರಕಾರದ ವೆಚ್ಚ 2023-24ರಲ್ಲಿ ಅತ್ಯಂತ ಕಡಿಮೆ ಪ್ರಮಾಣವನ್ನು ಕೇವಲ 87 ಕೋಟಿ ರೂ.ಗಳನ್ನು ಕಂಡಿದೆ. ಐದು ವರ್ಷದ ಹಿಂದಿನ ಅಂಕಿಅಂಶಗಳಿಗೆ ಹೋಲಿಸಿದರೆ, ಹಣಕಾಸು ಲೆಕ್ಕದಲ್ಲಿ ಇದು ಕೇವಲ ಮೂರನೇ ಒಂದರಷ್ಟು. ಪ್ರತೀ ಜನನಕ್ಕೆ 6,000 ರೂ.ಗಳಂತೆ ಶೇ.90ರಷ್ಟು ಮಕ್ಕಳ ಜನನವನ್ನು ಒಳಗೊಳ್ಳಬೇಕಾದರೆ, ಈ ಯೋಜನೆಗೆ ಬಜೆಟ್‌ನಲ್ಲಿ ಕನಿಷ್ಠ 12,000 ಕೋಟಿ ರೂ.ಗಳು ಬೇಕಾಗುತ್ತದೆ.

ಅಧಿಕೃತ ಪ್ರತಿಪಾದನೆ

ಈ ಅಂಕಿಅಂಶಗಳನ್ನು ನಾವು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ರಾಜ್ಯ ಹಾಗೂ ಕೇಂದ್ರ ಮಟ್ಟದ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದೆವು. 2023-24ರಲ್ಲಿ ಪಿಎಂಎಂವಿವೈ ಯೋಜನೆಯು ಅಕ್ಷರಶಃ ಸ್ಥಗಿತವಾಗಿತ್ತು ಎನ್ನುವುದನ್ನು ಅವರು ಅಲ್ಲಗಳೆಯುವುದಿಲ್ಲ. ಆದರೆ ಇದಕ್ಕೆ ಪ್ರಮುಖ ಕಾರಣ ಸಾಫ್ಟ್‌ವೇರ್ ತಂತ್ರಜ್ಞಾನದಲ್ಲಿ ಉಂಟಾದ ಬದಲಾವಣೆಗಳು ಮತ್ತು 2023ರಲ್ಲಿ ಅನುಷ್ಠಾನದ ಪ್ರಕ್ರಿಯೆಯನ್ನು ವಿಳಂಬವಾಗಿ ಆರಂಭಿಸಿದ್ದು ಎಂದು ಹೇಳುತ್ತಾರೆ. ದತ್ತಾಂಶಗಳನ್ನು ಇನ್ನೂ ಹೆಚ್ಚಿನ ಪರಿಶೋಧನೆಗೆ ಒಳಪಡಿಸಿದಾಗ ತಿಳಿದುಬಂದ ಸಂಗತಿ ಎಂದರೆ ಇಲ್ಲಿ ಸಮಸ್ಯೆ ಇರುವುದು ಅರ್ಜಿಗಳ ಸಂಖ್ಯೆಯಲ್ಲಿನ ಇಳಿಕೆ ಅಲ್ಲ, ಬದಲಾಗಿ ವಿತರಣೆಯ ದರದಲ್ಲಿ ಕಡಿಮೆಯಾಗಿರುವುದು. ಒಬ್ಬ ಅಧಿಕಾರಿಯ ಅಭಿಪ್ರಾಯದಂತೆ, ಪ್ರತಿದಿನವೂ ‘ಸಾಫ್ಟ್‌ವೇರ್’ ಸಮಸ್ಯೆಗಳು ಇರುತ್ತಿದ್ದವು.

ಆದರೆ ಸಮಸ್ಯೆ ಆರಂಭವಾಗಿದ್ದು 2023-24ರಲ್ಲಿ ಅಲ್ಲ. 2017ರಲ್ಲಿ ಜಾರಿಗೆ ಬಂದ ಪಿಎಂಎಂವಿವೈ ಯೋಜನೆಯು ತನ್ನ ಆರಂಭದ ಹಂತದಿಂದಲೂ ಹಲವು ಸಂಕೀರ್ಣ ತೊಡಕುಗಳನ್ನು ಎದುರಿಸುತ್ತಿದೆ. ಇವುಗಳಲ್ಲಿ ಕೆಲವು ಮಾತ್ರ ಆಧಾರ್ ಆಧಾರಿತ ಪಾವತಿ ಮತ್ತು ಡಿಜಿಟಲ್ ಕಿರುಕುಳಕ್ಕೆ ಸಂಬಂಧಿಸಿವೆ. ಈ ತೊಡಕುಗಳ ಬಗ್ಗೆ ಗಮನ ಸೆಳೆಯುವಂತಹ ಮತ್ತು ಅದರಿಂದಾಗುವ ತನ್ನದೇ ಆದ ಪ್ರತ್ಯೇಕ ಪರಿಣಾಮಗಳ ಬಗ್ಗೆ ಹಲವು ವರದಿಗಳು ದಾಖಲಾಗಿವೆ. ಈ ವಾಸ್ತವಿಕ ವರದಿಗಳಿಗೆ ಪ್ರತಿಕ್ರಿಯಿಸುವ ಬದಲಾಗಿ ಕೇಂದ್ರ ಸರಕಾರವು 2023-24ರಲ್ಲಿ ಇನ್ನೂ ಹಲವು ತೊಡಕುಗಳನ್ನು ಸೃಷ್ಟಿಸಿದೆ. ಇದು ಭಾರತೀಯ ಮಹಿಳೆಯರ ಪಾಲಿಗೆ ಭೀಕರ ಪರಿಣಾಮಗಳನ್ನು ಉಂಟುಮಾಡಿವೆ. ಆದರೆ ಸರಕಾರದ ಅಭಿಪ್ರಾಯದಲ್ಲಿ ಪಿಎಂಎಂವಿವೈ ಯೋಜನೆಗೆ ವೆಚ್ಚದಲ್ಲಿ ಕಡಿತ ಮಾಡಿರುವುದು ಉತ್ತಮ ಉಪಕ್ರಮವಾಗಿದೆ. ಹಾಗಾಗಿಯೇ ತೊಡಕುಗಳನ್ನು ಉಂಟು ಮಾಡುವ ಪ್ರವೃತ್ತಿಯೂ ಸ್ಥಿರತೆಯನ್ನು ಕಂಡುಕೊಂಡಿದೆ.

ತಮಿಳುನಾಡು-ಒಡಿಶಾದ ನಿದರ್ಶನಗಳು

ಏತನ್ಮಧ್ಯೆ ತಮಿಳುನಾಡು 1987ರಿಂದ ಮತ್ತು ಒಡಿಶಾ 2009ರಿಂದ ಮಾತೃತ್ವ ನೆರವು ಯೋಜನೆಗಳ ಅನುಷ್ಠಾನದಲ್ಲಿ ಒಂದು ಸರಳವಾದ ಮತ್ತು ಪರಿಣಾಮಕಾರಿಯಾದ ಮಾದರಿಯನ್ನು ಅಳವಡಿಸಿವೆ. ಈ ರಾಜ್ಯಗಳಲ್ಲಿ ನೀಡಲಾಗುತ್ತಿರುವ ಹಣಕಾಸು ನೆರವು ಪಿಎಂಎಂವಿವೈ ಯೋಜನೆಯ ಮೊತ್ತಕ್ಕಿಂತಲೂ ಹೆಚ್ಚಾಗಿದ್ದು, ಒಡಿಶಾದಲ್ಲಿ ಪ್ರತೀ ಮಗುವಿಗೆ 10,000 ರೂ. ಮತ್ತು ತಮಿಳುನಾಡಿನಲ್ಲಿ 18,000 ರೂ.ಗಳನ್ನು ನೀಡಲಾಗುತ್ತಿದೆ. ಒಡಿಶಾದಲ್ಲಿ 2024ರ ಲೋಕಸಭಾ ಚುನಾವಣೆಗಳಿಗೆ ಮುನ್ನ ಈ ಮೊತ್ತವನ್ನು ದುಪ್ಪಟ್ಟುಗೊಳಿಸಲಾಯಿತು. ತಮಿಳುನಾಡಿನಲ್ಲಿ ಡಿಎಂಕೆ ಈ ಮೊತ್ತವನ್ನು 24,000 ರೂ.ಗಳಿಗೆ ಹೆಚ್ಚಿಸುವುದಾಗಿ 2021ರ ಚುನಾವಣೆಗಳ ಪ್ರಣಾಳಿಕೆಯಲ್ಲಿ ಘೋಷಿಸಿತ್ತು. ಬಹುಶಃ ಈ ಘೋಷಣೆಯನ್ನು ಜಾರಿಗೊಳಿಸಲು ಮುಂಬರುವ ಚುನಾವಣೆಗಳಿಗೆ ಕಾಯುತ್ತಿರಬಹುದು. ಈ ರಾಜ್ಯಗಳಿಗೆ ಸಂಬಂಧಿಸಿದಂತೆ, ರಾಷ್ಟ್ರೀಯ ಕುಟುಂಬ ಆರೋಗ್ಯ ಯೋಜನೆಯ (ಎನ್‌ಎಫ್‌ಎಸ್‌ಎ) ಅಡಿಯಲ್ಲಿ ನೀಡುತ್ತಿರುವುದು, ನಿಯಮಗಳಿಗಿಂತಲೂ ಕಡಿಮೆ ಇದ್ದರೂ, ಪಿಎಂಎಂವಿವೈ ಯೋಜನೆಯಡಿ ನೆರವನ್ನು ಹೆಚ್ಚಿಸಲಾಗಿಲ್ಲ.

ಒಡಿಶಾ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಈ ಮೊತ್ತ ಹೆಚ್ಚಾಗಿರುವುದಷ್ಟೇ ಅಲ್ಲದೆ, ಯೋಜನೆಯ ಅನುಷ್ಠಾನವೂ ಉತ್ತಮವಾಗಿದೆ. ಒಡಿಶಾದ ಆರ್ಥಿಕ ಸಮೀಕ್ಷೆಯಲ್ಲಿ ವರದಿ ಮಾಡಿರುವಂತೆ, 2021-22ರಲ್ಲಿ ರಾಜ್ಯದ ಶೇ. 64 ಜನನಗಳನ್ನು ಈ ಯೋಜನೆಯಡಿ ಒಳಗೊಳ್ಳಲಾಗಿತ್ತು. ತಮಿಳುನಾಡಿನಲ್ಲಿ 2023-24ರಲ್ಲಿ ಶೇ. 84ರಷ್ಟು ಜನನಗಳನ್ನು ಒಳಗೊಳ್ಳಲಾಗಿತ್ತು. ಈ ವರ್ಷಗಳಲ್ಲಿ ಅಖಿಲ ಭಾರತದ ಸರಾಸರಿ ಶೇ. 10ಕ್ಕಿಂತಲೂ ಕಡಿಮೆಯಾಗಿತ್ತು. ಈ ವ್ಯತ್ಯಾಸ ಬಹಳ ಗಂಭೀರವಾಗಿ ಪರಿಗಣಿಸಬೇಕಾದ ವಿಷಯ. ಔಪಚಾರಿಕ ಕ್ಷೇತ್ರದಲ್ಲಿ ಭಾರತದ ಮಹಿಳೆಯರು 26 ವಾರಗಳ ವೇತನಸಹಿತ ಮಾತೃತ್ವ ರಜೆ ಸೌಲಭ್ಯವನ್ನು ಪಡೆಯುತ್ತಾರೆ. ಇದು 2017ರಲ್ಲಿ ಮಾಡಿದ ಮಾತೃತ್ವ ನೆರವು ಕಾಯ್ದೆ 1967ರ ತಿದ್ದುಪಡಿಯ ಫಲ. ವಿಶ್ವ ಆರೋಗ್ಯ ಸಂಸ್ಥೆಯ ನಿಯಮ ಈ ನಿಟ್ಟಿನಲ್ಲಿ 14 ವಾರಗಳಾಗಿವೆ. ಅಸಂಘಟಿತ ಕ್ಷೇತ್ರದಲ್ಲಿ, ಒಂದು ವೇಳೆ ಗರ್ಭಿಣಿಯರು ಪಿಎಂಎಂವಿವೈ ಯೋಜನೆಯ ಎಲ್ಲ ಅಡೆತಡೆಗಳನ್ನೂ ದಾಟುವುದರಲ್ಲಿ ಯಶಸ್ವಿಯಾದರೆ ಆಗ 5,000 ರೂ.ಗಳನ್ನು ಪಡೆಯುತ್ತಾರೆ. ಈ ದ್ವಂದ್ವ ನೀತಿಯು ಕಳವಳಕಾರಿಯಾಗಿದೆ.

ಪಿಎಂಎಂವಿವೈ ಒಂದು ವಿಫಲ ಯೋಜನೆ ಎನ್ನುವುದು ಸ್ಪಷ್ಟವಾಗಿ ಸಾಬೀತಾಗಿದೆ. ಕೇಂದ್ರ ಸರಕಾರವು ಗರ್ಭಿಣಿಯರಿಗೆ ನೆರವಾಗುವುದಕ್ಕಿಂತಲೂ ಹಣ ಉಳಿತಾಯ ಮಾಡುವ ದಿಕ್ಕಿನಲ್ಲಿ ಯೋಚಿಸುತ್ತಿದೆ. ತತ್ಪರಿಣಾಮವಾಗಿ, ಒಂದು ಜನಪ್ರಿಯವೂ, ಉಪಯುಕ್ತವೂ ಆಗಬಹುದಾಗಿದ್ದ ಯೋಜನೆಯನ್ನು ನಿಷ್ಕ್ರಿಯಗೊಳಿಸಿದೆ. ಇದು ಪಿಎಂಎಂವಿವೈ ನಿಯಮಗಳ ಉಲ್ಲಂಘನೆಯೂ ಆಗಿದೆ. ಇಡೀ ಯೋಜನೆಯನ್ನು ಮರುವಿನ್ಯಾಸಗೊಳಿಸಿ, ಕಾಯ್ದೆಯ ನಿಯಮಗಳ ಅನುಸಾರ ಪುನಃ ಸಕ್ರಿಯಗೊಳಿಸಬೇಕಿದೆ. ಯೋಜನೆಯ ಪ್ರಯೋಜನಗಳನ್ನು ಹೆಚ್ಚಿಸುವುದಷ್ಟೇ ಅಲ್ಲದೆ, ಮಾರುಕಟ್ಟೆ ಬೆಲೆಗಳಿಗೆ ಸಮನಾಗಿ ನಿಗದಿಪಡಿಸಬೇಕಾಗುತ್ತದೆ. ಗರ್ಭಿಣಿಯರಿಗೆ ಉತ್ತಮವಾದ ಸಾರ್ವಜನಿಕ ಬೆಂಬಲ ನೀಡುವುದರಿಂದ ಇಡೀ ಸಮಾಜವೇ ಲಾಭ ಪಡೆಯುತ್ತದೆ.

(ಜೇನ್ ಡ್ರೀಜ್ ರಾಂಚಿ ವಿಶ್ವವಿದ್ಯಾನಿಲಯದ ಅರ್ಥಶಾಸ್ತ್ರ ವಿಭಾಗದ ಪ್ರಾಧ್ಯಾಪಕರು. ರೀತಿಕಾ ಖೇರ ದಿಲ್ಲಿ ಐಐಟಿಯಲ್ಲಿ ಅರ್ಥಶಾಸ್ತ್ರ ಪ್ರಾಧ್ಯಾಪಕರು)

ಕೃಪೆ: ದ ಹಿಂದೂ

share
ಜೇನ್ ಡ್ರೀಜ್, ರೀತಿಕಾ ಖೇರ
ಜೇನ್ ಡ್ರೀಜ್, ರೀತಿಕಾ ಖೇರ
ಕನ್ನಡಕ್ಕೆ: ನಾ. ದಿವಾಕರ
ಕನ್ನಡಕ್ಕೆ: ನಾ. ದಿವಾಕರ
Next Story
X