Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಮಾತಿನ ಮಾರುಕಟ್ಟೆ, ಸುದ್ದಿ ಬೇಡ ಶಬ್ದ...

ಮಾತಿನ ಮಾರುಕಟ್ಟೆ, ಸುದ್ದಿ ಬೇಡ ಶಬ್ದ ಸಾಕು!

ನರೇಂದ್ರ ರೈ ದೇರ್ಲನರೇಂದ್ರ ರೈ ದೇರ್ಲ2 Nov 2025 9:50 AM IST
share
ಮಾತಿನ ಮಾರುಕಟ್ಟೆ, ಸುದ್ದಿ ಬೇಡ ಶಬ್ದ ಸಾಕು!

ಒಂದು ಕಾಲದಲ್ಲಿ ರಾಜಕಾರಣಿಗಳು ಪರಸ್ಪರ ಎದುರು ನಿಂತು ಕೋಪದಿಂದ ಮಾತನಾಡಿದರೂ, ಹಳೆಯ ಪತ್ರಿಕೋದ್ಯಮ ಅವುಗಳನ್ನು ಕತ್ತರಿಸಿ ಪ್ರಕಟಿಸುತ್ತಿತ್ತು. ಅದು ಅರ್ಥವನ್ನು ಸಂಗ್ರಹಿಸುತ್ತಿತ್ತು, ಅಸಭ್ಯತೆಯನ್ನು ಅಲ್ಲ. ಇವತ್ತಿನ ಮಾಧ್ಯಮಗಳು ಅಸಭ್ಯತೆಯನ್ನೇ ಸಾರಾಂಶವನ್ನಾಗಿಸಿವೆ. ಒಬ್ಬನ ಶಾಂತ ಸಮನ್ವಯದ ನಿಲುವು ಅವರಿಗೆ ಪ್ರಯೋಜನಕಾರಿಯಲ್ಲ; ಆದರೆ ಅವರು ಬೈದಾಡಿದರೆ ಅದು ಪ್ರಮುಖ ಸುದ್ದಿ. ಈ ದೃಷ್ಟಿಕೋನವೇ ಸಮಾಜದಲ್ಲಿ ದಿನೇ ದಿನೇ ಮಾತಿನ ಗೌರವವನ್ನು ಕೊಲ್ಲುತ್ತಿದೆ.

ಮುಖ್ಯಮಂತ್ರಿಯವರೇ ಆಗಿರಲಿ, ಸಚಿವರೇ ಇರಲಿ, ಈ ರಾಜ್ಯದ ಪ್ರಭುತ್ವದ ಪ್ರತಿನಿಧಿಗಳನ್ನು ಮಾಧ್ಯಮದವರು ಎಲ್ಲೆಂದರಲ್ಲಿ ಅಡ್ಡಗಟ್ಟುವುದು ಸರ್ವಸಾಮಾನ್ಯ. ಆದರೆ, ಮಂಗಳೂರು, ಬೆಳಗಾವಿ, ಶಿವಮೊಗ್ಗ-ಎಲ್ಲೆಡೆ ಅವರ ಎದುರು ನಿಂತಾಗ ಕೇಳುವುದು ನಾಡಿನ ನೋವಿನ ಪ್ರಶ್ನೆಗಳಲ್ಲ ಅಥವಾ ಸ್ಥಳೀಯ ಸಮಸ್ಯೆಗಳನ್ನಲ್ಲ. ಅತಿವೃಷ್ಟಿ, ರಸ್ತೆಯ ಗುಂಡಿ, ನದಿಯ ದೌರ್ಜನ್ಯ, ರೈತನ ವ್ಯಥೆ, ಶಿಕ್ಷಕರ ನೇಮಕ ಇವುಗಳನ್ನೆಲ್ಲ ಬದಿಗಿಟ್ಟು ಸದ್ಯ ಮಾಧ್ಯಮದ ಮೈಕ್ ಒಂದೇ ದಿಕ್ಕಿಗೆ ತಿರುಗುತ್ತದೆ.

‘‘ನಿಮ್ಮ ಅವಧಿ ಯಾವಾಗ ಮುಗಿಯುತ್ತದೆ?’’, ‘‘ನವೆಂಬರ್ ಕ್ರಾಂತಿಯ ಗುಟ್ಟೇನು?’’, ‘‘ಆರೆಸ್ಸೆಸ್ ನಿಷೇಧ ಸಾಧ್ಯವೇ?’’, ‘‘ಡಿಕೆಶಿ ದಿಲ್ಲಿಗೆ ಹೋದದ್ದು ಯಾಕೆ?’’ ಎನ್ನುವ ಪ್ರಶ್ನೆಗಳ ಸರಮಾಲೆ. ನಾಡಿನ ನಾಡಿಯ ತಾಳಕ್ಕಿಂತ ಇದು ರಾಜಕೀಯ ನಾಟಕದ ನಾದಕ್ಕೇ ಹೆಚ್ಚು ಧ್ವನಿ ಸಿಗುತ್ತದೆ.

ತಮ್ಮ ಚಾನೆಲ್ ಮೈಕ್ ಮೂತಿಗೆ ಯಾವುದೇ ರಾಜಕಾರಣಿ ಮುಖಾಮುಖಿಯಾದರೂ ಕೇಳುವ ಪ್ರಶ್ನೆ ಹೀಗೆಯೇ. ಉತ್ತರಕ್ಕೆ ನಿಂತವ ಗಂಭೀರ ವಿಷಯಗಳಿಗೆ ಬೆಳಕು ಚೆಲ್ಲಿದರೂ ಅವೆಲ್ಲವನ್ನೂ ಕತ್ತರಿಸಿ ಬದಿಗಿಟ್ಟು ಸಮಸ್ಯೆ ಸೃಷ್ಟಿಸುವ, ಆ ಮೂಲಕ ಟಿಆರ್‌ಪಿ ಏರಿಸಿಕೊಳ್ಳುವ ವಾಕ್ಯ-ಸುದ್ದಿಗಳನ್ನಷ್ಟೇ ಮಾಧ್ಯಮಗಳು ಪ್ರಸಾರ ಮಾಡುವುದನ್ನು ನಾವು ಗಮನಿಸಿದ್ದೇವೆ. ಸ್ಪಷ್ಟತೆಯನ್ನು ಅಸ್ಪಷ್ಟಗೊಳಿಸುವುದು, ಪದಗಳನ್ನು ಕತ್ತರಿಸುವುದು, ಗೊಂದಲ ವೃದ್ಧಿಸುವುದು ಇತ್ತೀಚೆಗೆ ಬ್ರೇಕಿಂಗ್ ನ್ಯೂಸ್‌ನ ಭಾಗಗಳೇ ಆಗಿವೆ.

ಇತ್ತೀಚೆಗೆ ಪರ ಪರ ಪರಚಿಕೊಂಡ ಆ ಇಬ್ಬರು ಯುವ ರಾಜಕಾರಣಿಗಳ ಹೆಸರನ್ನು ಬರೀ ಪ್ರ.ಪ್ರ. ಎಂದೇ ಇಟ್ಟುಕೊಳ್ಳಿ. ಯಾವ ತಪ್ಪುಗಳನ್ನೂ ಮಾಡದ ತಾಯಿಯ ಬಗ್ಗೆ ಅವರಲ್ಲೊಬ್ಬರು ಮಾತನಾಡಿದ ಅಷ್ಟೂ ಮಾತುಗಳು ಸಾರ್ವಜನಿಕವಾಗಿ ಕೇಳಿಸಿಕೊಳ್ಳುವುದಕ್ಕೂ ತೀರಾ ಅಸಹನೀಯವಾಗಿತ್ತು. ಹಾಗಂತ ಅವರಿಬ್ಬರೂ ಬರೀ ರಾಜಕಾರಣಿಗಳಲ್ಲ. ಒಬ್ಬರು ಪತ್ರಕರ್ತರಾಗಿದ್ದವರು, ಮತ್ತೊಬ್ಬರು ಈಗಲೂ ಶಿಕ್ಷಣ ಸಂಸ್ಥೆಯೊಂದನ್ನು ನಡೆಸುವವರು. ಇಬ್ಬರೂ ರಾಜಕೀಯೇತರ ನೆಲೆಯಲ್ಲೂ ತಮ್ಮದೇ ಘನತೆಯ ಗುರುತುಗಳನ್ನು ಹೊಂದಿರುವವರು.

ಭಾರತದಂತಹ ಕೂಡುದೇಶದಲ್ಲಿ ಮಾತು ಕಿಡಿ ಹೊತ್ತಿಕೊಳ್ಳುವುದಕ್ಕೆ ಒಂದು ಸಾಂಪ್ರದಾಯಿಕ ಕಾರಣವಿದೆ. ಯಾವುದೇ ಜಗಳ ವಿಕೋಪಕ್ಕೆ ಜರಗಬೇಕಾದರೆ ಅಲ್ಲಿ ಕೇವಲ ಭಾಗಿಗಳಲ್ಲ, ಮೂರನೆಯ ವ್ಯಕ್ತಿಗಳಿರಬೇಕು. ನೋಡುವವರಿದ್ದಾಗ ಸೋಲುವುದು ಅಪಮಾನ ಎಂದು ಸೋಲದಿರುವ ದಾರಿಯಲ್ಲಿ ಮಾತುಗಳು ಕಳೆ ಕಟ್ಟುತ್ತವೆ. ಯಾರೂ ರಾಜಿಯಾಗಲು ಮುಂದಾಗದೆ, ಶರಣಾಗದೆ ದ್ವೇಷ ಸ್ಫೋಟಗೊಳ್ಳುತ್ತವೆ. ಈಗಂತೂ ಜಗಳವಾಡುವ ಜಾಗದಲ್ಲಿ ಮನುಷ್ಯರಷ್ಟೇ ಅಲ್ಲ ಟಿ.ವಿ. ಕ್ಯಾಮರಾಗಳು ಇದ್ದಾಗ ಆ ರಣರಂಪಾಟದ ಬೆಂಕಿ ಪ್ರಭೆ ಬೇರೆ ಸ್ವರೂಪ ಪಡೆಯುತ್ತದೆ. ತಕ್ಷಣ ಅದಕೊಂದಷ್ಟು ಬಣ್ಣ, ರಾಗ ಸೇರಿಸಿ ದಾಖಲಿಸಿದ ದೃಶ್ಯ ಶಬ್ದಾವಳಿಗಳನ್ನು ಮಾಧ್ಯಮಗಳು ದಶ ದಿಕ್ಕುಗಳಿಗೆ ಹಬ್ಬಿಸುತ್ತವೆ. ಮುಂದಿನದ್ದನ್ನು ನಾವು ನೀವು ಅನುಭವಿಸಬೇಕು!

ರಾಜಕೀಯ ಎಂಬುದು ಎಂದಿಗೂ ಶಾಂತಿಯ ಅಂಗಳವಲ್ಲ. ಪರಸ್ಪರ ವಿರೋಧ, ಟೀಕೆ, ತಿರುಗೇಟು - ಇವುಗಳೇ ಅದರ ಉಸಿರು. ಅದು ಕೇವಲ ಬೈದಾಡಿಕೊಂಡವರ ತಪ್ಪಲ್ಲ. ಮುಂದೆ ಅದು ಸಮಾಜದ ಭಾಷಾ ಸಂಸ್ಕೃತಿಯ ಮೇಲೆ ಪರಿಣಾಮ ಬೀರುತ್ತದೆ. ಒಬ್ಬ ವ್ಯಕ್ತಿ ಮಾತನಾಡುವ ಶೈಲಿ ಅವನೊಳಗಿನ ಮನೋಸ್ಥಿತಿಯ ಪ್ರತಿಫಲನ. ಆದರೆ ಇಂದಿನ ಪರಿಸ್ಥಿತಿಯಲ್ಲಿ ರಾಜಕಾರಣಿಗಳು ಮಾತನಾಡುತ್ತಿರುವ ಸ್ಥಳವೇ ಬದಲಾಗಿದೆ. ಎದುರಿನವರ ಜೊತೆ ಮುಕ್ತವಾಗಿ ಮಾತನಾಡುವ ಕಾಲ ಇಲ್ಲ. ಎಲ್ಲೆಡೆ ಕ್ಯಾಮರಾ, ಮೈಕ್, ಪ್ರಸಾರಕ್ಕೆ ಸಿದ್ಧವಾಗಿರುವ ಮಾಧ್ಯಮದ ಕಣ್ಣು. ಈ ಕಣ್ಣುಗಳು ಕೇವಲ ಸುದ್ದಿ ಹಿಡಿಯುವುದಲ್ಲ, ಅವು ಶಬ್ದ ಹುಡುಕುತ್ತವೆ. ಅಸಭ್ಯವಾದಷ್ಟು ರಭಸವಾಗಿ ಹೀರುತ್ತವೆ.ಕೋಪದ ಮಾತುಗಳು, ಉಗ್ರ ಪ್ರತಿಕ್ರಿಯೆಗಳು, ಬೈಗುಳ ಇವುಗಳೇ ಇಂದಿನ ಮಾಧ್ಯಮಗಳಿಗೆ ಆಹಾರ.

ಯಾರು ಶಾಂತವಾಗಿ ಮಾತನಾಡುತ್ತಾರೆ, ಯಾರು ವಿಚಾರಪೂರ್ಣವಾಗಿ ಹೇಳುತ್ತಾರೆ ಎಂಬುದಕ್ಕೆ ಇಂದು ಸುದ್ದಿ ಮೌಲ್ಯವಿಲ್ಲ. ಇತ್ತೀಚೆಗೆ ಕನ್ನಡ ವಾಹಿನಿಯೊಂದು ಆರೆಸ್ಸೆಸ್ ನಿಷೇಧದ ಕುರಿತಾಗಿ ಇಬ್ಬರು ಗಣ್ಯರನ್ನು ಚಾನೆಲ್‌ಗೆ ಕರೆಸಿ ಚರ್ಚೆಯನ್ನು ಏರ್ಪಡಿಸಿತ್ತು. ಅದರಲ್ಲೊಬ್ಬರು ಸುಧೀರ್ ಕುಮಾರ್ ಮರೋಳಿ. ಅವರ ಎದುರಾಳಿಯ ಹೆಸರನ್ನು ಮರೆತಿದ್ದೇನೆ. ಆ ಡಿಬೇಟ್ ಎಷ್ಟು ಚೆನ್ನಾಗಿತ್ತು ಎಂದರೆ ಸದ್ಯ ಇನ್ನೊಮ್ಮೆ ಅವರಿಬ್ಬರನ್ನು ಆ ಚಾನೆಲ್ ಕರೆಸಿಕೊಳ್ಳುವ ಸಾಧ್ಯತೆಯೇ ಇಲ್ಲ. ಕಾರಣ, ಆ ಚರ್ಚೆಯುದ್ಧಕ್ಕೂ ಕಿಡಿ ಹೊತ್ತಿಕೊಳ್ಳಲಿಲ್ಲ. ಇಬ್ಬರಿಗೂ ಕೇಳಿಸಿಕೊಳ್ಳುವ ಸಹನೆ ತಾಳ್ಮೆಯೊಂದಿಗೆ ಸಮರ್ಥವಾಗಿ ವಿಷಯ ಮಂಡಿಸುವ ವಿಚಾರಾನುಭವಗಳು ಇದ್ದವು. ಆ ಕಾರಣಕ್ಕಾಗಿ ಆ ಕಾರ್ಯಕ್ರಮ ಚಾನೆಲ್ ಲೆಕ್ಕದಲ್ಲಿ ಹೆಚ್ಚು ಲಾಭಕರವಾಗಿರಲಿಲ್ಲ. ನೋಡುಗರ ದೃಷ್ಟಿಯಲ್ಲಿ ಮಾತ್ರ ಉತ್ಕೃಷ್ಟವಾಗಿತ್ತು.

ಮಾತುಗಳು ಕೆಲ ಕ್ಷಣಗಳಲ್ಲಿ ಕೋಪದಿಂದ ಬರುವವು. ಆದರೆ ಮಾಧ್ಯಮಗಳು ಆ ಕ್ಷಣದ ಕೋಪವನ್ನು ಶಾಶ್ವತ ಪಾಪದಂತೆ ಪ್ರದರ್ಶಿಸಿದಾಗ, ಅದು ವ್ಯಕ್ತಿಯ ಗೌರವಕ್ಕೂ ಹಾನಿ ಮಾಡುತ್ತದೆ. ಮಾಧ್ಯಮ ಲೋಕದ ಈ ಹೊಸ ನಾಟಕಶೈಲಿ ಒಂದು ವಿಶಿಷ್ಟ ತಂತ್ರಜ್ಞಾನದಿಂದ ಬಲ ಪಡೆದಿದೆ. ಎಲ್ಲರಿಗೂ ಮೊಬೈಲ್, ಎಲ್ಲರಿಗೂ ಕ್ಯಾಮರಾ, ಎಲ್ಲರಿಗೂ ವೀಕ್ಷಣೆ ಮತ್ತು ಹಂಚಿಕೆಯ ಅವಕಾಶ ಇರುವಾಗ ಸಹಜವಾಗಿ ಅದು ವಿಸ್ತರಿಸುತ್ತದೆ. ಈಗ ಕೋಪದ ವೀಡಿಯೊಗಳು, ಬೈಗುಳ ಶಬ್ದಗಳು ಕ್ಷಣಾರ್ಧದಲ್ಲಿ ವೈರಲ್ ಆಗುತ್ತವೆ. ಸುದ್ದಿ ಚಾನೆಲ್‌ಗಳಿಗೆ ಅದು ರೇಟಿಂಗ್; ಸಾಮಾಜಿಕ ಮಾಧ್ಯಮಗಳಿಗೆ ಅದು ಟ್ರೆಂಡ್; ಆದರೆ ಸಾಮಾನ್ಯ ಜನರಿಗೆ ಅದು ಮನಸ್ಸಿನ ಮಾಲಿನ್ಯ. ಅವರು ಕೇಳಿ ಕೋಪಗೊಳ್ಳುತ್ತಾರೆ, ಪ್ರತಿಕ್ರಿಯಿಸುತ್ತಾರೆ, ಹಂಚುತ್ತಾರೆ - ಈ ಎಲ್ಲವೂ ಸಮಾಜದ ಭಾಷೆಯನ್ನು ನಿಧಾನವಾಗಿ ಹೀನಗೊಳಿಸುತ್ತಿವೆ.

ಒಂದು ಕಾಲದಲ್ಲಿ ರಾಜಕಾರಣಿಗಳು ಪರಸ್ಪರ ಎದುರು ನಿಂತು ಕೋಪದಿಂದ ಮಾತನಾಡಿದರೂ, ಹಳೆಯ ಪತ್ರಿಕೋದ್ಯಮ ಅವುಗಳನ್ನು ಕತ್ತರಿಸಿ ಪ್ರಕಟಿಸುತ್ತಿತ್ತು. ಅದು ಅರ್ಥವನ್ನು ಸಂಗ್ರಹಿಸುತ್ತಿತ್ತು, ಅಸಭ್ಯತೆಯನ್ನು ಅಲ್ಲ. ಇವತ್ತಿನ ಮಾಧ್ಯಮಗಳು ಅಸಭ್ಯತೆಯನ್ನೇ ಸಾರಾಂಶವನ್ನಾಗಿಸಿವೆ. ಒಬ್ಬನ ಶಾಂತ ಸಮನ್ವಯದ ನಿಲುವು ಅವರಿಗೆ ಪ್ರಯೋಜನಕಾರಿಯಲ್ಲ; ಆದರೆ ಅವರು ಬೈದಾಡಿದರೆ ಅದು ಪ್ರಮುಖ ಸುದ್ದಿ. ಈ ದೃಷ್ಟಿಕೋನವೇ ಸಮಾಜದಲ್ಲಿ ದಿನೇ ದಿನೇ ಮಾತಿನ ಗೌರವವನ್ನು ಕೊಲ್ಲುತ್ತಿದೆ. ನಾವು ಮಾತನಾಡುವುದಕ್ಕೆ ಮುಂಚೆ ಪದದ ಪ್ರಭಾವದ ಬಗ್ಗೆ ಯೋಚಿಸುತ್ತಿದ್ದೆವು; ಈಗ ಮಾತನಾಡಿ ನಂತರ ವಿವರಣೆ ನೀಡುವ ಕಾಲ ಬಂದಿದೆ.

ಮಾಧ್ಯಮಗಳು ಈ ಕೋಪದ ವಹಿವಾಟನ್ನು ಕೋಟಿ ಕೋಟಿ ಲೆಕ್ಕದಲ್ಲಿ ಲಾಭವಾಗಿ ಪರಿವರ್ತಿಸುತ್ತಿವೆ. ಸಮಾಜಕ್ಕೆ ನಷ್ಟವಾದರೂ ಅಡ್ಡಿಯಿಲ್ಲ, ತನಗೆ ಮಾತ್ರ ಲಾಭವಾಗಬೇಕು ಎಂಬ ನಿಲುವು ಇವತ್ತಿನ ಮಾಧ್ಯಮ ಲೋಕದ್ದು. ಭಾಷೆಯ ಹೀನತೆ ಎಂದರೆ ಸಂಸ್ಕೃತಿಯ ಕುಸಿತ. ಮಕ್ಕಳು, ಯುವಕರು ಈ ದೃಶ್ಯಗಳನ್ನು ನೋಡಿ ರಾಜಕೀಯವನ್ನು ಕೋಪದ ವೃತ್ತಿಯೆಂದೇ ಭಾವಿಸುತ್ತಾರೆ. ನಿಧಾನವಾಗಿ ಮಾತನಾಡುವ ಸೂಕ್ಷ್ಮ ಕುಶಲಿ ಕಲೆ ಬದಲು ಜನರಿಗೆ ಕೂಗುವ ಅಭ್ಯಾಸ ಬರುತ್ತದೆ. ಇದು ಕೇವಲ ರಾಜಕೀಯದ ಹೀನತೆ ಅಲ್ಲ, ನಿಜವಾದ ಅರ್ಥದಲ್ಲಿ ಇದು ಸಮಾಜದ ಮೌಲ್ಯಗಳ ಕ್ಷಯ.

ನಾವೀಗ ಪ್ರಶ್ನಿಸಬೇಕು, ಮಾತು ಒಂದು ವಿನಿಮಯದ ಸಾಧನವೇ? ಅಥವಾ ವಾಣಿಜ್ಯ ವಸ್ತುವೇ? ಮಾಧ್ಯಮಗಳು ಬರಿ ಸತ್ಯವನ್ನೇ ಮಾರಾಟ ಮಾಡಿದರೆ ನಷ್ಟವಾಗುತ್ತದೆ. ಆ ಕಾರಣಕ್ಕಾಗಿ ಅವು ಸತ್ಯ ಹೇಳುವುದಕ್ಕಿಂತ ಕೋಪ ರಂಪಾಟವನ್ನಷ್ಟೇ ಮಾರಾಟ ಮಾಡುತ್ತಿವೆ. ಸೌಜನ್ಯದ ಮಾತುಗಳಿಗೆ ಪ್ರೇಕ್ಷಕರಿಲ್ಲ, ಬೈಗಳಿಗೆ ಮಾತ್ರ ಜನಸಮೂಹ. ಈ ವಿಚಿತ್ರ ಸ್ಥಿತಿಯಲ್ಲಿ ನಾವೆಲ್ಲರೂ ಮಾಧ್ಯಮದ ಈ ನಾಟಕದ ಪಾತ್ರಧಾರಿಗಳಾಗಿ ಹೋಗಿದ್ದೇವೆ. ಯಾರಾದರೂ ಬೈದರೆ, ನಾವು ಅದನ್ನು ನೋಡಿ ಖುಷಿಪಡುತ್ತೇವೆ, ಕಾಮೆಂಟ್ ಮಾಡುತ್ತೇವೆ, ಚರ್ಚಿಸುತ್ತೇವೆ. ಆದರೆ ಯಾರಾದರೂ ವಿಚಾರಪೂರ್ಣವಾಗಿ ಮಾತನಾಡಿದರೆ ಅದಕ್ಕೆ ನಮ್ಮದು ಕಿವುಡು ಮೌನ. ಇದು ಕೇವಲ ಮಾಧ್ಯಮವಲ್ಲ, ನಮ್ಮ ಮನಸ್ಸಿನ ಪ್ರತಿಬಿಂಬ.

ಸಮಾಜದ ಭಾಷೆಯನ್ನು ಬದಲಾಯಿಸುವ ಶಕ್ತಿ ಈಗ ಮಾಧ್ಯಮದ ಕೈಯಲ್ಲಿದೆಯೇ? ಅವರು ಒಂದು ಮಾತನ್ನು ಮತ್ತೆ ಮತ್ತೆ ಪುನರಾವರ್ತಿಸಿದರೆ ಅದು ಜನರ ಮನಸ್ಸಿನಲ್ಲಿ ವರ್ಷಗಳವರೆಗೆ ಉಳಿಯುತ್ತದೆ. ಕೋಪದ ಶಬ್ದಗಳು ಶೀರ್ಷಿಕೆಗಳಲ್ಲಿ ಉಳಿದು, ಸೌಜನ್ಯದ ಶಬ್ದಗಳು ಸಂಪಾದನೆಯಲ್ಲಿ ಅಳಿಯುತ್ತವೆ. ಹೀಗಾಗಿ ವ್ಯಕ್ತಿಯ ಕಳಂಕ ಮಾತ್ರವಲ್ಲ, ಸಮಾಜದ ಭಾಷೆಯೂ ಹಾಳಾಗುತ್ತದೆ. ಟಿ.ವಿ. ಚರ್ಚೆಗಳ ಶೈಲಿ ಈಗ ಮನೆ ಹಾದಿಬದಿಯ ಪುಂಡರ ಮಾತಿನ ಶೈಲಿಯಾಗಿದೆ. ಪರಸ್ಪರ ಕೇಳುವುದಕ್ಕಿಂತ ಅಡ್ಡಿಪಡಿಸುವುದು ಸಾಮಾನ್ಯ. ವಾದಕ್ಕಿಂತ ವಿಕೋಪ ಹೆಚ್ಚು.

ಈ ಸಮಯದಲ್ಲಿ ಒಬ್ಬ ವ್ಯಕ್ತಿ ಶಾಂತಿಯಿಂದ ಮೌನದಿಂದ ಮಾತನಾಡುವುದು ಕ್ರಾಂತಿಕಾರಕ ಕೃತ್ಯ. ಸೌಜನ್ಯದಿಂದ ಪ್ರತಿಕ್ರಿಯಿಸುವುದು ಧೈರ್ಯ. ಮೌನ ಕಾಯುವುದು ಬಲ. ಇಂತಹ ಕಾಲದಲ್ಲಿ ನಮಗೆ ಬೇಕಾಗಿರುವುದು ಮಾತಿನ ಶುದ್ಧತೆಯನ್ನು ಪುನಃ ಸ್ಥಾಪಿಸುವ ಮನಸ್ಸು. ಮಾಧ್ಯಮಗಳು ವಿಕೃತಿ, ಮನಸ್ತಾಪ, ಕೋಪಗಳನ್ನಷ್ಟೇ ಅಲ್ಲ, ಸಂಸ್ಕೃತಿಯನ್ನು ಪ್ರಸಾರ ಮಾಡಲಿ. ಮಾತು ಯಾವತ್ತೂ ಮನುಷ್ಯನ ಆತ್ಮದ ಪ್ರತಿಫಲ, ಅದನ್ನು ವ್ಯವಹಾರ ವಸ್ತುವಾಗಿಸಬಾರದು. ಸಮಾಜ ಉಳಿಯಬೇಕಾದರೆ ಅದರ ಭಾಷೆ ಉಳಿಯಬೇಕು; ಭಾಷೆ ಉಳಿಯಬೇಕಾದರೆ ಅದರ ಶುದ್ಧತೆ ಉಳಿಯಬೇಕು.

ಮೊನ್ನೆ ಮೊನ್ನೆಯವರೆಗೆ ರಾಜಕಾರಣಿಗಳ ವಾಗ್ಯುದ್ಧಗಳು ಅವರ ರಾಜಕೀಯ ಹೂಡಿಕೆಗಳಂತಿದ್ದವು. ಅವರು ಮಾತನಾಡುತ್ತಿದ್ದದ್ದು ಮತದಾರರನ್ನು ಉದ್ದೇಶಿಸಿ; ವಿರೋಧಿಯನ್ನು ಕಟುವಾಗಿ ಟೀಕಿಸಿ ತಮ್ಮ ಪ್ರಭಾವ ವಿಸ್ತರಿಸುತ್ತಿದ್ದರು ಮತ್ತು ಅದು ಬರೀ ಚುನಾವಣಾ ವೇದಿಕೆಗಳಾಗಿದ್ದವು. ಇಂದು ಆ ನಾಟಕದ ವೇದಿಕೆ ಬದಲಾಗಿದೆ. ಈಗ ಅದು ಮಾಧ್ಯಮದ ಪರದೆಯ ಮೇಲೆ ನಡೆಯುತ್ತದೆ. ಟಿ.ವಿ. ಡಿಬೇಟ್‌ಗಳ ಹೀಟ್, ಯೂಟ್ಯೂಬ್ ಚಾನೆಲ್‌ಗಳ ಕ್ಲಿಕ್ ಹಾಗೂ ಸಾಮಾಜಿಕ ಮಾಧ್ಯಮದ ಟ್ರೆಂಡ್ - ಇವುಗಳೇ ಇಂದಿನ ರಾಜಕೀಯ ನಾಟಕದ ಹೊಸ ಪ್ರೇಕ್ಷಾಗೃಹ. ಈ ಕಾರಣಕ್ಕೆ ರಾಜಕಾರಣಿಯೊಬ್ಬರ ತೀವ್ರ ಟೀಕೆ ಅಥವಾ ವಿವಾದಾತ್ಮಕ ಹೇಳಿಕೆಗಳು ಕೇವಲ ಅವರ ರಾಜಕೀಯ ಬೂಸ್ಟಿಗೇ ಅಲ್ಲ, ಮಾಧ್ಯಮಕ್ಕೂ ಆರ್ಥಿಕ ಬೂಸ್ಟರ್ ಆಗಿವೆ.

ಒಂದು ತೀವ್ರ ಮಾತು, ಒಂದು ಬ್ರೇಕಿಂಗ್ ನ್ಯೂಸ್, ಒಂದು ವಾಗ್ವಾದ, ಒಂದು ಸಿಡಿಲಿನಂತೆ ಸೋಶಿಯಲ್ ಮೀಡಿಯಾದಲ್ಲಿ ಹರಡುವ ಕ್ಲಿಪ್. ಮತ್ತೊಂದು ದಿನ ಅದೇ ಕ್ಲಿಪ್‌ನ ಮೇಲೆ ಹೊಸ ಚರ್ಚೆ, ಹೊಸ ಶೀರ್ಷಿಕೆ, ಹೊಸ ವೀಕ್ಷಣೆ.

ಇದರಿಂದ ಮಾಧ್ಯಮಗಳು ಟಿರ್‌ಆರ್‌ಪಿಯ ಲಾಭ ಪಡೆಯುತ್ತವೆ; ಜಾಹೀರಾತುಗಳು ಬರುತ್ತವೆ; ರಾಜಕಾರಣಿಗಳು ತಮ್ಮ ಗುರುತು ಉಳಿಸಿಕೊಂಡಂತಾಗುತ್ತದೆ. ಈ ಸಹಜ ಹಿತಸಂಬಂಧದಿಂದ ಇಂದಿನ ರಾಜಕೀಯ-ಮಾಧ್ಯಮ ಸಂಬಂಧ ಅಂತಃಸಂಬಂಧದ ವ್ಯಾಪಾರವಾಗಿ ಬದಲಾಗಿದೆ.

ಹೀಗಾಗಿಯೇ ಬಹುತೇಕ ಮಾಧ್ಯಮಗಳೇ ಇಂದು ರಾಜಕೀಯ ಜಗಳಗಳನ್ನು ಸ್ಪಾನ್ಸರ್ ಮಾಡುತ್ತಿವೆ ಎಂಬ ಭಾವನೆ ಸಂಪೂರ್ಣ ಅಸಾಧಾರಣವಲ್ಲ. ಅದು ವಾಸ್ತವದ ಸೊಗಸಾದ ಉಪಮೆ. ಕೆಲವೊಮ್ಮೆ ಮಾಧ್ಯಮಗಳೇ ವಿವಾದ ಹುಟ್ಟುಹಾಕುವ ಪ್ರಶ್ನೆಗಳನ್ನು ಆಯ್ಕೆಮಾಡುತ್ತವೆ. ಕೆಲವು ಚಾನೆಲ್‌ಗಳು ನಿರ್ದಿಷ್ಟ ರಾಜಕೀಯ ಶಿಬಿರದ ಪರವಾಗಿ ಅಥವಾ ವಿರುದ್ಧವಾಗಿ ಅತಿಥಿಗಳನ್ನು ಆಯ್ಕೆಮಾಡುತ್ತವೆ, ಇದರಿಂದಾಗಿಯೇ ಅಲ್ಲಿ ಸಹಜವಾಗಿ ಒಂದು ನಾಟಕೀಯ ಸಂಘರ್ಷ ನಿರ್ಮಾಣವಾಗುತ್ತದೆ.

ಇಲ್ಲಿ ದೊಡ್ಡ ಹಾನಿ ರಾಜಕಾರಣಕ್ಕೂ ಅಲ್ಲ, ಮಾಧ್ಯಮಕ್ಕೂ ಅಲ್ಲ. ಈ ಸಮಾಜದ ಸಾರ್ವಜನಿಕ ವಿವೇಕಕ್ಕೆ. ನಿಧಾನವಾಗಿ ಅರ್ಥಪೂರ್ಣ ಸಂವಾದದ ಬದಲು ಕೋಪದ, ಹಾಸ್ಯದ, ವದಂತಿಯ, ಅಪಹಾಸ್ಯದ ಸಂಸ್ಕೃತಿ ಬೆಳೆದುಬರುತ್ತಿದೆ. ರಾಜಕೀಯ ವಿಚಾರಗಳ ಬದಲು ವಾಕ್ಚಾತುರ್ಯದ ಪ್ರಹಸನ ನಡೆಯುತ್ತಿದೆ.್ಚ

share
ನರೇಂದ್ರ ರೈ ದೇರ್ಲ
ನರೇಂದ್ರ ರೈ ದೇರ್ಲ
Next Story
X