Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಕೃತಿಗಿಳಿಯದ ಮಾತುಗಳು

ಕೃತಿಗಿಳಿಯದ ಮಾತುಗಳು

ಡಾ. ರಝಾಕ್ ಉಸ್ತಾದಡಾ. ರಝಾಕ್ ಉಸ್ತಾದ18 Aug 2026 11:18 AM IST
share
ಕೃತಿಗಿಳಿಯದ ಮಾತುಗಳು

ಪ್ರಧಾನ ಮಂತ್ರಿಗಳು 80ನೇ ಸ್ವಾತಂತ್ರ್ಯ ದಿನಾಚಾರಣೆಯ ಹಿನ್ನೆಲೆಯಲ್ಲಿ ದಿಲ್ಲಿಯ ಕೆಂಪು ಕೋಟೆಯಿಂದ ದೇಶವನ್ನು ಉದ್ದೇಶಿಸಿ 13ನೇ ಬಾರಿಗೆ ಮಾತನಾಡಿದರು. ಹಲವು ವಿಚಾರಗಳನ್ನು ಪ್ರಸ್ತಾಪ ಮಾಡಿದ್ದಾರೆ. ವಿಶೇಷವಾಗಿ ಒಂದು ಕೋಟಿ ಯುವಕರಿಗೆ ಎಐ ತಂತ್ರಜ್ಞಾನದಲ್ಲಿ ತರಬೇತಿ ನೀಡಲಾಗುವುದು ಎಂದು ಹೇಳಲಾಗಿದೆ, ಆದರೆ ಕಳೆದ ಒಂದು ದಶಕದಲ್ಲಿ ಇಂತಹ ಹಲವು ಯೋಜನೆಗಳನ್ನು ಘೋಷಣೆ ಮಾಡಿದ್ದರೂ ಅನುಷ್ಠಾನವಾಗಲಿಲ್ಲ. ಅಲ್ಲದೆ ‘ಧಿಮಾಗಿ ನಕ್ಸಲ್’ ಎಂದು ಉಲ್ಲೇಖಿಸಿದ್ದಾರೆ. ಹಿಂದೆ ನಗರ ನಕ್ಸಲ್ ಎನ್ನುವ ಪದವನ್ನು ಬಳಕೆಗೆ ತಂದಿದ್ದರು. ಆದರೆ ಬಿಜೆಪಿ ಸರಕಾರವನ್ನು ಪ್ರಶ್ನೆ ಮಾಡುವ, ಸಾಮಾಜಿಕ ನ್ಯಾಯದ ಬಗ್ಗೆ, ಸಂವಿಧಾನದ ಬಗ್ಗೆ, ಅರಣ್ಯವಾಸಿಗಳ ಹಕ್ಕುಗಳ ಬಗ್ಗೆ, ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಮಾತನಾಡುವ, ಸಾತಂತ್ರ್ಯ ಹೋರಾಟದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪಾತ್ರದ ಬಗ್ಗೆ ಚರ್ಚೆ ನಡೆಸುವ ಬುದ್ಧಿಜೀವಿಗಳನ್ನು ಸಮಾಜದಿಂದ ಪ್ರತ್ಯೇಕಿಸುವ ಆಲೋಚನೆ ಅವರಿಗಿದ್ದಂತಿದೆ. ಅವರಿಂದ ಪ್ರಧಾನ ಮಂತ್ರಿಗಳು ಭೌದ್ಧಿಕವಾಗಿ ಹೆದರಿದಂತೆ ಕಾಣುತ್ತಿದೆ.

ಇದೇ ರೀತಿ 2014ರಿಂದ ಇಲ್ಲಿಯವರೆಗೆ ದೇಶದ ಜನರನ್ನು ಉದ್ದೇಶಿಸಿ ಹಲವು ವಿಚಾರಗಳನ್ನು ಪ್ರಸ್ತಾಪ ಮಾಡುತ್ತ ಹೊಸ ಭರವಸೆಗಳನ್ನು ಮೂಡಿಸುತ್ತಲೇ ಬಂದಿದ್ದಾರೆ. ಆದರೆ ಆ ಭರವಸೆಗಳು ಈಗ ಯಾವ ಸ್ಥಿತಿಯಲ್ಲಿವೆ ಎಂದು ಅವಲೋಕನ ಮಾಡುವ ಅವಶ್ಯಕತೆಯಿದೆ. ದೇಶದ ಅಭಿವೃದ್ಧಿಯ ಬಗ್ಗೆ ಬದ್ಧತೆ ಇರುವ ಯಾವುದೇ ವ್ಯಕ್ತಿಯ ಮಾತಿಗೂ ಕೃತಿಗೂ ಹೊಂದಾಣಿಕೆ ಇರಬೇಕು ಎಂದು ಪ್ರತಿಯೊಬ್ಬ ನಾಗರಿಕನೂ ಬಯಸುತ್ತಾನೆ. 2014ರಲ್ಲಿ ಪ್ರಧಾನ ಮಂತ್ರಿಗಳು ತಾನು ‘ಪ್ರಧಾನ ಸೇವಕ’ ಎನ್ನುತ್ತಾ ಸ್ವಚ್ಛ ಭಾರತ, ಜನಧನ್ ಯೋಜನಾ, ಭ್ರಷ್ಟಾಚಾರ ರಹಿತ ಆಡಳಿತ, ಮೇಕ್ ಇನ್ ಇಂಡಿಯಾ, ಯೋಜನಾ ಆಯೋಗದ ಪರಿಷ್ಕರಣೆ, ಸಹಕಾರ ಸಂಘಗಳ ಸಬಲೀಕರಣ, ದೇಶದ ಅಭಿವೃದ್ಧಿಗಾಗಿ ಕೆಲಸ ಮಾಡುತ್ತೇನೆ ಎಂದು ಭರವಸೆಯ ಮಾತನಾಡಿದ್ದರು, ಆದರೆ ಅವರ ಭರವಸೆ ಕೇವಲ ಮಾತುಗಳಾದವು.

‘ಮೇಕ್ ಇನ್ ಇಂಡಿಯಾ’ ಎನ್ನುವ ಯೋಜನೆಯ ಹೆಸರಿನಲ್ಲಿ ಜಿಡಿಪಿಯ ಶೇ. 25ರಷ್ಟು ಉತ್ಪಾದನೆ ಮಾಡುವ ಗುರಿ ಹೊಂದಲಾಗಿತ್ತು, 2014ರಲ್ಲಿ ಉತ್ಪಾದನೆ ಕ್ಷೇತ್ರದಲ್ಲಿ ಜಿಡಿಪಿ ಶೇ. 15.3ರಷ್ಟಿತ್ತು, ಒಟ್ಟು 17.13 ಲಕ್ಷ ಕೋಟಿ ರೂ. ಇತ್ತು, 2025-26ನೇ ಸಾಲಿನಲ್ಲಿ ಉತ್ಪಾದನಾ ಕ್ಷೇತ್ರದ ಜಿಡಿಪಿ ಶೇ. 16-17ರಷ್ಟಿದೆ, ಅಂದರೆ ಕಳೆದ 12 ವರ್ಷಗಳಲ್ಲಿ ಕೇವಲ ಶೇ. 1ರಿಂದ 2 ಮಾತ್ರ ಅಭಿವೃದ್ಧಿ ಕಂಡಿದೆ.

‘ಸ್ವಚ್ಛ ಭಾರತ’ ಯೋಜನೆಯ ಬಗ್ಗೆ ಭಾರೀ ಪ್ರಚಾರ ಮಾಡಲಾಯಿತು, ಬಿಜೆಪಿ ನಾಯಕರು ರಸ್ತೆ ರಸ್ತೆಗಳಲ್ಲಿ ಕಸ ಗುಡಿಸುವ ಫೋಟೊ ಹಾಕಿದ್ದೇ ಹಾಕಿದ್ದು. ಒಂದು ಹಂತಕ್ಕೆ ಸ್ವಚ್ಛ ಭಾರತ ಯೋಜನೆಯಿಂದ ದೇಶದಲ್ಲಿ ಎಲ್ಲಿಯೂ ಅಸ್ವಚ್ಛತೆ ಕಾಣಲು ಸಾಧ್ಯವಿಲ್ಲವೇನೋ ಎನ್ನುವ ಮಾತು ಚರ್ಚೆಯಲ್ಲಿತ್ತು. ಆದರೆ ವಿದೇಶದಿಂದ ಬರುವ ಅತಿಥಿಗಳಿಗೆ ದೇಶದಲ್ಲಿ ಇರುವ ಕೊಳಕಾದ ಸ್ಥಳಗಳು ಕಾಣದಿರಲಿ ಎಂದು ಗೋಡೆ ಕಟ್ಟುವ ಸ್ಥಿತಿಗೆ ತಂದು ನಿಲ್ಲಿಸಲಾಯಿತು. ಯೋಜನೆ ಒಂದು ದಶಕವಾದರೂ ಗುರಿ ಮುಟ್ಟಲು ಸಾಧ್ಯವಾಗಿಲ್ಲ.

ಭಾರೀ ಪ್ರಚಾರ ಪಡೆದ ಮತ್ತೊಂದು ಯೋಜನೆಯೆಂದರೆ ಪ್ರಧಾನ ಮಂತ್ರಿ ‘ಜನಧನ್ ಯೋಜನೆ’ ಯಾವುದೇ ಮುಂಗಡ ಹಣವಿಲ್ಲದೆ ಸರಳವಾಗಿ ಅಕೌಂಟ್ ತೆಗೆಯುವುದು ನಂತರ ಸರಕಾರ ಅದರಲ್ಲಿ ಹಣ ಹಾಕಿಬಿಡುತ್ತೇನೋ ಎಂದು ಪ್ರಚಾರ ಮಾಡಲಾಯಿತು, ಹಿಂದೆ ಮನಮೋಹನ್ ಸಿಂಗ್ ಪ್ರಧಾನ ಮಂತ್ರಿ ಇದ್ದಾಗ 2005ರಲ್ಲೇ ಝೀರೊ ಬ್ಯಾಲೆನ್ಸ್ ಅಕೌಂಟ್ ಎಂದು ಯೋಜನೆ ಮಾಡಿದ್ದರು. ಇದರಡಿಯಲ್ಲಿ 2014 ಮಾರ್ಚ್ ವರೆಗೆ ಸುಮಾರು 24.3 ಕೋಟಿ ಅಕೌಂಟ್ ತೆರೆಯಲಾಗಿತ್ತು. ಆದರೆ ಜನಧನ್ ಅಕೌಂಟ್ ತೆಗೆಯುವುದೇ ಒಂದು ಸಾಧನೆ ಎನ್ನುವಂತೆ ಬಿಜೆಪಿ ನಾಯಕರು ಪ್ರಚಾರ ಮಾಡಿದರು. ಜನಧನ್ ಯೋಜನೆಯಡಿಯಲ್ಲಿ ಇಲ್ಲಿಯವರೆಗೆ ಸುಮಾರು 58.63 ಕೋಟಿ ಅಕೌಂಟ್ ತೆಗೆಯಲಾಯಿತು. ಈಗ ಉಳಿದವುಗಳಲ್ಲಿ ಶೇ. 83ರಷ್ಟು ಅಕೌಂಟ್‌ಗಳು ಮಾತ್ರ ಕಾರ್ಯನಿರ್ವಹಿಸುತ್ತಿವೆ, ಉಳಿದ ಅಕೌಂಟ್‌ಗಳಲ್ಲಿ ಯಾವುದೇ ಹಣ ಇಲ್ಲ, ಇದರಿಂದ ಹಣಕಾಸಿನ ವ್ಯವಹಾರ, ಕ್ರೆಡಿಟ್ ಕಾರ್ಡ್ ಬಳಕೆ ಸೇರಿದಂತೆ ಹಣ ಚಲಾವಣೆಗೆ ಭಾರೀ ಬೆಂಬಲ ಸಿಗಲಿಲ್ಲ.

1950ರಿಂದ ಜಾರಿಯಲ್ಲಿದ್ದ ಯೋಜನಾ ಆಯೋಗವನ್ನು ರದ್ದುಪಡಿಸಿ ನೀತಿ ಆಯೋಗ ರಚಿಸಲಾಯಿತು. ಯೋಜನಾ ಆಯೋಗ ಹೇಳುವ ಪ್ರತಿಯೊಂದು ವಿಷಯವು ಆದೇಶವಾಗಿತ್ತು, ಅದು ಜಾರಿಗೆ ಬರುತ್ತಿತ್ತು. ಇದರ ಮೂಲಕ ರಾಜ್ಯಗಳಿಗೆ ಅನುದಾನ ಹಂಚಿಕೆ ಮಾಡಲಾಗುತ್ತಿತ್ತು. ಆದರೆ ನೀತಿ ಆಯೋಗವು ಕೇವಲ ನೀತಿಗಳ ರಚನೆಗೆ ಸೀಮಿತವಾಯಿತು.

ದೇಶದಲ್ಲಿ 2011ರಲ್ಲಿ ಭ್ರಷ್ಟಾಚಾರ ವಿರೋಧಿ ಹೋರಾಟ ಎಂದೇ ಪ್ರಸಿದ್ದಿ ಪಡೆದ ಅಣ್ಣಾ ಹಝಾರೆಯವರ ಹೋರಾಟದಿಂದಲೇ ಮುನ್ನೆಲೆಗೆ ಬಂದ ಬಿಜೆಪಿ ಸರಕಾರ ಭ್ರಷ್ಟಾಚಾರವನ್ನು ಬುಡಸಮೇತ ಕಿತ್ತೊಗೆಯುತ್ತೇವೆ, ‘ನಾ ಖಾವುಂಗಾ ನಾ ಖಾನೆದೂಂಗಾ’ ಎಂದು ಘೋಷಣೆ ಹೊರಡಿಸಿದ ಪ್ರಧಾನ ಮಂತ್ರಿಗಳು 2014ರ ಸ್ವಾತಂತ್ರ್ಯ ದಿನಾಚರಣೆಯ ಭಾಷಣದಲ್ಲಿ ಭ್ರಷ್ಟಾಚಾರ ರಹಿತ ಆಡಳಿತ ನಡೆಸುತ್ತೇವೆ ಎಂದು ಘಂಟಾ ಘೋಷವಾಗಿ ಹೇಳಿದರು, ಆದರೆ ನುಡಿದಂತೆ ನಡೆಯಲಾಯಿತೇ?

ಕೇಂದ್ರದ ಬಿಜೆಪಿ ಸರಕಾರದ ಅವಧಿಯಲ್ಲಿ ಭ್ರಷ್ಟಾಚಾರದ ಬಗ್ಗೆ ಚರ್ಚೆ, ತನಿಖೆಯೇ ಇಲ್ಲದಂತಾಗಿದೆ ಎನ್ನುವುದು ಜಗಜ್ಜಾಹಿರಾಗಿದೆ. ರಫೇಲ್ ಖರೀದಿ ಹಗರಣದಲ್ಲಿ ರಫೆಲ್ ಫೈಲ್‌ಗಳೇ ಕಳೆದು ಹೋದವು ಎಂದು ನ್ಯಾಯಾಲಯಕ್ಕೆ ಹೇಳಲಾಯಿತು. ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಭಾರೀ ಗೋಲ್‌ಮಾಲ್ ಆಗಿದೆ ಎಂದು ಮಹಾ ಲೇಖಪಾಲರೇ ವರದಿ ನೀಡಿದ್ದರೂ ಯಾವುದೇ ತನಿಖೆ ನಡೆಸಲಾಗಿಲ್ಲ, ದ್ವಾರಕಾ ಎಕ್ಸಪ್ರೆಸ್‌ವೇ 29.06 ಕಿ.ಮೀ ರಸ್ತೆ ನಿರ್ಮಾಣಕ್ಕೆ 18.20 ಕೋ.ರೂ. ಅನುಮೋದನೆ ಪಡೆದರೂ 250.00 ಕೋ.ರೂ. ಪ್ರತೀ ಕೀ.ಮೀ. ಗೆ ಬಿಲ್ ಪಾವತಿಸಲಾಗಿದೆ ಎಂದು ಮಹಾ ಲೇಖಪಾಲರು ತಿಳಿಸಿದ್ದಾರೆ, ಆದರೆ ಯಾವ ಕ್ರಮವೂ ಆಗಲಿಲ್ಲ.

ಇನ್ನೂ ಕೊರೋನ ಸಂದರ್ಭದಲ್ಲಿ ಪ್ರಧಾನ ಮಂತ್ರಿ ಅಧ್ಯಕ್ಷತೆಯಲ್ಲಿ ರಚಿಸಲಾದ ಪಿಎಂ ಕೇರ್ ಫಂಡ್ ಹೆಸರಿನ ಟ್ರಸ್ಟ್‌ನಲ್ಲಿ ಜಮಾ ಆಗಿರುವ ಹಣದ ಲೆಕ್ಕವೇ ಇಲ್ಲದಂತಾಗಿದೆ. ಯಾರು ಪಡೆದರು, ಯಾವ ಉದ್ದೇಶಕ್ಕೆ ಖರ್ಚಾಯಿತು ಎಂದು ಹೇಳಲು ಕೇಂದ್ರ ಸರಕಾರ ನಿರಾಕರಿಸುವ ಮೂಲಕ ತಮ್ಮ ಆಡಳಿತ ಪಾರದರ್ಶಕವಾಗಿಲ್ಲ ಎನ್ನುವುದನ್ನು ಸಾಬೀತುಪಡಿಸಿದಂತಿದೆ.

ಅದೇ ರೀತಿ ಚುನಾವಣಾ ಬಾಂಡ್‌ಗಳ ಮೂಲಕ ಸಾವಿರಾರು ಕೋಟಿ ಹಣವನ್ನು ಅಕ್ರಮವಾಗಿ ಬಿಜೆಪಿಗೆ ಕಾರ್ಪೊರೇಟ್ ಕಂಪೆನಿಗಳಿಂದ ಪಡೆಯಲಾಯಿತು. ಮೊದಲಿಗೆ ಅದನ್ನು ಗುಪ್ತವಾಗಿ ಇಡಲಾಯಿತು. ನಂತರ ಸುಪ್ರೀಂ ಕೋರ್ಟ್ ಮಧ್ಯಪ್ರವೇಶದಿಂದ ಹಣದ ಮೂಲ ಬಹಿರಂಗವಾಯಿತು. ಆದರೆ ಅಕ್ರಮವಾಗಿ ಪಡೆದ ಹಣ ಮುಟ್ಟುಗೋಲಾಗಲೀ, ವಾಪಸ್ ನೀಡುವುದಾಗಲೀ ಆಗಲಿಲ್ಲ. ಅಕ್ರಮ ಆಗಿದೆ ಎನ್ನುವುದು ಸಾಬೀತಾಯಿತು, ಶಿಕ್ಷೆ ಏನು ಎಂದು ನಿರ್ಣಯಿಸಲಾಗಿಲ್ಲ. ಭ್ರಷ್ಟಾಚಾರ ಯಾವ ವಿಧದಲ್ಲೂ ಕಡಿಮೆಯಾಗಿದೆ ಎಂದು ಜನರಿಗೆ ಅನಿಸಲೇ ಇಲ್ಲ. ಪ್ರಧಾನ ಮಂತ್ರಿಯಾಗಿ 12 ವರ್ಷಗಳು ಕಳೆದರೂ ಭಾರೀ ಭರವಸೆಯೊಂದಿಗೆ ಹಲವು ಯೋಜನೆಗಳು ಘೋಷಣೆ ಮಾಡಿದ್ದರೂ ಬದ್ಧತೆಯ ಕೊರತೆಯ ಕಾರಣದಿಂದ ಅವು ಯಶಸ್ಸು ಕಾಣಲಿಲ್ಲ. ಕೇವಲ ಮಾತನಾಡಿದರೆ ಸಾಲದು, ಕೆಲಸ ಮಾಡುವುದು ಮುಖ್ಯವಾಗುತ್ತದೆ ಎನ್ನುವುದಕ್ಕೆ ಮಹತ್ವವಿದೆ.

Tags

Wordswork
share
ಡಾ. ರಝಾಕ್ ಉಸ್ತಾದ
ಡಾ. ರಝಾಕ್ ಉಸ್ತಾದ
Next Story
X