Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ನೆಲದನಿ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಮಾಹಿತಿ ಮಾರ್ಗದರ್ಶನ
    • ಆರೋಗ್ಯ
    • ಓ ಮೆಣಸೇ
    • ಕೃತಿ ಪರಿಚಯ
    • ಝಲಕ್
    • ಬುಡಬುಡಿಕೆ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಅಳಿವಿನಂಚಿನಲ್ಲಿ ‘ಯರವ’ ಬುಡಕಟ್ಟು ಜನಾಂಗ

ಅಳಿವಿನಂಚಿನಲ್ಲಿ ‘ಯರವ’ ಬುಡಕಟ್ಟು ಜನಾಂಗ

ಕಾಫಿತೋಟದಲ್ಲೇ ಬದುಕುತ್ತಿರುವ ಕೊಡಗಿನ ಮೂಲ ನಿವಾಸಿಗಳು

ಕೆ.ಎಂ.ಇಸ್ಮಾಯೀಲ್ ಕಂಡಕರೆಕೆ.ಎಂ.ಇಸ್ಮಾಯೀಲ್ ಕಂಡಕರೆ19 Oct 2026 2:34 PM IST
share
ಅಳಿವಿನಂಚಿನಲ್ಲಿ ‘ಯರವ’ ಬುಡಕಟ್ಟು ಜನಾಂಗ

ಮಡಿಕೇರಿ: ಕೊಡಗು ಜಿಲ್ಲೆಯ ವಿಶೇಷ ಬುಡಕಟ್ಟು ಜನಾಂಗವಾಗಿರುವ ‘ಯರವ’ ಸಮುದಾಯ ಕಾಲಕ್ರಮೇಣ ತನ್ನ ಜನಾಂಗವನ್ನು ಉಳಿಸಿಕೊಳ್ಳಲು ಸಾಧ್ಯವಾಗದೆ ಅಳಿವಿನಂಚಿನಲ್ಲಿದೆ.

ರಾಜ್ಯದಲ್ಲಿ ಅತೀ ಹೆಚ್ಚು ಯರವರು ಇರುವುದು ಕೊಡಗು ಜಿಲ್ಲೆಯ ದಕ್ಷಿಣ ಭಾಗಗಳಾದ ವಿರಾಜಪೇಟೆ, ಪೊನ್ನಂಪೇಟೆ ಭಾಗಗಳಲ್ಲಿ. ಇವರು ಮಲಯಾಳಂ ಹಾಗೂ ತಮಿಳು ಮಿಶ್ರಿತ ವಿಶೇಷ ಭಾಷೆಯನ್ನು ಮಾತನಾಡುತ್ತಾರೆ. ಅದಲ್ಲದೆ ಕೊಡವ ಭಾಷೆಯನ್ನೂ ಚೆನ್ನಾಗಿ ಮಾತನಾಡುವರು.

ಅರಣ್ಯ ಹಕ್ಕು ಕಾಯ್ದೆ ಬಂದ ನಂತರ ಯರವರು ಕಾಡು ಬಿಟ್ಟು ಕಾಡಿನಂಚಿನಲ್ಲಿರುವ ತೋಟಗಳ ಲೈನ್ ಮನೆಗಳಲ್ಲಿ ಕೂಲಿ ಮಾಡುತ್ತಾ ಆಸರೆ ಪಡೆಯುತ್ತಿದ್ದರು. ಆದರೆ, ಕೂಲಿಗಾಗಿ ಕಾಫಿ ತೋಟವನ್ನು ಬದಲಿಸುವ ಮೂಲಕ ಸ್ವಂತ ಸೂರಿಲ್ಲದೆ ಅಲೆಮಾರಿ ಜೀವನ ನಡೆಸುತ್ತಾ ಯರವರು ಸಂಪೂರ್ಣವಾಗಿ ಅಳಿವಿನಂಚಿನತ್ತ ಸಾಗುತ್ತಿದ್ದಾರೆ.

ಕುಡಿತದ ಚಟ: ಅನಕ್ಷರಸ್ಥೆಯಿಂದಾಗಿ ಕಾಫಿ ತೋಟದ ಲೈನ್ ಮನೆಗಳಿಗೆ ಸೀಮಿತಗೊಂಡಿರುವ ಯರವರು ಸಮಾಜದ ಮುಖ್ಯವಾಹಿನಿಯಲ್ಲಿ ಕಾಣಸಿಗುವುದೇ ಅಪರೂಪವಾಗಿದೆ. ತೋಟದಲ್ಲೇ ತಮ್ಮ ಬದುಕನ್ನು ಸೀಮಿತಗೊಳಿಸಿರುವ ಯರವರು ಕುಡಿತದ ಚಟದಿಂದಾಗಿ ತಮ್ಮ ಇಡೀ ಜೀವನವನ್ನೇ ಬಲಿಪಶು ಮಾಡುತ್ತಿದ್ದಾರೆ.

ಶಿಕ್ಷಣದಿಂದ ವಂಚಿತ: ಕಾಫಿ ತೋಟದಿಂದ ತೋಟಕ್ಕೆ ಬದುಕನ್ನೇ ಬದಲಾಯಿಸಿ ಬಡತನದಿಂದ ಅಲೆಮಾರಿ ಜೀವನ ನಡೆಸುತ್ತಿರುವ ಯರವರು ಶಿಕ್ಷಣದಿಂದ ವಂಚಿತರಾಗಿದ್ದಾರೆ. ನಿರ್ದಿಷ್ಟವಾಗಿ ಒಂದೇ ಕಡೆ ವಾಸ ಮಾಡದೆ ಜಿಲ್ಲೆಯಲ್ಲಿ ಅಲೆಮಾರಿಗಳಾಗಿ ಬದುಕು ಸಾಗಿಸುತ್ತಿರುವ ಯರವರಲ್ಲಿ ಎಸೆಸೆಲ್ಸಿ ಶಿಕ್ಷಣ ಪಡೆದವರೇ ವಿರಳ. ಪ್ರಾಥಮಿಕ ಶಿಕ್ಷಣ ಹಂತದಲ್ಲೇ ಶಿಕ್ಷಣವನ್ನು ಮೊಟಕುಗೊಳಿಸಿ ಮಕ್ಕಳು ಕೂಡ ತಮ್ಮ ಪೋಷಕರೊಂದಿಗೆ ಕಾಫಿ ತೋಟ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಯರವರ ಮಕ್ಕಳಲ್ಲಿ ವಿಶೇಷ ಹಾಡಿನ ಕಲೆ, ನೃತ್ಯ, ಕ್ರೀಡಾ ಚಟುವಟಿಕೆಗಳ ಪ್ರತಿಭೆ ಇದ್ದರೂ ತೋಟದೊಳಗೆ ಬದುಕು ಸೀಮಿತಗೊಂಡಿರುವುದರಿಂದ ಹೊರ ಪ್ರಪಂಚಕ್ಕೆ ತಿಳಿಯುತ್ತಿಲ್ಲ.

ಅಲ್ಲದೆ ಬೃಹತ್ತಾಕಾರದ ಮರವನ್ನೇರುವ ವಿಶೇಷ ಆಸಕ್ತಿ ಯರವ ಯುವಕರು ಮೈಗೂಡಿಸಿಕೊಂಡಿದ್ದಾರೆ. ಆದರೆ, ದೌರ್ಭಾಗ್ಯವೆಂದರೆ ಜಿಲ್ಲೆಯಲ್ಲಿ ದಾಖಲಾಗಿರುವ ಮರವೇರಿ ಬಿದ್ದು ಸಾವನ್ನಪ್ಪಿರುವ ಸಂಖ್ಯೆಯಲ್ಲಿ ಯರವ ಯುವಕರ ಸಂಖ್ಯೆಯೇ ಹೆಚ್ಚಿನ ಪ್ರಮಾಣದಲ್ಲಿ ಇದೆ.

ಬಾಲ್ಯ ವಿವಾಹದ ಪಿಡುಗು: ಶಿಕ್ಷಣದಿಂದ ವಂಚಿತ ಹಾಗೂ ಸಮಾಜದ ಬಗ್ಗೆ ಅರಿವೇ ಇಲ್ಲದ ಯರವ ಬುಡಕಟ್ಟು ಜನಾಂಗದವರಲ್ಲಿ ಬಾಲ್ಯವಿವಾಹದ ಪಿಡುಗಿಗೆ ಮುಕ್ತಿ ಸಿಕ್ಕಿಲ್ಲ. 14 ಮತ್ತು 15ನೇ ವಯಸ್ಸಿನಲ್ಲೇ ಹೆಣ್ಣು ಮಕ್ಕಳು ವಿವಾಹವಾಗುತ್ತಿದ್ದಾರೆ. ಸಣ್ಣಪ್ರಾಯದಲ್ಲೇ ಮಕ್ಕಳಿಗೆ ಜನ್ಮ ನೀಡುತ್ತಿರುವ ಯುವತಿಯರ ಸಂಖ್ಯೆಯೂ ಹೆಚ್ಚಿದೆ. ಅಲ್ಲದೆ, ವಿಚ್ಛೇದನ ಪ್ರಕರಣಗಳೂ ಹೆಚ್ಚಿದೆ. ಮತ್ತೊಂದೆಡೆ ತೋಟದ ಲೈನ್ ಮನೆಗಳಲ್ಲಿ ದಾಖಲಾಗುತ್ತಿರುವ ಪೊಕ್ಸೊ ಪ್ರಕರಣಗಳ ಸಂಖ್ಯೆಯಲ್ಲಿ ಯರವ ಜನಾಂಗದವರೇ ಹೆಚ್ಚಿನ ಸಂಖ್ಯೆಯಲ್ಲಿ ಸಂತ್ರಸ್ತರಾಗಿದ್ದಾರೆ ಎಂಬ ಆತಂಕಕಾರಿ ವಿಚಾರವೂ ವರದಿಯಾಗಿದೆ.

ಕೊಡಗು ಜಿಲ್ಲೆಯಲ್ಲಿರುವ ಕಾಫಿ ತೋಟಗಳು, ಅದರಲ್ಲೂ ವಿಶೇಷವಾಗಿ ದಕ್ಷಿಣ ಕೊಡಗಿನಲ್ಲಿರುವ ಕಾಫಿ ತೋಟಗಳು ಸಮೃದ್ಧಿ ಹೊಂದಲು ಯರವ ಜನಾಂಗದ ದುಡಿಮೆಯ ಒಂದು ಪಾಲು ಇದೆ ಎಂದರೆ ತಪ್ಪಾಗಲಾರದು. ಈ ಹಿಂದೆ ಯರವರು ಕಾಫಿ ತೋಟದಲ್ಲಿ ಕೆಲಸಕ್ಕೆ ಬಾರದಿದ್ದರೆ ತೋಟದ ಮಾಲಕ ತಲೆಯ ಮೇಲೆ ಕೈಇಡುವ ಪರಿಸ್ಥಿತಿ ಇತ್ತು. ಅಲ್ಲದೆ, ಯರವರು ಅಲೆಮಾರಿಗಳಾಗಿ ಬದುಕುತ್ತಿರುವುದರಿಂದ ಕಾಫಿ ತೋಟದ ಮಾಲಕರಿಂದ ಸಾಲ ಪಡೆಯುವಾಗ ತಮ್ಮ ದಾಖಲೆಗಳನ್ನು ಮಾಲಕನ ಬಳಿ ಅಡವಿಟ್ಟು ಸಾಲವನ್ನು ಪಡೆಯಬೇಕು. ಸಾಲವನ್ನು ತೀರಿಸಿಕೊಂಡಲ್ಲಿ ಮಾತ್ರ ತೋಟದ ಮಾಲಕ ತಮ್ಮ ಸರಕಾರಿ ದಾಖಲೆಗಳನ್ನು ನೀಡುತ್ತಾರೆ.

ಕಳೆದ ಒಂದು ದಶಕದಿಂದ ಉತ್ತರ ಭಾರತದವರು ಜಿಲ್ಲೆಯ ಬಹುತೇಕ ಕಾಫಿ ತೋಟಗಳಲ್ಲಿ ನೆಲೆ ಕಂಡುಕೊಂಡಿದ್ದಾರೆ. ಇದರಿಂದಾಗಿ ಯರವರು ತೋಟ ಕೆಲಸವನ್ನೂ ಕಳೆದುಕೊಳ್ಳುತ್ತಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿರುವ ನೆಲೆಸಿರುವ ವಿಶೇಷ ಬುಡಕಟ್ಟು ಸಮುದಾಯವಾಗಿರುವ ಮೂಲ ನಿವಾಸಿ ಯರವರ ಕುಲ ಸಂಪೂರ್ಣವಾಗಿ ಅಳಿವಿನಂಚಿನತ್ತ ಸಾಗಿದೆ. ವರ್ಷ ಕಳೆದಂತೆ ಯರವರ ಸಂಸ್ಕೃತಿ, ಆಚಾರ-ವಿಚಾರಗಳು ಕೊಡಗಿನಿಂದ ಕಣ್ಮರೆಯಾಗುತ್ತಿದೆ.

ಯರವ ಸಮುದಾಯವನ್ನು ರಾಜ್ಯ ಮತ್ತು ಕೇಂದ್ರ ಸರಕಾರಗಳು ಕಡೆಗಣಿಸಿದೆ. ಕಾರ್ಮಿಕರಾಗಿದ್ದರೂ ಇಲಾಖೆಗಳು ಗುರುತಿಸಲು ವಿಫಲವಾಗಿದೆ. ಯರವ ಸಮುದಾಯದ ಸಮಗ್ರ ಜನಗಣತಿ ಮಾಡಿ ಸೌಲಭ್ಯ ನೀಡುವಂತಾಗಬೇಕು. ಸಮುದಾಯದಲ್ಲಿ ಪ್ರತಿಭಾನ್ವಿತ ಯುವಕರು-ಯುವತಿಯರು, ವಿದ್ಯಾರ್ಥಿಗಳನ್ನು ಗುರುತಿಸಿ ನೌಕರಿಗೆ ಅರ್ಹರನ್ನಾಗಿ ಮಾಡುವ ಕರ್ತವ್ಯ ಸರಕಾರದ್ದು. ವಸತಿ ರಹಿತರನ್ನು ಗುರುತಿಸುವ ಕಾರ್ಯ ಮಾಡುವುದರೊಂದಿಗೆ ನಿವೇಶನ ಒದಗಿಸುವ ಕಾರ್ಯಕ್ಕೆ ಸರಕಾರ ಮುಂದಾಗಬೇಕು. ಜನಾಂಗ ಬಾಂಧವರನ್ನು ಒಂದೇ ವೇದಿಕೆಗೆ ಕರೆತಂದು ಅವರಿಗೆ ತಿಳಿದ ಭಾಷೆಯಲ್ಲಿ ಸರಕಾರದ ಸೌಲಭ್ಯಗಳು, ವಿದ್ಯಾಭ್ಯಾಸ, ಸ್ವಯಂ ಉದ್ಯೋಗ, ಕೃಷಿ ಪದ್ಧತಿಗಳ ಬಗ್ಗೆ ಸಮಗ್ರ ಮಾಹಿತಿ ನೀಡಿದ್ದಲ್ಲಿ ಸಾಮಾಜಿಕ ಹಾಗೂ ಆರ್ಥಿಕವಾಗಿ ಯರವ ಸಮುದಾಯ ಮುಂದೆ ಬರಲಿದೆ.

-ಮುತ್ತ, ಯರವ ಸಮುದಾಯದ ಹೋರಾಟಗಾರ

ಬಾಲ್ಯದಿಂದ ಅರಣ್ಯ ಉತ್ಪನ್ನಗಳನ್ನು ಸೇವಿಸಿ ಬದುಕು ಕಂಡುಕೊಂಡು ಜೀವನದ ಚಕ್ರ ಬದಲಾದಂತೆ ಆಹಾರ ಕ್ರಮಗಳು ಬದಲಾದವು. ಕೂಲಿಯೇ ಜೀವನವಾಗಿದೆ. ಬದುಕು ಸರಿದೂಗಿಸಲು ಪೋಷಕರೊಂದಿಗೆ ಶಾಲೆ ಮರೆತು ಕೂಲಿಯತ್ತ ಮುಖ ಮಾಡಿರುವುದರಿಂದ ಸಮಾಜದ ಆಗು-ಹೋಗುಗಳ ಬಗ್ಗೆ ಅರಿವು ಇಲ್ಲದಂತಾಯಿತು. ವಿದ್ಯೆಯ ಅರಿವು ಇಲ್ಲದಂತಾಯಿತು. ಜೀವನದಲ್ಲಿ ಒಂದು ಎರಡು ಬಾರಿ ಮಾತ್ರ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿದ್ದೆ. ಸಣ್ಣಪುಟ್ಟ ಕಾಯಿಲೆಗಳಿಗೆ ಮನೆಮದ್ದು ಅವಲಂಬಿಸಿದ್ದೇನೆ. 50 ವರ್ಷಗಳ ಹಿಂದೆ ಕಾಯಿಲೆಗ್ರಸ್ಥನಾಗಿ ಪತಿ ಮರಣ ಹೊಂದಿದ ಬಳಿಕ ಎರಡು ಮಕ್ಕಳೊಂದಿಗೆ ಊರೂರು ಸುತ್ತಿ ಜೀವನ ಸಾಗಿಸುತ್ತಾ ಬಂದಿದ್ದೇನೆ.

-ಪಣಿ ಯರವರ ಚೆನ್ನೆ, ಬೇಟೋಳಿ ಗ್ರಾಮ

ಸಮುದಾಯದಲ್ಲಿ ಬಾಲ್ಯವಿವಾಹ ಜಾರಿಯಲ್ಲಿತ್ತು. ಇಂದಿಗೂ ಮುಂದುವರಿದಿದೆ. ಮದುವೆ ಏನೆಂದು ಅರಿಯದ ವಯಸ್ಸಿನಲ್ಲಿ ನನ್ನ ವಿವಾಹವಾಗಿದೆ. ಅರಣ್ಯದ ಅಂಚಿನಲ್ಲಿರುವ ತೋಟಗಳ ಲೈನ್ ಮನೆಗಳಲ್ಲಿ ಜೀವನ ಸಾಗಿಸುತ್ತಾ ಇಂದಿಗೂ ಜೀವಿಸುತ್ತಿದ್ದೇವೆ. ಗಂಡು ಮಕ್ಕಳು ಪ್ರಾಯಕ್ಕೆ ಬರುವ ಮೊದಲು ಕುಡಿತದ ಚಟಕ್ಕೆ ದಾಸರಾಗಿ ಅಲ್ಪ ಆಯುಷ್ಯದಲ್ಲಿ ನಿಧನರಾಗುತ್ತಿದ್ದಾರೆ. ತಿಳಿ ಹೇಳಿಕೊಡುವ ಸಮಾಜ ಇದ್ದರೂ ಕಿವಿಕೊಡುವ ಗೋಜಿಗೆ ಹೋಗುತ್ತಿಲ್ಲ. ಇದರಿಂದಾಗಿ ಯರವ ಜನಾಂಗವು ಅವನತಿಯತ್ತ ಸಾಗಿದೆ. ಇದೀಗ ದಿನ ದೂಡುವುದೇ ಪ್ರಾಯಸದ ಕೆಲಸವಾಗಿದೆ.

-ಪಣಿ ಯರವರ ನಂಜಿ, ಕಡಂಗ ವಿರಾಜಪೇಟೆ

ನನ್ನ ಪೋಷಕರು ನನನ್ನು ಅಂಗನವಾಡಿಗೆ ದಾಖಲಿಸಿದ್ದರು. ನಂತರ ನಾನು ಶಾಲೆಗೆ ಹೋಗಲಿಲ್ಲ. ಮನೆಯ ವಾತಾವರಣ, ಕೂಲಿ ಕಾಯಕದಿಂದ ಜೀವನ ಸಾಗಿದೆ. ಮಕ್ಕಳನ್ನು ತೋಟಗಳಿಗೆ ಕರೆದುಕೊಂಡು ಹೋಗುತ್ತಿದ್ದೆ. ಇದರಿಂದ ತೋಟದ ಕೆಲಸವನ್ನು ಮಕ್ಕಳು ಬೇಗ ಕಲಿಯುತ್ತಿದ್ದಾರೆ. ಶಾಲೆಯತ್ತ ಮುಖ ಮಾಡಲು ಹಿಂದೇಟು ಹಾಕಿದ್ದ ಪರಿಣಾಮ ವಿದ್ಯೆಯ ಅರಿವು ಇಲ್ಲದೆ ಸಣ್ಣ ಪ್ರಾಯದಲ್ಲಿ ಹೆಣ್ಣು ಮಕ್ಕಳು ಗರ್ಭ ಧರಿಸುವುದು ಮತ್ತು ಗಂಡು ಮಕ್ಕಳು ಬಹುಬೇಗ ಕುಡಿತಕ್ಕೆ ದಾಸರಾಗುವುದು ನಮ್ಮ ಸಮುದಾಯದಲ್ಲಿದೆ. ಹೊಸದಾಗಿ ಇದೀಗ ಸಮುದಾಯವನ್ನು ಮರೆತು, ಸಮಾಜದಲ್ಲಿ ಸ್ಥಾನಮಾನ ಹೊಂದುವ ತವಕದಲ್ಲಿ ಧರ್ಮವನ್ನು ಮರೆತು ಇತರ ಧರ್ಮಕ್ಕೆ ಮತಾಂತರ ಹೊಂದುತ್ತಿರುವುದರಿಂದ ಸಮುದಾಯವು ಅಳಿವಿನಂಚಿನಲ್ಲಿದೆ.

-ಪಣಿ ಯರವರ ಪೊನ್ನಮ್ಮ, ಆರ್ಜಿ ಗ್ರಾಮ ವಿರಾಜಪೇಟೆ

ಕರ್ನಾಟಕದ ಬುಡಕಟ್ಟು ಸಮುದಾಯಗಳಲ್ಲಿ ‘ಯರವ’ ವಿಶಿಷ್ಟವಾದ ಸಮುದಾಯವಾಗಿದೆ. 2011ರ ಜನಗಣತಿಯ ಪ್ರಕಾರ ಕರ್ನಾಟಕದಲ್ಲಿ ಸುಮಾರು ಒಟ್ಟು ಜನಸಂಖ್ಯೆ 30,359. ಅದರಲ್ಲಿ ಪುರುಷರು-14,862, ಮಹಿಳೆಯರು-15,497. ಕೊಡಗು ಜಿಲ್ಲೆಯೊಂದರಲ್ಲೇ 26,533 ಹಾಗೂ ಮೈಸೂರು ಜಿಲ್ಲೆಯಲ್ಲಿ 1,959ರಷ್ಟು ಜನ ವಾಸವಿದ್ದಾರೆ. ಆದರೆ ಪ್ರಸಕ್ತ ದಿನಗಳಲ್ಲಿ ಕೊಡಗಿನಲ್ಲಿ ಯರವರ ಬುಡಕಟ್ಟು ಸಮುದಾಯದ ಜನ ಸಂಖ್ಯೆ ಕಡಿಮೆಯಾಗುತ್ತಾ ಬಂದಿದೆ.

ಯರವರು ಪರಿಶಿಷ್ಟ ಪಂಗಡಕ್ಕೆ ಸೇರುತ್ತಾರೆ. ಯರವರಲ್ಲಿ ಪಂಜರಿ ಯರವ, ಪಣಿ ಅಥವಾ ಪಣೆಯ ಯರವ, ಬಡಗ ಅಥವಾ ಬಡಗಿಯರವ ಕಾಗಿ ಅಥವಾ ಕಾಗಿಯರವ ಎಂಬ ನಾಲ್ಕು ಪಂಗಡಗಳು ಇದ್ದರೂ ಪಣೆಯ ಯರವ, ಪಂಜರಿಯರವ ಮಾತ್ರ ಹೆಚ್ಚಾಗಿ ಇದ್ದಾರೆ.

ಯರವ, ಪಣಿ, ಪಂಜರಿ ಯರವ ಅಥವಾ ಎರವ ಎಂಬ ಪದನಿಷ್ಪತ್ತಿಯನ್ನು ನೋಡಿದಾಗ ಇದು ಕೊಡವ ಭಾಷೆಯಿಂದ ಬಂದಿದ್ದು, ಭೂರಹಿತರಾಗಿದ್ದ ಇವರು ಕೂಲಿಗಾಗಿ ಕೊಡವರ ತೋಟಗಳಲ್ಲಿ ಜೀತದಾಳುಗಳಾಗಿದ್ದರು. ಕೊಡವರು ಇವರಿಗೆ ಇಟ್ಟ ಹೆಸರೇ ಎರವ/ಯರವ. ಕೊಡವ ಭಾಷೆಯಲ್ಲಿ ಎರವು ಎಂದರೆ ಸಾಲ, ಎರವಿಗೆ ಎಂದರೆ ಸಾಲಕ್ಕಾಗಿ ಒತ್ತೆ ಇರಿಸಿಕೊಂಡವನು ಎಂಬ ಅರ್ಥ ಬರುತ್ತದೆ.

ಕಾಗ ಅಥವಾ ಕಾಗಿಯರವರು ಪಣಿಯನ್ ಬುಡಕಟ್ಟಿನ ಒಂದು ಉಪಶಾಖೆ. ಬಡಗ ಅಥವಾ ಬಡಗಿಯರವರು ಒಂದು ಪ್ರತ್ಯೇಕ ಬುಡಕಟ್ಟು ಇವರು ಮೈಸೂರು ಜಿಲ್ಲೆಯ ಎಚ್.ಡಿ. ಕೋಟೆ ತಾಲೂಕಿನ ಅನುಸಾಸಿನ ಅರಣ್ಯದಲ್ಲಿ ಕಾಣಸಿಗುವ ಸೋಲಿಗ ಬುಡಕಟ್ಟಿನ ಉಪಶಾಖೆಯಾದ ದೇವಸೋಲಿಗರು. ಇವರು ಕನ್ನಡವನ್ನು ತಮ್ಮ ಮನೆ ಮಾತಾಗಿಸಿಕೊಂಡಿದ್ದಾರೆ. ಮೈಸೂರು ರಾಜರು ಕೊಡಗಿನ ಅರಸರ ಮೇಲೆ ದಂಡೆತ್ತಿಹೋದ ದಂಡುಗಳು ಕಾಲಾನು ಕ್ರಮದಲ್ಲಿ ಕೊಡಗಿನಲ್ಲೇ ಉಳಿದರು ಇವರನ್ನು ಸ್ಥಳೀಯರು ಬಡಗಯರವ ಎಂದು ಕರೆದರು.

share
ಕೆ.ಎಂ.ಇಸ್ಮಾಯೀಲ್ ಕಂಡಕರೆ
ಕೆ.ಎಂ.ಇಸ್ಮಾಯೀಲ್ ಕಂಡಕರೆ
Next Story
X