Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ‘ಬೇಸಿಗೆ’ ಚುನಾವಣೆಯ ಮುಖ್ಯ ವಿಷಯವಾಗಲಿ

‘ಬೇಸಿಗೆ’ ಚುನಾವಣೆಯ ಮುಖ್ಯ ವಿಷಯವಾಗಲಿ

ವಾರ್ತಾಭಾರತಿವಾರ್ತಾಭಾರತಿ14 April 2018 12:19 AM IST
share
‘ಬೇಸಿಗೆ’ ಚುನಾವಣೆಯ ಮುಖ್ಯ ವಿಷಯವಾಗಲಿ

ರಾಜ್ಯದಲ್ಲಿ ಚುನಾವಣೆಯ ಕಾವು ಬೇಸಿಗೆಯ ಜೊತೆಗೆ ಸ್ಪರ್ಧೆಗಿಳಿದಿದೆ. ಈ ಬಾರಿಯ ಚುನಾವಣೆ ಬೇಸಿಗೆಯಲ್ಲಿ ನಡೆಯುತ್ತಿರುವುದರಿಂದ ಯಾವ ಪಕ್ಷ ನೀರಿನ ವಿಷಯವನ್ನಿಟ್ಟು ಚುನಾವಣೆಯನ್ನೆದುರಿಸುತ್ತದೆಯೋ ಅದನ್ನೇ ನಾವು ಬೆಂಬಲಿಸಬೇಕಾದ ಸನ್ನಿವೇಶದಲ್ಲಿ ನಿಂತಿದ್ದೇವೆ. ಒಂದು ಕಾಲದಲ್ಲಿ ಬೇಸಿಗೆಯೆಂದು ಕರೆಯುತ್ತಿದ್ದ ಕಾಲ ಇಂದು ‘ಬರಗಾಲ’ವಾಗಿ ಗುರುತಿಸಲ್ಪಡುತ್ತಿದೆ. ಬೇಸಿಗೆಯ ಧಗೆ ರಾಜ್ಯವನ್ನು ಮಾತ್ರವಲ್ಲ, ಇಡೀ ದೇಶವನ್ನೇ ನಿಧಾನಕ್ಕೆ ಆಹುತಿ ತೆಗೆದುಕೊಳ್ಳುತ್ತಿದೆ. ಪ್ರತಿ ಬೇಸಿಗೆಯಲ್ಲಿ ನೀರಿನ ಕೊರತೆ ಎದುರಾಗುತ್ತದೆ. ಆದರೆ ಈ ಬಾರಿ ನೀರಿನ ಸಮಸ್ಯೆ ಇನ್ನಷ್ಟು ದೊಡ್ಡ ಸವಾಲಾಗಿ ನಮ್ಮನ್ನು ಕಾಡುವ ಎಲ್ಲ ಸೂಚನೆಗಳು ಕಾಣುತ್ತಿವೆ.

 ಮಾರ್ಚ್ 15ಕ್ಕೆ ಕೊನೆಗೊಂಡ ವಾರಾಂತ್ಯದಲ್ಲಿ ದೇಶದ 19 ಪ್ರಮುಖ ಜಲಾಶಯಗಳಲ್ಲಿ ನೀರಿನ ಸಂಗ್ರಹವು ಅವುಗಳ ಒಟ್ಟು ಸಂಗ್ರಹ ಸಾಮರ್ಥ್ಯದ ಕೇವಲ 32 ಶೇಕಡದಷ್ಟಾಗಿದೆಯೆಂದು ಕೇಂದ್ರೀಯ ಜಲ ಆಯೋಗ ತಿಳಿಸಿದೆ. ನೀರಿನ ಸಂಗ್ರಹವು ಕಳೆದ ವರ್ಷ ಇದೇ ಅವಧಿಯಲ್ಲಿದ್ದುದಕ್ಕಿಂತ ಶೇ.12ರಷ್ಟು ಕಡಿಮೆಯಾಗಿದೆ ಹಾಗೂ ಕಳೆದ 10 ವರ್ಷಗಳಲ್ಲಿ ಇದ್ದ ಸರಾಸರಿಗಿಂತ ಶೇ.10ರಷ್ಟು ಕಡಿಮೆಯಾಗಿದೆಯೆಂದು ಇಲಾಖೆ ತಿಳಿಸಿದೆ.

2018ರಲ್ಲಿ ಬೇಸಿಗೆಯು ಅತ್ಯಂತ ಕಠೋರವಾಗಿರುವುದೆಂದು ಭಾರತೀಯ ಹವಾಮಾನ ಇಲಾಖೆ ಈಗಾಗಲೇ ಭವಿಷ್ಯ ನುಡಿದಿದೆ ಹಾಗೂ ತಾಪಮಾನವು ದೀರ್ಘಾವಧಿಯ ಸರಾಸರಿಗಿಂತ 0.5 ಡಿಗ್ರಿ ಸೆಂಟಿಗ್ರೇಡ್‌ನಿಂದ 1 ಡಿಗ್ರಿ ಸೆಂಟಿಗ್ರೇಡ್ ಅಧಿಕವಾಗಿರುವುದೆಂದು ಹೇಳಿದೆ. ಜಮ್ಮುಕಾಶ್ಮೀರ, ಪಂಜಾಬ್, ಹಿಮಾಚಲಪ್ರದೇಶ, ರಾಜಸ್ಥಾನ, ಉತ್ತರಾಖಂಡ, ಉತ್ತರಪ್ರದೇಶ, ಮಧ್ಯಪ್ರದೇಶ, ಗುಜರಾತ್ ಹಾಗೂ ಅರುಣಾಚಲ ಪ್ರದೇಶ ರಾಜ್ಯಗಳಲ್ಲಿ ತಾಪಮಾನವು ಋತುವಿನ ಸಾಮಾನ್ಯ ತಾಪಮಾನಕ್ಕಿಂತ 1 ಡಿಗ್ರಿ ಸೆಂಟಿಗ್ರೇಡ್‌ನಷ್ಟು ಹೆಚ್ಚಾಗಿದೆ. ತಮಿಳುನಾಡು, ಕರ್ನಾಟಕ ಹಾಗೂ ಆಂಧ್ರಪ್ರದೇಶದ ಭಾಗಗಳಲ್ಲಿ ಕೂಡಾ ತಾಪಮಾನವು ದೀರ್ಘಾವಧಿಯ ಸರಾಸರಿಗಿಂತ 0.5 ಡಿಗ್ರಿ ಸೆಂಟಿಗ್ರೇಡ್ ಹಾಗೂ 1 ಡಿಗ್ರಿ ಸೆಂಟಿಗ್ರೇಡ್ ನಡುವೆ ಹೆಚ್ಚಾಗುವ ಸಾಧ್ಯತೆಯಿದೆ.

ಪಶ್ಚಿಮ ಕರಾವಳಿಯ ಕೊಂಕಣ ಪ್ರಾಂತ ಹಾಗೂ ಮಧ್ಯಭಾರತದ ಬುಂದೇಲ್‌ಖಂಡ ಸೇರಿದಂತೆ ದೇಶದ ಕೆಲವು ಭಾಗಗಳಲ್ಲಿ ತಾಪಮಾನವು ಎಷ್ಟು ತೀವ್ರವಾಗಿ ಏರಿಕೆಯಾಗಿದೆಯೆಂದರೆ, ಬೇಸಿಗೆಯು ಕಾಲಿಡುವ ಮೊದಲೇ ಉಷ್ಣಮಾರುತವು ಬೀಸಲಿದೆಯೆಂದು ಹವಾಮಾನ ಇಲಾಖೆ ಘೋಷಿಸಿದೆ. ಮಾರ್ಚ್‌ನಿಂದ ಮೇವರೆಗಿನ ಅವಧಿಯಲ್ಲಿ ಬಿಸಿ ಮಾರುತ ವಲಯದಲ್ಲಿ ತಾಪಮಾನವು ಈ ವರ್ಷ ಗರಿಷ್ಠ ಮಟ್ಟಕ್ಕೆ ತಲುಪಲಿದೆಯೆಂದು ಹವಾಮಾನ ಇಲಾಖೆ ಹೇಳಿದೆ. ಅಂದರೆ ಮುಂಬರುವ ತಿಂಗಳುಗಳಲ್ಲಿ ಭಾರತವು ವ್ಯಾಪಕವಾಗಿ ಬಿಸಿಮಾರುತವನ್ನು ಎದುರಿಸುವ ಸಾಧ್ಯತೆಗಳು ಅಧಿಕವಾಗಿವೆ.

ದಿಲ್ಲಿ, ಪಂಜಾಬ್, ಹಿಮಾಚಲಪ್ರದೇಶ, ಉತ್ತರಾಖಂಡ, ಹರ್ಯಾಣ, ರಾಜಸ್ಥಾನ, ಉತ್ತರಪ್ರದೇಶ, ಗುಜರಾತ್, ಮಧ್ಯಪ್ರದೇಶ, ಛತ್ತೀಸ್‌ಗಡ, ಬಿಹಾರ, ಜಾರ್ಖಂಡ್, ಪಶ್ಚಿಮ ಬಂಗಾಳ, ಒಡಿಶಾ, ಮಹಾರಾಷ್ಟ್ರ, ತೆಲಂಗಾಣ ಹಾಗೂ ಆಂಧ್ರಪ್ರದೇಶ ರಾಜ್ಯಗಳು ಕೂಡಾ ತೀವ್ರವಾದ ಬಿಸಿಗಾಳಿಗೆ ತುತ್ತಾಗುವ ಸಾಧ್ಯತೆಯಿದೆ.

ನೀರಿನ ಕಡಿಮೆ ಲಭ್ಯತೆಯೊಡಗೂಡಿದ ಅಧಿಕ ತಾಪಮಾನವು ದೇಶದ ಹೆಚ್ಚಿನ ಭಾಗಗಳಲ್ಲಿ ಬಿಕ್ಕಟ್ಟನ್ನು ಸೃಷ್ಟಿಸಲಿದೆ. ದಕ್ಷಿಣ ಹಾಗೂ ಉತ್ತರದ ಪ್ರಾಂತದ ಜಲಾಶಯಗಳಲ್ಲಿ ನೀರಿನ ಸಂಗ್ರಹವು ಕ್ರಮವಾಗಿ ಒಟ್ಟು ಸಂಗ್ರಹ ಸಾಮರ್ಥ್ಯದ ಶೇ.25 ಹಾಗೂ ಶೇ.23ರಷ್ಟಿದೆಯೆಂದು ಕೇಂದ್ರ ಜಲ ಆಯೋಗ (ಸಿಡಬ್ಲುಸಿ) ಹೇಳಿದೆ. ನೀರಿನ ನಿರ್ವಹಣೆಯ ವಿಷಯದಲ್ಲಿ ರಾಜ್ಯಗಳು ವಿವೇಕವನ್ನು ಪ್ರದರ್ಶಿಸಬೇಕಾದ ಅಗತ್ಯವಿದೆಯೆಂದು ಸಿಡಬ್ಲುಸಿಯ ಅಧ್ಯಕ್ಷ ಎಸ್. ಮಸೂದ್ ಹುಸೈನ್ ಕಿವಿಮಾತು ಹೇಳಿದ್ದಾರೆ.

ಈ ವರ್ಷದ ಜನವರಿ ಹಾಗೂ ಫೆಬ್ರವರಿಯಲ್ಲಿ ಸುರಿದ ಮಳೆಯ ಪ್ರಮಾಣದಲ್ಲಿ ಹಿಂದಿಗಿಂತ ಶೇ.16.5ರಷ್ಟು ಕುಸಿತವಾಗಿರುವುದು ದೇಶದ ಐದು ಪ್ರಾಂತಗಳ ಜಲಾಶಯಗಳಲ್ಲಿ ನೀರಿನ ಮಟ್ಟ ತೀರಾ ಕಡಿಮೆಯಾಗಿರುವುದಕ್ಕೆ ಕಾರಣವೆಂದು ಹವಾಮಾನ ಇಲಾಖೆಯ ದತ್ತಾಂಶಗಳು ತಿಳಿಸಿವೆ.

ಇದಕ್ಕೆ ಪೂರಕವಾಗಿ ಮಳೆಯ ಕೊರತೆಯು ದೇಶದ ಬಹುತೇಕ ಎಲ್ಲಾ ನದಿ ತಪ್ಪಲುಗಳಲ್ಲಿ ನೀರಿನ ಲಭ್ಯತೆಯು ಕುಸಿಯುವಂತೆ ಮಾಡಿದೆ. ಗಂಗಾ ತಪ್ಪಲಿನಲ್ಲಿ ನೀರಿನ ಪ್ರಮಾಣವು ಶೇ.16.5ರಷ್ಟು ಕುಸಿದಿದೆ. ನರ್ಮದಾ ನದಿ ತಪ್ಪಲಿನಲ್ಲಿ ಪರಿಸ್ಥಿತಿ ಎಷ್ಟು ವಿಕೋಪಕ್ಕೆ ತಲುಪಿದೆಯೆಂದರೆ ಮಾರ್ಚ್ 15ರಂದು ಅಧಿಕಾರಿಗಳು ಸರ್ದಾರ್ ಸರೋವರ ಅಣೆಕಟ್ಟಿನಿಂದ ನೀರಾವರಿಗೆ ನೀರನ್ನು ಬಿಡುಗಡೆಗೊಳಿಸುವುದನ್ನು ನಿಲ್ಲಿಸಿಬಿಟ್ಟಿದ್ದಾರೆ ಹಾಗೂ ಬೇಸಿಗೆಯ ಬೆಳೆಗಾಗಿ ಬಿತ್ತನೆ ಮಾಡದಂತೆಯೂ ಅವರು ನೀರಿನ ಅಭಾವದಿಂದ ತತ್ತರಿಸುತ್ತಿರುವ ರೈತರಿಗೆ ಸಲಹೆ ನೀಡಿದ್ದಾರೆ. ಈ ವರ್ಷ ನೀರಿನ ಬಿಕ್ಕಟ್ಟು ಕೇವಲ ಕೃಷಿ ವಲಯಕ್ಕೆ ಸೀಮಿತವಾಗಿಲ್ಲ. ಭಾರತದ ಬಹುತೇಕ ನಗರಗಳ ಸುತ್ತಮುತ್ತ ವ್ಯಾಪಕವಾಗಿ ಅಂತರ್ಜಲ ಕುಸಿದಿರುವುದು ಕೂಡಾ ಪ್ರಸಕ್ತ ಪರಿಸ್ಥಿತಿಯ ಅತ್ಯಂತ ಶೋಚನೀಯ ಚಿತ್ರಣವನ್ನು ನೀಡಿದೆ.

ಉದಾಹರಣೆಗೆ ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ನೀರಿನ ಕೊರತೆಯಿಂದ ನಳ್ಳಿಗಳು ಒಣಗಿಹೋಗುವಂತಹ ಝಿರೋ ಡೇ (ಶೂನ್ಯ ದಿನ)ವನ್ನು ಎದುರಿಸುವ ಪರಿಸ್ಥಿತಿ ಬರಲಿದೆ. ಇದೇ ಪರಿಸ್ಥಿತಿಯನ್ನು ದಕ್ಷಿಣ ಆಫ್ರಿಕಾದ ನಗರವಾದ ಕೇಪ್‌ಟೌನ್ ಕೂದಲೆಳೆಯ ಅಂತರದಲ್ಲಿ ತಪ್ಪಿಸಿಕೊಂಡಿತ್ತು ಎಂದು ಹೊಸದಿಲ್ಲಿಯ ವಿಜ್ಞಾನ ಹಾಗೂ ಪರಿಸರ ಕೇಂದ್ರ ತಿಳಿಸಿದೆ. ಈ ಎಲ್ಲ ಹಿನ್ನೆಲೆಯಲ್ಲಿ ಈ ಬಾರಿಯ ಚುನಾವಣೆಯಲ್ಲಿ ನಮ್ಮ ಜನಪ್ರತಿನಿಧಿಗಳು ನೀರನ್ನೇ ಪ್ರಧಾನ ವಿಷಯವಾಗಿಟ್ಟುಕೊಂಡು ಚುನಾವಣೆಯನ್ನು ಎದುರಿಸಬೇಕು. ಮುಂದಿನ ದಿನಗಳಲ್ಲಿ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಎದುರಾಗುವ ನೀರಿನ ಸಮಸ್ಯೆಯನ್ನು ಎದುರಿಸಲು ತಮ್ಮಲ್ಲಿರುವ ಯೋಜನೆಗಳ ಬಗ್ಗೆ ವಿವರಗಳನ್ನು ನೀಡಬೇಕು. ಪ್ರಣಾಳಿಕೆಗಳಲ್ಲಿ ನೀರೇ ಆದ್ಯತೆಯನ್ನು ಪಡೆಯಬೇಕು. ಉಳಿದೆಲ್ಲ ಭಾವನಾತ್ಮಕ ವಿಷಯಗಳು ನಮ್ಮ ಬಾಯಾರಿಕೆಯನ್ನು ತಣಿಸಲಾರವು. ನಮ್ಮ ಕೃಷಿಯನ್ನು ಉಳಿಸಲಾರವು. ಈ ನಾಡಿನ ಒಡಲನ್ನು ಸುಡುತ್ತಿರುವ ಬೆಂಕಿಗೆ ನೀರಲ್ಲದೆ ಇನ್ನಾವ ಪರಿಹಾರವೂ ಇಲ್ಲ. ಜನರು ಇದನ್ನು ಅರಿತುಕೊಂಡು ಈ ಬಾರಿಯ ಮತವನ್ನು ನೀಡಬೇಕಾಗಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X