Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಪೊಲೀಸರನ್ನು ಕಾಡುವ ಯುವಭುಜಗಳು

ಪೊಲೀಸರನ್ನು ಕಾಡುವ ಯುವಭುಜಗಳು

ಯೋಗೇಶ್ ಮಾಸ್ಟರ್ಯೋಗೇಶ್ ಮಾಸ್ಟರ್17 April 2022 11:26 AM IST
share
ಪೊಲೀಸರನ್ನು ಕಾಡುವ  ಯುವಭುಜಗಳು

ಯಾವ ವಯೋಮಿತಿಯ ವರ್ಗ ನಿಮ್ಮನ್ನು ಕಾಡುವುದು ಎಂದು ಕೇಳಿದರೆ ಪೋಲಿಸರಿಂದ ತಡವಿಲ್ಲದಂತೆ ಬರುವ ಉತ್ತರ ‘‘ಯುವಕರು’’!ಬೆದೆಗೆ ಬಂದ ಬೆಕ್ಕನ್ನೇ ತಡೆದು ಕಟ್ಟಿಡಲಾಗದ ಅನುಭವ ಉಳ್ಳ ನಮಗೆ ಪೋಲಿಸರ ಬಾಧೆ ಅರ್ಥವಾಗದೇ?

ಹೌದೌದು, ಯಾವುದೇ ಗುಂಪು ಗಲಭೆಗಳೆದ್ದರೆ ಅದರಲ್ಲಿ ಬಹುಪಾಲು ಮಂದಿ ಯುವಕರೇ!! ಪಾರ್ಕಿನಲ್ಲಿ ಪ್ರೇಮಪ್ರಕರಣ, ಬಾರ್‌ನಲ್ಲಿ ಕಿರಿಕ್ ಪ್ರಕರಣ, ಕಾಲೇಜಿನಲ್ಲಿ ಪ್ರೀತ್ಸೆ ಪ್ರೀತ್ಸೇ ಹಗರಣ, ಸ್ಪೀಡ್ ಥ್ರಿಲ್ಸ್ ಬಟ್ ಕಿಲ್ಸ್ ನಂತರ ಮರಣ, ಬಟ್ಟೆ ಹರಿದುಕೊಂಡು ಹೊಡೆದಾಡಿಕೊಳ್ಳಲಿರುವ ರಾಜಕೀಯ ಬಣ; ಹೀಗೆ ಯಾವುದರಲ್ಲೇ ಆದರೂ ಯುವಕರದು ಹೆಚ್ಚಿನ ಪ್ರಮಾಣ. ಹೊಗಳಿಕೆಯ ಹೊನ್ನ ಶೂಲದ ಚೈತನ್ಯ

ಏಕೆ ಹೀಗಾಯ್ತೋ ನಾನು ಕಾಣೆನು ಎಂದು ಕಣ್ಣರಳಿಸಿದ ನನಗೆ ಪೊಲೀಸ್ ಮಿತ್ರರು ಹೇಳಿದ್ದು ಏನೆಂದರೆ, ‘‘ಈ ಯುವಕರಿಗೆ ಉಬ್ಬಿಸಿದರೆ ಆಯಿತು. ಅವರ ಶಕ್ತಿ ಸಾಮರ್ಥ್ಯದ ಬಗ್ಗೆ ಹೊಗಳಿದರೆ, ಅದನ್ನು ಪ್ರದರ್ಶಿಸಲು ಇನ್ನಿಲ್ಲದ ಉತ್ಸಾಹ ತೋರುತ್ತಾರೆ. ಅದಕ್ಕೇ ರಾಜಕಾರಣಿಗಳು ಬಿಸ್ಕೆಟ್‌ಗಳನ್ನು ಹಾಕುತ್ತಾ ಅವರ ತಲೆ ಸವರುತ್ತಿರುವುದು. ಅವರ ಭುಜ ಭದ್ರವಾಗಿರುತ್ತದೆ ಎಂದೇ ಅನೇಕ ಬಂದೂಕುಗಳು ಅವುಗಳ ಮೇಲೆ ಇಡಲ್ಪಟ್ಟು ಕುದುರೆ ಹಾರಿಸಲಾಗುತ್ತದೆ. ಆಗ ವಿಚಾರಣೆಗೆ ಒಳಗಾಗುವುದೆಲ್ಲಾ ಬಂದೂಕು ಹಾರಿಸಿದವರಲ್ಲ, ಆದರೆ ಭುಜ ಕೊಟ್ಟವರು. ರಕ್ಷೆ ಸಿಗುವ ಭರವಸೆಯಿಂದ ಕಕ್ಷೆ ದಾಟಿದ್ದು ಶಿಕ್ಷೆ ಪಡೆಯುತ್ತಾರೆ’’!! ಹೌದಲ್ಲಾ, ಈಗಷ್ಟೇ ಬಲಿಯುತ್ತಿರುವ ಈ ಯುವಭುಜಗಳು ಬರಿಯ ರಾಜಕಾರಣಿಗಳಿಗೆ ಮಾತ್ರ ಬೇಕಾಗಿರುವುದಿಲ್ಲ. ಧಾರ್ಮಿಕ ಮೂಲಭೂತವಾದಿಗಳಿಗೆ, ಭೂಗತ ಪಾತಕಿಗಳಿಗೆ, ಬೆಳ್ಳಿಪರದೆಯ ಕಾಗದದ ಹುಲಿಗಳಿಗೆ, ಕಾಳಸಂತೆಯ ವಸ್ತುವಾಹಕರಿಗೆ; ಜೊತೆಗೆ ಇದೇ ಬಲಿಯುತ್ತಿರುವ ಭುಜಗಳು ಪ್ರಾಮಾಣಿಕ ಚಳವಳಿಗಳಿಗೆ, ಹೋರಾಟಗಳಿಗೆ, ಸಮಾಜದ ಭವಿಷ್ಯವ ಕಟ್ಟುವ ಕಾರಣಗಳಿಗೆ, ಮನೆಯನ್ನು ಕಟ್ಟಿಸಬೇಕಾಗಿರುವ ತಂದೆಗೆ, ಸೋದರಿಯರ ಮದುವೆಯ ಚಪ್ಪರಗಳಿಗೆ ಕೂಡ ನೆರವಾಗಬೇಕಿವೆ. ನಲವತ್ತರ ನಂತರ ರೌಡಿಶೀಟ್ ಓಪನ್ ಆಗುವುದು ಅದೆಷ್ಟು ಕಡಿಮೆಯೋ, ಇಪ್ಪತ್ತರಿಂದ ಇಪ್ಪತ್ತೈದರ ಒಳಗೆ ಓಪನ್ ಆಗುವ ರೌಡಿಶೀಟ್‌ಗಳು ಅತ್ಯಂತ ಹೆಚ್ಚು. ಇದರಲ್ಲೂ ಸಂಭ್ರಮಿಸುವ ಯುವಕರಿಗೆ ಅರವಳಿಕೆಯೆಂದರೆ ಹೊಗಳಿಕೆಯ ಹೊನ್ನ ಶೂಲದ ಚೈತನ್ಯ!! ನೀನು ಹಾಗೆ ಹೀಗೆ, ನೀನು ಅವನಿಗಿಂತ ಏನು ಕಮ್ಮಿ, ನೀನು ಮನಸ್ಸು ಮಾಡಿದರೆ ಎತ್ತೇ ಬಂದುಬಿಡ್ತೀಯಾ, ನೀನು ಈಗ ಈ ಒಂದು ಕೆಲಸ ಮಾಡೋ ಧೈರ್ಯ ಮಾಡಿದರೆ, ಮುಂದೆ ಲೈಫ್ ಲಾಂಗ್ ಸೆಟ್ಲ್ ಆಗಿಬಿಡ್ತೀಯಾ ಅಂತೆಲ್ಲಾ ಹೊಗಳಿಕೆಯ ಅರವಳಿಕೆಯನ್ನು ಪಡೆದು, ಯಾವ ಭಾವ, ಬಾವು, ನೋವುಗಳನ್ನೂ ಆಗುತ್ತಿದೆಯೆಂದೇ ತಿಳಿಯದ ಅಸೂಕ್ಷ್ಮರಾಗುತ್ತಾ ಮನೆಗೂ ಮಾರಿ, ಬೀದಿಗೂ ಮಾರಿಯಾಗಿ ಏಮಾರಿ ಬಿಕರಿಯಾಗುವ ಯುವಕರೇ ನಮೋ ಎಂದು ಕಣ್ಮುಚ್ಚಿಕೊಂಡು ಯಾವುದೇ ಬ್ರಿಗೇಡ್‌ಗಳಲ್ಲಿ ನುಗ್ಗುತ್ತಿರುವುದು, ಪ್ರಖರ ವಾಗ್ಮಿಗಳ ವಾಕ್ಸೆಳತಗಳ ಉರುಳಿಗೆ ಸಿಕ್ಕಿಬೀಳುವುದು. ಗುರಿಗಳೂ ಮತ್ತು ಬಕರಿಗಳೂ

ಹಾಳಾದ ಕಿಶೋರಾವಸ್ಥೆಯಲ್ಲಿ ಪುಟಿಯುವ ಚೈತನ್ಯದ ಚಿಲುಮೆಯನ್ನು ಅದು ಪುಟಿಯುವ ಮಟ್ಟಕ್ಕೆ ಏರ ಬಿಡದ ಪೋಷಕರು, ಶಿಕ್ಷಕರು ಜೊತೆಗೆ ಸಮಾಜದ ಇತರ ಸಂಸ್ಥೆಗಳು ಹುಲಿವೇಷಕ್ಕೆ ಹಗ್ಗ ಹಾಕಿರುತ್ತಾರೆ, ಗಾಳಿಪಟದ ಸೂತ್ರ ಹಿಡಿದಿರುತ್ತಾರೆ. ಅದುಮಿಟ್ಟುಕೊಂಡಿರುವ ಅದಮ್ಯ ಶಕ್ತಿಯನ್ನು ಅದೆಂದಿಗೆ ಉಡಾಯಿಸುವೆವೋ ಎಂದು ಅವಕಾಶಕ್ಕೆ ಕಾಯುತ್ತಿರುವ ಅಮಾಯಕರೇ ಹೊಗಳಿಕೆಯ ಹೊನ್ನ ಶೂಲದ ಗುರಿಗಳು ಮತ್ತು ಬಕರಿಗಳು.

ಡ್ರಾಗ್ ರೇಸ್ ಮತ್ತು ವ್ಹೀಲಿಂಗ್‌ಗಳಲ್ಲೂ ಅವರು ಸಾಹಸಿಗಳೇ. ಅದು ಇಂತಹ ಯೌವನದಲ್ಲಿ ಪುಟಿಯದಿದ್ದರೆ ಇನ್ನೇನು ಬಾಗಿರುವ ವೃದ್ಧನಲ್ಲಿ ಈ ಶಕ್ತಿ ಎದ್ದೀತೇ? ಡ್ರಾಗ್ ರೇಸಿನ ಸದ್ದುಗಳನ್ನು ಕೇಳಲಾಗದ ಅದೆಷ್ಟೋ ನಿರಾಶಾವಾದಿಗಳೇ ಪೊಲೀಸರಿಗೆ ಫೋನ್ ಮಾಡಿ ಸಿಕ್ಕಿ ಹಾಕಿಸುವುದು. ಕಲಂಗಳ ಉರುಳುಗಳಲ್ಲಿ

ಬರೀ ತೋಳ್ಬಲವೊಂದೇ ಎಚ್ಚೆತ್ತುಕೊಳ್ಳುವುದೇ? ಒಳಗಡೆ, ಕೆಳಗಡೆ ಗುಪ್ತವಾಗಿರುವ ಎಷ್ಟೋ ಬಲಗಳು ತಾವು ಶಕ್ತಿವಂತವಾಗಿದ್ದೇವೆಂದು ನಿರೂಪಿಸಬೇಕಾಗಿರುತ್ತದೆ. ಆ ಬಲ ಪ್ರದರ್ಶನವೋ ನೇರವಾಗಿ ಮಾಡಲಾಗದು, ಮಾಡದೇ ಇರಲಾಗದು. ಎಲ್ಲೆಲ್ಲೋ ಗಬ್ಬೆದ್ದು ಸೋರಿ ಪೊಲೀಸ್‌ಗಳಿಗೆ ಯು-ಟೀಸಿಂಗ್‌ಗಳ ಪ್ರಕರಣದಲ್ಲಿ ಬಂದು ಬೀಳುತ್ತಾರೆ.

‘‘ಥತ್, ಈ ಐಪಿಸಿ ಕಲಂಗಳ ಕಾಲಂಗಳಿಗೆ ಈ ಯೂತ್‌ಗಳು ತಾವಾಗೇ ಕಾಲು ಹಾಕಿಕೊಂಡು ಬರುವುದು’’ ಎಂದು ಪೊಲೀಸರು ಗೊಣಗಿದರೂ ನಾನದನ್ನು ಒಪ್ಪುವುದಿಲ್ಲ. ಸೂತ್ರ ಹಿಡಿದಿರುವವರು ಸೂತ್ರ ಬಿಟ್ಟವರಿಬ್ಬರೂ ಯೂತ್ ಹೆಂಚಿನ ತೂತುಗಳಿಗೆ ಕಾರಣವಾಗಿರುತ್ತಾರೆ. ಕೆರಳಿದ ಸಿಂಹ, ಸಾಹಸಸಿಂಹದಿಂದ ಹಿಡಿದು ರಾಜಾಹುಲಿಯವರೆಗೂ ಪುರುಷಸಿಂಹರ ಪೌರುಷವನ್ನು ಬಡಿದೆಬ್ಬಿಸುವ ನೆರಳಿನಾಟಗಳಿಗೆ ಮರುಳಾಗಿ ಅದೆಷ್ಟೋ ಯುವಜನರು ಕೊರಿಯಾಗ್ರಫಿಯೇ ಇಲ್ಲದೆ, ರೋಪ್ ಇಲ್ಲದೇ ರೋಪ್ ಹಾಕಿಕೊಂಡು, ಹುಕ್ ಇಲ್ಲದೇ ಸಿಕ್ಕಿಹಾಕಿಕೊಂಡು ಬಡಿದಾಡಿಕೊಂಡು 324ಗೆ ಬಂದರೆ ಇನ್ನೂ ಸ್ವಲ್ಪ ಸಂಖ್ಯೆಯಲ್ಲಿ ಹಿಂದಕ್ಕೆ ಹೋಗಿ, ಕಾರ್ಯಾಚರಣೆಯಲ್ಲಿ ಮುಂದೆ 307ರ ಪ್ರಕಾರ ಅರೆಗೊಲೆಗಳಿಗೆ ಕಾರಣವಾಗುತ್ತಾರೆ. ಹಣಕಾಸಿನ ವಿಷಯಗಳಲ್ಲಿ ಅಷ್ಟೇನೂ ಸ್ವತಂತ್ರವಾಗಿ ಗಳಿಸಲಾಗದ ಆ ಯುವಕರ ತಂಡಗಳಿಗೆ ತಂಡೋಪತಂಡವಾಗಿ ಉದ್ರೇಕಿಸುವ ವಾಂಚಿತಗಳಿಗೇನೂ ಈ ಲೋಕದಲ್ಲಿ ಕೊರತೆಯಿಲ್ಲ. 399 ಮತ್ತು 402ರ ಪ್ರಕಾರ ಹೊಂಚುಹಾಕಿ ಗಳಿಸುವ ಬದಲು ಗಾಣಕ್ಕೆ ಸಿಕ್ಕಿಕೊಳ್ಳುತ್ತಾರೆ. ಯಾವುದರ ಸ್ಪಷ್ಟತೆಯನ್ನೇ ಪಡೆಯದೆ ಯಾವುದೋ ಒಂದರ ಹಿಂದೆ ಬಿದ್ದು, 109ರ ಪ್ರಕಾರ ಅನುಮಾನಾಸ್ಪದ ಆಸಾಮಿಯಾಗುತ್ತಾರೆ. ಸರಿ, ಒಮ್ಮೆ ಹೀಗೊಂದು ಕೆಂಗಣ್ಣಿಗೆ ಬಿದ್ದು ಬಿಡುಗಡೆಯಾದ ಮೇಲೆ ಸುಮ್ಮನಿರುವನೇ? ಪದೇ ಪದೇ ಅವನೇ ಅನುಮಾನಕ್ಕೆ ಈಡಾಗಿ 110 ಆಗುತ್ತಾನೆ. ಅಷ್ಟೇಕೆ ಅವನೇ ಮುಂದೆ ತಾನಿಂತೇ ಎಂದು ತನ್ನ ಬಲಿಯುತ್ತಿರುವ ಭುಜವನ್ನು ಆ ಕೆಲಸಕ್ಕೆ ಫಿಕ್ಸ್ ಮಾಡಿಕೊಂಡಿರುತ್ತಾನೆ. ಅಪ್ಪಮಾಡಿದರೂ ಯುವಕನಾಗಿರುವ ಮಗ ಮನೆಯಲ್ಲಿ ಧೂಮಪಾನ ಮಾಡುವನೇ? ಬೀದಿಯಲ್ಲಿ, ಅದ್ಯಾವುದೇ ಮೂಲೆಯಲ್ಲಿ ಸೇದಲು ಹೋಗಿ ಕೊಟ್ಪಾಗೆ ಬಂದು ಬೀಳುವವರಲ್ಲಿ ಅತಿ ಹೆಚ್ಚಿನ ಮಂದಿ ಯುವಕರೇ! ಇನ್ನು ಡಿಡಿ ಕೇಸುಗಳಲ್ಲೂ ಅವರೇ ಮುಂದು.

ಒಟ್ಟಾರೆ ಅದಮ್ಯ ಬಲ ಪ್ರದರ್ಶನದ ಮೊದಲು ಪ್ರಜ್ಞೆಯಿಂದ ಒಮ್ಮೆ ಅದನ್ನು ಅವಲೋಕಿಸಿಕೊಂಡರೆ ಯುವಭುಜಗಳು ಬೇರಿನ್ನೇನೋ ಘನವಾದ ಜವಾಬ್ದಾರಿಗಳಿಗೆ ಹೆಗಲಾಗಬಹುದು.

share
ಯೋಗೇಶ್ ಮಾಸ್ಟರ್
ಯೋಗೇಶ್ ಮಾಸ್ಟರ್
Next Story
X