Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕ್ರೀಡೆ
  4. ಇಂದು ಫೈನಲ್: ಚಾಂಪಿಯನ್ ಫ್ರಾನ್ಸ್‌ ಗೆ...

ಇಂದು ಫೈನಲ್: ಚಾಂಪಿಯನ್ ಫ್ರಾನ್ಸ್‌ ಗೆ ಅರ್ಜೆಂಟೀನ ಎದುರಾಳಿ

► ಮೆಸ್ಸಿಗೆ ಚೊಚ್ಚಲ ಪ್ರಶಸ್ತಿ ಕನಸು ► 60 ವರ್ಷಗಳ ಹಿಂದಿನ ದಾಖಲೆ ಪುನರಾವರ್ತಿಸುವ ವಿಶ್ವಾಸದಲ್ಲಿ ಫ್ರೆಂಚರು

18 Dec 2022 1:42 PM IST
share
ಇಂದು ಫೈನಲ್: ಚಾಂಪಿಯನ್ ಫ್ರಾನ್ಸ್‌ ಗೆ ಅರ್ಜೆಂಟೀನ ಎದುರಾಳಿ
► ಮೆಸ್ಸಿಗೆ ಚೊಚ್ಚಲ ಪ್ರಶಸ್ತಿ ಕನಸು ► 60 ವರ್ಷಗಳ ಹಿಂದಿನ ದಾಖಲೆ ಪುನರಾವರ್ತಿಸುವ ವಿಶ್ವಾಸದಲ್ಲಿ ಫ್ರೆಂಚರು

ದೋಹಾ, ಡಿ.18: ಸುಮಾರು ಒಂದು ತಿಂಗಳಿನಿಂದ ಅರಬರ ನಾಡಿನಲ್ಲಿ ನಡೆಯುತ್ತಿರುವ ಫುಟ್ಬಾಲ್ ಹಬ್ಬ ಫಿಫಾ ವಿಶ್ವಕಪ್ ರವಿವಾರ ಕ್ಲೈಮ್ಯಾಕ್ಸ್ ಹಂತ ತಲುಪಲಿದ್ದು, ಲಿಯೊನೆಲ್ ಮೆಸ್ಸಿ ನೇತೃತ್ವದ ಅರ್ಜೆಂಟೀನ ತಂಡ ಹಾಲಿ ಚಾಂಪಿಯನ್ ಫ್ರಾನ್ಸ್ ತಂಡವನ್ನು ಪ್ರಶಸ್ತಿ ಸುತ್ತಿನಲ್ಲಿ ಮುಖಾಮುಖಿಯಾಗಲಿದೆ. ಮೆಸ್ಸಿ ಅವರು ಮಿರುಗುವ ಟ್ರೋಫಿಗೆ ಮುತ್ತಿಡುವ ಮೂಲಕ 1986ರಲ್ಲಿ ಲೆಜೆಂಡರಿ ಡಿಗೊ ಮರಡೋನ ನಿರ್ಮಿಸಿರುವ ದಾಖಲೆಯನ್ನು ಸರಿಗಟ್ಟುವ ವಿಶ್ವಾಸದಲ್ಲಿದ್ದಾರೆ. ಫ್ರಾನ್ಸ್ ತಂಡ 1962ರ ನಂತರ ಪ್ರಶಸ್ತಿಯನ್ನು ತನ್ನಲ್ಲೇ ಉಳಿಸಿಕೊಂಡ ಮೊದಲ ತಂಡವೆಂಬ ಕೀರ್ತಿಗೆ ಭಾಜನವಾಗಿ ಇತಿಹಾಸ ನಿರ್ಮಿಸುವ ಉತ್ಸಾಹದಲ್ಲಿದೆ.

ಅರಬ್ ದೇಶದಲ್ಲಿ ಮೊದಲ ಬಾರಿ ಆಯೋಜಿಸಲ್ಪಟ್ಟ ವಿಶ್ವಕಪ್ ಎಲ್ಲ ನಿರೀಕ್ಷೆಯನ್ನು ಮೀರಿ ಯಶಸ್ಸು ಸಾಧಿಸಿದೆ. ವಿಶ್ವದ ಎರಡನೇ ಅತ್ಯಂತ ದೊಡ್ಡ ಕ್ರೀಡಾ ಸ್ಪರ್ಧೆ ಫುಟ್ಬಾಲ್ ವಿಶ್ವಕಪ್ ಆತಿಥ್ಯಕ್ಕೆ ಪುಟ್ಟ ರಾಷ್ಟ್ರ ಖತರ್ ಅನ್ನು ಆಯ್ಕೆ ಮಾಡಿದ್ದನ್ನು ಟೀಕಿಸಿ ಸಾಕಷ್ಟು ಬರೆಯಲಾಯಿತು. ವಿಶ್ವಕಪ್ ಮುಗಿದ ಬಳಿಕವೂ ಈ ಕುರಿತಾಗಿ ಚರ್ಚೆ ಮುಂದುವರಿಯುವ ಸಾಧ್ಯತೆಯಿದೆ. 

ಸ್ಟಾರ್ ಆಟಗಾರರಾದ ಮೆಸ್ಸಿ, ಕಿಲಿಯನ್ ಎಂಬಾಪೆ, ನೇಮರ್ ಹಾಗೂ ಕ್ರಿಸ್ಟಿಯಾನೊ ರೊನಾಲ್ಡೊ ಮೈದಾನದಲ್ಲಿ ಮಿಂಚು ಹರಿಸಿದ್ದಾರೆ. ಸೌದಿ ಅರೇಬಿಯ, ಜಪಾನ್, ದಕ್ಷಿಣ ಕೊರಿಯಾ ಹಾಗೂ ಟ್ಯುನೀಶಿಯ ಬಲಿಷ್ಠ ತಂಡಕ್ಕೆ ಮಣ್ಣುಮುಕ್ಕಿಸಿ ಗಮನ ಸೆಳೆದವು. ಹೊಸ ಹೀರೊಗಳು ಉದಯಿಸಿದರು. ಅಟ್ಲಾಸ್ ಲಯನ್ಸ್ ಖ್ಯಾತಿಯ ಮೊರೊಕ್ಕೊ ವಿಶ್ವಕಪ್ ಇತಿಹಾಸದಲ್ಲಿ ಮೊದಲ ಬಾರಿ ಸೆಮಿ ಫೈನಲ್ಗೆ ತಲುಪಿ ಘರ್ಜಿಸಿದಾಗ ಆ ತಂಡದ ಸಾವಿರಾರು ಅಭಿಮಾನಿಗಳು ಭಾರೀ ಸಂಭ್ರಮಪಟ್ಟರು. ಮೊರೊಕ್ಕೊ ತಂಡ ಬೆಲ್ಜಿಯಮ್, ಸ್ಪೇನ್ ಹಾಗೂ ಪೋರ್ಚುಗಲ್ ತಂಡವನ್ನು ಸೋಲಿಸಿ ಅಂತಿಮ-4 ಸುತ್ತು ತಲುಪಿದ ಮೊದಲ ಆಫ್ರಿಕನ್ ಹಾಗೂ ಮೊದಲ ಅರಬ್ ರಾಷ್ಟ್ರ ಎನಿಸಿಕೊಂಡಿತು.

ಸರಿಸುಮಾರು 4 ವಾರಗಳ ಹಿಂದೆ ಸೌದಿ ಅರೇಬಿಯ ವಿರುದ್ಧ ಆಡಿದ ತನ್ನ ಮೊದಲ ಗ್ರೂಪ್ ಪಂದ್ಯದಲ್ಲಿ 1-2 ಅಂತರದಿಂದ ಸೋಲನುಭವಿಸಿದ  ಅರ್ಜೆಂಟೀನ ವಿಶ್ವಕಪ್ನಲ್ಲಿ ಆಘಾತ ಅನುಭವಿಸಿತ್ತು. ಈ ಸೋಲಿನಿಂದ ಬೇಗನೆ ಪುಟಿದೆದ್ದ ಮೆಸ್ಸಿ ಬಳಗ ಇದೀಗ ಫೈನಲ್ ಹಂತ ತಲುಪಿದೆ. ಸೋಲಿನೊಂದಿಗೆ ಆರಂಭಿಸಿದ ತನ್ನ ವಿಶ್ವಕಪ್ ಅಭಿಯಾನವನ್ನು ಗೆಲುವಿನೊಂದಿಗೆ ಅಂತ್ಯಗೊಳಿಸುವ ವಿಶ್ವಾಸದಲ್ಲಿದೆ.
ಫ್ರಾನ್ಸ್ ತಂಡ ಕೂಡ ಗ್ರೂಪ್ ಹಂತದ ಕೊನೆಯ ಪಂದ್ಯದಲ್ಲಿ ಟ್ಯುನೀಶಿಯ ವಿರುದ್ಧ 0-1 ಅಂತರದಿಂದ ಆಘಾತಕಾರಿ ಸೋಲನುಭವಿಸಿತ್ತು. ಎಂಬಾಪೆಗೆ ಆ ಪಂದ್ಯದಲ್ಲಿ ವಿಶ್ರಾಂತಿ ನೀಡಿದ್ದ ಫ್ರಾನ್ಸ್ ಹೊಸ ಆಟಗಾರರಿಗೆ ಅವಕಾಶ ನೀಡಿತ್ತು. ಈ ಸೋಲು ಅದರ ಫೈನಲ್ ಹಾದಿಗೆ ಅಡ್ಡಿಯಾಗಲಿಲ್ಲ. 

ರೊನಾಲ್ಡೊ ತನ್ನ ಕೊನೆಯ ವಿಶ್ವಕಪ್ನಲ್ಲಿ ಕಾಣಿಸಿಕೊಂಡಿದ್ದು, ಐದು ವಿಶ್ವಕಪ್ನಲ್ಲಿ ಗೋಲು ಗಳಿಸಿದ ಮೊದಲ ಆಟಗಾರ ಎನಿಸಿಕೊಂಡು ದಾಖಲೆ ಬರೆದರು. ಮೊರೊಕ್ಕೊ ವಿರುದ್ಧ ಕ್ವಾರ್ಟರ್ ಫೈನಲ್ನಲ್ಲಿ ಬದಲಿ ಅಟಗಾರನಾಗಿ ರೊನಾಲ್ಡೊ  ಕಣಕ್ಕಿಳಿದಿದ್ದರು. ಪೋರ್ಚುಗಲ್ 0-1ರಿಂದ ಸೋತ ಕಾರಣ ವಿಶ್ವಕಪ್ಗೆ ಕಣ್ಣೀರಿನ ವಿದಾಯ ಹೇಳಿದರು. ಕ್ರೊಯೇಶಿಯ ವಿರುದ್ಧ ಕ್ವಾರ್ಟರ್ ಫೈನಲ್ನಲ್ಲಿ ಬ್ರೆಝಿಲ್ ಪೆನಾಲ್ಟಿ ಶೂಟೌಟ್ನಲ್ಲಿ ಸೋಲುಂಡ ಕಾರಣ ನೇಮರ್ ಅವರ ವಿಶ್ವಕಪ್ ಕನಸು ಕೈಗೂಡಲಿಲ್ಲ. ನೇಮರ್ ಕೂಡ ವಿಶ್ವಕಪ್ ಗೆಲ್ಲಲಾಗದೆ ನೋವಿನಲ್ಲಿ ಕಣ್ಣೀರಿಟ್ಟರು.

► 36 ವರ್ಷಗಳ ಪ್ರಶಸ್ತಿ ಬರ ನೀಗಿಸಿಕೊಳ್ಳುವ ವಿಶ್ವಾಸದಲ್ಲಿ ಅರ್ಜೆಂಟೀನ

ಈ ಹಿಂದೆ ಎರಡು ಬಾರಿ ವಿಶ್ವಕಪ್ ಟ್ರೋಫಿಯನ್ನು ಜಯಿಸಿರುವ ಅರ್ಜೆಂಟೀನ ಹಾಗೂ ಫ್ರಾನ್ಸ್ ತಂಡಗಳು ತಮ್ಮ ಮೂರನೇ ಪ್ರಶಸ್ತಿಗಾಗಿ ರವಿವಾರ ಖತರ್ನ ಲುಸೈಲ್ ಸ್ಟೇಡಿಯಮ್ನಲ್ಲಿ ಸೆಣಸಾಡಲಿವೆ.

ಉಭಯ ತಂಡಗಳು ಮೂರನೇ ಬಾರಿ ಪ್ರಶಸ್ತಿ ಗೆಲ್ಲಲು ಇನ್ನೊಂದು ತಡೆ ದಾಟಬೇಕಾಗಿದೆ. 1986ರಲ್ಲಿ ಕೊನೆಯ ಬಾರಿ ವಿಶ್ವಕಪ್ ಜಯಿಸಿದ್ದ ಅರ್ಜೆಂಟೀನದ 36 ವರ್ಷಗಳ ಕಾಯುವಿಕೆಗೆ ಅಂತ್ಯ ಹಾಡಲು ಬಯಸಿದೆ. ಸ್ಟಾರ್ ಆಟಗಾರ  ಲಿಯೊನೆಲ್ ಮೆಸ್ಸಿ ತನ್ನ ಕೊನೆಯ ಪಂದ್ಯದಲ್ಲಿ ಮೊತ್ತ ಮೊದಲ ವಿಶ್ವಕಪ್ ಪ್ರಶಸ್ತಿ ಎತ್ತಿ ಹಿಡಿಯುವ ಕನಸು ಕಾಣುತ್ತಿದ್ದಾರೆ.  

ಒಂದು ವೇಳೆ ಅರ್ಜೆಂಟೀನ ಪ್ರಶಸ್ತಿ ಜಯಿಸಿದರೆ  ಮೂರು ಇಲ್ಲವೇ ಅದಕ್ಕಿಂತ ಹೆಚ್ಚು ವಿಶ್ವಕಪ್ ಪ್ರಶಸ್ತಿ ಜಯಿಸಿದ ವಿಶ್ವದ ನಾಲ್ಕನೇ ತಂಡ ಎನಿಸಿಕೊಳ್ಳುತ್ತದೆ. ಒಟ್ಟು 5 ಬಾರಿ ಪ್ರಶಸ್ತಿ ಜಯಿಸಿರುವ ಬ್ರೆಝಿಲ್ ಈಗಲೂ ವಿಶ್ವಕಪ್ನ ಅತ್ಯಂತ ಯಶಸ್ವಿ ತಂಡವಾಗಿದೆ. ಜರ್ಮನಿ ಹಾಗೂ ಇಟಲಿ(ತಲಾ 4) ಆ ನಂತರದ ಸ್ಥಾನದಲ್ಲಿವೆ.

2022ರ ವಿಶ್ವಕಪ್ ಅರ್ಜೆಂಟೀನದ ಪಾಲಾದರೆ ಯುರೋಪ್ ತಂಡಗಳ ಪ್ರಾಬಲ್ಯವನ್ನು ಮುರಿದು 2002ರ ಬ್ರೆಝಿಲ್ ಸಾಧನೆಯ ಬಳಿಕ ವಿಶ್ವಕಪ್ ಗೆದ್ದ ಮೊದಲ ದಕ್ಷಿಣ ಅಮೆರಿಕ ತಂಡ ಎನಿಸಿಕೊಳ್ಳುತ್ತದೆ. ಹಿಂದಿನ ನಾಲ್ಕು ಆವೃತ್ತಿಯ ವಿಶ್ವಕಪ್ಗಳನ್ನು ಯುರೋಪ್ ತಂಡಗಳಾದ ಇಟಲಿ-2006, ಸ್ಪೇನ್-2010, ಜರ್ಮನಿ-2014 ಹಾಗೂ ಫ್ರಾನ್ಸ್-2018 ಗೆದ್ದುಕೊಂಡಿದ್ದವು.
ಅರ್ಜೆಂಟೀನ 1978 ಹಾಗೂ 1986ರಲ್ಲಿ ಪ್ರಶಸ್ತಿ ಜಯಿಸಿತ್ತು. ಆದರೆ  1930, 1990 ಹಾಗೂ 2014ರ ಆವೃತ್ತಿಯಲ್ಲಿ ಫೈನಲ್ನಲ್ಲಿ ಎಡವಿತ್ತು.  ಫ್ರಾನ್ಸ್ ತಂಡವನ್ನು ಫೈನಲ್ನಲ್ಲಿ ಮಣಿಸಿದರೆ ಅರ್ಜೆಂಟೀನ ತಂಡ 2002ರ ಬಳಿಕ ವಿಶ್ವಕಪ್ ಫೈನಲ್ನಲ್ಲಿ  ಯುರೋಪ್ನ ಎದುರಾಳಿಯನ್ನು ಮಣಿಸಿದ ಮೊದಲ ದಕ್ಷಿಣ ಅಮೆರಿಕ ತಂಡವೆಂಬ ಹಿರಿಮೆಗೆ ಪಾತ್ರವಾಗಲಿದೆ. ಬ್ರೆಝಿಲ್ 2002ರ ಫೈನಲ್ನಲ್ಲಿ ಜರ್ಮನಿಯನ್ನು 2-0 ಅಂತರದಿಂದ ಮಣಿಸಿತ್ತು. ಮೆಸ್ಸಿ ಫೈನಲ್ನಲ್ಲಿ ಇನ್ನೊಂದು ಗೋಲು ಗಳಿಸಿದರೆ ಒಂದೇ ಆವೃತ್ತಿಯ ವಿಶ್ವಕಪ್ನಲ್ಲಿ ಆರನೇ ಗೋಲು ಗಳಿಸಿದಂತಾಗುತ್ತದೆ.  ಒಂದೇ ಆವೃತ್ತಿಯ ವಿಶ್ವಕಪ್ನಲ್ಲಿ ಅವರು ಗಳಿಸಿದ ಗರಿಷ್ಠ ಗೋಲು ಇದಾಗುತ್ತದೆ. ಬ್ರೆಝಿಲ್ನಲ್ಲಿ ನಡೆದ 2014ರ ಆವೃತ್ತಿಯಲ್ಲಿ  5 ಗೋಲು ಗಳಿಸಿದ್ದರು.

► ಐತಿಹಾಸಿಕ ಸಾಧನೆಯತ್ತ ಫ್ರಾನ್ಸ್ ಚಿತ್ತ

ರವಿವಾರದ ಫೈನಲ್ನಲ್ಲಿ ಫ್ರಾನ್ಸ್ ತಂಡ ಅರ್ಜೆಂಟೀನವನ್ನು ಮಣಿಸಿ 60 ವರ್ಷಗಳ ಬಳಿಕ ಪ್ರಶಸ್ತಿಯನ್ನು ತನ್ನಲ್ಲೇ ಉಳಿಸಿಕೊಂಡ ಮೊದಲ ತಂಡ ಎನಿಸಿಕೊಳ್ಳುವತ್ತ ಚಿತ್ತಹರಿಸಿದೆ.  1962ರಲ್ಲಿ ಬ್ರೆಝಿಲ್ ತಂಡ ಈ ಸಾಧನೆ ಮಾಡಿತ್ತು. ಬ್ರೆಝಿಲ್ 1958ರ ಆವೃತ್ತಿಯಲ್ಲ್ಲೂ ಪ್ರಶಸ್ತಿ ಗೆದ್ದುಕೊಂಡಿತ್ತು.

ಒಂದು ವೇಳೆ ಫ್ರಾನ್ಸ್ ಮತ್ತೊಮ್ಮೆ ವಿಶ್ವಕಪ್ ಜಯಿಸಿದರೆ ಈ ಸಾಧನೆ ಮಾಡಿದ ವಿಶ್ವದ ಮೂರನೇ ತಂಡವೆಂಬ ಕೀರ್ತಿಗೆ ಭಾಜನವಾಗಲಿದೆ. ಇಟಲಿಯು 1934 ಹಾಗೂ 1938 ಹಾಗೂ ಬ್ರೆಝಿಲ್ 1958 ಹಾಗೂ 1962ರಲ್ಲಿ ಈ ದಾಖಲೆ ನಿರ್ಮಿಸಿದ್ದವು. ಫ್ರಾನ್ಸ್ ಕೋಚ್ ಡಿಡಿಯೆರ್ ಡೆಸ್ಚಾಂಪ್ಸ್ 1938ರ ಬಳಿಕ ಸತತ ವಿಶ್ವಕಪ್ ಪ್ರಶಸ್ತಿ ಜಯಿಸಿದ ಮೊದಲ ಕೋಚ್ ಎನಿಸಿಕೊಳ್ಳುವ ವಿಶ್ವಾಸದಲ್ಲಿದ್ದಾರೆ.  ಡೆಸ್ಚಾಂಪ್ಸ್ 1998ರಲ್ಲಿ ಫ್ರಾನ್ಸ್ ತಂಡ ವಿಶ್ವಕಪ್ ಗೆದ್ದಾಗ ತಂಡದ  ನಾಯಕನಾಗಿದ್ದರು. 2018ರಲ್ಲಿ ಫ್ರಾನ್ಸ್ ಪ್ರಶಸ್ತಿ ಗೆದ್ದಾಗ ಕೋಚ್ ಆಗಿದ್ದರು. ಫ್ರಾನ್ಸ್ ಒಂದು ವೇಳೆ ಮೇಲುಗೈ ಸಾಧಿಸಿದರೆ ವಿಶ್ವಕಪ್ ಫೈನಲ್ನಲ್ಲಿ ಯುರೋಪ್ ತಂಡಗಳ ಪ್ರಾಬಲ್ಯ ಮುಂದುವರಿಯುತ್ತದೆ.  2006ರಿಂದ ಸತತ ಐದನೇ ಆವೃತ್ತಿಯಲ್ಲಿ ಯುರೋಪ್ ತಂಡವೊಂದು ವಿಶ್ವಕಪ್ ಮುಡಿಗೇರಿಸಿಕೊಂಡಂತಾಗುತ್ತದೆ.  ಫೈನಲ್ನಲ್ಲಿ ಫ್ರಾನ್ಸ್ ಜಯಭೇರಿ ಬಾರಿಸಿದರೆ  ಅರ್ಜೆಂಟೀನ ವಿಶ್ವಕಪ್ ಇತಿಹಾಸದಲ್ಲಿ ನಾಲ್ಕನೇ ಬಾರಿ ರನ್ನರ್ಸ್ ಅಪ್ಗೆ ತೃಪ್ತಿಪಡಬೇಕಾಗುತ್ತದೆ. ಅರ್ಜೆಂಟೀನವು ಈ ಹಿಂದೆ 1930, 1990 ಹಾಗೂ 2014ರಲ್ಲಿ ಫೈನಲ್ನಲ್ಲಿ ಸೋತಿತ್ತು.

► ಚಾಂಪಿಯನ್ ತಂಡಕ್ಕೆ 342 ಕೋ.ರೂ. ಬಹುಮಾನ

ಪ್ರಸಕ್ತ ವಿಶ್ವಕಪ್ನಲ್ಲಿ ಚಾಂಪಿಯನ್ ಪಟ್ಟಕ್ಕೇರುವ ತಂಡ 342 ಕೋ.ರೂ. ಬಹುಮಾನ ಗೆಲ್ಲಲಿದೆ. 2ನೇ ಸ್ಥಾನ ಪಡೆಯುವ ತಂಡ 244 ಕೋ.ರೂ. ತನ್ನದಾಗಿಸಿಕೊಳ್ಳಲಿದೆ.

share
Next Story
X