Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕರ್ನಾಟಕ
  4. ಹಲವು ಐಪಿಎಸ್ ಹಿರಿಯ ಅಧಿಕಾರಿಗಳಿಗೆ...

ಹಲವು ಐಪಿಎಸ್ ಹಿರಿಯ ಅಧಿಕಾರಿಗಳಿಗೆ ಭಡ್ತಿ, ವರ್ಗಾವಣೆ

31 Dec 2022 10:00 PM IST
share
ಹಲವು ಐಪಿಎಸ್ ಹಿರಿಯ ಅಧಿಕಾರಿಗಳಿಗೆ ಭಡ್ತಿ, ವರ್ಗಾವಣೆ

ಬೆಂಗಳೂರು, ಡಿ.31: ಹೊಸ ವರ್ಷಾಚರಣೆ ನಡುವೆ ರಾಜ್ಯ ಪೊಲೀಸ್ ಇಲಾಖೆಯ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ವೇತನ ಶ್ರೇಣಿ ಹೆಚ್ಚಳದೊಂದಿಗೆ ಭಡ್ತಿ ಹಾಗೂ ವರ್ಗಾವಣೆ ಮಾಡಿ ರಾಜ್ಯ ಸರಕಾರ ಶನಿವಾರ ಆದೇಶಿಸಿದೆ.

ಹಿರಿಯ ಐಪಿಎಸ್ ಅಧಿಕಾರಿ ಅಲೋಕ್ ಮೋಹನ್ ಅವರನ್ನು ರಾಜ್ಯ ಕಾರಾಗೃಹ ಇಲಾಖೆ ಡಿಜಿಪಿಯಿಂದ ಅಗ್ನಿಶಾಮಕ ಮತ್ತು ತುರ್ತುಸೇವೆ ಡಿಜಿಪಿಯಾಗಿ ವರ್ಗಾಯಿಸಲಾಗಿದೆ. ಸಿ.ಎಚ್.ಪ್ರತಾಪ್ ರೆಡ್ಡಿ-ಎಡಿಜಿಪಿ ಹುದ್ದೆಯಿಂದ ಡಿಜಿಪಿಯಾಗಿ ಭಡ್ತಿ ನೀಡಲಾಗಿದ್ದು, ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿ ಮುಂದುವರಿಸಲಾಗಿದೆ.

ಕೇಂದ್ರೀಯ ಸೇವೆಯಲ್ಲಿರುವ ಪಿ.ಕೆ.ಠಾಕೂರ್-ಎಡಿಜಿಪಿ ಹುದ್ದೆಗೆ ಭಡ್ತಿ ನೀಡಲಾಗಿದ್ದು, ಸೆಂಟ್ರಲ್ ಇಂಟಲಿಜೆನ್ಸ್ ಬ್ಯೂರೋದಲ್ಲಿ ಮುಂದುವರಿಸಲಾಗಿದೆ. ಮನೀಶ್ ಕರ್ಬಿಕರ್-ಈಶಾನ್ಯ ವಲಯದ ಐಜಿಪಿಯಿಂದ ಎಡಿಜಿಪಿಯಾಗಿ ಭಡ್ತಿ ನೀಡಲಾಗಿದ್ದು ರಾಜ್ಯ ಕಾರಾಗೃಹ ಇಲಾಖೆಗೆ ವರ್ಗಾವಣೆ ಮಾಡಲಾಗಿದೆ. 

ಸೌಮೇಂದು ಮುಖರ್ಜಿ ಐಜಿಪಿಯಿಂದ ಎಡಿಜಿಪಿಯಾಗಿ ಭಡ್ತಿ ನೀಡಲಾಗಿದ್ದು ಪೊಲೀಸ್ ಸಂಪರ್ಕ-ಸಂವಹನ ಹಾಗೂ ಆಧುನೀಕರಣ ಇಲಾಖೆಗೆ ವರ್ಗಾಯಿಸಲಾಗಿದೆ. ಎಂ.ಚಂದ್ರಶೇಖರ್-ಐಜಿಪಿ ಕೇಂದ್ರ ವಲಯದಿಂದ ಎಡಿಜಿಪಿಯಾಗಿ ಭಡ್ತಿ ನೀಡಿ ಬೆಂಗಳೂರು ಪೂರ್ವ ವಿಭಾಗಕ್ಕೆ ವರ್ಗಾವಣೆ ಮಾಡಲಾಗಿದೆ. 

ಅದೇರೀತಿ, ಸತೀಶ್ ಕುಮಾರ್-ಐಜಿಪಿ ಉತ್ತರ ವಲಯ ಬೆಳಗಾವಿಯಿಂದ ಐಜಿಪಿ ಈಶಾನ್ಯ ವಲಯಕ್ಕೆ ವರ್ಗಾಯಿಸಲಾಗಿದೆ. ರಮಣ್ ಗುಪ್ತಾ ಡಿಐಜಿ ಇಂಟಲಿಜೆನ್ಸ್ ಬೆಂಗಳೂರಿನಿಂದ ಐಜಿಪಿಯಾಗಿ ಭಡ್ತಿ ನೀಡಿ ಉತ್ತರ ವಲಯ ಬೆಳಗಾವಿಗೆ ವರ್ಗಾವಣೆ ಮಾಡಲಾಗಿದೆ.

ಡಾ.ಬಿ.ಆರ್.ರವಿಕಾಂತೇ ಗೌಡ ಡಿಐಜಿ ಸಿಐಡಿಯಿಂದ ಐಜಿಪಿಯಾಗಿ ಭಡ್ತಿ ನೀಡಿ ಕೇಂದ್ರ ವಲಯಕ್ಕೆ ವರ್ಗಾಯಿಸಲಾಗಿದೆ. ಸಿದ್ಧರಾಮಪ್ಪ ಡಿಐಜಿಯಿಂದ ಐಜಿಪಿಯಾಗಿ ಭಡ್ತಿ ನೀಡಲಾಗಿದೆ. ಬಿ.ಎಸ್.ಲೋಕೇಶ್ ಕುಮಾರ್ ಡಿಐಜಿಯಿಂದ ಐಜಿಪಿಯಾಗಿ ಭಡ್ತಿ ನೀಡಲಾಗಿದ್ದು, ಬಳ್ಳಾರಿ ವಲಯದಲ್ಲಿ ಐಜಿಪಿಯಾಗಿ ಮುಂದುವರಿಸಲಾಗಿದೆ.

ಕೆ.ಟಿ.ಬಾಲಕೃಷ್ಣ ಡಿಐಜಿಯಿಂದ ಐಜಿಪಿಯಾಗಿ ಭಡ್ತಿ ನೀಡಲಾಗಿದ್ದು, ಅಗ್ನಿಶಾಮಕ ದಳ ವಿಭಾಗದಲ್ಲಿಯೇ ಮುಂದುವರಿಸಲಾಗಿದೆ. ಡಾ.ಎಸ್.ಡಿ.ಶರಣಪ್ಪ ಎಸ್‍ಎಸ್ಪಿಯಿಂದ ಡಿಐಜಿಯಾಗಿ ಭಡ್ತಿ ನೀಡಲಾಗಿದ್ದು ಸಿಸಿಬಿ ಬೆಂಗಳೂರು ಮುಖ್ಯಸ್ಥರಾಗಿ ಮುಂದುವರಿಸಲಾಗಿದೆ.

ಎಂ.ಎನ್.ಅನುಚೇತ್ ಎಎಸ್ಪಿಯಿಂದ ಡಿಐಜಿಯಾಗಿ ಭಡ್ತಿ ನೀಡಲಾಗಿದ್ದು ಬೆಂಗಳೂರು ಸಂಚಾರ ವಿಭಾಗದ ಜಂಟಿ ಆಯುಕ್ತರಾಗಿ ಮುಂದುವರೆಸಲಾಗಿದೆ. ರವಿ ಡಿ.ಚೆನ್ನಣ್ಣನವರ್ ಎಎಸ್ಪಿಯಿಂದ ಡಿಐಜಿಯಾಗಿ ಭಡ್ತಿ ನೀಡಿ, ಕಿಯೋನಿಕ್ಸ್ ವ್ಯವಸ್ಥಾಪಕ ನಿರ್ದೇಶಕರಾಗಿ ಮುಂದುವರೆಸಲಾಗಿದೆ. 

ರಮೇಶ್ ಬಾನೋತ್ ಎಸ್ಪಿಯಿಂದ ಡಿಐಜಿಯಾಗಿ ಭಡ್ತಿ ನೀಡಲಾಗಿದ್ದು ಮೈಸೂರು ನಗರ ಪೊಲೀಸ್ ಆಯುಕ್ತರಾಗಿ ಮುಂದುವರೆಸಲಾಗಿದೆ. ಎಲ್.ಮಾರ್ಟಿನ್ ಅವರನ್ನು ಡಿಐಜಿಯಾಗಿ ಭಡ್ತಿ ನೀಡಲಾಗಿದ್ದು ಪೊಲೀಸ್ ತರಬೇತಿ ಶಾಲೆ ಗುಲ್ಬರ್ಗಾದಿಂದ ಪೊಲೀಸ್ ನೇಮಕಾತಿ ವಿಭಾಗದ ಡಿಐಜಿಯಾಗಿ ವರ್ಗಾವಣೆ ಮಾಡಲಾಗಿದೆ. ಜತೆಗೆ, ದಿವ್ಯಾ ಗೋಪಿನಾಥ್ ಇಂಟಲಿಜೆನ್ಸ್ ಎಸ್.ಪಿ.ಯಾಗಿ ಸ್ಥಳ ನಿಯುಕ್ತಿಗೊಳಿಸಲಾಗಿದೆ.

ಹೀಗೆ, 53 ಐಪಿಎಸ್ ಅಧಿಕಾರಿಗಳಿಗೆ ವೇತನ ಶ್ರೇಣಿ ಹೆಚ್ಚಳದೊಂದಿಗೆ, ಭಡ್ತಿ ನೀಡಿದ್ದು, ಈ ಆದೇಶ ಹೊಸವರ್ಷದ ಮೊದಲ ದಿನದಿಂದಲೇ ಜಾರಿಗೆ ಬರುವಂತೆ ಸರಕಾರ ಸುತ್ತೋಲೆಯಲ್ಲಿ ಉಲ್ಲೇಖಿಸಿದೆ.

ಹೇಮಂತ್ ನಿಂಬಾಳ್ಕರ್ ಭಡ್ತಿಗೆ ತಡೆ?: ಈ ಭಡ್ತಿ ಪಡೆಯುವ ಪಟ್ಟಿಯಲ್ಲಿ ಐಪಿಎಸ್ ಅಧಿಕಾರಿ ಹೇಮಂತ್ ನಿಂಬಾಳ್ಕರ್ ಹೆಸರು ಸರಕಾರ ಕೈಬಿಟ್ಟಿದೆ ಎನ್ನಲಾಗಿದೆ. ಈ ಹಿಂದೆ ಟೆಂಡರ್ ವಿಚಾರಕ್ಕೆ ಸಂಬಂಧಿಸಿ ಅವ್ಯವಹಾರ ಆರೋಪ ಕೇಳಿಬಂದ ಹಿನ್ನೆಲೆ ಸರಕಾರ ಭಡ್ತಿ ತಡೆಹಿಡಿದಿದೆ ಎಂದು ಗೊತ್ತಾಗಿದೆ.

share
Next Story
X