ಬೈಜೂಸ್‌ನ 1,000 ಉದ್ಯೋಗಿಗಳ ವಜಾ

ಹೊಸದಿಲ್ಲಿ,ಫೆ.2: 50,000 ಸಿಬ್ಬಂದಿಗಳನ್ನು ಹೊಂದಿರುವ ಎಡ್ಟೆಕ್ ಯುನಿಕಾರ್ನ್ ತನ್ನ 1,000ಕ್ಕೂ ಅಧಿಕ ಉದ್ಯೋಗಿಗಳಿಗೆ ಗೇಟ್ ಪಾಸ್ ನೀಡಿದೆ. ಈ ಪೈಕಿ ಶೇ.15ರಷ್ಟು ಸಿಬ್ಬಂದಿಗಳು ಇಂಜಿನಿಯರಿಂಗ್ ವಿಭಾಗಕ್ಕೆ ಸೇರಿದ್ದಾರೆ.
‘ಇಂದು ಬೆಳಿಗ್ಗೆ ಪ್ರತಿ ಟೆಕ್ ತಂಡದಿಂದಲೂ ಸಿಬ್ಬಂದಿಗಳನ್ನು ವಜಾಮಾಡಲಾಗಿದೆ. ನನ್ನ ತಂಡದಲ್ಲಿಯೂ ತೀವ್ರ ಉದ್ಯೋಗ ಕಡಿತಗಳಾಗಿವೆ ’ಎಂದು ಬೈಜುಸ್(BYJU'S) ನ ಇಂಜಿನಿಯರಿಂಗ್ ತಂಡದ ಉದ್ಯೋಗಿಯೋರ್ವರು ತಿಳಿಸಿದ್ದನ್ನು ಮಾಧ್ಯಮಗಳು ಉಲ್ಲೇಖಿಸಿವೆ.
ಗೇಟ್ ಪಾಸ್ ನೀಡಿದ ಇತ್ತೀಚಿನ ಸುತ್ತಿನಲ್ಲಿ ಕಂಪನಿಯು ಎಲ್ಲ ಫ್ರೆಷರ್ಗಳನ್ನು ಕೆಲಸದಿಂದ ಕಿತ್ತುಹಾಕಿದೆ. ಖರ್ಚುಗಳನ್ನು ಮತ್ತು ಹೆಚ್ಚುತ್ತಿರುವ ನಷ್ಟಗಳನ್ನು ಕಡಿಮೆ ಮಾಡಲು ಎಲ್ಲ ವಿಭಾಗಗಳಿಂದ ಸುಮಾರು 2,500 ಉದ್ಯೋಗಿಗಳನ್ನು ವಜಾಗೊಳಿಸುವುದಾಗಿ ಬೈಜುಸ್ ಕಳೆದ ವರ್ಷದ ಜೂನ್ ನಲ್ಲಿ ತಿಳಿಸಿತ್ತು.
Next Story







