ಹುಬ್ಬಳ್ಳಿ: ಫೆ.4, 5ರಂದು ಸುನ್ನಿ ದಾವತೆ ಇಸ್ಲಾಮಿ ಧಾರ್ಮಿಕ ಸಮ್ಮೇಳನ

ಹುಬ್ಬಳ್ಳಿ: ಮೌಲಾನಾ ಶಾಕಿರ್ ಅಲಿ ನೂರಿ ಅಕ್ಯಾಡಮಿ ವತಿಯಿಂದ ಫೆಬ್ರವರಿ 4 ಹಾಗೂ 5 ರಂದು ನಗರದಲ್ಲಿ ಸುನ್ನಿ ದಾವತೆ ಇಸ್ಲಾಮಿ ಧಾರ್ಮಿಕ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ ಎಂದು ಅಕ್ಯಾಡೆಮಿ ಅಧ್ಯಕ್ಷ ಸಯ್ಯದ್ ಮೆಹಬೂಬ್ ಕಲೈಗಾರ್ ಹೇಳಿದರು.
ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇಲ್ಲಿನ ಪಿ.ಬಿ ರಸ್ತೆಯ ಅಂಜುಮನ್ ಹಾಲ್ ನಲ್ಲಿ ಎರಡು ದಿನಗಳ ಕಾಲ ಸಮ್ಮೇಳನ ನಡೆಯಲಿದೆ. 4 ರಂದು ಮಹಿಳೆಯರಿಗೆ 5 ರಂದು ಪುರುಷರಿಗಾಗಿ ಪ್ರವಚನ ಸೇರಿದಂತೆ ಮುಂತಾದ ಕಾರ್ಯಕ್ರಮಗಳು ನಡೆಯಲಿವೆ ಎಂದರು.
ಸುನ್ನಿ ದಾವತೆ ಇಸ್ಲಾಮಿನ ಸಂಸ್ಥಾಪಕ ಮುಂಬೈನ ಮಹಮ್ಮದ್ ಶಾಕೀರ್ ಅಲಿ ನೂರಿ ಪ್ರವಚನ ನೀಡುವರು. ಮುಂಬೈನ ಹಾಶ್ಮಿಯಾ ಹೈಸ್ಕೂಲ್ ನ ಪ್ರಾಂಶುಪಾಲರಾದ, ಉತ್ತರ ಪ್ರದೇಶದ ಅಲ್ ಜಮಿಯತುಲ್ ಆಶ್ರಪಿಯಾ ಪ್ರಾಂಶುಪಾಲ್ ಮುಪ್ತಿ ನಿಜಾಮುದ್ಧೀನ್ ಮಿಸ್ಬಾಯಿ ಮುಂತಾದವರು ಉಪನ್ಯಾಸ ನೀಡುವರು.
ಮಹಿಳೆಯರಿಗೆ ಗೌರವ ನೀಡುವುದು, ದೇಶ ಪ್ರೇಮ ಬೆಳೆಸುವುದು, ಸೂಫಿ ಸಂತರ ಜೀವನ ಸಂದೇಶ ತಿಳಿಸುವುದು. ಪೈಗಂಬರರ ಜೀವನದ ಸಂದೇಶ ಸಾರುವುದು ಸಮ್ಮೇಳನದ ಮುಖ್ಯ ಉದ್ದೇಶವಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಮಹಮ್ಮದ್ ಸಾಜೀದ್ ಗುಬ್ಬಿ, ಮಹಮ್ಮದ್ ಅಸ್ಲಾಮ್ ಮುಜಾಹಿದ್ ಉಪಸ್ಥಿತರಿದ್ದರು.







