Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕರ್ನಾಟಕ
  4. ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಕನ್ನಡವೇ...

ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಕನ್ನಡವೇ ಮಾಯ !

ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ

21 Feb 2023 5:18 PM IST
share
ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಕನ್ನಡವೇ ಮಾಯ !
ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ

ಶಿವಮೊಗ್ಗ, ಫೆ.21: ಶಿವಮೊಗ್ಗದ ಹೊರವಲಯದ ಸೊಗಾನೆಯಲ್ಲಿ ನಿರ್ಮಾಣಗೊಂಡಿರುವ ವಿಮಾನ ನಿಲ್ದಾಣವನ್ನು ಇದೇ 27 ರಂದು ಉದ್ಘಾಟನೆಗೊಳ್ಳಲಿದ್ದು, ಉದ್ಘಾಟನೆಗೆ ಕೆಲವೇ ದಿನಗಳು ಬಾಕಿ ಇರುವಾಗಲೇ, ಹೊಸ ವಿವಾದ ಸೃಷ್ಟಿಯಾಗಿದೆ.

ಇಷ್ಟು ದಿನ ವಿಮಾನ ನಿಲ್ದಾಣಕ್ಕೆ ಯಾರ ಹೆಸರನ್ನು ಇಡಬೇಕು ಅನ್ನೋ ಚರ್ಚೆ ಮುನ್ನೆಲೆಗೆ ಇತ್ತು. ಬಿಎಸ್ ಯಡಿಯೂರಪ್ಪ, ಕುವೆಂಪು, ಬಂಗಾರಪ್ಪ ಅವರ ಹೆಸರು ಇಡಬೇಕು ಅನ್ನೋ ವಾದಗಳು ಜೋರಾಗಿ ಕೇಳಿಬಂದಿದ್ದವು. ಕೊನೆಗೆ ರಾಜ್ಯ ಸರ್ಕಾರ ರಾಷ್ಟ್ರಕವಿ ಕುವೆಂಪು ಅವರ ಹೆಸರನ್ನು ಇಡಲು ನಿರ್ಧರಿಸುವ ಮೂಲಕ ಒಂದು ವಿವಾದಕ್ಕೆ ತೆರೆ ಎಳೆದಿತ್ತು. 

ಕುವೆಂಪು ಅವರ ಹೆಸರನ್ನು ಇಡಲು ರಾಜ್ಯ ಸರ್ಕಾರ ಸಂಪುಟದಲ್ಲಿ ತೀರ್ಮಾನ ತೆಗೆದುಕೊಂಡು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಆದರೆ ವಿಮಾನ ನಿಲ್ದಾಣದಲ್ಲಿ ಯಾವುದೇ ಕನ್ನಡ ಸೂಚನಾ ಫಲಕಗಳು ಇಲ್ಲದಿರೋದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ.

ಈ ಹಿನ್ನೆಲೆಯಲ್ಲಿ ಕನ್ನಡಾಭಿಮಾನಿಗಳು, ಕನ್ನಡ ಪರ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಟ್ವಿಟರ್, ಫೇಸ್ಬುಕ್ ಸೇರಿದಂತೆ ಸೋಶಿಯಲ್ ಮೀಡಿಯಾಗಳಲ್ಲಿ ವಿಮಾನ ನಿಲ್ದಾಣದಲ್ಲಿ ಕನ್ನಡವನ್ನು ಕಡೆಗಣಿಸಿರುವ ಫೋಟೋಗಳನ್ನು ಶೇರ್ ಮಾಡಿ ಸರ್ಕಾರದ ವಿರುದ್ಧ ಹಾಗೂ ಅಧಿಕಾರಿಗಳ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ. #StopHindiImposition ಎಂಬ ಹ್ಯಾಶ್ ಟ್ಯಾಗ್ ನಡಿ ಹಲವರು ಟ್ವಿಟ್ ಮಾಡುತ್ತಿದ್ದಾರೆ. 

''ಕನ್ನಡ ಎಲ್ರಪ್ಪಾ???? ಈ ನಿಲ್ದಾಣಕ್ಕೆ ಕುವೆಂಪು ಹೆಸ್ರು ಇಡ್ತೀವಿ ಅಂತೀರಾ. ಆ ಹೆಸರಿಟ್ಟು ಕನ್ನಡ ಇಲ್ದೆ ಅವ್ರಿಗೂ ಅವಮಾನ ಮಾಡೋದಿಕ್ಕಾ???'' ಎಂದು ಸಿನೆಮಾ ನಿರ್ದೇಶಕ ಮಂಸೋರೆ ಅವರು ಟ್ವೀಟ್ ಮಾಡಿದ್ದಾರೆ. 

''ಶಿವಮೊಗ್ಗ ವಿಮಾನ ನಿಲ್ದಾಣ ಹೀಗೆ ಬಿಟ್ರೆ ಕನ್ನಡದ ಅಸ್ತಿತ್ವ ಇಲ್ಲದ ಹಾಗೆ ಮಾಡಿಬಿಡ್ತಾರೆ. ಕನ್ನಡವನ್ನು ಮರೆತ ವಿಮಾನ ನಿಲ್ದಾಣ. ಎಲ್ಲಿ ನೋಡಿದ್ರು ಹಿಂದಿ ಹಿಂದಿ ಹಿಂದಿ. ಅಪ್ಪಟ ಕನ್ನಡಿಗರಿರೋ ಶಿವಮೊಗ್ಗದ ಈ ನಿಲ್ದಾಣ ಸಂಪೂರ್ಣ ಹಿಂದಿ ಹಾಗೂ ಆಂಗ್ಲಮಯ.. ನಿಲ್ಲಲಿ ಕನ್ನಡಿಗರ ಮೇಲೆ ಹಿಂದಿ ಹೇರಿಕೆ.''

- ರೂಪೇಶ್ ರಾಜಣ್ಣ, ಕನ್ನಡ ಪರ ಹೋರಾಟಗಾರ

'ಬೇರೆ ರಾಜ್ಯದವರ ಜೊತೆ ಹಿಂದಿ ಮಾತಾಡೋಕೆ ನಾವು ಹಿಂದಿ ಕಲಿಬೇಕಾ? ಇದು ಹೆರಿಕೆ ಅಲ್ಲದೆ ಇನ್ನೇನು? ಯಾಕೆ ಬೇರೆ ರಾಜ್ಯದವರು ಕನ್ನಡ ಕಲಿಬಾರದು? ಸಚಿವ ಸುನಿಲ್ ಕುಮಾರ್ ಅವರೇ, ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನಾ ಸಮಾರಂಭದಲ್ಲಿ ನೀವು ಹೇಳಿದಹಾಗೆ ಕನ್ನಡ ಪರಮೋಚ್ಚ ಮಾಡಿ ತೋರಿಸಿ' ಎಂದು 
ಸಚಿನ್ ಕುಂಬಾರ ಎಂಬವರು ಟ್ವೀಟ್ ಮಾಡಿದ್ದಾರೆ. 

'ಕನ್ನಡದ ಕಂಪು ಇಲ್ಲದ ಕುವೆಂಪು ವಿಮಾನ ನಿಲ್ದಾಣ. ಇದು ನಮ್ಮ ಹುಟ್ಟೂರಿನ ದುಸ್ಥಿತಿ' ಎಂದು ನೆಟ್ಟಿಗರೊಬ್ಬರು ಟ್ವೀಟಿಸಿದ್ದಾರೆ. 
 

ಕನ್ನಡ ಎಲ್ರಪ್ಪಾ????
ಈ ನಿಲ್ದಾಣಕ್ಕೆ ಕುವೆಂಪು ಹೆಸ್ರು ಇಡ್ತೀವಿ ಅಂತೀರಾ. ಆ ಹೆಸರಿಟ್ಟು ಕನ್ನಡ ಇಲ್ದೆ ಅವ್ರಿಗೂ ಅವಮಾನ ಮಾಡೋದಿಕ್ಕಾ??? https://t.co/2xDITHBdcC

— ಮಂಸೋರೆ/ManSoRe (@mansore25) February 20, 2023

ಕನ್ನಡದ ಕಂಪು ಇಲ್ಲದ ಕುವೆಂಪು ವಿಮಾನ ನಿಲ್ದಾಣ. ಇದು ನಮ್ಮ ಹುಟ್ಟೂರಿನ ದುಸ್ಥಿತಿ https://t.co/Fyk29H6mwy

— Ananda Gundurao (@Anandagundurao) February 21, 2023

ಬೇರೆ ರಾಜ್ಯದವರ ಜೊತೆ ಹಿಂದಿ ಮಾತಾಡೋಕೆ ನಾವು ಹಿಂದಿ ಕಲಿಬೇಕಾ?
ಇದು ಹೆರಿಕೆ ಅಲ್ಲದೆ ಇನ್ನೇನು?
ಯಾಕೆ ಬೇರೆ ರಾಜ್ಯದವರು ಕನ್ನಡ ಕಲಿಬಾರದು?@karkalasunil ಶಿವಮೊಗ್ಗ ವಿಮಾನ ನಿಲ್ದಾಣ ಉದ್ಗಾಟನಾ ಸಮಾರಂಭದಲ್ಲಿ ನೀವು ಹೇಳಿದಹಾಗೆ ಕನ್ನಡ ಪರಮೋಚ್ಚ ಮಾಡಿ ತೋರಿಸಿ. https://t.co/Axodb6TlzO

— ಸಚಿನ್ ಕುಂಬಾರ (@Sachin_S_K_) February 21, 2023

ನಮ್ಮ ನೆಲ, ನಮ್ಮ ವಿಮಾನ ನಿಲ್ದಾಣ
ಆದರೆ ನಮ್ಮ ಭಾಷೆ ಎಲ್ಲಿ ?
ಕನ್ನಡಿಗರ ಹೆಗ್ಗುರುತು #ಕುವೆಂಪು ರ ಹೆಸರಿಡುವ ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಕನ್ನಡವೇ ಮಾಯ !
ನಾಡಗೀತೆ ನೀಡಿರುವ ಶಿವಮೊಗ್ಗದಲ್ಲಿ‌ ಇಂಗ್ಲಿಷ್ ಮತ್ತು ಹಿಂದಿ ಮಾತ್ರ ಹಾಕುವುದರ ಮೂಲಕ ನಮ್ಮ ನೆಲ, ಭಾಷೆ, ಸಂಸ್ಕೃತಿಗೆ ಮಸಿ ಬಳೆದಿರುವುದು @BJP4Karnataka pic.twitter.com/nUDnqPuL4w

— Prithvi Reddy (@aapkaprithvi) February 21, 2023
share
Next Story
X