ಅಂಡರ್-17 ವಿಶ್ವಕಪ್: ಆತಿಥ್ಯ ನಗರದ ಲಾಂಛನ ಅನಾವರಣ
ಗುವಾಹಟಿ, ಆ.26: ಫಿಫಾ ಅಂಡರ್-17 ವಿಶ್ವಕಪ್ನ ಸೆಮಿಫೈನಲ್ ಆತಿಥ್ಯವಹಿಸಿಕೊಂಡಿರುವ ನಗರಗಳ ಪೈಕಿ ಒಂದಾಗಿರುವ ಗುವಾಹಟಿಯಲ್ಲಿ ಆತಿಥೇಯ ನಗರದ ಲಾಂಛನವನ್ನು ಅನಾವರಣಗೊಳಿಸಲಾಯಿತು. ನಗರದ ಲಾಂಛನವು ಪ್ರದೇಶದ ಜನರ ಭಾವನೆಗೆ ಸಂಬಂಧಿಸಿದ್ದಾಗಿದ್ದು ಫಿಫಾ ಅಂಡರ್-17 ವಿಶ್ವಕಪ್ನ ಅಧಿಕೃತ ಲಾಂಛನಕ್ಕೆ ಪೂರಕವಾಗಿದೆ.
ವಿಶ್ವಕಪ್ ಟೂರ್ನಿಯು ಅಕ್ಟೋಬರ್ 6 ರಿಂದ 28ರ ತನಕ ದೇಶದೆಲ್ಲೆಡೆ ಆರು ನಗರಗಳಲ್ಲಿ ನಡೆಯಲಿದೆ. ಫಿಫಾ ಅಂಡರ್-17 ವಿಶ್ವಕಪ್ ವಿಜೇತ ಟ್ರೋಫಿಯನ್ನು ಇಂದಿರಾ ಗಾಂಧಿ ಅಥ್ಲೆಟಿಕ್ ಸ್ಟೇಡಿಯಂನಲ್ಲಿ ಶನಿವಾರ ಅನಾವರಣಗೊಳಿಸಿದ ಅಸ್ಸಾಂ ಮುಖ್ಯಮಂತ್ರಿ ಸೋನೊವಾಲ್,‘‘ ನಮಗೆ ಅದರಲ್ಲೂ ಮುಖ್ಯವಾಗಿ ರಾಜ್ಯದ ಯುವಕರಿಗೆ ಇದೊಂದು ವಿಶೇಷ ಕ್ಷಣ. ಟ್ರೋಫಿಯನ್ನು ಅನಾವರಣಗೊಳಿಸಲು ಸಂತೋಷವಾಗುತ್ತಿದೆ. ಏಕೆಂದರೆ ಈ ವಿಶ್ವಕಪ್ ಯುವಕರಿಗೆ ವಿಶ್ವಕಪ್ ಮಟ್ಟದಲ್ಲಿ ಫುಟ್ಬಾಲ್ ಆಡಲು ಪ್ರೇರಣೆಯಾಗಲಿದೆ’’ ಎಂದು ಹೇಳಿದರು.
Next Story





