Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಆನ್ ರೆಕಾರ್ಡ್
  5. ಬಿಹಾರ ಅಂದರೆ ಅದು ಬೇರೆಯೇ?

ಬಿಹಾರ ಅಂದರೆ ಅದು ಬೇರೆಯೇ?

ಧರಣೀಶ್ ಬೂಕನಕೆರೆಧರಣೀಶ್ ಬೂಕನಕೆರೆ17 Nov 2025 11:40 AM IST
share
ಬಿಹಾರ ಅಂದರೆ ಅದು ಬೇರೆಯೇ?

ಎಂಥದೇ ಅತಿರಥ-ಮಹಾರಥ ನಾಯಕ, ಜನಪ್ರಿಯತೆಯ ತುತ್ತತುದಿಯಲ್ಲಿರುವ ನಾಯಕ ಶಿರೋಮಣಿ, ಚುನಾವಣೆ ಗೆಲ್ಲಬಲ್ಲ ಸಕಲ ಕಲೆಗಳನ್ನೂ ಕರಗತ ಮಾಡಿಕೊಂಡಿರುವ ಪಟು, ಚುನಾವಣಾ ತಂತ್ರಜ್ಞ, ಚಾಣಾಕ್ಷರೇ ಇರಲಿ, ಈ ದೇಶದ ಮತದಾರರನ್ನು ನಿರಂತರವಾಗಿ ಮೂರ್ಖರನ್ನಾಗಿ ಮಾಡಲು ಸಾಧ್ಯವಿಲ್ಲ. ತಾವು ಪ್ರಬುದ್ಧರು ಎನ್ನುವುದನ್ನು ಮತದಾರರು ಆಗಾಗ ನಿರೂಪಿಸುತ್ತಲೇ ಬಂದಿದ್ದಾರೆ. ಇತ್ತೀಚೆಗೆ 2023ರಲ್ಲಿ ಕರ್ನಾಟಕದಲ್ಲಿ ಇದನ್ನು ಸಾಬೀತು ಮಾಡಿದ್ದರು. ಬಿಜೆಪಿ ದುರಾಡಳಿತವನ್ನು ಕಿತ್ತೊಗೆದಿದ್ದರು. ಅಷ್ಟು ಮಾತ್ರವಲ್ಲ, ಆಪರೇಷನ್ ಕಮಲದಂತಹ ಅಸಹ್ಯ, ಅನಿಷ್ಟ ಮತ್ತು ಅಪ್ರಜಾಪ್ರಭುತ್ವ ಕೆಲಸ ಮಾಡುತ್ತಿದ್ದ ಬಿಜೆಪಿ ನಾಯಕರ ಕೈ ಕೈಟ್ಟಿಹಾಕಿದ್ದರು. ‘ನಾವು ಕೊಟ್ಟಿದ್ದೇ ಜನಾದೇಶ, ಹಾಗೆಯೇ ನಡೆಯಬೇಕು’ ಎಂಬ ಸ್ಪಷ್ಟ ನಿರ್ದೇಶನ ನೀಡಿದ್ದರು. 2024ರಲ್ಲಿ ‘ನಾವು ಅಂದುಕೊಂಡದ್ದನ್ನು ಮಾಡಿ ತೀರಲು ನಮಗೆ 400ಕ್ಕೂ ಹೆಚ್ಚು ಸ್ಥಾನ ಬೇಕು’ ಎಂಬ ಉಮೇದಿನಲ್ಲಿ ಹೊರಟಿದ್ದ ಬಿಜೆಪಿ ನಾಯಕರಿಗೆ ‘ನಾವು ಕೊಟ್ಟ ಜನತೀರ್ಪಿನ ಪ್ರಕಾರ ಮಾತ್ರವೇ ನಡೆಯಿರಿ’ ಎಂದು ಬುದ್ಧಿ ಕಲಿಸಿದ್ದರು. ಕಾಂಗ್ರೆಸ್ ನಾಯಕರಿಗೆ ‘ನೀವಿನ್ನೂ ಕೆಲಸ ಮಾಡುವುದಿದೆ’ ಎಂಬ ಸಲಹೆಯನ್ನೂ ನೀಡಿದ್ದರು. ಇದೀಗ ಬಿಹಾರದ ಸರದಿ.

ಜೆಡಿಯು ಅತ್ಯಂತ ಕಮ್ಮಿ ಕ್ಷೇತ್ರಗಳಲ್ಲಿ ಗೆದ್ದು ಬಿಜೆಪಿ ತುಸು ಜಾಸ್ತಿ ಸ್ಥಾನ ಪಡೆದಿದ್ದರೂ ಬಿಹಾರದಲ್ಲಿ ಬಿಜೆಪಿಯವರೇ ಮುಖ್ಯಮಂತ್ರಿ ಆಗಿರುತ್ತಿದ್ದರು. ಅದೇ ಕಾರಣಕ್ಕೆ ಬಿಜೆಪಿ ನಾಯಕರು ನಿತೀಶ್ ಕುಮಾರ್ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಿರಲಿಲ್ಲ. ಅಷ್ಟೇಯಲ್ಲ, ಖುದ್ದು ಅಮಿತ್ ಶಾ

‘ಮುಖ್ಯಮಂತ್ರಿ ಯಾರಾಗಬೇಕು ಎನ್ನುವುದನ್ನು ಮೈತ್ರಿಕೂಟದ ಶಾಸಕಾಂಗ ಪಕ್ಷ ನಿರ್ಧರಿಸುತ್ತದೆ’ ಎಂದು ಹೇಳಿದ್ದರು. ಆದರೀಗ ಬಿಹಾರದ ಜನ ನಿತೀಶ್ ಕುಮಾರ್ ಅವರೇ ಮುಖ್ಯಮಂತ್ರಿ ಎಂದು ಷರಾ ಬರೆದಿದ್ದಾರೆ. ಬಿಜೆಪಿ ನಾಯಕರು ಮರುಮಾತನಾಡದೆ ಒಪ್ಪಿಕೊಳ್ಳಬೇಕು. ಜೆಡಿಯು ಅಥವಾ ಆರ್‌ಜೆಡಿ ಶಾಸಕರಿಗೆ ಆಪರೇಷನ್ ಕಮಲ ಮಾಡದೆ ಬಿಜೆಪಿ ಮುಖ್ಯಮಂತ್ರಿ ಸ್ಥಾನವನ್ನು ಪಡೆಯುವುದು ಸಾಧ್ಯವೇ ಇಲ್ಲ. ಹಾಗಂತ ಆಪರೇಷನ್ ಕಮಲ ಮಾಡಿದರೂ ಸಾಧ್ಯವಿಲ್ಲ. ಏಕೆಂದರೆ ಈಗಿನ ಫಲಿತಾಂಶ ಜೆಡಿಯು ಅಥವಾ ಆರ್‌ಜೆಡಿ ಶಾಸಕರು ಬಿಜೆಪಿಯ ಆಪರೇಷನ್ ಕಮಲದ ಗಾಳಕ್ಕೆ ಬೀಳಲು ಭಯಪಡುವಂತಿದೆ.

ಬಿಜೆಪಿಗೆ ಮಾತ್ರವಲ್ಲ, ಪಲ್ಟು ರಾಮ್ ‘ಖ್ಯಾತಿ’ಯ ನಿತೀಶ್ ಕುಮಾರ್ ಅವರಿಗೂ ಜನ ಮತ್ತೊಂದು ಪಲ್ಟಿ ಹೊಡೆಯಲು ಅವಕಾಶ ಕೊಟ್ಟಿಲ್ಲ. ಏನೇ ಸಮಸ್ಯೆಯಾದರೂ ಮೋದಿ-ಶಾ ಜೊತೆ ಅವರು ಹೊಂದಾಣಿಕೆ ಮಾಡಿಕೊಂಡೇ ಮುನ್ನಡೆಯಬೇಕಾಗಿದೆ. ಯಾವುದೇ ವ್ಯಕ್ತಿ ಅಥವಾ ಪಕ್ಷವನ್ನು ಇಪ್ಪತ್ತು ವರ್ಷಗಳ ಬಳಿಕವೂ ಆಯ್ಕೆ ಮಾಡುವುದು ಪ್ರಜಾಪ್ರಭುತ್ವದ ದೃಷಿಯಿಂದಾಗಲಿ ಅಭಿವೃದ್ಧಿಯ ಆಯಾಮದಿಂದಾಗಲಿ ಒಳ್ಳೆಯದಲ್ಲ. ಆದರೆ ಬಿಹಾರ ಜನಕ್ಕೆ ನಿತೀಶ್ ಕುಮಾರ್ ಅವರಿಗಿಂತ ಉತ್ತಮವಾದ ಆಯ್ಕೆ ಇರಲಿಲ್ಲ. ಇಷ್ಟು ದೊಡ್ಡ ಸಂಖ್ಯೆಯಲ್ಲಿ ಗೆದ್ದಿರುವ ಬಿಜೆಪಿಯಲ್ಲೂ ಭರವಸೆ ಮೂಡಿಸುವಂತಹ ಒಬ್ಬನೇ ಒಬ್ಬ ನಾಯಕ ಇಲ್ಲ. ತೇಜಸ್ವಿ ಯಾದವ್ ‘ಮನೆಗೊಂದು ನೌಕರಿ’ ಎಂಬ ಅವಾಸ್ತವಿಕ ಭರವಸೆ ನೀಡಿದ್ದರಿಂದ ಇಂಡಿಯಾ ಮೈತ್ರಿಕೂಟ ಘೋಷಣೆ ಮಾಡಿದ ಇತರ ಗ್ಯಾರಂಟಿ ಯೋಜನೆಗಳ ಬಗ್ಗೆ ಕೂಡ ವಿಶ್ವಾಸ ಮೂಡಲಿಲ್ಲ.

ಬಿಹಾರ ಅಂದರೆ ಅದು ಬೇರೆಯೇ?

ಹಿಂದಿನಿಂದಲೂ ಬಿಹಾರದ ನೆಲ ಹಲವು ಬಗೆಯ ರಾಜಕೀಯ ಪ್ರಯೋಗಗಳಿಗೆ ಒಡ್ಡಿಕೊಂಡಿದೆ. ಜೆಪಿ ಚಳವಳಿ ಆರಂಭವಾಗಿದ್ದು ಅಲ್ಲಿಂದ. ಮಂಡಲ್ ಚಳವಳಿಗೆ ಹೆಚ್ಚು ಬೆಂಬಲ ಸಿಕ್ಕಿದ್ದು ಅಲ್ಲಿಂದ. ಮಂಡಲ್ ರಾಜಕಾರಣಕ್ಕೆ ಪ್ರತಿಯಾಗಿ ಬಿಜೆಪಿ ಕಮಂಡಲ್ ರಾಜಕಾರಣ ಮಾಡಲು ಮುಂದಾದಾಗ ಎಲ್.ಕೆ. ಅಡ್ವಾಣಿ ಅವರ ರಥಯಾತ್ರೆಯನ್ನು ತಡೆದು ನಿಲ್ಲಿಸಿದ್ದು ಬಿಹಾರದ ಸಮಷ್ಟಿಪುರದಲ್ಲಿ. ಇಡೀ ದೇಶದಲ್ಲಿ ಡಿಎಂಕೆ, ಎಸ್‌ಪಿ ಸೇರಿ ಎಲ್ಲಾ ಪ್ರಾದೇಶಿಕ ಪಕ್ಷಗಳು ಒಂದಲ್ಲಾ ಒಂದು ಸಂದರ್ಭದಲ್ಲಿ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಕೋಮುವಾದಿ ಬಿಜೆಪಿ ಜೊತೆ ಕೈಜೋಡಿಸಿವೆ. ಹಾಗೆ ಮಾಡದೆ ಪರಿಶುದ್ಧ ಪ್ರಾದೇಶಿಕ ಪಕ್ಷವಾಗಿ ಉಳಿದಿರುವ ಏಕೈಕ ಪಕ್ಷ ಎಂದರೆ ಅದು ಬಿಹಾರದ ಆರ್‌ಜೆಡಿ.

ಕೆಲವು ವಿರೋಧಾಭಾಸಗಳನ್ನೂ ಕಾಣಬಹುದು. ಉತ್ತರ ಪ್ರದೇಶದ ಬಗಲಲ್ಲೇ ಇದ್ದರೂ ಬಿಹಾರ ಕೋಮುವಾದಿ ರಾಜಕಾರಣಕ್ಕೆ ಕಿಮ್ಮತ್ತು ನೀಡಿಲ್ಲ. ರಾಷ್ಟ್ರ ರಾಜಕಾರಣದ ಮೇಲೆ ಪ್ರಭಾವ ಬೀರುತ್ತದೆ, ಆದರೆ ಅನುದಾನದ ಹೊಳೆ ಬಿಹಾರದೆಡೆಗೆ ಹರಿಯುವುದೇ ಇಲ್ಲ. ಅಲ್ಲಿನ ಜನ ರಾಜಕೀಯವಾಗಿ ಬಹಳ ಸೂಕ್ಷ್ಮಮತಿಗಳು. ಆದರೆ ಅಲ್ಲಿ ಆಗುವ ಮತದಾನದ ಪ್ರಮಾಣ ತುಂಬಾ ಕಮ್ಮಿ (ಈಗ ಮೊದಲ ಬಾರಿಗೆ ಜಾಸ್ತಿ). ಶಿಕ್ಷಣ ಕ್ಷೇತ್ರದಲ್ಲಿ ಬಿಹಾರ ತುಂಬಾ ಹಿಂದೆ ಉಳಿದಿದೆ. ಆದರೆ ಪ್ರತಿಬಾರಿ ಐಎಎಸ್ ಅಧಿಕಾರಿಗಳ ಆಯ್ಕೆಯಾದಾಗಲೂ ಬಿಹಾರದವರೇ ಹೆಚ್ಚಿನ ಸಂಖ್ಯೆಯಲ್ಲಿ ಇರುತ್ತಾರೆ. ಅಲ್ಲಿನ ಜನ ತುಂಬಾ ಶ್ರಮಜೀವಿಗಳು, ಆದರೆ ಆ ರಾಜ್ಯ ಅಭಿವೃದ್ಧಿಯಾಗಿಲ್ಲ. ಅಲ್ಲಿ ನದಿಗಳಿಗೆ-ನೀರಿಗೆ ಬರವಿಲ್ಲ. ಆದರೆ ಪ್ರಯೋಜನಕ್ಕಿಂತ ಪ್ರವಾಹಗಳಿಂದ ನಷ್ಟವಾಗುವುದೇ ಹೆಚ್ಚು.

ಜಂಗಲ್ ರಾಜ್ ಎಂಬ ಭೂತ!

ರಾಜಕೀಯ ನಾಯಕರ ನಡೆಯಂತೂ ತೀವ್ರ ಕುತೂಹಲ ಮೂಡಿಸುವಂಥದ್ದು. ಲಾಲು ಪ್ರಸಾದ್ ಯಾದವ ಜನಸಂಖ್ಯೆಯ ದೃಷ್ಟಿಯಲ್ಲಿ ಬಿಹಾರದ ರಾಜಕಾರಣವನ್ನು ನಿಯಂತ್ರಿಸುತ್ತಿದ್ದ (ಈ ಬಾರಿ ಇಲ್ಲ) ಯಾದವ್ ಸಮುದಾಯದ ಏಕಮೇವ ನಾಯಕ. ಪ್ರಭಾವಿ ಜಾತಿಗಳವರ ದರ್ಪ ದಬ್ಬಾಳಿಕೆಯಿಂದ ಜರ್ಜರಿತವಾಗಿದ್ದ ಬಿಹಾರದ ಹಿಂದುಳಿದವರು ಮತ್ತು ಅಲ್ಪಸಂಖ್ಯಾತರಿಗೆ ಆತ್ಮವಿಶ್ವಾಸ ತುಂಬಿದ ನಾಯಕ. ಹಸಿವು ತಡೆಯಲಾರದೆ ಕಲ್ಲಂಗಡಿ, ಸೌತೆಕಾಯಿ ಮತ್ತಿತರ ಹಣ್ಣು-ತರಕಾರಿಗಳನ್ನು ಕಿತ್ತು (ಕದ್ದು) ತಿಂದ ಬಡಪಾಯಿಗಳಿಗೆ ಗುಂಡು ಹಾರಿಸುತ್ತಿದ್ದ ಭೂಮಿಹಾರ್, ಕಾಯಸ್ಥರು, ಠಾಕೂರ್ ಸಮುದಾಯದ ಜನರಿಗೆ ಸಿಂಹ ಸ್ವಪ್ನವಾಗಿದ್ದ ನಾಯಕ. ಕೆಲವೊಮ್ಮೆ ಇತಿಹಾಸವೂ ಅಪಚಾರ ಎಸಗುತ್ತದೆ; ಪ್ರಭಾವಿ ಜಾತಿಗಳ ಜನರು ದೀನ, ದಲಿತರಿಗೆ ಬೂಟಿನಲ್ಲಿ ಒದ್ದು, ಅತ್ಯಾಚಾರ ಮಾಡಿ, ಪೊಲೀಸ್ ದೂರನ್ನೂ ಕೊಡಲಾಗದ ದೈನಿಸಿ ಸ್ಥಿತಿ ಸೃಷ್ಟಿಸಿದ್ದಾಗ ಈ ದೇಶದ ಯಾವ ಮಾಧ್ಯಮವೂ ಬಿಹಾರವನ್ನು ‘ಜಂಗಲ್ ರಾಜ್’ ಎಂದು ಕರೆದಿರಲಿಲ್ಲ. ಆತ್ಮವಿಶ್ವಾಸಕ್ಕೆ ಧಕ್ಕೆಯಾದದ್ದರಿಂದ ದುರ್ಬಲರು, ಹಿಂದುಳಿದವರು ಸೆಟೆದೆದ್ದು ನಿಂತಾಗ ‘ಜಂಗಲ್ ರಾಜ್’ ಎಂದು ವ್ಯಾಖ್ಯಾನ ಮಾಡಲಾಯಿತು.

ಆಗ ಮಾತ್ರವಲ್ಲ, ಲಾಲು ಪ್ರಸಾದ್ ಯಾದವ್ ಮುಖ್ಯಮಂತ್ರಿ ಕುರ್ಚಿಯಿಂದ ಕದಲಿ 28 ವರ್ಷವಾದರೂ ‘ಜಂಗಲ್ ರಾಜ್’ ಎಂಬ ಭೂತವನ್ನು ಆಗಾಗ ಮುನ್ನೆಲೆಗೆ ತರಲಾಗುತ್ತದೆ. 28 ವರ್ಷ ಎಂದರೆ ಈ ಬಾರಿ ಮೊದಲ ಸಲ ಮತದಾನ ಮಾಡಿದ ಯಾರಿಗೂ ‘ಜಂಗಲ್ ರಾಜ್’ ಅನುಭವವೇ ಆಗಿರುವುದಿಲ್ಲ. ಆದರೂ ಅವರಿಗೆ ಅದೊಂದು ದುಃಸ್ವಪ್ನ ಎಂದು ನಂಬಿಸುವುದರಲ್ಲಿ ನಂಬಿಕೆಗೆ ಅನರ್ಹವಾದ ಮಾಧ್ಯಮಗಳು ಮತ್ತು ವಿರೋಧ ಪಕ್ಷಗಳು ಯಶಸ್ವಿಯಾದವು. ಕಳೆದ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಜಂಗಲ್ ರಾಜ್ ಎಂಬುದು ಸಾಮಾನ್ಯ ಅಸ್ತ್ರ ಕೂಡ ಆಗಿರಲಿಲ್ಲ. ಈ ಬಾರಿ ಪಾಶುಪತಾಸ್ತ್ರದಂತೆ ಪ್ರಯೋಗವಾಯಿತು ಎನ್ನುವುದು ಇನ್ನೊಂದು ಕುತೂಹಲಕಾರಿ ಸಂಗತಿ.

ಲಾಲು ಇಲ್ಲದ ಬಿಹಾರದ ಇತಿಹಾಸವನ್ನು ಕಳಾಹೀನ ಎಂದು ವ್ಯಾಖಾನಿಸಬಹುದು. ಅಷ್ಟು ಪ್ರಭಾವಶಾಲಿಯಾದ ಲಾಲು ಪ್ರಸಾದ್ ಯಾದವ್ ಅವರು ಮುಖ್ಯಮಂತ್ರಿಯಾಗಿದ್ದು 7 ವರ್ಷ 3 ತಿಂಗಳು ಮಾತ್ರ. ಅವರಿಗಿಂತ ಅವರ ಹೆಂಡತಿ ರಾಬ್ಡಿ ದೇವಿ ಹೆಚ್ಚು ದಿನ (ಏಳೂವರೆ ವರ್ಷ) ಮುಖ್ಯಮಂತ್ರಿಯಾಗಿದ್ದರು. ಒಂದು ಪ್ರಬಲ ಜಾತಿಯ ಬೆಂಬಲ ಇಲ್ಲದ ನಿತೀಶ್ ಕುಮಾರ್ ಇಬಿಸಿ (ಅತಿ ಹಿಂದುಳಿದ ವರ್ಗ) ಎಂಬ ವರ್ಗ ಸೃಷ್ಟಿಸಿಕೊಂಡು 2014ರಿಂದ ಇಲ್ಲಿಯವರಿಗೆ ಮುಖ್ಯಮಂತ್ರಿ ಕುರ್ಚಿಯ ಮೇಲೆ ಅಂಟಿಕೊಂಡು ಕೂತಿದ್ದಾರೆ. ನಡುವೆ 278 ದಿನ ಮಾತ್ರ ತಮ್ಮ ಬೆಂಬಲಿಗ ಜಿತನ್ ರಾಮ್ ಮಾಂಝಿಗೆ ಪಟ್ಟ ಬಿಟ್ಟುಕೊಟ್ಟಿದ್ದರು. ದೊಡ್ಡ ಜಾತಿಯ ಬೆಂಬಲ ಇದೆ ಎನ್ನುವ ಕಾರಣಕ್ಕೆ ಲಾಲು ಪ್ರಸಾದ್ ಯಾದವ್ ಮೈಮರೆತರು. ಜಾತಿಯ ಬೆಂಬಲ ಇಲ್ಲ ಎನ್ನುವ ವಾಸ್ತವವನ್ನು ಚೆನ್ನಾಗಿ ಅರಿತಿದ್ದ ನಿತೀಶ್ ಮೈಯೆಲ್ಲಾ ಕಣ್ಣಾಗಿ ಗದ್ದುಗೆಯನ್ನು ಕಾಪಾಡಿಕೊಂಡರು.

ದ್ವೇಷ ರಾಜಕಾರಣಕ್ಕೆ ತಕ್ಕ ಪಾಠ!

ಚುನಾವಣಾ ತಂತ್ರಜ್ಞರು ರಾಜಕೀಯ ಪಕ್ಷಗಳನ್ನು ಮತ್ತು ನೇತಾರರನ್ನು ಮೂರ್ಖರನ್ನಾಗಿ ಮಾಡಬಹುದು, ಮತದಾರರನ್ನಲ್ಲ ಎನ್ನುವುದಕ್ಕೆ ಪ್ರಶಾಂತ್ ಕಿಶೋರ್ ಬಹಳ ಒಳ್ಳೆಯ ಉದಾಹರಣೆ. ಮೋದಿಗೆ ‘ಅಚ್ಛೇ ದಿನ್ ಆಯೇಗಾ’ ಎಂಬ ಘೋಷವಾಕ್ಯವನ್ನು ಕೊಟ್ಟವರೇ ಪಿಕೆ ಎಂಬ ಮಾತಿದೆ. ಆದರೆ ಇನ್ನುಮುಂದೆ ಅವರ ಪಾಲಿಗೆ ದುರ್ದಿನಗಳ ಸರದಿ. ಏಕೆಂದರೆ ನಿತೀಶ್ ಕುಮಾರ್ ಅವರ ಜೆಡಿಯು 25ಕ್ಕಿಂತ ಹೆಚ್ಚು ಸೀಟುಗಳನ್ನು ಗೆದ್ದರೆ ‘ನನ್ನ ಕೆಲಸವನ್ನು ಬಿಟ್ಟುಬಿಡುವೆ’ ಎಂದು ಮಾಧ್ಯಮದವರಿಗೆ ಬರೆದುಕೊಟ್ಟಿದ್ದರು. ಅವರಿಗೆ ಎರಡು ಮುಖಗಳಿವೆ. ಒಂದು ರಾಜಕಾರಣಿಯ ಮುಖ. ಇನ್ನೊಂದು ಚುನಾವಣಾ ತಂತ್ರಗಾರನ ವದನ. ರಾಜಕಾರಣ ಹೇಗೋ ಏನೋ? ಆದರೆ ಒಂದು ಕಾಲದಲ್ಲಿ ನರೇಂದ್ರ ಮೋದಿ, ರಾಹುಲ್ ಗಾಂಧಿ, ನಿತೀಶ್ ಕುಮಾರ್, ಎಂ.ಕೆ. ಸ್ಟಾಲಿನ್, ಮಮತಾ ಬ್ಯಾನರ್ಜಿ, ಜಗನ್ ಮೋಹನ್ ರೆಡ್ಡಿ, ಅರವಿಂದ ಕೇಜ್ರಿವಾಲ್ ಅವರಂಥ ನಾಯಕರಿಗೆ ತಂತ್ರಗಾರಿಕೆ ಮಾಡಿದ್ದ ಪಿಕೆಗೆ ಇನ್ನು ಮುಂದೆ ಹೊಸ ಕೆಲಸ ಸಿಗುವುದು ಅನುಮಾನ.

ಇಷ್ಟಕ್ಕೂ ಪ್ರಶಾಂತ್ ಕಿಶೋರ್ ಮಾಡಿದ್ದೇನು? ದ್ವೇಷದ ರಾಜಕಾರಣ. ತಾನು ಗೆಲ್ಲಬೇಕು ಎನ್ನುವುದಕ್ಕಿಂತ ನಿತೀಶ್ ಕುಮಾರ್ ಅವರನ್ನು ಸೋಲಿಸಬೇಕೆಂಬುದೇ ಅವರ ಪರಮಗುರಿಯಾಗಿತ್ತು. ಅದರಲ್ಲೂ ಹಿಂದೊಮ್ಮೆ ‘ನನ್ನ ಉತ್ತರಾಧಿಕಾರಿ ಪ್ರಶಾಂತ್ ಕಿಶೋರ್’ ಎಂದು ಘೋಷಿಸಿದ್ದ ನಿತೀಶ್ ಕುಮಾರ್ ಸೋಲಿಗೆ ಪಣ ತೊಟ್ಟ ಪಿಕೆಗೆ ಬಿಹಾರದ ಜನ ಸರಿಯಾದ ಪಾಠವನ್ನೇ ಕಲಿಸಿದ್ದಾರೆ. ದೇಶಕಂಡ ನಂಬರ್ ಒನ್ ಚುನಾವಣಾ ತಂತ್ರಜ್ಞನಿಗೆ ಈ ದೇಶದಲ್ಲಿ ದ್ವೇಷದ ರಾಜಕಾರಣಕ್ಕೆ ಕಿಮ್ಮತ್ತಿಲ್ಲ ಎನ್ನುವುದು ಗೊತ್ತಿರಬೇಕಿತ್ತು. ಸೋಲಿಸಲೆಂದೇ ರಾಜಕಾರಣ ಮಾಡಿದರೆ ಯಾವತ್ತೂ ಗೆಲ್ಲಲು ಸಾಧ್ಯವಿಲ್ಲ ಎನ್ನುವುದನ್ನು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರನ್ನು ನೋಡಿಯಾದರೂ ಕಲಿಯಬೇಕಾಗಿತ್ತು. ಮಾಜಿ ಪ್ರಧಾನಿಯೊಬ್ಬರ ಬಗ್ಗೆಯೇ ಅಧ್ಯಯನ ಮಾಡಿರದ ಪ್ರಶಾಂತ್ ಕಿಶೋರ್ ಚುನಾವಣೆಗಳಿಗೆ ತಂತ್ರಗಾರಿಕೆ ಮಾಡುತ್ತಾರೆ ಎನ್ನುವುದೇ ಕುಚೋದ್ಯ.

ಆಫ್ ದಿ ರೆಕಾರ್ಡ್!

ಕರ್ನಾಟಕದಲ್ಲೂ ಒಬಿಸಿಗಳಿಗೆ ಪರ್ಯಾಯವಾಗಿ ಇಬಿಸಿ ರಾಜಕಾರಣ ಶುರುವಾಗಬೇಕು ಎನ್ನುವ ದನಿ ಸಣ್ಣದಾಗಿ ಕೇಳಿಬರುತ್ತಿದೆ. ಸಾಮಾನ್ಯವಾಗಿ ಇದು ಹಿಂದುಳಿದ ವರ್ಗಗಳ ಪೈಕಿ ಎರಡನೇ ಅತಿದೊಡ್ಡ ಜಾತಿಯ ನಾಯಕ ಉದಯವಾದರೆ ಸಾಧ್ಯವಾಗುತ್ತದೆ. ಕರ್ನಾಟಕದಲ್ಲಿ ಅಂಥ ಜಾತಿ ಎಂದರೆ ಈಡಿಗ ಅಥವಾ ಬಿಲ್ಲವ. ಆದರೆ ಆ ಸಮುದಾಯದಲ್ಲಿ ಬಿ.ಕೆ. ಹರಿಪ್ರಸಾದ್ ಬಿಟ್ಟರೆ ಉಳಿದವರು ಕಾಣುತ್ತಿಲ್ಲ. ಬೇರೆ ಜಾತಿಗಳಲ್ಲಂತೂ ಮುಂದಿನ ಹತ್ತು ವರ್ಷಗಳ ನಂತರವಾದರೂ ತಾನು ಒಬಿಸಿ ಅಥವಾ ಇಬಿಸಿ ನಾಯಕನಾಗಿ ಹೊರಹೊಮ್ಮಬೇಕು ಎಂಬ ಉತ್ಸಾಹ ಮತ್ತು ಶ್ರಮ ತೋರುತ್ತಿರುವ ಒಬ್ಬನೇ ಒಬ್ಬ ನಾಯಕ ಕಾಣಿಸುತ್ತಿಲ್ಲ. ಸಿದ್ದರಾಮಯ್ಯ ನಂತರ ನಿರ್ವಾತ ನಿರ್ಮಾಣವಾಗಲಿದೆ. ಕಾಂಗ್ರೆಸ್ ಪಕ್ಷಕ್ಕಂತೂ ಅದರ ಅರಿವು ಇದ್ದಂತಿಲ್ಲ. ಇದ್ದಿದ್ದರೆ ಬಿಹಾರವೂ ಸೇರಿದಂತೆ ಇಡೀ ದೇಶದಲ್ಲಿ ಅದು ಇಷ್ಟು ನಿಸ್ತೇಜವಾಗುತ್ತಿರಲಿಲ್ಲ.

share
ಧರಣೀಶ್ ಬೂಕನಕೆರೆ
ಧರಣೀಶ್ ಬೂಕನಕೆರೆ
Next Story
X