Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ನೆಲದನಿ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಮಾಹಿತಿ ಮಾರ್ಗದರ್ಶನ
    • ಆರೋಗ್ಯ
    • ಓ ಮೆಣಸೇ
    • ಕೃತಿ ಪರಿಚಯ
    • ಝಲಕ್
    • ಬುಡಬುಡಿಕೆ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಆನ್ ರೆಕಾರ್ಡ್
  5. ಎಚ್‌ಡಿಕೆ ಆತ್ಮವಂಚನೆಗೆ ಕೊನೆಯೇ ಇಲ್ಲವೇ?

ಎಚ್‌ಡಿಕೆ ಆತ್ಮವಂಚನೆಗೆ ಕೊನೆಯೇ ಇಲ್ಲವೇ?

ಧರಣೀಶ್ ಬೂಕನಕೆರೆಧರಣೀಶ್ ಬೂಕನಕೆರೆ9 Nov 2026 12:22 PM IST
share
ಎಚ್‌ಡಿಕೆ ಆತ್ಮವಂಚನೆಗೆ ಕೊನೆಯೇ ಇಲ್ಲವೇ?

ಎಲ್ಲಾ ಬಾಣಗಳು ಗುರಿ ತಲುಪುತ್ತವೆ ಎನ್ನುವ ಗ್ಯಾರಂಟಿಗಳಿರುವುದಿಲ್ಲ. ಅಂಥದ್ದರಲ್ಲಿ ಗುರಿಯೇ ಇಲ್ಲದೆ ‘ಮೊದಲು ಬಾಣ ಹೂಡಿ ಅದು ಬತ್ತಳಿಕೆ ಬಿಟ್ಟು ಹೊರಟ ಮೇಲೆ ಗುರಿ ಬಗ್ಗೆ ಯೋಚಿಸಿದರೆ’ ಯಶಸ್ಸು ಸಾಧಿಸಬಹುದೇ? ಎಚ್.ಡಿ. ಕುಮಾರಸ್ವಾಮಿ ಸಾಧಿಸಬಹುದು ಎಂದುಕೊಂಡಿದ್ದಾರೆ.

ಕುಮಾರಸ್ವಾಮಿ ಅವರ ಗುರಿ ಮತ್ತು ಕ್ರಿಯೆಯ ನಡುವೆ ಬಹಳಷ್ಟು ಸಲ ಸಂಬಂಧವೇ ಇರುವುದಿಲ್ಲ. ಅದರಿಂದಾಗಿ ಅವು ಎಲ್ಲೋ ಆರಂಭವಾಗಿ ಮತ್ತೆಲ್ಲಿಗೋ ತಲುಪುತ್ತವೆ; ಅವರ ಮಾತುಗಳಂತೆ. ಕೆಲವೊಮ್ಮೆ ಅವರು ಬಿಟ್ಟ ಬಾಣಗಳು ಅವರಿಗೇ ಮುಳುವಾಗುತ್ತವೆ. ಸದ್ಯದ ಸ್ಟಿಂಗ್ ವಿಚಾರಲ್ಲೂ ಹೀಗೇ ಆಗಿದೆ ಎನ್ನುವ ವ್ಯಾಖ್ಯಾನಗಳಿವೆ. ಆದರೆ ಈ ವಿಷಯದಲ್ಲಿ ಈಗಲೇ ನಿರ್ಧಾರಕ್ಕೆ ಬರಲು ಸಾಧ್ಯವಿಲ್ಲ.

ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ನಡುವೆ ಸಣ್ಣಗೆ ಉರಿಯುತ್ತಿದ್ದ ಬೆಂಕಿಗೆ ಕುಮಾರಸ್ವಾಮಿ ಉಪ್ಪು-ತುಪ್ಪ ಸುರಿದಿದ್ದಾರೆ. ‘ಸ್ಟಿಂಗ್ ಸೂತ್ರಧಾರ’ ಎಂಬ ಪಟ್ಟ ಕಟ್ಟುವ ಮೂಲಕ ಒಕ್ಕಲಿಗ ಸಮುದಾಯದ ನಾಯಕತ್ವಕ್ಕೆ ಪ್ರತಿಸ್ಪರ್ಧಿಯಾಗಿರುವ ಡಿ.ಕೆ. ಶಿವಕುಮಾರ್ ಅವರನ್ನು ಖಳನಾಯಕನ ಸ್ಥಾನದಲ್ಲಿ ನಿಲ್ಲಿಸಿದ್ದಾರೆ. ಮತ್ತೊಬ್ಬ ರಾಜಕೀಯ ವೈರಿ ಸಿದ್ದರಾಮಯ್ಯ ಅವರ ಮಾನ ಹರಾಜು ಹಾಕಿ ಸೇಡು ತೀರಿಸಿಕೊಂಡಿದ್ದಾರೆ. ಒಟ್ಟಾರೆ ಇದು ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಮತ್ತು ಕಾಂಗ್ರೆಸ್ ವರ್ಚಸ್ಸಿಗೆ ಧಕ್ಕೆಯಾಗಿದೆ. ಒಂದು ಮಟ್ಟಕ್ಕೆ ಇವೆಲ್ಲವೂ ಕುಮಾರಸ್ವಾಮಿ ಸಾಧಿಸಿದ ಗೆಲುವುಗಳು. ಆದರೆ ಸ್ಟಿಂಗ್ ವಿಚಾರ ಪ್ರಸ್ತಾಪಿಸಿದ್ದರಿಂದ ಕುಮಾರಸ್ವಾಮಿ ವರ್ಚಸ್ಸೇನೂ ಮುಗಿಲು ಮುಟ್ಟಿಲ್ಲ. ರಾಜಕೀಯಕ್ಕೋಸ್ಕರ ಸ್ಟಿಂಗ್ ನಂತಹ ಅಸ್ತ್ರ ಬಳಸುವಷ್ಟು ಕೀಳು ಮಟ್ಟಕ್ಕೆ ಅವರು ಇಳಿಯಬಾರದಿತ್ತು ಎನ್ನುವ ಜನಾಭಿಪ್ರಾಯ ಕೂಡ ರೂಪುಗೊಂಡಿದೆ.

ಕುಮಾರಸ್ವಾಮಿ ಬಿತ್ತಿದ್ದನ್ನು ಬೆಳೆಯುತ್ತಿದ್ದಾರೆ. ಇದೇ ಸ್ಟಿಂಗ್ ವಿಷಯದಲ್ಲಿ ಪ್ರಿಯಾಂಕ್ ಖರ್ಗೆ ಅವರನ್ನು ‘ಬಲಿತ ದಲಿತ’ ಎಂದು ಹೇಳುವ ಮೂಲಕ ಪರಿಶಿಷ್ಟ ಸಮುದಾಯದ ಬಗ್ಗೆ ತಮ್ಮೊಳಗೆ ಸುಪ್ತವಾಗಿದ್ದ ಅಸಹನೆ-ಅಸೂಯೆಗಳನ್ನು ವ್ಯಕ್ತಪಡಿಸಿದ್ದಾರೆ. ಬೇರೆಯವರಾಗಿದ್ದರೆ ಕೇಳಿಸಿಕೊಂಡು ಸುಮ್ಮನಿರುತ್ತಿದ್ದರೇನೋ... ಪ್ರಿಯಾಂಕ್ ಸಹಿಸಿಕೊಳ್ಳುವವರಲ್ಲ; ತಿರುಗಿಬಿದ್ದಿದ್ದಾರೆ. ಮಾತಿನ ಭರದಲ್ಲಿ ‘ಹಳ್ಳಿ ಗುಗ್ಗು’ ಎಂದಿದ್ದಾರೆ. ಪ್ರಿಯಾಂಕ್ ಮಾತು ಕುಮಾರಸ್ವಾಮಿಗೆ ಹೊಸ ಅಸ್ತ್ರವಾಗಿದೆ. ಸ್ಟಿಂಗ್ ವಿಷಯವನ್ನು ಪಕ್ಕಕ್ಕಿಟ್ಟು ‘ಹಳ್ಳಿ ಗುಗ್ಗು’ ಎಂಬ ವಿಷಯವನ್ನು ಚರ್ಚೆಯ ಮುನ್ನೆಲೆಗೆ ತರುತ್ತಿದ್ದಾರೆ. ಪ್ರಿಯಾಂಕ್ ಹಾಗೆ ಹೇಳಬಾರದಿತ್ತು. ಇದನ್ನು ಎಲ್ಲರೂ ಖಂಡಿಸಬೇಕು. ಹಾಗೆಯೇ ಎರಡು ಸಲ ಮುಖ್ಯಮಂತ್ರಿಯಾಗಿದ್ದ, ಮಾಜಿ ಪ್ರಧಾನಿಯ ಮಗನಾದ ಕುಮಾರಸ್ವಾಮಿ ಹೇಗೆಲ್ಲಾ ಮಾತನಾಡಿದ್ದಾರೆ ಎನ್ನುವುದನ್ನೂ ನೆನಪಿಸಿಕೊಳ್ಳಬೇಕು.

ಖಾಸಗಿ ವಾಹಿನಿಯ ನೇರ ಪ್ರಸಾರ ಕಾರ್ಯಕ್ರಮದಲ್ಲಿ ಕುಮಾರಸ್ವಾಮಿ ಏನು ಮಾತನಾಡಿದ್ದರು? ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ. ಯು.ಆರ್. ಅನಂತಮೂರ್ತಿ ಬಗ್ಗೆ ಏನು ಮಾತನಾಡಿದ್ದರು? ಅವರ ಪಕ್ಷದ ಹೆಸರಿನಲ್ಲೇ ‘ಜಾತ್ಯತೀತ’ ಎನ್ನುವ ಪದವಿದೆ. ಕುಮಾರಸ್ವಾಮಿ ಬಿಜೆಪಿ ಜೊತೆ ಹೋಗಿ ಸರಕಾರ ಮಾಡಿದಾಗ ಜಾತ್ಯತೀತ ಪದವನ್ನು ಹೇಗೆ ಲೇವಡಿ ಮಾಡಿದ್ದರು? ಅವರ ತಂದೆ ಎಚ್.ಡಿ. ದೇವೇಗೌಡ ಬಿಜೆಪಿ ನಾಯಕ ಬಿ.ಎಸ್. ಯಡಿಯೂರಪ್ಪ ಬಗ್ಗೆ ಏನು ಮಾತನಾಡಿದ್ದರು?

ಅವರ ಅಣ್ಣ ಎಚ್.ಡಿ. ರೇವಣ್ಣ ಮಂಡ್ಯ ಲೋಕಸಭಾ ಚುನಾವಣೆ ವೇಳೆ ಪ್ರತಿಸ್ಪರ್ಧಿ ಸುಮಲತಾ ಬಗ್ಗೆ ಏನು ಹೇಳಿದ್ದರು? ಅವರ ಅತ್ತಿಗೆ ಭವಾನಿ ರೇವಣ್ಣ ತಮ್ಮ ಕಾರು ಅಪಘಾತವಾದಾಗ ಬಡಪಾಯಿ ಸ್ಕೂಟರ್ ಸವಾರನಿಗೆ (ಅವರ ಕುಟುಂಬದ ಅವನತಿ ಆರಂಭವಾಗಿದ್ದು ಅಲ್ಲಿಂದಲೇ) ಎಂತಹ ದರ್ಪದ ಮಾತನಾಡಿದ್ದರು?

ಕುಮಾರಸ್ವಾಮಿ ಮತ್ತು ಅವರ ಕುಟುಂಬದವರು ಸಾರ್ವಜನಿಕ ಜೀವನದಲ್ಲಿ ನಿರ್ಭಿಡೆಯಿಂದ ಬಹಿರಂಗವಾಗಿ ಈ ರೀತಿಯ ಮಾತುಗಳನ್ನು ಬಿತ್ತಿರುವುದರಿಂದ ಈಗ ಅವರಿಗೆ ಅಂಥದೇ ಫಲ ಸಿಗುತ್ತಿದೆ. ಈ ಹಿನ್ನೆಲೆಯಲ್ಲಿ ಈ ಹಂತದಲ್ಲಿ ಕುಮಾರಸ್ವಾಮಿ ಅವರ ದ್ವಂದ್ವ, ಧೈರ್ಯ, ದ್ವಿಮುಖ ನೀತಿ, ದರ್ಪ, ದಡ್ಡತನ, ಮರೆವು, ಕಪಟ, ಕುತಂತ್ರ, ಭ್ರಮೆಗಳು ಹೇಗಿವೆ ಎನ್ನುವುದನ್ನೂ ನೆನಪಿಸಿಕೊಳ್ಳಬೇಕು.

ದ್ವಂದ್ವ ಯಾವುದು?

ಎಚ್.ಡಿ. ದೇವೇಗೌಡ ಕುಟುಂಬದ ಕುಡಿ ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ‘ಪ್ರಜ್ವಲ್ ಮಾಡಿದ್ದು ಪುಣ್ಯದ ಕೆಲಸ, ಪೆನ್ ಡ್ರೈವ್ ಹರಡಿದವರದೇ ಪ್ರಮಾದ’ ಎಂದು ಪ್ರತಿಪಾದಿಸುವ ಕುಮಾರಸ್ವಾಮಿ (ನ್ಯಾಯಾಲಯ ಪ್ರಜ್ವಲ್ ಅಪರಾಧಿ ಎಂದು ತೀರ್ಪು ನೀಡಿದ ಮೇಲೂ), ಸಿದ್ದರಾಮಯ್ಯ ಸ್ಟಿಂಗ್ ಪ್ರಕರಣದಲ್ಲಿ ‘ಹರಡಿದವರನ್ನು ಬಿಟ್ಟುಬಿಡಿ, ಸ್ಟಿಂಗ್ ಮಾಡಿದವರನ್ನು ಹಿಡಿಯಿರಿ’ ಎಂದು ಪಟ್ಟು ಹಾಕುತ್ತಿದ್ದಾರೆ. ಇದು ಅವರ ದ್ವಂದ್ವ ನಿಲುವಲ್ಲವೇ?

ಧೈರ್ಯ-ದ್ವಿಮುಖ ನೀತಿ ಎಂಥದ್ದು?

ಪ್ರಿಯಾಂಕ್ ಖರ್ಗೆಗೆ ಸಾಮಾನ್ಯ ಕ್ಷೇತ್ರದಲ್ಲಿ ಸ್ಪರ್ಧಿಸುವಂತೆ ಸವಾಲು ಹಾಕುವ ಕುಮಾರಸ್ವಾಮಿ ಉತ್ತರ ಕರ್ನಾಟಕದ ಯಾವುದಾದರೊಂದು, ಅದರಲ್ಲೂ ಲಿಂಗಾಯತರೇ ಹೆಚ್ಚಿರುವ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುವ ಧೈರ್ಯ ತೋರಬಹುದಲ್ಲವೇ? ಧೈರ್ಯ ಇಲ್ಲವೇ ಅಥವಾ ದ್ವಿಮುಖ ನೀತಿಯೇ?

ಮರೆವೋ ಅಥವಾ ಕಪಟವೋ?

ಮೀಸಲಾತಿಯ ಅನುಕೂಲ ಪಡೆದಿರುವವರೇ ಮತ್ತೆ ಮತ್ತೆ ಅದರ ಲಾಭ ಮಾಡಿಕೊಳ್ಳುತ್ತಿದ್ದಾರೆ ಎಂದು ಮಲ್ಲಿಕಾರ್ಜುನ ಖರ್ಗೆ ಮತ್ತು ಪ್ರಿಯಾಂಕ್ ಖರ್ಗೆ ಕುಟುಂಬದ ಮೇಲೆ ಕಾರಿಕೊಂಡಿದ್ದಾರೆ. ಆದರೆ ಅಧಿಕಾರ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ತಮ್ಮ ತಂದೆ, ಅಣ್ಣಂದಿರು, ಅಣ್ಣನ ಮಕ್ಕಳು, ಅತ್ತಿಗೆ, ಹೆಂಡತಿ, ಮಗ, ಸಹೋದರಿಯರು ಮತ್ತು ಭಾವಂದಿರ ಕೈಯಲ್ಲಿ ಅಂದರೆ ತಮ್ಮ ಕುಟುಂಬದಲ್ಲೇ ಕೇಂದ್ರೀಕೃತವಾಗಿರುವ ಬಗ್ಗೆ ಮಾತನಾಡುವುದಿಲ್ಲ. ಇದು ಅವರ ಮರೆವೋ? ಅಥವಾ ಕಪಟವೋ?

ದರ್ಪ ಅಲ್ಲವೇ?

ಕುಮಾರಸ್ವಾಮಿ ಆಗಾಗ ನಾವ್ಯಾರಿಗೂ ಹೆದರಲ್ಲ ಎಂದು ಹೇಳುತ್ತಾರೆ. ವಿಧಾನಸಭೆಯಲ್ಲೂ ಸಿದ್ದರಾಮಯ್ಯ ವಿರುದ್ಧ ಒಮ್ಮೆ ಹೀಗೇ ಮಾತನಾಡಿದ್ದರು. ಇದಕ್ಕೆ ಆಕ್ರೋಶದಿಂದ ಪ್ರತಿಕ್ರಿಯಿಸಿದ್ದ ಸಿದ್ದರಾಮಯ್ಯ ‘ನಾವು ಅಷ್ಟೇ ನಿಮಗೂ ಹೆದರಲ್ಲ, ನಿಮ್ಮ ಅಪ್ಪನಿಗೂ ಹೆದರಲ್ಲ’ ಎನ್ನುವ ರೀತಿ ರೊಚ್ಚಿಗೆದ್ದಿದ್ದರು. ಖಂಡಿತಕ್ಕೂ ಕುಮಾರಸ್ವಾಮಿ ಯಾರಿಗೂ ಹೆದರುವ ಅಗತ್ಯ ಇಲ್ಲ. ಹಾಗೆಯೇ ಅವರು ಕೂಡ ಯಾರನ್ನು ಹೆದರಿಸಬಾರದು. ತಮ್ಮನ್ನು ಯಾರೂ ಹೆದರಿಸಲು ಸಾಧ್ಯವಿಲ್ಲ, ತಾವು ಮಾತ್ರ ಎಲ್ಲರನ್ನೂ ಹೆದರಿಸಬಹುದು ಎಂದುಕೊಳ್ಳುವುದು ದರ್ಪ ಅಲ್ಲವೇ?

ದಡ್ಡತನ ಅಲ್ಲವೇ?

ಕುಮಾರಸ್ವಾಮಿ ನನಗೆ ಎಲ್ಲರ ಬಂಡವಾಳವೂ ಗೊತ್ತು ಎಂದು ಹೇಳುತ್ತಾರೆ. ಬೇರೆಯವರಿಗೆ ಇವರ ಬಂಡವಾಳ ಗೊತ್ತಿಲ್ಲವೇ? ಕುಮಾರಸ್ವಾಮಿ ಕೆಲವೇ ಕೆಲವು ವಿಷಯಗಳನ್ನು ಮಾತನಾಡುತ್ತಾರೆ. ಇವರ ಹಾಗೆ ಬೇರೆಯವರು ಕೂಡ ಅವರಿಗೆ ಬೇಕಿರುವ ವಿಷಯವನ್ನು ಮಾತ್ರ ಮಾತನಾಡುತ್ತಾರೆ. ಬೇರೆಯವರು ಸುಮ್ಮನಿದ್ದಾರೆ ಎಂದ ಮಾತ್ರಕ್ಕೆ ಅವರಿಗೆ ಏನೂ ಗೊತ್ತಿಲ್ಲ, ಕುಮಾರಸ್ವಾಮಿ ಎಲ್ಲಾ ವಿಷಯದಲ್ಲೂ ಮಾತನಾಡುತ್ತಾರೆ ಎಂದ ಮಾತ್ರಕ್ಕೆ ಅವರಿಗೆ ಎಲ್ಲರ ಬಂಡವಾಳವೂ ಗೊತ್ತು ಎಂದು ತಿಳಿದರೆ ಅದು ದಡ್ಡತನ ಅಲ್ಲವೇ?

ಭ್ರಮೆ ಅಲ್ಲವೇ?

ಸರಕಾರದಲ್ಲಿ ಸೂಜಿ ಅಲುಗಾಡಿದರೂ ನನಗೆ ಗೊತ್ತಾಗುತ್ತದೆ ಎಂದು ಹೇಳುತ್ತಾರೆ. ಗೊತ್ತಿದ್ದಮೇಲೆ ಹೇಳಿಬಿಡಲಿ. ಸಾಮಾನ್ಯವಾಗಿ ಎಲ್ಲಾ ಪತ್ರಕರ್ತರಿಗೂ ನಾನಾ ವಿಚಾರಗಳು ಗೊತ್ತಿರುತ್ತವೆ. ಎಲ್ಲವನ್ನೂ ಬರೆಯಲು ಸಾಧ್ಯವಾಗುವುದಿಲ್ಲ. ಅದಕ್ಕೆ ನಾನಾ ಕಾರಣಗಳಿರುತ್ತವೆ. ಹಾಗಂತ ಯಾರಾದರೂ ಪತ್ರಕರ್ತರು ನನಗೆ ಮಾತ್ರ ಎಲ್ಲಾ ಗೊತ್ತು ಎಂದುಕೊಂಡರೆ ಅದು ಆತನ ಭ್ರಮೆ. ಕುಮಾರಸ್ವಾಮಿ ವಿಷಯದಲ್ಲೂ ಹಾಗೇ ಅಲ್ಲವೇ?

ಕುತಂತ್ರ ಅಲ್ಲವೇ?

‘ಸ್ಟಿಂಗ್ ವಿಚಾರದಲ್ಲಿ ಬೇಕೆಂತಲೇ ಮೌನವಾಗಿದ್ದಾರೆ. ಈ ಮೂಲಕ ತಮಗೆ ಮುಖ್ಯಮಂತ್ರಿ ಸ್ಥಾನ ತಪ್ಪಿಸಿದ ಸಿದ್ದರಾಮಯ್ಯ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳುತ್ತಿದ್ದಾರೆ. ಅದಕ್ಕಾಗಿಯೇ ಗೃಹ ಸಚಿವರೂ ಆಗಿರುವ ಅವರ ಪುತ್ರ ಪ್ರಿಯಾಂಕ್ ಖರ್ಗೆ ಸೂಕ್ತವಾದ ತನಿಖೆ ನಡೆಸುತ್ತಿಲ’್ಲ ಎಂದು ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಮೇಲೆ ಕುಮಾರಸ್ವಾಮಿ ಅನುಮಾನದ ಕೆಸರು ಎರಚಿದ್ದಾರೆ. ಆದರೆ 2004ರಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಇದ್ದ ಮುಖ್ಯಮಂತ್ರಿ ಆಗುವ ಅವಕಾಶವನ್ನು ತಪ್ಪಿಸಿದ್ದು ಇದೇ ಕುಮಾರಸ್ವಾಮಿಯ ಪೂಜ್ಯ ಪಿತಾಶ್ರೀ ಎಚ್.ಡಿ. ದೇವೇಗೌಡ. ಆಗ ಮುಖ್ಯಮಂತ್ರಿ ಸ್ಥಾನವನ್ನು ತಪ್ಪಿಸಿದ್ದು ಮಾತ್ರವಲ್ಲದೆ ಈಗ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಸಿದ್ದರಾಮಯ್ಯ ಅವರನ್ನು ಎತ್ತಿಕಟ್ಟುತ್ತಿರುವುದು ಕುತಂತ್ರವಲ್ಲವೇ? ಅಥವಾ ಸ್ಟಿಂಗ್ ವಿಚಾರದಲ್ಲಿ ಏಕಕಾಲಕ್ಕೆ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್, ಮಲ್ಲಿಕಾರ್ಜುನ ಖರ್ಗೆ ಹಾಗೂ ಪ್ರಿಯಾಂಕ್ ಖರ್ಗೆ ವಿರುದ್ಧ ದ್ವೇಷ ತೀರಿಸಿಕೊಳ್ಳುತ್ತಿದ್ದಾರೋ?

ಆಫ್ ದಿ ರೆಕಾರ್ಡ್!

‘ನಾನು ಹಳ್ಳಿ ಗುಗ್ಗು ಏನಿವಾಗ?’ ಎಂಬ ಪೋಸ್ಟ್ ಗಳಲ್ಲಿ, ಪೋಸ್ಟರ್ ಗಳಲ್ಲಿ ‘ತಾನು ಹಳ್ಳಿಯವನು’ ಎಂದು ಹೇಳಿಕೊಳ್ಳುವ ಹೆಮ್ಮೆಗಿಂತ ಜಾಸ್ತಿ ಜಾತಿಯ ನಂಜು ಕಾಣುತ್ತಿದೆ. ಸ್ಟಿಂಗ್ ವಿಚಾರದಲ್ಲಿ ಸುದ್ದಿಗಿಂತ ಜಾಸ್ತಿ ಗಬ್ಬು ಗದ್ದಲವೇ ಕಾಣಿಸುತ್ತಿದೆ. ಕುಮಾರಸ್ವಾಮಿ ವಿಷಯದಲ್ಲಿ ರಾಜಕಾರಣಕ್ಕಿಂತ ದ್ವೇಷವೇ ಕಾಣಿಸುತ್ತಿದೆ. ಆದರೆ ಇದೇ ಕುಮಾರಸ್ವಾಮಿ, ಡಿ.ಕೆ. ಶಿವಕುಮಾರ್ ಕುರಿತು ‘ದ್ವೇಷ ಬಿಟ್ಟರೆ ಸನ್ಮಾನಿಸುವೆ’ ಎಂದು ಹೇಳಿದ್ದಾರೆ. ಆತ್ಮವಂಚನೆಗೆ ಕೊನೆಯೇ ಇಲ್ಲವೇ?

Tags

HD Kumaraswamy
share
ಧರಣೀಶ್ ಬೂಕನಕೆರೆ
ಧರಣೀಶ್ ಬೂಕನಕೆರೆ
Next Story
X