Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಆನ್ ರೆಕಾರ್ಡ್
  5. ತಮಿಳುನಾಡನ್ನು ನೋಡಿ ಕಲಿಯಬೇಕಿರುವ...

ತಮಿಳುನಾಡನ್ನು ನೋಡಿ ಕಲಿಯಬೇಕಿರುವ ಕರ್ನಾಟಕ!

ಧರಣೀಶ್ ಬೂಕನಕೆರೆಧರಣೀಶ್ ಬೂಕನಕೆರೆ11 May 2026 10:33 AM IST
share
ತಮಿಳುನಾಡನ್ನು ನೋಡಿ ಕಲಿಯಬೇಕಿರುವ ಕರ್ನಾಟಕ!

ತಮಿಳುನಾಡಿನ ಚುನಾವಣಾ ಫಲಿತಾಂಶ ದೇಶಾದ್ಯಂತ ಹೊಸ ರೀತಿಯ ಚರ್ಚೆಯನ್ನು ಹುಟ್ಟುಹಾಕಿದೆ. ರಾಜಕೀಯ ಮಾದರಿಗಳನ್ನು ಬದಲಿಸಿಕೊಳ್ಳಬೇಕೆಂಬ ಸಂದೇಶ ಕೊಟ್ಟಿದೆ. ದುಡ್ಡು ಮತ್ತು ಜಾತಿ ಎಂಬ ಅಸ್ತ್ರಗಳಿಲ್ಲದೆಯೂ ರಣರಂಗವನ್ನು ಭೇದಿಸಬಹುದೆಂಬುದನ್ನು ಸಾಬೀತುಪಡಿಸಿದೆ. ಎದುರಿಗೆ ಎಂಥದೇ ಜಗಜಟ್ಟಿ ಇದ್ದರೂ ಮಣ್ಣು ಮುಕ್ಕಿಸಬಹುದು ಎಂಬುದನ್ನು ತೋರಿಸಿಕೊಟ್ಟಿದೆ. ಭಾವನೆಗಳ ಮೂಲಕವೇ ಚುನಾವಣೆಗಳನ್ನು ಗೆಲ್ಲಬಹುದೆಂಬ ಭ್ರಮೆಯನ್ನು ಅಳಿಸಿ ಹಾಕಿದೆ. ಇವೆಲ್ಲವುಗಳ ಜೊತೆಗೆ ಪಕ್ಕದಲ್ಲೇ ಇರುವ ಕರ್ನಾಟಕಕ್ಕೆ ಎರಡು ಮುಖ್ಯ ಪಾಠಗಳನ್ನು ಕಲಿಸಿದೆ.

ಮೊದಲನೆಯ ಪಾಠ ಪ್ರಾದೇಶಿಕ ಪಕ್ಷದ ಅಗತ್ಯತೆ ಬಗ್ಗೆ. ತಮಿಳುನಾಡಿನ ಜನ ನಿರಂತರವಾಗಿ ಆರು ದಶಕ ಡಿಎಂಕೆ ಮತ್ತು ಎಡಿಎಂಕೆಗೆ ಮತಹಾಕಿದ್ದಾರೆ. ಮತ್ತೆಂದೂ, ಯಾವ ಕಾರಣಕ್ಕೂ ರಾಷ್ಟ್ರೀಯ ಪಕ್ಷಗಳನ್ನು ಬೆಂಬಲಿಸುವುದಿಲ್ಲ ಎಂದು ಶಪಥಗೈದವರಂತೆ ವಿಧಾನಸಭೆಯಲ್ಲೇ ವಸ್ತ್ರಾಪಹರಣದಿಂದ ಹಿಡಿದು ಮಾಜಿ ಮುಖ್ಯಮಂತ್ರಿಯನ್ನು ಮಧ್ಯರಾತ್ರಿ ಮನೆಗೆ ನುಗ್ಗಿ ಬಂಧಿಸುವವರೆಗೆ ಡಿಎಂಕೆ ಮತ್ತು ಎಡಿಎಂಕೆ ನಡೆಸಿದ ರಾಜಕೀಯ ಮೇಲಾಟಗಳನ್ನು ಸಹಿಸಿಕೊಂಡಿದ್ದಾರೆ. ಇದೀಗ ಮತ್ತೊಂದು ಟಿವಿಕೆ ಎಂಬ ಪ್ರಾದೇಶಿಕ ಪಕ್ಷವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಆದರೆ ಕರ್ನಾಟಕದಲ್ಲಿ?

ಕರ್ನಾಟಕ ಮತ್ತು ತಮಿಳುನಾಡಿನ ರಾಜಕೀಯ ಮಾದರಿಗಳಲ್ಲಿ ಬಹಳಷ್ಟು ವ್ಯತ್ಯಾಸವಿದೆ. ತಮಿಳುನಾಡಿನ ಸಾಂಸ್ಕೃತಿಕ ಮತ್ತು ರಾಜಕೀಯ ನಾಯಕರು ಜನರಲ್ಲಿ ಪ್ರಾದೇಶಿಕ ಪ್ರಜ್ಞೆಯನ್ನು ಪ್ರೇರೇಪಿಸಿದರು. ಪೆರಿಯಾರ್ ದ್ರಾವಿಡ ಪರಂಪರೆಯನ್ನು ಕಡೆದು ನಿಲ್ಲಿಸಿದರು. ಸ್ವಾತಂತ್ರ್ಯ ತಂದುಕೊಟ್ಟ ಪಕ್ಷ ಎನ್ನುವ ಕಾರಣಕ್ಕೆ ಇಡೀ ದೇಶದ ಜನ ಕಾಂಗ್ರೆಸ್‌ಗೆ ಮಾರುಹೋಗಿದ್ದ ಸಂದರ್ಭದಲ್ಲೇ ಅಣ್ಣಾದೊರೈ 1949ರಲ್ಲಿ ಡಿಎಂಕೆ ಎಂಬ ಪ್ರಾದೇಶಿಕ ಪಕ್ಷವನ್ನು ಹುಟ್ಟುಹಾಕಿದರು. ಡಿಎಂಕೆಯಿಂದ ಹೊರಬಂದ ಎಂಜಿಆರ್ ಕಟ್ಟಿದ್ದು ಕೂಡ ಎಡಿಎಂಕೆ ಎಂಬ ಮತ್ತೊಂದು ಪ್ರಾದೇಶಿಕ ಪಕ್ಷವನ್ನು. ಪ್ರಾದೇಶಿಕ ಪಕ್ಷ ಕಟ್ಟಿ ಅಧಿಕಾರ ಹಿಡಿಯುವುದು ಇವರಿಗೆ ಸುಲಭದ ಹಾದಿಯಾಗಿರಲಿಲ್ಲ. ಪಕ್ಷ ಕಟ್ಟಿದ ಮೇಲೆ ಅಣ್ಣಾದೊರೈ ಮುಖ್ಯಮಂತ್ರಿಯಾಗಲು 18 ವರ್ಷ ಮತ್ತು ಎಂಜಿಆರ್ 5 ವರ್ಷ ಕಾಯಬೇಕಾಯಿತು.

ಇದಕ್ಕೆ ಕರ್ನಾಟಕದ ಸಾಂಸ್ಕೃತಿಕ ಮತ್ತು ರಾಜಕೀಯ ನಾಯಕರು ತದ್ವಿರುದ್ಧ. ಅವರು ಕರ್ನಾಟಕಕ್ಕೆ ಪ್ರಬಲ ಪ್ರಾದೇಶಿಕ ಪಕ್ಷವೊಂದು ಬೇಕೆಂದು ಪ್ರತಿಪಾದಿಸಿದ್ದು ಕಡಿಮೆ. ಪ್ರಯತ್ನ ಮಾಡಿದರಾದರೂ ಕಾಲ ಪಕ್ವವಾಗುವವರೆಗೆ ಕಾಯಲಿಲ್ಲ. ಇದರಿಂದಾಗಿ ಸ್ವಾತಂತ್ರ್ಯ ಪೂರ್ವದಲ್ಲೇ ಕರ್ನಾಟಕದ ಮೈಸೂರು ಸಂಸ್ಥಾನದಲ್ಲಿ ಪ್ರಜಾ ಮಿತ್ರ ಮಂಡಳಿ ಎಂಬ ಪ್ರಾದೇಶಿಕ ಪಕ್ಷದ ಕಲ್ಪನೆ ಇದ್ದರೂ ತದನಂತರ ಆ ಪರಿಕಲ್ಪನೆಯನ್ನು ವಾಸ್ತವದಲ್ಲಿ ಕಾಣಲಾಗಲಿಲ್ಲ.

ಕರ್ನಾಟಕದ ಸಾಂಸ್ಕೃತಿಕ ನಾಯಕ ಡಾ. ರಾಜ್‌ಕುಮಾರ್ ಅವರಿಗೆ ಪ್ರಾದೇಶಿಕ ಪಕ್ಷ ಕಟ್ಟುವ ಅವಕಾಶ ಇತ್ತು. ಅವರು ಮನಸ್ಸು ಮಾಡಲಿಲ್ಲ. ದೇವರಾಜ ಅರಸು (ಕ್ರಾಂತಿರಂಗ), ಎಸ್. ಬಂಗಾರಪ್ಪ (ಕರ್ನಾಟಕ ಕ್ರಾಂತಿ ರಂಗ, ಕರ್ನಾಟಕ ಕಾಂಗ್ರೆಸ್ ಪಕ್ಷ ಮತ್ತು ಕರ್ನಾಟಕ ವಿಕಾಸ ಪಕ್ಷ), ಸಿದ್ದರಾಮಯ್ಯ (ಅಖಿಲ ಭಾರತ ಪ್ರಗತಿಪರ ಜನತಾದಳ) ಮತ್ತು ಬಿ.ಎಸ್. ಯಡಿಯೂರಪ್ಪ (ಕರ್ನಾಟಕ ಜನತಾಪಕ್ಷ) ತಾಳ್ಮೆ ವಹಿಸಲಿಲ್ಲ. ಇದರಿಂದಾಗಿ ಕರ್ನಾಟಕಕ್ಕೆ ಪ್ರಬಲವಾದ ಪ್ರಾದೇಶಿಕ ಪಕ್ಷ ಸಿಗಲೇ ಇಲ್ಲ.

ಇದ್ದುದ್ದರಲ್ಲಿ 1983ರಲ್ಲಿ ಅಧಿಕಾರಕ್ಕೆ ಬಂದ ಜನತಾಪಕ್ಷದ ಮೊದಲ ಕಾಂಗ್ರೆಸೇತರ ಸರಕಾರ ಪ್ರಾದೇಶಿಕ ಅಸ್ತಿತ್ವದ ಆಸೆ ಆಕಾಂಕ್ಷೆಗಳನ್ನು ಹುಟ್ಟುಹಾಕಿತ್ತು. ಅದು ರಾಷ್ಟ್ರೀಯ ಪಕ್ಷವಾದರೂ ಕರ್ನಾಟಕದ ಮಟ್ಟಿಗೆ ಪ್ರಾದೇಶಿಕ ಪಕ್ಷದಂತೆಯೇ ಇತ್ತು. ಜನತಾದಳವಾಗಿ ಬದಲಾದಾಗಲೂ ಪ್ರಾದೇಶಿಕ ಗುಣವನ್ನು ಉಳಿಸಿಕೊಂಡಿತ್ತು. ಸಂಯುಕ್ತ ಜನತಾದಳ ಮತ್ತು ಜಾತ್ಯತೀತ ಜನತಾದಳ ಎಂದು ವಿಭಜನೆಯಾದಾಗಲೂ ಜನ ಅವುಗಳಲ್ಲಿ ಪ್ರಾದೇಶಿಕ ಪಕ್ಷದ ಕನಸು ಕಂಡಿದ್ದರು. ಸಂಯುಕ್ತ ಜನತಾದಳ ಬಿಜೆಪಿ ಜೊತೆ ಲೀನವಾಗುವುದರೊಂದಿಗೆ ಅದರ ಅಧ್ಯಾಯ ಮುಗಿದುಹೋಯಿತು. ಕಡೆಯದಾಗಿ ಜಾತ್ಯತೀತ ಜನತಾದಳವಾದರೂ ಪ್ರಾದೇಶಿಕ ಪಕ್ಷವಾಗಿ ಉಳಿಯಬಹುದೆಂಬ ನಿರೀಕ್ಷೆಗಳಿದ್ದವು. ಆದರೆ ಆ ಪಕ್ಷದ ಮುಖಂಡರಾದ ಎಚ್.ಡಿ. ದೇವೇಗೌಡ ಮತ್ತು ಎಚ್.ಡಿ. ಕುಮಾರಸ್ವಾಮಿ ಅಳಿದುಳಿದಿದ್ದ ನಿರೀಕ್ಷೆಗಳಿಗೆ ಎಳ್ಳುನೀರು ಬಿಟ್ಟರು. ಇದರ ಪರಿಣಾಮ ಜನರಿಗೆ ಪ್ರಾದೇಶಿಕ ಪಕ್ಷ ಎನ್ನುವುದರ ಮೇಲೆಯೇ ನಂಬಿಕೆ ಇಲ್ಲದಂತಾಯಿತು.

ಈಗಲೂ ತಮಿಳುನಾಡಿನ ರಾಜಕೀಯ ಚರಿತ್ರೆಯಲ್ಲಿ ಹೊಸ ಅಧ್ಯಾಯ ಬರೆಯಲು ವಿಜಯ್ ಆಯ್ಕೆ ಮಾಡಿಕೊಂಡಿರುವುದು ಪ್ರಾದೇಶಿಕತೆ ಎಂಬ ವಿಶಾಲವಾದ ವಿಷಯವನ್ನೇ. ತಮಿಳುನಾಡಿನಲ್ಲಿ ಈಗಾಗಲೇ ಎರಡು ಪ್ರಮುಖ ಪ್ರಾದೇಶಿಕ ಪಕ್ಷಗಳಿದ್ದರೂ (ಹಲವು ಸಣ್ಣ ಪುಟ್ಟ ಪ್ರಾದೇಶಿಕ ಪಕ್ಷಗಳೂ ಉಂಟು) ಅಲ್ಲಿನ ನೇತಾರರು ಮೂರನೇಯ ಪ್ರಾದೇಶಿಕ ಪಕ್ಷ ಕಟ್ಟುವ ಮನಸ್ಸು ಮತ್ತು ಧೈರ್ಯ ಮಾಡಿದರು. ಕರ್ನಾಟಕದಲ್ಲಿ ಒಂದೂ ಪ್ರಾದೇಶಿಕ ಪಕ್ಷ ಇಲ್ಲದಿದ್ದರೂ ನಮ್ಮ ನೇತಾರರಿಗೆ ಆ ಧೈರ್ಯ ಮತ್ತು ಮನಸ್ಸು ಬರುವುದಿಲ್ಲ. ಧೈರ್ಯ ಮತ್ತು ಪ್ರಾಮಾಣಿಕ ಪ್ರಯತ್ನಗಳನ್ನು ಜನ ಯಾವತ್ತೂ ಬೆಂಬಲಿಸುತ್ತಾರೆ ಎನ್ನುವುದಕ್ಕೂ ತಮಿಳುನಾಡು ತಾಜಾ ಉದಾಹರಣೆ. ಕರ್ನಾಟಕದ ನಾಯಕರು ‘ನಮ್ಮವರು ಪ್ರಾದೇಶಿಕ ಪಕ್ಷಕ್ಕೆ ಮಣೆ ಹಾಕುವುದಿಲ್ಲ’ ಎಂದು ಜನರನ್ನು ದೂರುತ್ತಾರೆ, ಆ ಮೂಲಕ ಜವಾಬ್ದಾರಿಯಿಂದ ಜಾರಿಕೊಳ್ಳುತ್ತಾರೆ. ಇದಕ್ಕೆ ಎಚ್.ಡಿ. ಕುಮಾರಸ್ವಾಮಿ ನೀಡಿರುವ ‘ಪ್ರಾದೇಶಿಕ ಪಕ್ಷಗಳು ಸ್ವತಂತ್ರವಾಗಿ ಅಧಿಕಾರಕ್ಕೆ ಬರುವ ವಾತಾವರಣ ಇಲ್ಲಿಲ್ಲ’ ಎಂಬ ಇತ್ತೀಚಿನ ಹೇಳಿಕೆಯೇ ಉತ್ತಮ ಉದಾಹರಣೆ.

ಕಡೆಯ ಪಕ್ಷ ಕುಮಾರಸ್ವಾಮಿ ‘ಈಗ ಇಲ್ಲ’ ಎಂದು ಹೇಳಬಹುದಿತ್ತು. ಹಾಗೆ ಹೇಳಿದ್ದರೆ ‘ಮುಂದಾದರೂ ಅಂಥ ಪರಿಸ್ಥಿತಿ ಬರಬಹುದು’ ಎನ್ನುವ ನಿರೀಕ್ಷೆ ಉಳಿದಿರುತ್ತಿತ್ತು. ‘ಇಲ್ಲಿ ಇಲ್ಲವೇ ಇಲ್ಲ’ ಎನ್ನುವ ನಕಾರಾತ್ಮಕ ಮಾತಿನ ಮೂಲಕ ನಕಾರಾತ್ಮಕ ಧೋರಣೆಯನ್ನೇ ಮುಂದುವರಿಸಿದ್ದಾರೆ. ಕುಮಾರಸ್ವಾಮಿ ಈಗ ಮಾಡಿರುವುದನ್ನೇ ಹಿಂದಿನವರು ಮಾಡಿರುವುದು.

ಎರಡನೇ ಪಾಠ ಜಾತಿ ಮೀರಿದ ಜನಪರ ಲೆಕ್ಕಾಚಾರದ ಬಗ್ಗೆ. ತಮಿಳುನಾಡಿನ ಜನ ಜಾತಿ ಮೀರಿ ಮತ ನೀಡಿದ್ದಾರೆ. ಅವರಿಗೆ ವಿಜಯ್ ಯಾವ ಜಾತಿ ಎನ್ನುವುದು ಮುಖ್ಯವಾಗಿಲ್ಲ. ವಿಜಯ್ ಮಾತ್ರವಲ್ಲ, ಅವರ ಪಕ್ಷದ ಅಭ್ಯರ್ಥಿಗಳು ಯಾವ ಜಾತಿ ಎನ್ನುವುದು ಕೂಡ ಮುಖ್ಯವಾಗಿಲ್ಲ. ಇದೇ ಕಾರಣಕ್ಕೆ ಸಾಮಾನ್ಯ ಕ್ಷೇತ್ರಗಳಲ್ಲಿ ಹೆಚ್ಚಿನ ಸಂಖ್ಯೆಯ ದಲಿತರು ಗೆದ್ದಿದ್ದಾರೆ. ಇದು ಇನ್ನೂ ಹೆಚ್ಚಿನ ಮಹತ್ವದ ಬೆಳವಣಿಗೆ. ಇದು ತಮಿಳುನಾಡಿನ ಎಲ್ಲಾ ವರ್ಗದ ಜನರಿಗೆ ಸಲ್ಲಬೇಕಾದ ಶ್ರೇಯಸ್ಸು. ತಮಿಳುನಾಡಿನಲ್ಲೂ ಜಾತಿ ಇದೆ. ಇಲ್ಲಿಯವರೆಗೆ ಅಲ್ಲೂ ಚುನಾವಣೆ ವೇಳೆ ಜಾತಿ ಪ್ರಾಧಾನ ಪಾತ್ರವನ್ನೇ ವಹಿಸಿದೆ. ಅಲ್ಲಿನ ರಾಜಕಾರಣಿಗಳೂ ಜಾತಿ ಲೆಕ್ಕಾಚಾರದಲ್ಲೇ ರಾಜಕೀಯ ಮಾಡಿದ್ದಾರೆ. ಆದರೆ ಜನ ಜಾತಿಯನ್ನು ಮೀರಿದ್ದಾರೆ, ಮಾದರಿಯಾಗಿದ್ದಾರೆ. ಕರ್ನಾಟಕದಲ್ಲಿ?

ಕರ್ನಾಟಕದಲ್ಲಿ ಜನ ಮತ್ತು ರಾಜಕೀಯ ನಾಯಕರು ಇಬ್ಬರಲ್ಲೂ ಅಂಥ ಔದಾರ್ಯ ಕಂಡುಬಂದಿಲ್ಲ. ಅಂಥ ಔದಾರ್ಯ ಇದ್ದರೆ ಮಲ್ಲಿಕಾರ್ಜುನ ಖರ್ಗೆ ಮುಖ್ಯಮಂತ್ರಿ ಆಗಲು ಇಷ್ಟೊಂದು ತೊಡಕು ಬರುತ್ತಿರಲಿಲ್ಲ. ಜಾತಿ ಸಮೀಕ್ಷೆ ವರದಿ ಮೂಲೆ ಸೇರುತ್ತಿರಲಿಲ್ಲ. ಜಾತಿ ದೌರ್ಜನ್ಯಕ್ಕೆ ಒಳಗಾದ ದಲಿತರೇ ಒಳಮೀಸಲಾತಿ ವಿಷಯದಲ್ಲಿ ತಮ್ಮದೇ ಸೋದರ ಸಮುದಾಯಗಳ ವಿರುದ್ಧ ಕತ್ತಿ ಮಸೆಯುತ್ತಿರಲಿಲ್ಲ.

ಯುವಕರ ಕೈ ಸೇರಿದ ರಾಜಕಾರಣ!

ತಮಿಳುನಾಡಿನಲ್ಲಿ ಕರುಣಾನಿಧಿ ವೀಲ್ ಚೇರ್ ನಲ್ಲೇ ರಾಜ್ಯಭಾರ ಮಾಡಿದ್ದಾರೆ. ಇನ್ನೊಂದೆಡೆ ಜಯಲಲಿತಾ ಮನೆಯಿಂದ ಹೊರಗೆ ಬಾರದೇನೇ ಆಡಳಿತ ನಡೆಸಿದ್ದಾರೆ. ಅವರ ದೈಹಿಕ ದುರ್ಬಲತೆ ಮತ್ತು ಆರೋಗ್ಯದ ಸಮಸ್ಯೆಗಳು ಸಹಜವಾಗಿ ಆಡಳಿತದ ಮೇಲೆ ಪರಿಣಾಮ ಬೀರಿವೆ. ಇವ್ಯಾವೂ ಚರ್ಚೆಯಾಗುತ್ತಿರಲಿಲ್ಲ. ಆದರೀಗ ಸದ್ದಿಲ್ಲದೆ ತಮಿಳುನಾಡಿನ ರಾಜಕಾರಣ ಯುವಕರ ಕೈ ಸೇರಿದೆ. ಅಲ್ಲಿನ ಜನ ಮುಖ್ಯಮಂತ್ರಿ ಸ್ಥಾನಕ್ಕೆ ವಿಜಯ್ ಅವರನ್ನು ಆರಿಸಿಕೊಂಡಿರುವುದು ಮಾತ್ರವಲ್ಲ, ಪ್ರತಿಪಕ್ಷದಲ್ಲೂ ಇನ್ನೊಬ್ಬ ಯುವಕ ಉದಯ್ ನಿಧಿಯನ್ನು ಪ್ರತಿಷ್ಠಾಪಿಸಿದ್ದಾರೆ. ಶಾಸನಸಭೆಯ ಹೊರಗೆ ಸದ್ದು ಮಾಡುತ್ತಿರುವ ಅಣ್ಣಾ ಮಲೈ ಕೂಡ ಯುವಕ. ವಿಜಯ್ ಅವರ ಟಿವಿಕೆಗೆ ಬೆಂಬಲ ನೀಡುವ ಮೂಲಕ ಸರಕಾರ ರಚನೆಗೆ ಕಾರಣವಾದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೂಡ ಯುವಕರ ಪ್ರತಿನಿಧಿ.

ಅನನುಭವದಿಂದಾದ ಅಚಾತುರ್ಯ

ವಿಜಯ್ ಮುಖ್ಯಮಂತ್ರಿಯಾಗುವುದಕ್ಕೆ ರಾಜ್ಯಪಾಲರು ಇನ್ನಿಲ್ಲದ ತೊಂದರೆ ಕೊಟ್ಟರು ಎನ್ನುವ ಚರ್ಚೆ ಕೂಡ ನಡೆಯುತ್ತಿದೆ. ಆದರೆ ವಾಸ್ತವದಲ್ಲಿ ಅದು ವಿಜಯ್ ಅನನುಭವದಿಂದ ಆಗಿರುವ ಅಚಾತುರ್ಯ. ಮೊದಲ ದಿನವೇ ಅತಿ ಹೆಚ್ಚು ಸ್ಥಾನ ಗೆದ್ದಿರುವ ಟಿವಿಕೆ ಪಕ್ಷಕ್ಕೆ ಸರಕಾರ ರಚನೆಗೆ ಅವಕಾಶ ಮಾಡಿಕೊಡಿ ಎಂದು ಕೇಳಬೇಕಿತ್ತು. ಅತಿ ಹೆಚ್ಚು ಸ್ಥಾನ ಗೆದ್ದಿರುವ ಪಕ್ಷವನ್ನು ಸರಕಾರ ರಚನೆಗೆ ಆಹ್ವಾನಿಸುವುದು ಸಾಂವಿಧಾನಿಕ ಕರ್ತವ್ಯವಾಗಿರುವುದರಿಂದ ರಾಜ್ಯಪಾಲರು ವಿಜಯ್ ಅವರಿಗೆ ಅವಕಾಶವನ್ನು ಕೊಡದೆ ಬೇರೆ ದಾರಿ ಇರಲಿಲ್ಲ. ಆದರೆ ವಿಜಯ್ ಎಡವಿದ್ದು ಇಲ್ಲೇ.

ಐದು ಸ್ಥಾನಗಳನ್ನು ಗೆದ್ದಿರುವ ಕಾಂಗ್ರೆಸ್ ಪಕ್ಷ ಟಿವಿಕೆಗೆ ಬೆಂಬಲ ನೀಡಿದ್ದರಿಂದ ವಿಜಯ್ ‘ಮೈತ್ರಿ ಸರಕಾರ ರಚನೆಗೆ’ ಅವಕಾಶ ಕೇಳಿದರು. ರಾಜ್ಯಪಾಲರು ಮೈತ್ರಿ ಸರಕಾರಕ್ಕೆ ಬೇಕಿರುವ ಸಂಖ್ಯಾಬಲದ ಮಾಹಿತಿಯನ್ನು ಕೇಳಿದರು. ಕಗ್ಗಂಟು ಶುರುವಾಯಿತು. ಇದಲ್ಲದೆ ಕಾಂಗ್ರೆಸ್ ಬೆಂಬಲ ಪಡೆದ ರೀತಿಯಲ್ಲಿ ಸಿಪಿಐ, ಸಿಪಿಎಂ, ವಿಸಿಕೆ ಮತ್ತು ಮುಸ್ಲಿಮ್ ಲೀಗ್ ಪಕ್ಷಗಳನ್ನು ಒಲಿಸಿಕೊಳ್ಳಲು ವಿಜಯ್ ಸೂಕ್ತವಾದ ಹೆಜ್ಜೆ ಇಡಬೇಕಾಗಿತ್ತು. ರಾಜ್ಯಪಾಲರು ಸರಕಾರ ರಚೆನೆಗೆ ಅವಕಾಶ ಕೊಟ್ಟ ಬಳಿಕ ‘ನೋಡಿಕೊಳ್ಳೋಣ’ ಎಂದು ಮೈಮರೆತದ್ದರಿಂದ ಅಥವಾ ‘ಅವರಾಗಿಯೇ ಬರುತ್ತಾರೆ’ ಎಂಬ ಧಾರ್ಷ್ಟ್ಯದ ಧೋರಣೆಯಿಂದ ಸಮಸ್ಯೆಯಾಯಿತು. ಜನತೆಯೇ ಮತ್ತು ಕಾಲವೇ ಅವಕಾಶವನ್ನು ಕೊಟ್ಟಂತೆ ಸರಕಾರ ರಚನೆಯೂ ‘ತನ್ನಿಂದ ತಾನೇ’ ಆಗಿಬಿಡುತ್ತದೆ ಎಂದು ಬೆಂಬಲಕ್ಕಾಗಿ ಬೇರೆ ಪಕ್ಷದ ನಾಯಕರೊಂದಿಗೆ ಮಾತನಾಡದೆ ಮೌನವಾಗಿ ಉಳಿದುಬಿಟ್ಟರು.

ಚುನಾವಣಾ ಕಣದಲ್ಲೂ ವಿಜಯ್ ಮೌನವಾಗಿಯೇ ಇದ್ದರು. ಅವರು ಸಮಾವೇಶ ನಡೆಸಿದ್ದು ಕೇವಲ 10. ಆಗಲೂ ಗಂಟೆಗಟ್ಟಲೆ ಭಾಷಣ ಮಾಡಿಲ್ಲ. ಚುನಾವಣೆಯುದ್ದಕ್ಕೂ ಒಂದೇ ಒಂದು ಪತ್ರಿಕಾಗೋಷ್ಠಿ ನಡೆಸಿಲ್ಲ. ಒಂದೇ ಒಂದು ಮಾಧ್ಯಮ ಸಂದರ್ಶನ ನೀಡಿಲ್ಲ. ವೈಯಕ್ತಿಕ ವಿಚಾರಗಳ ಪ್ರಸ್ತಾಪ, ಅನಗತ್ಯ ಧಾರ್ಮಿಕ ಭಾವನೆಗಳ ಉಲ್ಲೇಖ ಮತ್ತು ಕೀಳುಮಟ್ಟದ ಭಾಷಣಗಳಿಗೆ ಪ್ರತಿಯಾಗಿ ವಿಜಯ್ ಧರಿಸಿದ ಮೌನಕ್ಕೆ ಜನ ಮಾರುಹೋದರು. ನಿಗೂಢತೆಯನ್ನು ನಂಬಿದರು. ಆದರೆ ಎಲ್ಲಾ ಕಾಲಕ್ಕೂ ಮೌನ ಬಂಗಾರವಾಗಿಯೇ ಇರುವುದಿಲ್ಲ. ಆಡಬೇಕಾದ ಮಾತನ್ನು ಆಡಬೇಕಾದ ಸಂದರ್ಭದಲ್ಲಿ ಆಡದಿದ್ದರೆ ಮೌನ ಭಾರ ಕೂಡ ಆಗಿಬಿಡಬಹುದು. ಪರದೆಯ ಮೇಲಿನ ನಾಯಕ ವಿಜಯ್ ನಿಜ ಅರ್ಥದ ಜನನಾಯಕನಾಗಲು ತೆರೆದುಕೊಳ್ಳಬೇಕಾಗಿರುವುದು ಬಹಳಷ್ಟಿದೆ. ಈಗ ವಿಜಯ್ ಎದುರಿಸಿದ ಆರಂಭಿಕ ಸಮಸ್ಯೆಗಳು ‘ಸ್ಥಾಪಿತ ಹಿತಾಸಕ್ತಿಗಳು ಹೇಗೆ ಕೆಲಸ ಮಾಡುತ್ತವೆ’ ಎನ್ನುವುದರ ಟ್ರೈಲರ್. ಪಿಚ್ಚರ್ ಅಭೀ ಬಾಕಿ ಹೈ!

Tags

KarnatakaTamil Nadu
share
ಧರಣೀಶ್ ಬೂಕನಕೆರೆ
ಧರಣೀಶ್ ಬೂಕನಕೆರೆ
Next Story
X