Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ನೆಲದನಿ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಮಾಹಿತಿ ಮಾರ್ಗದರ್ಶನ
    • ಆರೋಗ್ಯ
    • ಓ ಮೆಣಸೇ
    • ಕೃತಿ ಪರಿಚಯ
    • ಝಲಕ್
    • ಬುಡಬುಡಿಕೆ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಆನ್ ರೆಕಾರ್ಡ್
  5. ಮೋದಿ ಎಂದರೆ ನಿರೀಕ್ಷೆ... ಆದರೆ?

ಮೋದಿ ಎಂದರೆ ನಿರೀಕ್ಷೆ... ಆದರೆ?

ಧರಣೀಶ್ ಬೂಕನಕೆರೆಧರಣೀಶ್ ಬೂಕನಕೆರೆ28 Sept 2026 10:20 AM IST
share
ಮೋದಿ ಎಂದರೆ ನಿರೀಕ್ಷೆ... ಆದರೆ?

ನರೇಂದ್ರ ಮೋದಿ ಸಾರ್ವಜನಿಕ ಸೇವೆಯಲ್ಲಿ 25 ವರ್ಷ ಪೂರೈಸಿದ್ದಾರೆ ಎಂದು ಬಿಜೆಪಿ ದೇಶಾದ್ಯಂತ ಸೆಪ್ಟಂಬರ್ 17ರಿಂದ ಒಂದು ತಿಂಗಳು ಸಂಭ್ರಮಾಚರಣೆ ನಡೆಸುತ್ತಿದೆ. ಕರ್ನಾಟಕ ಬಿಜೆಪಿ ಅಕ್ಟೊಬರ್ 1ರಿಂದ 10ರವರೆಗೆ ‘ಬೂತ್ ವಿಜಯ ಸಂಕಲ್ಪ ಯಾತ್ರೆ’ ಹಮ್ಮಿಕೊಂಡಿದೆ. ವಾಸ್ತವವಾಗಿ ಮೋದಿ ಕಳೆದ 25 ವರ್ಷಗಳಿಂದ ಅಧಿಕಾರ ಅನುಭವಿಸುತ್ತಿದ್ದಾರೆ ಅಷ್ಟೇ. ಇದಕ್ಕೂ ಮೊದಲೇ ಅವರು ಸಾರ್ವಜನಿಕ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು.

ಈ ಹಿನ್ನೆಲೆಯಲ್ಲಿ 25 ವರ್ಷಗಳ ಅನುಭವದ ಮೋದಿ ದೇಶಕ್ಕೆ ಏನು ಕೊಟ್ಟಿದ್ದಾರೆ? ಮುಖ್ಯವಾಗಿ ಮೋದಿ ನೇತೃತ್ವದ ಭಾರತ 12 ವರ್ಷಗಳಲ್ಲಿ ಯಾವ ರೀತಿ ಇದೆ? ಎಲ್ಲಿ ನಿಂತಿದೆ? ಎನ್ನುವುದನ್ನು ಒರೆಗೆ ಹಚ್ಚಬೇಕು. ಮೊದಲನೆಯದಾಗಿ ಅವರು ತಮಗೆ 50 ದಿನ ಅವಕಾಶ ಕೊಡಿ, ಇನ್ನೊಂದು ಅವಧಿಗೆ ಅವಕಾಶ ಕೊಡಿ ಎಂದು ಕೇಳುತ್ತಿರುತ್ತಾರೆ. ಹಾಗೆ ಅವರು ‘ಅವಕಾಶ ಸಿಕ್ಕಿಲ್ಲ’ ಎಂದು ಹೇಳುವಂತೆಯೇ ಇಲ್ಲ. ಅವರಿಗೆ ಭರಪೂರ ಅವಕಾಶಗಳು ಸಿಕ್ಕಿವೆ.

ಎರಡನೆಯದಾಗಿ ನರೇಂದ್ರ ಮೋದಿ ಎಂದರೆ ನಿರೀಕ್ಷೆ. ಬಿಜೆಪಿ ಮತ್ತು ಆರೆಸ್ಸೆಸ್ ನಿರೀಕ್ಷೆ ಮಾತ್ರವಲ್ಲ, ಕಾಂಗ್ರೆಸ್ ವಿರೋಧಿಗಳ ನಿರೀಕ್ಷೆ ಮಾತ್ರವಲ್ಲ, ಸದಾ ಕಡಿಮೆ ಕೊಡುಗೆ ಕೊಟ್ಟು ಹೆಚ್ಚು ಆಸೆ ಪಡುವ ಮಧ್ಯಮವರ್ಗದ ನಿರೀಕ್ಷೆ. ಉದ್ಯೋಗಕ್ಕಾಗಿ ಕಾಯುತ್ತಿರುವ ಯುವಕರ ನಿರೀಕ್ಷೆ. ಬೆಲೆ ಏರಿಕೆಯಿಂದ ಕಂಗೆಟ್ಟಿರುವ ಕುಟುಂಬಗಳ ನಿರೀಕ್ಷೆ. ಕೃಷಿಯಿಂದ ಬದುಕು ಕಟ್ಟಿಕೊಳ್ಳಲು ಹೋರಾಡುತ್ತಿರುವ ರೈತರ ನಿರೀಕ್ಷೆ. ಬಲಿಷ್ಠ ನಾಯಕತ್ವ ಬೇಕೆಂದು ಬಯಸುವವರ ನಿರೀಕ್ಷೆ. ಇವುಗಳ ಪೈಕಿ ಬಹುತೇಕ ನಿರೀಕ್ಷೆಗಳು ಹುಟ್ಟಲು ಮೋದಿಯೇ ಕಾರಣ. ಅದರಿಂದಾಗಿಯೇ 2014ರ ಲೋಕಸಭಾ ಚುನಾವಣೆ ಮತ್ತು ಆ ನಂತರದ ದೇಶದ ರಾಜಕಾರಣ ಮೋದಿ ಸುತ್ತವೇ ಗಿರಕಿ ಹೊಡೆಯುತ್ತಿದೆ.

ಇದಲ್ಲದೆಯೂ ಮೋದಿ ಬಗ್ಗೆ ಇಷ್ಟು ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟಿಕೊಳ್ಳಲು ಗಟ್ಟಿಯಾದ ಕಾರಣವಿದೆ. ಮೋದಿ ನಿಜಕ್ಕೂ ವಿಶಿಷ್ಟ ರಾಜಕಾರಣಿ. ಹನ್ನೆರಡುವರೆ ವರ್ಷ ಗುಜರಾತ್ ಮುಖ್ಯಮಂತ್ರಿಯಾಗಿ, ಹನ್ನೆರಡುಕಾಲು ವರ್ಷ ದೇಶದ ಪ್ರಧಾನಿಯಾಗಿ ಕೆಲಸ ಮಾಡಿದ್ದಾರೆ. ಇದಕ್ಕೂ ಮೊದಲು ಕನಿಷ್ಠ 10-15 ವರ್ಷ, ಬಿಜೆಪಿ ಸಂಘಟನೆಯಲ್ಲಿ, ಆರೆಸ್ಸೆಸ್ ಕೆಲಸಗಳಲ್ಲಿ ಮತ್ತು ಸಮಾಜ ಸೇವೆಯಲ್ಲಿ ತೊಡಗಿದ್ದರು. ಅದರಿಂದಾಗಿ ಅವರ ಅನುಭವ ಅಪಾರ. ಸದ್ಯ ಇಡೀ ದೇಶದಲ್ಲಿ ಬೇರೆ ಯಾವುದೇ ರಾಜಕಾರಣಿಗೆ ಮೋದಿಯ ರೀತಿ ಸಮಾಜಸೇವೆ, ಸಂಘಟನೆ ಮತ್ತು ಆಡಳಿತದ ಅನುಭವ ಇಲ್ಲ.

ಇದರಿಂದಾಗಿ ಮೋದಿಗೆ 25 ವರ್ಷಗಳ ಅವಧಿಯಲ್ಲಿ ‘ಏನು ಮಾಡಿದ್ದೀರಿ?’ ಎಂದು ಕೇಳುವುದು ಕೇವಲ ವಿರೋಧ ಪಕ್ಷದ ಪ್ರಶ್ನೆಯಾಗಿ ಉಳಿಯುವುದಿಲ್ಲ. ಮತದಾರನ, ತೆರಿಗೆದಾರನ, ಯುವಕನ ಮತ್ತು ರೈತನ ಪ್ರಶ್ನೆ ಕೂಡ ಹೌದು. ಇವುಗಳನ್ನು 20 ಪ್ರಶ್ನೆಗಳ ಮೂಲಕ ನೋಡುವುದೇ ಉತ್ತಮ.

1. 2014ರ ಲೋಕಸಭಾ ಚುನಾವಣೆಗೆ ಬಿಜೆಪಿ ಪ್ರಕಟಿಸಿದ ಪ್ರಣಾಳಿಕೆಯಲ್ಲಿ ಬೆಲೆ ಏರಿಕೆ, ನಿರುದ್ಯೋಗ, ಭ್ರಷ್ಟಾಚಾರ, ಕಪ್ಪುಹಣ, ಆಡಳಿತದ ಗುಣಮಟ್ಟ ಕುಸಿತ ಮತ್ತಿತರ ಸಂಗತಿಗಳು ಪ್ರಮುಖ ರಾಷ್ಟ್ರೀಯ ಸಮಸ್ಯೆಗಳೆಂದು ಹೇಳಲಾಗಿತ್ತು. ಈ ಸಮಸ್ಯೆಗಳು ಪರಿಹಾರವಾಗಿವೆಯೇ?

2. ಮೋದಿಯೇ ಖುದ್ದಾಗಿ ‘ಅಚ್ಛೇ ದಿನ್’ ಬರುತ್ತದೆ ಎಂದಿದ್ದರು. ಯಾವ ರೀತಿ ಬಂದಿದೆ ಮತ್ತು ಅದರ ಫಲಾನುಭವಿಗಳು ಯಾರು ಎಂದು ಹೇಳಲು ಸಾಧ್ಯವೇ?

3. ‘ಬಲಿಷ್ಠ ಭಾರತ’ದ ಜೊತೆ ಬಲಿಷ್ಠ ರೂಪಾಯಿ ಎಲ್ಲಿದೆ? 12 ವರ್ಷಗಳಲ್ಲಿ ರೂಪಾಯಿ ಮೌಲ್ಯ ಹೆಚ್ಚಿಸಲು ತೆಗೆದುಕೊಂಡ ದೀರ್ಘಕಾಲೀನ ಆರ್ಥಿಕ ತಂತ್ರಗಳು ಯಾವುವು?

4. ಹಣದುಬ್ಬರ ತಡೆಯಲು ಮತ್ತು ಬೆಲೆ ಏರಿಕೆ ನಿಯಂತ್ರಿಸಲು ತೆಗೆದುಕೊಂಡಿರುವ ಪರಿಣಾಮಕಾರಿ ಕ್ರಮಗಳು ಯಾವುವು ಮತ್ತು ಅದರಿಂದ ಆಗಿರುವ ಸುಧಾರಣೆಗಳು ಯಾವುವು?

5. ಯುವಕರು ಭಾರತದ ದೊಡ್ಡ ಶಕ್ತಿ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದೇವೆ. ಆದರೆ ಯುವಕರಿಗೆ ಅವರ ಸಾಮರ್ಥ್ಯಕ್ಕೆ ತಕ್ಕಂತಹ (ಪಕೋಡ ಮಾರಿ ಎನ್ನುವ ರೀತಿಯಲ್ಲ) ಉದ್ಯೋಗ ಸಿಗುವ ವಾತಾವರಣ ದೇಶದಲ್ಲಿ ಇದೆಯಾ?

6. 2014ರ ಚುನಾವಣೆ ವೇಳೆ ಹೇಳಿದ್ದಂತೆ ಮತ್ತು 2016ರಲ್ಲಿ ನೋಟು ಅಮಾನ್ಯೀಕರಣ ಮಾಡುವಾಗ ಕೊಟ್ಟ ಕಾರಣದಂತೆ ಕಪ್ಪುಹಣದ ನಿರ್ಮೂಲನವಾಗಿದೆಯಾ?

7. 2020ರಲ್ಲಿ ಮೂರು ಮುಖ್ಯವಾದ ಕೃಷಿ ಕಾಯ್ದೆಗಳನ್ನು ರೈತರ ಜೊತೆ ಸಮಾಲೋಚನೆ ಮಾಡದೆ ತಂದಿದ್ದೇಕೆ? ಸಮರ್ಥಿಸಿದ್ದೇಕೆ? ಹಿಂಪಡೆದಿದ್ದೇಕೆ ಮತ್ತು ಹಿಂಪಡೆಯುವಾಗ ಭರವಸೆ ನೀಡಿದಂತೆ ನಂತರ ಕನಿಷ್ಠ ಬೆಂಬಲ ಬೆಲೆಯನ್ನು ಕೊಟ್ಟಿಲ್ಲ ಏಕೆ?

8. ರೈತ ದೇಶದ ಬೆನ್ನೆಲುಬು. ಮೋದಿ ಹಲವು ಬಾರಿ ರೈತರ ಆದಾಯ ದ್ವಿಗುಣಗೊಳಿಸುವುದಾಗಿ ಹೇಳಿ ದ್ದಾರೆ. ರೈತರ ಆದಾಯ ದ್ವಿಗುಣವಾಗಿದೆಯಾ? ಇದಕ್ಕಾಗಿ ಅವರು ಯಾವ್ಯಾವ ಕ್ರಮಗಳನ್ನು ಕೈಗೊಂಡಿದ್ದಾರೆ?

9. ಪುಲ್ವಾಮಾ ದಾಳಿ, ಪೆಹಲ್ಗಾಮ್‌ನಲ್ಲಿ ಉಗ್ರರ ಕೃತ್ಯ, ಭಾರತ-ಚೀನಾ ಗಡಿ ಸಂಘರ್ಷ, ಗಲ್ವಾನ್‌ನಲ್ಲಿ ಭಾರತೀಯ ಸೈನಿಕರ ಸಾವು, ಭಾರತದ ಗಡಿಯಲ್ಲಿ ಚೀನಾ ಸೇನೆಯ ನಿಯೋಜನೆ ಬಗ್ಗೆ ಮೋದಿಯೇ ಖುದ್ದಾಗಿ ಮಾತನಾಡಿ 56 ಇಂಚಿನ ಎದೆಗಾರಿಕೆ ಪ್ರದರ್ಶಿಸುವುದು ಯಾವಾಗ?

10. ಮೋದಿ ನಮಸ್ಕಾರ ಹಾಕಿ ಸಂಸತ್ತನ್ನು ಪ್ರವೇಶಿಸುತ್ತಾರೆ. ಸಂಸತ್ತು ಎಂದರೆ ಕೇವಲ ಕಟ್ಟಡವಲ್ಲ. ಸಂಸತ್ತು ಎಂದರೆ ಹೊಣೆಗಾರಿಕೆ. ಅಲ್ಲಿ ಕೇಳಿಬರುವ ಪ್ರಶ್ನೆಗಳಿಗೆ ಉತ್ತರಿಸಬೇಕು. ಮೋದಿಗೆ ಬಹುಮತ ಇದೆ. ಬಹುಮತಕ್ಕೆ ಅಧಿಕಾರ ಇದೆ. ಹಾಗಂತ

ಅವರು ದೇಶವಾಸಿಗಳಿಗೆ ಉತ್ತರದಾಯಿ ಅಲ್ಲವಾ?

11. ಮೋದಿ ಸಂವಿಧಾನದ ಪ್ರತಿಗೆ ನಮಸ್ಕರಿಸಿದ ದೃಶ್ಯ ಜನರ ನೆನಪಿನಲ್ಲಿದೆ. ಆದರೆ ಸಂವಿಧಾನಕ್ಕೆ ಗೌರವ ನೀಡುವುದು ಎಂದರೆ ಕೇವಲ ಅದರ ಪ್ರತಿಗೆ ನಮಸ್ಕರಿಸುವುದು ಎಂದು ಅರ್ಥವೇ? ನಿರಂತರವಾಗಿ ಸಂವಿಧಾನದ ಆಶಯಗಳಿಗೆ ಧಕ್ಕೆ ತಂದಾಗ, ನಾವು ಬಂದಿರುವುದೇ ಸಂವಿಧಾನ ಬದಲಿಸಲು ಎಂದಾಗ ಮೋದಿ ಮೌನವಾಗಿದ್ದುಕೊಂಡು ಅನುಮೋದಿಸಿದ್ದೇಕೆ?

12. 2024ರ ಫೆಬ್ರವರಿ 15ರಂದು ಸುಪ್ರೀಂ ಕೋರ್ಟ್ ಚುನಾವಣಾ ಬಾಂಡ್ ಯೋಜನೆಯನ್ನು ಅಸಾಂವಿಧಾನಿಕ ಎಂದು ತೀರ್ಪು ನೀಡಿದೆ. ತಾವೇ ತಂದ ಅನಿಷ್ಟ ವ್ಯವಸ್ಥೆ ಬಗ್ಗೆ ಮೋದಿ ಅಸಹ್ಯಪಟ್ಟುಕೊಂಡು ಮಾತನಾಡುವುದು ಯಾವಾಗ?

13. ಕೇಂದ್ರ ಸರಕಾರ ತಂದ ರಾಷ್ಟ್ರೀಯ ನ್ಯಾಯಾಂಗ ನೇಮಕಾತಿ ಆಯೋಗ (NJAC)ವನ್ನು ಸುಪ್ರೀಂ ಕೋರ್ಟ್ ರದ್ದು ಮಾಡಿದೆ. ನ್ಯಾಯಾಂಗ ನೇಮಕಾತಿಯಲ್ಲಿ ಪಾರದರ್ಶಕತೆ ಮತ್ತು ನ್ಯಾಯಾಂಗ ಸ್ವಾತಂತ್ರ್ಯಗಳೆರಡನ್ನೂ ಸಮತೋಲನಗೊಳಿಸಬೇಕು ಎನ್ನುವ ಕಾರಣಕ್ಕೆ ಮೋದಿ ಸರಕಾರದ ನಿರ್ಧಾರವನ್ನು ಕಸದ ಬುಟ್ಟಿಗೆ ಎಸೆದಿದೆ. ಇದರಿಂದ ಸ್ವಲ್ಪವಾದರೂ ಮೋದಿಗೆ ಅವಮಾನ ಆಗಿಲ್ಲವೇ?

14. 2026ರ ವಿಶ್ವ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕದಲ್ಲಿ ಭಾರತ 180 ದೇಶಗಳ ಪೈಕಿ 157ನೇ ಸ್ಥಾನದಲ್ಲಿದೆ. ಇದಕ್ಕೆ ಮೋದಿ ಕೊಡುಗೆ ಏನು ಇಲ್ಲ ಎಂದು ಹೇಳಲು ಸಾಧ್ಯವೇ?

15. ED, CBI, IT ಮತ್ತಿತರ ತನಿಖಾ ಸಂಸ್ಥೆಗಳ ಸ್ವಾಯತ್ತತೆ ಬಗ್ಗೆ ಜನರಿಗೆ ಸಂಪೂರ್ಣ ವಿಶ್ವಾಸವಿದೆಯೇ? ತನಿಖಾ ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಂಡು ಬೇರೆ ಪಕ್ಷಗಳಲ್ಲಿರುವ ಕಳ್ಳರನ್ನು ನಿಮ್ಮ ಪಕ್ಷಕ್ಕೆ ತಂದು ಅವರನ್ನು ಶುಭ್ರಗೊಳಿಸುತ್ತೀರಿ (ವಾಷಿಂಗ್ ಮೆಶಿನ್) ಎನ್ನುವ ಗುರುತರ ಆರೋಪ ಮೋದಿ ಮೇಲೆ ಇದೆ. ಇದರ ಬಗ್ಗೆ ಮೋದಿ ಏಕೆ ಮೌನಿ?

16. ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರ ದೇಶವನ್ನೇ ಬೆಚ್ಚಿಬೀಳಿಸಿದೆ. ಮೋದಿ ಅದ್ಹೇಗೆ ನೆಮ್ಮದಿಯಿಂದ ಇದ್ದಾರೆ?

17. ಕೋವಿಡ್ ಎನ್ನುವ ದುಃಸ್ವಪ್ನ ಈಗಲೂ ಜನರನ್ನು ಕಾಡುತ್ತಿದೆ. ಮೋದಿ ಏಕಾಏಕಿ ಹೇರಿದ ಲಾಕ್‌ಡೌನ್ ಇನ್ನೊಂದು ಬಗೆಯ ಶಿಕ್ಷೆ. ಕ್ಷಮೆ ಬೇಡ, ಕಡೆಯ ಪಕ್ಷ ಮೋದಿ ಪಶ್ಚಾತ್ತಾಪ ವ್ಯಕ್ತಪಡಿಸುವುದು ಯಾವಾಗ?

18. ಅಂತರ್‌ರಾಷ್ಟ್ರೀಯ ಮಟ್ಟದ ವೇದಿಕೆಗಳಲ್ಲಿ ಬೇರೆ ಬೇರೆ ದೇಶಗಳ ನಾಯಕರ ಕೈಕುಲುಕುವುದರಿಂದ, ಅವರನ್ನು ಅಪ್ಪಿಕೊಳ್ಳುವುದರಿಂದ ವಿಶ್ವಗುರುವಾಗಲು ಸಾಧ್ಯವೇ? ವಿಶ್ವಗುರುವಿನ ಪಟ್ಟ ಸಿಗಲು ಆರ್ಥಿಕತೆ, ತಂತ್ರಜ್ಞಾನ, ಶಿಕ್ಷಣ, ಸಂಶೋಧನೆ, ಮಾನವ ಅಭಿವೃದ್ಧಿ, ಹೆಚ್ಚಿನ ಪ್ರಮಾಣದ ಮಹಿಳೆಯರು ಸಾರ್ವಜನಿಕವಾಗಿ ಭಾಗವಹಿಸುವಿಕೆ, ಸಾಮಾಜಿಕ ಸಮಾನತೆಗಳನ್ನು ಸಾಧಿಸಬೇಕು ಎನ್ನುವ ಕನಿಷ್ಠ ಅರಿವಾದರೂ ಮೋದಿಗೆ ಇದೆಯಾ?

20. ಮೋದಿ 2047ಕ್ಕೆ ‘ವಿಕಸಿತ ಭಾರತ’ ನಿರ್ಮಾಣವಾಗುತ್ತದೆ ಎನ್ನುವ ಕನಸು ಬಿತ್ತಿದ್ದಾರೆ. ವಿಕಸಿತ ಭಾರತಕ್ಕೆ ಹೋಗುವ ಗುರಿಯನ್ನು ಹೇಳುವುದು ಸರಿ. ಹೋಗಬೇಕಾದ ಮಾರ್ಗ ಯಾವುದು? ಗುರಿ ಇದ್ದರಷ್ಟೇ ಸಾಲದು, ದಾರಿಯೂ ಇರಬೇಕಲ್ಲವೇ?

ಜನರು ಸಾಮಾನ್ಯ ನಾಯಕನಲ್ಲಿ ಸಾಮಾನ್ಯ ನಿರೀಕ್ಷೆ ಹೊಂದಿರುತ್ತಾರೆ. ಅಸಾಧಾರಣ ಎಂದು ಬಿಂಬಿಸಿಕೊಳ್ಳುವವನ ಬಳಿ ಅಸಾಧಾರಣ ಫಲಿತಾಂಶವನ್ನೇ ನಿರೀಕ್ಷಿಸುತ್ತಾರೆ. 2014ರಲ್ಲಿ ಬದಲಾವಣೆಯ ನಿರೀಕ್ಷೆ ಮಾಡಿದರು. 2019ರಲ್ಲಿ ಬಲಿಷ್ಠ ನಾಯಕತ್ವವನ್ನು ಬಯಸಿದರು. 2024ರಲ್ಲಿ ಮತ್ತೊಂದು ಅವಕಾಶವನ್ನು ಕೊಟ್ಟರು. ಅವಕಾಶದ ಕೊರತೆ ಇರಲಿಲ್ಲ. ಅಧಿಕಾರದ ಕೊರತೆ ಇರಲಿಲ್ಲ. ಅನುಭವದ ಕೊರತೆ ಇರಲಿಲ್ಲ. ಆದರೂ ನಿರೀಕ್ಷಿತ ಫಲಿತಾಂಶ ಬಂದಿಲ್ಲ.

ಪ್ರಖರ ವಾಗ್ಮಿಯಾದ ಮೋದಿ ಎಷ್ಟು ಮಾತನಾಡಿದ್ದಾರೆ ಎನ್ನುವುದು ಮುಖ್ಯವಲ್ಲ. ಎಷ್ಟು ಸುಧಾರಿಸಿದ್ದಾರೆ ಎನ್ನುವುದು ಮುಖ್ಯ. ಮೋದಿ ದೊಡ್ಡ ನಾಯಕ ಎನ್ನುವ ಬಗ್ಗೆ ಯಾರಿಗೂ ಅನುಮಾನವಿಲ್ಲ. ದೊಡ್ಡ ನಾಯಕನಾಗಿದ್ದುಕೊಂಡು ಏನು ಕೊಡುಗೆ ಕೊಟ್ಟಿದ್ದಾರೆ ಎನ್ನುವುದು ಮುಖ್ಯ. ನಿರೀಕ್ಷೆ ದೊಡ್ಡದಿದ್ದಾಗ ನಿರಾಸೆಯೂ ದೊಡ್ಡ ಪ್ರಮಾಣದಲ್ಲೇ ಆಗುತ್ತದೆ. ಮೋದಿ ವಿಷಯದಲ್ಲಿ ಆಗಿದ್ದು ಇದೇನಾ?

ಆಫ್ ದಿ ರೆಕಾರ್ಡ್

ಕೇಂದ್ರ ಚುನಾವಣಾ ಆಯೋಗದ ಮೇಲೆ ಗಂಭೀರವಾದ ಆರೋಪಗಳು ಕೇಳಿಬರುತ್ತಿವೆ. ಇಂಥ ಗಂಭೀರ ವಿಷಯಗಳಲ್ಲಿ ಮೋದಿಯದ್ದು ಸದಾ ಜಾಣ ಮೌನ. ಜನ ಆಯೋಗವನ್ನು ಪ್ರಶ್ನೆ ಮಾಡಿದರೆ ಬಿಜೆಪಿಯವರು ಉತ್ತರಿಸುತ್ತಾರೆ. ಮೋದಿ ಆ ರೀತಿ ವರ್ತಿಸಬೇಕಾಗಿಲ್ಲ. ಆದರೆ ಜವಾಬ್ದಾರಿಯುತ ಸ್ಥಾನದಲ್ಲಿರುವ ವ್ಯಕ್ತಿಯಾಗಿ ಪ್ರತಿಕ್ರಿಯೆ ನೀಡಲೇಬೇಕು ಅಲ್ಲವೇ?

Tags

modi
share
ಧರಣೀಶ್ ಬೂಕನಕೆರೆ
ಧರಣೀಶ್ ಬೂಕನಕೆರೆ
Next Story
X