Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಆನ್ ರೆಕಾರ್ಡ್
  5. ಅಧಿಕಾರ ಹಂಚಿಕೆ: ಗಾಯ ಕೆರೆದವರು ಯಾರು?

ಅಧಿಕಾರ ಹಂಚಿಕೆ: ಗಾಯ ಕೆರೆದವರು ಯಾರು?

ಧರಣೀಶ್ ಬೂಕನಕೆರೆಧರಣೀಶ್ ಬೂಕನಕೆರೆ19 Jan 2026 9:10 AM IST
share
ಅಧಿಕಾರ ಹಂಚಿಕೆ: ಗಾಯ ಕೆರೆದವರು ಯಾರು?

ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದಾಗಿನಿಂದಲೂ ಬಾಧಿಸುತ್ತಿರುವ ನಾಯಕತ್ವ ಬದಲಾವಣೆ ಎಂಬ ಸಮಸ್ಯೆಯನ್ನು ಹುಟ್ಟುಹಾಕಿದ್ದೇ ಆ ಪಕ್ಷದ ಹೈಕಮಾಂಡ್; ಸ್ಪಷ್ಟವಾದ ಸಂದೇಶ ನೀಡದಿರುವ ಮೂಲಕ. ಒಂದು ಹಂತದಲ್ಲಿ ಆ ವಿಷಯ ಸತ್ತೇ ಹೋಗಿದೆ, ಕೇರಳ ಚುನಾವಣೆ ಮುಗಿಯುವವರೆಗೆ ಅದರ ಬಗ್ಗೆ ಮಾತೇ ಇಲ್ಲ ಎನ್ನುವಂತಾಗಿತ್ತು. ಈಗ ಮತ್ತೆ ಹಳೆಯ ಗಾಯವನ್ನು ಕೆರೆದವರು ಯಾರು?

ಮೈಸೂರು ವಿಮಾನ ನಿಲ್ದಾಣದಲ್ಲಿ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಜೊತೆ ರಾಹುಲ್ ಗಾಂಧಿ ಅಧಿಕಾರ ಹಂಚಿಕೆ ಬಗ್ಗೆ ಮಾತನಾಡಿಲ್ಲ ಎನ್ನುವುದು ಈ ಅಂಕಣಕಾರನ ಖಚಿತ ಅಭಿಪ್ರಾಯ. ಅದು ಮೂವರ ನಡುವೆ ನಡೆದಿರುವ ಮಾತುಕತೆ. ಅವರ ಪೈಕಿ ಯಾರೊಬ್ಬರೂ ಗುಟ್ಟು ಬಿಟ್ಟುಕೊಟ್ಟಿಲ್ಲ. ಆದರೆ ‘ಅಧಿಕಾರ ಹಂಚಿಕೆಯ ಪ್ರಾರ್ಥನೆ ಫಲಿಸಿರಬಹುದು’, ಅದೇ ಕಾರಣಕ್ಕೆ ಡಿ.ಕೆ. ಶಿವಕುಮಾರ್ ದಿಲ್ಲಿಯಲ್ಲಿ ಮತ್ತೊಮ್ಮೆ ರಾಹುಲ್ ಗಾಂಧಿ ಭೇಟಿ ಮಾಡುವ ವಿಶ್ವಾಸದಲ್ಲಿ ಇರಬಹುದು ಎಂಬ ವ್ಯಾಖ್ಯಾನಗಳು, ವಿಶ್ಲೇಷಣೆಗಳಾಗುತ್ತಿವೆ.

ಸರಕಾರ ಬಂದಾಗ ಮುಖ್ಯಮಂತ್ರಿ ಮಾಡುವುದು ಬೇರೆ ವಿಚಾರ. ತದನಂತರ ಮುಖ್ಯಮಂತ್ರಿ ಬದಲಾವಣೆ ಮಾಡುವುದು ಎಲ್ಲಾ ಕಾಲಕ್ಕೂ, ಎಲ್ಲಾ ಪಕ್ಷಗಳಿಗೂ, ಎಲ್ಲಾ ನಾಯಕರಿಗೂ ಸವಾಲಿನ ಪ್ರಶ್ನೆಯೇ. ತಮಗೆ ಬೇಕಾದವರನ್ನು ಮುಖ್ಯಮಂತ್ರಿ ಮಾಡುವುದು ಎಷ್ಟು ಕಷ್ಟವೋ ಅವರನ್ನು ಆ ಸ್ಥಾನದಿಂದ ಇಳಿಸುವುದು ಅದಕ್ಕಿಂತಲೂ ಕಷ್ಟ. ಇದಕ್ಕೆ ಇತ್ತೀಚಿನ ವರ್ಷಗಳಲ್ಲಿನ ಬಹಳ ಒಳ್ಳೆಯ ಉದಾಹರಣೆ ಎಂದರೆ 2014ರಲ್ಲಿ ನಿತೀಶ್ ಕುಮಾರ್ ಮುಖ್ಯಮಂತ್ರಿ ಕುರ್ಚಿಯಿಂದ ಇಳಿಯಬೇಕಾದ ಸಂದರ್ಭ ಬಂದಾಗ ತಮ್ಮ ಅತ್ಯಂತ ಆಪ್ತ, ಅತ್ಯಂತ ದುರ್ಬಲ, ಯಕಶ್ಚಿತ್ ಶಾಸಕ ಎಂದೇ ಹೇಳಲಾಗುತ್ತಿದ್ದ ಜಿತಿನ್ ರಾಮ್ ಮಾಂಝಿ ಅವರನ್ನು ತಂದು ಕೂರಿಸಿದ್ದು ಹಾಗೂ ಮಾಂಝಿಯನ್ನು ಮಾಜಿ ಮಾಡಲು ಚಾಣಾಕ್ಷ ರಾಜಕಾರಣಿ ನಿತೀಶ್ ಕುಮಾರ್ ಆವರೆಗೆ ಕಲಿತಿದ್ದ ರಾಜಕೀಯ ವಿದ್ಯೆಗಳೆಲ್ಲವನ್ನೂ ಬಳಸಿದ್ದು. ಮೊದಲಿಗೆ ನಿತೀಶ್ ತಂಡದಲ್ಲಿ ಮಾಂಝಿ ಒಬ್ಬ ಕಾರ್ಮಿಕನ ರೀತಿ ಇದ್ದವರು. ಈಗ ಅದೇ ನಿತೀಶ್ ಸರಕಾರದಲ್ಲಿ ಅವರು ಪಾಲುದಾರ (ಪುಷ್ಪ ಸಿನೆಮಾ ರೀತಿ).

ದಿಲ್ಲಿಗೆ ಬೆಂಗಳೂರಿಗಿಂತ ಪಾಟ್ನಾ ಬಲು ಸಮೀಪ. ರಾಹುಲ್ ಗಾಂಧಿಗೆ ಈ ನಿದರ್ಶನ ಗೊತ್ತಿಲ್ಲದಿರುವ ಸಾಧ್ಯತೆ ಇಲ್ಲ. ಆದರೂ ನಾಯಕತ್ವ ಬದಲಾವಣೆ ಬಗ್ಗೆ ನಿರ್ಲಿಪ್ತ ನಿಲುವು ತೆಳೆದಿದ್ದಾರೆ. ಒಬ್ಬರಿಗೆ ಅಧಿಕಾರ ಕೊಡಲು ಇಷ್ಟವಿಲ್ಲದಿದ್ದರೆ, ಇನ್ನೊಬ್ಬರಿಗೆ ಇರುವ ಅಧಿಕಾರವನ್ನು ಸುಸೂತ್ರವಾಗಿ ನಡೆಸಲು ಇದ್ದ ಅಡೆತಡೆಗಳನ್ನು ನಿವಾರಿಸಬಹುದಿತ್ತು. ಅದನ್ನೂ ಮಾಡಿಲ್ಲ ಎನ್ನುವುದಾದರೆ ಇರುವ ವ್ಯವಸ್ಥೆ ಬಗೆಗೂ ಅವರಿಗೆ ಸಮಾಧಾನ ಇಲ್ಲವೇನೋ ಎಂಬುದಾಗಿ ಕೂಡ ವ್ಯಾಖ್ಯಾನಿಸಬಹುದು. ಅದೇನೇ ಇದ್ದರೂ ಅವರು ಸಮಸ್ಯೆ ಬಗೆಹರಿಸುವ ಪ್ರಾಮಾಣಿಕ ಪ್ರಯತ್ನ ಮಾಡಬೇಕಿತ್ತು ಎನ್ನುವುದು ವಾಸ್ತವ.

ಬಹಳ ವಿಷಯಗಳಲ್ಲಿ ಸ್ಥಳ ಮಹಿಮೆ ಎನ್ನುವುದು ಮಹತ್ವದ ಪಾತ್ರವಹಿಸುತ್ತದೆ. ರಾಜಕೀಯದಲ್ಲಿ ಒಂಚೂರು ಜಾಸ್ತಿಯೇ ಮಹತ್ವ ಇರುತ್ತದೆ. ಮೈಸೂರು ವಿಮಾನ ನಿಲ್ದಾಣದ ಬದಲು ದಿಲ್ಲಿಯಲ್ಲಿ ಕೂತು ಮಾತನಾಡಿದರೆ ಅದರ ಪರಿಣಾಮ ಹೆಚ್ಚಾಗಿರುತ್ತದೆ. ನಾಯಕತ್ವ ಬದಲಾವಣೆ ವಿಚಾರವನ್ನು ಬಿಡಿ, ಕೇರಳ ಚುನಾವಣೆಯಿಂದ ಹಿಡಿದು, ಸಚಿವ ಸಂಪುಟ ಪುನರ್ ರಚನೆವರೆಗೆ ಬೇರಾವುದೇ ವಿಷಯವನ್ನಾದರೂ ದಿಲ್ಲಿಗೆ ಕರೆಸಿಕೊಂಡು ಮಾತನಾಡಬಹುದಿತ್ತು.

ಕರ್ನಾಟಕದಲ್ಲೂ ಕೇರಳದ ಚರ್ಚೆ

ಮುಂದೆ ನಡೆಯುವ ಪಶ್ಚಿಮ ಬಂಗಾಳ, ಅಸ್ಸಾಂ, ತಮಿಳುನಾಡು ಮತ್ತು ಕೇರಳ ವಿಧಾನಸಭಾ ಚುನಾವಣೆಗಳ ಪೈಕಿ ಕಾಂಗ್ರೆಸ್ ಗೆಲ್ಲುವ ಅವಕಾಶ ಇರುವುದು ಕೇರಳದಲ್ಲಿ ಮಾತ್ರ. ಅದರಿಂದಾಗಿ ಸದ್ಯ ರಾಹುಲ್ ಗಾಂಧಿ ಕೇರಳ ಬಗ್ಗೆ ಮಾತ್ರ ತಲೆಕೆಡಿಸಿಕೊಂಡಿದ್ದಾರೆ. ಕರ್ನಾಟಕದ ವಿದ್ಯಮಾನಗಳಿಗೆ ಈಗ ಅವರ ಬಳಿ ವಿಶೇಷ ಮಾನ್ಯತೆ ಇಲ್ಲ. ಮೈಸೂರು ವಿಮಾನ ನಿಲ್ದಾಣದಲ್ಲಿ ರಾಜ್ಯ ನಾಯಕರನ್ನು ಭೇಟಿ ಮಾಡುವ ಉದ್ದೇಶವೂ ಅವರಿಗಿರಲಿಲ್ಲ. ಅದೇ ಕಾರಣಕ್ಕೋ ಏನೋ ಕರ್ನಾಟಕದ ನಾಯಕರ ಜೊತೆ ಕೇರಳದ ವಿಷಯವನ್ನಷ್ಟೇ, ಅದೂ ಕೆಲವೇ ನಿಮಿಷ ಮಾತನಾಡಿ ಅಲ್ಲಿಂದ ಜಾಗ ಖಾಲಿ ಮಾಡಿದರು ಎನ್ನುತ್ತವೆ ದಿಲ್ಲಿ ಮೂಲಗಳು.

ಸಿದ್ದುಗೆ ರಾಹುಲ್ ಕರೆ

ಸಿದ್ದರಾಮಯ್ಯ ಅವರು ದೇವರಾಜ ಅರಸು ದಾಖಲೆ ಮುರಿದ ಸಂದರ್ಭದಲ್ಲಿ ರಾಹುಲ್ ಗಾಂಧಿ ಕರೆ ಮಾಡಿದ್ದಾರೆ. ಶಾಸ್ತ್ರಕ್ಕೆ ಅಭಿನಂದನೆ ಹೇಳಿ ಮರುಕ್ಷಣವೇ ಕೇರಳ ಚುನಾವಣೆ ಕಡೆಗೆ ಹೊರಳಿದ್ದಾರೆ. ರಾಜ್ಯ ಬಜೆಟ್, ಸಚಿವ ಸಂಪುಟ ಪುನರ್ ರಚನೆ ಬಗ್ಗೆ ಮಾತನಾಡಲು ಸಿದ್ದರಾಮಯ್ಯ ಉತ್ಸಾಹ ತೋರಿದರೂ ರಾಹುಲ್ ಗಾಂಧಿ ಮತ್ತೆ ಮತ್ತೆ ತಲುಪಿದ್ದು ಕೇರಳದ ಕಡೆಗೆ ಎನ್ನುತ್ತವೆ ಮುಖ್ಯಮಂತ್ರಿ ಕಾರ್ಯಾಲಯದ ಮೂಲಗಳು.

ಮೂರ್ನಾಲ್ಕು ದಿನಗಳ ಹಿಂದೆಯಷ್ಟೇ ಸಿದ್ದರಾಮಯ್ಯ ಜೊತೆ ಮಾತನಾಡಿದ್ದರಿಂದ ಅವರು ಮತ್ತೊಮ್ಮೆ ರಾಜ್ಯ ನಾಯಕರನ್ನು ಮೈಸೂರಿಗೆ ಕರೆಸಿಕೊಂಡು ಮಾತನಾಡುವ ಅವಶ್ಯಕತೆ ಏನಿತ್ತು ಎನ್ನುವ ಪ್ರಶ್ನೆಯ ಬೆನ್ನುಹತ್ತಿದರೆ ಅವರು ಕರೆಸಿಕೊಂಡಿರಲಿಲ್ಲ ಎನ್ನುವ ಮಾಹಿತಿ ಖಚಿತವಾಗುತ್ತದೆ.ಜೊತೆಜೊತೆಯಲ್ಲಿ ಕೇರಳದ ವಿಷಯವೂ ತೆರೆದುಕೊಳ್ಳುತ್ತದೆ. ಯಾರು ಏನೇ ಮಾತನಾಡಿದರೂ ತಮಗೆ ಹೇಗೆ ಬೇಕೋ ಹಾಗೆ ವ್ಯಾಖ್ಯಾನಿಸಿಕೊಳ್ಳುವ ಮಾಧ್ಯಮಗಳ ಮತ್ತು ವ್ಯತಿರಿಕ್ತ ಪರಿಸ್ಥಿತಿಯಲ್ಲೂ ಅಧಿಕಾರದ ಕನಸು ಕಟ್ಟಿಕೊಟ್ಟಿಕೊಡುವ ಸ್ವಾಮೀಜಿ/ಜ್ಯೋತಿಷಿಗಳ ಆರ್ಭಟ-ಕಪಟಗಳು ಹೆಚ್ಚಾಗಿರುವ ಈ ಸಂದರ್ಭದಲ್ಲಿ ರಾಜ್ಯ ನಾಯಕರು ಮೈಮರೆತಿದ್ದಾರೆ. ಈ ವಿಷಯದಲ್ಲಿ ರಾಹುಲ್ ಗಾಂಧಿ ಕೂಡ ‘ಕಾಂಗ್ರೆಸಿಗ’ ಎನ್ನುವುದನ್ನು ನಿರೂಪಿಸಿದ್ದಾರೆ. ರಾಹುಲ್ ಗಾಂಧಿ ಅವರ ಅಸ್ಪಷ್ಟತೆಗೆ ಇನ್ನಷ್ಟು ನಿದರ್ಶನಗಳು ಬೇಕೆಂದರೆ... ಅವರೀಗ ದೇಶಾದ್ಯಂತ ಹಿಂದುಳಿದವರು, ಪರಿಶಿಷ್ಟ ಜಾತಿಯವರು, ಪಂಗಡದವರು, ಆದಿವಾಸಿಗಳು, ಸಣ್ಣಸಂಖ್ಯಾತರು ಆಯಕಟ್ಟಿನ ಜಾಗಕ್ಕೆ ಬರಬೇಕು ಎಂದು ಭಾಷಣ ಮಾಡುತ್ತಾರೆ. ಆದರೆ ಅವರ ಪಕ್ಷ ಅಧಿಕಾರದಲ್ಲಿರುವ ಮೂರು ರಾಜ್ಯಗಳ ಪೈಕಿ ಕರ್ನಾಟಕದಲ್ಲಿರುವ ಸಿದ್ದರಾಮಯ್ಯ ಮಾತ್ರ ಹಿಂದುಳಿದ ಜಾತಿಯ ಅಥವಾ ಅಹಿಂದ ನಾಯಕ. ಉಳಿದಿಬ್ಬರು ಮುಂದುವರಿದ ಜಾತಿಗೆ ಸೇರಿದವರು. ಇದು ಗೊತ್ತಿದ್ದೂ ಹಿಂದುಳಿದ ಜಾತಿಯ ನಾಯಕನೊಬ್ಬ ಮುಖ್ಯಮಂತ್ರಿಯಾಗಿ ಮುಂದುವರಿಯಲಿ ಎನ್ನುವುದನ್ನು ನಾಲ್ಕು ಕೋಣೆಯೊಳಗಾದರೂ ನಿರ್ಧರಿಸಲು ಅವರಿಗೆ ಸಾಧ್ಯವಾಗಲಿಲ್ಲ. ಹಾಗೆಯೇ ರಾಜ್ಯದಲ್ಲಿ ದಲಿತ ಮುಖ್ಯಮಂತ್ರಿ ವಿಷಯ ಕೂಡ ಚರ್ಚೆಯಾಗುತ್ತಿದೆ(ತೀವ್ರವಾಗಿ ಅಲ್ಲ). ದಲಿತರಿಗೆ ಅವಕಾಶ ಕೊಡುವ ಬಗ್ಗೆ ಚಿಂತನೆ ನಡೆಸಬೇಕಿತ್ತಲ್ಲವೇ? 2021ರಲ್ಲಿ ಇದೇ ರಾಹುಲ್ ಗಾಂಧಿ ಪಂಜಾಬ್‌ನಲ್ಲಿ ದಲಿತ ನಾಯಕ ಚರಣಜಿತ್ ಸಿಂಗ್ ಚೆನ್ನಿ ಅವರನ್ನು ಭಾರೀ ವಿರೋಧದ ನಡುವೆಯೂ ಮುಖ್ಯಮಂತ್ರಿ ಮಾಡಿದ್ದರು. ಈಗಲೂ ಅಂಥ ಧೈರ್ಯ ಅಥವಾ ಬದ್ಧತೆ ಪ್ರದರ್ಶಿಸಲು ಅವರಿಂದ ಸಾಧ್ಯವಾಗುತ್ತಿಲ್ಲ.

ಸಿದ್ದರಾಮಯ್ಯ ಆಡಳಿತದ 2013-2018ರ ಅವಧಿಗೂ ಇಂದಿನ ಪರಿಸ್ಥಿತಿಗೂ ತುಂಬಾ ವ್ಯತ್ಯಾಸವಿದೆ. ಈಗ ಅವರ ಆಡಳಿತ ಕಾರ್ಯವೈಖರಿಗೆ ದೊಡ್ಡ ಸಾವಾಲಾಗಿರುವುದು ಕಾಂಗ್ರೆಸ್ ಹೈಕಮಾಂಡ್ ಹೇರಿರುವ ಗ್ಯಾರಂಟಿಗಳು. ಗ್ಯಾರಂಟಿಗಳು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಆರ್ಥಿಕ ಶಕ್ತಿ ನೀಡುತ್ತಿರುವ ದೂರದೃಷ್ಟಿಯುಳ್ಳ ಅಪರೂಪದ ಯೋಜನೆಗಳು ಎನ್ನುವುದರಲ್ಲಿ ಯಾವ ಅನುಮಾನವೂ ಇಲ್ಲ. ರಾಜ್ಯದ ಗ್ರಾಮೀಣ ಆರ್ಥಿಕತೆ ವೃದ್ಧಿಯಾಗಲು, ಮಹಿಳೆಯರು ಸ್ವಾವಲಂಬಿಗಳಾಗಲು, ಗುಳೆ ಹೋಗುತ್ತಿದ್ದವರ ಪ್ರಮಾಣ ಕಮ್ಮಿಯಾಗಲು ಮತ್ತು ಜಿಎಸ್‌ಟಿ ಸಂಗ್ರಹ ಜಾಸ್ತಿಯಾಗಲು ಗ್ಯಾರಂಟಿ ಯೋಜನೆಗಳೇ ಕಾರಣ ಎನ್ನುವುದು ಅತಿಶಯೋಕ್ತಿಯೂ ಅಲ್ಲ. ಆದರೆ ಒಂದೇ ಸಲಕ್ಕೆ ಐದು ಗ್ಯಾರಂಟಿಗಳನ್ನು ಜಾರಿ ಮಾಡಲು ಹೊರಟಿದ್ದು ದುಸ್ಸಾಹಸ. ಗ್ಯಾರಂಟಿಗಳೆಂಬ ಮಣಭಾರ ಹೊರಿಸಿ ಸರಕಾರ ಶರವೇಗದಲ್ಲಿ ಓಡಲಿ ಎಂದು ಬಯಸಿದರೆ ಅರ್ಥವುಂಟೆ? ಎರಡನೆಯದಾಗಿ ಈಗ ಅಧಿಕಾರ ಕೇಂದ್ರಗಳು ಕೂಡ ಜಾಸ್ತಿ. ಈ ಕಗ್ಗಂಟನ್ನು ಬಿಡಿಸಬೇಕಾಗಿದ್ದವರು ರಾಹುಲ್ ಗಾಂಧಿ ಅಲ್ಲವೇ?

ರಾಹುಲ್ ಗಾಂಧಿ ಜಾತಿಗಣತಿ ಬಗ್ಗೆ ಕೂಡ ದೊಡ್ಡ ದೊಡ್ಡ ಮಾತನ್ನಾಡುತ್ತಾರೆ. ಕೇಂದ್ರ ಸರಕಾರ ಜಾತಿ ಗಣತಿ ಮಾಡುವುದಾಗಿ ಘೋಷಿಸಿದಾಗ, ರಾಹುಲ್ ಗಾಂಧಿ ಒತ್ತಡಕ್ಕೆ ಮಣಿದೇ ಕೇಂದ್ರ ಸರಕಾರ ಜಾತಿ ಗಣತಿ ಘೋಷಿಸಿದೆ ಎಂದು ಕಾಂಗ್ರೆಸ್ ನಾಯಕರು ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ಳುತ್ತಾರೆ. ಆದರೆ ರಾಹುಲ್ ಗಾಂಧಿ ಜಾತಿ ಗಣತಿ ಬಗ್ಗೆ ಮಾತನಾಡುತ್ತಿರುವುದು ಯಾವಾಗಿನಿಂದ? 2024ರ ಲೋಕಸಭಾ ಚುನಾವಣೆ ಸಂದರ್ಭದಿಂದ. ಸಿದ್ದರಾಮಯ್ಯ ಜಾತಿಗಣತಿ ಬಗ್ಗೆ 20 ವರ್ಷದ ಹಿಂದೆ ನಡೆದ ಅಹಿಂದ ಸಮಾವೇಶದಲ್ಲೇ ಮಾತನಾಡಿದ್ದರು. 2007ರಲ್ಲಿ ಕೇಂದ್ರ ಸರಕಾರ ಜಾತಿಗಣತಿ ಪೈಲೆಟ್ ಪ್ರಾಜೆಕ್ಟ್ ಗಾಗಿ 23.5 ಕೋಟಿ ರೂ. ಕೊಟ್ಟಿತ್ತು. ಅದಕ್ಕೆ 1.5 ಕೋಟಿ ರೂ. ಸೇರಿಸಿ ರಾಜ್ಯ ಹಿಂದುಳಿದ ವರ್ಗಗಳ ಆಯೋಗಕ್ಕೆ ಜಾತಿಗಣತಿ ತಯಾರಿಗಾಗಿ ಒಟ್ಟು 25 ಕೋಟಿ ರೂ. ಕೊಟ್ಟದ್ದು ಆಗ ರಾಜ್ಯದಲ್ಲಿ ಉಪಮುಖ್ಯಮಂತ್ರಿ ಮತ್ತು ಹಣಕಾಸು ಸಚಿವರಾಗಿದ್ದ ಸಿದ್ದರಾಮಯ್ಯ. ನಂತರ ಅವರು ಮುಖ್ಯಮಂತ್ರಿಯಾದ ಮೇಲೆ 2014ರಲ್ಲಿ ಜಾತಿಗಣತಿ ಮಾಡುವುದಾಗಿ ಘೋಷಿಸಿದರು. ಇದರಿಂದ ಕಾಂತರಾಜ್ ಆಯೋಗ ಸುದೀರ್ಘವಾಗಿ, ಸಮರ್ಪಕವಾಗಿ, ಸಮರ್ಥನೀಯವಾಗಿ ಸಮೀಕ್ಷೆ ನಡೆಸಲು ಸಾಧ್ಯವಾಯಿತು. ಆದರೂ ರಾಹುಲ್ ಗಾಂಧಿ ಉಲ್ಲೇಖಿಸುತ್ತಿರುವುದು ಅವಸರದಲ್ಲಿ ನಡೆದ ತೆಲಂಗಾಣದ ಜಾತಿಗಣತಿ ಬಗ್ಗೆ. ಇದಕ್ಕೂ ಮೀರಿ ಕಾಂತರಾಜ್ ಆಯೋಗ ಸಮೀಕ್ಷೆ ನಡೆಸಿ ಜಯಪ್ರಕಾಶ್ ಹೆಗ್ಡೆ ಆಯೋಗ ಕೊಟ್ಟಿದ್ದ ವರದಿ ಜಾರಿ ಮಾಡುವ ಕುರಿತು ವಿಷಯಾಧಾರಿತವಾಗಿಯಾದರೂ ಸಿದ್ದರಾಮಯ್ಯ ಜೊತೆ ನಿಲ್ಲದೆ ಆ ವರದಿ ಕಸದ ಬುಟ್ಟಿಗೆ ಎಸೆಯಲ್ಪಡುವಂತಾಗಲು ರಾಹುಲ್ ಗಾಂಧಿ ಕಾರಣ ಅಲ್ಲವೇ?

ಸಂವಿಧಾನದ ಪ್ರತಿ ಹಿಡಿದು ದೇಶ ಸುತ್ತುವ, ಸಂವಿಧಾನ ರಕ್ಷಿಸಿ ಎಂದು ಹೇಳುವ ರಾಹುಲ್ ಗಾಂಧಿಗೆ, ಕೆ.ಎನ್. ರಾಜಣ್ಣ ಅವರನ್ನು ಒಂದು ಮಾತೂ ಕೇಳದೆ,

ನೈಸರ್ಗಿಕ ನ್ಯಾಯಕ್ಕೆ ವಿರುದ್ಧವಾಗಿ ಸಂಪುಟದಿಂದ ವಜಾ ಮಾಡಿದ್ದು ಅಪ್ರಜಾಪ್ರಭುತ್ವ ನಡೆ ಎನಿಸುವುದಿಲ್ಲ. ಮೊನ್ನೆ ಮೊನ್ನೆ ಕೂಡ ರಾಹುಲ್ ಗಾಂಧಿ ಮೈಸೂರು ವಿಮಾನ ನಿಲ್ದಾಣಕ್ಕೆ ಬಂದದ್ದು ಶಾಲೆಯೊಂದರ ಕಾರ್ಯಕ್ರಮ ಮುಗಿಸಿ. ಆ ಶಾಲೆಯಲ್ಲಿ ಶಿಕ್ಷಣ ವ್ಯವಸ್ಥೆ ದುಬಾರಿಯಾಗಬಾರದು, ಶಿಕ್ಷಣ ಖಾಸಗೀಕರಣವಾಗಬಾರದು, ಖಾಸಗಿ ಶಿಕ್ಷಣ ಸಂಸ್ಥೆಗಳಿದ್ದರೂ ಸರಕಾರಿ ಶಿಕ್ಷಣ ವ್ಯವಸ್ಥೆ ಸದೃಢವಾಗಿರಬೇಕು ಎಂದಿದ್ದಾರೆ. ಆದರೆ ಅವರದೇ ಪಕ್ಷದ ರಾಜ್ಯ ನಾಯಕರನೇಕರು ಶಿಕ್ಷಣವನ್ನು ಬಿಕರಿಗಿಟ್ಟು ತಿಜೋರಿ ತುಂಬಿಕೊಳ್ಳುತ್ತಿದ್ದಾರೆ. ಪಕ್ಷ ಮತ್ತು ಸರಕಾರದಲ್ಲಿ ಇಂಥ ನೀತಿಗಳ ಬಗ್ಗೆ ರಾಹುಲ್ ಗಾಂಧಿ ಕಿವಿ ಹಿಂಡಬಹುದಲ್ಲವೇ?

ಕಾಂಗ್ರೆಸ್ ಪಕ್ಷ ಈಗ ಮನರೇಗಾ ವಿರುದ್ಧ ಜನವರಿ 26ರಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದೆಯಂತೆ. ತಾಲೂಕು ಮಟ್ಟದಲ್ಲೂ ಪಾದಯಾತ್ರೆ ನಡೆಸಲಿದೆಯಂತೆ. ಇಷ್ಟು ತಡ ಮಾಡುತ್ತಿರುವುದು ಏಕೆ? ಆ ಕ್ಷಣಕ್ಕೆ ಸ್ಪಂದಿಸದಿದ್ದರೆ ಯಾವ ಹೋರಾಟವೂ ಯಶಸ್ಸು ಸಾಧಿಸಲಾರದು. ಇದೇ ರಾಹುಲ್ ಗಾಂಧಿ ಮತ್ತವರ ತಂಡ (ಕಾಂಗ್ರೆಸ್ ಪಕ್ಷ ಅಲ್ಲ) ಇತ್ತೀಚೆಗೆ ಮತಗಳ್ಳತನದ ಹೋರಾಟ ಆರಂಭಿಸಿತ್ತು. ಅದಕ್ಕೂ ಮೊದಲು ಸಂವಿಧಾನ ರಕ್ಷಿಸುವ ಅಭಿಯಾನ ಹಮ್ಮಿಕೊಂಡಿತ್ತು. ಅದಕ್ಕೂ ಹಿಂದೆ ಚುನಾವಣಾ ಬಾಂಡ್, ರಫೇಲ್, ಇನ್ನೊಂದು, ಮತ್ತೊಂದು ವಿಚಾರಗಳನ್ನು ಕೈಗೆತ್ತಿಕೊಂಡಿತ್ತು. ಒಂದು ಬಂದ ಮೇಲೆ ಮತ್ತೊಂದನ್ನು ಮರೆಯಲಾಯಿತು. ಈಗ ಮನರೇಗಾ ಬಂತು, ಮತಗಳ್ಳತನ ಮೂಲೆಗುಂಪಾಯಿತು. ಇದರ ಜವಾಬ್ದಾರಿ ಹೊರಬೇಕಾದವರು ಯಾರು?

ರಾಹುಲ್ ಗಾಂಧಿ ಅಲ್ಲವೇ?

Tags

politics
share
ಧರಣೀಶ್ ಬೂಕನಕೆರೆ
ಧರಣೀಶ್ ಬೂಕನಕೆರೆ
Next Story
X