Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಆನ್ ರೆಕಾರ್ಡ್
  5. ಸಿದ್ದು ಬೆನ್ನಿಗೆ ಚೂರಿ ಹಾಕಿದ್ದು ಯಾರು?

ಸಿದ್ದು ಬೆನ್ನಿಗೆ ಚೂರಿ ಹಾಕಿದ್ದು ಯಾರು?

ಧರಣೀಶ್ ಬೂಕನಕೆರೆಧರಣೀಶ್ ಬೂಕನಕೆರೆ1 Jun 2026 10:43 AM IST
share
ಸಿದ್ದು ಬೆನ್ನಿಗೆ ಚೂರಿ ಹಾಕಿದ್ದು ಯಾರು?

ಸಿದ್ದರಾಮಯ್ಯ ಎಷ್ಟೇ ಗಟ್ಟಿಯಾಗಿ ‘ಸ್ವಯಂ ಇಚ್ಛೆಯಿಂದ ನಾನೇ ರಾಜೀನಾಮೆ ಕೊಟ್ಟಿದ್ದೇನೆ’ ಎಂದರೂ, ಸ್ವಯಂಪ್ರೇರಿತ ರಾಜೀನಾಮೆ ಎಂದು ನಂಬಿಸಲು-ಬಿಂಬಿಸಲು ಕಾಂಗ್ರೆಸ್ ಎಷ್ಟೇ ಪ್ರಯತ್ನ ಪಟ್ಟರೂ, ರಾಜೀನಾಮೆ ಕೊಟ್ಟದ್ದಲ್ಲ, ಪಡೆದುಕೊಂಡದ್ದು ಎನ್ನುವುದು ವಾಸ್ತವ. ಸಿದ್ದರಾಮಯ್ಯ ಇವತ್ತಲ್ಲ ನಾಳೆ ನಿರ್ಗಮಿಸಬೇಕಿತ್ತು, ಮತ್ತೊಬ್ಬರಿಗೆ ನಾಯಕತ್ವದ ದಂಡವನ್ನು ಹಸ್ತಾಂತರಿಸಬೇಕಿತ್ತು ಎನ್ನುವುದು ಕೂಡ ವಾಸ್ತವ. ಈ ಹಿನ್ನೆಲೆಯಲ್ಲಿ ಅವರನ್ನು ಕೆಳಗಿಳಿಸಿದ್ದು ಸರಿ ಎನಿಸಿದರೂ ಕೆಳಗಿಳಿಸಿದ ಪರಿ ಹಲವರಿಗೆ ಸರಿ ಎನಿಸುತ್ತಿಲ್ಲ ಎನ್ನುವ ಸಂಗತಿಗಳು ಕೂಡ ವಾಸ್ತವವೇ.

ಇವೆಲ್ಲವುಗಳ ನಡುವೆ ಹೈಕಮಾಂಡ್ ಸಿದ್ದರಾಮಯ್ಯ ಅವರನ್ನು ಕತ್ತಲೆಯಲ್ಲಿಟ್ಟು ಅವರಿಂದ ರಾಜೀನಾಮೆ ಪಡೆಯಲು ನಿರ್ಧರಿಸಿದೆ. ಎಲ್ಲವನ್ನೂ ನಿರ್ಧರಿಸಿದ ಬಳಿಕ ದಿಲ್ಲಿಗೆ ಕರೆಸಿಕೊಂಡು ‘ಆದೇಶ ಪಾಲಿಸಿ’ ಎಂಬ ಸೂಚನೆಯನ್ನಷ್ಟೇ ನೀಡಿದೆ. ಗೌರವಯುತವಾಗಿ ಕಳುಹಿಸಿಕೊಡುವ ಬದಲು ಕೂಡಲೇ ತೆರಳಿ ಎಂದು ಹೇಳುವ ಮೂಲಕ ಸಿದ್ದರಾಮಯ್ಯ ಬೆನ್ನಿಗೆ ಚೂರಿ ಹಾಕಿದೆ ಎನ್ನುವ ಸಂಗತಿಗಳು ಕೂಡ ಕಟು ವಾಸ್ತವವೇ. ಹಾಗಿದ್ದರೆ ಸಿದ್ದರಾಮಯ್ಯ ಬೆನ್ನಿಗೆ ಚೂರಿ ಇರಿದವರು ಯಾರು?

ಮೊದಲಿಗೆ ಕೆ.ಸಿ. ವೇಣುಗೋಪಾಲ್. ಇತ್ತೀಚೆಗೆ ಕೇರಳದ ಮುಖ್ಯಮಂತ್ರಿ ಆಯ್ಕೆ ಮಾಡಲು ಕಾಂಗ್ರೆಸ್ ಹೈಕಮಾಂಡ್ 2023ರಲ್ಲಿ ಕರ್ನಾಟಕದ ಮುಖ್ಯಮಂತ್ರಿ ಆಯ್ಕೆ ಮಾಡಿದ ರೀತಿಯಲ್ಲೇ ತಿಣುಕಾಡಿತ್ತು. ಕೆ.ಸಿ. ವೇಣುಗೋಪಾಲ್ ಮತ್ತು ವಿ.ಡಿ. ಸತೀಶನ್ ಇಬ್ಬರೂ ಪಟ್ಟಕ್ಕಾಗಿ ಬಿಗಿ ಪಟ್ಟು ಹಾಕಿದ್ದರಿಂದ ಅಧಿಕಾರ ಹಂಚಿಕೆಯ ಒಪ್ಪಂದದ

ಮೂಲಕ ಸಮಸ್ಯೆಯನ್ನು ಬಗೆಹರಿಸಲಾಗಿತ್ತು. ಈ ಒಪ್ಪಂದದ ಪ್ರಕಾರ ವೇಣುಗೋಪಾಲ್ ಮುಂದೆ ಕೇರಳದ ಮುಖ್ಯಮಂತ್ರಿ ಆಗಬೇಕಾದರೆ ಈಗ ಕರ್ನಾಟಕದಲ್ಲಿ ಅಧಿಕಾರ

ಹಂಚಿಕೆಯ ಒಪ್ಪಂದ ಪಾಲನೆಯಾಗಬೇಕಿತ್ತು. ಅದರಿಂದಾಗಿ ವೇಣುಗೋಪಾಲ್ ಅವರೇ ಕೈ ಹಿಡಿದು ಸಿದ್ದರಾಮಯ್ಯ ಅವರನ್ನು ಕೆಳಗಿಳಿಸಿದ್ದಾರೆ ಎನ್ನುವುದು ದಿಲ್ಲಿ ನಾಯಕರ ಅಭಿಪ್ರಾಯ.

ಸಿದ್ದರಾಮಯ್ಯ ಕಾಂಗ್ರೆಸ್ ಹೈಕಮಾಂಡ್ ಮಟ್ಟದಲ್ಲಿ ಅಹಮದ್ ಪಟೇಲ್ ಅಗಲಿಕೆಯ ನಂತರ ನಂಬಿದ್ದು ರಾಹುಲ್ ಗಾಂಧಿ ಮತ್ತು ವೇಣುಗೋಪಾಲ್ ಅವರನ್ನು ಮಾತ್ರ. ಈ ಪೈಕಿ ವೇಣುಗೋಪಾಲ್ ಒಂದು ರೀತಿಯಲ್ಲಿ ಸಿದ್ದರಾಮಯ್ಯ ಮತ್ತು ರಾಹುಲ್ ಗಾಂಧಿ ನಡುವೆ ಸೇತುವೆಯಂತಿದ್ದರು. ಅದರಿಂದಾಗಿ ವೇಣುಗೋಪಾಲ್ ಅವರನ್ನು ಹೈಕಮಾಂಡ್ ಪ್ರತಿನಿಧಿ ಎನ್ನುವುದಕ್ಕಿಂತ ಹೆಚ್ಚಾಗಿ ಹಿತೈಷಿ, ಸ್ನೇಹಿತ ಎಂದು ಭಾವಿಸಿದ್ದರು. ಆದರೆ ರಾಜಕಾರಣದಲ್ಲಿ ಬಹಳ ಸಲ ಸ್ನೇಹಕ್ಕಿಂತ ಸ್ವಾರ್ಥವೇ ಮುಖ್ಯವಾಗುತ್ತದೆ. ತಮ್ಮ ಸ್ವಾರ್ಥ ಸಾಧನೆಗಾಗಿ ಸಿದ್ದರಾಮಯ್ಯ ಅವರನ್ನು ಕೆಳಗಿಳಿಸುವಂತೆ ರಾಹುಲ್ ಗಾಂಧಿ ಮನವೊಲಿಸುವುದರಲ್ಲಿ ವೇಣುಗೋಪಾಲ್ ನಿರ್ಣಾಯಕ ಪಾತ್ರ ವಹಿಸಿದ್ದಾರೆ ಎನ್ನುವುದು ಕೂಡ ದಿಲ್ಲಿ ಕಾಂಗ್ರೆಸ್ ನಾಯಕರ ಮಾತುಗಳೇ.

ಎರಡನೆಯದಾಗಿ ರಾಹುಲ್ ಗಾಂಧಿ. ಬಹಳ ಮಂದಿ ಈಗ ಸಿದ್ದರಾಮಯ್ಯ ಮೊದಲ ಅವಧಿಯಲ್ಲಿ ಇದ್ದ ಹಾಗೆ ಇರಲಿಲ್ಲ ಎಂದು ದೂರುತ್ತಿದ್ದಾರೆ. ಹಾಗಿದ್ದರೆ ಸಿದ್ದರಾಮಯ್ಯ ಮೊದಲ ಅವಧಿಯಲ್ಲಿ ಹೇಗಿದ್ದರು? ಈಗ ಏನಾಗಿದ್ದರು? ಸರಳವಾಗಿ ಹೇಳುವುದಾರೆ ಆಗ ತುಂಬಾ ಸಕ್ರಿಯವಾಗಿದ್ದರು, ಈಗ ನಿಷ್ಕ್ರಿಯವಾಗಿದ್ದರು. ಆಗ ಮುಖ್ಯಮಂತ್ರಿಗಳ ಕಚೇರಿ ಚೆನ್ನಾಗಿತ್ತು. ಈಗ ಮುಖ್ಯಮಂತ್ರಿ ಕಚೇರಿ ಸರಿ ಇರಲಿಲ್ಲ. ಆಗ ಆಡಳಿತ, ಸರಕಾರ, ಸಚಿವ ಸಂಪುಟಗಳೆಲ್ಲದರ ಮೇಲೆ ಹಿಡಿತವಿತ್ತು. ಈಗ ಯಾವುದರ ಮೇಲೂ ಹಿಡಿತ ಇರಲಿಲ್ಲ. ಇತ್ಯಾದಿ ಇತ್ಯಾದಿ. ಇವೆಲ್ಲವೂ ನಿಜ. ಜೊತೆಜೊತೆಗೆ ಇನ್ನೊಂದು ನಿಜವೂ ಇದೆ. ಅದೇನೆಂದರೆ ಮೊದಲ ಅವಧಿಯಲ್ಲಿ ಸಿದ್ದರಾಮಯ್ಯ ಅವರಿಗೆ ಸ್ವಾತಂತ್ರ್ಯ ಇತ್ತು. ಎರಡನೇ ಅವಧಿಯಲ್ಲಿ ಕೈ ಕಟ್ಟಿ ಹಾಕಲಾಗಿತ್ತು. ಹಾಗಿದ್ದರೆ ಕೈ ಕಟ್ಟಿ ಹಾಕಿದ್ದು ಯಾರು? ಹೈಕಮಾಂಡ್ ಅಲ್ಲವೇ?

ಆರ್ಥಿಕ ಸಂಕಷ್ಟದ ಸಂದರ್ಭದಲ್ಲೂ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದ ಕೀರ್ತಿ ಮಾತ್ರ ಸಿದ್ದರಾಮಯ್ಯ ಅವರಿಗೆ ಸಲ್ಲಬೇಕು. ಅನ್ನಭಾಗ್ಯ, ಕೃಷಿ ಭಾಗ್ಯಗಳಂತೆ ಗ್ಯಾರಂಟಿಗಳು ಸಿದ್ದರಾಮಯ್ಯ ಕನಸಾಗಿರಲಿಲ್ಲ. ಹೈಕಮಾಂಡ್ ಗ್ಯಾರಂಟಿ ಯೋಜನೆಗಳನ್ನು ಸಿದ್ದರಾಮಯ್ಯ ಮೇಲೆ ಹೇರಿತ್ತು. ಎಷ್ಟರಮಟ್ಟಿಗೆ ಎಂದರೆ ಐದು ಗ್ಯಾರಂಟಿ ಯೋಜನೆಗಳನ್ನು ಹಂತ ಹಂತವಾಗಿ ಜಾರಿ ಮಾಡಲು ಬಿಡದೆ ಎಲ್ಲವನ್ನೂ ಕೂಡಲೇ ಜಾರಿ ಮಾಡಿ ಎಂದು ಕುತ್ತಿಗೆ ಮೇಲೆ ಕುಳಿತಿತ್ತು. ಇದರಿಂದ ಶಾಸಕರಿಗೆ ಅನುದಾನ ಕೊಡಲು, ಅಭಿವೃದ್ಧಿ ಕೆಲಸಗಳಿಗೆ ಬಿಡುಗಡೆ ಮಾಡಲು ತಿಜೋರಿಯಲ್ಲಿ ಹಣ ಇರಲಿಲ್ಲ. ಇದರ ಪರಿಣಾಮ ಸಿದ್ದರಾಮಯ್ಯ

ದುಡ್ಡಿಲ್ಲದ ದೊಡ್ಡ ಮನೆಯ ಅಸಹಾಯಕ ಯಜಮಾನನಂತಾಗಿದ್ದರು. ಇಂಥ ಅಸಹಾಯಕತೆ ಸೃಷ್ಟಿಸಿದ್ದು ಯಾರು? ಹೈಕಮಾಂಡ್ ಅಲ್ಲವೇ? ಅಂದರೆ ಸ್ವತಃ ರಾಹುಲ್ ಗಾಂಧಿಯೇ ಅಲ್ಲವೇ?

ಹಿಂದೊಮ್ಮೆ ಸಿದ್ದರಾಮಯ್ಯ ಅವರೇ ರಾಜೀನಾಮೆ ಕೊಡಲು ಹೋಗಿದ್ದರಂತೆ, ರಾಹುಲ್ ಗಾಂಧಿ ಬೇಡ ಎಂದಿದ್ದರಂತೆ. ವೇಣುಗೋಪಾಲ್ ಕೂಡ ಸಾಕ್ಷಿಯಾಗಿದ್ದರಂತೆ. ಆಮೇಲೆ ಮಂತ್ರಿ ಮಂಡಲ ಪುನರ್ ರಚನೆ ಮಾಡಿ ಎಂದಿದ್ದರಂತೆ. ಅದರಿಂದಾಗಿ ರಾಹುಲ್ ಗಾಂಧಿ ಮೇಲೆ ಸಿದ್ದರಾಮಯ್ಯಗೆ ಇನ್ನಿಲ್ಲದ ವಿಶ್ವಾಸವಿತ್ತು ಎಂಬ ಅಂತೆ-ಕಂತೆಗಳು ಕೇಳಿಬರುತ್ತಿವೆ. ಇವೆಲ್ಲವೂ ನಿಜವೂ ಇರಬಹುದು. ಸುಳ್ಳೂ ಇರಬಹುದು. ಅರ್ಧ ಸತ್ಯ-ಸುಳ್ಳಾಗಿರಬಹುದು. ಆದರೆ ರಾಹುಲ್ ಗಾಂಧಿ ಈಗ ಸಿದ್ದರಾಮಯ್ಯ ಬಗ್ಗೆ ನಡೆದುಕೊಂಡಿರುವ ರೀತಿ ಆಶ್ಚರ್ಯಕರವಾಗಿದೆ.

ಸಿದ್ದರಾಮಯ್ಯ ಬಗ್ಗೆ ರಾಹುಲ್ ಗಾಂಧಿಗಿದ್ದ ವಿಶ್ವಾಸ ಕಡಿಮೆಯಾಗಲು ಮೇಲೆ ಹೇಳಿದಂತೆ ವೇಣುಗೋಪಾಲ್ ಕಾರಣ ಇರಬಹುದು. ಮಲ್ಲಿಕಾರ್ಜುನ ಖರ್ಗೆ ಕೂಡ ಕಾರಣವಾಗಿರಬಹುದು (ಈ ವಿವರಗಳು ಮುಂದೆ ಇವೆ). ಅದಕ್ಕಿಂತ ಮಿಗಿಲಾಗಿ ಮೇ 26ರಂದು ಮೊದಲ ಸುತ್ತಿನ ಮಾತುಕತೆಯಲ್ಲಿ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಹುದ್ದೆ ಬಿಡಿ ಎಂದು ಕೇಳಿಕೊಂಡಿದ್ದ ಮತ್ತು ಯಾವ ಕಾರಣಕ್ಕೆ ಎಂದು ಮನವರಿಕೆ ಮಾಡಿಕೊಡಲು ಪ್ರಯತ್ನಿಸಿದ್ದ ರಾಹುಲ್ ಗಾಂಧಿ, ತಮ್ಮ ತಾಯಿ ಸೋನಿಯಾ ಗಾಂಧಿ ಮತ್ತು ಸಹೋದರಿ ಪ್ರಿಯಾಂಕಾ ಗಾಂಧಿ ಜೊತೆ ಮಾತನಾಡಿ ಬಂದು ಎರಡನೇ ಸುತ್ತಿನಲ್ಲಿ ಸಿದ್ದರಾಮಯ್ಯ ಜೊತೆ ಮಾತನಾಡುವಾಗ ‘ಕೂಡಲೇ ಕುರ್ಚಿ ಬಿಡಿ’ ಎಂದು ಆದೇಶದ ರೀತಿಯಲ್ಲಿ ಹೇಳಿದ್ದರು ಎನ್ನುವ ಮಾಹಿತಿಗಳಿವೆ.

ಮುಖ್ಯಮಂತ್ರಿ ಹುದ್ದೆಯಂಥ ಪ್ರಮುಖ ವಿಷಯಗಳಲ್ಲಿ ಸಾಧಕ ಬಾಧಕಗಳೇ ಮುಖ್ಯವಾಗಬೇಕು. ಚುನಾವಣಾ ರಾಜಕಾರಣ ಏನನ್ನು ಬಯಸುತ್ತದೆ, ಅದನ್ನು ಹೇಗೆ ನಿಭಾಯಿಸಬೇಕು ಎನ್ನುವುದು ಮುಖ್ಯವಾಗಬೇಕು. ಅದನ್ನು ಬಿಟ್ಟು ಅಮ್ಮ ಅಥವಾ ತಂಗಿ ಮಾತುಗಳಿಗೆ ಅನುಗುಣವಾಗಿ ನಿರ್ಧರಿಸಿದ್ದಾರೆ ಎನ್ನುವುದೇ ಆದರೆ ಸಿದ್ದರಾಮಯ್ಯಗೆ ಅನ್ಯಾಯ ಆಗಿರುವುದು ಅವರೇ ನಂಬಿದ್ದ ರಾಹುಲ್ ಗಾಂಧಿಯಿಂದ ಎನ್ನುವುದರಲ್ಲಿ ಅನುಮಾನವಿಲ್ಲ.

ಮೂರನೆಯದಾಗಿ ಮಲ್ಲಿಕಾರ್ಜುನ ಖರ್ಗೆ. ಅವರು ಸಮಸ್ಯೆಗಳನ್ನು ಬಗೆಹರಿಸಬೇಕಾಗಿತ್ತು. ಆದರೆ ಅವರೇ ರಾಜ್ಯ ಕಾಂಗ್ರೆಸ್‌ನ ಇನ್ನೊಂದು ಅಧಿಕಾರ ಕೇಂದ್ರವಾಗಿ ಸಮಸ್ಯೆಯನ್ನು ಇನ್ನಷ್ಟು ಸಂಕೀರ್ಣಗೊಳಿಸಿದರು. ಕಳೆದ ಮೂರು ವರ್ಷಗಳಲ್ಲಿ ನೀವು ಬಗೆಹರಿಸಿದ ಒಂದೇ ಒಂದು ಪ್ರಮುಖ ಸಮಸ್ಯೆ ಯಾವುದು? ಎಂದು ಕೇಳಿದರೆ ಬಹುಶಃ ಅವರಿಗೆ ಉತ್ತರಿಸಲು ಸಾಧ್ಯವಾಗುವುದಿಲ್ಲ. ಅಧಿಕಾರ ಹಂಚಿಕೆ ಕುರಿತಾದ ಅನಗತ್ಯ ಚರ್ಚೆಗಳು ರಾಜಕೀಯ ಅನಿಶ್ಚಿತತೆಯನ್ನು ಉಂಟುಮಾಡುತ್ತವೆ, ಅದರಿಂದ ಸರಕಾರಕ್ಕೆ ಮತ್ತು ಪಕ್ಷಕ್ಕೆ ಕೆಟ್ಟ ಹೆಸರು ಬರುತ್ತದೆ ಎನ್ನುವುದು ಅವರಿಗೆ ಗೊತ್ತಿದ್ದರೂ ಚರ್ಚೆಗಳನ್ನು ತಡೆಯಲು ಅವರಿಂದ ಸಾಧ್ಯವಾಗಲಿಲ್ಲ.

ಜಾತಿ ಸಮೀಕ್ಷೆಯನ್ನು ವಿನಾಕಾರಣ ಕಸದ ಬುಟ್ಟಿಗೆ ಹಾಕಲಾಯಿತು. ಇದರಿಂದ ಅಹಿಂದ ಮತ ವರ್ಗಕ್ಕೆ ತಪ್ಪು ಸಂದೇಶ ಹೋಗುತ್ತದೆ, ಅಹಿಂದ ಮತ ವರ್ಗವನ್ನೇ ನಂಬಿರುವ ಪಕ್ಷಕ್ಕೆ ಮಾರಕವಾಗುತ್ತದೆ ಎನ್ನುವುದು ಮಲ್ಲಿಕಾರ್ಜುನ ಖರ್ಗೆ ಅವರಿಗೆ ಗೊತ್ತಿದ್ದರೂ ರಾಹುಲ್ ಗಾಂಧಿಗೆ ಮನವರಿಕೆ ಮಾಡಿಕೊಡಲಿಲ್ಲ. ಇದಲ್ಲದೆ ಅವರೇ ಖುದ್ದಾಗಿ ಒಳ ಮೀಸಲಾತಿ ವಿವಾದವನ್ನು ಬಗೆಹರಿಸಬೇಕಾಗಿತ್ತು. ಆದರೆ ಉದ್ದೇಶ ಪೂರ್ವಕವಾಗಿ ಜಾರಿಯಾಗುವುದನ್ನು ವಿಳಂಬ ಮಾಡಿಸಿದರು ಎನ್ನುವುದನ್ನು ಈಗ ಅವರದೇ ಸಮುದಾಯದ ಜನ ಮಾತನಾಡಿಕೊಳ್ಳುತ್ತಿದ್ದಾರೆ. ಇವು ಕೆಲವು ಪ್ರಮುಖ ಉದಾಹರಣೆಗಳಷ್ಟೇ?

ಇವೆಲ್ಲಕ್ಕಿಂತ ಮುಖ್ಯವಾಗಿ ಎಐಸಿಸಿ ಅಧ್ಯಕ್ಷರ ರಾಜ್ಯ ಎನ್ನುವ ಕಾರಣಕ್ಕೆ ರಾಹುಲ್ ಗಾಂಧಿ ಕರ್ನಾಟಕದ ಬಗ್ಗೆ ಅಷ್ಟಾಗಿ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಖರ್ಗೆ ಅವರೇ ನಿರ್ಧರಿಸಲಿ ಎಂದು ಕರ್ನಾಟಕದ ವಿಚಾರ ಬಂದಾಗಲೆಲ್ಲಾ ಪಲಾಯನವಾದ ಮಾಡುತ್ತಿದ್ದರು. ಅಷ್ಟು ಸ್ವಾತಂತ್ರ್ಯ ಇದ್ದರೂ, ಸಿದ್ದರಾಮಯ್ಯ ಅವರನ್ನು ಬಿಡಿ ತಮ್ಮ ಪಕ್ಷದ ಸರಕಾರ ಚೆನ್ನಾಗಿ ನಡೆಯಲಿ ಎನ್ನುವ ಸದುದ್ದೇಶದಿಂದಲಾದರೂ ಸೂಕ್ತ ಕಾಲದಲ್ಲಿ ಸೂಕ್ತ ತೀರ್ಮಾನ ಕೈಗೊಳ್ಳಲು ಕಾರಣರಾಗಬೇಕಿತ್ತಲ್ಲವೇ? ಮಾರ್ಗದರ್ಶನ ಮಾಡುವ ಜಾಗದಲ್ಲಿದ್ದರು. ಆದರೂ ಮೌನವಾಗಿದ್ದರು ಎಂದರೆ ಏನರ್ಥ? ಈಗ ರಾಹುಲ್ ಗಾಂಧಿ ಕೈಗೊಂಡಿರುವ ನಿರ್ಧಾರದ ಹಿಂದೆ ಖರ್ಗೆ ಪಾತ್ರ ಏನೇನು ಇಲ್ಲ ಎಂದು ಹೇಳಲು ಸಾಧ್ಯವೇ?

ನಾಲ್ಕನೆಯದಾಗಿ ‘ಆಪ್ತರು’. ರಾಜಕೀಯದಲ್ಲಿ ‘ಆಪ್ತರು’ ಬೆನ್ನಿಗೆ ಚೂರಿ ಇರಿಯುವುದು ಸಹಜವಾಗಿಬಿಟ್ಟಿದೆ. ದೇವರಾಜ ಅರಸು ಕಾಲದಲ್ಲೇ ಹಾಗೆ ಮಾಡಿದ್ದರು ಎಂದ ಮೇಲೆ ಇವತ್ತಿನ ರಾಜಕಾರಣದಲ್ಲಿ ಆಪ್ತರಿಂದ ನಿಷ್ಠೆಯನ್ನು ನಿರೀಕ್ಷಿಸುವುದು ದುಬಾರಿಯೇ ಸರಿ. ಇದು ಅರ್ಥವಾಗಿದ್ದರಿಂದಲೇ ಏನೋ ಸಿದ್ದರಾಮಯ್ಯ ಅವರು ರಾಹುಲ್ ಗಾಂಧಿ ಜೊತೆ ಮಾತನಾಡಿ ಬಂದಾಗಿನಿಂದ ಹಿಡಿದು ರಾಜೀನಾಮೆ ಕೊಟ್ಟು ಬಂದು ಸುದ್ದಿಗೋಷ್ಠಿ ನಡೆಸುವ ತನಕ ಎರಡು ದಿನ ದಿವ್ಯಮೌನ ವಹಿಸಿದ್ದು. ಬೆಂಬಲಿಗರು ‘ನೀವು ಯಾವುದೇ ಕಾರಣಕ್ಕೂ ರಾಜೀನಾಮೆ ಕೊಡಬೇಡಿ, ಮುಖ್ಯಮಂತ್ರಿ ಯಾರಾಗಬೇಕು ಎನ್ನುವುದು ಶಾಸಕಾಂಗ ಪಕ್ಷದ ಸಭೆಯಲ್ಲೇ ನಿರ್ಧಾರವಾಗಲಿ, ಅದೇನಾಗುತ್ತೋ ನೋಡೇ ಬಿಡೋಣ, ನಾವು ದಿಲ್ಲಿಗೆ ಹೋಗಿ ಮಾತನಾಡುತ್ತೇವೆ. ನಾವು ರಾಹುಲ್ ಗಾಂಧಿ ಜೊತೆ ಮಾತನಾಡುತ್ತೇವೆ’ ಎಂಬಿತ್ಯಾದಿ ವೀರಾವೇಶದ ಮಾತುಗಳನ್ನಾಡುತ್ತಿದ್ದರೂಎಲ್ಲವನ್ನೂ ಕೇಳಿಸಿಕೊಂಡು ಸುಮ್ಮನೆ ಕುಳಿತದ್ದು. ಆ ಎರಡು ದಿನದಲ್ಲಿ ಸಿದ್ದರಾಮಯ್ಯ ಹೆಚ್ಚೆಂದರೆ ಮೂರು ಮತ್ತೊಂದು ಮಾತನ್ನಾಡಿರಬಹುದು. ಯಾವುವೆಂದರೆ? ‘ಮೊದಲೇ ಹೇಳಿದ್ದಂತೆ ರಾಹುಲ್ ಗಾಂಧಿ ಕೇಳಿರುವುದರಿಂದ ರಾಜೀನಾಮೆ ಕೊಡುತ್ತೇನೆ’, ‘ನನ್ನ ನಿರ್ಧಾರದಲ್ಲಿ ಬದಲಾವಣೆ ಇಲ್ಲ’, ‘ಹೈಕಮಾಂಡ್ ತೀರ್ಮಾನಕ್ಕೆ ಬದ್ಧ, ಕಾದು ನೋಡೋಣ’ ಎಂಬಿತ್ಯಾದಿ.

ಇಷ್ಟೆಲ್ಲಾ ಮಾತನಾಡಿದ ಆಪ್ತರು ಮತ್ತು ಬೆಂಬಲಿಗರ ಪೈಕಿ ರಾಹುಲ್ ಗಾಂಧಿಜೊತೆ ನೇರ ಸಂಪರ್ಕ ಇರುವ ಸಿದ್ದರಾಮಯ್ಯ ಅವರೇ ಬೆಳೆಸಿದ ನಾಯಕರು ಕೂಡ ದಿಲ್ಲಿ ವಿಮಾನ ಹತ್ತಲಿಲ್ಲ. ಬೆಂಗಳೂರಿನಲ್ಲೂ ಸಿದ್ದರಾಮಯ್ಯ ಎದುರು ಮಾತನಾಡಿದರೇ ವಿನಃ ಹೊರಗಡೆ ತುಟಿ ಬಿಚ್ಚಲಿಲ್ಲ. ರಾಜಕಾರಣ ಅಧಿಕಾರವನ್ನು ತಂದುಕೊಡುವ ಮಹಾನ್ ಶಕ್ತಿ ಎನ್ನುವುದರ ಜೊತೆಗೆ ನಂಬಿಕೆ ಮತ್ತು ನಿಷ್ಠೆಯೇ ಇಲ್ಲದ ಅತ್ಯಂತ ಕ್ರೂರಿ ಕೂಡ ಹೌದು ಎನ್ನುವುದು ಇದಕ್ಕೆ. ಇವರ ಮಾತನ್ನು ಕೇಳಿಕೊಂಡು ವ್ಯತಿರಿಕ್ತವಾದ ಹೆಜ್ಜೆ

ಇಟ್ಟಿದ್ದರೆ ಸಿದ್ದರಾಮಯ್ಯ ಬೆತ್ತಲಾಗುತ್ತಿದ್ದರು. ಈಗ ನಿಷ್ಠೆಯ ನಾಟಕವನ್ನಾಡಿದವರೇಬೆತ್ತಲಾಗಿದ್ದಾರೆ.

ಆಫ್ ದಿ ರೆಕಾರ್ಡ್!

ಸಿದ್ದರಾಮಯ್ಯ ವಿರುದ್ಧ ಸತೀಶ್ ಜಾರಕಿಹೊಳಿ ಶಾಸಕರ ಸಹಿ ಸಂಗ್ರಹ ಮಾಡಿದ್ದರು ಎಂಬ ವದಂತಿ ಕೇಳಿಬರುತ್ತಿದೆ. ಇದು ಸುಳ್ಳು ಮತ್ತು ಷಡ್ಯಂತ್ರ. ಮೊದಲನೆಯದಾಗಿ ಶಾಸಕರ ಸಹಿ ಸಂಗ್ರಹಿಸುವ ಪ್ರಮೇಯವೇ ಉದ್ಭವಿಸಿರಲಿಲ್ಲ. ಎರಡನೆಯದಾಗಿ ಮೂರು ದಶಕಗಳಿಂದಲೂ ಜೊತೆಜೊತೆಯಲ್ಲೇ ಸಾಗಿಬಂದಿರುವ ಸಿದ್ದರಾಮಯ್ಯ ಮತ್ತು ಸತೀಶ್ ಸಂಬಂಧ 2013ರಿಂದ ತುಸು ಪ್ರೀತಿ-ತುಸು ಅಂತರ ಎನ್ನುವಂತಿದೆಯೇ ಹೊರತು ಯಾವ ಹಂತದಲ್ಲೂ ದ್ವೇಷವಾಗಿ ಮಾರ್ಪಟ್ಟಿಲ್ಲ.

ಸಿದ್ದರಾಮಯ್ಯ ರಾಜಕಾರಣಕ್ಕೆ, ಅಹಿಂದ ಸಮಾವೇಶಕ್ಕೆ ಆರ್ಥಿಕ ಸಹಾಯ ಮಾಡಿದವರು ಸತೀಶ್. ಇನ್ನೊಂದೆಡೆ ಸತೀಶ್ ಜಾರಕಿಹೊಳಿಗೆ ಲೋಕೋಪಯೋಗಿ ಖಾತೆ

ಕೊಟ್ಟವರು ಸಿದ್ದರಾಮಯ್ಯ. ಸಾಮಾನ್ಯವಾಗಿ ಬಹಳ ಬೇಕಾದವರಿಗೆ, ಅವರು ಬೆಳೆಯಲಿ ಎನ್ನುವ ಕಾರಣಕ್ಕೆ ಲೋಕೋಪಯೋಗಿ ಇಲಾಖೆ ಕೊಡುತ್ತಾರೆ. ಹೀಗಿದೆ ಅವರ ಕೊಡು-ಕೊಳ್ಳುವಿಕೆ. ಇದಲ್ಲದೆ ಜನಸಂಖ್ಯೆ ವಿಷಯದಲ್ಲಿ ಕುರುಬ ಮತ್ತು ಪರಿಶಿಷ್ಟ ಪಂಗಡದವರು ಹೆಚ್ಚು ಕಡಿಮೆ ಸಮಾನವಾಗಿದ್ದಾರೆ. 2023ರ ಚುನಾವಣೆಯಲ್ಲಿ ಈ ಎರಡೂ ಸಮುದಾಯದ ಮತಗಳು ದಂಡಿಯಾಗಿ ಹರಿದು ಬಂದಿದ್ದರಿಂದ ಕಾಂಗ್ರೆಸ್ 130ಕ್ಕೂ ಹೆಚ್ಚು ಸ್ಥಾನ ಗೆದ್ದಿತ್ತು. ಇದು ವದಂತಿಗಳನ್ನು ಹರಡುತ್ತಿರುವವರಿಗೆ ಗೊತ್ತಿಲ್ಲದಿರಬಹುದು. ಒಡೆದು ಆಳುವವರಿಗೆ ಚೆನ್ನಾಗಿ ಗೊತ್ತಿದೆ.

Tags

Siddaramaiah
share
ಧರಣೀಶ್ ಬೂಕನಕೆರೆ
ಧರಣೀಶ್ ಬೂಕನಕೆರೆ
Next Story
X