Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ನೆಲದನಿ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಮಾಹಿತಿ ಮಾರ್ಗದರ್ಶನ
    • ಆರೋಗ್ಯ
    • ಓ ಮೆಣಸೇ
    • ಕೃತಿ ಪರಿಚಯ
    • ಝಲಕ್
    • ಬುಡಬುಡಿಕೆ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಆನ್ ರೆಕಾರ್ಡ್
  5. ವಿದ್ಯಾವಂತರು ಮಾಡುವ ಮೂರ್ಖ ರಾಜಕಾರಣ!

ವಿದ್ಯಾವಂತರು ಮಾಡುವ ಮೂರ್ಖ ರಾಜಕಾರಣ!

ಧರಣೀಶ್ ಬೂಕನಕೆರೆಧರಣೀಶ್ ಬೂಕನಕೆರೆ2 Nov 2026 12:36 PM IST
share
ವಿದ್ಯಾವಂತರು ಮಾಡುವ ಮೂರ್ಖ ರಾಜಕಾರಣ!

ಡಾ. ಮನಮೋಹನ್ ಸಿಂಗ್ ಮಾಜಿ ಪ್ರಧಾನಿ ಅನ್ನುವುದನ್ನು ಬಿಟ್ಟುಬಿಡಿ. ಅವರು ದೇಶ ಕಂಡ ಅಪ್ರತಿಮ ಅರ್ಥಶಾಸ್ತ್ರಜ್ಞ. ರಿಸರ್ವ್ ಬ್ಯಾಂಕ್ ಗವರ್ನರ್ ಆಗಿ, ಹಣಕಾಸು ಸಚಿವರಾಗಿ ದೇಶದ ಆರ್ಥಿಕತೆಗೆ ದಿಕ್ಕು-ದಿಸೆ ತೋರಿದ ಧುರೀಣ. 90ರ ದಶಕದಲ್ಲಿ ದೇಶವನ್ನು ಆರ್ಥಿಕ ಸಂಕಟದಿಂದ ಪಾರುಮಾಡಿದ ಆಪದ್ಬಾಂಧವ. ಇವೆಲ್ಲವುಗಳ ಜೊತೆಗೆ ರಾಜಕೀಯ ವೈರಿಗಳ ಕುರಿತಾಗಿ ಕೂಡ ಕಟುವಾಗಿ ಮಾತನಾಡದ ಸಜ್ಜನ. ಅಂತಹ ಮಹಾನ್ ನಾಯಕಒಂದೇ ಒಂದು ಚುನಾವಣೆ ಗೆಲ್ಲಲಿಲ್ಲ. ಜೀವನದಲ್ಲಿ ಅವರು ಚುನಾವಣೆಗೆ ಸ್ಪರ್ಧೆ ಮಾಡಿದ್ದೇ ಒಂದು ಸಲ (1999ರಲ್ಲಿ). ಅದರಲ್ಲೂ ಸೋತರು. ಅದು ಯಾವ ಕ್ಷೇತ್ರದಲ್ಲಿ? ಗ್ರಾಮೀಣ ಭಾರತದ ಯಾವುದೋ ಮೂಲೆಯಲ್ಲಿ, ಅಕ್ಷರದ ಗಂಧ-ಗಾಳಿಯೇ ಬೀಸಿಲ್ಲದ ಕ್ಷೇತ್ರದಲ್ಲಲ್ಲ. ಅಧಿಕಾರ ಕೇಂದ್ರದ ಬಗಲಲ್ಲೇ ಇರುವ ದಕ್ಷಿಣ ದಿಲ್ಲಿ ಎಂಬ ‘ಸುಶಿಕ್ಷಿತರ’ ಕ್ಷೇತ್ರದಲ್ಲಿ.

ದೇಶದ ವಿದ್ಯಾವಂತರ ಆಯ್ಕೆ ಹೇಗಿರುತ್ತದೆ ಎನ್ನುವುದಕ್ಕೆ ಡಾ. ಸಿಂಗ್ ಅವರ ಸೋಲು ಬಹಳ ಒಳ್ಳೆಯ ಉದಾಹರಣೆ. ಈಗ ರಾಜ್ಯದ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರಗಳ ಚುನಾವಣಾ ಫಲಿತಾಂಶವನ್ನು ಪ್ರಜ್ಞಾವಂತರ, ಪ್ರಬುದ್ಧರ, ವಿದ್ಯಾವಂತರ ತೀರ್ಪು ಎಂದು ಹೇಳಲಾಗುತ್ತಿದೆ. ಖುದ್ದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರೇ ಕಾಂಗ್ರೆಸಿಗೆ ಗುದ್ದು ಕೊಡುವ ಭರದಲ್ಲಿ ‘ರಾಜ್ಯದ ಪ್ರಬುದ್ಧ ಮತದಾರರಿಗೆ ಧನ್ಯವಾದಗಳು’ ಎಂದು ಹೇಳಿದ್ದಾರೆ.

ಆದರೆ ಈ ಪದವೀಧರರು ಮತ್ತು ಶಿಕ್ಷಕರು ನಿಜಕ್ಕೂ ಪ್ರಜ್ಞಾವಂತರಾ? ಪ್ರಬುದ್ಧರಾ ಮತ್ತು ವಿದ್ಯಾವಂತರಾ? ಎನ್ನುವುದನ್ನು ಒರೆಗೆ ಹಚ್ಚಬೇಕಾಗುತ್ತದೆ. ಅವರೇ ಮಾಡಿರುವ ತಿರಸ್ಕೃತ ಮತಗಳ ಮೂಸೆಯಿಂದ ನೋಡುವುದು ಅವರನ್ನು ತೀರಾ ತಿರಸ್ಕಾರ ಭಾವದಿಂದ ನೋಡಿದಂತಾಗುತ್ತದೆ. ಹಾಗೆ ಮಾಡಬಾರದು. ಅದಕ್ಕೂ ಮಿಗಿಲಾದ ಆಯಾಮದಿಂದ ನೋಡುವುದು ಹೆಚ್ಚು ಸೂಕ್ತ. ಇವರನ್ನು ಬಿಜೆಪಿ ‘ನಮ್ಮವರು’ ಎಂದುಕೊಂಡಿದೆ. ಇವರು ಬಿಜೆಪಿಯನ್ನು ‘ನಮ್ಮದು’ ಎಂದುಕೊಂಡಿದ್ದಾರೆ. ಈ ಹಿಂದಿನ ಚುನಾವಣೆಗಳಲ್ಲೂ ಈ ಕ್ಷೇತ್ರಗಳಲ್ಲಿ ಬಿಜೆಪಿ ಗೆದ್ದಿರುವುದು ‘ನಮ್ಮವರು ಮತ್ತು ನಮ್ಮದು’ ಎನ್ನುವ ವಾದಕ್ಕೆ ಒಂದು ಪುರಾವೆಯಷ್ಟೇ.

ಇನ್ನೊಂದೆಡೆ ಬಿಜೆಪಿ ಚುನಾವಣಾ ರಾಜಕಾರಣಕ್ಕಿಂತ ಸಾಂಸ್ಕೃತಿಕ ರಾಜಕಾರಣವನ್ನು ಗಂಭೀರವಾಗಿ ಪರಿಗಣಿಸಿದೆ. ಅದರ ಭಾಗವಾಗಿ ಉದ್ದೇಶಪೂರ್ವಕವಾಗಿಯೇ ತಮ್ಮದು ಬುದ್ಧಿವಂತರ ಪಕ್ಷ ಮತ್ತು ಮೇಲ್ವರ್ಗದವರರ ಪಕ್ಷ ಎಂದು ಗುರುತಿಸಿಕೊಂಡಿದೆ. ಅಷ್ಟು ಮಾತ್ರವಲ್ಲ, ಕಾಂಗ್ರೆಸ್ ಎಂದರೆ ಮುಸ್ಲಿಮರ ಪಕ್ಷ, ದಲಿತರ ಪಕ್ಷ, ಹಿಂದುಳಿದವರ ಪಕ್ಷ, ಬಡವರ ಪಕ್ಷ ಎಂಬ ಹಣೆಪಟ್ಟಿ ಹಚ್ಚಿದೆ. ಬಡವ, ಅಥವಾ ದಡ್ಡ, ಅಥವಾ ರೋಗಿ ಮೊದಲು ಮಾಡಬೇಕಾದ ಕೆಲಸ ತಾನು ಬಡವ, ದಡ್ಡ, ರೋಗಿ ಎಂದು ಒಪ್ಪಿಕೊಳ್ಳಬೇಕು. ಸಮಸ್ಯೆಯನ್ನು ಗುರುತಿಸದಿದ್ದರೆ ಪರಿಹಾರ ಹುಡುಕುವುದು ಅಸಾಧ್ಯ.

ಇದೇ ಬಿಜೆಪಿಯ ಸಾಂಸ್ಕೃತಿಕ ರಾಜಕಾರಣ. ಬಿಜೆಪಿ ಬೀಸಿರುವ ‘ಬುದ್ಧಿವಂತ ಬಲೆಯಲ್ಲಿ’ ವಿದ್ಯಾವಂತರೆಂಬ ಅಕ್ಷರಸ್ಥರು ಸಿಲುಕಿದ್ದಾರೆ. ಈ ವಿದ್ಯಾವಂತರಿಗೆ, ಪದವೀಧರರಿಗೆ, ಶಿಕ್ಷಕರಿಗೆ ಬೌದ್ಧಿಕವಾಗಿ ತಾವೆಷ್ಟು ಬಡವರು ಎಂಬುದು ಗೊತ್ತಿಲ್ಲ. ಗೊತ್ತಿದ್ದರೂ ಅವರು ಒಪ್ಪಿಕೊಳ್ಳಲು ಸಿದ್ಧರಿಲ್ಲ. ಅವರಿಗೆ ತಾವು ಮೇಲ್ವರ್ಗದವರಂತಾಗಬೇಕು ಎಂಬ ಹಪಹಪಿಕೆ. ಅದಕ್ಕಾಗಿ ಮೇಲ್ವರ್ಗದ ಜೊತೆಗೆ ಗುರುತಿಸಿಕೊಳ್ಳಲು ಹಪಹಪಿಸುತ್ತಾರೆ. ಮೇಲ್ವರ್ಗದವರನ್ನು ಅನುಕರಣೆ ಮಾಡುತ್ತಾರೆ.

ವಿದ್ಯಾವಂತರೆಲ್ಲಾ ಬುದ್ಧಿವಂತರಾಗದಿದ್ದರೂ ಪರವಾಗಿಲ್ಲ; ದುಷ್ಟರಾಗಬಾರದು. ವಿದ್ಯೆ ಮನುಷ್ಯನಿಗೆ ಜ್ಞಾನ, ಕೌಶಲ್ಯ, ಅವಕಾಶ ಮತ್ತು ಅಧಿಕಾರಗಳನ್ನು ನೀಡುತ್ತದೆ. ಆದರೆ ಅವುಗಳ ಜೊತೆಯಲ್ಲಿ ವಿವೇಕ, ನೈತಿಕತೆ, ಮಾನವೀಯತೆ ಮತ್ತು ಸಾಮಾಜಿಕ ಹೊಣೆಗಾರಿಕೆ ಇಲ್ಲದಿದ್ದರೆ ಅದು ವಿಪತ್ತು ಸೃಷ್ಟಿಸುವ ಸಾಧ್ಯತೆ ಕೂಡ ಇರುತ್ತದೆ. ಒಬ್ಬ ವ್ಯಕ್ತಿ ವಿದ್ಯಾವಂತನಾಗಲು ಆತನ ಕುಟುಂಬದ ಕೊಡುಗೆ ಎಷ್ಟಿರುತ್ತದೆಯೋ ಸಮಾಜ ಮತ್ತು ಸರಕಾರದ ಕೊಡುಗೆ ಕೂಡ ಅಷ್ಟೇ ಇರುತ್ತದೆ. ಆತ ವಿದ್ಯಾವಂತನಾದ ಮೇಲೆ ಅವನನ್ನು ಬೆಳೆಸಿದ ಸಮಾಜವನ್ನು ಮರೆತರೆ, ‘ಸಂಬಳಕ್ಕಾಗಿ ಮಾತ್ರ ಕೆಲಸ ಮಾಡುವೆ’ ಎನ್ನುವುದಾದರೆ ಅದು ಅಪರಾಧವಲ್ಲದೆ ಬೇರೆ ಅಲ್ಲ. ಈಗಿನ ವಿದ್ಯಾವಂತರು, ಪದವೀಧರರು ಮತ್ತು ಶಿಕ್ಷಕರ ಪೈಕಿ ‘ನಾವು ಹಾಗಲ್ಲ’ ಎಂದು ಹೇಳುವ ಧೈರ್ಯ ಮತ್ತು ನೈತಿಕತೆ ಎಷ್ಟು ಮಂದಿಗೆ ಇದೆ?

ಉಪನ್ಯಾಸಕರೂ ಹೆಂಡದ ಬಾಟಲಿಗಾಗಿ ಸರದಿ ಸಾಲಿನಲ್ಲಿ ನಿಲ್ಲುತ್ತಾರೆ. ತಮ್ಮ ಹೆಂಡತಿಯರಿಗೆ ಬೇರೆ ಯಾವನೋ ಕೊಡುವ ಸೀರೆಯನ್ನು ಕೊಂಡುಯ್ಯುತ್ತಾರೆ. ಜಾತಿ ನೋಡಿ ಮತ ಹಾಕುತ್ತಾರೆ ಎಂದರೆ ಅವರನ್ನು ವಿದ್ಯಾವಂತರು, ಪ್ರಬುದ್ಧರು, ಪ್ರಜ್ಞಾವಂತರು ಎಂದು ಕರೆಯಬೇಕೇ? ಅವರು ಕೊಟ್ಟ ತೀರ್ಪನ್ನು ಪ್ರಬುದ್ಧ ತೀರ್ಪು ಎಂದು ಒಪ್ಪಬೇಕೇ? ಬಾಬಾ ಸಾಹೇಬ್ ಡಾ. ಬಿಆರ್ ಅಂಬೇಡ್ಕರ್ ‘ಮಾರಾಟವಾದ ಒಬ್ಬ ಪತ್ರಕರ್ತ ಸಾವಿರ ಭಯೋತ್ಪಾದಕನಿಗೆ ಸಮ’ ಎಂದು ಹೇಳಿದ್ದಾರೆ ಎನ್ನುವ ಮಾತಿದೆ. ಅವರ ಬರಹದಲ್ಲಿ ಎಲ್ಲೂ ಇದು ಕಾಣಸಿಗುವುದಿಲ್ಲ. ಆದರೂ ಅವರು ಹೇಳಿದ್ದಾರೆ ಎನ್ನಲಾಗುವ ಈ ಮಾತನ್ನು ಗಂಭೀರವಾಗಿ ಪರಿಗಣಿಸಬಹುದು. ಈಗಿನ ವಿದ್ಯಾವಂತರ, ಪದವೀಧರರ ಮತ್ತು ಶಿಕ್ಷಕರನ್ನು ನೋಡಿದ್ದರೆ ಬಾಬಾ ಸಾಹೇಬರು ‘ಮಾರಾಟವಾದ ಒಬ್ಬೊಬ್ಬ ಶಿಕ್ಷಕ ಕೂಡ ಸಾವಿರ ಭಯೋತ್ಪಾದಕರಿಗೆ ಸಮ’ ಎಂದು ಹೇಳುತ್ತಿದ್ದರೇನೋ? ಇಂಥವರ ನಡುವೆ ಒಳ್ಳೆಯ ಶಿಕ್ಷಕರು ಮತ್ತು ಒಳ್ಳೆಯ ಪದವೀಧರರು ಕೆಲವರಿದ್ದಾರೆ. ಆದರೆ ಅವರ ಸಂಖ್ಯೆ ಕೆಲವಷ್ಟೇ.

► ಇವರು ವಿದ್ಯಾವಂತರಾ?

ವಿದ್ಯಾವಂತರಿಗೆ ಸಂಬಂಧಿಸಿದ ಇನ್ನೊಂದು ವಿಚಾರ ಇದೆ. ಪ್ರಮೋದಾ ದೇವಿ ಎನ್ನುವ ಸಾಮಾನ್ಯ ಮಹಿಳೆಯೊಬ್ಬರು ಮೈಸೂರು ದಸರಾಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳಿಗೆ ಮೂರು ಪುಟಗಳ ಪತ್ರ ಬರೆದಿದ್ದಾರೆ. ಸರಕಾರಕ್ಕೆ ನೀವು ಇಷ್ಟೇ ದಿನ ದಸರಾ ನಡೆಸಬೇಕು. ನಮಗೆ ಎರಡು ದಿನ ಅರಮನೆಯನ್ನು ಬಿಟ್ಟುಕೊಡಬೇಕು. ಇಲ್ಲದಿದ್ದರೆ ಅಂಬಾರಿಯನ್ನು ಕೊಡುವುದಿಲ್ಲ ಎಂದು ಧಮಕಿ ಹಾಕಿದ್ದಾರೆ. ಇದಕ್ಕೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಮಾಧ್ಯಮದ ಮೂಲಕವೇ (ಮಾಧ್ಯಮದವರು ಕೇಳಿದ್ದರಿಂದ) ಪ್ರತಿಕ್ರಿಯೆ ನೀಡಿದ್ದಾರೆ. ‘ಅರಮನೆ ಸರಕಾರದ ಆಸ್ತಿ, ರಾಜವಂಶಸ್ಥರಿಗೆ ಉಳಿದುಕೊಳ್ಳಲು ಅಲ್ಲಿ ಜಾಗಕೊಡಲಾಗಿದೆ’ ಎಂದಿದ್ದಾರೆ. ಇದನ್ನು ವಿದ್ಯಾವಂತರೆಂಬ ಒಂದು ವರ್ಗ ವಿರೋಧ ಮಾಡುತ್ತಿದೆ.

ಯತೀಂದ್ರ ಸಿದ್ದರಾಮಯ್ಯ ಪ್ರಶ್ನಾತೀತರಲ್ಲ. ಅವರನ್ನು ಪ್ರಶ್ನೆ ಮಾಡಲೇಬೇಕು. ತಪ್ಪಿ ನಡೆದರೆ ಖಂಡಿಸಲೇಬೇಕು. ಆದರೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಮೋದಾ ದೇವಿ ಪ್ರಶ್ನಾತೀತರೇ? ಅವರ ಮಾತನ್ನು ಆದೇಶ ಎಂಬಂತೆ ಭಾವಿಸಿ ಆಜ್ಞಾಪಾಲಕರಾಗಬೇಕೇ? ಇಷ್ಟಕ್ಕೂ ಅವರು ಹೇಗೆ ರಾಜಮಾತೆ ಆಗುತ್ತಾರೆ? ಅವರನ್ನು ಪ್ರಶ್ನಿಸಿದರೆ ಅಥವಾ ಅವರ ನಡೆಯನ್ನು ವಿರೋಧಿಸಿದರೆ ಮೈಸೂರು ಸಂಸ್ಥಾನಕ್ಕೆ ಅಗೌರವ ತೋರಿದಂತಾಗುತ್ತದೆಯೇ? ಅಸಮಾಧಾನಗಳ ಬಗ್ಗೆ ಸರಕಾರದ ಜೊತೆ ಮಾತನಾಡದೆ ಅಥವಾ ಸರಕಾರಕ್ಕೆ ಪತ್ರ ಬರೆಯದೆ ಮಾಧ್ಯಮಗಳಿಗೆ ಪತ್ರ ಬರೆದದ್ದೇಕೆ? ಅವರ ಪತ್ರದಲ್ಲೇ ರಾಜಕಾರಣ ಅಡಗಿದೆ ಅಲ್ಲವೇ? ದರ್ಪದ ದರ್ಶನವಾಗುತ್ತದೆ ಅಲ್ಲವೇ?

ಇಷ್ಟಕ್ಕೂ ನಾಲ್ವಡಿ ಕೃಷ್ಣರಾಜ ಒಡೆಯರ್ ಹೊರತುಪಡಿಸಿದರೆ ಉಳಿದ ಅರಸರ ಮಹತ್ವದ ಕೊಡುಗೆ ಏನು? ಬದಲಿಗೆ ಮೈಸೂರು ರಾಜರ ಮೇಲೆ ಜನರಿಂದ ಹೆಚ್ಚಿನ ತೆರಿಗೆ ವಸೂಲಿ ಮಾಡಿ ಬ್ರಿಟಿಷರಿಗೆ ಕೊಟ್ಟು ಅಧಿಕಾರ ಉಳಿಸಿಕೊಂಡಿದ್ದಾರೆ ಎನ್ನುವ ಆರೋಪವಿದೆ. ಸ್ವಾತಂತ್ರ್ಯ ಬಂದ ಮೇಲೂ ರಾಜಾಳ್ವಿಕೆ ಬಿಟ್ಟುಕೊಡಲು ತಕರಾರು ತೆಗೆದರೆಂಬ ದೂರುಗಳಿವೆ. ಕಾವೇರಿ ನದಿ ನೀರು ಹಂಚಿಕೆ ವಿಷಯದಲ್ಲಿ ಅಂದಿನ ಮದ್ರಾಸ್ ಪ್ರಾಂತ್ಯದ ಜೊತೆಗೆ ಸೂಕ್ತ ರೀತಿಯ ಒಪ್ಪಂದ ಮಾಡಿಕೊಳ್ಳದೆ ಇಂದಿಗೂ ರಾಜ್ಯದ ಜನ ಮತ್ತು ರೈತರು ಬೆಲೆ ತೆರಬೇಕದ ಪರಿಸ್ಥಿತಿ ನಿರ್ಮಿಸಿದ್ದಾರೆ ಎನ್ನುವ ಆಕ್ಷೇಪಗಳಿವೆ. ಇಷ್ಟೆಲ್ಲಾ ಇದ್ದರೂ ರಾಜಾಳ್ವಿಕೆಯನ್ನು ಸಮರ್ಥಿಸುವುದು, ಆ ಕುಟುಂಬದಲ್ಲಿ ಹುಟ್ಟಿದ್ದಾರೆ ಎನ್ನುವುದನ್ನು ಬಿಟ್ಟು ರಾಜಮಾತೆಯ ಯಾವ ಕರ್ತವ್ಯವನ್ನೂ ನಿರ್ವಹಿಸದ ಸಾಮಾನ್ಯ ಮಹಿಳೆಯೊಬ್ಬರನ್ನು ಹೊತ್ತು ಮೆರೆಸುವವರು ವಿದ್ಯಾವಂತರಾ?

ಒಂದು ವಿಷಯವನ್ನು ಚೆನ್ನಾಗಿ ನೆನಪಿಡಬೇಕು. ಅವಿದ್ಯಾವಂತರು ರಾಜಾಳ್ವಿಕೆ ಪರವಾಗಿ ಮಾತನಾಡುತ್ತಿಲ್ಲ. ಅವರು ಅವರ ಕೆಲಸ ಮಾಡಿಕೊಂಡಿದ್ದಾರೆ. ವಿದ್ಯಾವಂತರೇ ರಾಜಮಾತೆಯ ಭಕ್ತರಾಗಿ ಸಾಮಾಜಿಕ ಜಾಲತಾಣದಲ್ಲಿ ಸಮರ ಸಾರಿರುವವರು. ಅವರಿಗೆ ಪ್ರಮೋದಾದೇವಿ ಮೇಲಿನ ಪ್ರೀತಿಗಿಂತ ಯತೀಂದ್ರ ಸಿದ್ದರಾಮಯ್ಯ ಮೇಲಿನ ದ್ವೇಷ ಜಾಸ್ತಿ ಇದೆ. ಪ್ರಮೋದಾ ದೇವಿ ಪತ್ರ ಸರಕಾರಕ್ಕೆ ಮುಜುಗರ ಉಂಟುಮಾಡಿದೆ ಎನ್ನುವುದು ನಿಜ. ಜೊತೆಯಲ್ಲಿ ಅದೇ ಪತ್ರ ಪ್ರಜಾಪ್ರಭುತ್ವದಲ್ಲಿ ರಾಜರ ಹಬ್ಬವಾದ ದಸರಾವನ್ನು ಆಚರಿಸಬೇಕೇ ಎಂಬ ಪ್ರಶ್ನೆಯನ್ನು ಮತ್ತೆ ಮುನ್ನೆಲೆಗೆ ತಂದಿದೆ. ಇಂಥ ಬರಗಾಲದಲ್ಲಿ ದಸರಾ ಬೇಕಿತ್ತಾ? ಎನ್ನುವ ಪ್ರಶ್ನೆಯನ್ನು ಹುಟ್ಟುಹಾಕಿದೆ. ಶಿವಮೊಗ್ಗ ದಸರಾದಲ್ಲಿ ನಡೆದ ಆನೆಗಳ ಅವಾಂತರ (ವಾಸ್ತವದಲ್ಲಿ ಅದು ಆನೆಗಳ ಅವಾಂತರ ಅಲ್ಲ)ದಿಂದ ‘ದಸರಾಕ್ಕೆ ಆನೆಗಳ ಬಳಕೆಯನ್ನು ನಿಲ್ಲಿಸಲಿ’ ಎನ್ನುವ ಮಾತು ಕೇಳಿಬರುತ್ತಿದೆ. ದಸರಾ ಬೇಡ ಎನ್ನುವ ಕೂಗು ಹೊಸದಲ್ಲ. ಬಹಳ ಹಿಂದೆಯೇ ಕುವೆಂಪು ಮತ್ತಿತರರು ದಸರಾ ಆಚರಣೆ ಬಗ್ಗೆ ಪ್ರತಿಭಟಿಸಿದ್ದರು. ಪ್ರೊ. ಕೆ. ರಾಮದಾಸ್ ಅವರಂಥವರು ದಸರಾ ಮೆರವಣಿಗೆಯಲ್ಲೇ ಕಪ್ಪು ಬಾವುಟ ಪ್ರದರ್ಶಿಸಿದ್ದರು. ಆ ಭಿನ್ನರಾಗಗಳಿಂದ ದಸರಾಗೆ ಭಂಗವಾಗಿಲ್ಲ. ಅದು ನಡೆದುಕೊಂಡು ಬರುತ್ತಿದೆ. ಮುಂದೆಯೂ ನಡೆಯಲಿದೆ. ಆದರೆ ರಾಜಮಾತೆ ಎಂಬ ಪ್ರಮೋದಾ ದೇವಿ ವರ್ತನೆ ಬಹಳ ಕಾಲ ನಡೆಯುವುದಿಲ್ಲ.

► ಆಫ್ ದಿ ರೆಕಾರ್ಡ್!

ಪ್ರಮೋದಾ ದೇವಿ ಸರಕಾರ ಮತ್ತು ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಕಿಡಿ ಕಾರುತ್ತಿದ್ದಾರೆ. ಪ್ರತಾಪ ಸಿಂಹ ‘ಲಕ್ಷಾಂತರ ಜನ ಸೇರುವ ಇಂತಹ ಸಂದರ್ಭದಲ್ಲಿ ಸಣ್ಣಪುಟ್ಟ ಸಮಸ್ಯೆಗಳಾಗುವುದು ಸಹಜ’ ಎನ್ನುತ್ತಾರೆ. ಬಿಜೆಪಿ ರಾಜವಂಶಸ್ಥರ ಪರವಿದ್ದರೂ ಪ್ರತಾಪ ಸಿಂಹ ಸರಕಾರದ ಸಮರ್ಥನೆಗಿಳಿದಿರುವುದು ಅನಿವಾರ್ಯತೆಯಿಂದಲೋ? ಅಥವಾ ರಾಜಕೀಯವಾಗಿ ಕಾಡುತ್ತಿರುವ ಅನಾಥಪ್ರಜ್ಞೆಯಿಂದಲೋ?

Tags

politicsuneducatedDr. Manmohan Singh
share
ಧರಣೀಶ್ ಬೂಕನಕೆರೆ
ಧರಣೀಶ್ ಬೂಕನಕೆರೆ
Next Story
X