Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಆನ್ ರೆಕಾರ್ಡ್
  5. ಸಿದ್ದು ಬೇಸರ ಆಗಬೇಕಾದದ್ದು ಈ ಕಾರಣಕ್ಕೆ!

ಸಿದ್ದು ಬೇಸರ ಆಗಬೇಕಾದದ್ದು ಈ ಕಾರಣಕ್ಕೆ!

ಧರಣೀಶ್ ಬೂಕನಕೆರೆಧರಣೀಶ್ ಬೂಕನಕೆರೆ22 Sept 2025 10:44 AM IST
share
ಸಿದ್ದು ಬೇಸರ ಆಗಬೇಕಾದದ್ದು ಈ ಕಾರಣಕ್ಕೆ!

ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟ ಸಭೆಯಲ್ಲಿ ‘ನನಗೆ ಮೇಲ್ವರ್ಗದ ವಿರೋಧಿ ಎಂಬ ಹಣೆಪಟ್ಟಿ ಕಟ್ಟಲಾಗುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದ್ದಾರಂತೆ. ಹಾಗೆಂದು ರಾಜ್ಯದ ಬಹುತೇಕ ಮುಖ್ಯವಾಹಿನಿ ಮಾಧ್ಯಮಗಳು ವರದಿ ಮಾಡಿವೆ. ಹೌದು, ಒಬ್ಬ ಮುಖ್ಯಮಂತ್ರಿ ಎಲ್ಲರ ಪರ ಇರಬೇಕು ಹಾಗೂ ಎಲ್ಲರ ಪರ ಇದ್ದೇನೆ ಎಂದೇ ಬಿಂಬಿತವಾಗಬೇಕು. ಯಾವುದೋ ಒಂದು ವರ್ಗದ ವಿರೋಧಿ ಎಂದು ಬಿಂಬಿತವಾದಾಗ ಬೇಸರವನ್ನೂ ಮಾಡಿಕೊಳ್ಳಬೇಕು.

ಆದರೆ ಈ ಪ್ರಕರಣದಲ್ಲಿ ಅಂದರೆ ರಾಜ್ಯದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ (ಜಾತಿ ಸಮೀಕ್ಷೆ) ವಿಷಯದಲ್ಲಿ (ಇದೇ ಹಿನ್ನೆಲೆಯಲ್ಲಿ ತಾನೇ ಅವರು ಹಾಗೆ ಮಾತನಾಡಿರುವುದು) ಅವರು ಬೇಸರ ಮಾಡಿಕೊಳ್ಳಬೇಕಾದ ವಿಷಯ ಬೇರೆಯೇ ಇತ್ತು. ಅವರ ಮೇಲೆ ಬೆಟ್ಟದಷ್ಟು ಭರವಸೆ ಇಟ್ಟಿರುವ ಹಿಂದುಳಿದ, ಪರಿಶಿಷ್ಟ ಜಾತಿ-ಪಂಗಡದ, ಅಲ್ಪಸಂಖ್ಯಾತ ಸಮುದಾಯಗಳ ಅದರಲ್ಲೂ ತೀವ್ರವಾಗಿ ಹಿಂದುಳಿದಿರುವ, ಸಣ್ಣ, ಅತಿಸಣ್ಣ, ಸೂಕ್ಷ್ಮ, ಅತಿಸೂಕ್ಷ್ಮ ಜಾತಿಗಳ ಹಿತ ಕಾಯಲು ಸಾಧ್ಯವಾಗುತ್ತಿಲ್ಲ ಎನ್ನುವುದಕ್ಕೆ ಬೇಸರ ಮಾಡಿಕೊಳ್ಳಬೇಕಾಗಿತ್ತು.

ಏಕೆಂದರೆ ಮೇಲ್ವರ್ಗಕ್ಕೆ ಇರುವ ಅರಿವು, ಅಧಿಕಾರ, ಒಗ್ಗಟ್ಟು, ಗುರು, ಗುರಿಗಳ್ಯಾವುವೂ ಉಳಿದ ಸಮುದಾಯಗಳಿಗೆ ಇಲ್ಲ. ಇದನ್ನು ಸಾರಿ ಸಾರಿ ಹೇಳಲು ಇತ್ತೀಚೆಗೆ ನಡೆದ ಎರಡೇ ಎರಡು ಉದಾಹರಣೆಗಳು ಸಾಕು.

ಒಂದು: ಲಿಂಗಾಯತ ಮತ್ತು ವೀರಶೈವ ಸಮುದಾಯದ ಸ್ವಾಮೀಜಿಗಳು ಒಂದೇ ವೇದಿಕೆಗೆ ಬಂದು ಜಾತಿ ಕಾಲಂನಲ್ಲಿ ‘ವೀರಶೈವ-ಲಿಂಗಾಯತ’ ಎಂಬುದಾಗಿ ಮಾತ್ರ ಬರೆಸಬೇಕು, ‘ಧರ್ಮ ನಿಮ್ಮಿಷ್ಟ’ ಎನ್ನುವ ಒಮ್ಮತದ ತೀರ್ಮಾನಕ್ಕೆ ಬಂದಿದ್ದಾರೆ. ಎಲ್ಲಾ ಸ್ವಾಮೀಜಿಗಳು ಒಟ್ಟಿಗೆ ಬಂದು ಜಾತಿ-ಧರ್ಮದ ಬಗ್ಗೆ ಒಮ್ಮತದ ನಿಲುವಿಗೆ ಬಂದಿದ್ದರಿಂದ ‘ನೂರು ಕೊಡ ಹಾಲು ಕುಡಿದಷ್ಟು ಖುಷಿಯಾಗಿದೆ’ ಎಂದು ನಾಯಕರೊಬ್ಬರು ಸಂತೃಪ್ತ ಭಾವವನ್ನು ಹೊರಹಾಕಿದ್ದಾರೆ.

ಇನ್ನೊಂದು: ಒಕ್ಕಲಿಗ ಸಮುದಾಯದಲ್ಲಿ ವೀರಶೈವ-ಲಿಂಗಾಯತರ ರೀತಿ ಯಾವುದೇ ಗೊಂದಲಗಳಿಲ್ಲ. ಆದರೆ ಒಕ್ಕಲಿಗರ ಪೈಕಿ ಕೆಲವರು ಜಾತಿ ಕಾಲಂನಲ್ಲಿ ಉಪ ಜಾತಿಗಳ ಹೆಸರು ಬರೆಸಿಬಿಡಬಹುದು. ಹಾಗಾದರೆ ಒಕ್ಕಲಿಗ ಸಮುದಾಯದ ಸಂಖ್ಯೆ ಕಮ್ಮಿಯಾಗಬಹುದು. ರಾಜ್ಯದ ಎರಡನೇ ಅತಿದೊಡ್ಡ ಜಾತಿ ಎಂಬ ಹೆಚ್ಚುಗಾರಿಕೆಗೆ ಚ್ಯುತಿ ಬಂದುಬಿಡಬಹುದು ಎನ್ನುವ ಆತಂಕ ಮತ್ತು ಮುನ್ನೆಚ್ಚರಿಕೆ ಒಕ್ಕಲಿಗ ಸ್ವಾಮೀಜಿಗಳು ಮತ್ತು ರಾಜಕೀಯ ನಾಯಕರದ್ದು. ಹಾಗಾಗಿಯೇ ಅವರು ಸಭೆ ಸೇರಿ ಜಾತಿ ಕಾಲಂನಲ್ಲಿ ‘ಒಕ್ಕಲಿಗ’ ಎಂದೇ ಬರೆಸಬೇಕೆಂಬ ನಿರ್ಧಾರಕ್ಕೆ ಬಂದಿದ್ದಾರೆ.

ಸಮುದಾಯಕ್ಕಾಗಿ ಎಲ್ಲ ಬಗೆಯ ಭಿನ್ನಾಭಿಪ್ರಾಯಗಳನ್ನು ಬದಿಗಿಡುವ ಲಿಂಗಾಯತ, ವೀರಶೈವ ಮತ್ತು ಒಕ್ಕಲಿಗ ಸ್ವಾಮೀಜಿಗಳು ಹಾಗೂ ರಾಜಕೀಯ ನಾಯಕತ್ವದ ನಡೆ ಮೆಚ್ಚುವಂಥದ್ದೇ. ಉಳಿದ ಸಮುದಾಯಗಳು ಅನುಸರಿಸಬೇಕಾದ ಮಾದರಿಯೇ. ಆದರೆ ಈಗಾಗಲೇ ಹೇಳಿದಂತೆ ಉಳಿದ ಸಮುದಾಯಗಳಲ್ಲಿ ಅಂಥ ರಾಜಕೀಯ ನಾಯಕತ್ವವೂ ಇಲ್ಲ ಮತ್ತು ಸ್ವಾಮೀಜಿಗಳೂ ಇಲ್ಲ. ಹಿಂದುಳಿದ ಜಾತಿಗಳ ಪೈಕಿ ಪ್ರತಿಯೊಂದು ಜಾತಿಗೂ ಅದರದೆಯಾದ ಕಸುಬು, ಅಸ್ಮಿತೆ, ಸಂಕೇತ, ಸಂಸ್ಕೃತಿ ಮತ್ತು ದೇವರುಗಳಿವೆ. ಇವ್ಯಾವೂ ಎಂದೂ ಧರ್ಮದ ಬೋಧನೆ ಮಾಡಿಲ್ಲ. ಅವು ಹೇಳಿದ್ದು ‘ನೀವು ಇಂಥ ಜಾತಿಯವರು’ ಎಂದು ಮಾತ್ರ. ಇರುವ ಕೆಲವೇ ಕೆಲವು ನಾಯಕರು ಮತ್ತು ಸ್ವಾಮೀಜಿಗಳಲ್ಲಿ ಈ ಸೂಕ್ಷ್ಮ ಸಂಗತಿಗಳು ಸತ್ತುಹೋಗಿವೆ. ‘ನಾವು ಶ್ರೇಷ್ಠ ಧರ್ಮಕ್ಕೆ ಸೇರಿದವರೆಂಬ’ ಭ್ರಮೆ ಬೆಳೆದುಬಿಟ್ಟಿದೆ. ಇವರುಗಳು ರಾಜಕೀಯವಾದ ಕೀಳರಿಮೆ-ಹಿಂಜರಿಕೆ ಮತ್ತು ಸಾಮಾಜಿಕವಾದ ಶ್ರೇಷ್ಠತೆಯ ವ್ಯಸನಗಳಿಂದ ಮುಕ್ತರಾಗಿಲ್ಲ. ಈ ಸಮುದಾಯಗಳ ವಿದ್ಯಾವಂತರು, ಸಿರಿವಂತರು ಮತ್ತು ಸರಕಾರಿ ನೌಕರ ವರ್ಗದ ಸ್ವಾರ್ಥಕ್ಕೆ ಕೊನೆಯಿಲ್ಲ. ಜಾತಿ-ಉಪಜಾತಿಗಳ ನಡುವಿನ ಕಂದಕ ಕಮ್ಮಿಯಾಗಿಲ್ಲ. ಜಾತಿಗಳೆಲ್ಲ ಸೇರಿ ವರ್ಗವಾಗುವ ಪರಿಕಲ್ಪನೆ ಅರ್ಥವೇ ಆಗಿಲ್ಲ.

ಪರಿಸ್ಥಿತಿ ಹೀಗಿರುವುದರಿಂದ ಹಾಗೂ ಆ ಸಮುದಾಯಗಳ ಜನಸಾಮಾನ್ಯರು ಅಪಾರವಾದ ನಂಬಿಕೆ ಇಟ್ಟುಕೊಂಡಿರುವುದರಿಂದ ಸಿದ್ದರಾಮಯ್ಯ ಅಹಿಂದ ವರ್ಗಗಳಿಗೆ ನ್ಯಾಯ ಒದಗಿಸಿಕೊಡಲು ಸಾಧ್ಯವಾಗುತ್ತಿಲ್ಲ ಎಂಬ ಅಸಹಾಯಕತೆಯನ್ನು ವ್ಯಕ್ತಪಡಿಸಬೇಕಾಗಿತ್ತು. ಬೇಸರ ಮಾಡಿಕೊಳ್ಳುವುದಷ್ಟೇಯಲ್ಲ, ಪರಿಹಾರದ ಕಡೆಗೂ ಗಮನ ಹರಿಸಬೇಕಾಗಿತ್ತು. ಅದರಲ್ಲೂ ಒಮ್ಮೆ ಹೈಕಮಾಂಡ್ ಮಟ್ಟದಲ್ಲಿ ಲಾಬಿ ಮಾಡಿ ಜಾತಿ ಸಮೀಕ್ಷೆಗೆ ತಡೆ ತರುವ ಪ್ರಬಲ ಶಕ್ತಿಗಳ ಬಗ್ಗೆ ಎಚ್ಚರಿಕೆ ವಹಿಸಬೇಕಾಗಿತ್ತು.

ಹಾಗಂತ ಸಿದ್ದರಾಮಯ್ಯ ‘ಏನೂ ಮಾಡೇ ಇಲ್ಲ’ ಎಂದು ಹೇಳಲಾಗದು. ಮುಂದೂಡಲೇಬೇಕು ಎಂಬ ಪ್ರಬಲ ಒತ್ತಡದ ನಡುವೆಯೂ ಈಗ ಜಾತಿ ಸಮೀಕ್ಷೆ ನಡೆಯಲಿದೆ ಎಂದರೆ ಅದು ಸಿದ್ದರಾಮಯ್ಯ ಕಾರಣಕ್ಕೆ. ಸಂಪುಟ ಸಭೆಯಲ್ಲಿ ಜಾತಿ ಪಟ್ಟಿ ವಿಷಯಕ್ಕೆ ಸಂಬಂಧಿಸಿದಂತೆ ಉಂಟಾಗಿದ್ದ ಗೊಂದಲ ಬಗೆಹರಿಸಲು ಡಿ.ಕೆ. ಶಿವಕುಮಾರ್ ಸೇರಿ ಕೆಲ ಸಚಿವರಿಗೆ ಸೂಚಿಸಿದ್ದರು. ವಿಷಯವನ್ನು ವಿವಾದ ಮಾಡಿದ್ದ ಸಚಿವರು ಸಭೆ ಸೇರಿ ಜಾತಿ ಸಮೀಕ್ಷೆ ಮುಂದೂಡಬೇಕು ಎಂಬ ನಿರ್ಣಯ ಮಾಡಿದ್ದರು. ಆದರೆ ಸಚಿವರ ಒತ್ತಡಕ್ಕೆ ಸಿದ್ದರಾಮಯ್ಯ ಮಣಿದಿಲ್ಲ. ‘ತಪ್ಪಿದ್ದರೆ ಹೇಳಿ, ತಿದ್ದುಕೊಳ್ಳೋಣ, ಜಾತಿ ಸಮೀಕ್ಷೆಯನ್ನು ನಿಲ್ಲಿಸುವ ಅಥವಾ ಮುಂದೂಡುವ ಪ್ರಶ್ನೆಯೇ ಇಲ್ಲ’ ಎಂಬ ದೃಢ ನಿರ್ಧಾರ ಮಾಡಿದರು ಎನ್ನುತ್ತವೆ ಸರಕಾರದ ಉನ್ನತ ಮೂಲಗಳು.

ಅಹಿಂದ ವರ್ಗದ ಸಕಲ ಸಮಸ್ಯೆಗಳಿಗೂ ಸಿದ್ದರಾಮಯ್ಯ ಅವರೇ ಕಾರಣರಲ್ಲ. ಅಥವಾ ಪರಿಹಾರವೂ ಅಲ್ಲ. ಆದರೂ ಈಗ ಸಿದ್ದರಾಮಯ್ಯ ಅವರನ್ನು ಅಹಿಂದ ವರ್ಗ ಕಟಕಟೆಯಲ್ಲಿ ನಿಲ್ಲಿಸುತ್ತಿದೆ. ಅದು ಜೊತೆಜೊತೆಯಾಗಿ ಕಾಂಗ್ರೆಸ್ ಪಕ್ಷದಿಂದಲೂ ಉತ್ತರವನ್ನು ಬಯಸಬೇಕು. ಏಕೆಂದರೆ ಸಿದ್ದರಾಮಯ್ಯ ಪಕ್ಷಕ್ಕೆ ಬರುವ ಮುನ್ನವೇ ಅಹಿಂದ ಸಮುದಾಯಗಳು ಕಾಂಗ್ರೆಸ್ ಅನ್ನು ಬೆಂಬಲಿಸಿವೆ. ಕಾಂಗ್ರೆಸ್ ಟಿಕೆಟ್ ನೀಡಿದ ಮೇಲ್ವರ್ಗದ ಅಭ್ಯರ್ಥಿಗಳಿಗೆ ಮುಖ ನೋಡದೆ ಮತ ನೀಡಿವೆ. ಕಾಂಗ್ರೆಸ್ ಮಾತ್ರವಲ್ಲ, ಎಲ್ಲ ಪಕ್ಷಗಳಿಂದಲೂ ಅಹಿಂದ ವರ್ಗದ ಮತಗಳಿಂದ ಗೆಲ್ಲುವ ಮೇಲ್ವರ್ಗದವರು ಎಷ್ಟು ಮಂದಿ ಮತ್ತು ಮೇಲ್ವರ್ಗದ ಮತಗಳಿಂದ ಗೆಲ್ಲುವ ಅಹಿಂದ ವರ್ಗದವರು ಎಷ್ಟು ಜನ ಎಂಬ ಅಧ್ಯಯನ ಆಗುವ ಅಗತ್ಯ ಇದೆ. ಈ ಹಿನ್ನೆಲೆಯಲ್ಲಿ ಕೂಡ ಜಾತಿ ಸಮೀಕ್ಷೆ ಮಹತ್ವದ ಪಾತ್ರ ವಹಿಸಲಿದೆ.

ಜಾತಿ ಸಮೀಕ್ಷೆ ಬೇಡ ಎಂದು ವಾದ ಮಾಡುವವರು ನೇರವಾಗಿ ಸಮೀಕ್ಷೆ ಬೇಡ ಎನ್ನುವುದಿಲ್ಲ. ಸರಿಯಿಲ್ಲ, ವೈಜ್ಞಾನಿಕವಾಗಿಲ್ಲ. 15 ದಿನದಲ್ಲಿ ಸಮೀಕ್ಷೆ ನಡೆಸಲು ಸಾಧ್ಯವಿಲ್ಲ. ನಮ್ಮ ಮನೆಗೆ ಬಂದಿಲ್ಲ ಎಂಬ ನೆಪಗಳನ್ನು ಮುಂದಿಡುತ್ತಾರೆ. 2015ರಲ್ಲೂ ಹೀಗೆ ಮಾಡಿದ್ದರು. ಆರಂಭದಲ್ಲೇ ಅಪಸ್ವರ ಹಾಡಿದ್ದರು. ಈಗಲೂ ಅದನ್ನೇ ಮಾಡುತ್ತಿದ್ದಾರೆ. ಏಕೆಂದರೆ ಜಾತಿ ಸಮೀಕ್ಷೆ ಬೇಡ ಎನ್ನುವವರಿಗೆ ಸಮೀಕ್ಷೆಯ ಮಹತ್ವ ಚೆನ್ನಾಗಿ ಗೊತ್ತಿದೆ. ‘ಬೇಕು’ ಎನ್ನುವವರಿಗೆ ಗೊತ್ತಿಲ್ಲ. ಅದಕ್ಕೂ ಮಿಗಿಲಾಗಿ ಬಾಯಿಲ್ಲ. ದನಿ ಬರಬೇಕಾದರೆ ಸಮೀಕ್ಷೆ ಆಗಬೇಕು. ಅದು ‘ಉಳಿದವರಿಗೆ’ ಅರ್ಥವಾಗುವುದು ಯಾವಾಗ?

ಆಫ್ ದಿ ರೆಕಾರ್ಡ್!

ಕೆಲ ರಾಜಕಾರಣಿಗಳು, ರಾಜಕೀಯ ವಿಶ್ಲೇಷಕರು, ಪತ್ರಕರ್ತರು ರಾಜ್ಯ ರಾಜಕೀಯದಲ್ಲಿ ನವೆಂಬರ್ ಕ್ರಾಂತಿಯಾಗಲಿದೆ ಎಂದು ಭವಿಷ್ಯ ನುಡಿದಿದ್ದರು. ಕ್ರಾಂತಿಯ ಯಾವ ಸುಳಿವುಗಳೂ ಸಿಗುತ್ತಿಲ್ಲ. ಕ್ರಾಂತಿಯ ನಿರೀಕ್ಷೆಯಲ್ಲಿದ್ದವರು ವಿಶ್ರಾಂತಿಗೆ ಒತ್ತು ನೀಡಬೇಕಾಗಿದೆ. ಇಷ್ಟಕ್ಕೂ ಮೀರಿ ಒಂದೊಮ್ಮೆ ಕ್ರಾಂತಿ ಆಗುವುದೇ ಆದರೆ ಅದು ಜಾತಿ ಕಾರಣಕ್ಕಾಗಿ, ಜಾತಿ ಸಮೀಕ್ಷೆ ಕಾರಣಕ್ಕಾಗಿ.

share
ಧರಣೀಶ್ ಬೂಕನಕೆರೆ
ಧರಣೀಶ್ ಬೂಕನಕೆರೆ
Next Story
X