Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಆನ್ ರೆಕಾರ್ಡ್
  5. ‘ಜಿರಳೆ’ಗಳಿಂದ ಮೋದಿಗೆ ಆಗಿದ್ದೇನು?

‘ಜಿರಳೆ’ಗಳಿಂದ ಮೋದಿಗೆ ಆಗಿದ್ದೇನು?

ಧರಣೀಶ್ ಬೂಕನಕೆರೆಧರಣೀಶ್ ಬೂಕನಕೆರೆ27 July 2026 10:05 AM IST
share
‘ಜಿರಳೆ’ಗಳಿಂದ ಮೋದಿಗೆ ಆಗಿದ್ದೇನು?

ಇತಿಹಾಸ ಎನ್ನುವುದು ಇನ್ನೊಂದು ಅರ್ಥದಲ್ಲಿ ಗಣಿತ. ಇಲ್ಲಿ ಎಲ್ಲಾ ಎಲ್ಲೆಗಳನ್ನು ಮೀರಿ ಮೆರೆದ ಚಕ್ರಾಧಿಪತಿಗಳ ಅವನತಿಗೆ ಲೆಕ್ಕವಿದೆ. ಎಂಥದೇ ಅತಿರಥ, ಮಹಾರಥರನ್ನೂ ಬಗ್ಗಿಸಬಹುದು ಎನ್ನುವುದಕ್ಕೆ ಸಾವಿರ ಸಾವಿರ ಪುರಾವೆಗಳಿವೆ. ಬಾಗಿಸುವವರು ಬೇಕಷ್ಟೆ. ಕೆಲವೊಮ್ಮೆ ದುಷ್ಟರೇ ತಮ್ಮನ್ನು ತಾವು ಮುಟ್ಟಿಕೊಂಡು ಭಸ್ಮವಾಗುವವರೆಗೆ ಕಾಯಬೇಕಷ್ಟೇ.

ಆರೆಸ್ಸೆಸ್, ಬಿಜೆಪಿ, ನರೇಂದ್ರ ಮೋದಿ, ಅಮಿತ್ ಶಾ, ಧರ್ಮೇಂದ್ರ ಪ್ರಧಾನ್ ಮತ್ತು ಕೇಂದ್ರ ಸರಕಾರ (ಸದ್ಯದ ವ್ಯವಸ್ಥೆಯಲ್ಲಿ ಆರೆಸ್ಸೆಸ್ ಪ್ರಧಾನ ಪಾತ್ರ ವಹಿಸುತ್ತಿರುವುದರಿಂದ ಮೊದಲು ಕೇಂದ್ರ ಸರಕಾರ ಎನ್ನುವುದು ಹೆಸರಿಗೆ ಮಾತ್ರ ಇರುವುದರಿಂದ ಕಡೆಯಲ್ಲಿ ಉಲ್ಲೇಖಿಸಲಾಗಿದೆ) ತಮ್ಮ ಹಳ್ಳವನ್ನು ತಾವೇ ತೋಡಿಕೊಳ್ಳುತ್ತಿವೆ. ಕೋಟ್ಯಂತರ ರೂಪಾಯಿಗಳ ರಾಮ ಮಂದಿರದ ಹುಂಡಿ ಕಳ್ಳತನದ ವಿಷಯ ಬುಡಕ್ಕೆ ಬರುತ್ತಿತ್ತು. ಪರಿಸ್ಥಿತಿ, ದೇಣಿಗೆ ಅಕ್ರಮದ ಬೀಸುವ ದೊಣ್ಣೆಯಿಂದ ಪಾರಾದರೆ ಸಾಕು ಎನ್ನುವಂತಿತ್ತು. ಅದರಿಂದಾಗಿ ‘ಜಿರಳೆ’ಗಳು ಸದ್ದು ಮಾಡಲು ಬಿಟ್ಟರು. ಇಲ್ಲದಿದ್ದರೆ, ಆರಂಭದಲ್ಲೇ ಇನ್ನು ಏನೇನನ್ನೋ ಮಾಡಿ ಇಷ್ಟೊತ್ತಿಗೆ ‘ಜಿರಳೆಗಳ’ ಹುಟ್ಟು ಅಡಗಿಸಿಬಿಡುತ್ತಿದ್ದರೇನೋ?

ಇತಿಹಾಸ ಎಲ್ಲಾ ಕಾಲಕ್ಕೂ ಯಾರೋ ಬರೆಯುವ ಸಾಮರ್ಥ್ಯ ಇರುವವರಿಂದ ಮಾತ್ರವೇ ಬರೆಯಲ್ಪಡುವುದಿಲ್ಲ. ಅದು ಕಾಲದ ಅನಿವಾರ್ಯತೆಗೆ ತಕ್ಕಂತೆ ಕೆಲವು ಸಂಗತಿಗಳಿಗೆ ತಾನೇ ಜನ್ಮ ನೀಡುತ್ತದೆ. ಅಂಥ ಹೊಸ ಹುಟ್ಟೇ ನೀಟ್-ಯುಜಿ ಪರೀಕ್ಷಾ ಅಕ್ರಮ ಹಾಗೂ ಪ್ರಶ್ನೆಪತ್ರಿಕೆ ಸೋರಿಕೆ ಖಂಡಿಸಿ ರೂಪುಗೊಂಡ ಕಾಕ್ರೋಚ್ ಜನತಾ ಪಾರ್ಟಿ ಆಂದೋಲನ.

ಈ ಆಂದೋಲನದ ವಿಶೇಷ ಎಂದರೆ ದೇಶ ಕಳೆದುಕೊಂಡಿರುವುದನ್ನು ಕಳೆದುಕೊಂಡ ಜಾಗದಲ್ಲೇ ಹುಡುಕುತ್ತಿರುವುದು. ದೇಶ ತನ್ನನ್ನು ಮುನ್ನಡೆಸಲು ಬೇಕಾದ ಹೃದಯ ವೈಶಾಲ್ಯತೆ ಮತ್ತು ಎದೆಗಾರಿಕೆ ಎರಡೂ ಇರುವ ನಾಯಕನನ್ನು ಕಳೆದುಕೊಂಡಿತ್ತು. ದೂರದೃಷ್ಟಿ ಮತ್ತು ಅಂತಃಕರಣ ಇಲ್ಲದ ನಾಯಕನನ್ನು ಕಳೆದುಕೊಂಡಿತ್ತು. ಅದು ಯಾರ ಮೂಲಕ ಕಳೆದುಕೊಂಡಿತ್ತೆಂದರೆ ದೇಶದ ಭವಿಷ್ಯ ಎನ್ನಲಾಗುವ ಯುವಕರ ಮೂಲಕ.

ಈಗ ಯುವಕರು ಎಚ್ಚರಗೊಂಡಿದ್ದಾರೆ. ‘ಇದೇ ಬೆರಳಿನಿಂದ ಕಮಲದ ಚಿಹ್ನೆಗೆ ಮತ ಕೊಟ್ಟಿದ್ದೆ. ಈಗ ಈ ಕೈಯನ್ನೇ ಮುರಿದು ಹಾಕಿದ್ದಾರೆ’ ಎಂದು ಯುವಕನೊಬ್ಬ ಆಕ್ರೋಶಭರಿತನಾಗಿ ಮಾತನಾಡುತ್ತಿದ್ದ ರೀಲ್ಸ್ ಅನ್ನು ಕೋಟಿಗಟ್ಟಲೆ ಜನ ವೀಕ್ಷಿಸಿದ್ದಾರೆ. ಇದು ಸಾಂಕೇತಿಕ. ಬಿಜೆಪಿಗೆ ಮತ ನೀಡಿದ್ದವರೇ ಬಿಜೆಪಿಯ ವಿರುದ್ಧ ನಿಂತಿದ್ದಾರೆ, ಮೋದಿಯನ್ನು ಮೆಚ್ಚಿಕೊಂಡಿದ್ದವರೇ ಮುನಿಸಿಕೊಂಡಿದ್ದಾರೆ. ಆರೆಸ್ಸೆಸ್, ಬಿಜೆಪಿ ಮತ್ತು ಮೋದಿಯಿಂದ ಮಾತ್ರ ದೇಶ ಉಳಿಯುತ್ತದೆ ಎಂದುಕೊಂಡಿದ್ದವರೇ ಈಗ ‘ಇವರೇ ದೇಶ ದ್ರೋಹಿಗಳು’ ಎನ್ನುವ ಅಭಿಪ್ರಾಯ ರೂಪಿಸಿಕೊಂಡಿದ್ದಾರೆ ಎನ್ನುವುದಕ್ಕೆ ಉದಾಹರಣೆ.

ಇತ್ತೀಚೆಗೆ ನಡೆದ ತಮಿಳುನಾಡಿನ ಚುನಾವಣೆ ವೇಳೆ ಪ್ರಚಾರಸಭೆಗಳಲ್ಲಿ ಯುವಕರನ್ನು ಉದ್ದೇಶಿಸಿ ಮಾತನಾಡುತ್ತಿದ್ದ ನಟ ದಳಪತಿ ವಿಜಯ್ ‘ನೀವು ಮತ ಹಾಕಿದರೆ ಸಾಲದು, ನಿಮ್ಮ ಪೋಷಕರು ಕೂಡ ಟಿವಿಕೆಯನ್ನು ಬೆಂಬಲಿಸುವಂತೆ ಮನವೊಲಿಸಬೇಕು’ ಎಂದು ಹೇಳುತ್ತಿದ್ದರು. ವಿಜಯ್ ಅವರ ಆ ಮಾತು ದೊಡ್ಡ ಪ್ರಮಾಣದಲ್ಲಿ ಪರಿಣಾಮ ಬೀರಿತ್ತು ಎನ್ನುವುದನ್ನು ಫಲಿತಾಂಶ ಸಾಬೀತು ಮಾಡಿತ್ತು. ಈಗ ಜಿರಳೆಗಳಾಗಿ ಮಾರ್ಪಟ್ಟಿರುವ ಯುವಕರು ಕೂಡ ತಮ್ಮ ಪೋಷಕರಿಗೆ ಆರೆಸ್ಸೆಸ್, ಬಿಜೆಪಿ, ನರೇಂದ್ರ ಮೋದಿ ಮತ್ತು ಅಮಿತ್ ಶಾ ಅಸಲಿತನಗಳನ್ನು ಅರ್ಥ ಮಾಡಿಸಿದರೆ ಮುಂಬರುವ ಚುನಾವಣೆಗಳ ಮೇಲೆ ದೊಡ್ಡ ಪರಿಣಾಮ ಬೀರಲಿದೆ.

ಬಹುಶಃ ಈಗ ಈ ಭಯ ಕಾಡಿದೆ. ಅದರಿಂದಾಗಿ ತಪ್ಪಾಗಿದೆ ಎನ್ನುವುದನ್ನು ಒಪ್ಪಿಕೊಂಡಂತಾಗುತ್ತದೆ. ದಂಡಿಗೆ, ದಾಳಿಗೆ ಹೆದರದವರು ‘ಯಕಶ್ಚಿತ್ ಜಿರಳೆಗಳ’ ಎದುರು ಶರಣಾದಂತಾಗುತ್ತದೆ ಎಂಬ ಕಾರಣಕ್ಕೆ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಪಡೆಯುವುದನ್ನು ತಡಮಾಡಿದ್ದವರು ಅಂತಿಮವಾಗಿ ಪಡೆದಿದ್ದಾರೆ. ಇದು ಕಳೆದ 12 ವರ್ಷಗಳಲ್ಲಿ ಮೋದಿ ಸರಕಾರ ಸಾರ್ವಜನಿಕರ (ವಿದ್ಯಾರ್ಥಿಗಳ) ಒತ್ತಡಕ್ಕೆ ಮಣಿದು ರಾಜೀನಾಮೆ ಪಡೆದ ಮೊದಲ ಪ್ರಕರಣ.

ಇದಕ್ಕೂ ಮೊದಲು ನೈತಿಕ ಹೊಣೆ ಹೊತ್ತು ರಾಜೀನಾಮೆ ಪಡೆಯುವ ಹಲವು ಸಂದರ್ಭಗಳಿದ್ದವು. ಆದರೆ ನೈತಿಕತೆಗೂ ನಮಗೂ ಸಂಬಂಧವೇ ಇಲ್ಲ ಎಂದು ನಿರ್ಧರಿಸಿರುವುದರಿಂದ ಪುಲ್ವಾಮಾ, ಪಹಲ್ಗಾಮ್ ದಾಳಿಯಾದರೂ ಈ ದೇಶದ ರಕ್ಷಣಾ ಸಚಿವರಿಂದ ರಾಜೀನಾಮೆ ಪಡೆದಿರಲಿಲ್ಲ. ಆದರೆ ಈಗ ಜಿರಳೆಗಳು ಬಿಡಲಿಲ್ಲ. ಕಡೆಗೂ ಮೋದಿ ಸರಕಾರವನ್ನು ಸೋಲಿಸಿವೆ.

ಜೆನ್ ಝಿಗಳ ಹೀರೊ ಕಾಕ್ರೋಚ್ ಜನತಾ ಪಾರ್ಟಿ ಸಂಸ್ಥಾಪಕ ಅಭಿಜೀತ್ ದೀಪ್ಕೆ ಅವರು, ಪ್ರಧಾನ್ ರಾಜೀನಾಮೆ ಬಳಿಕ ಬಿಡುಗಡೆ ಮಾಡಿರುವ ವೀಡಿಯೊ ಸಂದೇಶದಲ್ಲಿ ‘ಇದು ಆರಂಭ ಮಾತ್ರ, ಸಿಜೆಪಿ ಇನ್ನೂ ಬಹಳ ದೂರ ಸಾಗಬೇಕಿದೆ’ ಎಂದಿದ್ದಾರೆ. ಈ ಆಂದೋಲನ ಎಷ್ಟು ದೂರ ಸಾಗುತ್ತದೆ ಎನ್ನುವುದು ಜಿರಳೆಗಳ ಪ್ರಾಮಾಣಿಕತೆ, ಬದ್ಧತೆ, ಸ್ಪಷ್ಟತೆಯ ಮೇಲೆ ನಿರ್ಧಾರವಾಗಲಿದೆ. ಆದರೆ ಪ್ರಧಾನ್ ರಾಜೀನಾಮೆ ನೀಡಿದ ಮಾತ್ರಕ್ಕೆ ದೇಶದ ಶಿಕ್ಷಣ ವ್ಯವಸ್ಥೆ ಸರಿದಾರಿಗೆ ಬಂದುಬಿಡುವುದಿಲ್ಲ. ಅಷ್ಟು ಮಾತ್ರವಲ್ಲದೆ ಶಿಕ್ಷಣ ವ್ಯವಸ್ಥೆ ಸರಿಪಡಿಸುವುದಕ್ಕಿಂತಲೂ ಜಾಸ್ತಿ ಹೊಣೆಗಾರಿಕೆ ಯುವಕರ ಮೇಲಿದೆ.

ಇದೇ ಯುವಕರು ಹಿಂದೆ ಕುರುಡಾಗಿ ಅಣ್ಣಾ ಹಝಾರೆ ಹೋರಾಟವನ್ನು ಬೆಂಬಲಿಸಿದ್ದಾರೆ. ಅರವಿಂದ ಕೇಜ್ರಿವಾಲ್ ಅವರನ್ನು ನಂಬಿದ್ದಾರೆ. ಮೀಸಲಾತಿಯ ಫಲವನ್ನು ಉಣ್ಣುತ್ತಲೇ ಮೀಸಲಾತಿಯನ್ನು ವಿರೋಧಿಸುತ್ತಿದ್ದಾರೆ. ತನ್ನ ಅಜ್ಜ, ಅಪ್ಪ, ಅಣ್ಣಂದಿರು ಸರಕಾರದ ಉಚಿತ ಕೊಡುಗೆಗಳನ್ನು ಪಡೆದೇ ಇವರನ್ನು ಸಾಕಿದ್ದರೂ ಇವರೀಗ ‘ತೆರಿಗೆದಾರರ ಪರ’ ವಕಾಲತ್ತು ವಹಿಸುತ್ತಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ಕೋಮುವಾದದ ಕುತಂತ್ರಗಳಿಗೆ ಬಲಿಯಾಗುತ್ತಿದ್ದಾರೆ.

ಇಂಥ ‘ಅರೆಬೆಂದವರು’ ಅಭೂತಪೂರ್ವವಾಗಿ ಬೆಂಬಲಿಸಿದ್ದರಿಂದಲೇ 2014ರಲ್ಲಿ ಮೊದಲ ಬಾರಿಗೆ ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬರಲು ಸಾಧ್ಯವಾಗಿತ್ತು. ಆದರೀಗ ಕಾಕ್ರೋಚ್ ಜನತಾ ಪಾರ್ಟಿ ಆಂದೋಲನ ಜೆನ್ ಝಿಗಳೆಲ್ಲ ಅರೆಬೆಂದವಲ್ಲ, ಅವು ಒಳಗೊಳಗೇ ಬೆಳೆದಿರುವ ಜಿರಳೆಗಳು ಎನ್ನುವುದನ್ನು ತೋರಿಸಿಕೊಟ್ಟಿದೆ. ಜೆನ್ ಝಿಗಳು ಚಳವಳಿಗಳ ಬಗೆಗೆ ಭ್ರಮನಿರಸನವಾಗಿದ್ದ ಸಂದರ್ಭದಲ್ಲಿ ಭರವಸೆ ಮೂಡಿಸಿವೆ. ಹೋರಾಟದ ಭಾಷೆ, ಹಾಡು ಮತ್ತು ಇಡೀ ಸ್ವರೂಪ ಬದಲಾಗಬೇಕು ಎಂದು ತೋರಿಸಿಕೊಟ್ಟಿವೆ. ಲಾಠಿಗೆ ಮೊಳೆ ಸೇರಿಸಿಕೊಂಡು ಹೊಡೆದ ಪೊಲೀಸರಿಗೆ ಊಟ ಕೊಟ್ಟು ಈ ದೇಶದ ಹೋರಾಟ ಪರಂಪರೆ ಎಂದೆಂದಿಗೂ ಅಹಿಂಸಾತ್ಮಕವಾಗಿಯೇ ಇರುತ್ತದೆ ಎನ್ನುವುದನ್ನು ಸಾರಿ ಸಾರಿ ಹೇಳಿವೆ.

ದಿಲ್ಲಿಯ ಜಂತರ್ ಮಂತರ್ ಪ್ರತಿಭಟನೆಯಲ್ಲಿ ಯುವಕರ ರಕ್ತ ಹರಿಯುತ್ತಿತ್ತು. ಆದರೂ ಯುವ ಸಮೂಹ ಧೃತಿಗೆಡಲಿಲ್ಲ. ಹೋರಾಟದ ಸಾಗರಕ್ಕೆ ಸಾವಿರಾರು ನದಿಗಳು ಎನ್ನುವಂತೆ ಪಾಟ್ನಾ ಪ್ರತಿಭಟನೆಗೆ ವಿದ್ಯಾರ್ಥಿಗಳು ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಹರಿದುಬಂದರು. ಪೊಲೀಸರು ಎರಚಿದ ನೀರಿಗೆ ಮೈ ಒಡ್ಡಿ ಕುಣಿದು ಕುಪ್ಪಳಿಸಿದರು. ಕಡೆಗೆ ಪೊಲೀಸರೇ ಸೋಲೊಪ್ಪಿಕೊಳ್ಳಬೇಕಾಯಿತು. ಮುಂಬೈನಲ್ಲಿ ಯುವತಿಯೋರ್ವಳು ಪೊಲೀಸ್ ವ್ಯಾನ್ ಅನ್ನು ತಡೆದು ನಿಲ್ಲಿಸಿದ ದೃಶ್ಯ ವಿದ್ಯಾರ್ಥಿ ಚಳವಳಿ ಎಂಬ ಇತಿಹಾಸದ ಪುಸ್ತಕಕ್ಕೆ ಭೂಷಣವಾಗುವಂಥದ್ದು. ಇದನ್ನು ಹೊರತುಪಡಿಸಿ ಕೂಡ ಕಾಕ್ರೋಚ್ ಜನತಾ ಪಾರ್ಟಿಯ ಆಂದೋಲನದಲ್ಲಿ ‘ಹೆಣ್ಮಕ್ಕಳು ಸ್ಟ್ರಾಂಗ್’ ಎನ್ನುವುದು ಸಾಬೀತಾಯಿತು. ಒಟ್ಟಿನಲ್ಲಿ ಇಂಥದೊಂದು ಚಳವಳಿಯ ಅಗತ್ಯ ದೇಶಕ್ಕೆ ಖಂಡಿತಾ ಇತ್ತು.

ಸಲಾಂ ಸೋನಂ!

ಕಾಕ್ರೋಚ್ ಜನತಾ ಪಾರ್ಟಿಯ ಹುಟ್ಟಿಗೆ ಅಭಿಜೀತ್ ದೀಪ್ಕೆ ಎಂಬ ಪ್ರತಿಭೆ ಕಾರಣವಾದರೂ ಅದು ಇನ್ನೊಂದು ಮಜಲಿಗೆ ಹೊರಳಲು ಸೋನಂ ವಾಂಗ್ಚುಕ್ ಎಂಬ ಶಿಕ್ಷಣ ತಜ್ಞ, ಪರಿಸರವಾದಿ, ಸಾಮಾಜಿಕ ಹೋರಾಟಗಾರ ಕಾರಣ. ಸೋನಂ ವಾಂಗ್ಚುಕ್ ಆಮರಣಾಂತ ಉಪವಾಸ ಸತ್ಯಾಗ್ರಹ ಘೋಷಿಸಿದ ಬಳಿಕವೇ ಪ್ರತಿಭಟನೆ ತೀವ್ರವಾಗಲು ತೊಡಗಿದ್ದು, ಕೇಂದ್ರ ಸರಕಾರ ಈ ಹೋರಾಟವನ್ನು ಗಂಭೀರವಾಗಿ ಪರಿಗಣಿಸಲು ಆರಂಭಿಸಿದ್ದು.

ಎಲ್ಲಾ ಮಹನೀಯರನ್ನು ಇತಿಹಾಸ ಆಯಾ ಕಾಲದಲ್ಲಿ ಅವಮಾನಿಸಿದೆ. ಹಾಗೆಯೇ ಸೋನಂ ಅವರನ್ನು ಕೂಡ ಅವಮಾನಿಸುವ ಕೆಲಸವಾಗುತ್ತಿದೆ. ಅದರ ನಡುವೆಯೂ ವಾಂಗ್ಚುಕ್ ತಾವು ಪ್ರತಿಪಾದಿಸುವ ವಿಷಯಕ್ಕೆ ಬದ್ಧರಾಗಿದ್ದಾರೆ. ತಮಗಾಗುತ್ತಿರುವ ಅವಮಾನವನ್ನು ಕಡೆಗಣಿಸುತ್ತಿದ್ದಾರೆ. ಅವರೀಗ ಜಿರಳೆಗಳು ಮುಂದೇನು ಮಾಡಬೇಕು ಎನ್ನುವ ಬಗ್ಗೆ ಕೂಡ ಮಾರ್ಗದರ್ಶನ ಮಾಡಬೇಕು.

ವಿಫಲವಾದ ವಿಕ್ಟಿಮ್ ಕಾರ್ಡ್!

ಆರೆಸ್ಸೆಸ್ ಹುಟ್ಟಿನಿಂದಲೂ ಹಿಂದೂ ಧರ್ಮಕ್ಕೆ ಅನ್ಯಾಯವಾಗಿದೆ, ಅಪಾಯವಿದೆ ಎನ್ನುವ Victim Card ಅನ್ನು ಬಳಸುತ್ತಿದೆ. ಮೋದಿಯ Modus operandi (ಕಾರ್ಯ ವಿಧಾನ) ಕೂಡ ಅದೇ; ತಮ್ಮ ವಿರುದ್ಧ, ತಮ್ಮ ಸರಕಾರದ ವಿರುದ್ಧ ಷಡ್ಯಂತ್ರ ನಡೆಯುತ್ತಿದೆ ಎನ್ನುವುದನ್ನು ಸದಾ ಬಿಂಬಿಸಲು ಪ್ರಯತ್ನಿಸುತ್ತಿರುತ್ತಾರೆ. ಜಿರಳೆಗಳ ಹೋರಾಟವನ್ನು ಕೂಡ ತಮ್ಮ ವಿರುದ್ಧದ ಷಡ್ಯಂತ್ರ ಎಂದು ಬಿಂಬಿಸಲು ಅವರ Ecosystem ಇನ್ನಿಲ್ಲದಂತೆ ಪ್ರಯತ್ನಿಸುತ್ತಿದೆ. ಆದರೆ ನಿಜವಾದ ಜಿರಳೆಗಳು ಮೋದಿ ಮತ್ತವರ ತಂಡ ಬೀಸುತ್ತಿರುವ ಬಲೆಗೆ ಬೀಳುತ್ತಿಲ್ಲ. ಏಕೆಂದರೆ ಮೋದಿಯ ವಿಕ್ಟಿಮ್ ಕಾರ್ಡ್ ಮೊದಲಿನಂತೆ ಕೆಲಸ ಮಾಡುತ್ತಿಲ್ಲ.

ಅತ್ಯಾಚಾರ ಸಮರ್ಥಿಸಿದ್ದ ಜೋಶಿ

ಅರ್ಥಶಾಸ್ತ್ರವನ್ನು ಚೆನ್ನಾಗಿ ಅರಿತಿರುವ, ಕೃಷಿಯನ್ನು, ಕಾನೂನನ್ನು ಕರಗತ ಮಾಡಿಕೊಂಡಿರುವ, ಸಂಸದೀಯ ವ್ಯವಹಾರಗಳಲ್ಲಿ ನಿಷ್ಣಾತ ಎನಿಸುವ, ಇನ್ನಿತರ ವಿಷಯಗಳ ಬಗ್ಗೆ ಆಳವಾದ ಅಧ್ಯಯನ ಮಾಡಿರುವ ಪ್ರತಿಭೆಗಳ ಕೊರತೆ ಬಿಜೆಪಿಗೆ ಸಿಕ್ಕಾಪಟ್ಟೆ ಇದೆ. ಇದಕ್ಕೆ ಧರ್ಮೇಂದ್ರ ಪ್ರಧಾನ್ ಜಾಗಕ್ಕೆ ಪ್ರಹ್ಲಾದ್ ಜೋಶಿಯನ್ನು ತಂದು ಕೂರಿಸಿರುವುದು ಸೂಕ್ತವಾದ ಉದಾಹರಣೆ. ಹಿಂದೆ ಇದೇ ಪ್ರಹ್ಲಾದ್ ಜೋಶಿ, ಬಿಲ್ಕಿಸ್ ಬಾನು ಮೇಲೆ ಅತ್ಯಾಚಾರ ನಡೆಸಿ ಆಕೆಯ ಕುಟುಂಬದವರನ್ನು ಕೊಲೆಗೈದಿದ್ದವರನ್ನು ಬಿಡುಗಡೆಗೊಳಿಸಿದ ಕೇಂದ್ರ ಮತ್ತು ಗುಜರಾತ್ ಸರಕಾರದ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದರು. ಅತ್ಯಾಚಾರ ಪ್ರಕರಣವನ್ನು ಸಮರ್ಥಿಸುವವರಿಗೆ ಶಿಕ್ಷಣ ಖಾತೆಯ ಜವಾಬ್ದಾರಿಕೊಟ್ಟದ್ದು ಒಂದು ರೀತಿಯಲ್ಲಿ ‘ಊದುವುದನ್ನು ಕೊಟ್ಟು ಬಾರಿಸುವುದನ್ನು’ ತಂದಂತಾಗಿದೆ.

ಆಫ್ ದಿ ರೆಕಾರ್ಡ್!

ಹಿಂದೆ ಕಾಂಗ್ರೆಸ್ ವೈಫಲ್ಯ ಬಿಜೆಪಿ ನೆರವಿಗೆ ಬಂದಿದೆ. ಬಹುತೇಕ ಸಂದರ್ಭಗಳಲ್ಲಿ ಕಾಂಗ್ರೆಸ್ ಸ್ವಯಂಕೃತ ಅಪರಾಧದಿಂದ ಸೋತು ಗೆಲುವಿನ ಶ್ರೇಯ ಮೋದಿ ಮುಡಿಗೇರಿದೆ. ಹಾಗೆಯೇ ಬಿಜೆಪಿ ವೈಫಲ್ಯದಿಂದ ತಾನು ಮತ್ತೆ ಅಧಿಕಾರಕ್ಕೆ ಬರಬಹುದೆಂಬ ಭ್ರಮೆ ಕಾಂಗ್ರೆಸಿಗೆ ಇದೆ. ಈಗಲೂ ಜಿರಳೆಗಳ ಹೋರಾಟದ ಫಲ ತಮಗೆ ಸಿಗಬಹುದೆಂಬ ನಿರೀಕ್ಷೆಯನ್ನು ಇಟ್ಟುಕೊಂಡಿರಬಹುದು. ಜೆನ್ ಝಿಗಳ ಹೋರಾಟವೊಂದೇ ಕಾಂಗ್ರೆಸ್ ಅನ್ನು ಗೆಲುವಿನ ದಡ ಸೇರಿಸಲಾರದು ಎನ್ನುವ ಕನಿಷ್ಠ ಪ್ರಜ್ಞೆಯಾದರೂ ಆ ಪಕ್ಷಕ್ಕೆ ಇರಬೇಕು.

Tags

modiCJP
share
ಧರಣೀಶ್ ಬೂಕನಕೆರೆ
ಧರಣೀಶ್ ಬೂಕನಕೆರೆ
Next Story
X