Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ನಕ್ಸಲ್ ನಾಯಕ ವಿಕ್ರಂ ಗೌಡ...

ನಕ್ಸಲ್ ನಾಯಕ ವಿಕ್ರಂ ಗೌಡ ಎನ್‌ಕೌಂಟರ್‌ಗೆ ಒಂದು ವರ್ಷ

ನಝೀರ್ ಪೊಲ್ಯನಝೀರ್ ಪೊಲ್ಯ18 Nov 2025 9:14 AM IST
share
ನಕ್ಸಲ್ ನಾಯಕ ವಿಕ್ರಂ ಗೌಡ ಎನ್‌ಕೌಂಟರ್‌ಗೆ ಒಂದು ವರ್ಷ
►ಕಾನನದಲ್ಲಿ ಹರಿದ ಚಳವಳಿಯ ನೆತ್ತರು ►ಇನ್ನೂ ಮರಿಚೀಕೆಯಾದ ಅಭಿವೃದ್ಧಿ

ಉಡುಪಿ : ಸರಿಸುಮಾರು ಒಂದು ವರ್ಷದ ಹಿಂದೆ ಅಂದರೆ ನ.18ರಂದು ಪಶ್ಚಿಮಘಟ್ಟದಲ್ಲಿ ಮತ್ತೊಮ್ಮೆ ಗುಂಡಿ ಸದ್ದು ಮೊಳಗಿತ್ತು. ಆ ಗುಂಡಿಗೆ ಅವತ್ತು ನಕ್ಸಲ್ ಚಳವಳಿಯ ನಾಯಕ ವಿಕ್ರಂ ಗೌಡ ಪ್ರಾಣ ಬಿಟ್ಟಿದ್ದರು. ಅದೆಷ್ಟೋ ವರ್ಷ ಶಾಂತವಾಗಿದ್ದ ದಟ್ಟ ಅರಣ್ಯದಲ್ಲಿ ಮತ್ತೆ ರಕ್ತದೋಕುಳಿ ಹರಿದಿತ್ತು. ವ್ಯವಸ್ಥೆಯ ದುರಾಡಳಿತದ ವಿರುದ್ಧ ಹುಟ್ಟಿಕೊಂಡ ನಕ್ಸಲ್ ಚಳವಳಿ ಕರ್ನಾಟಕದಲ್ಲಿ ಅಂದು ಕೊನೆಗೊಂಡಿತು.

ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನ ಕಬ್ಬಿನಾಲೆಯಿಂದ ಸುಮಾರು 15 ಕಿ.ಮೀ. ದೂರ ದುರ್ಗಮ ಕಾಡಿನ ಮಧ್ಯೆ ಇರುವ ಪೀತ್‌ಬೈಲು ಎಂಬಲ್ಲಿ ನಡೆದ ನಕ್ಸಲ್ ಎನ್‌ಕೌಂಟರ್‌ಗೆ ಒಂದು ವರ್ಷ ತುಂಬಿದೆ. ನಕ್ಸಲ್ ನಿಗ್ರಹ ಪಡೆ(ಎಎನ್‌ಎಫ್)ಯು ನಡೆಸಿದ ಈ ಎನ್‌ಕೌಂಟರ್‌ಗೆ ನಕ್ಸಲ್ ನಾಯಕ ಹೆಬ್ರಿ ತಾಲೂಕಿನ ಕೂಡ್ಲು ನಿವಾಸಿ ವಿಕ್ರಂ ಗೌಡ ಅಲಿಯಾಸ್ ವಿಕ್ರಂ ಗೌಡ್ಲು ಆಲಿಯಾಸ್ ಶ್ರೀಕಾಂತ್(46) ಬಲಿಯಾಗಿದ್ದರು.

ವಿಕ್ರಂ ಗೌಡ ನಕ್ಸಲ್ ಚಳವಳಿಗೆ ಧುಮುಕಲು ಕಾರಣವಾದ ಇಲ್ಲಿನ ಅರಣ್ಯವಾಸಿಗಳ ಸಮಸ್ಯೆಗಳು ಮಾತ್ರ ಇಂದಿಗೂ ಜೀವಂತವಾಗಿಯೇ ಉಳಿದಿವೆ. ಅವರ ಕಷ್ಟ ನೋವುಗಳಿಗೆ ಸರಕಾರದಿಂದ ನಿರೀಕ್ಷಿತ ಪ್ರಮಾಣದಲ್ಲಿ ಪರಿಹಾರ ಸಿಕ್ಕಿಲ್ಲ. ನಕ್ಸಲ್ ಚಳವಳಿಯನ್ನು ಇಲ್ಲವಾಗಿಸುವ ವ್ಯವಸ್ಥೆಯ ಪ್ರಯತ್ನದ ಮಧ್ಯೆ ಇಲ್ಲಿ ಅಭಿವೃದ್ಧಿ ಸಂಪೂರ್ಣ ಮರೀಚಿಕೆಯಾಗಿದೆ.

ಪ್ರಕರಣದ ಹಿನ್ನೆಲೆ: ಕಳೆದ 15 ವರ್ಷಗಳಿಂದ ನಕ್ಸಲ್ ಚಳವಳಿಯಲ್ಲಿ ತೊಡಗಿಸಿಕೊಂಡಿದ್ದ ವಿಕ್ರಂ ಗೌಡ, ನಕ್ಸಲೀಯರ ಕಬಿನಿ-2 ತಂಡವನ್ನು ಮುನ್ನಡೆಸುತ್ತಿದ್ದನು. ಬಳಿಕ ಆತ ಕೇರಳದಲ್ಲಿ ಸಕ್ರಿಯನಾಗಿದ್ದನು. ಆತ ಹಾಗೂ ಆತನ ತಂಡ ಪೀತ್‌ಬೈಲಿನ ಮನೆಗೆ ದಿನಸಿ ಕೊಂಡೊಯ್ಯಲು ಬರುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿತ್ತು.

ಅದರಂತೆ ನಕ್ಸಲ್ ನಿಗ್ರಹ ಪಡೆಯ ಪೊಲೀಸ್ ಅಧೀಕ್ಷಕ ಜೀತೇಂದ್ರ ದಯಾಮ ನೇತೃತ್ವದ ತಂಡ ಕಳೆದ 10 ದಿನಗಳಿಂದ ಈ ಪ್ರದೇಶದಲ್ಲಿ ಕೂಂಬಿಂಗ್ ಆರಂಭಿಸಿತ್ತು. ಈ ಹಿನ್ನೆಲೆಯಲ್ಲಿ ಪೀತ್‌ಬೈಲಿನಲ್ಲಿರುವ ಮೂರು ಮನೆಗಳಲ್ಲಿದ್ದ ಕುಟುಂಬಗಳನ್ನು ಬೇರೆ ಕಡೆ ವರ್ಗಾಯಿಸಲಾಗಿತ್ತು.

ಈ ಸಂಬಂಧ ಎಎನ್‌ಎಫ್ ತಂಡವು ಆ ಮೂರು ಮನೆಗಳಲ್ಲಿ ನಕ್ಸಲೀಯರಿಗಾಗಿ ಹೊಂಚು ಹಾಕಿ ಕುಳಿತಿತ್ತು. ನ.18ರಂದು ಸಂಜೆ ವೇಳೆ ಜಯಂತ್ ಗೌಡ ಅವರ ಮನೆಗೆ ದಿನಸಿ ತರಲು ಬರುತ್ತಿದ್ದ ವಿಕ್ರಂ ಗೌಡ ಹಾಗೂ ಆತನ ತಂಡದ ಮೇಲೆ ಪೊಲೀಸರು ಗುಂಡಿನ ದಾಳಿ ನಡೆಸಿದರು. ಇದರಲ್ಲಿ ವಿಕ್ರಂ ಗೌಡ ಮೃತಪಟ್ಟು, ಉಳಿದವರು ಪರಾರಿಯಾಗಿದ್ದರು. ವಿಕ್ರಮ್ ಗೌಡ ವಿರುದ್ಧ ಕೇರಳ, ತಮಿಳುನಾಡು, ಕರ್ನಾಟಕದ ಉಡುಪಿ ಮತ್ತು ಇತರ ಜಿಲ್ಲೆಗಳಲ್ಲಿ ಕೊಲೆ, ಕೊಲೆ ಯತ್ನ, ಅಪಹರಣ, ಸುಲಿಗೆ, ಬೆದರಿಕೆ ಸೇರಿದಂತೆ ಒಟ್ಟು 64 ಪ್ರಕರಣಗಳು ದಾಖಲಾಗಿದ್ದವು.

ದೌರ್ಜನ್ಯ ವಿರುದ್ಧ ಹೋರಾಟ: ನಾಲ್ಕನೇ ತರಗತಿವರೆಗೆ ಶಿಕ್ಷಣ ಪಡೆದಿದ್ದ ವಿಕ್ರಂ ಗೌಡ, ಅರಣ್ಯ ಇಲಾಖೆಯ ದೌರ್ಜನ್ಯ ಹಾಗೂ ಸರಕಾರದ ನೀತಿಯ ವಿರುದ್ಧ ಕರ್ನಾಟಕ ವಿಮೋಚನಾ ರಂಗದೊಂದಿಗೆ ಸೇರಿ ಪ್ರತಿಭಟನೆ, ಹೋರಾಟಗಳಲ್ಲಿ ತೊಡಗಿಸಿಕೊಂಡಿದ್ದನು. ಕ್ರಮೇಣ ನಕ್ಸಲ್ ಸಿದ್ಧಾಂತಕ್ಕೆ ಮಾರು ಹೋದ ವಿಕ್ರಂ ಗೌಡ, ಸುಮಾರು 20 ವರ್ಷಗಳ ಹಿಂದೆ ಶಸ್ತ್ರಾಸ್ತ ಹೋರಾಟಕ್ಕೆ ಇಳಿದಿದ್ದನು. ಪೀತ್‌ಬೈಲು ಪರಿಸರದಲ್ಲಿ ಸುಮಾರು 15 ವರ್ಷಗಳ ಹಿಂದೆ ನಕ್ಸಲ್ ಹೋರಾಟವು ಬಹಳಷ್ಟು ತೀವ್ರವಾಗಿತ್ತು. ಪ್ರಜಾಸತ್ತಾತ್ಮಕ ಬೇಡಿಕೆ ಈಡೇರಿಸುವಂತೆ ಯುವಕರ ತಂಡ ಹೋರಾಟಕ್ಕೆ ಇಳಿದಿತ್ತು.

ಆದರೆ, 2024ರ ನ.18ರಂದು ವಿಕ್ರಂ ಗೌಡ, ತನ್ನ ಮನೆಯಿಂದ ಕೇವಲ 8 ಕಿ.ಮೀ. ದೂರದ ಪೀತ್‌ಬೈಲಿನಲ್ಲಿ ಎನ್‌ಕೌಂಟರ್‌ಗೆ ಬಲಿಯಾಗಿದ್ದನು. ಉಡುಪಿ ಜಿಲ್ಲೆಯಲ್ಲಿ ನಕ್ಸಲ್‌ಗೆ ಸಂಬಂಧಿಸಿ 2003ರಿಂದ 2024 ರವರೆಗೆ ನಡೆದ ಒಟ್ಟು ನಾಲ್ಕು ಎನ್‌ಕೌಂಟರ್‌ಗಳಲ್ಲಿ ವಿಕ್ರಂ ಗೌಡ ಸಹಿತ ಒಟ್ಟು ಆರು ಮಂದಿ ಬಲಿಯಾಗಿದ್ದಾರೆ.

ವಿಕ್ರಂ ಗೌಡ ಎನ್‌ಕೌಂಟರ್ ಬಗ್ಗೆ ಸಾಕಷ್ಟು ಸಂಶಯ ಗಳು, ಆರೋಪಗಳು ವ್ಯಕ್ತವಾದವು. ಇದೊಂದು ನಕಲಿ ಎನ್‌ಕೌಂಟರ್, ಈ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಬೇಕೆಂದು ವಿವಿಧ ಸಂಘಟನೆಗಳು ಆಗ್ರಹಿಸಿದ್ದವು. ಸಾಮಾಜಿಕ ಕಾರ್ಯಕರ್ತರ ತಂಡವೊಂದು ಸ್ಥಳಕ್ಕೆ ಭೇಟಿ ನೀಡಿ, ಈ ಬಗ್ಗೆ ನ್ಯಾಯಾಂಗ ತನಿಖೆ ನಡೆಸಬೇಕೆಂದು ಒತ್ತಾಯಿಸಿತ್ತು. ಆದರೆ, ಈ ಬಗ್ಗೆ ಮುಂದೆ ಯಾವುದೇ ತನಿಖೆಗಳು ನಡೆದಿಲ್ಲ. ಇನ್ನೂ ಆ ಪ್ರಕರಣ ಗೌಪ್ಯವಾಗಿಯೇ ಉಳಿದು ಬಿಟ್ಟಿವೆ.

ಪೀತ್‌ಬೈಲಿನಲ್ಲಿ ಎಎನ್‌ಎಫ್‌ನಿಂದ ಮತ್ತೆ ಕೂಂಬಿಂಗ್!

ನಕ್ಸಲ್ ನಾಯಕ ವಿಕ್ರಂ ಗೌಡ ಮೃತಪಟ್ಟು ಒಂದು ವರ್ಷ ಆಗಿರುವ ಹಿನ್ನೆಲೆಯಲ್ಲಿ ಪೀತ್‌ಬೈಲು ಅರಣ್ಯದಲ್ಲಿ ನಕ್ಸಲ್ ನಿಗ್ರಹ ಪಡೆಯ ಪೊಲೀಸರು ಕಳೆದೊಂದು ವಾರಗಳಿಂದ ಕೂಂಬಿಂಗ್ ನಡೆಸುತ್ತಿರುವ ಬಗ್ಗೆ ವರದಿಯಾಗಿದೆ.

ನಕ್ಸಲರು ತಮ್ಮ ನಾಯಕನ ಮೃತಪಟ್ಟ ಸ್ಥಳದಲ್ಲಿ ಶ್ರದ್ಧಾಂಜಲಿ ಸಲ್ಲಿಸಲು ಆಗಮಿಸಬಹುದೆಂಬ ಶಂಕೆಯಲ್ಲಿ ಪೊಲೀಸರು ಈ ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಪ್ರತಿದಿನ ಪೀತ್‌ಬೈಲಿನ ಜಯಂತ್ ಗೌಡರ ಮನೆ ಸುತ್ತಮುತ್ತ ಪರಿಸರದಲ್ಲಿ ಪೊಲೀಸರು ಕೂಬಿಂಗ್ ನಡೆಸುತ್ತಿರುವುದು ಕಂಡು ಬಂದಿದೆ.

ನೋಡಲ್ ಅಧಿಕಾರಿ ನೇಮಕಕ್ಕೆ ಪ್ರಸ್ತಾವ: ಎಎನ್‌ಎಫ್ ಎಸ್ಪಿ

ಪ್ರಸಕ್ತ ತಮಿಳುನಾಡು-ಕೇರಳ ಗಡಿ ಪ್ರದೇಶಗಳನ್ನು ಒಳಗೊಂಡ ಕರ್ನಾಟಕ ರಾಜ್ಯ ವ್ಯಾಪ್ತಿಯಲ್ಲಿ ಯಾವುದೇ ಒಬ್ಬ ನಕ್ಸಲ್ ಕೂಡ ಇಲ್ಲ, ಯಾವುದೇ ನಕ್ಸಲ್ ಜಾಲವೂ ಇಲ್ಲ. ಆದರೂ ನಾವು ನಿರಂತರ ನಿಗಾ ವಹಿಸುತ್ತಿದ್ದೇವೆ. ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಎಲ್ಲ ಪ್ರಯತ್ನಗಳನ್ನು ಮಾಡಿದ್ದೇವೆ. ನಮ್ಮ ಮೇಲೆ ದಾಳಿ ನಡೆಸಿದಾಗ ಪ್ರತಿದಾಳಿ ನಡೆಸಬೇಕಾದ ಪರಿಸ್ಥಿತಿ ಉಂಟಾಯಿತು ಎಂದು ನಕ್ಸಲ್ ನಿಗ್ರಹ ಪಡೆಯ ಪೊಲೀಸ್ ಅಧೀಕ್ಷಕ ಜೀತೇಂದ್ರ ಕುಮಾರ್ ದಯಾಮ ತಿಳಿಸಿದ್ದಾರೆ.

ನಾವು ನಕ್ಸಲರನ್ನು ಕೇವಲ ಮುಖ್ಯವಾಹಿನಿಗೆ ತರುವ ಪ್ರಯತ್ನ ಮಾತ್ರವಲ್ಲದೆ ನಕ್ಸಲ್ ಬಾಧಿತ ಪ್ರದೇಶಗಳನ್ನು ಪುನರ್ ನಿರ್ಮಿಸುವತ್ತವೂ ಗಮನ ಹರಿಸಿದ್ದೇವೆ. ನಮ್ಮ ನಿರಂತರ ಪ್ರಯತ್ನಗಳ ಫಲವಾಗಿ ಸರಕಾರ ನಕ್ಸಲ್ ಬಾಧಿತ ಪ್ರದೇಶಗಳಿಗೆ ವಿಶೇಷ ಪ್ಯಾಕೇಜ್‌ಗಳನ್ನು ಮಂಜೂರು ಮಾಡಿದೆ. ಈ ನಿಧಿ ಬಳಕೆಗೆ ವಿಶೇಷ ನೋಡಲ್ ಅಧಿಕಾರಿಯನ್ನು ನೇಮಿಸಬೇಕು ಎಂಬ ಒತ್ತಾಯವನ್ನೂ ಮಾಡಲಾಗಿದೆ. ನೋಡಲ್ ಅಧಿಕಾರಿಯು ನೇಮಕಗೊಂಡ ನಂತರವೇ ಸರಕಾರದ ಅನುದಾನ ಬಿಡುಗಡೆಯಾಗುವ ಸಾಧ್ಯತೆ ಇದೆ ಎಂದು ಅವರು ತಿಳಿಸಿದರು.

‘ಸಂಪೂರ್ಣ ತನಿಖಾ ವರದಿ ಇನ್ನೂ ಸಿಕ್ಕಿಲ್ಲ’

ಎರಡು ತಿಂಗಳ ಹಿಂದೆ ನಡೆದ ಸಮಿತಿ ಸಭೆಯಲ್ಲಿ ವಿಕ್ರಂ ಗೌಡರ ಕುಟುಂಬಕ್ಕೆ ಆರ್ಥಿಕ ನೆರವು ನೀಡುವ ಬಗ್ಗೆ ಪ್ರಸ್ತಾವ ಸಲ್ಲಿಸಲಾಗಿದೆ. ಅದೇ ರೀತಿ ಎನ್‌ಕೌಂಟರ್ ಪ್ರಕರಣದ ಸಂಪೂರ್ಣ ತನಿಖಾ ವರದಿಯನ್ನು ಗೃಹ ಇಲಾಖೆ ಇನ್ನೂ ಸಮಿತಿ ಮುಂದೆ ನೀಡಿಲ್ಲ. ಘಟನೆ ಹೇಗೆ ಆಯಿತು ಎಂಬ ಸ್ಪಷ್ಟ ಚಿತ್ರಣ ಕೂಡ ಇಲ್ಲ ಎಂದು ನಕ್ಸಲ್ ಪುನರ್ವಸತಿ ಮತ್ತು ಶರಣಾಗತಿ ಸಮಿತಿ ಸದಸ್ಯ ವಕೀಲ ಕೆ.ಪಿ. ಶ್ರೀಪಾಲ ತಿಳಿಸಿದ್ದಾರೆ.

ನಕ್ಸಲ್ ಬಾಧಿತ ಪ್ರದೇಶಗಳ ಅಭಿವೃದ್ಧಿಗೆ ಸರಕಾರ ಈ ಬಾರಿಯ ಬಜೆಟ್‌ನಲ್ಲಿ ಅನುದಾನ ಮೀಸಲಿರಿಸಿದ್ದು, ಅಲ್ಲಿ ಗ್ರಾಮಗಳ ಅಭಿವೃದ್ಧಿಗಾಗಿ ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳ ಖಾತೆಗೆ ಹಣ ಜಮೆ ಮಾಡಲಾಗಿದೆ. ಅವರು ಮುಂದೆ ಅಭಿವೃದ್ಧಿ ಕಾರ್ಯಕ್ರಮಗಳನ್ನು ನಡೆಸಲಿದ್ದಾರೆ ಎಂದು ಅವರು ಮಾಹಿತಿ ನೀಡಿದರು.

ವಿಕ್ರಂ ಗೌಡ ಎನ್‌ಕೌಂಟರ್ ಬಳಿಕ ಕರ್ನಾಟಕ ರಾಜ್ಯದಲ್ಲಿ ನಕ್ಸಲ್ ಚಳವಳಿ ಸಂಪೂರ್ಣ ಅಂತ್ಯಗೊಂಡಿದೆ. ಇಲ್ಲಿ ಬಹುತೇಕ ನಕ್ಸಲರಲ್ಲಿ ಕೆಲವರು ಹತರಾಗಿದ್ದರೆ, ಇನ್ನೂ ಕೆಲವರು ಶರಣಾಗಿದ್ದಾರೆ. ಕೆಲವು ಮಂದಿ ಪೊಲೀಸರಿಂದ ಬಂಧಿಸಲ್ಪಟ್ಟಿದ್ದಾರೆ. ಪಾವಗಡ ಪೊಲೀಸ್ ಠಾಣೆ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದ ಕೆಲವು ಮಂದಿ ನಕ್ಸಲೀಯರು ಇನ್ನೂ ಬೇರೆ ರಾಜ್ಯದಲ್ಲಿ ಇದ್ದಾರೆ ಎಂಬ ಮಾಹಿತಿ ಇದೆ. ಒಟ್ಟಿನಲ್ಲಿ ಕರ್ನಾಟಕದಲ್ಲಿ ಈ ಚಳವಳಿ ಇಲ್ಲವಾಗಿದೆ ಎಂದವರು ತಿಳಿಸಿದ್ದಾರೆ.


ನಾವು ಎನ್‌ಕೌಂಟರ್ ನಡೆದ ಹಲವು ಸಮಯಗಳ ಬಳಿಕ ನಮ್ಮ ಮನೆಗಳಿಗೆ ಮರಳಿದ್ದೇವೆ. ನಾವು ಸಹೋದರರು, ಸದ್ಯ ಅಲ್ಲೇ 3 ಮನೆಗಳಲ್ಲಿ ವಾಸ ಮಾಡಿಕೊಂಡಿದ್ದೇವೆ. ನಮ್ಮ ಮಕ್ಕಳು ಕೆಲಸಕ್ಕೆ ಹೋಗುತ್ತಿದ್ದಾರೆ. ಆಗಾಗಿ ನಾವು ಮನೆಯಲ್ಲಿಯೇ ಇದ್ದೇವೆ. ನಮ್ಮ ಪರಿಸರದಲ್ಲಿ ಈವರೆಗೆ ಯಾವುದೇ ನಕ್ಸಲ್ ಚಟುವಟಿಕೆಗಳು ಇಲ್ಲ. ಆದರೆ, ಪೊಲೀಸ್ ಅಧಿಕಾರಿಗಳು ಆಗಾಗ ಬರುತ್ತಿರುತ್ತಾರೆ.

-ಜಯಂತ್ ಗೌಡ, ಎನ್‌ಕೌಂಟರ್ ನಡೆದ ಮನೆಯ ಯಜಮಾನ

ನಮಗೆ ಅಗತ್ಯವಾಗಿ ಬೇಕಾಗಿರುವುದು ರಸ್ತೆ. ಅದನ್ನು ಇನ್ನೂ ಸರಿಯಾಗಿ ಮಾಡಿಕೊಟ್ಟಿಲ್ಲ. ಮಳೆಗಾಲದಲ್ಲಿ ರಸ್ತೆಗಳು ಇನ್ನಷ್ಟು ಹದಗೆಟ್ಟು ಹೋಗಿವೆ. ಕಲ್ಲಿನಿಂದ ಕೂಡಿದ ಈ ರಸ್ತೆ ಸಂಚರಿಸುವುದೇ ದೊಡ್ಡ ಸವಾಲಾಗಿದೆ. ಮೊಬೈಲ್ ನೆಟ್‌ವರ್ಕ್ ಇಲ್ಲದೆ ಹೊರಗಿನವರ ಸಂಪರ್ಕ ಮಾಡಲು ಸಾಧ್ಯವಾಗುತ್ತಿಲ್ಲ. ಮೊಬೈಲ್ ಕರೆ ಮಾಡಬೇಕಾದರೆ ಎಷ್ಟೋ ದೂರ ಹೋಗಬೇಕು. ಹಲವು ವರ್ಷಗಳ ಬೇಡಿಕೆಯಾಗಿರುವ ಮತ್ತಾವು ಸೇತುವೆ ಕಾಮಗಾರಿ ಇನ್ನೂ ಆರಂಭವಾಗಿಲ್ಲ.

-ಸದಾಶಿವ ಗೌಡ ಕಬ್ಬಿನಾಲೆ, ಕೂಲಿ ಕಾರ್ಮಿಕ


ಇನ್ನೂ ಪರಿಹಾರ ಕಾಣದ ಸಮಸ್ಯೆಗಳು!

ವಿಕ್ರಂ ಗೌಡನ ಹುಟ್ಟೂರು ಕೂಡ್ಲುವಿಗೆ ಇನ್ನೂ ಬಸ್ ವ್ಯವಸ್ಥೆ ಇಲ್ಲ. ಹೆಬ್ರಿಯಿಂದ ನೆಲ್ಲಿಕಟ್ಟೆಯವರೆಗೆ ಬಸ್ ಬರುತ್ತದೆ. ಅಲ್ಲಿಂದ ಕೂಡ್ಲುಗೆ ಸುಮಾರು 10 ಕಿ.ಮೀ. ದೂರ ನಡೆದುಕೊಂಡೇ ಹೋಗಬೇಕು. ಅದೇ ರೀತಿ ರಸ್ತೆಯೂ ಹದಗೆಟ್ಟಿದ್ದು, ಸಂಚಾರಕ್ಕೆ ಅಯೋಗ್ಯವಾಗಿದೆ. ಆದುದರಿಂದ ಸರಕಾರ ಇಲ್ಲಿನ ಈ ಎರಡು ಬೇಡಿಕೆಗಳನ್ನು ಈಡೇರಿಸಿಕೊಡಬೇಕೆಂಬುವುದು ಸ್ಥಳೀಯರ ಆಗ್ರಹವಾಗಿದೆ.

ವಿಕ್ರಂ ಗೌಡ ಎನ್‌ಕೌಂಟರ್‌ಗೆ ಬಲಿಯಾದ ನಾಡ್ಪಾಲು ಗ್ರಾಪಂ ವ್ಯಾಪ್ತಿಯ ಪೀತ್‌ಬೈಲು, ಮುದ್ರಾಡಿಯಿಂದ 13 ಕಿ.ಮೀ. ಹಾಗೂ ಹೆಬ್ರಿಯಿಂದ ಸುಮಾರು 23 ಕಿ.ಮೀ. ದೂರದಲ್ಲಿದೆ. ದುರ್ಗಮ ಕಾಡಿನ ಮಧ್ಯೆ ಇರುವ ಈ ಪ್ರದೇಶಕ್ಕೆ ಹೋಗಲು ಬೆಟ್ಟ ಗುಡ್ಡವನ್ನು ಸಾಗಬೇಕು. ಇಲ್ಲಿನ ರಸ್ತೆಯೂ ಸಂಪೂರ್ಣ ಹದೆಗೆಟ್ಟಿದ್ದು, ಸುಮಾರು 8 ಕಿ.ಮೀ. ದೂರ ರಸ್ತೆ ಸಂಪೂರ್ಣ ಕಲ್ಲಿನಿಂದ ಕೂಡಿದೆ. ಪೀತ್‌ಬೈಲಿನಲ್ಲಿ ಕೇವಲ ಐದೇ ಮನೆಗಳಿದ್ದು, ಅವರಿಗೆ ಸೋಲಾರ್ ವಿದ್ಯುತ್ ಮನೆಗೆ ಬೆಳಕು ನೀಡುತ್ತಿದೆ. ಬಸ್ ವ್ಯವಸ್ಥೆ ಎಂಬುದು ಇಲ್ಲಿ ಕನಸಿನ ಮಾತು. ಎನ್‌ಕೌಂಟರ್

ನಡೆದ ಸಂದರ್ಭದಲ್ಲಿ ಕೇಳಿ ಬಂದ ಬೇಡಿಕೆಗಳ ಕೂಗಿಗೆ ಇನ್ನೂ ಪರಿಹಾರ ಸಿಕ್ಕಿಲ್ಲ. ಈಗಲೂ ಅದೇ ಸಮಸ್ಯೆ, ಅದೇ ಕೊರತೆಗಳಿಂದ ಈ ದಟ್ಟ ಅರಣ್ಯದಲ್ಲಿ ಬದುಕು ನಡೆಸುತ್ತಿದ್ದೇವೆ ಎಂದು ಸ್ಥಳೀಯರು ಅಳಲು ತೋಡಿಕೊಳ್ಳುತ್ತಿದ್ದಾರೆ.

share
ನಝೀರ್ ಪೊಲ್ಯ
ನಝೀರ್ ಪೊಲ್ಯ
Next Story
X