ಜಾನಕಿ ಚಿತ್ರದ ಹೆಸರು ವಿ.ಜಾನಕಿ ಎಂದು ಬದಲಾಯಿಸಿದಲ್ಲಿ ಅನುಮತಿ: ನ್ಯಾಯಾಲಯಕ್ಕೆ ಸಿಬಿಎಫ್ಸಿ ಸ್ಪಷ್ಟನೆ

PC: x.com/akshata_pingale
ತಿರುವನಂತಪುರಂ: ಸುರೇಶ್ ಗೋಪಿ ನಟಿಸಿರುವ "ಜೆಎಸ್ಕೆ: ಜಾನಕಿ ವರ್ಸಸ್ ಸ್ಟೇಟ್ ಆಫ್ ಕೇರಳ" ಚಿತ್ರದಲ್ಲಿ ಜಾನಕಿ ಹೆಸರನ್ನು ವಿ.ಜಾನಕಿ ಎಂದು ಬದಲಾಯಿಸಿದಲ್ಲಿ ಚಿತ್ರಕ್ಕೆ ಪ್ರಮಾಣಪತ್ರ ನೀಡಲು ಬಯಸಿರುವುದಾಗಿ ಕೇಂದ್ರೀಯ ಚಲನಚಿತ್ರ ಪ್ರಮಾಣಪತ್ರ ಮಂಡಳಿ ಕೇರಳ ಹೈಕೋರ್ಟ್ ಗೆ ಸ್ಪಷ್ಟನೆ ನೀಡಿದೆ.
ಸಿಬಿಎಫ್ಸಿ ಪರ ಹಾಜರಾದ ವಕೀಲ ಅಭಿನವ್ ಚಂದ್ರಚೂಡ್ ಚಿತ್ರದಲ್ಲಿ ಪ್ರಮುಖ ಪಾತ್ರದ ಹೆಸರು ಜಾನಕಿ ವಿದ್ಯಾಧರನ್' ಆದ್ದರಿಂದ ನಿರ್ಮಾಪಕರು ಚಿತ್ರದ ಶೀರ್ಷಿಕೆಯಲ್ಲಿ ಜಾನಕಿ ಹೆಸರನ್ನು ವಿ.ಜಾನಕಿ ಎಂದು ಬದಲಾಯಿಸಿದಲ್ಲಿ ಚಿತ್ರಕ್ಕೆ ಪ್ರಮಾಣಪತ್ರ ನೀಡಲು ಮಂಡಳಿ ಬಯಸಿದೆ ಎಂದು ಸ್ಪಷ್ಟಪಡಿಸಿದರು.
Next Story





