Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಪಿಟ್ಕಾಯಣ
  5. ಪಡಿಯಕ್ಕಿಗೆ ಇಡಿಯಕ್ಕಿ; ಇ20ಗೆ ಕಡಿಯಕ್ಕಿ

ಪಡಿಯಕ್ಕಿಗೆ ಇಡಿಯಕ್ಕಿ; ಇ20ಗೆ ಕಡಿಯಕ್ಕಿ

ರಾಜಾರಾಂ ತಲ್ಲೂರುರಾಜಾರಾಂ ತಲ್ಲೂರು11 July 2026 10:07 AM IST
share
ಪಡಿಯಕ್ಕಿಗೆ ಇಡಿಯಕ್ಕಿ; ಇ20ಗೆ ಕಡಿಯಕ್ಕಿ

ಜಗತ್ತೆಲ್ಲ ಅಕ್ಕಿ ಉತ್ಪಾದನೆಯನ್ನು ಕನಿಷ್ಠ ಮಟ್ಟಕ್ಕಿರಿಸಿಕೊಂಡು, ನೀರನ್ನು ಪರೋಕ್ಷವಾಗಿ ಆಮದು ಮಾಡಿಕೊಳ್ಳುವ ಮೂಲಕ (virtual water import) ತಮ್ಮ ದೇಶದ ಜಲಸಂಪನ್ಮೂಲಗಳನ್ನು ಕಾಪಾಡಿಕೊಳ್ಳುತ್ತಿದ್ದರೆ, ಭಾರತ ಮಾತ್ರ ಯಾವುದೇ ದೂರಗಾಮಿ ಯೋಜನೆಗಳಿಲ್ಲದೆ ಮಿಗತೆ ಆಗುವಷ್ಟು ಅಕ್ಕಿ ಉತ್ಪಾದಿಸಿ, ಅಕ್ಕಿ ರಫ್ತಿಗೆ ಹಾತೊರೆಯುತ್ತಿದೆ. ಮಾತ್ರವಲ್ಲದೆ, ಸದ್ಯದ ಸ್ಥಿತಿಯಲ್ಲಿ ಅಗತ್ಯಕ್ಕಿಂತ ಹೆಚ್ಚು ಉತ್ಪಾದನೆ ಆಗುತ್ತಿರುವ ಎಥೆನಾಲ್ ಅನ್ನು ಇನ್ನಷ್ಟು ಹೆಚ್ಚು ಪ್ರಮಾಣದಲ್ಲಿ ಉತ್ಪಾದಿಸಲು ಅನುಕೂಲ ಆಗುವಂತೆ, ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದಿಸಿರುವ ಅಕ್ಕಿಯನ್ನು ಒದಗಿಸುವುದಕ್ಕೆ ಆಸ್ಥೆಯಿಂದ ವ್ಯವಸ್ಥೆ ಮಾಡುತ್ತಿದೆ. ಈ ಮೂಲಕ ಭಾರತ ಸರಕಾರ ತನ್ನ ಕಾಲಿಗೆ ತಾನೇ ಗುಂಡು ಹಾರಿಸಿಕೊಳ್ಳುತ್ತಿದೆ.

20-25 ವರ್ಷಗಳ ಹಿಂದೆ ಮಾಧ್ಯಮಗಳಲ್ಲಿ ಪಡಿತರ ವ್ಯವಸ್ಥೆಯ ಕುರಿತ ಯಾವುದೇ ಸುದ್ದಿಗಳು ಆದ್ಯತೆಯವಾಗಿರುತ್ತಿದ್ದವು. ಯಾಕೆಂದರೆ ಸುದ್ದಿಮನೆಗಳ ಒಳಗೆ ಅದರ ಬಳಕೆದಾರರಿದ್ದರು. ಇಂದು ತಿಂದುಂಡು ದುಂಡಗಾಗಿರುವವರಿಗೆ ಪಡಿತರ ಸಂಬಂಧಿ ಸುದ್ದಿಗಳು ಸುದ್ದಿ ಅನ್ನಿಸುವುದೇ ಇಲ್ಲ. ಇಲ್ಲಿ ಮುಂದೆ ಚರ್ಚಿಸಲಿರುವ ಸುದ್ದಿ ಪಡಿತರಕ್ಕೆ ಸಂಬಂಧಿಸಿ ಆಗಿರುವ ಒಂದು ಬದಲಾವಣೆ ಮತ್ತು ಅದರ ಹಿಂದಿರುವ, ನೀತ್ಯಾತ್ಮಕ ಗೊಂದಲಗಳ (ಒಂದು ಮಟ್ಟಿಗೆ ತಣ್ಣನೆಯ ಕ್ರೌರ್ಯದ್ದೂ ಹೌದು) ಕುರಿತಾದದ್ದು.

ಇದೇ ಜುಲೈ ಒಂದರಂದು ಕೇಂದ್ರ ಸರಕಾರದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ (CCEA)ಯು ಒಂದು ಮಹತ್ವದ ತೀರ್ಮಾನ ಕೈಗೊಂಡಿತು. ಅದೇನೆಂದರೆ, ದೇಶದ 140 ಕೋಟಿ ಪ್ರಜೆಗಳ ಪೈಕಿ ಅಂದಾಜು ಮುಕ್ಕಾಲು ಪಾಲು ಜನರಿಗೆ, ಅಂದರೆ ಸುಮಾರು 80 ಕೋಟಿ ಜನರಿಗೆ ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಅನ್ನಯೋಜನೆ (PMGKAY) ಅಡಿಯಲ್ಲಿ ವಿತರಿಸಲಾಗುವ ಪಡಿತರ ಅಕ್ಕಿಯಲ್ಲಿ ಕಡಿಯಕ್ಕಿಯ (broken rice) ಪ್ರಮಾಣವನ್ನು ತಗ್ಗಿಸಲು, ಆ ಮೂಲಕ ಪಡಿತರ ಅಕ್ಕಿಯ ಗುಣಮಟ್ಟವನ್ನು ಸುಧಾರಿಸಲು ಸರಕಾರ ನಿರ್ಧರಿಸಿದೆ. ಈ ಸುಧಾರಣೆ ಹಂತಹಂತವಾಗಿ ನಡೆಯಲಿದ್ದು, 2027-28ರ ಹೊತ್ತಿಗೆ, ಸದ್ಯ ವಿತರಣೆ ಆಗುತ್ತಿರುವ ಬೆಳ್ತಿಗೆ ಅಕ್ಕಿಯಲ್ಲಿರುವ ಕಡಿಯಕ್ಕಿಯ ಪ್ರಮಾಣವನ್ನು ಶೇ. 25ರಿಂದ ಶೇ. 10ಕ್ಕೆ ತಗ್ಗಿಸಲಾಗುತ್ತದೆ ಮತ್ತು ಕೊಚ್ಚಲಕ್ಕಿ (parboiled rice)ಯಲ್ಲಿರುವ ಕಡಿಯಕ್ಕಿ ಪ್ರಮಾಣವನ್ನು ಹಾಲೀ ಇರುವ ಶೇ. 16ರಿಂದ ಶೇ. 5ಕ್ಕೆ ತಗ್ಗಿಸಲಾಗುತ್ತದೆಯಂತೆ. ಇದರಿಂದ ಸಾರ್ವಜನಿಕ ಪಡಿತರ ವಿತರಣಾ ವ್ಯವಸ್ಥೆಯ ಮೂಲಕ ವಿತರಣೆ ಆಗುತ್ತಿರುವ ಅಕ್ಕಿಯ ಗುಣಮಟ್ಟ ಸುಧಾರಣೆ ಆಗಲಿದೆ ಎಂಬುದು ಸರಕಾರದ ತಿರ್ಮಾನ. ಮೂರು ದಶಕಗಳಲ್ಲಿ ಮೊದಲ ಬಾರಿಗೆ ಈ ರೀತಿಯ ತೀರ್ಮಾನವೊಂದನ್ನು ಸರಕಾರ ತೆಗೆದುಕೊಂಡಿದೆ ಎಂದು ಭಾರತ ಸರಕಾರದ ಆಹಾರ ಇಲಾಖೆ ಹೇಳಿದೆ. ಸ್ವತಃ ಆಹಾರ ಸಚಿವ ಪ್ರಹ್ಲಾದ್ ಜೋಷಿ ಈ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಬೆನ್ನು ತಟ್ಟಿಕೊಂಡಿದ್ದಾರೆ. (ಆಧಾರ: PIB Release ID: 2280307)

ಅಂದರೆ, ಇಲ್ಲಿಯ ತನಕ ಪಡಿತರ ವ್ಯವಸ್ಥೆಯಲ್ಲಿ ಜನರಿಗೆ ವಿತರಿಸುತ್ತಿದ್ದುದು ಕಳಪೆ ದರ್ಜೆಯ ಅಕ್ಕಿ ಎಂಬುದನ್ನು ಸ್ವತಃ ಸರಕಾರವೇ ಒಪ್ಪಿಕೊಂಡಂತಾಯಿತು. ಒಟ್ಟು ಪಡಿತರ ವ್ಯವಸ್ಥೆಯೇ ಈವತ್ತಿಗೂ ಒಂದು ಅಧ್ವಾನ. ಫುಡ್ ಕಾರ್ಪೊರೇಷನ್ ಆಫ್ ಇಂಡಿಯಾದ ದಾಸ್ತಾನು ಉಗ್ರಾಣಗಳಲ್ಲಿ ಸಮರ್ಪಕವಾದ ದಾಸ್ತಾನು ವ್ಯವಸ್ಥೆಗಳಿಲ್ಲದೆ 2023-24ರಿಂದ 2026 ಮಾರ್ಚ್ ನಡುವೆ ಹಾಳಾಗಿ ಬಳಕೆಗೆ ಸಿಗದೇ ನಷ್ಟವಾದ ಅಕ್ಕಿಯ ಪ್ರಮಾಣವೇ 20,423 ಮೆಟ್ರಿಕ್ ಟನ್! ಇಷ್ಟಾಗಿಯೂ ಪಡಿತರ ಅಂಗಡಿಗಳಲ್ಲಿ ಸಿಗುವ ‘ಬಳಕೆ ಯೋಗ್ಯ’ ಅಕ್ಕಿಯ ಗುಣಮಟ್ಟದ ಬಗ್ಗೆ ಆಗಾಗ ಮಾತುಗಳು ಕೇಳಿಸುತ್ತಲೇ ಇರುತ್ತವೆ.

ಸರಕಾರಕ್ಕೆ ಬಡವರ ಪಡಿತರ ಅನ್ನದ ಕಳಪೆ ಗುಣಮಟ್ಟ ಯಾಕೆ ಹಠಾತ್ತಾಗಿ ಚುಚ್ಚತೊಡಗಿತು ಎಂದು ಹುಡುಕಿಕೊಂಡು ಹೊರಟರೆ, ಒಂದು ಹೊಸ ಆಟದ ಪೂರ್ಣ ರಂಗೋಲಿ ಚಿತ್ರಣ ಸಿಗುತ್ತದೆ. ಈ ಆಟವನ್ನೇ ನಾನು ತಣ್ಣನೆಯ ಕ್ರೌರ್ಯ ಎಂದು ಕರೆದದ್ದು. ಈ ಕ್ರೌರ್ಯ ಕೇವಲ ಜನರ ವಿರುದ್ಧ ಅಲ್ಲ. ನಮ್ಮ ನೆಲ-ಜಲದ ವಿರುದ್ಧ ಕೂಡ.

ಅಗದೀ ವಿಷಯ ಏನಪ್ಪಾ ಎಂದರೆ, ಸರಕಾರಕ್ಕೆ ಕಡಿಯಕ್ಕಿಯನ್ನು ‘ಸದ್ಬಳಕೆ’ ಮಾಡಿಕೊಳ್ಳುವ ತುರ್ತು ಉಂಟಾಗಿದೆ. ಕನಿಷ್ಠ ಬೆಂಬಲ ಬೆಲೆ ತೆತ್ತು ಸರಕಾರಿ ವ್ಯವಸ್ಥೆ ಸಂಗ್ರಹಿಸಿದ ಭತ್ತವನ್ನು ಸರಕಾರದ ವತಿಯಿಂದ ಅಕ್ಕಿ ಮಾಡಿಸುವ ಮಿಲ್ಲುಗಳಲ್ಲೇ ಇನ್ನು ಕಡಿಯಕ್ಕಿ-ಇಡಿಯಕ್ಕಿ ಎಂದು ವಿಂಗಡಿಸಲಾಗುತ್ತದೆ. ಕಡಿಯಕ್ಕಿಗಳನ್ನು ಇನ್ನು ಮುಂದೆ ಪ್ರತ್ಯೇಕವಾಗಿ HDPE ಬ್ಯಾಗ್‌ಗಳಲ್ಲಿ ಪ್ಯಾಕ್ ಮಾಡಿ, ನೇರವಾಗಿ ಎಥೆನಾಲ್ ಉತ್ಪಾದನೆಗೆ ಒದಗಿಸಲಾಗುತ್ತದಂತೆ! ಹೀಗೆ ಮಾಡುವುದರಿಂದ ಸರಕಾರಕ್ಕೆ ಲಾಗ್ವಾಡಿನ ಬಾಬ್ತು 2,161 ಕೋಟಿ ರೂ. ಪ್ರತೀ ವರ್ಷ ಉಳಿತಾಯ ಆಗಲಿದೆಯಂತೆ! ಜೊತೆಗೆ, ಡಿಸ್ಟಿಲರಿಗಳಿಗೆ ಕಡಿಯಕ್ಕಿ ಮಾರಾಟದಿಂದ ಬರುವ ಹೆಚ್ಚುವರಿ ಆದಾಯ ಸರಕಾರಕ್ಕೆ ಬೋನಸ್!

ವ್ಯಾಪಾರ ಸರಕಾರದ ಕೆಲಸ ಅಲ್ಲ ಎಂದು ಹೇಳುತ್ತಲೇ ತನ್ನ ಕ್ರೋನಿ ವ್ಯಾಪಾರಿಗಳಿಗೆ ಲಾಭ ಸಿಗಬಲ್ಲ ಅನಿವಾರ್ಯ ಸನ್ನಿವೇಶವನ್ನು ಸೃಷ್ಟಿಸುವ ಈ ತಂತ್ರಗಾರಿಕೆ ಬಹಳ ಅದ್ಭುತವಾಗಿದೆ. ಅದರ ಒಂದೊಂದೇ ಮಜಲನ್ನು ವಿವರಿಸುತ್ತಾ ಬರುತ್ತೇನೆ.

ಬ್ರೆಝಿಲ್‌ನಲ್ಲಿ ಈಗಾಗಲೇ ನಾಲ್ಕು ದಶಕಗಳಿಂದ ವ್ಯಾಪಕವಾಗಿ ಬಳಕೆಯಲ್ಲಿರುವ ಇ100 (ಅರ್ಥಾತ್ ಶೇ. 100 ಎಥೆನಾಲ್ ಇಂಧನ) ಉತ್ಪಾದನೆಗೆ ದೇಶದ ಒಳಗೆ ತಮಗೆ ಅವಕಾಶ ನೀಡಬೇಕು ಎಂದು ಭಾರತೀಯ ಸಕ್ಕರೆ ಮತ್ತು ಬಯೋ ಎನರ್ಜಿ ಉತ್ಪಾದಕರ ಸಂಘವು (ISMA) ದೇಶದ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯಕ್ಕೆ ಪತ್ರ ಬರೆದಿದೆ. ಪತ್ರದಲ್ಲಿ ಸಂಸ್ಥೆ ಮಹಾನಿರ್ದೇಶಕ ದೀಪಕ್ ಬಲ್ಲಾನಿ ಅವರು ನೀಡುತ್ತಿರುವ ಕಾರಣವೂ ಸೊಗಸಾಗಿದೆ. ತಮ್ಮ ಡಿಸ್ಟಿಲರಿ ಉದ್ಯಮಗಳು ಈಗ ವಾರ್ಷಿಕ 2,000 ಕೋಟಿ ಲೀಟರ್ ಎಥೆನಾಲ್ ಉತ್ಪಾದನೆ ಸಾಮರ್ಥ್ಯ ಹೊಂದಿವೆ. ಅದನ್ನು ಇ20ಗೆಂದು ಖರೀದಿಸುತ್ತಿರುವ ತೈಲ ಮಾರುಕಟ್ಟೆ ಕಂಪೆನಿಗಳಿಗೆ ಸದ್ಯ ಬೇಕಾಗುವುದು ವಾರ್ಷಿಕ ಕೇವಲ 1,100-1,200 ಕೋಟಿ ಲೀಟರುಗಳು ಮಾತ್ರ. ಹಾಗಾಗಿ ನಮ್ಮಲ್ಲಿ ಎಥೆನಾಲ್ ದೊಡ್ಡ ಪ್ರಮಾಣದಲ್ಲಿ ಮಿಗತೆ ಇದೆ. ಅದನ್ನು ಇ100 ಉತ್ಪಾದನೆಗೆ ಬಳಸುವುದಕ್ಕೆ ಅವಕಾಶ ನೀಡಬೇಕು ಎಂದು ಪತ್ರ ಸರಕಾರವನ್ನು ಒತ್ತಾಯಿಸುತ್ತದೆ.

ಭಾರತ ಸರಕಾರವು ಮುಕ್ತ ಮಾರುಕಟ್ಟೆ ಮಾರಾಟ ಯೋಜನೆ (OMSS) ಅಡಿಯಲ್ಲಿ ತನ್ನ ಬಳಿ ದಾಸ್ತಾನಿರುವ ಅಕ್ಕಿ ಮಾರಾಟಕ್ಕೆ ಹೊಸ ನೀತಿಯನ್ನು ಪ್ರಕಟಿಸಿದೆ. ಖಾಸಗಿಯವರಿಗೆ ಇ-ಆಕ್ಷನ್ ಮೂಲಕ ಒದಗಿಸಲಾಗುವ ಶೇ. 10 ಕಡಿಯಕ್ಕಿ ಇರುವ ಅಕ್ಕಿಯ ಬೆಲೆ ನವೆಂಬರ್‌ನಿಂದ ಕೆಜಿಗೆ 31.80 ರೂ. ಎಂದು ನಿಗದಿಯಾಗಿದ್ದರೆ, ರಾಜ್ಯ ಸರಕಾರಗಳಿಗೆ ಪಡಿತರಕ್ಕೆಂದು ಒದಗಿಸುವ ಅಕ್ಕಿಯ ಬೆಲೆ ನವೆಂಬರ್‌ನಿಂದ ಕೆಜಿಗೆ 23.90 ರೂ. ಎಂದು ನಿಗದಿಯಾಗಿದೆ. ಎಥೆನಾಲ್ ಉತ್ಪಾದನೆಗೆ ಬಳಕೆ ಆಗುವ ಅಕ್ಕಿಗೂ ಇದೇ ದರ ಅನ್ವಯ ಆಗಲಿದೆ. ಈಗ ಹೊಸದಾಗಿ ಪ್ರತ್ಯೇಕ ಪ್ಯಾಕ್ ಆಗಿ ಬರಲಿರುವ ಶೇ. 100 ಕಡಿಯಕ್ಕಿಗೆ, ಎಥೆನಾಲ್ ಉತ್ಪಾದಕರಿಗೆಂದು ವಿಶೇಷವಾಗಿ ಕನಿಷ್ಠ ಬೆಲೆ ನವೆಂಬರ್‌ನಿಂದ ಕೆಜಿಗೆ 20 ರೂ. ಎಂದು ನಿಗದಿ ಆಗಿದೆ. ಹೀಗೆ ಎಥೆನಾಲ್ ಉತ್ಪಾದನೆಗೆ ಹೋಗಬೇಕಾದ ಅಕ್ಕಿಯ ಪ್ರಮಾಣ ಎಷ್ಟೆಂಬುದನ್ನು ಗೃಹಸಚಿವರ ನೇತೃತ್ವದ ಸಚಿವ ಸಮಿತಿ ನಿರ್ಧರಿಸಲಿದೆಯಂತೆ. ಅಂದರೆ ಒಟ್ಟಿನಲ್ಲಿ, ಉಣ್ಣುವ ಅನ್ನಕ್ಕೆ ಬಳಕೆ ಆಗುವ ಅಕ್ಕಿಗಿಂತ ಎಥೆನಾಲ್ ಉತ್ಪಾದನೆಗೆ ಬಳಕೆ ಆಗುವ ಅಕ್ಕಿಯ ಬೆಲೆ ಕಡಿಮೆ.

2025-26ನೇ ಸಾಲಿನಲ್ಲಿ ಭಾರತವು 15.40 ಕೋಟಿ ಮೆಟ್ರಿಕ್ ಟನ್ ಅಕ್ಕಿ ಉತ್ಪಾದಿಸುವ ಮೂಲಕ ಚೀನಾವನ್ನು ಹಿಂದಿಕ್ಕಿದೆ. 2.45 ಕೋಟಿ ಮೆಟ್ರಿಕ್ ಟನ್ ಅಕ್ಕಿಯನ್ನು ರಫ್ತು ಮಾಡಿದೆ. ಜಗತ್ತಿನ ಅಕ್ಕಿ ಮಾರುಕಟ್ಟೆ ಲೇವಾದೇವಿಯಲ್ಲಿ ಈಗ ಶೇ. 40 ಪಾಲು ಭಾರತದ್ದು. ನಮ್ಮಲ್ಲಿ ಉತ್ಪಾದನೆ ಆಗುವ ಅಕ್ಕಿಯ ಮೂರನೇ ಎರಡು ಪಾಲು PMGKAYಅಡಿಯಲ್ಲಿ ಪಡಿತರವಾಗಿ ವಿತರಣೆ ಆಗುತ್ತದೆ; ಅಷ್ಟಾಗಿಯೂ ಅಕ್ಕಿ ನಮ್ಮಲ್ಲಿ ಮಿಕ್ಕಿ ಉಳಿಯುತ್ತದೆ. ಈ ದಾಸ್ತಾನು ಹೊರೆ ತಗ್ಗಿಸಲು ಅಕ್ಕಿಯನ್ನು ಎಥೆನಾಲ್ ಉತ್ಪಾದನೆಗೆ ನೀಡಲಾಗುತ್ತಿದೆ ಎಂದು ಸರಕಾರ ಹೇಳಿಕೊಳ್ಳುತ್ತಿದೆ. 2025-26ರಲ್ಲಿ ಭಾರತ ಅಂದಾಜು 50 ಲಕ್ಷ ಮೆಟ್ರಿಕ್ ಟನ್ ಅಕ್ಕಿಯನ್ನು ಎಥೆನಾಲ್ ಉತ್ಪಾದನೆಗೆ ಒದಗಿಸಿದೆ.

ಈ ಹಿಂದೆ, ಇದೇ ಅಂಕಣದಲ್ಲಿ ವಿವರಿಸಿರುವಂತೆ, ಅಕ್ಕಿ ಅತ್ಯಂತ ಹೆಚ್ಚು ನೀರು ಬೇಡುವ ಬೆಳೆಯಾಗಿದ್ದು, ಒಂದು ಕೆಜಿ ಅಕ್ಕಿ ಉತ್ಪಾದನೆಗೆ 4,000 ಲೀಟರ್ ನೀರು ಅಗತ್ಯವಿದೆ. ಇದಲ್ಲದೆ ಸರಕಾರ ಅಕ್ಕಿ ಉತ್ಪಾದನೆಗೆ ಕನಿಷ್ಠ ಬೆಂಬಲ ಬೆಲೆ, ರೈತರಿಗೆ ಉಚಿತ ವಿದ್ಯುತ್, ಕೈಗೆಟಕುವ ಬೆಲೆಯಲ್ಲಿ ರಸಗೊಬ್ಬರ ಎಂದು ಒಟ್ಟು ಪ್ರತೀ ಹೆಕ್ಟೇರ್‌ಗೆ, ಸುಮಾರು 38,973 ರೂ.ಗಳ ಸಬ್ಸಿಡಿ ನೀಡುತ್ತದೆ (2023-24ರ ಅಂದಾಜು) ಎಂದು ಅಧ್ಯಯನವೊಂದು ಕಂಡುಕೊಂಡಿದೆ.

ಈ ನಾಲ್ಕೂ ರಂಗೋಲಿ ಚುಕ್ಕಿಗಳನ್ನು ಒಟ್ಟಿಗಿರಿಸಿಕೊಂಡು, ಆರಂಭದಲ್ಲಿ ವಿವರಿಸಿದ ಕಡಿಯಕ್ಕಿ-ಇಡಿಯಕ್ಕಿಗಳ ವೃತ್ತಾಂತವನ್ನು ಮತ್ತೊಮ್ಮೆ ಪರಿಶೀಲಿಸಿ. ಆಗ ಮೂಡುವ ಚಿತ್ರ ಏನೆಂದು ಕಂಡುಕೊಳ್ಳಿ. ನೀತ್ಯಾತ್ಮಕವಾಗಿ ದಿವಾಳಿ ಆಗಿರುವ ಒಂದು ಸರಕಾರ ಮಾತ್ರ ಈ ರೀತಿ ಹಾಡಹಗಲೇ ತನ್ನ ಕ್ರೋನಿಗಳ ಪರ ನಿಲುವು ತಳೆಯುವುದಕ್ಕೆ ಸಾಧ್ಯ.

ಜಗತ್ತೆಲ್ಲ ಅಕ್ಕಿ ಉತ್ಪಾದನೆಯನ್ನು ಕನಿಷ್ಠ ಮಟ್ಟಕ್ಕಿರಿಸಿಕೊಂಡು, ನೀರನ್ನು ಪರೋಕ್ಷವಾಗಿ ಆಮದು ಮಾಡಿಕೊಳ್ಳುವ ಮೂಲಕ (virtual water import) ತಮ್ಮ ದೇಶದ ಜಲಸಂಪನ್ಮೂಲಗಳನ್ನು ಕಾಪಾಡಿಕೊಳ್ಳುತ್ತಿದ್ದರೆ, ಭಾರತ ಮಾತ್ರ ಯಾವುದೇ ದೂರಗಾಮಿ ಯೋಜನೆಗಳಿಲ್ಲದೆ ಮಿಗತೆ ಆಗುವಷ್ಟು ಅಕ್ಕಿ ಉತ್ಪಾದಿಸಿ, ಅಕ್ಕಿ ರಫ್ತಿಗೆ ಹಾತೊರೆಯುತ್ತಿದೆ. ಮಾತ್ರವಲ್ಲದೆ, ಸದ್ಯದ ಸ್ಥಿತಿಯಲ್ಲಿ ಅಗತ್ಯಕ್ಕಿಂತ ಹೆಚ್ಚು ಉತ್ಪಾದನೆ ಆಗುತ್ತಿರುವ ಎಥೆನಾಲ್ ಅನ್ನು ಇನ್ನಷ್ಟು ಹೆಚ್ಚು ಪ್ರಮಾಣದಲ್ಲಿ ಉತ್ಪಾದಿಸಲು ಅನುಕೂಲ ಆಗುವಂತೆ, ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದಿಸಿರುವ ಅಕ್ಕಿಯನ್ನು ಒದಗಿಸುವುದಕ್ಕೆ ಆಸ್ಥೆಯಿಂದ ವ್ಯವಸ್ಥೆ ಮಾಡುತ್ತಿದೆ. ಈ ಮೂಲಕ ಭಾರತ ಸರಕಾರ ತನ್ನ ಕಾಲಿಗೆ ತಾನೇ ಗುಂಡು ಹಾರಿಸಿಕೊಳ್ಳುತ್ತಿದೆ.

Tags

brokenriceE20
share
ರಾಜಾರಾಂ ತಲ್ಲೂರು
ರಾಜಾರಾಂ ತಲ್ಲೂರು
Next Story
X