Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಪಿಟ್ಕಾಯಣ
  5. ಸರ್ಟಿಫೈಡ್ ಮೀನು ತಿನ್ನಿಸುವ ಹುನ್ನಾರ!

ಸರ್ಟಿಫೈಡ್ ಮೀನು ತಿನ್ನಿಸುವ ಹುನ್ನಾರ!

ರಾಜಾರಾಂ ತಲ್ಲೂರುರಾಜಾರಾಂ ತಲ್ಲೂರು28 March 2026 12:16 PM IST
share
ಸರ್ಟಿಫೈಡ್ ಮೀನು ತಿನ್ನಿಸುವ ಹುನ್ನಾರ!

ಸೆನ್ಸರ್ಗಳು, QR ಕೋಡ್ಗಳು, ಜಿಪಿಎಸ್ಗಳನ್ನಾಧರಿಸಿ ನಡೆಯುವ ಈ ಟ್ರೇಸೆಬಿಲಿಟಿ ವ್ಯವಸ್ಥೆಯ ಪ್ರತೀ ಹಂತದಲ್ಲಿ ಮೂಲ ಸೌಕರ್ಯಗಳನ್ನು ಹೊಂದುವುದು, ನಿರ್ವಹಿಸುವುದು, ಸಾಮಾಜಿಕ-ಆರ್ಥಿಕ ತಾರತಮ್ಯಗಳು, ಪ್ರಾದೇಶಿಕ ಭಿನ್ನತೆಗಳು... ಇವೆಲ್ಲವುಗಳ ನಿರ್ವಹಣೆ ದೇಶದೊಳಗಿನ ಮೀನುಗಾರಿಕೆಗೆ ದೊಡ್ಡ ಸವಾಲಾಗಲಿದೆ. ಈ ಸವಲತ್ತುಗಳನ್ನು ಹೊಂದುವ, ನಿಭಾಯಿಸುವ ತಾಕತ್ತು ಇರುವವರು ಮಾತ್ರ ಮೀನುಗಾರರಾಗಿ ಉಳಿಯಲಿದ್ದಾರೆ.

ಸೂಟು ಬೂಟಿನ ರೈತರ ರೀತಿಯಲ್ಲೇ ಸೂಟುಬೂಟಿನ ಮೀನುಗಾರರನ್ನು ಸಿದ್ಧಪಡಿಸಲು ಭಾರತ ಸರಕಾರ ಸನ್ನದ್ಧವಾಗಿದೆ. ಸದ್ಯಕ್ಕೆ ಲಭ್ಯವಿರುವ ಮಾಹಿತಿಗಳ ಪ್ರಕಾರ, ನ್ಯಾಷನಲ್ ಫ್ರೇಮ್ವರ್ಕ್ ಆನ್ ಟ್ರೇಸೆಬಿಲಿಟಿ ಇನ್ ಫಿಶರೀಸ್ ಆಂಡ್ ಅಕ್ವಾಕಲ್ಚರ್-2025 ಎಂಬ ಭಾರತ ಸರಕಾರದ ನೀತ್ಯಾತ್ಮಕ ಚೌಕಟ್ಟು, ತಾನು ಯೋಜಿಸಿಕೊಂಡಿರುವ ಸಮಯಾವಧಿಯ ಒಳಗೆ ಅನುಷ್ಠಾನಗೊಳ್ಳುವುದು ಸಾಧ್ಯವಾದರೆ, 2026ರ ಅಂತ್ಯದ ಒಳಗೆ ನಾವೆಲ್ಲ ಸರ್ಟಿಫೈಡ್, ಲೇಬಲ್ಡ್ ಮೀನುಗಳನ್ನೇ ತಿನ್ನಲಿದ್ದೇವೆ! ಸಾಂಪ್ರದಾಯಿಕ ಬಡ ಮೀನುಗಾರರನ್ನು ಸಮುದ್ರದಿಂದ ದೂರ ಕಳುಹಿಸುವ ಮಹಾಯೋಜನೆಯ ಭಾಗವಾಗಿಯೇ ಈ ‘ಟ್ರೇಸೆಬಿಲಿಟಿ’ ತತ್ವ ಮುನ್ನೆಲೆಗೆ ಬರುತ್ತಿದೆ ಎಂಬುದರಲ್ಲಿ ಯಾವುದೇ ಸಂಶಯ ಉಳಿದಿಲ್ಲ.

ತಾವು ತಿನ್ನುತ್ತಿರುವ ಮೀನನ್ನು ಜವಾಬ್ದಾರಿಯುತವಾದ, ಪರಿಸರ ಸಹ್ಯವಾದ ವಿಧಾನದಲ್ಲಿ ಹಿಡಿಯಲಾಗಿದೆ ಮತ್ತು ಆ ಮೀನನ್ನು ಹಿಡಿದ ಸಂಸ್ಥೆಯು ನೈಸರ್ಗಿಕ ಸಂಪನ್ಮೂಲಗಳನ್ನು ಪರಿಸರಕ್ಕೆ ಹಾನಿ ಆಗದಂತೆ ಬಳಕೆ ಮಾಡಿದೆ ಎಂಬುದನ್ನು ಆ ಮೀನು ತಿನ್ನುವ ಗ್ರಾಹಕರಿಗೆ ತಿಳಿಸುವ ಮಾರುಕಟ್ಟೆ ಪರಿಕರವೇ ಎಕೊ ಲೇಬಲಿಂಗ್. ಇಂತಹ ಪ್ರಮಾಣೀಕರಣಗಳನ್ನು ಒದಗಿಸುವ ವ್ಯವಸ್ಥೆಯೇ ಕ್ಯಾಚ್ ಸರ್ಟಿಫಿಕೇಷನ್. ವಿಶ್ವಸಂಸ್ಥೆಯ ಸಾಗರ ಕಾನೂನುಗಳ ಸಮಾವೇಶ (UNCLOS) 1982ರಲ್ಲಿ ಸ್ವೀಕರಿಸಿರುವ ನಿರ್ಣಯದ ಅಡಿಯಲ್ಲಿ ಮೀನು ಮತ್ತಿತರ ಜಲ ಸಂಪನ್ಮೂಲಗಳ ಜವಾಬ್ದಾರಿಯುತ ಬಳಕೆಯ ಬಗ್ಗೆ ಹೇಳಲಾಗಿದೆ. 1995ರಲ್ಲಿ ವಿಶ್ವ ಕೃಷಿ ಮತ್ತು ಆಹಾರ ಸಂಸ್ಥೆಯು (FAO) ತನ್ನ ೨೮ನೇ ವಾರ್ಷಿಕ ಸಭೆಯಲ್ಲಿ ಜವಾಬ್ದಾರಿಯುತ ಮೀನುಗಾರಿಕೆಯ ಸಂಹಿತೆಯನ್ನು ಅಳವಡಿಸಿಕೊಂಡಿದ್ದು, ಅಲ್ಲಿಂದೀಚೆಗೆ ಹಲವಾರು ನಿಯಮಗಳು ಈ ನಿಟ್ಟಿನಲ್ಲಿ ರೂಪುಗೊಳ್ಳುತ್ತಾ ಬಂದಿವೆ.

ಈ ಅಂತರ್ರಾಷ್ಟ್ರೀಯ ಮಾರ್ಗದರ್ಶಿಗಳಿಗೆ ಅನುಗುಣವಾಗಿ ಭಾರತ ಸರಕಾರವು ಪ್ರಧಾನ ಮಂತ್ರಿ ಮತ್ಸ್ಯ ಸಂಪದಾ ಯೋಜನೆ (PMMSY) ಅಡಿಯಲ್ಲಿ ಸುಸ್ಥಿರ ಮೀನುಗಾರಿಕೆಗಾಗಿ National Framework on Traceability in Fisheries and Aquaculture 2025 ಅನ್ನು ಬಿಡುಗಡೆಗೊಳಿಸಿದ್ದು, 2026ರ ಕೊನೆಯ ಒಳಗೆ ಈ ನೀತ್ಯಾತ್ಮಕ ಚೌಕಟ್ಟನ್ನು ಆರು ಹಂತಗಳ ಯೋಜನೆಯ ಮೂಲಕ ಕಾರ್ಯರೂಪಕ್ಕೆ ತರಲು ನಿರ್ಧರಿಸಿದೆ. ಇದಕ್ಕೆ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಅಡಿ ಬರುವ ಸಾಗರೋತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರ (MPEDA)ವನ್ನು ನೋಡಲ್ ಏಜೆನ್ಸಿ ಆಗಿ ಗುರುತಿಸಿದ್ದು, ಅದು ಬ್ರ್ಯಾಂಡ್ ಪ್ರಮೋಷನ್, ಆಮದು-ರಫ್ತುದಾರರ ನೋಂದಣಿ, ರಫ್ತಿಗೆ ಅಗತ್ಯವಿರುವ ವಿವಿಧ ರೀತಿಯ ಕ್ಯಾಚ್ ಸರ್ಟಿಫಿಕೇಟ್ಗಳನ್ನು ಒದಗಿಸಲಿದೆ ಎಂದು ಲೋಕಸಭೆಯಲ್ಲಿ ವಿ. ವೈದ್ಯಲಿಂಗಂ (ಕಾಂಗ್ರೆಸ್) ಅವರಿಗೆ, ಭಾರತದ ಮೀನುಗಾರಿಕಾ ಸಚಿವ ರಾಜೀವ್ ರಂಜನ್ ಸಿಂಗ್ ಉತ್ತರಿಸಿದ್ದಾರೆ (ಚುಕ್ಕೆ ರಹಿತ ಪ್ರಶ್ನೆ 4055; ದಿನಾಂಕ 17-03-2026).

ಸಾಗರ ಮತ್ತು ಒಳನಾಡು ಮೀನುಗಾರಿಕೆಗಳೆರಡಕ್ಕೂ ಸಂಬಂಧಿಸಿದಂತೆ ಮೀನುಗಾರಿಕಾ ದೋಣಿಗಳ ನೋಂದಣಿ, ನಿಗಾ, ತಪಾಸಣೆ, ಪ್ರಮಾಣೀಕರಣ, ಸಂಸ್ಕರಣೆ, ದಾಸ್ತಾನು, ರಫ್ತು, ಆಂತರಿಕ ಮಾರುಕಟ್ಟೆ... ಹೀಗೆ ಪ್ರತಿಯೊಂದು ಹಂತದಲ್ಲೂ ಸಾಗರೋತ್ಪನ್ನಗಳ ಶುಚಿತ್ವ, ಆಹಾರದ ಗುಣಮಟ್ಟಗಳ ನಿಯಂತ್ರಣಕ್ಕೆ ಡಿಜಿಟಲ್ ವ್ಯವಸ್ಥೆಯೊಂದರ ಮೂಲಕ ಮ್ಯಾಪಿಂಗ್ ವ್ಯವಸ್ಥೆ ಮಾಡುವುದು; ಮೀನು ಹಿಡಿದ ಜಾಗ, ವಿಧಾನಗಳಿಂದ ಆರಂಭಿಸಿ, ಕೊನೆಯ ಗ್ರಾಹಕರ ತಟ್ಟೆಗೆ ತಲುಪುವ ತನಕವೂ ಪ್ರತೀ ಹಂತದಲ್ಲಿ ‘ಟ್ರೇಸೆಬಿಲಿಟಿ’ ಸಾಧ್ಯಗೊಳಿಸುವ ಮೂಲಕ ಅಂತರ್ರಾಷ್ಟ್ರೀಯ ಮಾರುಕಟ್ಟೆಯಲ್ಲಿ ನಂಬಿಗಸ್ಥಿಕೆ ಗಳಿಸಿಕೊಳ್ಳುವುದು, ಈ ಮಹಾ ಯೋಜನೆಯ ಸ್ಥೂಲ ಉದ್ದೇಶ.

ಹೊರನೋಟಕ್ಕೆ ಇದೆಲ್ಲ ಬಹಳ ಸುಂದರ, ಸುಸಜ್ಜಿತ ವ್ಯವಸ್ಥೆ ಎಂದು ಕಾಣಿಸುತ್ತದೆಯಾದರೂ, ಈ ವ್ಯವಸ್ಥೆಯ ಮೊದಲ ಬಲಿಪಶುಗಳು - ಸಾಂಪ್ರದಾಯಿಕ ಮೀನುಗಾರರು. ಭಾರತದ ಮೀನುಗಾರಿಕಾ ವಲಯ ಎಂದರೆ ಅದು ಸಣ್ಣ, ಅತಿಸಣ್ಣ ಮತ್ತು ಸಾಂಪ್ರದಾಯಿಕ ಮೀನುಗಾರರು. ಕಾರ್ಪೊರೇಟ್ ಮೀನುಗಾರಿಕೆ ನಮಗೆ ತೀರಾ ಹೊಸದು. ಈಗಾಗಲೇ ಸಮುದ್ರ ತೀರದಿಂದ ಸುಯೋಜಿತವಾಗಿ ಮತ್ತು ಹಂತ-ಹಂತವಾಗಿ ಎತ್ತಂಗಡಿ ಆಗುತ್ತಿರುವ ಈ ಸಾಂಪ್ರದಾಯಿಕ ಮೀನುಗಾರರು ಇಂತಹ ಆಧುನಿಕ ಮಾರುಕಟ್ಟೆ ನಿಯಮಗಳಿಂದ ಇನ್ನಷ್ಟು ಸಂಕಷ್ಟಕ್ಕೀಡಾಗಲಿದ್ದಾರೆ. ತಾವು ಹಿಡಿದ ಮೀನುಗಳಿಗೆ ಮೊಬೈಲ್ ಅಪ್ಲಿಕೇಷನ್ಗಳನ್ನು ಬಳಸಿ ಅಥವಾ ಬೇರೆ ಡಿಜಿಟಲ್ ಪರಿಕರಗಳ ಮೂಲಕ ಆನ್ಲೈನ್ ಫಾರ್ಮ್ಗಳನ್ನು ಭರ್ತಿ ಮಾಡಿ, ಡಿಜಿಟಲ್ ದಾಖಲೆಗಳನ್ನು ಶೇಖರಿಸಿಟ್ಟುಕೊಳ್ಳಿ, ಹಿಡಿದ ಮೀನುಗಳ ಬಗ್ಗೆ ಪ್ರಮಾಣೀಕರಣ (ಕ್ಯಾಚ್ ಸರ್ಟಿಫಿಕೇಟ್) ಪಡೆಯಲು 1,700-4,000 ರೂ.ಗಳಷ್ಟು ವೆಚ್ಚ ಮಾಡಿ, ತಪಾಸಣಾ ವ್ಯವಸ್ಥೆಗೆ ಹಣಕೊಡಿ, ಜಿಪಿಎಸ್ ಇತ್ಯಾದಿ ವವಸ್ಥೆ ಏರ್ಪಡಿಸಿಕೊಳ್ಳಿ ಎಂದೆಲ್ಲ ಪೀಡಿಸುವ ಸ್ಥಿತಿ ಬಂದರೆ ಅವರು ಸಹಜವಾಗಿಯೇ ಈ ರಗಳೆಗಳು ಬೇಡವೆಂದು ಕೈಚೆಲ್ಲಲಿದ್ದಾರೆ ಎಂಬುದೇ ಈ ಯೋಜನೆಗಳ ಹಿಂದಿರುವ ಚಿಂತನೆ ಎಂದು ಅನ್ನಿಸುತ್ತದೆ. ಸರಕಾರ ತನ್ನ ನೀತ್ಯಾತ್ಮಕ ಚೌಕಟ್ಟಿನ ದಾಖಲೆಯಲ್ಲಿ ಇಂತಹ ಬಡಪಾಯಿಗಳನ್ನೆಲ್ಲ ಒಳಗೊಳ್ಳುವ ಮಾತುಗಳನ್ನು ಹೇಳಿದೆಯಾದರೂ, ಇದು ಬಾಯುಪಚಾರಕ್ಕಿಂತ ಮೇಲಿನದಲ್ಲ ಎಂದು ಅನ್ನಿಸುತ್ತದೆ.

MPEDAದ ವಾರ್ಷಿಕ ವರದಿಯ ಪ್ರಕಾರ, ಅದು 2024-25ನೇ ಸಾಲಿನಲ್ಲಿ ಯುರೋಪಿಯನ್ ಒಕ್ಕೂಟಕ್ಕೆ ರಫ್ತಿಗಾಗಿ 9,728 ಕ್ಯಾಚ್ ಸರ್ಟಿಫಿಕೇಟ್ಗಳನ್ನು, ಯುರೋಪಿಯನೇತರ ದೇಶಗಳಿಗೆ ರಫ್ತಿಗಾಗಿ 931 ಕ್ಯಾಚ್ ಸರ್ಟಿಫಿಕೇಟ್ಗಳನ್ನೂ ವಿತರಿಸಿದೆ. ಜಪಾನಿಗೆ ರಫ್ತಿಗಾಗಿ 175 ಜಪಾನ್ ಕ್ಯಾಚ್ ಸರ್ಟಿಫಿಕೇಟ್ಗಳನ್ನು, ಅಮೆರಿಕಕ್ಕೆ ರಫ್ತಿಗಾಗಿ 20,531ರಷ್ಟು DS2031 ಸರ್ಟಿಫಿಕೇಟುಗಳನ್ನು ಮತ್ತಿತರ ಹಲವು ಸರ್ಟಿಫಿಕೇಟ್ಗಳನ್ನು ವಿತರಿಸಿರುವುದಾಗಿ ವರದಿ ಹೇಳುತ್ತಿದೆ. ಇದರಲ್ಲಿ ಪಾಲ್ಗೊಂಡ ಸಣ್ಣ-ಸಾಂಪ್ರದಾಯಿಕ ಮೀನುಗಾರರ ಪ್ರಮಾಣ ಎಷ್ಟೆಂಬುದು ಸ್ಪಷ್ಟವಿಲ್ಲ.

ಸೆನ್ಸರ್ಗಳು, QR ಕೋಡ್ಗಳು, ಜಿಪಿಎಸ್ಗಳನ್ನಾಧರಿಸಿ ನಡೆಯುವ ಈ ಟ್ರೇಸೆಬಿಲಿಟಿ ವ್ಯವಸ್ಥೆಯ ಪ್ರತೀ ಹಂತದಲ್ಲಿ ಮೂಲ ಸೌಕರ್ಯಗಳನ್ನು ಹೊಂದುವುದು, ನಿರ್ವಹಿಸುವುದು, ಸಾಮಾಜಿಕ-ಆರ್ಥಿಕ ತಾರತಮ್ಯಗಳು, ಪ್ರಾದೇಶಿಕ ಭಿನ್ನತೆಗಳು... ಇವೆಲ್ಲವುಗಳ ನಿರ್ವಹಣೆ ದೇಶದೊಳಗಿನ ಮೀನುಗಾರಿಕೆಗೆ ದೊಡ್ಡ ಸವಾಲಾಗಲಿದೆ. ಈ ಸವಲತ್ತುಗಳನ್ನು ಹೊಂದುವ, ನಿಭಾಯಿಸುವ ತಾಕತ್ತು ಇರುವವರು ಮಾತ್ರ ಮೀನುಗಾರರಾಗಿ ಉಳಿಯಲಿದ್ದಾರೆ.

ಈಗಾಗಲೇ ಕ್ಯಾಚ್ ಸರ್ಟಿಫಿಕೇಟ್ ಪಡೆದು ರಫ್ತಾಗುತ್ತಿರುವ ಸಾಗರೋತ್ಪನ್ನಗಳು ಕೂಡ, ಅಕ್ರಮ ಆಳ ಸಮುದ್ರ ಮೀನುಗಾರಿಕೆ, ಲೈಟ್ ಫಿಷಿಂಗ್ಗಳಂತಹ ಕಳ್ಳಾಟಿಕೆಗಳ ಭಾಗವಾಗಿದ್ದು, ಸುಭಗರ ವೇಷದಲ್ಲಿ ರಫ್ತಾಗಿ ತಮ್ಮ ಗಮ್ಯಗಳನ್ನು ಮುಟ್ಟುತ್ತಿವೆ ಎಂದಾದರೆ, ಈ ಸರ್ಟಿಫಿಕೇಷನ್ ವ್ಯವಸ್ಥೆಯ ಪಾರದರ್ಶಕತೆಯ ಬಗ್ಗೆ ಕೂಡ ಪ್ರಶ್ನೆಗಳನ್ನು ಎತ್ತಬೇಕಾಗುತ್ತದೆ.

ಸಾಂಪ್ರದಾಯಿಕ ಮೀನುಗಾರರು ಮಾತ್ರವಲ್ಲದೆ ಕಾರ್ಪೊರೇಟ್ ವಲಯ ದಲ್ಲೂ ಈ ಟ್ರೇಸೆಬಿಲಿಟಿ, ಸರ್ಟಿಫಿಕೇಷನ್ ವ್ಯವಸ್ಥೆಯ ಬಗ್ಗೆ ಪೂರ್ಣ ನಂಬಿಕೆ ಇದ್ದಂತಿಲ್ಲ. ಪಾರದರ್ಶಕತೆ, ಆಂತರಿಕ ಮಾರುಕಟ್ಟೆ ಯನ್ನು ರಕ್ಷಿಸಿಕೊಳ್ಳುವ ಹುನ್ನಾರ, ದೊಡ್ಡ-ಸಣ್ಣ ಸರಬರಾಜುದಾರರ ನಡುವೆ ತಾರತಮ್ಯದ ಸಮರ, ತಂತ್ರಜ್ಞಾನ ಲಭ್ಯತೆ ಮೂಲದ ಮಾರುಕಟ್ಟೆ ತಾರತಮ್ಯ, ಅಂತರ್ರಾಷ್ಟ್ರೀಯ ಮಾನದಂಡಗಳ ಸುಧಾರಣೆ-ಏಕರೂಪತೆ ಇನ್ನೂ ಪೂರ್ಣಪ್ರಮಾಣದಲ್ಲಿ ಸಾಧ್ಯವಾಗದಿರುವುದೇ ಮೊದಲಾದ ಸವಾಲುಗಳ ಚರ್ಚೆ ನಡೆದೇ ಇದೆ.

ಇವೆಲ್ಲವಕ್ಕಿಂತ ವೈರುಧ್ಯದ ಇನ್ನೊಂದು ಸಂಗತಿಯೂ ಇದೆ. ಭಾರತದಲ್ಲಿ, ಅದರಲ್ಲೂ ಕರ್ನಾಟಕದ ಕರಾವಳಿಯಲ್ಲಿ ಕಳೆದೊಂದು ದಶಕದಿಂದೀಚೆಗೆ ಅಕ್ರಮವಾಗಿ ನಡೆಯುವ ಆಳಸಮುದ್ರ ಮೀನುಗಾರಿಕೆ, ಲೈಟ್ ಫಿಷಿಂಗ್ ಇತ್ಯಾದಿ ಪರಿಸರ ಹಾನಿಕಾರಕ ಚಟುವಟಿಕೆಗಳ ಕಾರಣದಿಂದಾಗಿ ಮೀನಿಗೆ ಕ್ಷಾಮ ತಲೆದೋರಿದೆ. ಮೀನುಗಳ ಸಂತಾನೋತ್ಪತ್ತಿ ಅವಧಿಯಲ್ಲಿ ಸಾಂಪ್ರದಾಯಿಕ ಮೀನುಗಾರರು ರಜೆಯಲ್ಲಿದ್ದರೆ, ಈ ಆಳಸಮುದ್ರ ಮೀನುಗಾರಿಕೆ ಅವ್ಯಾಹತವಾಗಿ ನಡೆದು ಎಳೆಯ ಮೀನುಗಳನ್ನು ಕೂಡ ಬಿಡದೆ ಹಿಡಿಯಲಾಗುತ್ತಿದೆ ಹಾಗೂ ಅವನ್ನೆಲ್ಲ ಫಿಷ್ ಮೀಲ್ ಉತ್ಪಾದನೆಗೆ ಬಳಸಲಾಗುತ್ತಿದೆ ಎಂಬ ಆಪಾದನೆಗಳಿವೆ.

ಕಳೆದ ಐದಾರು ವರ್ಷಗಳಲ್ಲಿ ಭಾರತದ ಸಾಗರೋತ್ಪನ್ನ ರಫ್ತು ಗಮನಾರ್ಹವಾಗಿ ಹೆಚ್ಚಿದೆ. 2020-21ರಲ್ಲಿ 11.49 ಲಕ್ಷ ಮೆಟ್ರಿಕ್ ಟನ್ (43,720.98 ಕೋಟಿ ರೂ.) ಇದ್ದ ಈ ರಫ್ತು 2024-25ರಲ್ಲಿ 16.98 ಲಕ್ಷ ಮೆಟ್ರಿಕ್ ಟನ್ (62,408.45 ಕೋಟಿ ರೂ.)ಗಳಿಗೆ ಏರಿದೆ. ಮೀನಿನ ಕ್ಷಾಮ ಇದೆ ಎಂದು ಹೇಳುತ್ತಲೇ, ಮೀನುಗಾರಿಕೆಯು ಆಂತರಿಕ ಬಳಕೆಯನ್ನು ಕಡೆಗಣಿಸುತ್ತಿರುವುದು ಮತ್ತು ಅದೇ ವೇಳೆಗೆ ರಫ್ತು ಪ್ರಮಾಣ ಹೆಚ್ಚುತ್ತಿರುವುದು ಮೀನುಗಾರಿಕೆಯು ಕಾರ್ಪೊರೇಟೀಕರಣಗೊಳ್ಳುತ್ತಿರುವುದರ ಮತ್ತು ರಫ್ತನ್ನು ಹೆಚ್ಚುಹೆಚ್ಚು ಅವಲಂಬಿಸುತ್ತಿರುವುದರ ಸೂಚನೆ.

ಕರಾವಳಿಯ ಉಣ್ಣುವ ಬಟ್ಟಲಿನ ಭಾಗವಾಗಿದ್ದ ಮೀನುಗಾರಿಕೆಯು ಕಾರ್ಪೊರೇಟ್ ವ್ಯವಹಾರವಾಗಿ ಬದಲಾಗುತ್ತಿದ್ದು, ಸಹಜವಾಗಿಯೇ ಬ್ರ್ಯಾಂಡಿಂಗ್, ಸರ್ಟಿಫಿಕೇಷನ್, ಟ್ರೇಸೆಬಿಲಿಟಿ...ಇವೆಲ್ಲವೂ ತಲೆ ಎತ್ತತೊಡಗಿವೆ ಹಾಗೂ ಸಾಂಪ್ರದಾಯಿಕ ಮೀನುಗಾರರು ಇಲ್ಲಿ ಕೊನೆಗೆ ಕಣ್ತುಂಬಿಕೊಳ್ಳುವ ಪ್ರೇಕ್ಷಕ ಮಾತ್ರ ಆಗಿ ಉಳಿಯುತ್ತಾರೆ. ತಂತ್ರಜ್ಞಾನ ಆಧರಿತ ಮೀನುಗಾರಿಕೆಯ ಯಾಂತ್ರಿಕ/ತಾಂತ್ರಿಕ ಕೌಶಲಗಳನ್ನು ಸಾಂಪ್ರದಾಯಿಕ ಮೀನುಗಾರರಿಗೆ ವರ್ಗಾಯಿಸುವಲ್ಲಿ ಗಂಭೀರ ಪ್ರಯತ್ನಗಳು ಆಗಿರದಿರುವುದರಿಂದ, ಇಲ್ಲಿ ಕರಾವಳಿಯಲ್ಲೀಗ ಸಹಜವಾಗಿಯೇ ಸ್ಥಳೀಯರ ಬದಲು ವಲಸೆ ಕಾರ್ಮಿಕರು ಮೀನುಗಾರಿಕೆಯಲ್ಲಿ ತೊಡಗಿಕೊಳ್ಳುತ್ತಿರುವ ಪ್ರಮಾಣ ಹೆಚ್ಚುತ್ತಿದೆ. ಕೇವಲ 30-40 ವರ್ಷಗಳ ಹಿಂದೆ ಅತ್ಯಂತ ಸುಸ್ಥಿರವಾದ, ಪರಿಸರ ಸಹ್ಯವಾದ ಮೀನುಗಾರಿಕೆಯಲ್ಲಿ ತೊಡಗಿದ್ದ ಸ್ಥಳೀಯ ಮೀನುಗಾರ ಸಮುದಾಯವು ಈಗ ಸಮುದ್ರ ತೀರದಿಂದ ದೂರ ಸರಿಯುತ್ತಿದೆ ಮತ್ತು ಪ್ರವಾಸೋದ್ಯಮ, ಹೋಮ್ ಸ್ಟೇಗಳಂತಹ ಮತ್ತೊಂದು ವಾಣಿಜ್ಯ ಕೆಸರುಗುಂಡಿಗೆ ಬಲವಂತವಾಗಿ ತಳ್ಳಲ್ಪಡುತ್ತಿದೆ.

Tags

Fish
share
ರಾಜಾರಾಂ ತಲ್ಲೂರು
ರಾಜಾರಾಂ ತಲ್ಲೂರು
Next Story
X