Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಪಿಟ್ಕಾಯಣ
  5. ವಿದ್ಯುತ್: ನಡೆದಿರುವುದು ಬರೀ ಖಾಸಗೀಕರಣ...

ವಿದ್ಯುತ್: ನಡೆದಿರುವುದು ಬರೀ ಖಾಸಗೀಕರಣ ಅಲ್ಲೋ ಅಣ್ಣ...

ರಾಜಾರಾಂ ತಲ್ಲೂರುರಾಜಾರಾಂ ತಲ್ಲೂರು1 Nov 2025 11:08 AM IST
share
ವಿದ್ಯುತ್: ನಡೆದಿರುವುದು ಬರೀ ಖಾಸಗೀಕರಣ ಅಲ್ಲೋ ಅಣ್ಣ...

ವಿದ್ಯುತ್ ವಿತರಣಾ ವ್ಯವಸ್ಥೆಯಲ್ಲಿ ಲೋಪಗಳ ಕಾರಣದಿಂದಾಗಿ ವಿತರಣಾ ವ್ಯವಸ್ಥೆಗೆ 6.9 ಲಕ್ಷ ಕೋಟಿ ರೂ.ಗಳಿಗೂ ಮಿಕ್ಕಿ ಮೊತ್ತದ ನಷ್ಟ ಸಂಭವಿಸಿದೆ. ಕ್ರಾಸ್ ಸಬ್ಸಿಡಿಗಳು ಕೈಗಾರಿಕೆಗಳಲ್ಲಿ ವಿದ್ಯುತ್ ದರ ಅಸಹಜವಾಗಿ ಹೆಚ್ಚಲು ಕಾರಣವಾಗಿವೆ. ಇದರಿಂದ ದೇಶದ ಆರ್ಥಿಕ ಅಭಿವೃದ್ಧಿಗೆ ಹೊಡೆತ ಬಿದ್ದಿದೆ ಎಂಬ ಕಾರಣಗಳನ್ನೆಲ್ಲ ಮುಂದಿಟ್ಟುಕೊಂಡು ಸರಕಾರ ವಿದ್ಯುತ್ ಕ್ಷೇತ್ರವನ್ನೇ ಹರಿವಾಣದಲ್ಲಿಟ್ಟು ಖಾಸಗಿ ಮಡಿಲಿಗೆ ಹಾಕಲು ಹೊರಟಿದೆ.

ಒಂದಾನೊಂದು ದೇಶದಲ್ಲಿ ಒಂದೆರಡಾನಿ. ಆ ದೇಶದಲ್ಲಿ ಖಾಸಗೀಕರಣ ಪ್ರಕ್ರಿಯೆಯ ಸ್ವರೂಪ ಎಂತಹದೆಂದರೆ, ವಿದ್ಯುತ್ ಉತ್ಪಾದನೆ ಮಾಡುವುದು ಅವೇ ಎರಡಾನಿಗಳು, ವಿದ್ಯುತ್ ವಿತರಣೆ ಮಾಡುವುದು ಅವೇ ಎರಡಾನಿಗಳು, ತಮ್ಮ ಉದ್ಯಮಗಳಿಗೆ ಆ ವಿದ್ಯುತ್ ಬಳಕೆ ಮಾಡುವುದು ಅವೇ ಆನಿಗಳು, ವಿದ್ಯುತ್ ಚಾಲಿತ ವಾಹನಗಳ ಕಂಪೆನಿಯೂ ಅವೇ ಆನಿಗಳದು, ಅದಕ್ಕೆ ಬ್ಯಾಟರಿಯೂ ಅವೇ ಆನಿಗಳದು, ದೇಶದಾದ್ಯಂತ ವಿದ್ಯುತ್ ಚಾರ್ಜಿಂಗ್ ಸ್ಟೇಶನ್‌ಗಳು ಅವೇ ಆನಿಗಳದು.... ಹೀಗೆ ಸಂಪೂರ್ಣ ದೇಶ ಆನಿಮಯ.

ಇದೊಂದು ಭಯಾನಕ ಸನ್ನಿವೇಶ. ನಾಳೆ ಯಾವುದೋ ಕಾರಣಕ್ಕೆ, ಇರುವ ಎರಡಾನಿಯಲ್ಲಿ ಒಂದಾನಿಗೆ ಮದ ಏರಿತು ಅಥವಾ ದೇಶದ ದೊರೆಯ ಮೇಲೆ ಸಿಡುಕು ಬಂದಿತೆಂದು ಆ ಆನಿ, ತನ್ನ ವಿದ್ಯುತ್ ಸಂಬಂಧಿ ಚಟುವಟಿಕೆಗಳನ್ನು ಒಂದು ವಾರದ ಮಟ್ಟಿಗೆ ನಿಲ್ಲಿಸಿತೆಂದಿಟ್ಟುಕೊಳ್ಳಿ. ಇಡೀ ದೇಶದ ರಕ್ತನಾಳ-ನರ ಜಾಲ ವ್ಯವಸ್ಥೆ ಸ್ತಬ್ಧಗೊಳ್ಳಲಿದೆ. ದೇಶದ ದೊರೆ ಸಮೇತ ಇಡಿಯ ದೇಶ ಆನಿ ಪದತಲದಲ್ಲಿ ನಿಂತು ‘‘ತ್ರಾಹಿ ತ್ರಾಹಿ... ರಕ್ಷಿಸೋ ಆನಿದೇವಾ!!’’ ಎಂದು ಮೊರೆಯಿಡುವ ಸನ್ನಿವೇಶ ಎದುರಾಗಲಿದೆ.

ಆನಿ ನಮ್ಮ ಮೊರೆ ಕೇಳಿಸಿಕೊಳ್ಳಲಿಲ್ಲ ಎಂದಾದರೆ, ಕಡೆಗೆ ಭಗವಂತನ ಅವತಾರವಾಗಿ ಮೈವೆತ್ತಿರುವ ಮಹಾಮಹಿಮ ‘ಟ್ರಂಪಾಪತಿ’ಗಳೇ ಪ್ರತ್ಯಕ್ಷರಾಗಿ ದೇಶದ ಜನತೆಯನ್ನು ಕಾಪಾಡುವ ಮತ್ತು ತಾನು ಕಾಪಾಡಿದ್ದನ್ನು 108 ಬಾರಿ ಜಪಿಸಿ ಪಾರಾಯಣ ಮಾಡಿ, ಲೋಕಕ್ಕೆಲ್ಲ ಸಾರಿ, ಈ ಬಾರಿಯಾದರೂ ತನಗೆ ನೊಬೆಲ್ ಶಾಂತಿ ಆಗಲಿದೆ ಎಂದು ಹೇಳಿ ಅದೃಶ್ಯರಾಗುವ ಸೀನು ಕ್ರಿಯೇಟ್ ಆದರೂ ಅಚ್ಚರಿ ಇಲ್ಲ!

* * *

ಈ ಕಥೆ ಹೇಳಲು ಕಾರಣ ಇದೆ. 2020ರ ಮೇ ತಿಂಗಳಿನಲ್ಲಿ ಭಾರತ ಸರಕಾರ ‘‘ಆತ್ಮನಿರ್ಭರ’’ ಆಗುವ ಹಾದಿಯಲ್ಲಿ ವಿದ್ಯುತ್ ಕ್ಷೇತ್ರವನ್ನು ಖಾಸಗೀಕರಿಸಲು ತೀರ್ಮಾನಿಸಿತ್ತು. ಆದರೆ ರೈತ ಚಳವಳಿಗಳ ಬಿಸಿಯ ಕಾರಣಕ್ಕೆ ಈ ಯೋಜನೆ ಆತ್ಮವಿಶ್ವಾಸದಿಂದ ತಲೆಯೆತ್ತದೆ ತಣ್ಣಗಾಗಿತ್ತು. ಈಗ ಮತ್ತೆ ಸರಕಾರ ವಿದ್ಯುತ್ ಖಾಸಗೀಕರಣದ ಚಿಂತನೆಯನ್ನು ಮುಂಚೂಣಿಗೆ ತಂದಿದೆ. ವಿದ್ಯುತ್ ವಿತರಣಾ ವ್ಯವಸ್ಥೆಯಲ್ಲಿ ಲೋಪಗಳ ಕಾರಣದಿಂದಾಗಿ ವಿತರಣಾ ವ್ಯವಸ್ಥೆಗೆ 6.9 ಲಕ್ಷ ಕೋಟಿ ರೂ.ಗಳಿಗೂ ಮಿಕ್ಕಿ ಮೊತ್ತದ ನಷ್ಟ ಸಂಭವಿಸಿದೆ. ಕ್ರಾಸ್ ಸಬ್ಸಿಡಿಗಳು (ಅಂದರೆ ಸಾಮಾನ್ಯವಾಗಿ ಒಂದೆಡೆ ಬಂದಿರುವ ಲಾಭವನ್ನು ಇನ್ನೊಂದೆಡೆ ಸಹಾಯಧನ ರೂಪದಲ್ಲಿ ಹಂಚುವುದು) ಕೈಗಾರಿಕೆಗಳಲ್ಲಿ ವಿದ್ಯುತ್ ದರ ಅಸಹಜವಾಗಿ ಹೆಚ್ಚಲು ಕಾರಣವಾಗಿವೆ. ಇದರಿಂದ ದೇಶದ ಆರ್ಥಿಕ ಅಭಿವೃದ್ಧಿಗೆ ಹೊಡೆತ ಬಿದ್ದಿದೆ ಎಂಬ ಕಾರಣಗಳನ್ನೆಲ್ಲ ಮುಂದಿಟ್ಟುಕೊಂಡು ಸರಕಾರ ವಿದ್ಯುತ್ ಕ್ಷೇತ್ರವನ್ನೇ ಹರಿವಾಣದಲ್ಲಿಟ್ಟು ಖಾಸಗಿ ಮಡಿಲಿಗೆ ಹಾಕಲು ಹೊರಟಿದೆ.

ಸರಕಾರ ಕರಡು ವಿದ್ಯುತ್ ತಿದ್ದುಪಡಿ ಮಸೂದೆ 2025ನ್ನು ಈಗಾಗಲೇ (ಅಕ್ಟೋಬರ್ 09, 2025) ಸಾರ್ವಜನಿಕರ ಅಭಿಪ್ರಾಯಕ್ಕಾಗಿ ಬಿಡುಗಡೆಗೊಳಿಸಿದ್ದು, 30 ದಿನಗಳ ಒಳಗೆ ಈ ಬಗ್ಗೆ ಪ್ರತಿಕ್ರಿಯಿಸಲು ಸೂಚಿಸಿದೆ.

ಇಷ್ಟು ಮಾತ್ರವಲ್ಲ, ಇಡಿಯ ವಿದ್ಯುತ್ ಕ್ಷೇತ್ರವನ್ನು ಹರಿವಾಣದಲ್ಲಿಟ್ಟು ಖಾಸಗಿ ಕ್ಷೇತ್ರಕ್ಕೆ ಒಪ್ಪಿಸಲು ಅಗತ್ಯವಿರುವ ಒಂದೊಂದೇ ಹೆಜ್ಜೆಗಳನ್ನು ಎಚ್ಚರಿಕೆಯಿಂದ ಇಡಲಾಗುತ್ತಿದೆ. ಅವುಗಳಲ್ಲಿ ಮಹತ್ವದ್ದು ಎರಡು ಹೆಜ್ಜೆಗಳು. ಆ ಹೆಜ್ಜೆಗಳಲ್ಲಿ ಮೊದಲನೆಯದು, ಈಗಾಗಲೇ ಅಸ್ತಿತ್ವದಲ್ಲಿರುವ ಕ್ಯಾಪ್ಟಿವ್ ಜನರೇಶನ್ ಇಂಡಸ್ಟ್ರಿಗಳಿಗೆ (ಅರ್ಥಾತ್, ತಮ್ಮ ಉತ್ಪಾದನೆಗಳಿಗೆ ಅಗತ್ಯವಿರುವ ವಿದ್ಯುತ್ತನ್ನು ತಾವೇ ಉತ್ಪಾದಿಸಿಕೊಳ್ಳುವ ಇಂಡಸ್ಟ್ರಿಗಳಿಗೆ) ಪ್ರತ್ಯೇಕ ನಿಯಮಗಳನ್ನು ರೂಪಿಸಲು ರಾಜ್ಯಗಳಿಗೆ ಅಧಿಕಾರ ನೀಡುವಿಕೆ ಹಾಗೂ ಮತ್ತಷ್ಟು ಪ್ರೋತ್ಸಾಹಕ ನೀತಿ. ಎರಡನೆಯ ಹೆಜ್ಜೆ, ವರ್ಚುವಲ್ ಪವರ್ ಪರ್ಚೇಸ್ ಅಗ್ರಿಮೆಂಟ್ (ವಿಪಿಪಿಎ) (ಅರ್ಥಾತ್, ನವೀಕರಿಸಬಹುದಾದ ಇಂಧನ ಉತ್ಪಾದನಾ ಕ್ಷೇತ್ರದಲ್ಲಿ ಉತ್ಪಾದನೆ ಆದ ಹಸಿರು ವಿದ್ಯುತ್ತನ್ನು ಕಾರ್ಪೊರೇಟ್ ಬಳಕೆಗೆ ಒದಗಿಸುವ ಕುರಿತು ಉತ್ಪಾದಕರು ಮತ್ತು ಕಾರ್ಪೊರೇಟ್‌ಗಳ ನಡುವೆ ಮಾಡಿಕೊಳ್ಳುವ ಬೆಲೆ ನಿಗದಿ ಒಪ್ಪಂದ). ಕೇಂದ್ರೀಯ ವಿದ್ಯುತ್ ನಿಯಂತ್ರಣ ಆಯೋಗವು (ಸಿಆರ್‌ಇಸಿ) ವಿಪಿಪಿಎಗೆ ಕರಡು ಮಾರ್ಗದರ್ಶಿಯನ್ನು ಇದೇ ಮೇ ತಿಂಗಳಿನಲ್ಲಿ ಬಿಡುಗಡೆಗೊಳಿಸಿ, ಆ ಬಗ್ಗೆ ಸಾರ್ವಜನಿಕರ ಅಭಿಪ್ರಾಯ ಪಡೆದಾಗಿದೆ; ಒಪ್ಪಂದದ ಸ್ವರೂಪ ಅಂತಿಮಗೊಳ್ಳುವ ಹಂತದಲ್ಲಿವೆ.

ಇವೆರಡೂ ನೀತಿಗಳು ನೇರವಾಗಿ ವಾಣಿಜ್ಯೋದ್ಯಮಿಗಳ ಪರ ಇರುವ ನೀತಿಗಳು. 2003ರ ವಿದ್ಯುತ್ ಕಾಯ್ದೆಯ ಅಡಿಯಲ್ಲಿ ಭಾರತ ಸರಕಾರವು (ಆಗ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ) ವಿದ್ಯುತ್ ಕ್ಷೇತ್ರವನ್ನು ಯೂನಿವರ್ಸಲ್ ಸರ್ವೀಸ್ ಆಬ್ಲಿಗೇಷನ್ (ಯುಎಸ್‌ಒ) ಅರ್ಥಾತ್, ವಿದ್ಯುತ್ ಒಂದು ಸಾರ್ವತ್ರಿಕ ಸೇವೆ ಎಂಬ ಬಾಧ್ಯತೆಯ ಅಡಿಯಲ್ಲಿ ತಂದಿತ್ತು. ಹಾಗಾಗಿ, ಲಾಭ-ನಷ್ಟದ ಕಡೆ ಗಮನ ಕೊಡದೆ, ಕಲ್ಯಾಣ ಕಾರ್ಯಕ್ರಮದ ರೂಪದಲ್ಲಿ ದೇಶದ ಪ್ರಜೆಗಳಿಗೆ ವಿದ್ಯುತ್ ಸೇವೆ ಒದಗಿಸುವುದು ಸರಕಾರದ ಜವಾಬ್ದಾರಿ ಆಗಿತ್ತು. ಈಗ ಸರಕಾರದ ಹೊಸ ವಿದ್ಯುತ್ ತಿದ್ದುಪಡಿ ಕಾಯ್ದೆಯು ಈ ವಿಪಿಪಿಎ ಮಾರ್ಗದರ್ಶಿ ಮತ್ತು ಇಂತಹ ಇತರ ಕ್ರಮಗಳ ಮೂಲಕ 2003ರ ವಿದ್ಯುತ್ ಕಾಯ್ದೆಯ ಆ ಉದ್ದೇಶವನ್ನು ಸಂಪೂರ್ಣವಾಗಿ ವಿಫಲಗೊಳಿಸಲಿವೆ.

ವಿಪಿಪಿಎ ವ್ಯವಸ್ಥೆಯಲ್ಲಿ, ನವೀಕರಿಸಬಹುದಾದ ಇಂಧನ ಉತ್ಪಾದಕ ಕಂಪೆನಿಯು ತಾನು ಉತ್ಪಾದನೆ ಮಾಡಿದ ವಿದ್ಯುತ್ತನ್ನು ಮಾರುಕಟ್ಟೆ ದರದಲ್ಲಿ ದೀರ್ಘಕಾಲಿಕ ಅಥವಾ ಅಲ್ಪಕಾಲಿಕ ವಿದ್ಯುತ್ ಖರೀದಿ ಒಪ್ಪಂದದ ಅನ್ವಯ ಮಾರುಕಟ್ಟೆಗೆ ಒದಗಿಸುತ್ತದೆ. ಅದು ತನ್ನ ಕಾರ್ಪೊರೇಟ್ ಗ್ರಾಹಕರೊಂದಿಗೆ ಮಾಡಿಕೊಂಡಿರುವ ವರ್ಚುವಲ್ ಪವರ್ ಪರ್ಚೇಸ್ ಅಗ್ರಿಮೆಂಟ್‌ನಲ್ಲಿ ದಾಖಲಾಗಿರುವ ಒಪ್ಪಂದದ ದರ (strike rate)ಕ್ಕಿಂತ ಮಾರುಕಟ್ಟೆ ದರ ಕಡಿಮೆ ಇದ್ದರೆ ಉತ್ಪಾದಕ ಕಂಪೆನಿಗೆ ಆ ನಷ್ಟವನ್ನು ಕಾರ್ಪೊರೇಟ್ ಗ್ರಾಹಕರು ಭರ್ತಿ ಮಾಡಿಕೊಡಬೇಕು. ಮಾರುಕಟ್ಟೆಯ ದರ ಹೆಚ್ಚಿದ್ದರೆ, ಆ ವ್ಯತ್ಯಾಸವನ್ನು ಉತ್ಪಾದಕ ಕಂಪೆನಿ ಕಾರ್ಪೊರೇಟ್ ಗ್ರಾಹಕರಿಗೆ ಹಿಂದಿರುಗಿಸಬೇಕು. ಈ ರೀತಿ ಕನಿಷ್ಠ ದರ ನಿಗದಿ ಮಾಡುವ ಮೂಲಕ ಹಸಿರು ವಿದ್ಯುತ್ ಉತ್ಪಾದನೆಯನ್ನು ಪ್ರೋತ್ಸಾಹಿಸಿದ್ದಕ್ಕೆ ಪ್ರತಿಯಾಗಿ ಕಾರ್ಪೊರೇಟ್ ಗ್ರಾಹಕರಿಗೆ ನವೀಕರಿಸಬಲ್ಲ ಇಂಧನ ಬಳಕೆ ಪ್ರಮಾಣಪತ್ರ (ಆರ್‌ಇಸಿ) ಸಿಗುತ್ತದೆ. ಇದನ್ನು ಕಾರ್ಪೊರೇಟ್ ಗ್ರಾಹಕರು ತೆರೆದ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಅವಕಾಶ ಇದೆ. ದೊಡ್ಡ ಕಾರ್ಪೊರೇಟ್‌ಗಳು ತಮ್ಮ ವಿದ್ಯುತ್ ಬಳಕೆಯಲ್ಲಿ ಒಂದು ನಿರ್ದಿಷ್ಟ ಅಂಶವನ್ನು ನವೀಕರಿಸಬಲ್ಲ ಇಂಧನ ಮೂಲದಿಂದ ಪಡೆಯಬೇಕೆಂದು ನಿಯಮವಿರುವುದರಿಂದ ಅವರಿಗೆ ಇದು ಲಾಭದಾಯಕ.

ಈ ಹೊಸ ಖಾಸಗೀಕೃತ ವ್ಯವಸ್ಥೆಯಲ್ಲಿ ಅಂತಿಮವಾಗಿ, ಬಡಪಾಯಿ ನಾಗರಿಕ ಗ್ರಾಹಕರು ಖಾಸಗೀಕರಣದ ಅಡ್ಡಪರಿಣಾಮಗಳ ನೇರ ಫಲಾನುಭವಿಗಳಾಗಲಿದ್ದಾರೆ. ಒಟ್ಟು ವಿದ್ಯುತ್ ಉತ್ಪಾದನೆಯಲ್ಲಿ ಮನೆವಾರ್ತೆಯ ಬಳಕೆಗೆ ಸರಬರಾಜಾಗುವ ವಿದ್ಯುತ್ತಿನ ಪಾಲು ಕೇವಲ ಶೇ. 24-26 ಮಾತ್ರ. ಅವರಿಗೆ ಸ್ಮಾರ್ಟ್ ಮೀಟರ್, ಟೈಮ್ ಆಫ್ ದಿ ಡೇ ತಾರಿಫ್ (ಅರ್ಥಾತ್, ದಿನದ ಯಾವ ವೇಳೆಯಲ್ಲಿ ಹೆಚ್ಚಿನ ವಿದ್ಯುತ್ ಬೇಡಿಕೆ ಇದೆ ಎಂಬುದನ್ನಾಧರಿಸಿ ಬೆಲೆಯಲ್ಲಿ ಏರಿಳಿತ) ಮತ್ತಿತರ ಹೊರೆಗಳು ಬೀಳಲಿವೆ, ವಿದ್ಯುತ್ ಸಬ್ಸಿಡಿ ಮಾಯವಾಗಲಿದೆ. ಗ್ರಾಹಕರಿಗೆ ವಿದ್ಯುತ್ ಮಾರಾಟದ ದರವು ಅದರ ಉತ್ಪಾದನೆಗೆ ತಗಲುವ ವೆಚ್ಚವನ್ನು ಪ್ರತಿಫಲಿಸುವಂತಿರಬೇಕು ಎಂಬ ಇತ್ತೀಚೆಗಿನ ಸುಪ್ರೀಂ ಕೋರ್ಟ್ ತೀರ್ಮಾನವನ್ನು ಈ ಕಾರ್ಪೊರೇಟ್‌ಪರ ತೀರ್ಮಾನಗಳ ಸಮರ್ಥನೆಗಾಗಿ ಸರಕಾರ ಜನರ ಮುಖಕ್ಕೆ ಹಿಡಿಯುತ್ತಿದೆ.

ಹೊರನೋಟಕ್ಕೆ ಇದರಲ್ಲಿ ಏನು ತಪ್ಪಿದೆ, ಎಲ್ಲವೂ ಪಾರದರ್ಶಕವಾಗಿವೆಯಲ್ಲ ಅನ್ನಿಸಬಹುದು. ಆದರೆ, ಈ ಸಮಸ್ಯೆಯನ್ನು ನೋಡಬೇಕಾದುದು ಒಂದೊಂದೇ ಪ್ರತ್ಯೇಕ ಚುಕ್ಕಿಗಳ ರೂಪದಲ್ಲಲ್ಲ, ಬದಲಾಗಿ ಒಟ್ಟು ರಂಗೋಲಿಯ ರೂಪದಲ್ಲಿ. ಭಾರತದಲ್ಲಿ ಖಾಸಗಿ ರಂಗದ ವಿದ್ಯುತ್ ಉತ್ಪಾದನೆಯಿಂದ ಆರಂಭಿಸಿ ಬಳಕೆಯ ತನಕ ದೊಡ್ಡ ಪಾಲು ಕೇವಲ ಒಂದೆರಡು ಕಾರ್ಪೊರೇಟ್ ಕಂಪೆನಿಗಳ ಹಿಡಿತದಲ್ಲಿದೆ. ಅವರಿಗೆ ಈ ವಿಪಿಪಿಎ ಎಂಬುದು ತಮ್ಮದೇ ಎಡ ಕಿಸೆಯಿಂದ ಬಲ ಕಿಸೆಗೆ ಹಣ ವರ್ಗಾವಣೆ, ಅಷ್ಟೇ. ಮೇಲಾಗಿ ಇಲ್ಲಿ ದರ ನಿಗದಿ ಮಾಡುವಲ್ಲೂ ಅವರದೇ ಹಿಡಿತ ಇರುತ್ತದೆ; ಸರಕಾರಿ ನೀತಿಗಳೂ ಅವರದ್ದೇ ಪರ. ಇನ್ನು ಡೇಟಾ ಸೆಂಟರ್‌ಗಳಂತಹ ವಿದ್ಯುತ್ ಬಕಾಸುರ ಕ್ಷೇತ್ರಗಳಿಗೆ ವಿದ್ಯುತ್ ಪೂರೈಕೆ ಆರಂಭಗೊಂಡಾಗ (ಸರಕಾರದ ಪ್ರಕಾರ, ಸದ್ಯ ಇರುವ 476GW ವಿದ್ಯುತ್ ಉತ್ಪಾದನಾ ಸಾಮರ್ಥ್ಯವು ಡೇಟಾ ಸೆಂಟರ್‌ಗಳಂತಹ ನವೋದ್ಯಮಗಳ ಬೇಡಿಕೆಯ ಕಾರಣದಿಂದ, 2030ಕ್ಕೆ 500GW ಮತ್ತು 2047ರ ಹೊತ್ತಿಗೆ 2000GW ತಲುಪಲಿದೆ.) ಮನೆವಾರ್ತೆಯ ವಿದ್ಯುತ್ ಬಳಕೆಯು ದೇಶದ ಒಟ್ಟು ವಿದ್ಯುತ್ ಉತ್ಪಾದನೆಯ ಶೇ. 5-10ರ ಒಳಗೆ ಸೀಮಿತಗೊಳ್ಳಲಿದೆ. ಇಂತಹ ಸನ್ನಿವೇಶದಲ್ಲಿ ವಿದ್ಯುತ್ ಕ್ಷೇತ್ರದ ಏಕಸ್ವಾಮ್ಯ ಕೇವಲ ಒಂದಿಬ್ಬರ ಕೈಗೆ ಹೋದರೆ, ಈ ಬರೆಹದ ಆರಂಭದಲ್ಲಿ ತಮಾಷೆಯಾಗಿ ಹೇಳಿರುವ ಕಥೆಯು ಸದ್ಯೋಭವಿಷ್ಯದಲ್ಲಿ ವಾಸ್ತವ ಅನ್ನಿಸಿದರೂ ಅಚ್ಚರಿ ಇಲ್ಲ.

share
ರಾಜಾರಾಂ ತಲ್ಲೂರು
ರಾಜಾರಾಂ ತಲ್ಲೂರು
Next Story
X