Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ನೆಲದನಿ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಲಂಡನ್ ಡೈರಿ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಮಾಹಿತಿ ಮಾರ್ಗದರ್ಶನ
    • ಆರೋಗ್ಯ
    • ಓ ಮೆಣಸೇ
    • ಕೃತಿ ಪರಿಚಯ
    • ಝಲಕ್
    • ಬುಡಬುಡಿಕೆ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಪಿಟ್ಕಾಯಣ
  5. ಐಡಿಬಿಐ: ಭಕ್ತವತ್ಸಲರಿಗಿದು......

ಐಡಿಬಿಐ: ಭಕ್ತವತ್ಸಲರಿಗಿದು... ಡಿಸ್ಕೌಂಟ್ ಸೇಲ್?!

ರಾಜಾರಾಂ ತಲ್ಲೂರ್ರಾಜಾರಾಂ ತಲ್ಲೂರ್28 Nov 2026 10:12 AM IST
share
ಐಡಿಬಿಐ: ಭಕ್ತವತ್ಸಲರಿಗಿದು... ಡಿಸ್ಕೌಂಟ್ ಸೇಲ್?!

ಐಡಿಬಿಐ ಮಾಡಿಕೊಂಡಿದ್ದ ನಷ್ಟದ ಹೊಂಡ ಮುಚ್ಚುವುದಕ್ಕೆ ಸ್ವತಃ ಸರಕಾರದ ಬೊಕ್ಕಸದಿಂದ ಮತ್ತು ಎಲ್‌ಐಸಿ ಕಡೆಯಿಂದ ಸಾರ್ವಜನಿಕರ ಹಣವು ದೊಡ್ಡ ಪ್ರಮಾಣದಲ್ಲಿ ವ್ಯಯ ಆಗಿದೆ. 2019ರಲ್ಲಿ ಸರಕಾರವು ತನ್ನ ಷೇರುಗಳನ್ನು ಎಲ್‌ಐಸಿಗೆ ಮಾರಾಟ ಮಾಡಿದ್ದು, ಷೇರೊಂದರ 61 ರೂ. ದರದಲ್ಲಿ. ಮಾರುಕಟ್ಟೆಯ ಕಡೆಯಿಂದ ನೋಡಿದರೆ, ಕಳೆದ 52 ವಾರಗಳ ಅವಧಿಯಲ್ಲಿ ಐಡಿಬಿಐ ಷೇರು ದರ ಗರಿಷ್ಠ 119ರೂ. ಮತ್ತು ಕನಿಷ್ಠ 95ರೂ.ಗಳಿಗೆ ಬಿಕರಿ ಆಗಿದೆ. ಇಂತಹ ಷೇರನ್ನು ಸರಕಾರ ಈಗ ಕೇವಲ 81ರೂ.ಗಳಿಗೆ ಮಾರಲು ತೀರ್ಮಾನಿಸಿದೆ. ಅದೂ 9,513 ಕೋಟಿ ರೂ. ಲಾಭದಲ್ಲಿರುವ ಕಂಪೆನಿಯನ್ನು!

ಲಾಭದಲ್ಲಿರುವ ಇಂಡಸ್ಟ್ರಿಯಲ್ ಡೆವಲಪ್‌ಮೆಂಟ್ ಬ್ಯಾಂಕ್ ಆಫ್ ಇಂಡಿಯಾ(IDBI) ಎಂಬ ಸಾರ್ವಜನಿಕ ವಲಯದ ಬ್ಯಾಂಕನ್ನು ಕೆನಡಾದ ಟೊರಾಂಟೊ ಮೂಲದ ಫೇರ್ ಫಾಕ್ಸ್ ಫೈನಾನ್ಷಿಯಲ್ ಹೋಲ್ಡಿಂಗ್ಸ್ ಸಂಸ್ಥೆಯು ಖರೀದಿಸಲು ವೇದಿಕೆ ಸನ್ನದ್ಧವಾಗಿದ್ದು, ಈ ಪ್ರಸ್ತಾವವನ್ನು ವಿರೋಧಿಸಿ, ವಿವಿಧ ಬ್ಯಾಂಕ್ ನೌಕರರ-ಅಧಿಕಾರಿಗಳ ಸಂಘಗಳು ಡಿಸೆಂಬರ್ 3ರಿಂದ ಮುಷ್ಕರ ನಡೆಸುವ ಎಚ್ಚರಿಕೆ ನೀಡಿವೆ. ಐಡಿಬಿಐ ಬ್ಯಾಂಕ್‌ನ ನೌಕರರು ಮತ್ತು ಅಧಿಕಾರಿಗಳ ಸಂಘಗಳ ಹೋರಾಟಕ್ಕೆ ಬೆಂಬಲ ರೂಪದಲ್ಲಿ ಅಖಿಲಭಾರತ ಮಟ್ಟದ ಸಂಘಟನೆಗಳಾದ AIBEA, AIBOA, BEFI ಈ ಮುಷ್ಕರದ ಕರೆ ನೀಡಿವೆ.

ತನ್ನ ಡಿಸ್‌ಇನ್ವೆಸ್ಟ್‌ಮೆಂಟ್ ನೀತಿಯನ್ನು ಬಹಿರಂಗವಾಗಿಯೇ ಕಾರ್ಯರೂಪಕ್ಕೆ ತರುತ್ತಿರುವ ಹಾಲಿ ಸರಕಾರಕ್ಕೆ ಈ ಐಡಿಬಿಐ ಬ್ಯಾಂಕ್‌ನ ಪರಾಭಾರೆಯ ಮೂಳೆಯು, ಇಂದಲ್ಲ ನಾಳೆ ಗಂಟಲಿನಲ್ಲಿ ಸಿಕ್ಕಿಹಾಕಿಕೊಳ್ಳುವ ಲಕ್ಷಣಗಳು ಮೇಲುನೋಟಕ್ಕೇ ಕಾಣಿಸುತ್ತಿವೆ. ಹಾಗಾಗಿ, ಈ ಬ್ಯಾಂಕ್ ಪರಾಭಾರೆ ಸುದ್ದಿಯಲ್ಲಿದೆ.

ಆಗಿರುವುದು ಏನೆಂದು ಸ್ಥೂಲವಾಗಿ ವಿವರಿಸಬೇಕೆಂದರೆ, ಇದೇ ಅಕ್ಟೋಬರ್ 14, 2026ರಂದು ಪ್ರಧಾನಮಂತ್ರಿಯವರ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ ಐಡಿಬಿಐ ಬ್ಯಾಂಕ್‌ನ ಹಿಡಿತವನ್ನು ಕೆನಡಾದ ಫೇರ್ ಫಾಕ್ಸ್ ಫೈನಾನ್ಷಿಯಲ್ ಹೋಲ್ಡಿಂಗ್ಸ್ ಸಂಸ್ಥೆಗೆ ಮಾರುವ, ಅಂದಾಜು 52,878 ಕೋಟಿ ರೂ.ಗಳ ವಹಿವಾಟಿಗೆ ಮಂಜೂರಾತಿ ದೊರೆತಿದೆ. ಸದ್ಯಕ್ಕೆ ಭಾರತ ಸರಕಾರ (ಶೇ. 45.5) ಮತ್ತು ಭಾರತೀಯ ಜೀವವಿಮಾ ನಿಗಮ(ಶೇ. 49.2)ಗಳು ಜೊತೆಯಾಗಿ IDBI ಬ್ಯಾಂಕ್‌ನ ಶೇ. 94.72 ಶೇರುಗಳನ್ನು ಹೊಂದಿದ್ದವು. ಈಗ ಆ ಪೈಕಿ, ಶೇ. 60.72 ಷೇರುಗಳನ್ನು ಫೇರ್ ಫಾಕ್ಸ್ ಸಂಸ್ಥೆ ಖರೀದಿಸಲಿದೆ. ಈ ವಹಿವಾಟಿನಿಂದ ಸರಕಾರಕ್ಕೆ ಅಂದಾಜು 26,000 ಕೋಟಿ ರೂ. ಮತ್ತು ಎಲ್‌ಐಸಿಗೆ ಅಂದಾಜು 26,300 ಕೋಟಿ ರೂ.ಗಳ ಆದಾಯ ಬರಲಿದೆ. ಈ ವ್ಯಾಪಾರದ ಬಳಿಕ, ಐಡಿಬಿಐನ ಷೇರುಗಳು ಸರಕಾರದ ಬಳಿ ಶೇ.15 ಹಾಗೂ ಎಲ್‌ಐಸಿ ಬಳಿ ಶೇ.19ರಷ್ಟು ಉಳಿಯಲಿವೆ. ಆರ್‌ಬಿಐ, ಸಿಸಿಐ ಮತ್ತಿತರ ನಿಯಂತ್ರಣ ಪ್ರಾಧಿಕಾರಗಳ ಅನುಮತಿಗಳೆಲ್ಲ ದೊರೆತು, 2027 ಮಾರ್ಚ್ ಹೊತ್ತಿಗೆ ಈ ಪರಾಭಾರೆ ಪ್ರಕ್ರಿಯೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ.

ಐಡಿಬಿಐ ಹಿನ್ನೆಲೆ

ಈ ಪ್ರಕರಣದ ಗಾಂಭೀರ್ಯತೆ ಅರ್ಥ ಆಗಬೇಕಿದ್ದರೆ, ಐಡಿಬಿಐ ಹಿನ್ನೆಲೆಯ ಜೊತೆ, ಇತ್ತೀಚೆಗಿನ ಬೆಳವಣಿಗೆಗಳನ್ನು ಒಟ್ಟಾಗಿ ಗಮನಿಸಬೇಕು. Industrial Development Bank of India Act,, 1964ರ ಅಡಿಯಲ್ಲಿ ಆ ವರ್ಷ ಜುಲೈ 1ರಂದು ರಿಸರ್ವ್ ಬ್ಯಾಂಕ್‌ನ ಸಬ್ಸಿಡಿಯರಿ ಆಗಿ ಆರಂಭಗೊಂಡ ಈ ಅಭಿವೃದ್ಧಿ ಹಣಕಾಸು ಸಂಸ್ಥೆಯು 2004ರ ತನಕ 40 ವರ್ಷಗಳ ಕಾಲ ಸೇವೆ ಸಲ್ಲಿಸಿದ ಬಳಿಕ, 2003ರಲ್ಲಿ ಉದಾರೀಕರಣ ಪ್ರಕ್ರಿಯೆಯ ಭಾಗವಾಗಿ ಅದನ್ನು ಬ್ಯಾಂಕಿಂಗ್ ಸಂಸ್ಥೆ ಆಗಿ ಪರಿವರ್ತಿಸಲಾಗಿತ್ತು. ಮುಂದೆ ತನ್ನದೇ ಸಬ್ಸಿಡಿಯರಿಗಳು ಮತ್ತು ಯುನಿಯನ್ ವೆಸ್ಟರ್ನ್ ಬ್ಯಾಂಕ್‌ಅನ್ನು ತನ್ನೊಳಗೆ ವಿಲೀನಗೊಳಿಸಿಕೊಂಡು ಬೆಳೆದು ನಿಂತ ಐಡಿಬಿಐ, ಕೈಗಾರಿಕೆ ಮತ್ತು ಮೂಲಸೌಕರ್ಯ ಕ್ಷೇತ್ರಗಳಿಗೆ (ಈ ಕ್ಷೇತ್ರಗಳಲ್ಲಿ ಸಾಲ ಮರುಪಾವತಿಗಳು ನಿಧಾನ) ದೊಡ್ಡ ಗಾತ್ರದ ಸಾಲಗಳನ್ನು ಕೊಡುತ್ತಾ ಬಂದಿತ್ತು. ಬರಬರುತ್ತಾ, ಯೋಜನೆಗಳು ಅರ್ಧದಲ್ಲೇ ನಿಂತದ್ದು, ಕಾನೂನು ಸಮರಗಳು, ಭ್ರಷ್ಟಾಚಾರದ ಆರೋಪಗಳು, ಒಟ್ಟು ಆರ್ಥಿಕತೆಯಲ್ಲಿ ಕುಸಿತ, ಸಾಲಗಾರರು ಸುಸ್ತಿಬಾಕಿ ಮಾಡಿದ್ದು... ಹೀಗೆ ಐಡಿಬಿಐ ಹೊರೆ ಹೆಚ್ಚುತ್ತಾ ಹೋಯಿತು. ವಾಣಿಜ್ಯ ಬ್ಯಾಂಕ್ ಆಗಿ ಅಲ್ಪಕಾಲಿಕ ಠೇವಣಿಗಳನ್ನು ಸಂಗ್ರಹಿಸಿ, ದೀರ್ಘಕಾಲಿಕ ಸಾಲಗಳನ್ನು ಕೊಡುತ್ತಾ ಹೋದ ಐಡಿಬಿಐಗೆ ಕೊನೆಯಲ್ಲಿ ಆಸ್ತಿ-ಹೊಣೆಗಾರಿಕೆಗಳ ನಡುವಿನ ಸಮತೋಲನ ತಪ್ಪಿ ಹೋಯಿತು ಮತ್ತು NPA ಪ್ರಮಾಣ ಎಷ್ಟು ಹೆಚ್ಚಿತೆಂದರೆ, ಅದು ಕೊಟ್ಟ ಸಾಲದ ಬಹುತೇಕ ಮೂರನೇ ಒಂದು ಭಾಗದಷ್ಟು (ಶೇ.31.78) NPA ಆಯಿತು. ವೀಡಿಯೊಕಾನ್, ಕಿಂಗ್‌ಫಿಷರ್ ಏರ್ ಲೈನ್ಸ್, ಂಃಉ ಶಿಪ್‌ಯಾರ್ಡ್ ಮತ್ತಿತರರು ಬ್ಯಾಂಕ್‌ನ ಪ್ರಮುಖ ಸುಸ್ತಿಗಾರರ ಪಟ್ಟಿಯಲ್ಲಿದ್ದರು.

2017ರಲ್ಲಿ ಆರ್‌ಬಿಐ ಈ ಸಾರ್ವಜನಿಕ ವಲಯದ ಬ್ಯಾಂಕ್‌ನ ಅನಾರೋಗ್ಯವನ್ನು ಗುರುತಿಸಿ, ಚಿಕಿತ್ಸೆ ಆರಂಭಿಸಿತು. 2019ರ ಹೊತ್ತಿಗೆ ಎಲ್‌ಐಸಿಯು 21,624 ಕೋಟಿ ರೂ.ಗಳನ್ನು ಹೂಡಿ, ಈ ಸಂಸ್ಥೆಯ ಶೇ. 51 ಯಜಮಾನ್ಯವನ್ನು ಖರೀದಿಸಿತು. ಇದಲ್ಲದೆ, ಸರಕಾರದ ಬೊಕ್ಕಸದಿಂದ ಸುಮಾರು 9,300ಕೋಟಿ ರೂ.ಗಳ ಪ್ಯಾಕೇಜನ್ನು ಬ್ಯಾಂಕ್‌ನ ಆರೋಗ್ಯ ಸುಧಾರಣೆಗೆ ವ್ಯಯಿಸಲಾಯಿತು. ಸಕಾಲಿಕ ಕ್ರಮಗಳ ಫಲವಾಗಿ, 2021ರ ಹೊತ್ತಿಗೆ ಬ್ಯಾಂಕ್ ಸಂಪೂರ್ಣ ಚೇತರಿಸಿಕೊಂಡು ಹೊಸ ಜೀವನ ಆರಂಭಿಸಿತು. ಮಾರ್ಚ್ 2026ರ ಹೊತ್ತಿಗೆ ಬ್ಯಾಂಕ್ 9,513 ಕೋಟಿ ರೂ.ಗಳ ನಿವ್ವಳ ಲಾಭದಲ್ಲಿತ್ತು ಮತ್ತು ಬ್ಯಾಂಕ್‌ನ ಓPಂ ಶೇ. 2.32ಕ್ಕೆ ಇಳಿದಿತ್ತು.

ಖರೀದಿದಾರರ ಹಿನ್ನೆಲೆ

ಈಗ ಐಡಿಬಿಐ ಬ್ಯಾಂಕನ್ನು ಖರೀದಿಸುತ್ತಿರುವ, ಫೇರ್ ಫಾಕ್ಸ್ ಫೈನಾನ್ಷಿಯಲ್ ಹೋಲ್ಡಿಂಗ್ಸ್ ಸಂಸ್ಥೆಯ ಮಾಲಕರು, ಈಗ ಕೆನಡಾದ ‘ವಾರನ್ ಬಫೆಟ್’ ಎಂದೇ ಖ್ಯಾತಿವೆತ್ತ, ಪ್ರೇಮ್ ವತ್ಸ. ಇವರು ಹೈದರಾಬಾದ್ ಮೂಲದವರು; ಮದರಾಸು ಐಐಟಿಯ ಕೆಮಿಕಲ್ ಇಂಜಿನಿಯರಿಂಗ್ ಪದವೀಧರ. ಟೊರಾಂಟೊದಲ್ಲಿ ಹೂಡಿಕೆ ವಿಶ್ಲೇಷಕರಾಗಿ ಬದುಕು ಕಟ್ಟಿಕೊಂಡು, ಭೂಮಗಾತ್ರಕ್ಕೆ ಬೆಳೆದವರು. 1985ರಲ್ಲಿ, ಕೆನಡಾದಲ್ಲಿ ನಷ್ಟದಲ್ಲಿದ್ದ ವಾಹನ ವಿಮಾ ಕಂಪೆನಿಯೊಂದನ್ನು ಖರೀದಿಸಿ, ಅದಕ್ಕೆ ಫೇರ್ ಫಾಕ್ಸ್ ಹೆಸರಿಟ್ಟು ಮುನ್ನಡೆಸಿದ್ದಲ್ಲದೆ, 2008ರಲ್ಲಿ ಅಮೆರಿಕದ ಆರ್ಥಿಕ ಸಂಕಷ್ಟದ ವೇಳೆ ತನ್ನ ಬುದ್ಧಿವಂತಿಕೆಯಿದಾಗಿ ಅಪಾರ ಲಾಭ ಮಾಡಿಕೊಂಡು, ಜಗತ್ತಿನ ಗಮನ ಸೆಳೆದವರು.

ಪ್ರಧಾನಿ ನರೇಂದ್ರ ಮೋದಿ ಅವರ ಬಹಿರಂಗ ಸಮರ್ಥಕರಾಗಿರುವ ಪ್ರೇಮ್ ವತ್ಸ, ಮೋದಿ ಅವರ ಸರಕಾರ ಅಧಿಕಾರಕ್ಕೆ ಬಂದ ವರ್ಷವೇ (2014), ಅವರ ‘‘ಇಂಡಿಯಾ ಕರೆಯುತ್ತಿದೆ’’ (Iಟಿಜiಚಿ ಛಿಚಿಟಟiಟಿg) ಅಭಿಯಾನಕ್ಕೆ ಓಗೊಟ್ಟು, ಭಾರತದಲ್ಲಿ ಫೇರ್ ಫಾಕ್ಸ್ ಇಂಡಿಯಾ ಹೋಲ್ಡಿಂಗ್ಸ್ ಸಂಸ್ಥೆ ಆರಂಭಿಸಿದರು. ಈಗ ಭಾರತದಲ್ಲಿ ಅವರದು ಅಂದಾಜು 70ಸಾವಿರ ಕೋಟಿ ರೂ.ಗಳ ಹೂಡಿಕೆ ಇದೆ (7.3 ಬಿಲಿಯನ್ ಡಾಲರ್). ಬೆಂಗಳೂರು ವಿಮಾನ ನಿಲ್ದಾಣ India calling)ದಲ್ಲಿ ಅವರು ಶೇ. 74 ಹೂಡಿಕೆ ಹೊಂದಿದ್ದಾರೆ. ಥಾಸ್ ಕುಕ್ ಮತ್ತು ಕ್ವೆಸ್ ಕಾರ್ಪ್, ಸೆವೆನ್ ಐಲ್ಯಾಂಡ್ಸ್ ಶಿಪ್ಪಿಂಗ್, ಗೊ ಡಿಜಿಟ್ ವಿಮೆ, IIFL ಕ್ಯಾಪಿಟಲ್ ಸರ್ವೀಸಸ್, 5 ಪೈಸಾ ಕ್ಯಾಪಿಟಲ್ ಅವರ ಗಮನಾರ್ಹ ಹೂಡಿಕೆ ಇರುವ ಇತರ ಕೆಲವು ಸಂಸ್ಥೆಗಳು.

ಐಡಿಬಿಐಯಿಂದ ಸರಕಾರಿ ಹೂಡಿಕೆ ಹಿಂದೆಗೆತದ ಪ್ರಕ್ರಿಯೆ ಆರಂಭಗೊಂಡಿದ್ದು 2021ರಲ್ಲಿ. ಅದು ಬಹಳ ನಿಧಾನ ಗತಿಯಲ್ಲಿತ್ತು. ಅಂದಿನ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಅವರ ಜೊತೆ ಭಾರತದ ಸಂಬಂಧಗಳು ಹಿತಕರವಾಗಿರಲಿಲ್ಲ. ಸಿಖ್ ಪ್ರತ್ಯೇಕತಾವಾದಿ ಹರ್ದೀಪ್ ಸಿಂಗ್ ನಿಜ್ಜಾರ್ ಕೊಲೆಯಲ್ಲಿ ಭಾರತದ ಪಾತ್ರದ ಬಗ್ಗೆ (‘ಗುಸ್ ಕೇ ಮಾರೇಂಗೆ’ ವಿವಾದ) ಎದ್ದಿದ್ದ ಗುಮಾನಿಗಳು (ಈಗ ಭಾರತೀಯ ಮೂಲದ ಆಪಾದಿತನಿಗೆ ಶಿಕ್ಷೆ ಪ್ರಕಟಗೊಂಡಿದೆ.) ಮತ್ತು ರೈತ ಹೋರಾಟದ ವೇಳೆ ಟ್ರುಡೊ ಅವರ ಹೇಳಿಕೆಗಳು ಭಾರತ-ಕೆನಡಾ ಸಂಬಂಧ ಹಳಸಲು ಕಾರಣ ಆಗಿತ್ತು. 2025ರಲ್ಲಿ ಟ್ರುಡೊ ರಾಜೀನಾಮೆಯ ಬಳಿಕ, ಮಾರ್ಕ್ ಕಾರ್ನೆ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡಿದ್ದು, ಸಂಬಂಧಗಳು ಮರುಸ್ಥಾಪನೆ ಆಗಿವೆ. ಈ ಸಂಬಂಧಗಳು ಮರುಸ್ಥಾಪನೆ ಆದ ಬಳಿಕ ಐಡಿಬಿಐ ಖರೀದಿ ವಿಚಾರವು ವೇಗ ಪಡೆದಿದೆ ಎಂದು ಹೇಳಲಾಗುತ್ತಿದೆ.

ವಿವಾದಗಳಿಗೆ ಕಾರಣ

ಐಡಿಬಿಐ ಮಾರಾಟದ ಬಗ್ಗೆ ಇರುವ ವಿವಾದವು ಖರೀದಿಯ ದರಕ್ಕೆ ಸಂಬಂಧಿಸಿದ್ದು. ಐಡಿಬಿಐ ಮಾಡಿಕೊಂಡಿದ್ದ ನಷ್ಟದ ಹೊಂಡ ಮುಚ್ಚುವುದಕ್ಕೆ ಸ್ವತಃ ಸರಕಾರದ ಬೊಕ್ಕಸದಿಂದ ಮತ್ತು ಎಲ್‌ಐಸಿ ಕಡೆಯಿಂದ ಸಾರ್ವಜನಿಕರ ಹಣವು ದೊಡ್ಡ ಪ್ರಮಾಣದಲ್ಲಿ ವ್ಯಯ ಆಗಿದೆ. 2019ರಲ್ಲಿ ಸರಕಾರವು ತನ್ನ ಷೇರುಗಳನ್ನು ಎಲ್‌ಐಸಿಗೆ ಮಾರಾಟ ಮಾಡಿದ್ದು, ಷೇರೊಂದರ 61 ರೂ. ದರದಲ್ಲಿ. ಮಾರುಕಟ್ಟೆಯ ಕಡೆಯಿಂದ ನೋಡಿದರೆ, ಕಳೆದ 52 ವಾರಗಳ ಅವಧಿಯಲ್ಲಿ ಐಡಿಬಿಐ ಷೇರು ದರ ಗರಿಷ್ಠ 119ರೂ. ಮತ್ತು ಕನಿಷ್ಠ 95ರೂ.ಗಳಿಗೆ ಬಿಕರಿ ಆಗಿದೆ. ಇಂತಹ ಷೇರನ್ನು ಸರಕಾರ ಈಗ ಕೇವಲ 81ರೂ.ಗಳಿಗೆ ಮಾರಲು ತೀರ್ಮಾನಿಸಿದೆ. ಅದೂ 9,513 ಕೋಟಿ ರೂ. ಲಾಭದಲ್ಲಿರುವ ಕಂಪೆನಿಯನ್ನು!

ಸರಕಾರದ ಪರ ಇರುವವರ ಪ್ರಕಾರ, ಮಾರಾಟ ಟೆಂಡರ್ ಪ್ರಕ್ರಿಯೆಯ ವೇಳೆ ಗರಿಷ್ಠ ಬಿಡ್ ಇದ್ದದ್ದು ಷೇರೊಂದರ 70.38ರೂ. ಆದರೆ ಅದಕ್ಕಿಂತ ಶೇ. 15 ಹೆಚ್ಚು ದರ ಈಗ ಸಿಕ್ಕಿದೆ. ಆದರೆ, ಪ್ರತಿಪಕ್ಷಗಳು ಮತ್ತು ಈ ಪರಾಭಾರೆಗೆ ವಿರುದ್ಧ ಇರುವವರು ಗಣನೀಯ ಪ್ರಶ್ನೆಗಳನ್ನು ಎತ್ತಿದ್ದಾರೆ. ನಷ್ಟದಲ್ಲಿದ್ದ ಕಂಪೆನಿಯೊಂದನ್ನು ಸಾರ್ವಜನಿಕರ ದುಡ್ಡನ್ನು ಬಳಸಿ ಪುನರುತ್ಥಾನ ಮಾಡಿದ ಬಳಿಕ, ಅದು ಲಾಭದಲ್ಲಿರುವಾಗ, ಮಾರುಕಟ್ಟೆ ಬೆಲೆಗಿಂತ ಕಡಿಮೆ ಬೆಲೆಯಲ್ಲಿ ಮಾರುವುದು ಹಗರಣ ಅಲ್ಲವೇ? ಬ್ಯಾಂಕ್ ಈಗ 3.5 ಲಕ್ಷ ಕೋಟಿ ರೂ.ಗಳ ಠೇವಣಿ ಹೊಂದಿದ್ದು, 2.5ಲಕ್ಷ ಕೋಟಿ ರೂ.ಗಳ ಸಾಲ ನೀಡಿ ಆರೋಗ್ಯವಂತ ಸ್ಥಿತಿಯಲ್ಲಿದೆ. ಜನಸಾಮಾನ್ಯರ ಉಳಿತಾಯಗಳು ಹೀಗೆ ಪರಾಭಾರೆ ಆಗಬಹುದೆ? ಎಂಬೆಲ್ಲ ಪ್ರಶ್ನೆಗಳು ಎದ್ದಿವೆ. ಕಾಂಗ್ರೆಸ್ ಪಕ್ಷ ಈ ಕುರಿತು ಜಂಟಿ ಸಂಸದೀಯ ಸಮಿತಿ ತನಿಖೆ ಆಗಬೇಕೆಂದು ಹೇಳುತ್ತಿದೆ.

ಒಟ್ಟಿನಲ್ಲಿ ಸರಕಾರಕ್ಕೆ ಇಂದಲ್ಲ ನಾಳೆ ಈ ವಿಚಾರದಲ್ಲಿ ಉತ್ತರಿಸುವುದಕ್ಕೆ ಸಾಕಷ್ಟು ನೈತಿಕ ಪ್ರಶ್ನೆಗಳಿವೆ.

(ಅಂಕಣಕಾರರು ಹಿರಿಯ ಪತ್ರಕರ್ತರು ಮತ್ತು ಚಿಂತಕರು)

Tags

IDBI BankIDBI DisinvestmentBhaktavatsalaBank Privatisation
share
ರಾಜಾರಾಂ ತಲ್ಲೂರ್
ರಾಜಾರಾಂ ತಲ್ಲೂರ್
Next Story
X