Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಪಿಟ್ಕಾಯಣ
  5. ‘ಆನಿ’ ಸ್ನೇಹಿ ಆದೇಶದಿಂದ ಕರಾವಳಿಗೆ...

‘ಆನಿ’ ಸ್ನೇಹಿ ಆದೇಶದಿಂದ ಕರಾವಳಿಗೆ ಸಿಮೆಂಟು ಧೂಳು ನುಂಗುವ ಯೋಗ?

ರಾಜಾರಾಂ ತಲ್ಲೂರುರಾಜಾರಾಂ ತಲ್ಲೂರು11 Oct 2025 10:57 AM IST
share
‘ಆನಿ’ ಸ್ನೇಹಿ ಆದೇಶದಿಂದ ಕರಾವಳಿಗೆ ಸಿಮೆಂಟು ಧೂಳು ನುಂಗುವ ಯೋಗ?

ಸಂವಿಧಾನದ 48ಎ ವಿಧಿಯನ್ವಯ ಪರಿಸರ ಸಂರಕ್ಷಣೆ ಮತ್ತು ಸುಧಾರಣೆ ಭಾರತ ಸರಕಾರದ ಜವಾಬ್ದಾರಿ. ಈ ಜವಾಬ್ದಾರಿಯನ್ನು ‘ಮುಲಾಜು ರಹಿತ ನಿಯಂತ್ರಕ/ಕಾನೂನು ಪಾಲಕ ಏಜೆನ್ಸಿ’ ಆಗಿ ನಿಭಾಯಿಸಬೇಕಿದ್ದ ಸರಕಾರವು ತನ್ನ ತೀರ್ಮಾನಗಳಲ್ಲಿ ಖಾಸಗಿ ಹಿತಾಸಕ್ತಿಗಳಿಗೆ ಅನುಕೂಲ ಆಗುವಂತೆ ಸರಕಾರಿ ಕಾನೂನು-ನಿಯಮಗಳನ್ನು ಬದಲಾಯಿಸುತ್ತಿರುವುದು, ಜನರ ತೆರಿಗೆ ಹಣದಲ್ಲಿ ಆ ಅಪಾಯಕಾರಿ ಕಾರ್ಖಾನೆಗಳಿಗೆ ಜನನಿಬಿಡ ಜಾಗಗಳಲ್ಲೇ ಮೂಲಸೌಕರ್ಯ ಒದಗಿಸುತ್ತಿರುವುದು ಸಂವಿಧಾನ ಬಾಹಿರ ಕ್ರಮ ಅನ್ನಿಸುವುದಿಲ್ಲವೇ?

ಕರಾವಳಿಯಂತಹ ಜನನಿಬಿಡ ಸ್ಥಳಕ್ಕೆ ಬೇಡಬೇಡವೆಂದರೂ ಕಡೆಗೆ ಸಿಮೆಂಟು ಕಾರ್ಖಾನೆ ಬಂದು ವಕ್ಕರಿಸಲಿದೆಯೇ? ಅಂತಹದೊಂದು ಲಕ್ಷಣ ಢಾಳಾಗಿ ಕಾಣಿಸುತ್ತಿದೆ. ಕಳೆದ ಹತ್ತು ವರ್ಷಗಳಲ್ಲಿ ಒಂದೊಂದಾಗಿ ಇಡಲಾಗಿರುವ ಚುಕ್ಕಿಗಳನ್ನೆಲ್ಲ ಸೇರಿಸಿ ರಂಗೋಲಿ ಚಿತ್ರವೊಂದು ಪೂರ್ಣಗೊಳ್ಳುವ ಕಾಲ ಸಮೀಪಿಸಿದಂತೆ ಕಾಣಿಸುತ್ತಿದೆ. ಕರಾವಳಿ ವಾಸಯೋಗ್ಯವಾಗಿ ಉಳಿಯಲಿದೆಯೇ ಎಂಬ ಪ್ರಶ್ನೆಗೆ ಉತ್ತರ ಇನ್ನೈದು ವರ್ಷಗಳಲ್ಲಿ ನಮ್ಮೆದುರು ಸಾಕಾರಗೊಳ್ಳಲಿದೆ.

ಸಿಮೆಂಟು ಅರೆಯುವ ಕಾರ್ಖಾನೆಗಳು ತನ್ನ ಸ್ವಂತ ಬಳಕೆಗೆಂದು ಮೀಸಲಾಗಿರುವ ವಿದ್ಯುತ್ ಉತ್ಪಾದನಾ ಘಟಕವನ್ನು ಹೊಂದಿಲ್ಲ ಎಂದಾದಲ್ಲಿ ಮತ್ತು ತನ್ನಲ್ಲಿಗೆ ಬರುವ ಕಚ್ಚಾವಸ್ತುಗಳು ಹಾಗೂ ತಾನು ಸರಬರಾಜು ಮಾಡುವ ಅಂತಿಮ ಉತ್ಪನ್ನ (ಸಿಮೆಂಟು) ಸಾಗಣೆಗೆ ರೈಲು ಅಥವಾ ವಿದ್ಯುತ್ ಚಾಲಿತ ವಾಹನಗಳನ್ನು ಬಳಸುವುದಿದ್ದಲ್ಲಿ, ಅಂತಹ ಸಿಮೆಂಟು ಅರೆಯುವ ಕಾರ್ಖಾನೆಗಳಿಗೆ (ಅಧಿಕೃತವಾಗಿ ಇವನ್ನು: Standalone Cement Grinding Units without Captive Power Plant and with complete transportation of raw materials and finished products via Railways and/or E-Vehicles ಎಂದು ವಿವರಿಸಲಾಗಿದೆ.) ಸ್ಥಾಪನೆಗೆ ಮುನ್ನ ಪಡೆಯಬೇಕಾಗಿರುವ ಪರಿಸರ ಅನುಮತಿ (ಇಸಿ)ಯಿಂದ ವಿನಾಯಿತಿ ನೀಡಬಹುದು ಎಂಬ ಪ್ರಸ್ತಾವವನ್ನು ಭಾರತ ಸರಕಾರದ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು ಇದೇ ಸೆಪ್ಟಂಬರ್ 26ರ ಗಜೆಟ್ ಪ್ರಕಟಣೆಯ (CG-DL-E-01102025-266576) ಮೂಲಕ ಸಾರ್ವಜನಿಕರ ಮುಂದಿಟ್ಟಿದ್ದು, ಯಾವುದೇ ಆಕ್ಷೇಪಗಳಿದ್ದಲ್ಲಿ 60 ದಿನಗಳ ಒಳಗೆ ತಿಳಿಸತಕ್ಕದ್ದು, ಇಲ್ಲದಿದ್ದರೆ ಈ ಪ್ರಸ್ತಾವವನ್ನು ಅಂತಿಮಗೊಳಿಸುವ ನಿಟ್ಟಿನಲ್ಲಿ ಪರಿಗಣಿಸಲಾಗುವುದು ಎಂದು ಹೇಳಿದೆ.

ಅಂಗೀಕಾರಗೊಂಡರೆ...

ಒಂದು ವೇಳೆ, ಮುಂದೆ ಈ ಪ್ರಸ್ತಾವ ಅಂಗೀಕಾರಗೊಂಡು ಅಧಿಕೃತ ನಿಯಮವಾಗಿ ಬದಲಾದರೆ, ಕರಾವಳಿಯ ಮಟ್ಟಿಗೆ ಇದು ಮಹತ್ವದ ಬೆಳವಣಿಗೆಯಾಗುವ ಸಾಧ್ಯತೆಗಳಿವೆ. ಉಡುಪಿಯ ಎಲ್ಲೂರಿನಲ್ಲಿರುವ ಅದಾನಿ ಬಳಗದ 2x600MW ಸಾಮರ್ಥ್ಯದ ಉಷ್ಣವಿದ್ಯುತ್ ಸ್ಥಾವರವು 2017ರಿಂದಲೇ ತನ್ನ ಕಾರ್ಖಾನೆಯ ನಿವೇಶನದ ಒಳಗೆ ಸುಮಾರು 35 ಎಕರೆ ಜಾಗದಲ್ಲಿ 2.0 MTPA (ಪ್ರತಿದಿನ 2 ಮೆಟ್ರಿಕ್ ಟನ್ ಉತ್ಪಾದನೆ) ಸಾಮರ್ಥ್ಯದ ಸಿಮೆಂಟು ಅರೆಯುವ ಕಾರ್ಖಾನೆ ನಿರ್ಮಿಸಲು ಯೋಜನೆ ಸಿದ್ಧಪಡಿಸುತ್ತಿದೆ. ಆಮದಿತ ಕಲ್ಲಿದ್ದಲು ಬಳಸುವ ಈ ಸ್ಥಾವರದಲ್ಲಿ ವಿದ್ಯುತ್ ಉತ್ಪಾದನೆಯ ವೇಳೆ ದೊರಕುವ ಉಪ ಉತ್ಪನ್ನವಾದ ಹಾರುಬೂದಿಯನ್ನು ಈ ಸಿಮೆಂಟು ಉತ್ಪಾದನೆಗೆ ಬಳಸುವ ಉದ್ದೇಶ ಅವರದ್ದಾಗಿತ್ತು. ಅಲ್ಲಿ ಪೋರ್ಟ್‌ಲ್ಯಾಂಡ್ ಪೊಝಲೋನಾ ಸಿಮೆಂಟ್/ಸಾಮಾನ್ಯ ಪೋರ್ಟ್‌ಲ್ಯಾಂಡ್ ಸಿಮೆಂಟ್ ಉತ್ಪಾದಿಸುವ ಯೋಜನೆ ಇದಾಗಿದ್ದು, ಅದಕ್ಕೆ ಬೇಕಾದ ಹಾರುಬೂದಿ (2,150 ಟನ್ ಪ್ರತಿದಿನ) ಅಲ್ಲೇ ದೊರೆಯಲಿದೆ. ಬೇರೆ ಕಚ್ಚಾಸಾಮಗ್ರಿಗಳಾದ ಕ್ಲಿಂಕರ್ ಅನ್ನು (3,700 ಟನ್ ಪ್ರತಿದಿನ) ಬೇರೆಡೆಗಳಿಂದ ರಸ್ತೆಯ ಮೂಲಕವೂ, ಸುಣ್ಣವನ್ನು (245 ಟನ್ ಪ್ರತಿದಿನ) ರಸ್ತೆ ಅಥವಾ ರೈಲು ಹಾದಿಯ ಮೂಲಕವೂ ತರಿಸುವುದು ಈ ಯೋಜನೆಯ ಭಾಗವಾಗಿತ್ತು. ಇದಕ್ಕೆ ಅಗತ್ಯ ಇರುವ 15MVA ವಿದ್ಯುತ್‌ಅನ್ನು ತನ್ನದೇ ಕಾರ್ಖಾನೆಯಿಂದ ಅಥವಾ ರಾಜ್ಯ ವಿದ್ಯುತ್ ಗ್ರಿಡ್ ಮೂಲಕ ಪಡೆಯಲು ಮತ್ತು ದೈನಂದಿನ ಅಗತ್ಯವಾಗಿರುವ 300 ಕ್ಯೂಬಿಕ್ ಮೀಟರ್ ನೀರನ್ನು KIDC ಮೂಲದಿಂದಲೂ ಪಡೆಯಲು ಯೋಜಿಸಲಾಗಿತ್ತು. ಈ ಬಗ್ಗೆ ದಾಖಲೆಗಳು ಸಾರ್ವಜನಿಕವಾಗಿ ಲಭ್ಯವಿವೆ. ಆದರೆ, ನಿಗೂಢ ಕಾರಣಗಳಿಗಾಗಿ ಈ ನಿಟ್ಟಿನಲ್ಲಿ ಕಳೆದ ನಾಲ್ಕೈದು ವರ್ಷಗಳಿಂದ ಯಾವುದೇ ನೇರ ಬೆಳವಣಿಗೆಗಳು ನಡೆದಿರುವುದು ಸಾರ್ವಜನಿಕವಾಗಿ ಗಮನಕ್ಕೆ ಬಂದಿರಲಿಲ್ಲ.

ಆದರೆ ಪರೋಕ್ಷವಾಗಿ, ಕರಾವಳಿಯ ಉದ್ದಗಲಕ್ಕೂ ಜಲಮಾರ್ಗ, ಜಲ ರೋ-ರೋ, ಕಿರುಬಂದರುಗಳಲ್ಲಿ ಸರಕು ಜೆಟ್ಟಿ ಸ್ಥಾಪನೆ, ಸಣ್ಣ ಗಾತ್ರದ ಯಾಚ್‌ಗಳ ನಿಲುಗಡೆಗೆ ಸ್ಥಳ ನಿರ್ಮಾಣ ಮತ್ತಿತರ ಲಾಜಿಸ್ಟಿಕ್ ಬೆಳವಣಿಗೆಗಳು ಹಂತಹಂತವಾಗಿ ಸಾರ್ವಜನಿಕರ ತೆರಿಗೆಯ ಹಣದಲ್ಲಿ ನಡೆಯುತ್ತಲೇ ಬರುತ್ತಿದ್ದವು. ಈ ಬೆಳವಣಿಗೆಗಳಿಗೂ-ಉದ್ದೇಶಿತ ಸಿಮೆಂಟು ಕಾರ್ಖಾನೆಗೂ ಯಾವುದೇ ನೇರ ಸಂಬಂಧ ಮೇಲುನೋಟಕ್ಕೆ ಕಂಡುಬರುತ್ತಿರಲಿಲ್ಲ.

ಆದರೆ, ಈಗ ಏಕಾಏಕಿ, ಮೇಲೆ ವಿವರಿಸಿದ ಸರಕಾರಿ ‘ವಿನಾಯಿತಿ’ ಪ್ರಸ್ತಾವದೊಂದಿಗೆ, ಎಲ್ಲ ಚುಕ್ಕಿಗಳೂ ಸೇರಿ ರಂಗೋಲಿ ಪೂರ್ಣಗೊಂಡಂತೆ ಕಾಣಿಸುತ್ತಿವೆ. ಸದ್ರಿ ಉಷ್ಣವಿದ್ಯುತ್ ಸ್ಥಾವರವು ತಾನು ಉತ್ಪಾದಿಸುವ 1080MW ವಿದ್ಯುತ್ತನ್ನು ರಾಜ್ಯ ಸರಕಾರದ ಆISಅಔಒ ಗಳಿಗೆ ವಿತರಿಸುವ ದೀರ್ಘಕಾಲಿಕ ವಿದ್ಯುತ್ ಖರೀದಿ ಒಪ್ಪಂದ ಹೊಂದಿರುವುದರಿಂದ, ತನ್ನ ಸಿಮೆಂಟ್ ಕಾರ್ಖಾನೆಗೆ ರಾಜ್ಯ ವಿದ್ಯುತ್ ಗ್ರಿಡ್‌ನಿಂದ ವಿದ್ಯುತ್ ಖರೀದಿಸಿದರೆ, ಸಹಜವಾಗಿಯೇ ಕ್ಯಾಪ್ಟಿವ್ ಪವರ್ ಪ್ಲಾಂಟ್ ಇಲ್ಲ ಎಂದು ತೋರಿಸಿದಂತಾಗುತ್ತದೆ. ಸರಕು ಸಾಗಣೆಗೆ ಅಗತ್ಯ ಲಾಜಿಸ್ಟಿಕ್ಸ್ ಸರಕಾರಿ ಖರ್ಚಿನಲ್ಲಿ ಸಿದ್ಧವಾಗಿದೆ. ಈ ಎಲ್ಲ ಸಿದ್ಧತೆಗಳಿಗೆ ಸರಿಹೊಂದುವಂತಹ ‘ಪರಿಸರ ಅನುಮತಿ ವಿನಾಯಿತಿ’ ಆದೇಶವೂ ಈಗ ಸರಕಾರದ ಕಡೆಯಿಂದ ಹೊರಬರಲು ಅಣಿಯಾಗುತ್ತಿದೆ. ಈ ಎಲ್ಲ ಬೆಳವಣಿಗೆಗಳೂ ಏಕತ್ರಗೊಂಡು ಕರಾವಳಿಗೆ ಸಿಮೆಂಟ್ ಧೂಳು ನುಂಗುವ ಭಾಗ್ಯ ಕರುಣಿಸಿದರೆ ಯಾವುದೇ ಅಚ್ಚರಿ ಇಲ್ಲ.

ಬಂದರೆ ಏನು ತೊಂದರೆ?

ಮಹಾರಾಷ್ಟ್ರದಲ್ಲಿ ಅದಾನಿ ಬಳಗವು ತಾನು ಖರೀದಿಸಿರುವ ಅಂಬುಜಾ ಸಿಮೆಂಟ್ಸ್‌ಗೆ ಸೇರಿದ ಕಲ್ಯಾಣ್‌ನಲ್ಲಿರುವ ಜಾಗದಲ್ಲಿ 6 MMTPA ಸಾಮರ್ಥ್ಯದ ಸಿಮೆಂಟ್ ಅರೆಯುವ ಕಾರ್ಖಾನೆ ಯೋಜನೆಯನ್ನು ಮೇಲೆ ವಿವರಿಸಿರುವ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಮುಂದುವರಿಸಲು ತೀರ್ಮಾನಿಸಿರುವ ಬಗ್ಗೆ ಮತ್ತು ಅದಕ್ಕೆ ಸಾರ್ವಜನಿಕ ವಿರೋಧ ವ್ಯಕ್ತವಾಗಿರುವ ಬಗ್ಗೆ ಕಳೆದ ವಾರ ‘ಇಂಡಿಯನ್ ಎಕ್ಸ್‌ಪ್ರೆಸ್’ ಪತ್ರಿಕೆ ವರದಿ ಮಾಡಿತ್ತು. ಕಲ್ಯಾಣ್ ಎಂಬುದು ಮುಂಬೈ ಮಹಾನಗರಿಯ ಹೊರವಲಯದ ಜನನಿಬಿಡ ಪ್ರದೇಶ. ಇದಲ್ಲದೆ, ವಿಶಾಖಪಟ್ಟಣದ ಗಂಗಾವರಂ ಬಂದರು ಸಮೀಪದಲ್ಲೂ 4MTPA ಸಾಮರ್ಥ್ಯದ ಇನ್ನೊಂದು ಸಿಮೆಂಟು ಅರೆಯುವ ಕಾರ್ಖಾನೆ ಇದೇ ಬಳಗದಿಂದ ಸಿದ್ಧವಾಗುತ್ತಿದೆಯಂತೆ.

ಸಂವಿಧಾನದ 48ಎ ವಿಧಿಯನ್ವಯ ಪರಿಸರ ಸಂರಕ್ಷಣೆ ಮತ್ತು ಸುಧಾರಣೆ ಭಾರತ ಸರಕಾರದ ಜವಾಬ್ದಾರಿ. ಈ ಜವಾಬ್ದಾರಿಯನ್ನು ‘ಮುಲಾಜು ರಹಿತ ನಿಯಂತ್ರಕ/ಕಾನೂನು ಪಾಲಕ ಏಜೆನ್ಸಿ’ ಆಗಿ ನಿಭಾಯಿಸಬೇಕಿದ್ದ ಸರಕಾರವು ತನ್ನ ತೀರ್ಮಾನಗಳಲ್ಲಿ ಖಾಸಗಿ ಹಿತಾಸಕ್ತಿಗಳಿಗೆ ಅನುಕೂಲ ಆಗುವಂತೆ ಸರಕಾರಿ ಕಾನೂನು-ನಿಯಮಗಳನ್ನು ಬದಲಾಯಿಸುತ್ತಿರುವುದು, ಜನರ ತೆರಿಗೆ ಹಣದಲ್ಲಿ ಆ ಅಪಾಯಕಾರಿ ಕಾರ್ಖಾನೆಗಳಿಗೆ ಜನನಿಬಿಡ ಜಾಗಗಳಲ್ಲೇ ಮೂಲಸೌಕರ್ಯ ಒದಗಿಸುತ್ತಿರುವುದು ಸಂವಿಧಾನ ಬಾಹಿರ ಕ್ರಮ ಅನ್ನಿಸುವುದಿಲ್ಲವೇ?

ಉಷ್ಣ ವಿದ್ಯುತ್ ಸ್ಥಾವರದ ಹಾರುಬೂದಿಯಲ್ಲೇ ಪಾದರಸ, ಸೀಸ, ಕ್ಯಾಡ್ಮಿಯಂ, ಆರ್ಸೆನಿಕ್, ಜಿಂಕ್‌ನಂತಹ ಭಾರಲೋಹಗಳು ಮತ್ತು ಯುರೇನಿಯಂ, ಥೋರಿಯಂನಂತಹ ವಿಕಿರಣಶೀಲ ಮಾಲಿನ್ಯಕಾರಕಗಳಿರುವುದು ಹೊಸ ಸಂಗತಿ ಏನಲ್ಲ. ಎಲ್ಲೂರಿನ ಕಾರ್ಖಾನೆಗೆ ಹಸಿರು ನ್ಯಾಯ ಪೀಠವು ಪರಿಸರ ಮತ್ತು ಆರೋಗ್ಯ ಹಾನಿ ಮಾಡಿದ್ದಕ್ಕಾಗಿ 2022ರಲ್ಲಿ 52.02 ಕೋಟಿ ರೂ.ಗಳ ದಂಡ ವಿಧಿಸಿರುವುದನ್ನು ನೆನಪಿಸಿಕೊಳ್ಳಿ. ಈಗಾಗಲೇ ಉಡುಪಿ-ಮಂಗಳೂರು ಜಿಲ್ಲೆಗಳಲ್ಲಿ ಎಲ್ಲೂರು ಕಾರ್ಖಾನೆಯ ಅಂದಾಜು 20-25 ಕಿ.ಮೀ. ಸುತ್ತಳತೆಯ ಪ್ರದೇಶಗಳಲ್ಲಿ ವಿವಿಧ ಕ್ಯಾನ್ಸರ್ ಗಳು, ಚರ್ಮರೋಗಗಳು, ಅಲರ್ಜಿ, ಆಸ್ತಮಾ ಮತ್ತಿತರ ಬೇನೆ-ಬವಣೆಗಳು ಅಸಹಜ ಎನ್ನಿಸುವಷ್ಟು ಪ್ರಮಾಣದಲ್ಲಿ ಹೆಚ್ಚುತ್ತಿರುವುದು ಇಲ್ಲಿನ ಜನಸಾಮಾನ್ಯರಲ್ಲಿ, ಆರೋಗ್ಯ ಕ್ಷೇತ್ರದಲ್ಲಿ ಕಳವಳ ಮೂಡಿಸಿದೆ. ಈ ಬಗ್ಗೆ ವಿವರವಾದ ಅಧ್ಯಯನ ನಡೆಸು ವುದಕ್ಕೆ ಯಾರೂ ಆಸಕ್ತಿ ತೋರಿಸುತ್ತಿಲ್ಲ. ಅಂತಹದರಲ್ಲಿ, ಈಗ ಮತ್ತೆ ಅದೇ ಪರಿಸರದಲ್ಲಿ ಸಿಮೆಂಟು ಉತ್ಪಾದನೆ ಆರಂಭಗೊಂಡರೆ ಅದು ಮತ್ತಷ್ಟು ಮಾಲಿನ್ಯಕ್ಕೆ ಕಾರಣ ಆಗುವುದರಲ್ಲಿ ಅಚ್ಚರಿ ಇಲ್ಲ.

ಮೇಲಾಗಿ ಈ ಘಟಕ ಹೆಚ್ಚೆಂದರೆ 65-70 ಉದ್ಯೋಗಗಳನ್ನು ಮಾತ್ರ ಸೃಷ್ಟಿಸಬಲ್ಲುದು ಎಂದು ಸಾರ್ವಜನಿಕವಾಗಿ ಲಭ್ಯವಿರುವ ಅವರದೇ ಮಾಹಿತಿ ಹೇಳುತ್ತಿದೆ. ಅಂಬುಜಾ ಸಿಮೆಂಟ್ಸ್‌ಗೆ ಸಂಬಂಧಿಸಿ ನಡೆದ ಅಲ್ಲಿನ ಕಾರ್ಮಿಕರ ಆರೋಗ್ಯ ಅಧ್ಯಯನವೊಂದು (https://jchr.org/index.php/JCHR/article/view/vieತಿ/6977) ಅಲ್ಲಿನ ಕಾರ್ಮಿಕರಲ್ಲಿ ಚರ್ಮ, ಶ್ವಾಸಕೋಶ, ಕಣ್ಣು ಇತ್ಯಾದಿ ಅಂಗಗಳಲ್ಲಿ ಗಂಭೀರ ತೊಂದರೆಗಳು ಕಾಣಿಸಿಕೊಂಡಿರುವ ಬಗ್ಗೆ ಹೇಳಿದೆ. ಇದಲ್ಲದೆ, ಸಿಮೆಂಟು ಕಾರ್ಖಾನೆಗಳ ಸಮೀಪ ವಾಸಿಸುವವರಲ್ಲಿ ಹೃದಯದ ರಕ್ತನಾಳಗಳ, ಶ್ವಾಸಕೋಶಗಳ ತೊಂದರೆಗಳು ಹೆಚ್ಚು ಕಾಣಿಸಿಕೊಳ್ಳುತ್ತಿರುವ ಬಗ್ಗೆಯೂ ಅಧ್ಯಯನ ವರದಿಗಳು ಲಭ್ಯವಿವೆ.

ಸರಕಾರಗಳು ಯಾವುದೇ ಪರಿಸರ-ಪರಿಣಾಮ ಅಧ್ಯಯನ, ಕರಾವಳಿಯ ಧಾರಣ ಸಾಮರ್ಥ್ಯದ ಅಧ್ಯಯನ ಇಲ್ಲದೆ ಹಂತಹಂತವಾಗಿ ಕರಾವಳಿಯನ್ನು ವಿಷಮಯಗೊಳಿಸಿ, ಇಲ್ಲಿನ ಬದುಕನ್ನು ದುಸ್ತರಗೊಳಿಸುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ರಾಜಕೀಯ-ಸಾಮಾಜಿಕ-ಧಾರ್ಮಿಕ ಕಾರಣಗಳನ್ನು ಮುಂದೊಡ್ಡಿ, ಜನರ ನಡುವೆ ಶಾಶ್ವತ ಒಡಕು ಮೂಡಿಸಲಾಗುತ್ತಿದೆ ಮತ್ತು ದುಡ್ಡೊಂದನ್ನೇ ಮುಂದಿಟ್ಟು ತಪ್ಪು ವ್ಯಕ್ತಿಗಳನ್ನು ಸಾಮಾಜಿಕ ನಾಯಕತ್ವ, ರಾಜಕೀಯ ಪ್ರಾತಿನಿಧ್ಯ ಎಂದು ಬಿಂಬಿಸಲಾಗುತ್ತಿದೆ. ಆ ಮೂಲಕ ಜನರ ಬದುಕು-ಭಾವನೆಗಳಿಗೆ ಕಿಂಚಿತ್ತೂ ಬೆಲೆಕೊಡದೆ, ಯಾರದೋ ಹಿತಾಸಕ್ತಿಗಳನ್ನೇ ಜನರ ಭಾವನೆ ಎಂದು ಬಿಂಬಿಸಿ, ಜನ ಕೇಳಿರದ ಯೋಜನೆಗಳನ್ನು ಆಕಾಶದಿಂದ ಉದುರಿಸಲಾಗುತ್ತಿದೆ. ಇಷ್ಟ ಇರಲಿ-ಇಲ್ಲದಿರಲಿ ಅವನ್ನು ಅನುಭವಿಸುವುದು ಕರಾವಳಿಗರ ದೈನಂದಿನ ಬದುಕಾಗುತ್ತಿದೆ. ಈ ಬಗ್ಗೆ ಗಂಭೀರ ಚಿಂತನೆ ತುರ್ತಾಗಿ ನಡೆಯದಿದ್ದರೆ, ಶೀಘ್ರವೇ ಕರಾವಳಿಯು ವಾಸಯೋಗ್ಯ ಪ್ರದೇಶವಾಗಿ ಉಳಿಯುವುದಿಲ್ಲ.

share
ರಾಜಾರಾಂ ತಲ್ಲೂರು
ರಾಜಾರಾಂ ತಲ್ಲೂರು
Next Story
X