Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಪಿಟ್ಕಾಯಣ
  5. ನೆಲ ಬಗೆಯುವುದು ಇನ್ನು ವನ್-ವೇ ತೀರ್ಮಾನ;...

ನೆಲ ಬಗೆಯುವುದು ಇನ್ನು ವನ್-ವೇ ತೀರ್ಮಾನ; ನಾಗರಿಕ ಅಭಿಪ್ರಾಯ ಅನಗತ್ಯ

ರಾಜಾರಾಂ ತಲ್ಲೂರುರಾಜಾರಾಂ ತಲ್ಲೂರು4 Oct 2025 9:26 AM IST
share
ನೆಲ ಬಗೆಯುವುದು ಇನ್ನು ವನ್-ವೇ ತೀರ್ಮಾನ; ನಾಗರಿಕ ಅಭಿಪ್ರಾಯ ಅನಗತ್ಯ

ಅಮೆರಿಕದಲ್ಲಿ ಅಧ್ಯಕ್ಷ ಟ್ರಂಪ್ ಅವರ ದಂಡನಾತೆರಿಗೆ ಹೊರೆಗಳ ಹಿನ್ನೆಲೆಯಲ್ಲಿ ಚೀನಾ ಜೊತೆ ಮತ್ತೆ ಸಾಮೀಪ್ಯವನ್ನು ವ್ಯಕ್ತಪಡಿಸುತ್ತಿರುವ ಭಾರತವು, ಈ ಅಪರೂಪದ ಖನಿಜಗಳ ಆಮದಿಗೆ ಸಂಬಂಧಿಸಿದಂತೆ ಚೀನಾ ಜೊತೆ ಮಾತುಕತೆ ನಡೆಸುವ ಮತ್ತು ಭಾರತದ ಪರವಾದ ತೀರ್ಮಾನ ಪಡೆಯುವ ಮಾಸ್ಟರ್ ಸ್ಟ್ರೋಕ್ ಹೊಡೆಯಲು ಪ್ರಯತ್ನಿಸಬಹುದಿತ್ತು. ಅದರ ಬದಲು, ದೇಶದ ಉದ್ದಗಲಕ್ಕೂ ಅಪರೂಪದ ಖನಿಜಗಳ ಗಣಿಗಾರಿಕೆಗೆ ಮತ್ತು ಅನ್ವೇಷಣೆಗೆ ಖಾಸಗಿ ವಲಯವನ್ನು ಸಜ್ಜುಗೊಳಿಸುತ್ತಿರುವುದು ನಿಜಕ್ಕೂ ಅಚ್ಚರಿ ಅನ್ನಿಸುತ್ತಿದೆ. ಸಾಮಾನ್ಯ ಗಣಿಗಾರಿಕೆಗಿಂತ ಹತ್ತು ಪಟ್ಟು ಹೆಚ್ಚು ಪರಿಸರ ಹಾನಿಕಾರಕ ಗಣಿಗಾರಿಕೆ ಇದು.

ಹಾಲಿ ಭಾರತ ಸರಕಾರದ ನೀತ್ಯಾತ್ಮಕ ಚುಕ್ಕಿಗಳೆಲ್ಲ ರಂಗೋಲಿಯಾಗಿ ಬದಲಾಗುವುದನ್ನು ನೋಡುವುದೇ ಒಂದು ಚೋದ್ಯ. ಜಗತ್ತಿನಾದ್ಯಂತ ಅಪರೂಪದ ಖನಿಜಗಳಿಗೆ (ರೇರ್ ಅರ್ಥ್ ಎಲೆಮೆಂಟ್ಸ್- REE) ಬೇಡಿಕೆ ಹೆಚ್ಚುತ್ತಿರುವಂತೆಯೇ ರಂಗಕ್ಕಿಳಿದಿರುವ ಭಾರತ, ಈಗಾಗಲೇ ಆರು ಸುತ್ತುಗಳಲ್ಲಿ ಭಾರತದ 47 ನಿಕ್ಷೇಪಗಳನ್ನು ಖಾಸಗಿಯವರಿಗೆ ಗಣಿಗಾರಿಕೆಗೆ/ನಿಕ್ಷೇಪ ಅನ್ವೇಷಣೆಗೆ ಹರಾಜು ಮಾಡಿದೆ ಮತ್ತು ಮೊದಲ ಸುತ್ತಿನಲ್ಲಿ ಹರಾಜು ಗೆದ್ದವರು ರಂಗಕ್ಕಿಳಿಯಲು ಅನುಕೂಲ ಆಗುವಂತೆ ನೀತ್ಯಾತ್ಮಕ ಬದಲಾವಣೆಗಳಲ್ಲಿ ತೊಡಗಿಕೊಂಡಿದೆ.

ಇಂತಹ ಮಹತ್ವದ ತೀರ್ಮಾನವೊಂದರಲ್ಲಿ, ಭಾರತ ಸರಕಾರದ ಪರಿಸರ ಇಲಾಖೆಯು ಇದೇ ಸೆಪ್ಟಂಬರ್ 08ರಂದು ಒಂದು ಆಫೀಸ್ ಮೆಮೊರಾಂಡಂ (F.No.IA-Z-11013/136/2025-IA-I) ಹೊರಡಿಸಿದ್ದು, ಆ ಮೂಲಕ, ಮೈನ್ಸ್ ಆಂಡ್ ಮಿನರಲ್ಸ್ (ಅಭಿವೃದ್ಧಿ ಮತ್ತು ನಿಯಂತ್ರಣ) ಕಾಯ್ದೆಯ ಅಡಿಯಲ್ಲಿ, ಕಾಯ್ದೆಯ ಮೊದಲ ಶೆಡ್ಯೂಲಿನಲ್ಲಿ ಬರುವ ಪರಮಾಣು ಶಕ್ತಿ ಮಿನರಲ್‌ಗಳು (ಭಾಗ ಬಿ) ಮತ್ತು ಕ್ರಿಟಿಕಲ್ ಹಾಗೂ ಸ್ಟ್ರಾಟಜಿಕ್ ಮಿನರಲ್ಸ್ (ಭಾಗ ಡಿ)ಗಳ ಗಣಿಗಾರಿಕೆಗೆ, ಪರಿಸರ ಇಲಾಖೆಯ ‘ಪರಿಸರ ಪರಿಣಾಮ ವಿಶ್ಲೇಷಣೆ ಪ್ರಕಟಣೆ 200’ರ ಅನ್ವಯ ಕಡ್ಡಾಯವಾಗಿದ್ದ ‘ಸಾರ್ವಜನಿಕ ಅಭಿಪ್ರಾಯ ಸಂಗ್ರಹ’ ಪ್ರಕ್ರಿಯೆಯಿಂದ ವಿನಾಯಿತಿ ನೀಡಲಾಗಿದೆ.

ಇದೊಂದು ಮಹತ್ವದ ಬದಲಾವಣೆ ಆಗಿದ್ದು, ಗಣಿಗಾರಿಕೆ ನಡೆಯಬೇಕಾಗಿರುವ ಜಾಗಗಳ ಸ್ಟೇಕ್ ಹೋಲ್ಡರುಗಳಿಗೆ ಈ ಬೆಳವಣಿಗೆಯಿಂದಾಗಿ, ತಮ್ಮ ಪರಿಸರದಲ್ಲಿ ನಡೆಯಲಿರುವ ಗಣಿಗಾರಿಕೆಯ ಬಗ್ಗೆ ತಮ್ಮ ಅಭಿಪ್ರಾಯವನ್ನು ಅಥವಾ ವಿರೋಧವನ್ನು ಪ್ರಕಟಿಸುವುದಕ್ಕೆ ಯಾವುದೇ ಅವಕಾಶ ಉಳಿಯುವುದಿಲ್ಲ. ಪರಿಸರ ಸಚಿವಾಲಯವು ಈ ತೀರ್ಮಾನ ತೆಗೆದುಕೊಳ್ಳುವುದಕ್ಕೆ ಎರಡು ಪತ್ರಗಳತ್ತ ಬೊಟ್ಟು ಮಾಡಿದೆ. ಮೊದಲ ಪತ್ರ, ಭಾರತ ಸರಕಾರದ ರಕ್ಷಣಾ ಇಲಾಖೆ 4-8-2025ರಂದು ಬರೆದಿರುವಂತಹದು. ಆ ಪತ್ರದಲ್ಲಿ, ರಕ್ಷಣಾ ಉತ್ಪಾದನೆಗಳಿಗೆ ಹಲವು ಮಿನರಲ್‌ಗಳು, ಮ್ಯಾಗ್ನೆಟ್‌ಗಳು ಅಗತ್ಯವಿದ್ದು, ಅವುಗಳ ಗಣಿಗಾರಿಕೆಯನ್ನು ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಯೋಜನೆಗಳೆಂದು ಪರಿಗಣಿಸಿ, ಸಾರ್ವಜನಿಕ ಅಭಿಪ್ರಾಯ ಸಂಗ್ರಹದಿಂದ ಅವಕ್ಕೆ ವಿನಾಯಿತಿ ಕೊಡಬೇಕೆಂದು ಕೇಳಲಾಗಿದೆ. ಅದಾಗಿ ಒಂದೇ ತಿಂಗಳಿನ ಒಳಗೆ ಪರಮಾಣು ಶಕ್ತಿ ಸಚಿವಾಲಯವು ಕೂಡ 29-8-2025ರಂದು ಪರಿಸರ ಇಲಾಖೆಗೆ ಪತ್ರ ಬರೆದು, ಥೋರಿಯಂ, ಯುರೇನಿಯಂನಂತಹ ತನಗೆ ಅಗತ್ಯ ಇರುವ ಮಿನರಲ್‌ಗಳ ಗಣಿಗಾರಿಕೆಗೂ ಸಾರ್ವಜನಿಕ ಅಭಿಪ್ರಾಯ ಸಂಗ್ರಹದಿಂದ ವಿನಾಯಿತಿ ಕೊಡಬೇಕೆಂದು ಕೋರಿದೆ.

ಈ ಎರಡು ಪತ್ರಗಳನ್ನು ಪರಿಗಣಿಸಿರುವುದಾಗಿ ಹೇಳಿರುವ ಭಾರತ ಸರಕಾರದ ಪರಿಸರ ಇಲಾಖೆಯು, ರಾಷ್ಟ್ರೀಯ ಭದ್ರತೆ ಮತ್ತು ಸ್ಟ್ರಾಟಜಿಕ್ ಆದ್ಯತೆಯ ಚಟುವಟಿಕೆಗಳಲ್ಲಿ ಅನಗತ್ಯ ವಿಳಂಬ ತಪ್ಪಿಸುವುದಕ್ಕಾಗಿ, ಅಪರೂಪದ ಖನಿಜಗಳ ಗಣಿಗಾರಿಕೆ ಮತ್ತು ಅನ್ವೇಷಣೆಗಳಿಗೆ ಪೂರ್ವದಲ್ಲಿ ಸಾರ್ವಜನಿಕ ಅಭಿಪ್ರಾಯ ಸಂಗ್ರಹದಿಂದ ವಿನಾಯಿತಿ ಪ್ರಕಟಿಸಿದೆ. ಈ ತೀರ್ಮಾನಕ್ಕೆ ಪೂರಕವಾಗಿ ಸ್ಥಳೀಯ ಪರಿಸರಕ್ಕೆ, ನಿವಾಸಿಗಳಿಗೆ ಇದರಿಂದ ತೊಂದರೆ ಆಗದಂತೆ ವೈದ್ಯಕೀಯ ಸವಲತ್ತು, ಕುಡಿಯುವ ನೀರು, ಕೌಶಲಾಭಿವೃದ್ಧಿ, ಸಾರ್ವಜನಿಕ ದೂರು ನಿರ್ವಹಣೆ ವ್ಯವಸ್ಥೆ ಇತ್ಯಾದಿಗಳನ್ನು ಒದಗಿಸಬೇಕೆಂದು ಸೂಚಿಸಿದೆ. ಇಂತಹ ಮಹತ್ವದ ತೀರ್ಮಾನವನ್ನು ಸಂಸತ್ತಾಗಲೀ, ಜನಪ್ರತಿನಿಧಿಗಳಾಗಲೀ ಅಥವಾ ಮಾಧ್ಯಮಗಳಾಗಲೀ ಚರ್ಚಿಸದೇ ಏಕಪಕ್ಷೀಯವಾಗಿ ತೆಗೆದುಕೊಂಡಿರುವುದು, ದೂರಗಾಮಿ ಪರಿಣಾಮಗಳಿರುವ ಬದಲಾವಣೆ ಎಂಬುದರಲ್ಲಿ ಯಾವುದೇ ಸಂದೇಹ ಬೇಡ.

ಯಾಕಿದು ಮಹತ್ವದ್ದು?

ಭಾರತ ಸರಕಾರವು, 2070ರ ಒಳಗೆ ಕಾರ್ಬನ್ ಹೊರ ಸೂಸುವಿಕೆಯಲ್ಲಿ ‘ನೆಟ್ ಜೀರೋ’ ಸಾಧಿಸುವ ಅಂತರ್‌ರಾಷ್ಟ್ರೀಯ ಒತ್ತಡದ ಹುಕಿಗೆ ಬಿದ್ದಿದೆ. ಅದರ ಫಲವಾಗಿ, ಬದಲಾಗುತ್ತಿರುವ ಇಂಧನ ಕ್ಷೇತ್ರಕ್ಕೆ ಅಗತ್ಯ ಇರುವ ವ್ಯವಸ್ಥೆಗಳನ್ನು ಮಾಡಿಕೊಡುತ್ತಿದೆ. ಹಾಗಾಗಿ, ಹಲವು ನೀತ್ಯಾತ್ಮಕ ಬದಲಾವಣೆಗಳು ನಡೆಯುತ್ತಿವೆ. ನವ ಇಂಧನ ಕ್ಷೇತ್ರಗಳಿಗೆ ಅಗತ್ಯ ಇರುವ ಖನಿಜಗಳನ್ನು- ಸೋಲಾರ್ (ಸಿಲಿಕಾನ್, ಟೆಲೆರಿಯಂ, ಇಂಡಿಯಂ, ಗಾಲಿಯಂ); ಗಾಳಿ ಶಕ್ತಿ (ನಿಯೊಡೈಮಿಯಂ, ಡಿಸ್‌ಪ್ರೋಸಿಯಂ); ವಿದ್ಯುತ್ ಚಾಲಿತ ವಾಹನ ಮತ್ತು ವಿದ್ಯುತ್ ದಾಸ್ತಾನು (ಲೀಥಿಯಂ, ನಿಕ್ಕಲ್, ಕೋಬಾಲ್ಟ್) - ಆದ್ಯತೆಯ ಮೇರೆಗೆ ಗಣಿಗಾರಿಕೆ ನಡೆಸಲು ಭಾರತ ಸರಕಾರ ತೀರ್ಮಾನಿಸಿದೆ. ಜಗತ್ತಿನ ಐದನೇ ಅತಿದೊಡ್ಡ REE ನಿಕ್ಷೇಪ ಭಾರತದಲ್ಲಿದೆಯಂತೆ. ಅವುಗಳನ್ನು ನೆಲ ಬಗೆದು ಹೊರತೆಗೆಯುವ ತನ್ನ ಪ್ರಯತ್ನಗಳಿಗೆ ವೇಗ ನೀಡಲು ಭಾರತ ಸರಕಾರವು 2025ರಲ್ಲಿ ರಾಷ್ಟ್ರೀಯ ಕ್ರಿಟಿಕಲ್ ಮಿನರಲ್ ಮಿಷನ್ (NCMM)ಗೆ ಚಾಲನೆ ನೀಡಿದೆ. 2024-25ರ ಬಜೆಟ್‌ನಲ್ಲಿ 2030-31ರ ತನಕ ಈ ವಲಯಕ್ಕೆ ಸರಕಾರದ ಕಡೆಯಿಂದ 16,300 ಕೋಟಿ ರೂ. ಮತ್ತು ಸಾರ್ವಜನಿಕ ವಲಯದ ಉದ್ದಿಮೆಗಳಿಂದ 18,000ಕೋಟಿ ರೂ. ಹೂಡಿಕೆ ಮಾಡಿಸಲಿರುವುದಾಗಿ ಹಣಕಾಸು ಸಚಿವರು ಪ್ರಕಟಿಸಿದ್ದಾರೆ. ಇದಲ್ಲದೆ, ಅಪರೂಪದ ಖನಿಜಗಳ ಅಧಿಕೃತ ಪಟ್ಟಿಯಲ್ಲಿರುವ 30 ಅಪರೂಪದ ಖನಿಜಗಳಲ್ಲಿ 24ನ್ನು ಖಾಸಗಿ ವಲಯಕ್ಕೆ ಗಣಿಗಾರಿಕೆಗೆಂದು ಹರಾಜು ಮಾಡುವ ತೀರ್ಮಾನವನ್ನೂ ಸರಕಾರ ಕೈಗೊಂಡಿದೆ. ಈ ವಲಯಕ್ಕೆ ಸರಕಾರ ಸದ್ಯ ನೀಡುತ್ತಿರುವ ಪ್ರೋತ್ಸಾಹ ಯಾವ ಮಟ್ಟಿಗಿದೆ ಎಂದರೆ, ಅನ್ವೇಷಣೆಯ ವೇಳೆ ಉದ್ದೇಶಿತ ಖನಿಜಗಳು ಸಿಗದಿದ್ದರೆ, ಅನ್ವೇಷಣೆಗೆಂದು ಮಾಡಿರುವ ಖರ್ಚಿನಲ್ಲಿ ಶೇ. 50ನ್ನು ಸರಕಾರವೇ ಖಾಸಗಿಯವರಿಗೆ ವಾಪಸ್ ಭರಿಸಲಿದೆಯಂತೆ!

ಗಮನಿಸಬೇಕಾದ ಅಂಶ ಎಂದರೆ, ಇಲ್ಲಿಯ ತನಕ ಈ ಅಪರೂಪದ ಖನಿಜಗಳ ಗಣಿಗಾರಿಕೆ ಕೇವಲ ಸರಕಾರದ ಸುಪರ್ದಿಯಲ್ಲಿತ್ತು. ಬಾಕಿ ಉಳಿದ ಮಾರುಕಟ್ಟೆ ಬೇಡಿಕೆಗಳನ್ನು ಆಮದಿನ ಮೂಲಕ ಪೂರೈಸಿಕೊಳ್ಳಲಾಗುತ್ತಿತ್ತು. ಜಾಗತಿಕ ರಾಜಕಾರಣದಲ್ಲಿ ಇತ್ತೀಚೆಗೆ ಆಗಿರುವ ಬದಲಾವಣೆಗಳ ಬೆನ್ನಲ್ಲಿ, ಅಪರೂಪದ ಖನಿಜಗಳ ಉತ್ಪಾದನೆಯಲ್ಲಿ ಜಗತ್ತಿನಲ್ಲೇ ಮೊದಲ ಸ್ಥಾನದಲ್ಲಿರುವ ಚೀನಾದ ಲಾಜಿಸ್ಟಿಕ್ಸ್ ವ್ಯವಸ್ಥೆ ಅಸ್ತವ್ಯಸ್ತಗೊಂಡಿರುವ ಮತ್ತು ಚೀನಾ ತನ್ನ ರಫ್ತುಗಳ ಮೇಲೆ ಹೆಚ್ಚುವರಿ ನಿಯಂತ್ರಣಗಳನ್ನು ಹೇರಿಕೊಂಡಿರುವ ಹಿನ್ನೆಲೆಯಲ್ಲಿ ಭಾರತಕ್ಕೆ ಈಗ ತುರ್ತು ಉಂಟಾಗಿದೆ ಎಂದು ಹೇಳಲಾಗುತ್ತಿದೆ. ಅಮೆರಿಕದಲ್ಲಿ ಅಧ್ಯಕ್ಷ ಟ್ರಂಪ್ ಅವರ ದಂಡನಾತೆರಿಗೆ ಹೊರೆಗಳ ಹಿನ್ನೆಲೆಯಲ್ಲಿ ಚೀನಾ ಜೊತೆ ಮತ್ತೆ ಸಾಮೀಪ್ಯವನ್ನು ವ್ಯಕ್ತಪಡಿಸುತ್ತಿರುವ ಭಾರತವು, ಈ ಅಪರೂಪದ ಖನಿಜಗಳ ಆಮದಿಗೆ ಸಂಬಂಧಿಸಿದಂತೆ ಚೀನಾ ಜೊತೆ ಮಾತುಕತೆ ನಡೆಸುವ ಮತ್ತು ಭಾರತದ ಪರವಾದ ತೀರ್ಮಾನ ಪಡೆಯುವ ಮಾಸ್ಟರ್ ಸ್ಟ್ರೋಕ್ ಹೊಡೆಯಲು ಪ್ರಯತ್ನಿಸಬಹುದಿತ್ತು. ಅದರ ಬದಲು, ದೇಶದ ಉದ್ದಗಲಕ್ಕೂ ಅಪರೂಪದ ಖನಿಜಗಳ ಗಣಿಗಾರಿಕೆಗೆ ಮತ್ತು ಅನ್ವೇಷಣೆಗೆ ಖಾಸಗಿ ವಲಯವನ್ನು ಸಜ್ಜುಗೊಳಿಸುತ್ತಿರುವುದು ನಿಜಕ್ಕೂ ಅಚ್ಚರಿ ಅನ್ನಿಸುತ್ತಿದೆ. ಸಾಮಾನ್ಯ ಗಣಿಗಾರಿಕೆಗಿಂತ ಹತ್ತು ಪಟ್ಟು ಹೆಚ್ಚು ಪರಿಸರ ಹಾನಿಕಾರಕ ಗಣಿಗಾರಿಕೆ ಇದು.

ದೇಶದಲ್ಲಿ ಈಗ ಬಿಂಬಿಸಲಾಗುತ್ತಿರುವ ಮಿನರಲ್‌ಗಳ ಕೊರತೆಯೂ ಸರಕಾರದ ಖಾಸಗೀಕರಣ ರಂಗೋಲಿಯ ಭಾಗವಾಗಿದ್ದರೆ ಅಚ್ಚರಿ ಇಲ್ಲ. ಏಕೆಂದರೆ 2019ರಿಂದಲೇ ಇದಕ್ಕೆಲ್ಲ ರಂಗ ಸಜ್ಜುಗೊಳಿಸಲಾಗುತ್ತಿದೆ. ಆ ವರ್ಷ ಹೊಸ ಖನಿಜ ನೀತಿಯನ್ನು ಬಿಡುಗಡೆ ಮಾಡಲಾಗಿತ್ತು, ಮುಂದೆ 2023ರಲ್ಲಿ MMDR ಕಾಯ್ದೆಗೆ ಅಗತ್ಯ ತಿದ್ದುಪಡಿಗಳನ್ನು ಮಾಡಲಾಯಿತು. 2025ರ ಮಾರ್ಚ್ ನಲ್ಲಿ ಮೊದಲ ಬಾರಿಗೆ ಈ ಗಣಿಗಾರಿಕೆ/ಅನ್ವೇಷಣೆ ಲೈಸನ್ಸ್ ಗಳನ್ನು ಹರಾಜು ಮಾಡಲಾಯಿತು. ಇದೇ ಸೆಪ್ಟಂಬರ್ 6ರಂದು, ಗಣಿಗಾರಿಕೆ ಪ್ರೋತ್ಸಾಹಕ್ಕಾಗಿ 1,500 ಕೊಟಿ ರೂ.ಗಳ ಇನ್ಸೆಂಟಿವ್ ಯೋಜನೆಯನ್ನೂ ಪ್ರಕಟಿಸಲಾಗಿದೆ. ಈಗ ಆರು ಸುತ್ತಿನ ಹರಾಜುಗಳು ಪೂರ್ಣಗೊಂಡಿವೆ. ಮೊದಲ ಸುತ್ತಿನಲ್ಲಿ ಹರಾಜಾಗಿ, ಈಗ ಕಾರ್ಯಾರಂಭಕ್ಕೆ ಸಿದ್ಧವಾಗುತ್ತಿರುವ ಗಣಿಗಾರಿಕೆ ಬ್ಲಾಕ್‌ಗಳಲ್ಲಿ ಹೆಚ್ಚಿನವು ಆಂಧ್ರ, ಜಾರ್ಖಂಡ್, ಕರ್ನಾಟಕ, ಮಧ್ಯಪ್ರದೇಶ, ಮಹಾರಾಷ್ಟ್ರ ಮತ್ತು ರಾಜಸ್ಥಾನ ರಾಜ್ಯಗಳಲ್ಲಿ ಇವೆ. ಕರ್ನಾಟಕದಲ್ಲಿ ಗೋಕರ್ಣದಿಂದ ಹೊನ್ನಾವರದ ತನಕ ಶರಾವತಿ ನದೀತಟದ ಅರಣ್ಯ ಭೂಮಿಯಲ್ಲಿ ಖನಿಜ ನಿಕ್ಷೇಪಗಳ ಹುಡುಕಾಟ ಸ್ಥಳೀಯರಿಗೆ ಹೆಚ್ಚಿನ ಮಾಹಿತಿ ಇಲ್ಲದೇ ಆರಂಭ ಆಗಿರುವ ಬಗ್ಗೆ ಇತ್ತೀಚೆಗೆ ಪತ್ರಿಕೆಗಳಲ್ಲಿ ವರದಿ ಪ್ರಕಟಗೊಂಡಿತ್ತು. ಭಾರತದಲ್ಲಿ ಈಗಾಗಲೇ ವೇದಾಂತ, ಮಹೀಂದ್ರಾ, ಜಿಂದಾಲ್, ಅದಾನಿ ಮತ್ತಿತರ ಪ್ರಮುಖ ಕಾರ್ಪೊರೇಟ್ ಸಂಸ್ಥೆಗಳು ಈ ಅಪರೂಪದ ಖನಿಜಗಳ ಗಣಿಗಾರಿಕೆ, ನಿಕ್ಷೇಪ ಅನ್ವೇಷಣೆಯಲ್ಲಿ ತೊಡಗಿಕೊಳ್ಳಲು ಸನ್ನದ್ಧವಾಗುತ್ತಿವೆ.

ಭಾರತದ ಕಬ್ಬಿಣದ ಅದಿರು ನಿಕ್ಷೇಪಗಳಲ್ಲಿ ಶೇ. 25ನ್ನು ಹೊಂದಿರುವ ಬಳ್ಳಾರಿಯಲ್ಲಿ 2000ನೇ ಇಸವಿಯ ಆಸುಪಾಸಿನಲ್ಲಿ ಸಾವಿರಾರು ಕೋಟಿ ರೂ.ಗಳನ್ನು ಮೊಗೆಮೊಗೆದು ಚೀನಾಕ್ಕೆ ರಫ್ತು ಮಾಡಲಾಗಿತ್ತು. ಅದೊಂದು ಮಹಾಹಗರಣವೇ ಆಗಿತ್ತು. ಅಂತಹದೇ ಪರಿಸರ ಅಪಾಯ ಈಗ ಮತ್ತೆ ದೇಶದ ಹಲವು ಭಾಗಗಳ ನೆತ್ತಿಯ ಮೇಲೆ ತೂಗುಗತ್ತಿಯಾಗಿದೆ. ಅಪರೂಪದ ಖನಿಜಗಳು ನಮಗೆ ನಿಜಕ್ಕೂ ಎಷ್ಟು ಬೇಕಿವೆ? ಉದ್ದೇಶ ಏನು? ಈ ಗಣಿಗಾರಿಕೆಗಳ ಫಲಾನುಭವಿಗಳು ಯಾರು? ಎಂಬುದು ಸ್ಪಷ್ಟವಿಲ್ಲದೆ, ದೀರ್ಘಕಾಲಿಕ ಯೋಜನೆಗಳಿಲ್ಲದೇ, ಏಕಾಏಕಿ ಮುಗಿಬಿದ್ದು ಗಣಿಗಾರಿಕೆ ಆರಂಭಿಸಿದರೆ, ಇದು ಮತ್ತೊಂದು ದೊಡ್ಡ ಪರಿಸರ ಅನಾಹುತ ಆಗಲಿದೆ. ಇಲ್ಲಿಯ ತನಕ ಈ ಪರಿಸರ ಹಾನಿಕಾರಕ ಉದ್ಯಮಗಳನ್ನು ಆರಂಭಿಸುವ ಮುನ್ನ ಸಾರ್ವಜನಿಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದು ಅನಿವಾರ್ಯವಿತ್ತು. ಆದರೆ, ಪರಿಸರ ಇಲಾಖೆಯ ಹೊಸ ಪ್ರಕಟಣೆಯು, ಸಾರ್ವಜನಿಕರ-ಸ್ಥಳೀಯ ನಿವಾಸಿಗಳ ಹಿತಾಸಕ್ತಿಗಳನ್ನು ರಾಷ್ಟ್ರೀಯ ಭದ್ರತೆಯ ಹೆಸರಿನಲ್ಲಿ ತಳ್ಳಿಹಾಕಿಬಿಟ್ಟಿದೆ. ಪರಿಸರ ಅನುಮತಿ ಪಡೆದ ಉದ್ಯಮಗಳು ದೇಶದಲ್ಲಿ ಎಲ್ಲ ನಿಯಮಗಳನ್ನ ಪಾಲಿಸುತ್ತಿರುವ ಬಗ್ಗೆ ದಾಖಲೆಗಳನ್ನು ಮುಂದೊಡ್ಡುತ್ತಲೇ ಮಾಡುತ್ತಿರುವ ಅನಾಹುತಗಳು ಒಂದೆರಡಲ್ಲ. ಹಾಗಿರುವಾಗ, ಖಾಸಗಿ ಕಾರ್ಪೊರೇಟ್ ಹಿತಾಸಕ್ತಿಗಳ ಖನಿಜ ಅನ್ವೇಷಣೆ/ಗಣಿಗಾರಿಕೆಗೆ ರಾಷ್ಟ್ರೀಯ ಭದ್ರತೆಯ ರೈನ್‌ಕೋಟ್ ತೊಡಿಸಿರುವುದು, ದೇಶದ ಪರಿಸರಕ್ಕೆ ಸ್ವಲ್ಪ ಆತಂಕಕಾರಿ. ಈ ವಿಚಾರದಲ್ಲಿ ಸರಕಾರ, ಜನಪ್ರತಿನಿಧಿಗಳು ಮತ್ತು ಸಾರ್ವಜನಿಕರು ವಿವೇಚನೆಯಿಂದ ಮುಂದಡಿ ಇಡಬೇಕಾದ ಅನಿವಾರ್ಯತೆ ಇದೆ. ನಮಗಿರುವುದು ಒಂದೇ ಭೂಮಿ.

share
ರಾಜಾರಾಂ ತಲ್ಲೂರು
ರಾಜಾರಾಂ ತಲ್ಲೂರು
Next Story
X