Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಪಿಟ್ಕಾಯಣ
  5. ಕೂಸಿಗೆ ಮುನ್ನ ಕುಲಾವಿ 2.0

ಕೂಸಿಗೆ ಮುನ್ನ ಕುಲಾವಿ 2.0

ರಾಜಾರಾಂ ತಲ್ಲೂರುರಾಜಾರಾಂ ತಲ್ಲೂರು18 May 2024 11:44 AM IST
share
ಕೂಸಿಗೆ ಮುನ್ನ ಕುಲಾವಿ 2.0
ಸಾರ್ವತ್ರಿಕ ಚುನಾವಣೆಯಲ್ಲಿ ಜನಮತಕ್ಕಾಗಿ ಕಾಯಬೇಕಾಗಿರುವ ರಾಜಕೀಯ ಪಕ್ಷವೊಂದು, ಚುನಾವಣೆಗಳು ನಡೆದು, ಫಲಿತಾಂಶ ಹೊರಬರುವ ಮುನ್ನವೇ ‘‘ತನ್ನದೇ ಸರಕಾರ ಖಚಿತ’’ ಎಂದು ಸಾರಿಕೊಂಡು, ಕಾರ್ಯಾಂಗವನ್ನು ಕಾರ್ಯಾಚರಣೆಗೆ ಇಳಿಸಿರುವುದು ಒಳ್ಳೆಯ ಪೂರ್ವೋದಾಹರಣೆ ಅನ್ನಿಸುತ್ತಿಲ್ಲ.

ಪ್ರಧಾನಮಂತ್ರಿಗಳು ತಮ್ಮ ಮೂರನೇ ಅವಧಿಗೆ (ಅವರದೇ ಮಾತುಗಳಲ್ಲಿ ಮೋದಿ 3.0 ಆವೃತ್ತಿಗೆ) ಭರಪೂರ ಸಿದ್ಧತೆ ನಡೆಸಿದ್ದು, ಜೂನ್ ಮೊದಲ ವಾರದಲ್ಲಿ ಅಧಿಕಾರ ಸ್ವೀಕರಿಸಿದ ತಕ್ಷಣ ಮೊದಲ ನೂರು ದಿನಗಳಲ್ಲಿ ಏನೇನು ಕ್ರಮಗಳನ್ನು ಕೈಗೊಳ್ಳಬೇಕು ಎಂಬ ಬಗ್ಗೆ ಈಗಾಗಲೇ ತೀರ್ಮಾನ ಆಗಿರುವಂತಿದೆ. ಚುನಾವಣೆಗಳ ಘೋಷಣೆಗೆ ಮುನ್ನವೇ, 2024ರ ಫೆಬ್ರವರಿಯಲ್ಲಿ ಸೆಕ್ಟರ್‌ವಾರು ಕಾರ್ಯದರ್ಶಿಗಳ 10 ಗುಂಪುಗಳನ್ನು (SಉoS) ರಚಿಸಲಾಗಿದೆ. ಮಾರ್ಚ್ ಕೊನೆಯ ವಾರದಲ್ಲಿ ಭಾರತ ಸರಕಾರದ ಎಲ್ಲ ಇಲಾಖೆಗಳ ಕಾರ್ಯದರ್ಶಿಗಳ ಸಭೆ ಕರೆದು, ಅಲ್ಲಿ ಹೊಸ ಸರಕಾರದ ಮೊದಲ ನೂರು ದಿನಗಳಿಗೆ ಹೊಸ ಹೊಸ ಐಡಿಯಾಗಳನ್ನು ತರಲು ಹೇಳಿದ್ದಾರೆ ಮತ್ತು ಪ್ರಧಾನಮಂತ್ರಿ ಕಾರ್ಯಾಲಯದ ನಾಲ್ವರು ಅಡಿಷನಲ್ ಕಾರ್ಯದರ್ಶಿಗಳಿಗೆ ಈ ತಯಾರಿಗಳನ್ನು ಸಮನ್ವಯಗೊಳಿಸುವ ಹೊಣೆ ನೀಡಲಾಗಿದೆ ಎಂಬ ಪತ್ರಿಕಾ ವರದಿಗಳು ಕಾಣಿಸಿಕೊಂಡಿವೆ.

ಹೊಸ ಸರಕಾರದ ಧ್ವನಿ-ಉದ್ದೇಶಗಳನ್ನು ಬಿಂಬಿಸಬಲ್ಲ 75-80 ಗುರಿ ಹಾಗೂ ಶಿಫಾರಸು ಪ್ರಸ್ತಾಪಗಳು ಈಗಾಗಲೇ ಸಿದ್ಧಗೊಂಡಿದ್ದು, ಅವುಗಳನ್ನು 50ಕ್ಕೆ ಇಳಿಸುವ ಕೆಲಸ ನಡೆಯುತ್ತಿದೆ. ಇದರಲ್ಲಿ ಮೊದಲ 100 ದಿನಗಳ ಯೋಜನೆಗಳಲ್ಲದೇ ಮಧ್ಯಾವಧಿಯ ಮತ್ತು ದೀರ್ಘಾವಧಿಯ ಚಿಂತನೆಗಳೂ ಒಳಗೊಂಡಿವೆಯಂತೆ. ಈ ಚಿಂತನೆಗಳನ್ನು ಎ,ಬಿ,ಸಿ ಎಂಬ ಮೂರು ವರ್ಗಗಳಾಗಿ ವಿಂಗಡಿಸಲಾಗಿದ್ದು, ಅದರಲ್ಲಿ ಎ ವರ್ಗದ ಐಟಂಗಳನ್ನು ಪ್ರಧಾನಮಂತ್ರಿಗಳು ಅಧಿಕಾರ ಸ್ವೀಕರಿಸಿದ ತಕ್ಷಣ ಪ್ರಕಟಿಸಲಿದ್ದಾರೆ, ಬಿ ವರ್ಗದ ಐಟಂಗಳನ್ನು ಆರಂಭದ ಕೆಲವು ದಿನಗಳಲ್ಲಿ ಕೇಂದ್ರದ ವಿವಿಧ ಇಲಾಖೆಗಳ ಹೊಸ ಸಚಿವರುಗಳು ಪ್ರಕಟಿಸಲಿದ್ದಾರೆ ಮತ್ತು ಸಿ ವರ್ಗದವು ನಿಧಾನಕ್ಕೆ ದೀರ್ಘಾವಧಿಯಲ್ಲಿ ಪ್ರಕಟಗೊಳ್ಳಲಿವೆ ಎಂಬುದು ಪತ್ರಿಕಾವರದಿಗಳ ಸಾರ.

ತಮ್ಮ ಒಕ್ಕೂಟ 2024ರ ಚುನಾವಣೆಗಳನ್ನು ಗೆಲ್ಲಲಿದೆ ಎಂಬ ಭರವಸೆಯನ್ನು ಎನ್‌ಡಿಎ ವ್ಯಕ್ತಪಡಿಸಿರುವುದು ಹೊಸ ಬೆಳವಣಿಗೆಯೇನಲ್ಲ. ಸ್ವತಃ ಪ್ರಧಾನಮಂತ್ರಿಗಳೇ ಜನವರಿ 31ರಂದು ಸಂಸತ್ತಿನಲ್ಲಿ ಬಜೆಟ್ ಅಧಿವೇಶನದ ವೇಳೆ, ತಮ್ಮ ಸರಕಾರ ಮತ್ತೊಮ್ಮೆ ಅಧಿಕಾರಕ್ಕೆ ಬರುವುದಾಗಿ ಹೇಳಿದ್ದರು. ಅದನ್ನು ಅವರ ಸಚಿವ ಸಂಪುಟದಲ್ಲಿ ಹಲವರು ಮತ್ತೆ ಮತ್ತೆ ಪ್ರತಿಧ್ವನಿಸುತ್ತಾ ಬಂದಿದ್ದಾರೆ. ಈ ಎಲ್ಲ ಸಂಚಲನಗಳ ಫಲವಾಗಿಯೇ ‘‘ಅಬ್ ಕೀ ಬಾರ್ 400 ಪಾರ್’’ ಘೋಷಣೆ ಹೊರಟದ್ದು.

ಪ್ರಧಾನಮಂತ್ರಿಗಳ ಈ ಉದ್ದೇಶಿತ ಮೂರನೇ ಅವಧಿಗೆ ‘ಅವಧಿ ಪೂರ್ವ’ ತಯಾರಿಗಳು, ಕೇವಲ ‘ಚುನಾವಣಾ ಗಿಮಿಕ್’ ಸ್ವರೂಪದ ಹೊರಪದರದ ತಯಾರಿ ಆಗಿರಬಹುದೆಂಬ ಗುಮಾನಿ ಇದೆ. ಇಂತಹದೊಂದು ಗುಮಾನಿ ಮೂಡುವುದಕ್ಕೆ ಕೆಲವು ಕಾರಣಗಳಿವೆ. ಒಂದು ವೇಳೆ, ಇದು ಗಂಭೀರ ತಯಾರಿ ಎಂದಾಗಿದ್ದರೆ, ಈ ಸರಕಾರ 2014ರಲ್ಲಿ ಯೋಜನಾ ಆಯೋಗವನ್ನು ರದ್ದುಪಡಿಸಿ, ಅದರ ಜಾಗದಲ್ಲಿ ತಂದು ಕುಳ್ಳಿರಿಸಿರುವ ‘ನೀತಿ ಆಯೋಗ’ ಎಂಬ ಬೆದರುಬೊಂಬೆ, ದೇಶದ ‘ಪ್ಲ್ಯಾನಿಂಗ್’ ವ್ಯವಸ್ಥೆಯನ್ನು ಸರ್ವನಾಶ ಮಾಡಿದೆ ಎಂಬುದಕ್ಕೆ ಸಾಂದರ್ಭಿಕ ಸಾಕ್ಷ್ಯವಾಗಿಯೂ ಈ ಬೆಳವಣಿಗೆ ಒದಗಿಬರುತ್ತದೆ. ಅದು ಯಾಕೆಂದು ವಿವರಿಸುತ್ತೇನೆ.

ಇಂಡಿಯಾ @ 2047

2021ರ ಸ್ವಾತಂತ್ರ್ಯ ದಿನದಂದು ಕೆಂಪುಕೋಟೆಯಿಂದ ದೇಶವನ್ನು ದ್ದೇಶಿಸಿ ಮಾತನಾಡಿದ್ದ ಪ್ರಧಾನಮಂತ್ರಿಗಳು, 2047ಕ್ಕೆ, ದೇಶ ಸ್ವತಂತ್ರಗೊಂಡು 100 ವರ್ಷಗಳಾಗುವ ಹೊತ್ತನ್ನು ‘ಅಮೃತಕಾಲ’ ಎಂದು ಘೋಷಿಸಿದ್ದರು. ಅದಕ್ಕಾಗಿ ತಯಾರಿ ನಡೆಸಲು ಭಾರತ ನೀತಿ ಆಯೋಗಕ್ಕೆ ವಿಷನ್ ಇಂಡಿಯಾ @ 2047 ಸಿದ್ಧಪಡಿಸುವಂತೆ ಸೂಚಿಸಲಾಗಿತ್ತು. 2023ರ ಡಿಸೆಂಬರ್ ಹೂತ್ತಿಗೆ, ಈ ಕರಡು ಯೋಜನೆಯನ್ನು ಸಿದ್ಧಪಡಿಸಿ ಬಿಡುಗಡೆ ಮಾಡುತ್ತೇವೆ ಎಂದು ನೀತಿ ಆಯೋಗದ ಸಿಇಒ ಬಿ.ವಿ.ಆರ್. ಸುಬ್ರಹ್ಮಣ್ಯಂ ಹೇಳಿದ್ದರು. ದೇಶದ ಅಪಾರ ಜನಸಂಖ್ಯೆಯ ಸದುಪಯೋಗ, ಚಿಗುರಿಕೊಳ್ಳುತ್ತಿರುವ ಮಧ್ಯಮವರ್ಗ, ವಿಸ್ತಾರಗೊಳ್ಳುತ್ತಿರುವ ಡಿಜಿಟಲ್ ಆರ್ಥಿಕತೆ ಮತ್ತು ಸುಸ್ಥಿರ ಅಭಿವೃದ್ಧಿ ಆಧರಿಸಿದ ಆರ್ಥಿಕತೆಗಳು ಈ ವಿಷನ್‌ನ ಆಧಾರಸ್ತಂಭಗಳಾಗಲಿವೆ ಎಂದು ಹೇಳಲಾಗಿತ್ತು. ಅಂದರೆ ಸುಮಾರು ಎರಡು ವರ್ಷಗಳ ಕಾಲ ಅಮೃತಕಾಲದ ವಿಷನ್‌ಗಾಗಿ ನೀತಿ ಆಯೋಗ ಶ್ರಮಿಸಿದೆ. ನೀತಿ ಆಯೋಗ ಸಿದ್ಧಪಡಿಸಿದ ‘ವಿಕಸಿತ್ ಭಾರತ್@2047’ ಕರಡನ್ನು ಪ್ರಧಾನಮಂತ್ರಿಗಳ ಕ್ಯಾಬಿನೆಟ್ ಕಾರ್ಯದರ್ಶಿ ರಾಜೀವ್ ಗೌಬಾ ಅವರಿಗೆ 2023 ಅಕ್ಟೋಬರ್‌ನಲ್ಲಿ ಸಲ್ಲಿಸಲಾಗಿತ್ತು. ನವೆಂಬರ್‌ನಲ್ಲಿ ಸರಕಾರದ ಹೊರಗಿನ ‘ಥಿಂಕ್ ಟ್ಯಾಂಕ್’ ಜೊತೆ ಈ ಬಗ್ಗೆ ಚರ್ಚೆಗಳೂ ನಡೆದಿದ್ದವು.

ಇದಲ್ಲದೆ, ಎಪ್ರಿಲ್ 14, 2024ರಂದು ಬಿಜೆಪಿ ಬಿಡುಗಡೆ ಗೊಳಿಸಿದ ಚುನಾವಣಾ ಪ್ರಣಾಳಿಕೆ ‘ಮೋದಿ ಕೀ ಗ್ಯಾರಂಟಿ’ಯಲ್ಲಿ ಕೂಡ ಸರಕಾರ ಹೆದ್ದಾರಿ, ರೈಲ್ವೆ, ವಸತಿ, ವಾಣಿಜ್ಯ, ಕಾರ್ಮಿಕ ಮತ್ತು ಕಲ್ಲಿದ್ದಲು ಇಲಾಖೆಗಳ 100 ದಿನಗಳ ಅಜೆಂಡಾ ಬಗ್ಗೆ ನಿರ್ದಿಷ್ಟವಾಗಿ ವಿವರಿಸಿದೆ.

ಇಷ್ಟೆಲ್ಲ ತಯಾರಿಗಳು ಬಹಳ ಕಾಂಕ್ರಿಟ್ ಆಗಿ ನಡೆದಿವೆ ಎಂದಾದರೆ, ಇವೆಲ್ಲದರ ಅನುಷ್ಠಾನವನ್ನು ಯೋಜಿಸುವ ಬದಲು, ನೀತಿ ಆಯೋಗವನ್ನು ಬದಿಗೆ ಸರಿಸಿ, ಅದರ ಜಾಗದಲ್ಲಿ ಕಾರ್ಯದರ್ಶಿಗಳ ಮಟ್ಟದಲ್ಲಿ ಹೊಸದಾಗಿ ಯೋಜನೆಗಳು ಸಿದ್ಧಗೊಳ್ಳುತ್ತಿರುವುದು ಸ್ವಲ್ಪ ಆಶ್ಚರ್ಯಕರ ಬೆಳವಣಿಗೆ. ಇದು ಸರಕಾರದ ಪ್ಲ್ಯಾನಿಂಗ್ ಮಟ್ಟದಲ್ಲಿರುವ ಗೊಂದಲಗಳತ್ತ ಬೊಟ್ಟು ಮಾಡುತ್ತದೆ.

ಅದಕ್ಕಿಂತ ಹೆಚ್ಚಾಗಿ, ಸಾರ್ವತ್ರಿಕ ಚುನಾವಣೆಯಲ್ಲಿ ಜನಮತಕ್ಕಾಗಿ ಕಾಯಬೇಕಾಗಿರುವ ರಾಜಕೀಯ ಪಕ್ಷವೊಂದು, ಚುನಾವಣೆಗಳು ನಡೆದು, ಫಲಿತಾಂಶ ಹೊರಬರುವ ಮುನ್ನವೇ ‘‘ತನ್ನದೇ ಸರಕಾರ ಖಚಿತ’’ ಎಂದು ಸಾರಿಕೊಂಡು, ಕಾರ್ಯಾಂಗವನ್ನು ಕಾರ್ಯಾಚರಣೆಗೆ ಇಳಿಸಿರುವುದು ಒಳ್ಳೆಯ ಪೂರ್ವೋದಾಹರಣೆ ಅನ್ನಿಸುತ್ತಿಲ್ಲ.

ಹಳೇಕಥೆ -ಒ ಡಾಕ್ಯುಮೆಂಟ್

ಸರಕಾರವೊಂದು ಚುನಾಯಿಸಿ ಬರುವ ಮೊದಲೇ ಕಾರ್ಯಾಂಗದ ಕಡೆಯಿಂದ ಹೊಸ ಸರಕಾರಕ್ಕಾಗಿ ಯೋಜನೆ ರೂಪುಗೊಂಡದ್ದು ಇದೇ ಮೊದಲೇನಲ್ಲ 1989ರಲ್ಲಿ ಪ್ರಧಾನಿ ರಾಜೀವ್ ಗಾಂಧಿ ಅವರ ಸರಕಾರ ಚುನಾವಣೆ ಎದುರಿಸುತ್ತಿದ್ದಾಗ, ಅಂದಿನ ಪ್ರಧಾನಮಂತ್ರಿ ಕಚೇರಿಯ ಪ್ರಿನ್ಸಿಪಲ್ ಕಾರ್ಯದರ್ಶಿ ಬಿ.ಜಿ. ದೇಶಮುಖ್ ಅವರು ಆರ್ಥಿಕತೆಗೆ ಸಂಬಂಧಿಸಿ ಕ್ರಿಯಾಯೋಜನೆಯೊಂದನ್ನು ರೂಪಿಸುವಂತೆ Pಒಔದಲ್ಲಿ ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಆಗಿದ್ದ ಮೊಂಟೆಕ್ ಸಿಂಗ್ ಅಹ್ಲುವಾಲಿಯಾ ಅವರಿಗೆ ಸೂಚಿಸಿದ್ದರು. ರಾಜೀವ್ ಸರಕಾರ ಮತ್ತೆ ಆರಿಸಿಬಂದರೆ, ಅದನ್ನು ಅವರ ಮುಂದಿರಿಸುವುದು ದೇಶಮುಖ್ ಅವರ ಉದ್ದೇಶವಾಗಿತ್ತು.

ಆದರೆ ಚುನಾವಣೆ ಫಲಿತಾಂಶ ಬಂದಾಗ ಕಾಂಗ್ರೆಸ್ ಬಹುಮತ ಸಿಗದೆ ಸೋತು, ನ್ಯಾಷನಲ್ ಫ್ರಂಟ್ ಅಧಿಕಾರಕ್ಕೆ ಏರಿತ್ತು, ವಿಶ್ವನಾಥ ಪ್ರತಾಪ್ ಸಿಂಗ್ ಪ್ರಧಾನಮಂತ್ರಿ ಆಗಿದ್ದರು!

ಹೊಸ ಪ್ರಧಾನಿ ವಿ.ಪಿ. ಸಿಂಗ್ ಅವರು, ಉದಾರೀಕರಣಕ್ಕೆ ಹಾದಿ ತೆರೆಯುವ ಮೊಂಟೆಕ್ ಅವರ ಈ ಆರ್ಥಿಕ ಕ್ರಿಯಾ ಯೋಜನೆಯನ್ನು ಸ್ವೀಕರಿಸಿದರಾದರೂ, ಅದರ ಅನುಷ್ಠಾನಕ್ಕೆ ಮುಂದೆ ಪಿ.ವಿ.ನರಸಿಂಹರಾವ್ ಅವರು ಪ್ರಧಾನಿ ಆಗುವ ತನಕ ಕಾಯಬೇಕಾಯಿತು. ವಿ.ಪಿ. ಸಿಂಗ್ ಅವರಿಗೆ ಕ್ರಿಯಾಯೋಜನೆ ಸಲ್ಲಿಸುವ ಸಂದರ್ಭದಲ್ಲಿ ದೇಶಮುಖ್ ಅವರು, ‘‘ಕಪ್ ಬದಲ್ತೇ ಹೈಂ, ಚಮಚೇ ನಹೀ ಬದಲ್ತೇ’’ ಎಂದು ಮೊಂಟೆಕ್ ಸಿಂಗ್ ಅವರಿಗೆ ಚಟಾಕಿ ಹಾರಿಸುವ ಮೂಲಕ, ಸರಕಾರ ಯಾವುದೇ ಬಂದರೂ ಕಾರ್ಯಾಂಗ ಹೆಚ್ಚು ಬದಲಾಗದು ಎಂದು ಸೂಚಿಸಿದ್ದರು.

ಈ ಚರಿತ್ರೆಯ ಹಿನ್ನೆಲೆಯಲ್ಲಿ, ಸದ್ಯ ಇರುವ ಕುತೂಹಲ ಎಂದರೆ, ಒಂದು ವೇಳೆ ಚುನಾವಣೆಗಳ ಬಳಿಕ ಸರಕಾರ ಬದಲಾದರೆ ಅಥವಾ ಮೋದಿ ಯವರು ಮತ್ತೆ ಪ್ರಧಾನಿ ಆಗದಿದ್ದರೆ, ಆಗಲೂ ಈ ಮೋದಿ 3.0ದ ಮೊದಲ ನೂರು ದಿನಗಳ ಪ್ಲ್ಯಾನ್ ಆಚರಣೆಗೆ ಬರಲಿದೆಯೆ?! ಇದು ಯಾಕೆ ಮಹತ್ವದ ಪ್ರಶ್ನೆ ಆಗಲಿದೆ ಎಂದರೆ, ಹಾಲೀ ಸರಕಾರದ ಉದಾರೀಕರಣದ ಹಾದಿಯು ದೇಶದಲ್ಲಿ ಸಂಪತ್ತಿನ ಹಂಚಿಕೆಯಲ್ಲಿ ಎದ್ದುಕಾಣುವ ಅಸಮತೋಲನಕ್ಕೆ ಕಾರಣವಾಗಿದೆ. ಹೊಸ ಸರಕಾರ ಅದನ್ನೇ ಮುಂದು ವರಿಸಲಿದೆಯೇ ಎಂಬ ಪ್ರಶ್ನೆ ಎಲ್ಲರಲ್ಲೂ ಇದೆ.

share
ರಾಜಾರಾಂ ತಲ್ಲೂರು
ರಾಜಾರಾಂ ತಲ್ಲೂರು
Next Story
X