Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಪಿಟ್ಕಾಯಣ
  5. ರಫೇಲ್-2.0: ದುಪ್ಪಟ್ಟು ದರದಲ್ಲಿ ಅದೇ...

ರಫೇಲ್-2.0: ದುಪ್ಪಟ್ಟು ದರದಲ್ಲಿ ಅದೇ ಡೀಲ್?

ರಾಜಾರಾಂ ತಲ್ಲೂರುರಾಜಾರಾಂ ತಲ್ಲೂರು6 Jun 2026 10:10 AM IST
share
ರಫೇಲ್-2.0: ದುಪ್ಪಟ್ಟು ದರದಲ್ಲಿ ಅದೇ ಡೀಲ್?

ರಫೇಲ್ 1.0 ವೇಳೆ, ಡೀಲ್ ಬದಲಾದದ್ದು, ದುಬಾರಿ ವೆಚ್ಚಕ್ಕೆ ಕಡಿಮೆ ತಂತ್ರಜ್ಞಾನದ ವಿಮಾನ ಖರೀದಿಸಲಾಗಿದೆ ಎಂಬ ಕಾರಣಕ್ಕೆ. ಆಗ 59,000 ಕೋಟಿ ರೂ.ಗಳಿಗೆ 36 ರಫೇಲ್ ಖರೀದಿ ಆಗಿತ್ತು. ಅಂದರೆ ಒಂದು ರಫೇಲ್ ಬೆಲೆ ಅಂದಾಜು 1,640 ಕೋಟಿ ರೂ. ಈಗ ರಫೇಲ್ 2.0 ಹೊತ್ತಿಗೆ 114 ರಫೇಲ್ ವಿಮಾನಗಳಿಗೆ 3.25 ಲಕ್ಷ ಕೋಟಿ ರೂ. ಪಾವತಿಸಲಾಗುತ್ತದೆಯಂತೆ. ಅಂದರೆ, ಈಗ ಪ್ರತೀ ವಿಮಾನದ ಬೆಲೆ ಹಿಂದಿಗಿಂತ ಒಂದೂವರೆ ಪಟ್ಟು ಹೆಚ್ಚು! ರಕ್ಷಣಾ ಖರೀದಿಗಳನ್ನು ಸಂಪೂರ್ಣವಾಗಿ ಅಪಾರದರ್ಶಕಗೊಳಿಸಿರುವುದರಿಂದ, ಇವೆಲ್ಲ ಈಗ ಸಾರ್ವಜನಿಕ ಚರ್ಚೆಯ ವಿಷಯಗಳಾಗಿ ಉಳಿದಿಲ್ಲ.

ಭಾರತದ ರಕ್ಷಣಾ ಇಲಾಖೆಯು 114 ರಫೇಲ್ ಬಹುಬಳಕೆಯ ಯುದ್ಧ ವಿಮಾನ (MRFA)ಗಳನ್ನು ಖರೀದಿಸಲು ಸರಕಾರ-ಸರಕಾರಗಳ ನಡುವಣ ಒಪ್ಪಂದಕ್ಕೆ ಬರುವುದಕ್ಕಾಗಿ ಫ್ರೆಂಚ್ ಸರಕಾರಕ್ಕೆ ಕೋರಿಕೆ ಪತ್ರ (LoR) ಕಳುಹಿಸಿದೆ ಎಂದು ಪತ್ರಿಕೆಗಳು ವರದಿ ಮಾಡಿವೆ. ಈಗಾಗಲೇ ಡಿಫೆನ್ಸ್ ಅಕ್ವಿಸಿಷನ್ ಕೌನ್ಸಿಲ್ (DAC) ಈ ವಿಮಾನಗಳ ಖರೀದಿಯ ಅವಶ್ಯಕತೆ ಇದೆ ಎಂಬ ಒಪ್ಪಿಗೆಪತ್ರವನ್ನು (Acceptance of Necessity- AoN) ನೀಡಿದೆ. ಇದೇ ಫೆಬ್ರವರಿ 12ರಂದು ದೇಶದ ವಾಯುಸೇನಾದಳಕ್ಕೆ ಈ ರಫೇಲ್ ವಿಮಾನಗಳೂ ಸೇರಿದಂತೆ, ಒಟ್ಟು 3.60 ಲಕ್ಷ ಕೋಟಿ ರೂ.ಗಳ ಗಾತ್ರದ ರಕ್ಷಣಾ ಖರೀದಿಗೆ ಂoಓ ನೀಡಲಾಗಿದೆ. ಈ ವಿಮಾನಗಳೆಲ್ಲ ಭಾರತದಲ್ಲೇ ತಯಾರಿ ಆಗಲಿದೆ ಎಂಬುದಾಗಿ ರಕ್ಷಣಾ ಸಚಿವಾಲಯ ಹೇಳಿಕೊಂಡಿದೆ. (PIB Release ID: 2227018).

ಈಗ ಭಾರತದ ಬಳಿ, ಒಟ್ಟು 36 ರಫೇಲ್ ಯುದ್ಧ ವಿಮಾನಗಳು ಇವೆ ಮತ್ತು ಅವುಗಳಲ್ಲದೇ ನೌಕಾಸೇನೆಗೆಂದು 2025ರ ಎಪ್ರಿಲ್ 28ರಂದು ಆರ್ಡರ್ ಮಾಡಿರುವ ಸುಮಾರು 63,000 ಕೋಟಿ ರೂ. ಮೌಲ್ಯದ 26 ರಫೇಲ್ ಮರೈನ್ ಫೈಟರ್ ಜೆಟ್ ವಿಮಾನಗಳು 2029-2031ರ ನಡುವೆ ಭಾರತಕ್ಕೆ ಬರಲಿವೆ. ಇವುಗಳಲ್ಲಿ ನಾಲ್ಕು ಟ್ವಿನ್ ಸೀಟರ್ ಮತ್ತು 22 ಸಿಂಗಲ್ ಸೀಟರ್ ಯುದ್ಧ ವಿಮಾನಗಳು. ಆ ಜೆಟ್‌ಗಳು INS ವಿಕ್ರಾಂತ್ ಹಾಗೂ IಓS ವಿಕ್ರಮಾದಿತ್ಯ ಯುದ್ಧನೌಕೆಗಳಿಂದ ಕಾರ್ಯಾಚರಿಸಲಿವೆ. ಈ ಒಪ್ಪಂದದಲ್ಲಿ ಭಾರತೀಯ ಆಯುಧಗಳನ್ನು ಅವಕ್ಕೆ ಸಂಯೋಜಿಸುವ ನಿಟ್ಟಿನಲ್ಲಿ ತಂತ್ರಜ್ಞಾನ ವರ್ಗಾವಣೆ ಕೂಡ ಒಳಗೊಂಡಿದೆ ಎಂದು ಸರಕಾರ ಹೇಳಿದೆ. (PIB Explainer ID: 154353)

ಈ ಬಾರಿ ಹೊಸ ರಫೇಲ್ ಯುದ್ಧವಿಮಾನಗಳ ಖರೀದಿಯಲ್ಲಿ, 20 ಜೆಟ್‌ಗಳನ್ನು ಅಲ್ಲೇ ಉತ್ಪಾದಿಸಿ ಕಳುಹಿಸಿದರೆ, ಬಾಕಿ ಉಳಿದವುಗಳನ್ನು ಭಾರತದಲ್ಲೇ ಉತ್ಪಾದಿಸಬೇಕೆಂಬ ನಿರೀಕ್ಷೆ ಇದ್ದು, ಮಾತುಕತೆಗಳು ಆ ನಿಟ್ಟಿನಲ್ಲಿ ನಡೆದಿವೆಯಂತೆ. ಈ ವಿಮಾನಗಳ ನಿರ್ವಹಣೆಗಾಗಿ ದಸೋ ಭಾರತದಲ್ಲಿ ಸ್ಥಾಪಿಸಿರುವ ಹೊಸ ಕಂಪೆನಿ ದಸೋ ಏವಿಯೇಷನ್ ಮೆಂಟೆನೆನ್ಸ್ ರಿಪೇರ್ ಆಂಡ್ ಓವರಾಲ್ ಇಂಡಿಯಾ (DAMROI) ಈಗಾಗಲೇ ನೊಯ್ಡಾದಲ್ಲಿ ಕಾರ್ಯ ಆರಂಭಿಸಿದೆ.

ಇಲ್ಲಿ ಕೆಲವು ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸಿ. ಭಾರತ ಮೊದಲ ಸುತ್ತಿನ ರಫೇಲ್ ಖರೀದಿ ಮಾಡಿದಾಗ, ಇಮ್ಯಾನುವಲ್ ಮ್ಯಾಕ್ರೋನ್, ಅಲ್ಲಿನ ಆರ್ಥಿಕ-ಕೈಗಾರಿಕಾ ಇಲಾಖೆಯ ಸಚಿವರಾಗಿದ್ದರು. ಈಗ ಅವರು, ಫ್ರಾನ್ಸ್ ಅಧ್ಯಕ್ಷರು. ಫೆಬ್ರವರಿ 17ರಂದು ಅವರು ಭಾರತಕ್ಕೆ ಮೂರು ದಿನಗಳ ಭೇಟಿ ನೀಡುವ ಕೇವಲ ಐದು ದಿನಗಳ ಮೊದಲು ರಫೇಲ್ ಖರೀದಿಗೆ AoN ನೀಡಲಾಗಿದೆ. ಫ್ರೆಂಚ್ ಅಧ್ಯಕ್ಷರ ಭೇಟಿ ಮುಗಿದ ಬೆನ್ನಲ್ಲೇ ರಫೇಲ್ ಉತ್ಪಾದಕ ದಸೋ (Dassault) ಹಾಗೂ ಭಾರತದ ವಾಯುದಳದ ಹಿರಿಯ ಅಧಿಕಾರಿಗಳ ನಡುವೆ ಮಾತುಕತೆ ಆರಂಭಗೊಂಡಿದೆ ಎಂದು ಫ್ರೆಂಚ್ ಪತ್ರಿಕೆ ‘ಲೆ ಮಾಂಡ್’ ವರದಿ ಮಾಡಿದೆ. ಜೂನ್ ಮಧ್ಯಭಾಗದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಜಿ-7 ಶೃಂಗಕ್ಕೆ ತಯಾರಿಗೆಂದು ಫ್ರಾನ್ಸ್‌ಗೆ ಭೇಟಿ ನೀಡುವ ಕಾರ್ಯಕ್ರಮ ಇದ್ದು, ಆ ಸಂದರ್ಭದಲ್ಲಿ ಈ ಒಪ್ಪಂದ ಅಂತಿಮಗೊಳ್ಳುವ ಸಾಧ್ಯತೆಗಳಿವೆಯಂತೆ. ಈ ತಯಾರಿಗಳ ಭಾಗವಾಗಿ ಭಾರತದ ವಾಯುದಳದ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಎ.ಪಿ. ಸಿಂಗ್ ಅವರು ಸೋಮವಾರ (ಜೂನ್ 1) ನಾಲ್ಕು ದಿನಗಳ ಭೇಟಿಗಾಗಿ ಫ್ರಾನ್ಸ್‌ಗೆ ತೆರಳಿದ್ದು, ಅಲ್ಲಿ ದಸೋ ಏವಿಯೇಷನ್ ಸಂಸ್ಥೆಗೆ ಭೇಟಿ ನೀಡಿದ್ದಾರೆನ್ನಲಾಗಿದೆ.

ಇದಿಷ್ಟು ಸಂಗತಿಗಳನ್ನು ಕ್ರೊನೊಲಾಜಿಕಲಿ ವಿವರಿಸಿದ ಬಳಿಕ ಹಳೆಯ ರಫೇಲ್ 1.0 ಸಂದರ್ಭವನ್ನು ನೆನಪು ಮಾಡಿಕೊಳ್ಳೋಣ.

ರಫೇಲ್ 1.0 ನೆನಪುಗಳು

ಭಾರತದ ರಕ್ಷಣಾ ಇಲಾಖೆಯು ತನಗೆ ಅಗತ್ಯವಿರುವ 126 ಯುದ್ಧವಿಮಾನಗಳಿಗಾಗಿ ಡಿಫೆನ್ಸ್ ಖರೀದಿ ನಿಯಮಗಳ (DPP) ಟೆಂಡರ್ ಕರೆದದ್ದು, 2007ರಲ್ಲಿ. ದಸೋ ಸಂಸ್ಥೆಯನ್ನು ಟೆಂಡರಿನಲ್ಲಿ ಆಯ್ಕೆ ಮಾಡಿದ ಬಳಿಕ, 18 ವಿಮಾನಗಳನ್ನು ಫ್ರಾನ್ಸ್‌ನಲ್ಲೇ ತಯಾರಿಸಿ ಕೊಡಬೇಕು, ಉಳಿದ 108ನ್ನು ಭಾರತ ಸರಕಾರದ ಮಾಲಕತ್ವದ ಹಿಂದೂಸ್ಥಾನ್ ಏರೊನಾಟಿಕಲ್ಸ್ ಲಿಮಿಟೆಡ್ (HAL)ನಲ್ಲಿ ಉತ್ಪಾದಿಸಲು ತಂತ್ರಜ್ಞಾನ ವರ್ಗಾವಣೆ ಮಾಡಬೇಕು ಎಂಬ ಷರತ್ತುಗಳಿದ್ದವು. ಇದೆಲ್ಲ ಆದದ್ದು ಯುಪಿಎ ಸರಕಾರದ ಅವಧಿಯಲ್ಲಿ. ಆದರೆ, ನರೇಂದ್ರ ಮೋದಿ ಅವರ ಸರಕಾರ ಬಂದ ಬಳಿಕ ಗುಣಮಟ್ಟದ ಪ್ರಶ್ನೆಗಳು, ಖರೀದಿಯ ವೆಚ್ಚ ಇತ್ಯಾದಿಗಳ ಪ್ರಶ್ನೆ ಬಂದು, 2015ರಲ್ಲಿ, ಹಳೆಯ ಒಪ್ಪಂದದ ಬದಲಿಗೆ, ಸರಕಾರಗಳ ನಡುವಿನ ಒಪ್ಪಂದದ ರೂಪದಲ್ಲಿ (G2G) ಕೇವಲ 36 ರಫೇಲ್ ಯುದ್ಧವಿಮಾನಗಳನ್ನು ಖರೀದಿಸುವ ತೀರ್ಮಾನ ಆಯಿತು. ಈ ಹೊಸ ಒಪ್ಪಂದದಂತೆ, ದಸೋ ತನಗೆ ದೊರೆಯುವ ಮಾರಾಟ ಮೊತ್ತದಲ್ಲಿ ಶೇ. 50ನ್ನು ಭಾರತೀಯ ಸರಕು ಮತ್ತು ಸೇವೆಗಳ ಮರುಖರೀದಿಗಾಗಿ ಭಾರತದಲ್ಲೇ ಮರು ಹೂಡಿಕೆ ಮಾಡಬೇಕಿತ್ತು (ಆಫ್‌ಸೆಟ್ ಷರತ್ತು). ಅದಕ್ಕೆ ಒಪ್ಪಿದ ದಸೋ, 2016ರಲ್ಲಿ ಅನಿಲ್ ಅಂಬಾನಿ ಅವರ ರಿಲಯನ್ಸ್ ಗುಂಪಿನ ಜೊತೆ ದಸೋ ರಿಲಯನ್ಸ್ ಏರೋಸ್ಪೇಸ್ ಲಿಮಿಟೆಡ್ (DRAL) ಎಂಬ ಜಂಟಿ ವ್ಯವಹಾರ ಒಪ್ಪಂದಕ್ಕೆ ಸಹಿ ಹಾಕಿದ್ದಲ್ಲದೆ, 115 ಮಿಲಿಯ ಡಾಲರ್ ಹೂಡಿಕೆಯನ್ನು ಭಾರತದಲ್ಲಿ ಮಾಡಲು ಒಪ್ಪಿತ್ತು.

ಆದರೆ, ಈ ಒಪ್ಪಂದದಲ್ಲಿ ಹಲವಾರು ಲೋಪಗಳಿವೆ ಎಂದು ಸುಪ್ರೀಂ ಕೋರ್ಟ್‌ನಲ್ಲಿ ದೂರುಗಳು ದಾಖಲಾದವು. ಈ ಒಪ್ಪಂದಕ್ಕೆ ಪ್ರಧಾನಿ ಮೋದಿಯವರು ಸಂಪುಟ ಸಮಿತಿಯ ಒಪ್ಪಿಗೆ ಪಡೆದಿರಲಿಲ್ಲ, ಆಫ್‌ಸೆಟ್ ಪಾಲುದಾರರನ್ನು ನಿಗದಿಪಡಿಸುವಾಗ ನಿಯಮಗಳಂತೆ ರಕ್ಷಣಾ ಸಚಿವಾಲಯದ ಅನುಮತಿ ಪಡೆದಿರಲಿಲ್ಲ, ಸರಕಾರಿ ಸಂಸ್ಥೆ HALನಿಂದ ಈ ಯೋಜನೆಯನ್ನು ಕಿತ್ತು ಅಂಬಾನಿ ಬಳಗಕ್ಕೆ ನಿಡಲಾಯಿತು, ಮೊದಲ ಡೀಲ್‌ಗೂ ಬಳಿಕದ ಡೀಲ್‌ಗೂ ಬೆಲೆಯಲ್ಲಿ ವ್ಯತ್ಯಾಸಗಳಿವೆ ಎಂದೆಲ್ಲ ದೂರುಗಳು ಎದ್ದವು. 2018ರ ಡಿಸೆಂಬರ್‌ನಲ್ಲಿ ಸುಪ್ರೀಂ ಕೋರ್ಟ್, ಈ ವಿಚಾರವನ್ನು ತನ್ನ ನಿಗಾದಲ್ಲಿ ತನಿಖೆ ನಡೆಸಲು ನಿರಾಕರಿಸಿತು ಮತ್ತು ಖರೀದಿ ಪ್ರಕ್ರಿಯೆಯಲ್ಲಿ ಲೋಪಗಳು ಕಾಣಿಸಿಲ್ಲ ಎಂದಿತು. 2019ರಲ್ಲಿ ತನ್ನ ತೀರ್ಪಿನ ಬಗ್ಗೆ ಸಲ್ಲಿಸಲಾದ ಮರುಪರಿಶೀಲನಾ ಅರ್ಜಿಯ ವಿಚಾರಣೆಯ ವೇಳೆ ಸುಪ್ರೀಂ ಕೋರ್ಟ್ ಒಪ್ಪಂದದ ಗುಪ್ತ ಮಾಹಿತಿಗಳನ್ನು ಮುಚ್ಚಿದ ಕವರ್‌ನಲ್ಲಿ ನ್ಯಾಯಾಲಯಕ್ಕೆ ಸಲ್ಲಿಸು ವಂತೆ ಸರಕಾರಕ್ಕೆ ಸೂಚಿಸಿತು. 2019ರ ನವೆಂಬರ್ 14ರಂದು ಪರಿಶೀಲನಾ ಅರ್ಜಿಯನ್ನು ವಜಾಗೊಳಿಸಿ, ಸಂವಿಧಾನದ ಆರ್ಟಿಕಲ್ 32ರ ಅಡಿಯಲ್ಲಿ ರಕ್ಷಣಾ ಗುತ್ತಿಗೆಗಳ ಪರಿಶೀಲನೆಗೆ ತನಗಿರುವ ಅಧಿಕಾರ ಸೀಮಿತವಾದುದು ಎಂದು ಹೇಳಿತು.

ಈ ತೀರ್ಪನ್ನು ಸರಕಾರದ ಪ್ರಚಾರ ಮಷೀನರಿಗಳು ‘‘ರಫೇಲ್ ಹಗರಣ ಮುಕ್ತ’’ ಎಂದು ಬಲವಾಗಿ ಬಿಂಬಿಸಿದವು ಮತ್ತು ಅಲ್ಲಿಗೆ ರಫೇಲ್ ಕುರಿತು ಸಾರ್ವಜನಿಕ ಚರ್ಚೆಗಳು ತಣ್ಣಗಾದವು. ಆದರೆ, ದಸೋ-ಅನಿಲ್ ಅಂಬಾನಿ ನಡುವೆ ಒಪ್ಪಂದ ನಡೆದುದು ಭಾರತವು 36 ವಿಮಾನಗಳನ್ನು ಖರೀದಿಸಲು ನಿರ್ಧರಿಸಿದ ಕೇವಲ ಎರಡು ವಾರಗಳ ಮೊದಲು; ಅನಿಲ್ ಅಂಬಾನಿ ಅವರ ಕಂಪೆನಿಗೆ ರಕ್ಷಣಾ ಉತ್ಪಾದನೆಗಳ ವಿಚಾರದಲ್ಲಿ ಯಾವುದೇ ಅನುಭವ ಇರಲಿಲ್ಲ; ಜೊತೆಗೆ, ದಸೋಗೆ ಮೂಗು ಒತ್ತಿ ಬಾಯಿ ಕಳೆಸಲಾಗಿತ್ತು. ಯಾಕೆಂದರೆ, ಅವರು ಆಫ್‌ಸೆಟ್ ಷರತ್ತಿನನ್ವಯ ಹೂಡಬೇಕಾದ ಹಣದಲ್ಲಿ (159 ಮಿಲಿಯ ಯುರೊ) ಶೇ. 94 ಅವರ ಪಾಲಾದರೂ, ಕಂಪೆನಿಯಲ್ಲಿ ಅವರ ಪಾಲುದಾರಿಕೆ ಕೇವಲ ಶೇ. 49 ಹಾಗೂ ಅಂಬಾನಿ ಬಳಗ ಕೇವಲ ಶೇ. 6 (ಅಂದರೆ 10 ಮಿಲಿಯ ಯುರೊ) ಹೂಡಿಕೆ ಮಾಡಿದರೂ ಅವರ ಪಾಲುದಾರಿಕೆ ಶೇ. 51; ಇದಲ್ಲದೇ ಅಂದಿನ ಫ್ರೆಂಚ್ ಅಧ್ಯಕ್ಷ ಫ್ರಾನ್ಸ್ವಾ ಹೊಲಂಡ್ ಅವರ ಪತ್ನಿಯ ಸಿನೆಮಾಗೆ ಅನಿಲ್ ಅಂಬಾನಿ ಬಳಗದಿಂದ 1.6 ಮಿಲಿಯ ಯುರೊ ಹೂಡಿಕೆ ಮಾಡಲಾಗಿತ್ತು ಎಂಬ ಆಪಾದನೆಗಳಿದ್ದವು; ಇದು ಮಾತ್ರವಲ್ಲದೇ, ದಸೋ ಮತ್ತು ಆ ಸಂಸ್ಥೆಯ ಕೈಗಾರಿಕಾ ಪಾಲುದಾರ ಸಂಸ್ಥೆ ಥೇಲ್ಸ್ ಈ ಡೀಲ್ ವಿಚಾರದಲ್ಲಿ ದಲ್ಲಾಳಿಗಳಿಗೆ ಅಪಾರ ಕಮಿಷನ್ ಪಾವತಿಸಿದೆ ಎಂಬ ಆಪಾದನೆಗಳೂ ಇದ್ದವು. ಒಬ್ಬ ಭಾರತೀಯ ದಲ್ಲಾಳಿ ಸುಶೇನ್ ಮೋಹನ್ ಗುಪ್ತಾ ಎಂಬವರ ಹೆಸರು ಕೇಳಿಬಂದಿತ್ತು. ಆ ವ್ಯಕ್ತಿ 2017ರಲ್ಲಿ ನಡೆದ ಇನ್ನೊಂದು ಹೆಲಿಕಾಪ್ಟರ್ ಮಾರಾಟದ ಪ್ರಕರಣದಲ್ಲಿ ಮನಿ ಲ್ಯಾಂಡರಿಂಗ್ ಆಪಾದಿತ ಕೂಡ ಹೌದು. ಈ ಗುಪ್ತಾಗೆ ಸೇರಿದ ಡೆಫ್ಸಿಸ್ ಸೊಲ್ಯೂಷನ್ಸ್ ಕಂಪೆನಿ ಮತ್ತು ಮಾರಿಷಸ್‌ನಲ್ಲಿರುವ ಅವರದೇ ಕಂಪೆನಿ ಇಂಟರ್‌ಸ್ಟೆಲ್ಲಾರ್ ಟೆಕ್ನಾಲಜೀಸ್‌ಗೆ ದಸೋ 2007-2012ರ ನಡುವೆ ದೊಡ್ಡ ಪ್ರಮಾಣದಲ್ಲಿ ಕಮಿಷನ್ ಪಾವತಿ ಮಾಡಿದ ಬಗ್ಗೆ ಫ್ರೆಂಚ್ ತನಿಖಾಧಿಕಾರಿಗಳು ತನಿಖೆ ನಡೆಸಿದ್ದರು ಎಂಬೆಲ್ಲ ಸಂಗತಿಗಳು ಪತ್ರಿಕೆಗಳಲ್ಲಿ ವರದಿ ಆಗಿದ್ದವು. ಇವು ಯಾವುದನ್ನೂ ಸುಪ್ರೀಂ ಕೋರ್ಟ್ ತನ್ನ ವಿಚಾರಣೆಯ ವೇಳೆ ಪರಿಗಣಿಸಿರಲಿಲ್ಲ; ಮಾಧ್ಯಮಗಳಿಗೂ ಇಂತಹ ಸಂಗತಿಗಳ ಬೆನ್ನು ಹತ್ತಿ ಸತ್ಯಾಸತ್ಯತೆ ಪರಿಶೀಲಿಸುವುದು ಬೇಕಾಗಿರಲಿಲ್ಲ. ಪ್ರತಿಪಕ್ಷಗಳಂತೂ, ಈ ವಿಚಾರಗಳ ಹತ್ತಿರವೂ ಸುಳಿಯಲಿಲ್ಲ. ಅಂತೂ ರಫೇಲ್ ಹಗರಣ 1.0 ಬಹಳ ನಿಗೂಢವಾಗಿ ಮುಕ್ತಾಯ ಕಂಡಿತು.

ಈಗ ಮತ್ತದೇ ಪಾತ್ರಧಾರಿಗಳು ಮತ್ತು ಅಂತಹದೇ ಬೆಳವಣಿಗೆಗಳು ಮತ್ತೆ ತಲೆ ಎತ್ತಿವೆ. ವಿಶೇಷ ಎಂದರೆ, ರಫೇಲ್ 1.0 ವೇಳೆ, ಡೀಲ್ ಬದಲಾದದ್ದು, ದುಬಾರಿ ವೆಚ್ಚಕ್ಕೆ ಕಡಿಮೆ ತಂತ್ರಜ್ಞಾನದ ವಿಮಾನ ಖರೀದಿಸಲಾಗಿದೆ ಎಂಬ ಕಾರಣಕ್ಕೆ. ಆಗ 59,000 ಕೋಟಿ ರೂ.ಗಳಿಗೆ 36 ರಫೇಲ್ ಖರೀದಿ ಆಗಿತ್ತು. ಅಂದರೆ ಒಂದು ರಫೇಲ್ ಬೆಲೆ ಅಂದಾಜು 1,640 ಕೋಟಿ ರೂ. ಈಗ ರಫೇಲ್ 2.0 ಹೊತ್ತಿಗೆ 114 ರಫೇಲ್ ವಿಮಾನಗಳಿಗೆ 3.25 ಲಕ್ಷ ಕೋಟಿ ರೂ. ಪಾವತಿಸಲಾಗುತ್ತದೆಯಂತೆ. ಅಂದರೆ, ಈಗ ಪ್ರತೀ ವಿಮಾನದ ಬೆಲೆ ಹಿಂದಿಗಿಂತ ಒಂದೂವರೆ ಪಟ್ಟು ಹೆಚ್ಚು! ರಕ್ಷಣಾ ಖರೀದಿಗಳನ್ನು ಸಂಪೂರ್ಣವಾಗಿ ಅಪಾರದರ್ಶಕಗೊಳಿಸಿರುವುದರಿಂದ, ಇವೆಲ್ಲ ಈಗ ಸಾರ್ವಜನಿಕ ಚರ್ಚೆಯ ವಿಷಯಗಳಾಗಿ ಉಳಿದಿಲ್ಲ.

Tags

Rafale-2.0
share
ರಾಜಾರಾಂ ತಲ್ಲೂರು
ರಾಜಾರಾಂ ತಲ್ಲೂರು
Next Story
X