Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ನೆಲದನಿ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಮಾಹಿತಿ ಮಾರ್ಗದರ್ಶನ
    • ಆರೋಗ್ಯ
    • ಓ ಮೆಣಸೇ
    • ಕೃತಿ ಪರಿಚಯ
    • ಝಲಕ್
    • ಬುಡಬುಡಿಕೆ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಪಿಟ್ಕಾಯಣ
  5. ಸೂಕ್ಷ್ಮ ಡೇಟಾಗಳು ಮತ್ತು ‘ಡಿಜಿಟಲ್...

ಸೂಕ್ಷ್ಮ ಡೇಟಾಗಳು ಮತ್ತು ‘ಡಿಜಿಟಲ್ ಡಿವೈಡ್’

ರಾಜಾರಾಂ ತಲ್ಲೂರುರಾಜಾರಾಂ ತಲ್ಲೂರು7 Nov 2026 11:04 AM IST
share
ಸೂಕ್ಷ್ಮ ಡೇಟಾಗಳು ಮತ್ತು ‘ಡಿಜಿಟಲ್ ಡಿವೈಡ್’

ಭಾರತ ಸಂವಿಧಾನದ ಮೂರನೇ ಭಾಗದಲ್ಲಿರುವ 14 ರಿಂದ 18ರ ತನಕದ ವಿಧಿಗಳು ಸಮಾನತೆ, ಸಮಾನ ಅವಕಾಶಗಳನ್ನು ಮೂಲಭೂತ ಹಕ್ಕುಗಳಾಗಿ ನೀಡಿವೆ. ಇದಕ್ಕೆ ಧಕ್ಕೆ ತರುವ ಯಾವುದೇ ನೀತಿ-ತಂತ್ರಜ್ಞಾನ ಕೂಡ ದೇಶಕ್ಕೆ ವಿಭಾಜಕವಾಗಿ ಪರಿಣಮಿಸಬಹುದು. ನಾವು ಮಾತ್ರ ಇವನ್ನೆಲ್ಲ ‘ಡಿಜಿಟಲ್ ಡಿವೈಡ್’ ಎಂದು ಒಣಚರ್ಚೆಗಳಲ್ಲಿ ಕಾಲಹರಣ ಮಾಡುತ್ತಿದ್ದೇವೆ. ತಮ್ಮ ಮೂಲಭೂತ ಹಕ್ಕುಗಳಿಗೆ ಆಗುತ್ತಿರುವ ‘ಡಿಜಿಟಲ್’ ಧಕ್ಕೆಯ ಬಗ್ಗೆ ಜನ ಎಚ್ಚರಗೊಳ್ಳುವುದು ಅಗತ್ಯವಿದೆ.

ಡೇಟಾ ಆಧರಿತ ತಂತ್ರಜ್ಞಾನಗಳು ಬುಲೆಟ್ ಟ್ರೇನ್ ಹತ್ತಿ ಧಾವಿಸುತ್ತಿರುವಾಗ, ಭಾರತದ ಆಡಳಿತಯಂತ್ರವು ಎತ್ತಿನಗಾಡಿ ಹತ್ತಿ ಹೊರಟಿದೆ. ಈ ವೇಗಗಳ ನಡುವಣ ವ್ಯತ್ಯಾಸವನ್ನು ನಿವಾರಿಸಲು, ಎತ್ತಿನಗಾಡಿಯನ್ನೇ ಎತ್ತಿ ಬುಲೆಟ್ ಟ್ರೇನ್ ಒಳಗಿಟ್ಟು ಓಡಿಸುವುದು ಪರಿಹಾರ ಎಂಬ ಚಿಂತನೆ ಅಪಾಯಕಾರಿ.

2013ರಿಂದ ಕಾರ್ಯಾಚರಣೆಯಲ್ಲಿರುವ iSPIRIT (ಇಂಡಿಯನ್ ಸಾಫ್ಟ್‌ವೇರ್ ಪ್ರಾಡಕ್ಟ್ ಇಂಡಸ್ಟ್ರಿ ರೌಂಡ್ ಟೇಬಲ್) ಎಂಬ ತಂತ್ರಜ್ಞಾನ ಥಿಂಕ್ ಟ್ಯಾಂಕ್ ಈಗಾಗಲೇ ಇಂಡಿಯಾ ಸ್ಟ್ಯಾಕ್, ಇ-ಕೆವೈಸಿ, ಡಿಜಿಲಾಕರ್, ಇ-ಸೈನ್, ಯುಪಿಐ, ಒಪ್ಪಿಗೆ ಆಧರಿತ ಡೇಟಾ ಹಂಚಿಕೆ ವ್ಯವಸ್ಥೆ (Account aggregation), ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಸುಧಾರಣೆಗಳು (OCEN)... ಹೀಗೆ ಸಾಲುಸಾಲು ಉತ್ಪನ್ನಗಳ ಪರಿಕಲ್ಪನೆಯನ್ನು ದೇಶಕ್ಕೆ ನೀಡುವಲ್ಲಿ ಮಹತ್ವದ ಪಾತ್ರ ವಹಿಸಿದೆ. ಎಂದಿನಂತೆ, ನಂದನ್ ನಿಲೇಕಣಿ ಮತ್ತಿತರರು ಈ ಥಿಂಕ್ ಟ್ಯಾಂಕ್‌ನ ಮಾರ್ಗದರ್ಶಕರು. ಭಾರತ ಸರಕಾರವಂತೂ ಸ್ವಯಂಸೇವಕರೇ ನಡೆಸುತ್ತಿರುವ ಈ ಥಿಂಕ್ ಟ್ಯಾಂಕ್ ಅಭಿವೃದ್ಧಿಪಡಿಸಿ ಕೊಟ್ಟದ್ದನ್ನೆಲ್ಲ ಪ್ರಸಾದವೆಂದು ಸ್ವೀಕರಿಸಿ, ‘ಡಿಜಿಟಲ್ ಇಂಡಿಯಾ’ ಆಗಿರುವ ಕೃತಾರ್ಥ ಭಾವನೆಯಲ್ಲಿದೆ.

ಈ ಬೆಳವಣಿಗೆಗಳೆಲ್ಲ ಹೇಗಿವೆ ಎಂದರೆ, ಈ ಸವಲತ್ತುಗಳ ಮಹಾಪೂರದ ಅಂತಿಮ ಫಲಾನುಭವಿಗಳಾದ ಭಾರತದ ಪ್ರಜೆಗಳು ಇವನ್ನೆಲ್ಲ ಬಳಸಲು, ಇವಕ್ಕೆ ಹೊಂದಿಕೊಳ್ಳಲು ಏದುಸಿರುಬಿಡತೊಡಗಿದ್ದಾರೆ. ಇದರ ಫಲವಾಗಿ, ದಿನಬೆಳಗಾದರೆ ಡೇಟಾ ಸೋರಿಕೆ, ಡಿಜಿಟಲ್ ಅರೆಸ್ಟ್, ಟೆಕ್ ವಂಚನೆ ಜಾಲಗಳ ಕರಾಮತ್ತು, ಸುಂಟಿ-ಸುಡುಗಾಡು... ಎಲ್ಲವೂ ಸುದ್ದಿ ಆಗುತ್ತಿವೆ. ಪ್ರಜೆಗೆ ತನ್ನ ಡೇಟಾ ಎಂದರೇನು? ಅದು ಎಲ್ಲಿದೆ? ಯಾರು ಅದನ್ನು ಬಳಸುತ್ತಿದ್ದಾರೆ? ಅದರ ಪರಿಣಾಮಗಳೇನು? ಎಂಬ ಯಾವ ಚಿತ್ರಣವೂ ಸಿಗುತ್ತಿಲ್ಲ. ಇಂದು ‘ಡೇಟಾ ಎರಡನೇ ಚಿನ್ನ’ ಎಂದು ಪರಿಗಣಿತವಾಗಿರುವುದರಿಂದ, ಈ ಚಿನ್ನದ ಹಿಂದೆ ಬಿದ್ದಿರುವ ‘ಟೆಕ್‌ಏಡ್ ಭಾರತ’, ತನ್ನ ಧಾವಂತದಲ್ಲಿ, ಪುರಾತನ ‘ಬಡಪಾಯಿ ಭಾರತ’ದ ಪ್ರಜೆಗಳನ್ನು ಕಾಲಡಿಯಲ್ಲಿ ಮೆಟ್ಟಿಕೊಂಡೇ ಮುಂದೆ ಧಾವಿಸುತ್ತಿದೆ.

ಇಂತಹ ಸನ್ನಿವೇಶದಲ್ಲಿ ದೇಶಕ್ಕೆ ಟೆಕ್ ಸಲಹೆಗಳನ್ನು ಕೊಡುವ ಥಿಂಕ್ ಟ್ಯಾಂಕ್ ಒಂದು ಹೇಗೆ ಕೆಲಸ ಮಾಡಬೇಕು? ತಂತ್ರಜ್ಞಾನದ ಮ್ಯಾಜಿಕ್ಕಿಗೆ ಸಿಲುಕಿ ಭ್ರಮಾಧೀನರಾಗಿರುವ ಪ್ರಜೆಗಳನ್ನು ಆರ್ಥಿಕ ನಷ್ಟ, ಡೇಟಾ ನಷ್ಟಗಳಿಂದ ರಕ್ಷಿಸಲು ತನ್ನ ಬುದ್ಧಿ-ಸಂಪನ್ಮೂಲಗಳನ್ನು ವ್ಯಯಿಸುವುದು ಥಿಂಕ್ ಟ್ಯಾಂಕ್ ಒಂದರ ನೈತಿಕ ಕರ್ತವ್ಯ ಅಲ್ಲವೆ? ಇದನ್ನು ಜವಾಬ್ದಾರಿಯುತವಾಗಿ ಮಾಡುವ ಬದಲು, ಇನ್ನಷ್ಟು ರಂಗುರಂಗಿನ ಉತ್ಪನ್ನಗಳನ್ನು ‘ಟೆಕ್‌ಏಡ್ ಭಾರತ’ದಲ್ಲಿ ರಾಶಿ ಹಾಕಲಾಗುತ್ತಿದೆ. ‘ಬಡಪಾಯಿ ಭಾರತದ’ ಪ್ರಜೆ, ಈ ಕಂಠಮಟ ಪ್ರವಾಹದ ಸುಳಿಯಲ್ಲಿ ಸಿಲುಕಿ ಒದ್ದಾಡುತ್ತಿದ್ದಾರೆ. ಹಾಗಾಗಿ, ಭಾರತ ತಂತ್ರಜ್ಞಾನದ ಹೆಸರಿನಲ್ಲಿ ವಿಭಜನೆ ಆಗಿರುವುದು ಎದ್ದು ಕಾಣಿಸತೊಡಗಿದೆ.

***

ಈ ದೊಡ್ಡ ಪೀಠಿಕೆಗೆ ಒಂದು ಕಾರಣ ಇದೆ. ಅದೇನೆಂದರೆ, ಕಳೆದ ವಾರ ಬೆಂಗಳೂರಿನಲ್ಲಿ ಇದೇ iSPIRIT ಸಿದ್ಧಪಡಿಸಿದ Data Empowerment & Protection Architecture (DEPA) for AI Training Framework ಕೈಪಿಡಿಯನ್ನು ಭಾರತ ಸರಕಾರದ ಇಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿ ಎಸ್. ಕೃಷ್ಣನ್ ಅವರು ಬಿಡುಗಡೆ ಮಾಡಿ, ಹೊಸತೊಂದು ಸುದ್ದಿ ಬಾಂಬ್ ಸಿಡಿಸಿದ್ದಾರೆ.

ಅದೇನೆಂದರೆ: ಡೇಟಾ ಶ್ರೀಮಂತ ದೇಶವಾಗಿರುವ ಭಾರತವು ತನ್ನ ಭದ್ರತೆಯಲ್ಲಿರುವ ಆರೋಗ್ಯ ವ್ಯವಸ್ಥೆ, ಬ್ಯಾಂಕಿಂಗ್ ವ್ಯವಸ್ಥೆ, ಶಿಕ್ಷಣ ವ್ಯವಸ್ಥೆ, ಕೃಷಿರಂಗ ಇತ್ಯಾದಿ ರಂಗಗಳ ಸೂಕ್ಷ್ಮ ಸ್ವರೂಪದ ಅಮೂಲ್ಯ ಡೇಟಾಗಳನ್ನು ಎಐಗೆ ಕಲಿಕೆಗಾಗಿ ಒದಗಿಸುವುದಕ್ಕಾಗಿ ಸುಭದ್ರ ವ್ಯವಸ್ಥೆಯೊಂದರ ಮೂಲಕ ಬಿಚ್ಚಿಡುವುದಕ್ಕೆ ಅನುವು ಮಾಡಿಕೊಡಲು ರಾಷ್ಟ್ರೀಯ ಚೌಕಟ್ಟೊಂದನ್ನು ಸ್ಥಾಪಿಸುವ ಪ್ರಸ್ತಾವ ಸರಕಾರದ ಮುಂದಿದೆಯಂತೆ. ಈ ಡೇಟಾಗಳನ್ನು ಎಐ ಕಲಿಕೆಗೆ ಬಳಸುವುದರಿಂದ, 2030ರ ಹೊತ್ತಿಗೆ ದೇಶದ ಜಿಡಿಪಿಗೆ ಎಐ ಮೂಲದಿಂದ 45 ಲಕ್ಷ ಕೋಟಿ ರೂ.ಗಳಿಗೂ ಮಿಕ್ಕಿ ಮೌಲ್ಯ ಸೇರ್ಪಡೆ ಆಗಲಿದೆ ಎಂದು ಎಸ್. ಕೃಷ್ಣನ್ ಪ್ರಕಟಿಸಿದ್ದಾರೆ (PIB Release ID: 2330756).

ವಿಜ್ಞಾನ-ತಂತ್ರಜ್ಞಾನಗಳಿಗೆ ಸಂಬಂಧಿಸಿದಂತೆ ಯಾವುದೇ ಗುಣಾತ್ಮಕ ಬೆಳವಣಿಗೆಗಳು ಸ್ವಾಗತಾರ್ಹ. ಆದರೆ, ಇವೆಲ್ಲ ಒಂದು ಕಾನೂನಿನ ಚೌಕಟ್ಟಿನಲ್ಲಿ, ಸಾಂವಿಧಾನಿಕ ವ್ಯವಸ್ಥೆಯೊಳಗೆ, ಎಲ್ಲರನ್ನು ಒಳಗೊಳ್ಳುವ ಪ್ರಜಾತಾಂತ್ರಿಕ ಚಿಂತನೆಯೊಂದಿಗೆ ನಡೆಯಬೇಕಾಗುತ್ತದೆ. ಆದರೆ ಯಾವುದೇ ಕಾನೂನಿನ ಚೌಕಟ್ಟು ಸಿದ್ಧವಿಲ್ಲದೆ, ಹಾಲೀ ಇರುವ ಉತ್ಪನ್ನಗಳಲ್ಲಿ ಅಸಂಖ್ಯ ಹುಳುಕುಗಳು, ತೂತುಗಳು, ತೇಪೆಗಳು ಇರುವಾಗ, ಇಂತಹ ಉತ್ಪನ್ನಗಳ ಕುರಿತು ಆತಂಕ-ಆಕ್ಷೇಪಗಳು ದೇಶದ ನ್ಯಾಯಾಂಗದ ಮೆಟ್ಟಿಲು ಹತ್ತಿ ‘ಸಬ್‌ಜುಡೀಸ್’ ಆಗಿರುವಾಗ, ಆಗಿರುವ ಲೋಪವನ್ನು ದುರಸ್ತಿಪಡಿಸಿ, ಎಲ್ಲರನ್ನೂ ಒಳಗೊಳ್ಳುವತ್ತ ಗಮನ ಹರಿಸುವ ಬದಲು, ಇನ್ನಷ್ಟು ಹೊಸ ಹೊಸ ಉತ್ಪಾದನೆಗಳನ್ನು ತಂದು ರಾಶಿ ಹಾಕುವುದರ ಹಿಂದಿರುವ ತುರ್ತು ಏನು? ಎಂಬ ಪ್ರಶ್ನೆ ಸಹಜವಾಗಿಯೇ ಏಳುತ್ತದೆ.

ಡೇಟಾ ಇದು ಝಣ ಝಣ ಕಾಂಚಾಣ. ಅಧಿಕಾರಿಗಳು ಭಾರತದಲ್ಲಿ ಈ ಡೇಟಾ ವಾಣಿಜ್ಯೀಕರಣವು ಡೆಮಾಕ್ರಟಿಕ್ ಪರ್ಯಾಯ ಹಾದಿ ಎಂದು ಹೇಳುತ್ತಿದ್ದಾರೆ. ಏಕೆಂದರೆ, ಅಮೆರಿಕದಲ್ಲಿ ವಾಣಿಜ್ಯ ಡೇಟಾಗಳನ್ನು ಖಾಸಗಿಯವರು ಹಣ ಕೊಟ್ಟು ಖರೀದಿಸುವುದಕ್ಕೆ ಅವಕಾಶ ಇದೆ; ಚೀನಾದಲ್ಲಿ ಸರಕಾರವೇ ಡೇಟಾಗಳನ್ನು ಪೂರೈಸುತ್ತದೆಯಂತೆ. ಆದರೆ, ಅಲ್ಲಿರುವ ಡೇಟಾ ಸಂರಕ್ಷಣೆ ಕಾನೂನುಗಳ ಸ್ವರೂಪದ ಬಗ್ಗೆ ಈ ಅಧಿಕಾರಿಗಳದು ಮೌನ.

ಮೊನ್ನೆ ಕೈಪಿಡಿ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಪ್ರೊ| ಅಜಯ್ ಕುಮಾರ್ ಸೂದ್ (ಪ್ರಧಾನಮಂತ್ರಿಯವರ ವಿಜ್ಞಾನ ಮುಖ್ಯ ಸಲಹೆಗಾರರು) ಈ ಆಇPಂದಲ್ಲಿ ಎಐ ಮಾದರಿಯೇ ಡೇಟಾ ಬಳಿ ಬರುತ್ತದೆಯೇ ಹೊರತು, ಡೇಟಾ ಹೊರಗೆ ಎಐ ಮಾದರಿ ಬಳಿ ಹೋಗುವುದಿಲ್ಲ. ಇದರಿಂದಾಗಿ ದೇಶದ ಒಳಗೆ ಮತ್ತು ಹೊರಗೆ ನಂಬಿಗಸ್ಥಿಕೆಯ, ಬಹುಪಕ್ಷೀಯ, ಡೇಟಾ ಕೊಲಾಬೊರೇಷನ್ ಸಾಧ್ಯ ಆಗಲಿದೆ. ಇದು ಜಾಗತಿಕ ವಿಜ್ಞಾನ ಡಿಪ್ಲೊಮೆಸಿಗೆ ಭಾರತದ ಮಹತ್ವದ ಕೊಡುಗೆಯಾಗಲಿದೆ ಎಂದು ಬಣ್ಣಿಸಿದ್ದಾರೆ.

ಈ ಕೈಪಿಡಿ ತಯಾರಿಸಿದ iSPIRITನವರು, ನಮ್ಮ ಪ್ರಸ್ತುತದ ಸಮಸ್ಯೆಗಳಿಗೆ ಎಐ ಮೂಲಕ ಪರಿಹಾರ ಪಡೆಯಲು ಸಂಕೀರ್ಣಮತ್ತು ಹೊಚ್ಚಹೊಸ ಡೇಟಾ ಅಗತ್ಯವಿದೆ. ಆದರೆ ಈ ಡೇಟಾಗಳು ಈಗ ಕಾನೂನಿನ, ಆಡಳಿತಾತ್ಮಕ ನಿಯಂತ್ರಣ ಚೌಕಟ್ಟುಗಳಲ್ಲಿ ಬಂದಿ ಆಗಿ ‘ಡೆಡ್ ಲಾಕ್’ ಆಗಿವೆ. ಈ ಡೆಡ್‌ಲಾಕ್ ಅನ್ನು ನಿವಾರಿಸಿ, ಜವಾಬ್ದಾರಿಯುತವಾದ, ಖಾಸಗಿತನಕ್ಕೆ ಧಕ್ಕೆ ತರದ, ಪಾರದರ್ಶಕ, ನಂಬಿಗಸ್ಥ ವ್ಯವಸ್ಥೆಯನ್ನು DEPA ಒದಗಿಸಲಿದೆ ಎಂದು ಹೇಳಿಕೊಂಡಿದ್ದಾರೆ.

ಡಿಜಿಟಲ್ ಯುಗದಲ್ಲಿ ನಂಬಿಗಸ್ಥಿಕೆ ಈಗ ಹೊಸ ವ್ಯಾಖ್ಯಾನಗಳನ್ನೇ ಪಡೆಯುತ್ತಿದೆ. ಇವರ ಇಂಡಿಯಾ ಸ್ಟ್ಯಾಕ್ಸ್ ವಿವಿಧ ರಂಗಗಳಲ್ಲಿ ಭಾರತೀಯರ ಡೇಟಾಗಳನ್ನು ಸಾರಾಸಗಟು ಸಂಗ್ರಹಿಸುತ್ತಾ ಬಂದಿದೆ. ಈಗ ಈ ಸಂಗ್ರಹಿತ ಡೇಟಾಗಳನ್ನು ವಾಣಿಜ್ಯ ಬಳಕೆ ಮಾಡಿಕೊಳ್ಳುವ ಹಾದಿಗಳನ್ನು ಇಂಚಿಂಚಾಗಿ ತೆರೆಯಲಾಗುತ್ತಿದೆ. ಇದೆಲ್ಲವೂ ಒಂದೇ ಥಿಂಕ್ ಟ್ಯಾಂಕ್ ಮೂಲಕ ನಡೆಯುತ್ತಿದೆ ಎಂಬುದು ಗಮನಾರ್ಹ. ಇಂತಹ ‘ಟೆಕ್‌ಏಡ್’ ಆಟಗಳ ಪೂರ್ಣ ಚಿತ್ರವನ್ನು, ಆರಂಭದಲ್ಲೇ ಬಾಯಿ ಬಿಡದೆ, ಕಂತುಕಂತಾಗಿ ತಾಂತ್ರಿಕ ಪದ ನೈಪುಣ್ಯಗಳಲ್ಲಿ ಮರೆಮಾಚಿ ಬಿಡುಗಡೆ ಮಾಡಲಾಗುತ್ತಿದೆ. ಆಧಾರ್ ಕಾರ್ಡ್‌ನಿಂದೀಚೆಗೆ ಇಂತಹ ಪ್ರತಿಯೊಂದೂ ಬೆಳವಣಿಗೆ ಒಂದು ಸಾತತ್ಯದೊಂದಿಗೆ ನಡೆಯುತ್ತಿರುವುದನ್ನು ಗಮನಿಸಿ. ಎಲ್ಲದರ ಅಂತಿಮ ಗುರಿ ಡೇಟಾ ವಾಣಿಜ್ಯೀಕರಣ.

ಇವರ ಮೇಲೆ ನಂಬಿಕೆ ಹುಟ್ಟಬೇಕೆಂದರೆ, ಕನಿಷ್ಠಪಕ್ಷ ಸದ್ಯ ಲಭ್ಯವಿರುವ ಟೆಕ್ ಉತ್ಪನ್ನಗಳ ಕೊರತೆ ನಿವಾರಿಸಿ, ಅವನ್ನು ನಂಬಲರ್ಹಗೊಳಿಸಬೇಕು. ಅದನ್ನು ಮಾಡದೆ, ಕೇವಲ ಡೇಟಾ ಚಿನ್ನದ ಲಾಭವನ್ನು ಬಾಚಿಕೊಳ್ಳುವ ಹಪಾಹಪಿ ಸ್ವಲ್ಪ ಆತಂಕಕಾರಿ. ಇದಕ್ಕೆ ಸರಕಾರದ ಕೃಪಾಕಟಾಕ್ಷ ಬೇರೆ.

ಥಿಂಕ್‌ಟ್ಯಾಂಕ್ ಸೇವೆಗಳನ್ನು ದೇಶದ ಡಿಜಿಟಲ್ ಡಿವೈಡ್ ನಿವಾರಣೆಗೆ ಬಳಸುವ ಬದಲು ತಂತ್ರಜ್ಞಾನವನ್ನು ಬಳಸಿ ಇನ್ನಷ್ಟು ವಿಭಜನೆಗೆ ಹೊರಡುವುದನ್ನು ಎಚ್ಚರದಿಂದ ಗಮನಿಸಬೇಕಿದೆ. ತಂತ್ರಜ್ಞಾನಕ್ಕೆ ತಳಪಾಯ ಆಗಬೇಕಾದ DPDP ಕಾಯ್ದೆ ಜಾರಿಗೆ ತರುವುದಕ್ಕೇ ಸರಕಾರ ಮೀನಮೇಷ ಎಣಿಸುತ್ತಿದೆ. ಆ ಕಾಯ್ದೆ ಜಾರಿಗೆ ಬಂದರೆ, ಕನಿಷ್ಠ ಪಕ್ಷ ಡೇಟಾ ಮೂಲವ್ಯಕ್ತಿಗೆ ತನ್ನ ಡೇಟಾ ಬಳಸಲು ಒಪ್ಪಿಗೆ ನೀಡುವ-ನಿರಾಕರಿಸುವ ಹಕ್ಕು ಇರುತ್ತದೆ. (ಸರಕಾರ ತನ್ನನ್ನು ಮತ್ತು ತಾನು ಬಯಸುವ ಕೆಲವರನ್ನು DPDP ಕಾಯ್ದೆಯ ವ್ಯಾಪ್ತಿಯಿಂದ ಹೊರಗಿಟ್ಟುಕೊಂಡಿದೆ ಎಂಬುದನ್ನೂ ಗಮನಿಸಿ.) ಇಂದು ಎಐ ಯುಗಕ್ಕೆ DPDP ಕಾಯ್ದೆಯೇ ಪರ್ಯಾಪ್ತವಲ್ಲ ಎಂಬ ಚರ್ಚೆ ಚಾಲ್ತಿಯಲ್ಲಿದೆ. ಹಾಗಿರುವಾಗ, ಆ ಮೂಲಭೂತ ತಳಪಾಯವೂ ಇಲ್ಲದೆ ಇಂತಹದೆಲ್ಲ ಬೆಳವಣಿಗೆಗಳು ನಡೆಯುವುದು ಲಾಭಬಡುಕತನ ಎಂದೇ ಪರಿಗಣಿತವಾಗಬೇಕು.

ಭಾರತ ಸಂವಿಧಾನದ ಮೂರನೇ ಭಾಗದಲ್ಲಿರುವ 14 ರಿಂದ 18ರ ತನಕದ ವಿಧಿಗಳು ಸಮಾನತೆ, ಸಮಾನ ಅವಕಾಶಗಳನ್ನು ಮೂಲಭೂತ ಹಕ್ಕುಗಳಾಗಿ ನೀಡಿವೆ. ಇದಕ್ಕೆ ಧಕ್ಕೆ ತರುವ ಯಾವುದೇ ನೀತಿ-ತಂತ್ರಜ್ಞಾನ ಕೂಡ ದೇಶಕ್ಕೆ ವಿಭಾಜಕವಾಗಿ ಪರಿಣಮಿಸಬಹುದು. ನಾವು ಮಾತ್ರ ಇವನ್ನೆಲ್ಲ ‘ಡಿಜಿಟಲ್ ಡಿವೈಡ್’ ಎಂದು ಒಣಚರ್ಚೆಗಳಲ್ಲಿ ಕಾಲಹರಣ ಮಾಡುತ್ತಿದ್ದೇವೆ. ತಮ್ಮ ಮೂಲಭೂತ ಹಕ್ಕುಗಳಿಗೆ ಆಗುತ್ತಿರುವ ‘ಡಿಜಿಟಲ್’ ಧಕ್ಕೆಯ ಬಗ್ಗೆ ಜನ ಎಚ್ಚರಗೊಳ್ಳುವುದು ಅಗತ್ಯವಿದೆ.

(ಅಂಕಣಕಾರರು ಹಿರಿಯ ಪತ್ರಕರ್ತರು ಮತ್ತು ಚಿಂತಕರು)

Tags

sensitive dataDigital Divide
share
ರಾಜಾರಾಂ ತಲ್ಲೂರು
ರಾಜಾರಾಂ ತಲ್ಲೂರು
Next Story
X