Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಈ ಹೊತ್ತಿನ ಹೊತ್ತಿಗೆ
      • ಜನಚರಿತೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಪಿಟ್ಕಾಯಣ
  5. ‘ಹಿರಿಯರ’ ಸದನದ ‘ದೊಡ್ಡವರು’

‘ಹಿರಿಯರ’ ಸದನದ ‘ದೊಡ್ಡವರು’

ರಾಜಾರಾಂ ತಲ್ಲೂರುರಾಜಾರಾಂ ತಲ್ಲೂರು6 July 2024 11:20 AM IST
share
‘ಹಿರಿಯರ’ ಸದನದ ‘ದೊಡ್ಡವರು’
ದಿನ ಕಳೆದಂತೆ ಸಂಸತ್ತಿನ ಉಭಯ ಸದನಗಳೂ ಹಣವಂತರ, ಪ್ರಭಾವಿಗಳ ಅರ್ಥಾತ್ ದೇಶದ ಶೇ. 10 ಜನರ ಆಡೊಂಬಲ ಆಗುತ್ತಿದೆ. ಅಲ್ಲಿ ಚರ್ಚೆಯಾಗುವ ಸಂಗತಿಗಳೂ ಆ ಶೇ. 10 ಜನರ ಹಿತಾಸಕ್ತಿಗಳನ್ನು ಕಾಪಾಡುವಂತಹವೇ ಆಗಿರುತ್ತವೆ. ಅವರು ಹೇಳುತ್ತಿರುವುದು ಮಹತ್ವದ ಸಂಗತಿ ಎಂದು ಬಿಂಬಿಸಿ, ಅದನ್ನೆಲ್ಲ ಸಮರ್ಥಿಸುವ ಮಾಧ್ಯಮಗಳೂ ಅವರವೇ ಆಗಿರುತ್ತವೆ.

ಸಂಸತ್ತಿನ ರಾಜ್ಯಸಭೆಯಲ್ಲಿ ಬುಧವಾರ (ಜುಲೈ 03) ರಾಷ್ಟ್ರಪತಿಗಳ ಭಾಷಣಕ್ಕೆ ವಂದನಾ ನಿರ್ಣಯವನ್ನು ಸ್ವೀಕರಿಸುವ ಕಲಾಪಗಳು ನಡೆದವು. ಕೊನೆಯಲ್ಲಿ, ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಈ ಚರ್ಚೆಗೆ ಉತ್ತರಿಸಿದ ಬಳಿಕ, ಸಭಾತ್ಯಾಗ ಮಾಡಿದ ಪ್ರತಿಪಕ್ಷಗಳ ಅನುಪಸ್ಥಿತಿಯಲ್ಲೇ ವಂದನಾ ನಿರ್ಣಯ ಅಂಗೀಕಾರವಾಯಿತು. ಈ ಪ್ರಕ್ರಿಯೆಯ ವೇಳೆ ರಾಜ್ಯಸಭೆಯ ಸುಮಾರು 70 ಮಂದಿ ಸದಸ್ಯರು ವಂದನಾ ನಿರ್ಣಯದ ಪರ-ವಿರುದ್ಧ ತಮ್ಮ ಅಭಿಪ್ರಾಯಗಳನ್ನು ಮಂಡಿಸಿದ್ದರು. ಅದಕ್ಕೆ ಮುನ್ನ ಮಂಗಳವಾರ ಈ ಪ್ರಕ್ರಿಯೆ ಲೋಕಸಭೆಯಲ್ಲೂ ನಡೆದು, ಅಲ್ಲೂ 68 ಮಂದಿ ಸಂಸದರು ನಿರ್ಣಯದ ಪರ-ವಿರುದ್ಧ ತಮ್ಮ ಅಭಿಪ್ರಾಯಗಳನ್ನು ಮಂಡಿಸಿದ್ದರು. ಲೋಕಸಭೆಯಲ್ಲಂತೂ 280 ಮಂದಿ ಮೊದಲ ಬಾರಿಗೆ ಸಂಸತ್ ಪ್ರವೇಶಿಸಿದವರು. ಅವರಲ್ಲೂ ಹಲವರು ಈ ಸಂದರ್ಭದಲ್ಲಿ ಚೊಚ್ಚಲ ಭಾಷಣ ಮಾಡಿದರು. ದುರದೃಷ್ಟವಶಾತ್, ಸ್ಟಾರ್ ಪರ್ಫಾರ್ಮರ್‌ಗಳನ್ನು ಹೊರತುಪಡಿಸಿದರೆ, ಉಳಿದವರ ಮಾತುಗಳು ಅದೆಷ್ಟೇ ಗಹನವಾದ ಸಂಗತಿಗಳನ್ನು ಒಳಗೊಂಡಿದ್ದರೂ, ಅವನ್ನು ಕೇಳಿಸಿಕೊಂಡವರು ಆ ಹೊತ್ತಿಗೆ ಸದನದಲ್ಲಿ ಹಾಜರಿದ್ದ ಬೆರಳೆಣಿಕೆಯ ಮಂದಿ ಮತ್ತು ಆ ಮಾತುಗಳನ್ನು ದಾಖಲಿಸಿಕೊಳ್ಳುವ ಕರ್ತವ್ಯ ಮಾಡುತ್ತಿದ್ದ ಸದನ ಸಿಬ್ಬಂದಿ ಮಾತ್ರ.

ಆದರೆ, ಒಂದು ಭಾಷಣ ಮಾತ್ರ ಇದಕ್ಕೆ ಹೊರತಾಗಿತ್ತು. ಆ ಭಾಷಣವನ್ನು ಸ್ವತಃ ಪ್ರಧಾನಮಂತ್ರಿಗಳು ರಾಜ್ಯಸಭೆಯಲ್ಲಿ ತಮ್ಮ ಭಾಷಣದ ವೇಳೆ, ಉಲ್ಲೇಖಿಸಿ ಪ್ರಶಂಸಿಸಿದರು. ಮಾತ್ರವಲ್ಲದೆ, ಮರುದಿನ ಮಾಧ್ಯಮಗಳಂತೂ ‘ಕಡ್ಡಾಯವೆಂಬಂತೆ’ ಆ ಭಾಷಣದ ಸುದ್ದಿಯನ್ನು ಆದ್ಯತೆ ನೀಡಿ ಪ್ರಕಟಿಸಿ ಕೃತಾರ್ಥರಾದರು.

ಹೌದು, ನಾನು ಹೇಳುತ್ತಿರುವುದು, ಭಾರತದ ಮೊತ್ತಮೊದಲ ಬೃಹತ್ ಐಟಿ ಕಂಪೆನಿ ಇನ್ಫೋಸಿಸ್‌ನ ಸ್ಥಾಪಕರ ಪತ್ನಿ, ಇಂಗ್ಲೆಂಡಿನ (ಹೆಚ್ಚಿನಂಶ) ನಿರ್ಗಮನ ಪ್ರಧಾನಿ ರಿಷಿ ಸುನಕ್ ಅವರ ಅತ್ತೆಮ್ಮ ಮತ್ತು ಭಾರತದ ಅತ್ಯಂತ ಪ್ರಸಿದ್ಧ ಲೇಖಕಿ, ಚಿಂತಕಿ, ಶಿಕ್ಷಣ ತಜ್ಞೆ, ಉಪನ್ಯಾಸಕಿ, ಕೊಡುಗೈ ದಾನಿ, ಸಮಾಜ ಸೇವಕಿ ಇತ್ಯಾದಿ ಇತ್ಯಾದಿ ಆಗಿರುವ ಶ್ರೀಮತಿ ಸುಧಾಮೂರ್ತಿ ಎಂಬ ಸರಳ ರಾಜ್ಯಸಭಾ ಸದಸ್ಯರ ಬಗ್ಗೆ.

ಈ ವರ್ಷದ ಆದಿಯಲ್ಲಿ ಮಹಿಳಾ ದಿನಾಚರಣೆಯಂದು (ಮಾರ್ಚ್ 08) ಭಾರತದ ರಾಷ್ಟ್ರಪತಿಗಳು ಶ್ರೀಮತಿ ಸುಧಾ ಮೂರ್ತಿ (73) ಅವರನ್ನು ರಾಜ್ಯಸಭೆಯ ಸದಸ್ಯರಾಗಿ ನಾಮನಿರ್ದೇಶನ ಮಾಡಿದ್ದರು. ಸಂಸತ್ತಿನ ಸದಸ್ಯರಾದ ಬಳಿಕ ಅವರು, ಮೊನ್ನೆ ಬುಧವಾರ, ರಾಜ್ಯಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣಕ್ಕೆ ವಂದನಾ ನಿರ್ಣಯದ ಕುರಿತ ಚರ್ಚೆಯಲ್ಲಿ ಪಾಲ್ಗೊಂಡು ತಮ್ಮ ಚೊಚ್ಚಲ ಭಾಷಣ ಮಾಡಿದರು. ಅವರು ತಮ್ಮ ಭಾಷಣದಲ್ಲಿ ಭಾರತದ ‘ಅತ್ಯಂತ ಗಂಭೀರ’ ಸಮಸ್ಯೆಯಾಗಿರುವ ಗರ್ಭಕೋಶದ ಕತ್ತಿನ (ಸೆರ್ವಿಕ್ಸ್) ಕ್ಯಾನ್ಸರ್‌ಗೆ ಲಸಿಕೆಗಳನ್ನು ಒದಗಿಸಬೇಕೆಂದು ಸರಕಾರವನ್ನು ಕೋರಿಕೊಂಡರು. ದೇಶದಲ್ಲಿ ಅಂದಾಜು 35 ಕೋಟಿ ಮಹಿಳೆಯರು ಈ ಅಪಾಯಕ್ಕೆ ಒಳಗಾಗುವ ಸಾಧ್ಯತೆಗಳಿದ್ದು, ಪ್ರತೀ ವರ್ಷ 1.32 ಲಕ್ಷ ಗರ್ಭಕೋಶ ಕ್ಯಾನ್ಸರಿನ ಹೊಸ ಪ್ರಕರಣಗಳು ವರದಿ ಆಗುತ್ತಿವೆ ಹಾಗೂ ಪ್ರತೀ ವರ್ಷ 75,000ದಷ್ಟು ಮಂದಿ ಈ ರೋಗಕ್ಕೆ ಜೀವ ಕಳೆದುಕೊಳ್ಳುತ್ತಿದ್ದಾರೆ.

ದೇಶದಲ್ಲಿ ಶೇ. 6ಕ್ಕಿಂತಲೂ ಹೆಚ್ಚಿನ ಮಹಿಳೆಯರಿಗೆ ಮತ್ತು ಶೇ. 26 ಪುರುಷರಿಗೆ, ಮಹಿಳೆಯರಲ್ಲಿ ಈ ಸರ್ವೈಕಲ್ ಕ್ಯಾನ್ಸರ್ ತರಬಲ್ಲ ಮಾನವ ಪ್ಯಾಪಿಲ್ಲೋಮಾ ವೈರಸ್ (ಊPಗಿ) ಸೋಂಕು ಈಗಾಗಲೇ ಇದೆ ಎನ್ನಲಾಗುತ್ತಿದ್ದು, ಕ್ಯಾನ್ಸರ್‌ಗಳನ್ನು ಆರಂಭದ ಹಂತದಲ್ಲೇ ಗುರುತಿಸುವ ಸ್ಕ್ರೀನಿಂಗ್ ಪ್ರಕ್ರಿಯೆ ಭಾರತದಲ್ಲಿ ಪರಿಣಾಮಕಾರಿಯಾಗಿಲ್ಲ. ಜಾಗತಿಕ ಆರೋಗ್ಯ ವ್ಯವಸ್ಥೆ ಈ ರೋಗಕ್ಕೆ ಲಸಿಕೆಯನ್ನು ಶಿಫಾರಸು ಮಾಡುತ್ತಿದೆ. ಈಗಾಗಲೇ ಸೋಂಕು ಇರುವವರ ಪ್ರಮಾಣ ಗಮನಾರ್ಹವಾಗಿದೆ ಎಂದಾದರೆ, ಅವರಿಗೆ ಪುನಃ ಈ ಲಸಿಕೆ ನೀಡಿಕೆ ಎಷ್ಟು ಪರಿಣಾಮಕಾರಿ, ಭಾರತದಲ್ಲಿ ಊPಗಿ ಲಸಿಕೆ ನೀಡಿಕೆ ಕಾರ್ಯಕ್ರಮ ಸರಕಾರದ ಕಡೆಯಿಂದ ನಡೆಯಬೇಕೇ ಎಂಬುದೆಲ್ಲ ವೈದ್ಯಕೀಯ ಚರ್ಚೆ.

ಆದರೆ, ಏಕಾಏಕಿ ‘ದೊಡ್ಡವರು’ ಈ ಬಗ್ಗೆ ಮಾತು ಎತ್ತಿದಾಗ, ಅದು ಎಲ್ಲರ ಗಮನ ಸೆಳೆಯುವುದು ಸಹಜ. ಇಂತಹ ದೊಡ್ಡವರು ವ್ಯವಹಾರಸ್ಥರಾಗಿರುವಾಗ, ದೊಡ್ಡ ದೊಡ್ಡ ಹೂಡಿಕೆ ಕಂಪೆನಿಗಳಲ್ಲಿ ಹಿತಾಸಕ್ತಿಗಳನ್ನು ಹೊಂದಿರುವಾಗ ಅವರು ಇಂತಹ ಸಂಗತಿಗಳ ಬಗ್ಗೆ ಏಕಾಏಕಿ ಮಾತನಾಡಿದರೆ, ಹುಬ್ಬುಗಳು ಸಹಜವಾಗಿಯೇ ಏರಬೇಕು. ಏಕೆಂದರೆ, ಸದ್ರಿಯವರ ಮಗಳು, ಇಂಗ್ಲಂಡ್ ಪ್ರಧಾನಿ ರಿಷಿ ಸುನಕ್ ಅವರ ಪತ್ನಿ ಅಕ್ಷತಾ ಮೂರ್ತಿ ಅವರು ಕೂಡ ಒಂದು ಹೂಡಿಕೆ ಸಂಸ್ಥೆಯನ್ನು ಹೊಂದಿದ್ದು, ಈ ಕಾರಣದಿಂದಾಗಿ ಬ್ರಿಟಿಷ್ ಸರಕಾರದ ನಿರ್ಧಾರಗಳಲ್ಲಿ ಹಿತಾಸಕ್ತಿ ಸಂಘರ್ಷ ಏರ್ಪಟ್ಟ ಬಗ್ಗೆ ಇಂಗ್ಲೆಂಡಿನಲ್ಲಿ ಕೆಲ ಸಮಯಗಳ ಹಿಂದೆ ಗದ್ದಲವಾಗಿತ್ತು.

ಭಾರತದ ಸಂದರ್ಭದಲ್ಲಿ, ಮಹಿಳೆಯರ ಆದ್ಯತೆಗಳು ಯಾವುದಿರಬೇಕು? ಲಿಂಗ ಅನುಪಾತಕ್ಕೇ ಧಕ್ಕೆ ತರುವಷ್ಟು ಭ್ರೂಣಹತ್ಯೆಗಳು, ಶಿಕ್ಷಣ, ಪೌಷ್ಟಿಕ ಆಹಾರ, ಆತಂಕ ಮುಕ್ತ ಬದುಕು, ಸಮಾನ ಅವಕಾಶಗಳು - ಇಂತಹ ಹಲವು ಮೂಲಭೂತ ಸಂಗತಿಗಳೇ ಅಪಾಯದಲ್ಲಿರುವಾಗ, ಏಕಾಏಕಿ HPV ಲಸಿಕೆ ಆದ್ಯತೆ ಪಡೆದರೆ, ಅಚ್ಚರಿ ಅನ್ನಿಸದಿರುವುದು ಹೇಗೆ?

ಸುಧಾಮೂರ್ತಿಯವರು ಭಾಷಣ ಮಾಡುತ್ತಿದ್ದಾಗ ಸಭಾಧ್ಯಕ್ಷ ಪೀಠದಲ್ಲಿದ್ದ ರಾಜೀವ್ ಶುಕ್ಲಾ ಅವರು, ಸದನದಲ್ಲಿದ್ದ ಸಚಿವರೊಬ್ಬರಿಗೆ, ಸದನ ನಾಯಕರೂ, ಆರೋಗ್ಯ ಸಚಿವರೂ ಆದ ಶ್ರೀ ನಡ್ಡಾ ಅವರ ಗಮನಕ್ಕೆ ಈ ವಿಚಾರವನ್ನು ತರಲು ಸೂಚಿಸಿದರು. ದೊಡ್ಡವರು ಹೇಳಿದ್ದರಿಂದ ಮತ್ತು ಸ್ವತಃ ಪ್ರಧಾನಮಂತ್ರಿಗಳೇ ಈ ಭಾಷಣದ ಕಾಳಜಿಯ ಕುರಿತು ಪ್ರಶಂಸೆ ವ್ಯಕ್ತಪಡಿಸಿರುವುದರಿಂದ, ಸುಧಾಮೂರ್ತಿಯವರ ಈ ಕೋರಿಕೆ ತಕ್ಷಣ ಈಡೇರಿದರೂ ಅಚ್ಚರಿ ಇಲ್ಲ.

ಇದರ ಜೊತೆ ಸುಧಾಮೂರ್ತಿ ಅವರು ಎತ್ತಿದ ಇನ್ನೊಂದು ಸಂಗತಿ, ಪ್ರವಾಸೋದ್ಯಮಕ್ಕೆ ಸಂಬಂಧಿಸಿದ್ದು. ಇನ್ನೂ 57 ಸ್ಥಳಗಳನ್ನು ಹೆರಿಟೇಜ್ ಸೈಟ್‌ಗಳಾಗಿ ಗುರುತಿಸಿ, ಪ್ರವಾಸೋದ್ಯಮಕ್ಕೆ ಅನುವುಗೊಳಿಸಬೇಕೆಂಬ ಬೇಡಿಕೆ ಅದು. ಬೇರೆ ಸದಸ್ಯರೆಲ್ಲರಿಗೆ 3-5 ನಿಮಿಷಗಳ ಅವಕಾಶ ನೀಡಿದ ಅಧ್ಯಕ್ಷಪೀಠ, ಚೊಚ್ಚಲ ಭಾಷಣ ಮಾಡುತ್ತಿರುವ ಸುಧಾಮೂರ್ತಿ ಅವರಿಗೆ ಈ ಅವಧಿಯನ್ನು 12+ನಿಮಿಷಗಳಿಗೆ ವಿಸ್ತರಿಸಲು ಅವಕಾಶ ನೀಡಿತು.

ದಿನ ಕಳೆದಂತೆ ಸಂಸತ್ತಿನ ಉಭಯ ಸದನಗಳೂ ಹಣವಂತರ, ಪ್ರಭಾವಿಗಳ ಅರ್ಥಾತ್ ದೇಶದ ಶೇ. 10 ಜನರ ಆಡೊಂಬಲ ಆಗುತ್ತಿದೆ. ಅಲ್ಲಿ ಚರ್ಚೆಯಾಗುವ ಸಂಗತಿಗಳೂ ಆ ಶೇ. 10 ಜನರ ಹಿತಾಸಕ್ತಿಗಳನ್ನು ಕಾಪಾಡುವಂತಹವೇ ಆಗಿರುತ್ತವೆ. ಅವರು ಹೇಳುತ್ತಿರುವುದು ಮಹತ್ವದ ಸಂಗತಿ ಎಂದು ಬಿಂಬಿಸಿ, ಅದನ್ನೆಲ್ಲ ಸಮರ್ಥಿಸುವ ಮಾಧ್ಯಮಗಳೂ ಅವರವೇ ಆಗಿರುತ್ತವೆ. ದೇಶದ ಉಳಿದ ಶೇ. 90 ಜನರ ಹಿತಾಸಕ್ತಿಗಳನ್ನು ಸಂಸತ್ತಿನಲ್ಲಿ ಪ್ರತಿನಿಧಿಸುತ್ತಿರುವವರು ಕಾಣಿಸುತ್ತಿಲ್ಲ; ಅಕಸ್ಮಾತ್ ಇದ್ದರೂ ಅವರಿಗೆ ಧ್ವನಿ ಇಲ್ಲ. ಸುಧಾ ಮೂರ್ತಿ ಅವರ ‘ಫ್ಯಾನ್ಸಿ’ ಭಾಷಣಕ್ಕಿಂತ ಕರಾವಳಿಯ ಅನುಭವಿ ಕೋಟದ ‘ಸಿಂಪಲ್’ ಶ್ರೀನಿವಾಸ ಪೂಜಾರಿಯವರಿಗೆ, (ಚುನಾವಣೆಗಿಂತ ಮೊದಲು ಅವರೇ ಸ್ವತಃ ಹೇಳಿಕೊಂಡಂತೆ, ಹಿಂದಿ-ಇಂಗ್ಲಿಷ್ ಕಲಿಯುವ ಮೊದಲೇ, ಕನ್ನಡದಲ್ಲಿಯೇ) ಚೊಚ್ಚಲ ಭಾಷಣಕ್ಕೆ ಅವಕಾಶ ನೀಡಿದ್ದರೆ, ಅದಕ್ಕೆ ನೆಲದ ಪರಿಮಳ ಹೆಚ್ಚಿರುತ್ತಿತ್ತು.

share
ರಾಜಾರಾಂ ತಲ್ಲೂರು
ರಾಜಾರಾಂ ತಲ್ಲೂರು
Next Story
X