Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಪಿಟ್ಕಾಯಣ
  5. ಎಥೆನಾಲ್ ಅತ್ಯುತ್ಸಾಹ ತಂದಿರುವ ಪ್ರಾಣ...

ಎಥೆನಾಲ್ ಅತ್ಯುತ್ಸಾಹ ತಂದಿರುವ ಪ್ರಾಣ ಸಂಕಟಗಳು

ರಾಜಾರಾಂ ತಲ್ಲೂರುರಾಜಾರಾಂ ತಲ್ಲೂರು4 July 2026 10:31 AM IST
share
ಎಥೆನಾಲ್ ಅತ್ಯುತ್ಸಾಹ ತಂದಿರುವ ಪ್ರಾಣ ಸಂಕಟಗಳು

ದೇಶದ ಭವಿಷ್ಯಕ್ಕೆ ಎಥೆನಾಲ್ ಬ್ಲೆಂಡ್ ಮಾಡಿದ ಇಂಧನ ಬಳಸುವ ವಾಹನವೇ? ವಿದ್ಯುತ್ ಚಾಲಿತ ವಾಹನವೇ? ಅಥವಾ ಗ್ರೀನ್ ಹೈಡ್ರೋಜನ್ ಚಾಲಿತ ವಾಹನವೇ? ಎಂಬುದೇ ಇನ್ನೂ ಖಚಿತ ಇಲ್ಲದಿರುವಾಗ, ಒಂದು ನೀತ್ಯಾತ್ಮಕ ಲೋಪವು ಹತ್ತಾರು ನೀತ್ಯಾತ್ಮಕ ಲೋಪಗಳಿಗೆ, ಕೈಗಾರಿಕಾ ಸಂಕಷ್ಟಗಳಿಗೆ, ಸಾಲುಸಾಲು ಲಿಟಿಗೇಷನ್‌ಗಳಿಗೆ ಕಾರಣ ಆಗುತ್ತಿರುವುದು ಮತ್ತು ಏನು ಚರ್ಚೆ ಆಗಬೇಕಿತ್ತೋ ಅದು ಚರ್ಚೆ ಆಗದಂತೆ ಸ್ಟೇಜ್ ಮ್ಯಾನೇಜ್ ಮಾಡುವ ವಿಫಲ ಪ್ರಯತ್ನದಲ್ಲಿ ಸರಕಾರ ತೊಡಗಿರುವುದು, ಪ್ರಾಣಸಂಕಟದ ಪರದಾಟದಂತೆಯೇ ಕಾಣಿಸತೊಡಗಿದೆ.

ಸುಪ್ರೀಂ ಕೋರ್ಟ್ ಕಳೆದವಾರ, ತೈಲ ಮಾರ್ಕೆಟಿಂಗ್ ಕಂಪೆನಿಗಳಿಗೆ (ಒಎಂಸಿ) 2025-26ನೇ ಸಾಲಿನ ಎಥೆನಾಲ್ ಸರಬರಾಜು ಪ್ರಕ್ರಿಯೆಯಲ್ಲಿ ಯಥಾಸ್ಥಿತಿ ಕಾಪಾಡಿಕೊಳ್ಳುವಂತೆ ನೀಡಿರುವ ನಿರ್ದೇಶನ ಮತ್ತು ಆ ಕುರಿತ ಅರ್ಜಿಯ ವಿಚಾರಣೆ ವೇಳೆ, ಬಾರತ ಸರಕಾರದ ಅಟಾರ್ನಿ ಜನರಲ್ ಅವರು ‘ಇ20 (ಅರ್ಥಾತ್ ಶೇ. 20 ಎಥೆನಾಲ್ ಮಿಶ್ರಿತ ಪೆಟ್ರೋಲ್)’ ಇನ್ನೂ ಪ್ರಾಯೋಗಿಕ ಹಂತದಲ್ಲಿದೆ ಎಂದು ಹೇಳಿರುವುದಾಗಿ ಪ್ರಕಟಗೊಂಡ ಪತ್ರಿಕಾವರದಿಗಳು (ಜೂನ್ 30); ಜೊತೆಗೆ, ಮರುದಿನವೇ ಅಟಾರ್ನಿ ಜನರಲ್ ಅವರ ಕಚೇರಿಯು ಕಾನೂನು ಮತ್ತು ನ್ಯಾಯಾಂಗ ಇಲಾಖೆಯ ಮೂಲಕ ಒಂದು ಸ್ಪಷ್ಟೀಕರಣ (PIB Release ID: 2279625) ಹೊರಡಿಸಿ, ಅಟಾರ್ನಿ ಜನರಲ್ ಅವರು ಹಾಗೆ (ಅದು ಇನ್ನೂ ಪ್ರಾಯೋಗಿಕ ಬಳಕೆಯ ಸ್ಥಿತಿಯಲ್ಲಿದೆ ಎಂದು) ಹೇಳಿಲ್ಲ ಎಂದದ್ದು ದೊಡ್ಡ ಸುದ್ದಿಯಾಯಿತು. ಈ ಸುದ್ದಿಗದ್ದಲದಲ್ಲಿ ಏನು ಮರೆಯಾಗಿ ಹೋಯಿತು ಎಂಬುದನ್ನು ಅರ್ಥ ಮಾಡಿಕೊಳ್ಳುವ ಪ್ರಯತ್ನ ಇದು.

ಕೋವಿಡ್ ಕಾಲದಲ್ಲಿ ‘ಸ್ಯಾನಿಟೈಸರ್’ ಆಗಿ ವ್ಯಾಪಕ ಪ್ರಮಾಣದಲ್ಲಿ ಉತ್ಪಾದನೆಗೊಳ್ಳತೊಡಗಿದ ಎಥೆನಾಲ್ ಕಥೆ ಬಹಳ ಕೌತುಕದ್ದು. ಹಾಲಿ ಸರಕಾರ ಹೇಗೆ ನೀರಿಗೆ ಬಿದ್ದ ಬಳಿಕ ಈಜು ಕಲಿಸುವ ಪುಸ್ತಕ ಎಲ್ಲಿ ಸಿಗುತ್ತದೆಂದು ಹುಡುಕುವ ಕೆಲಸವನ್ನು ರೂಢಿ ಮಾಡಿಕೊಂಡಿದೆ ಎಂಬುದನ್ನು ಈ ಪ್ರಕರಣ ಬಹಳ ಚೆನ್ನಾಗಿ ವಿವರಿಸಬಲ್ಲುದು. (ಇದೇ ಅಂಕಣದಲ್ಲಿ ಈ ಹಿಂದೆ ಕೂಡ ಎಥೆನಾಲ್ ಬಗ್ಗೆ ವಿವರಿಸಿದ್ದಿದೆ. ಈ ಬರೆಹ ಅದರ ವಿಸ್ತರಣೆ.)

2019ಕ್ಕೆ ಮುನ್ನ ಭಾರತದಲ್ಲಿ ಕೇವಲ ವೈದ್ಯಕೀಯ ಸನ್ನಿವೇಶದಲ್ಲಿ ಬಳಕೆಗೆ ಸೀಮಿತ ಆಗಿದ್ದ ಎಥೆನಾಲ್ ಉತ್ಪಾದನೆ ಆಗುತ್ತಿದ್ದುದು ವರ್ಷಕ್ಕೆ 10 ಲಕ್ಷ ಲೀಟರ್. ಇಡೀ ದೇಶದಲ್ಲಿದ್ದ ಎಥೆನಾಲ್ ಉತ್ಪಾದನಾ ಘಟಕಗಳು ಕೇವಲ 59. ಕೋವಿಡ್ ಬಳಿಕ, ಈ ಪ್ರಮಾಣದಲ್ಲಿ 1,000 ಪಟ್ಟಿಗಿಂತಲೂ ಹೆಚ್ಚು ಏರಿಕೆ ಆಗಿದೆ. ಈಗ ಎಥೆನಾಲ್ ಉತ್ಪಾದನಾ ಸಾಮರ್ಥ್ಯ ದಿನಕ್ಕೆ 30 ಲಕ್ಷ ಲೀಟರುಗಳು. ದೇಶದಲ್ಲಿ 1,580 ಕಾರ್ಖಾನೆಗಳು, 149 ಸಕ್ಕರೆ ಕಾರ್ಖಾನೆಗಳು, ಡಿಸ್ಟಿಲರಿಗಳು... ಎಲ್ಲವೂ ಎಥೆನಾಲ್ ಉತ್ಪಾದಿಸುತ್ತಿವೆ. ಸರಕಾರವಂತೂ ಕೋವಿಡ್ ಕಾಲದಲ್ಲಿ ಸ್ಯಾನಿಟೈಸರ್ ಬಳಕೆ ‘ಶಾಶ್ವತ’ ಎಂಬಂತೆ, ಈ ಉತ್ಪಾದಕರಿಗೆ ಪ್ರೋತ್ಸಾಹ ನೀಡಿದ್ದೇ ನೀಡಿದ್ದು. ಮೇ 2021ರ ಹೊತ್ತಿಗೆ ದೇಶದಲ್ಲಿ ಎಥೆನಾಲ್ ಬಳಕೆ ಆಗದೇ ದಾಸ್ತಾನು ಉಳಿಯತೊಡಗಿದಾಗ ಸರಕಾರಕ್ಕೆ ಮೊದಲ ಬಾರಿಗೆ ತಾವು ತಪ್ಪಿದ್ದೆಲ್ಲಿ ಎಂದು ಅರ್ಥ ಆಗತೊಡಗಿತ್ತು.

ಈ ದಾಸ್ತಾನು ಎಥೆನಾಲ್ ಖರ್ಚು ಮಾಡುವುದಕ್ಕೆ, 2021ರ ಜೂನ್ ಹೊತ್ತಿಗೆ, ಸರಕಾರವು ನನೆಗುದಿಗೆ ಬಿದ್ದಿದ್ದ ಎಥೆನಾಲ್ ಬ್ಲೆಂಡಿಂಗ್ ಯೋಜನೆಗೆ ಮರುವೇಗ ನೀಡಿ, 2025ಕ್ಕೆ ಮುನ್ನ ಪೆಟ್ರೋಲಿನಲ್ಲಿ ಶೇ. 20 ಎಥೆನಾಲ್ ಬ್ಲೆಂಡ್ ಮಾಡುವ ಯೋಜನೆ ಸಿದ್ಧಪಡಿಸಿತು. ಸ್ವತಃ ಪ್ರಧಾನಮಂತ್ರಿಯವರು ಈ ರೋಡ್‌ಮ್ಯಾಪನ್ನು ಅಬ್ಬರದ ಪ್ರಚಾರದೊಂದಿಗೆ ಬಿಡುಗಡೆ ಮಾಡಿದ್ದರು. 2001ರಲ್ಲೇ ಆರಂಭಗೊಂಡಿದ್ದ ಈ ಎಥೆನಾಲ್ ಬ್ಲೆಂಡಿಂಗ್ ಯೋಜನೆ (ಇಬಿಪಿ) 2003ರ ಹೊತ್ತಿಗೆ ಶೇ. 5 ಬ್ಲೆಂಡ್ ಎಂದು ಅಧಿಕೃತವಾಗಿ ಆರಂಭಗೊಂಡಿತ್ತು. ಆದರೆ ವೇಗ ಪಡೆದುಕೊಂಡಿರಲಿಲ್ಲ. ಅದಕ್ಕೆ ಅನಿವಾರ್ಯವಾಗಿ ವೇಗ ಸಿಕ್ಕಿದ್ದು, 2021ರ ಬಳಿಕವೇ. ಕೋವಿಡ್ ಕಾಲದಲ್ಲಿ ಪ್ರಧಾನಮಂತ್ರಿಯವರ ಉದ್ಯಮಸ್ನೇಹಿ ನಿಲುವನ್ನು ಲೋಕಮುಖಕ್ಕೆ ಬಿಂಬಿಸುವ ಭರದಲ್ಲಿ, ಅತ್ಯುತ್ಸಾಹದಿಂದ ಆರಂಭಗೊಂಡಿದ್ದ ಈ ಎಥೆನಾಲ್ ಘಟಕಗಳನ್ನು ಸಾಕುವುದು, ಬರಬರುತ್ತಾ ಸರಕಾರಗಳಿಗೆ ದೊಡ್ಡ ಹೊರೆಯಾಗತೊಡಗಿದೆ. ಇಂದು ನ್ಯಾಯಾಲಯಗಳಲ್ಲಿ ಈ ಕುರಿತು ಸಾಲುಸಾಲು ಮೊಕದ್ದಮೆಗಳ ಮೂಲದಲ್ಲಿರುವುದು ಈ ‘ಅತ್ಯುತ್ಸಾಹದ’ ನೀತಿಲೋಪಗಳ ಫಲಶ್ರುತಿ.

ಮೊನ್ನೆ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆಯಾದುದು, ಕರ್ನಾಟಕದ್ದೇ ಒಂದು ಪ್ರಕರಣದಲ್ಲಿ ಹೈಕೋರ್ಟ್ ನೀಡಿದ ಮಧ್ಯಂತರ ತೀರ್ಪಿನ ವಿರುದ್ಧ ಸಲ್ಲಿಸಲಾದ ಮೇಲ್ಮನವಿ. ಆ ಮೂಲ ಪ್ರಕರಣ ಏನೆಂದು ವಿವರಿಸಿದರೆ, ಒಟ್ಟು ಸನ್ನಿವೇಶ ಹೆಚ್ಚು ಸ್ಪಷ್ಟ ಆಗಬಲ್ಲುದು. ಹಾವೇರಿ ಮೂಲದ ಸಕ್ಕರೆ ಕಾರ್ಖಾನೆಯ ಡಿಸ್ಟಿಲರಿ ಘಟಕವೊಂದು ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಿ (Writ Petition No.109133/2025), ತಾವು ಸರಕಾರದ ನೀತಿಗೆ ಅನುಗುಣವಾಗಿ ಎಥೆನಾಲ್ ಉತ್ಪಾದನೆ ಮಾಡುತ್ತಿದ್ದು, ತೈಲ ಮಾರ್ಕೆಟಿಂಗ್ ಕಂಪೆನಿಗಳಿಗೆ ಅದನ್ನು ಸಂಪೂರ್ಣವಾಗಿ ಒದಗಿಸುತ್ತಿದ್ದೇವೆ. ಅವರು ತಮ್ಮಿಂದ ವಾರ್ಷಿಕ 1.44 ಕೋಟಿ ಲೀಟರ್ ಎಥೆನಾಲ್ ಖರೀದಿಸುವ ಒಪ್ಪಂದ ಮಾಡಿಕೊಂಡಿದ್ದಾರೆ. ಈಗ ತಮ್ಮ ಕಾರ್ಖಾನೆಯು ಸರಕಾರದ ನೀತಿಗೆ ಅನುಗುಣವಾಗಿ ಉತ್ಪಾದನೆ ಹಿಗ್ಗಿಸಿಕೊಂಡಿದ್ದು, ವಾರ್ಷಿಕ 9.9 ಕೋಟಿ ಲೀಟರ್ ಎಥೆನಾಲ್ ಉತ್ಪಾದಿಸುತ್ತಿದೆ. ಸರಕಾರದ ಅನುಮತಿ ಇಲ್ಲದೆ ಅದನ್ನು ಬೇರೆ ಖಾಸಗಿಯವರಿಗೆ ಮಾರುವಂತಿಲ್ಲ. ವಾಸ್ತವ ಹೀಗಿರುವಾಗ, 2025-26ನೇ ಸಾಲಿಗೆ ಎಥೆನಾಲ್ ಖರೀದಿಗೆ ತೈಲ ಮಾರ್ಕೆಟಿಂಗ್ ಕಂಪೆನಿಗಳು ಟೆಂಡರ್ ಕರೆದಿದ್ದು, ಅವರ ಬೇಡಿಕೆ ಕೇವಲ 1,050 ಕೋಟಿ ಲೀಟರ್. ಹಾಗಾಗಿ, ಈ ಟೆಂಡರ್ ರದ್ದುಪಡಿಸಿ, ಖರೀದಿಯ ಪ್ರಮಾಣವನ್ನು ಹೆಚ್ಚಿಸಿ ಖರೀದಿ ಮಾಡಲು ತೈಲ ಮಾರ್ಕೆಟಿಂಗ್ ಕಂಪೆನಿಗಳಿಗೆ ನಿರ್ದೇಶಿಸಬೇಕು ಎಂದು ಹೈಕೋರ್ಟ್‌ಗೆ ಮನವಿ ಮಾಡಿಕೊಂಡಿತ್ತು. ಇದಕ್ಕೆ 15-12-2025ರಂದು ಮಧ್ಯಂತರ ತೀರ್ಪು ನೀಡಿದ ರಾಜ್ಯ ಹೈಕೋರ್ಟ್, ಆ ವಾದವನ್ನು ಪುರಸ್ಕರಿಸಿತ್ತು ಮತ್ತು ಅದರ ವಿರುದ್ಧ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ ಹೈಕೋರ್ಟಿನಲ್ಲೇ ಅಪೀಲು ಮಾಡಿತ್ತು. ಆ ಅಪೀಲನ್ನು ಹೈಕೋರ್ಟ್ 29-01-2026ರಂದು ತಿರಸ್ಕರಿಸಿತ್ತು.

ಕರ್ನಾಟಕ ಹೈಕೋರ್ಟ್‌ನ ಈ ಮಧ್ಯಂತರ ತೀರ್ಪಿನ ವಿರುದ್ಧ ಭಾರತ್ ಪೆಟ್ರೋಲಿಯಂ ಕಾರ್ಪೋರೇಷನ್ ಲಿಮಿಟೆಡ್ ಸಂಸ್ಥೆಯು ಸುಪ್ರೀಂ ಕೋರ್ಟ್‌ನಲ್ಲಿ ಸ್ಪೆಷಲ್ ಲೀವ್ ಪಿಟಿಷನ್ (SLP(C) ಓo. 22411/2026) ಸಲ್ಲಿಸಿತು. ಆ ಅರ್ಜಿಯನ್ನು ವಿಚಾರಣೆಗೆ ಸ್ವೀಕರಿಸಿದ ಸುಪ್ರೀಂ ಕೋರ್ಟ್ 2025-26ನೇ ಸಾಲಿನ ಎಥೆನಾಲ್ ಖರೀದಿ ಟೆಂಡರಿನ ವಿಚಾರದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಕಳೆದ ವಾರ ಮಧ್ಯಂತರ ಆದೇಶ ನೀಡಿದೆ. ನ್ಯಾ. ಎಂ.ಎಂ. ಸುಂದರೇಶ್, ನ್ಯಾ. ಶೀಲ್ ನಾಗು ಅವರ ಪೀಠವು ಈ ಆದೇಶ ನೀಡಿದ್ದು, ಪೀಠದ ಎದುರು ಭಾರತ ಸರಕಾರದ ಪರವಾಗಿ ವಾದ ಮಂಡಿಸಿದ ಅಟಾರ್ನಿ ಜನರಲ್ ಆರ್. ವೆಂಕಟರಮಣಿ ಅವರು, ದೇಶದಾದ್ಯಂತ ಬೇರೆ ಬೇರೆ ಹೈಕೋರ್ಟ್‌ಗಳಲ್ಲಿ ಇಂತಹದೇ ಸುಮಾರು 75 ಅರ್ಜಿಗಳು ವಿಚಾರಣೆಯ ವಿವಿಧ ಹಂತಗಳಲ್ಲಿವೆ, ಅವುಗಳನ್ನೆಲ್ಲ ಸುಪ್ರೀಂ ಕೋರ್ಟ್ ಒಟ್ಟಾಗಿ ಪರಿಗಣಿಸಿ ತೀರ್ಮಾನ ತೆಗೆದುಕೊಳ್ಳಬೇಕು ಎಂದು ನ್ಯಾಯಪೀಠಕ್ಕೆ ಅಲವತ್ತುಕೊಂಡಿದ್ದರು. ಅವರ ಈ ಹೇಳಿಕೆಯಲ್ಲೇ, ಎಥೆನಾಲ್ ಅತ್ಯುತ್ಸಾಹ ಈಗ ಸರಕಾರವನ್ನು ಹೇಗೆ ಅಡಕತ್ತರಿಯಲ್ಲಿ ಸಿಲುಕಿಸಿದೆ ಎಂಬುದು ಸ್ಪಷ್ಟವಾಗುತ್ತದೆ.

ಅಟಾರ್ನಿ ಜನರಲ್ ಅವರು ತಮ್ಮ ವಾದದ ವೇಳೆ, ತಾವು ಯಾವುದೇ ಹಂತದಲ್ಲೂ ಇ20 ಬ್ಲೆಂಡಿಂಗ್ ಈಗ ಪ್ರಾಯೋಗಿಕವಾಗಿ ನಡೆಯುತ್ತಿದೆ ಎಂದು ಹೇಳಿಲ್ಲ ಎಂದು ಸ್ಪಷ್ಟೀಕರಿಸಿದ್ದಾರೆ. ಅವರು ನಿಜಕ್ಕೂ ನ್ಯಾಯಪೀಠದ ಎದುರು ಏನು ಹೇಳಿದ್ದಾರೆ ಅಥವಾ ಲಿಖಿತವಾಗಿ ಸಲ್ಲಿಸಿದ್ದಾರೆ ಎಂಬುದು ಇನ್ನೂ ಸಾರ್ವಜನಿಕವಾಗಿ ಗೊತ್ತಾಗಿಲ್ಲ. ಆದರೆ, ಪತ್ರಿಕೆಗಳಲ್ಲಿ ಪ್ರಕಟಗೊಂಡ ಸುದ್ದಿಗಳು ಒಂದೇ ಮೂಲದಿಂದ ಹೊರಟವಲ್ಲ. ಹಲವು ಸುದ್ದಿಮೂಲಗಳಿಗೆ ಒಂದೇ ರೀತಿ ಕೇಳಿಸಿರುವ ಸಂಗತಿಯೊಂದು ಒಂದು ಧ್ವನಿಯಲ್ಲಿ ದೇಶದಾದ್ಯಂತ ಪ್ರಕಟಗೊಂಡಾಗ ಅವುಗಳನ್ನು ನಂಬದಿರುವುದು ಸಾಧ್ಯ ಇಲ್ಲ. ಹಾಗಾಗಿ, ಸರಕಾರದ ಕಡೆಯಿಂದ ಬಂದಿರುವ ಸ್ಪಷ್ಟನೆ ಈ ಹಂತದಲ್ಲಿ ಕುತೂಹಲಕರ.

ಈ ಪ್ರಕರಣಕ್ಕೆ ಮಾರುಕಟ್ಟೆಯ ಮಗ್ಗುಲೊಂದು ಕೂಡ ಇದೆ. ಅದೇನೆಂದರೆ, ಎಥೆನಾಲ್ ಮಿಶ್ರಿತ ಪೆಟ್ರೋಲ್ ಬಳಕೆಯಿಂದ ವಾಹನಗಳ ಮೈಲೇಜ್ ತಗ್ಗುತ್ತಿದೆ, ಅದು ಇಂಜಿನ್ ಮೇಲೆ ಪರಿಣಾಮ ಉಂಟುಮಾಡುತ್ತಿದೆ ಎಂಬೆಲ್ಲ ಚರ್ಚೆಗಳು ಸಾರ್ವಜನಿಕವಾಗಿ ಚಾಲ್ತಿಯಲ್ಲಿವೆ. ಅಟಾರ್ನಿ ಜನರಲ್ ಅವರ (ಈಗ ನಿರಾಕರಿಸಿರುವ) ಹೇಳಿಕೆಯಿಂದ ಈ ಚರ್ಚೆಯ ಬೆಂಕಿಗೆ ತುಪ್ಪ ಎರಚಿದಂತಾಗಿತ್ತು.

ಎಥೆನಾಲ್ ಬ್ಲೆಂಡಿಂಗ್ ಗದ್ದಲಕ್ಕೆ ಮತ್ತೂ ಒಂದು ಮುಖ ಇದೆ. ಭಾರತ ಸರಕಾರದ ಯೋಜನೆಯಂತೆ ಶೇ. 20 ಎಥೆನಾಲ್ ಬ್ಲೆಂಡ್ ಮಾಡಲು ದೇಶದಲ್ಲಿ ವಾರ್ಷಿಕ 1,700 ಕೋಟಿ ಲೀಟರ್ ಎಥೆನಾಲ್ ಉತ್ಪಾದನೆ ಆಗಬೇಕಿದೆ. ಈ ಬಾರಿ ಎಲ್ ನಿನೊ ಪರಿಣಾಮದ ಕಾರಣದಿಂದಾಗಿ, ಕಬ್ಬು ಮತ್ತು ಜೋಳ ಬೆಳೆಗಳು ನಿರೀಕ್ಷಿತ ಪ್ರಮಾಣದಲ್ಲಿ ಉತ್ಪಾದನೆಯಾಗುವ ನಿರೀಕ್ಷೆ ಇಲ್ಲದಿರುವುದರಿಂದ ಸಮಸ್ಯೆ ಎದುರಾಗಿದೆ. ದೇಶದಲ್ಲಿ ಉತ್ಪಾದನೆ ಆಗುವ ಎಥೆನಾಲ್‌ನಲ್ಲಿ ಅರ್ಧಕ್ಕರ್ಧ ಸಕ್ಕರೆ, ಕಬ್ಬು, ಮೊಲಾಸಿಸ್ ಬಳಸಿ ಸಿದ್ಧಗೊಳ್ಳುತ್ತದೆ. ಈ ಬಾರಿ ಕಬ್ಬು ಬೆಳೆ ಚೆನ್ನಾಗಿ ಬರದಿದ್ದರೆ, ಸಕ್ಕರೆ ಸರಬರಾಜು ಸಂತುಲಿತಗೊಳಿಸಿಕೊಳ್ಳಲು ಎಥೆನಾಲ್ ಕಡೆ ಗಮನ ತಗ್ಗಿಸಬೇಕಾಗುತ್ತದೆ ಎಂದು ಅಖಿಲ ಭಾರತ ಸಕ್ಕರೆ ವ್ಯಾಪಾರಿಗಳ ಸಂಘ (AISTA) ಅಭಿಪ್ರಾಯಪಟ್ಟಿರುವುದು ಪತ್ರಿಕೆಗಳಲ್ಲಿ ವರದಿಯಾಗಿದೆ. ಇಂತಹ ಸ್ಥಿತಿಯಲ್ಲಿ ಸರಕಾರ ಎಥೆನಾಲ್ ಉತ್ಪಾದನೆಗೆ ಅಕ್ಕಿಯ ಮೊರೆ ಹೋಗುವುದು ಅನಿವಾರ್ಯ ಆಗಲಿದೆ. ಅಕ್ಕಿಯು ಸಿಕ್ಕಾಪಟ್ಟೆ ನೀರು ಬೇಡುವ ಬೆಳೆ ಆಗಿರುವುದರಿಂದ ದೇಶದ ಒಟ್ಟು ಬದುಕಿನ ಮೇಲೆ (ಅನ್ನ, ನೀರು, ಸಾರಿಗೆ ವ್ಯವಸ್ಥೆ) ಇದು ಪರಿಣಾಮ ಬೀರುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ.

ದೇಶದ ಭವಿಷ್ಯಕ್ಕೆ ಎಥೆನಾಲ್ ಬ್ಲೆಂಡ್ ಮಾಡಿದ ಇಂಧನ ಬಳಸುವ ವಾಹನವೇ? ವಿದ್ಯುತ್ ಚಾಲಿತ ವಾಹನವೇ? ಅಥವಾ ಗ್ರೀನ್ ಹೈಡ್ರೋಜನ್ ಚಾಲಿತ ವಾಹನವೇ? ಎಂಬುದೇ ಇನ್ನೂ ಖಚಿತ ಇಲ್ಲದಿರುವಾಗ, ಒಂದು ನೀತ್ಯಾತ್ಮಕ ಲೋಪವು ಹತ್ತಾರು ನೀತ್ಯಾತ್ಮಕ ಲೋಪಗಳಿಗೆ, ಕೈಗಾರಿಕಾ ಸಂಕಷ್ಟಗಳಿಗೆ, ಸಾಲುಸಾಲು ಲಿಟಿಗೇಷನ್‌ಗಳಿಗೆ ಕಾರಣ ಆಗುತ್ತಿರುವುದು ಮತ್ತು ಏನು ಚರ್ಚೆ ಆಗಬೇಕಿತ್ತೋ ಅದು ಚರ್ಚೆ ಆಗದಂತೆ ಸ್ಟೇಜ್ ಮ್ಯಾನೇಜ್ ಮಾಡುವ ವಿಫಲ ಪ್ರಯತ್ನದಲ್ಲಿ ಸರಕಾರ ತೊಡಗಿರುವುದು, ಪ್ರಾಣಸಂಕಟದ ಪರದಾಟದಂತೆಯೇ ಕಾಣಿಸತೊಡಗಿದೆ.

Tags

ethanol
share
ರಾಜಾರಾಂ ತಲ್ಲೂರು
ರಾಜಾರಾಂ ತಲ್ಲೂರು
Next Story
X