Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಪಿಟ್ಕಾಯಣ
  5. ನಮ್ಮ ‘ಅಂತರಿಕ್ಷ’ ಈಗ ಯಾವ ಆನಿ ‘ದೇವಾಸ್’...

ನಮ್ಮ ‘ಅಂತರಿಕ್ಷ’ ಈಗ ಯಾವ ಆನಿ ‘ದೇವಾಸ್’ ಪಾಲಿಗೆ?

ರಾಜಾರಾಂ ತಲ್ಲೂರುರಾಜಾರಾಂ ತಲ್ಲೂರು25 July 2026 10:05 AM IST
share
ನಮ್ಮ ‘ಅಂತರಿಕ್ಷ’ ಈಗ ಯಾವ ಆನಿ ‘ದೇವಾಸ್’ ಪಾಲಿಗೆ?

BSNL, DISCOMs ಸಹಿತ ದೇಶದ ಎಲ್ಲ ಸರಕಾರಿ ಸ್ವತ್ತುಗಳನ್ನು ಆನಿಗಳ ಬಾಯಿಗೆ ಅರ್ಪಿಸುವ ಮುನ್ನ ಹೂಡಲಾದ ತಂತ್ರದ ಮಾದರಿಯನ್ನೇ ಇಸ್ರೋ ವಿಚಾರದಲ್ಲೂ ಹೂಡಲಾಗಿದೆ. ಚಂದ್ರಯಾನ್-4, ಶುಕ್ರಯಾನ್, ಗಗನಯಾನ್ ಮತ್ತಿತರ ಸರಕಾರಿ ಯೋಜನೆಗಳ ಮೇಲೆ ಇದರಿಂದ ನೇರ ಪರಿಣಾಮ ಉಂಟಾಗಲಿದೆ.

ಚುಕ್ಕಿ 1

ಪವನ್ ಕುಮಾರ್ ಚಂದಾನಾ ಅವರ, ಹೈದರಾಬಾದ್ ಮೂಲದ ಸ್ಕೈರೂಟ್ ಏರೊಸ್ಪೇಸ್ ಎಂಬ ಖಾಸಗಿ ಸಂಸ್ಥೆ ಸುದ್ದಿಯಲ್ಲಿದೆ. ಅದು ಕಳೆದ ಶನಿವಾರ (ಜುಲೈ 18), ತನ್ನ ವಿಕ್ರಮ್-1 ಆರ್ಬಿಟಲ್ ರಾಕೆಟ್ ಮೂಲಕ ಉಪಗ್ರಹಗಳ ಸಹಿತ ಕೆಲವು ಪೇಲೋಡ್‌ಗಳನ್ನು ಐಇಔ ಕಕ್ಷೆಯಲ್ಲಿ ಯಶಸ್ವಿಯಾಗಿ ಕೂರಿಸುವ ಸಾಧನೆ ಮಾಡಿದ ದೇಶದ ಮೊದಲ ಖಾಸಗಿ ಸ್ಟಾರ್ಟಪ್ ಅನ್ನಿಸಿಕೊಂಡಿದೆ. ಚೀನಾ, ಅಮೆರಿಕ ಬಳಿಕ ಖಾಸಗಿ ರಂಗದಲ್ಲಿ ಇಂತಹ ಸಾಧನೆ ಮಾಡಿರುವ ಮೂರನೇ ದೇಶ ಭಾರತ.

ಚುಕ್ಕಿ 2

ಈ ಬೆಳವಣಿಗೆ ನಡೆಯುವ ಒಂದು ವಾರದ ಮೊದಲು, ಭಾರತ ಸರಕಾರದ ಬಾಹ್ಯಾಕಾಶ ಇಲಾಖೆಯು ಒಂದು ಆಫೀಸ್ ಮೆಮೊ ಹೊರಡಿಸಿ, ಇಸ್ರೋದ ಗಗನ್‌ಯಾನ್ ಮತ್ತಿತರ ಪ್ರಮುಖ ಮಿಷನ್‌ಗಳಲ್ಲಿ ಆಯಕಟ್ಟಿನ ಜಾಗಗಳಲ್ಲಿ ಕೆಲಸ ಮಾಡುವ ವಿಜ್ಞಾನಿಗಳು ಮತ್ತು ತಂತ್ರಜ್ಞರು ಹಿಂಡುಹಿಂಡಾಗಿ ಸ್ವಯಂನಿವೃತ್ತಿಗೆ ಹೊರಡುವುದನ್ನು ‘‘May not be accepted as a matter of routine’’ ಎಂದು ಎಚ್ಚರಿಸಿದೆ (No.2/11(4)/83-1 dated 14-07-2026)

ಚುಕ್ಕಿ 3

ಇದೇ ಜುಲೈ ತಿಂಗಳಿನಲ್ಲೇ ಭಾರತ ಸರಕಾರದ ಬಾಹ್ಯಾಕಾಶ ನಿಯಂತ್ರಣ ಸಂಸ್ಥೆಯು (IN-SPACe) ಅಂಬಾನಿ ಬಳಗದ ರಿಲಯನ್ಸ್ ಜಿಯೊಗೆ, ಅವರ ಸ್ಯಾಟ್‌ಕಾಂ ಜಾಲಕ್ಕಾಗಿ 1,600 LEO ಉಪಗ್ರಹಗಳನ್ನು ಗಗನಕ್ಕೆ ಉಡಾಯಿಸುವ ಯೋಜನೆಗೆ ಪ್ರಾಥಮಿಕ ಹಂತದ ತಾಂತ್ರಿಕ ಒಪ್ಪಿಗೆ ಸೂಚಿಸಿದೆ.

ಈ ರಂಗೋಲಿ ಚುಕ್ಕಿಗಳನ್ನು ಒಟ್ಟು ಸೇರಿಸಿದಾಗ...

ಮೇಲೆ ವಿವರಿಸಿರುವ ಮೂರೂ ಚುಕ್ಕಿಗಳನ್ನು ಸೇರಿಸಿದಾಗ ಮೂಡುವ ರಂಗೋಲಿ ಚಿತ್ರ ಯಾವ ಸ್ವರೂಪದ್ದೆಂದು ಅರ್ಥ ಆಗಲು ಸ್ವಲ್ಪ ಹಿಂದಕ್ಕೆ ಸರಿದು ನೋಡಬೇಕು. ಹಿಂದಕ್ಕೆ ಎಂದರೆ, 1992ರಷ್ಟು ಹಿಂದಕ್ಕೆ.

ಬಾಹ್ಯಾಕಾಶ ಚಟುವಟಿಕೆಗಳನ್ನು ವಾಣಿಜ್ಯೀಕರಿಸುವ ನಿಟ್ಟಿನಲ್ಲಿ ಪ್ರಧಾನಿ ಪಿ.ವಿ. ನರಸಿಂಹ ರಾವ್ ಅವರು ಇಸ್ರೋ ಸಂಸ್ಥೆಯ ವಾಣಿಜ್ಯ-ಮಾರ್ಕೆಟಿಂಗ್ ಘಟಕವಾದ ಅಂತರಿಕ್ಷ ಕಾರ್ಪೊರೇಷನ್ ಲಿಮಿಟೆಡ್ ಅನ್ನು ಸ್ಥಾಪಿಸಲು ತೀರ್ಮಾನಿಸಿದ್ದರು. 2005ರಲ್ಲಿ ಅಂತರಿಕ್ಷ್ ಸಂಸ್ಥೆಯು ಬೆಂಗಳೂರಿನಲ್ಲಿ ದೇವಾಸ್ ಮಲ್ಟಿಮೀಡಿಯಾ ಜೊತೆ ಒಪ್ಪಂದ ಮಾಡಿಕೊಂಡು, ಎರಡು ಉಪಗ್ರಹಗಳನ್ನು ಉಡ್ಡಯನ ಮಾಡುವ ಹಾಗೂ ಅದರ ಶೇ. 90 ಟ್ರಾನ್ಸ್‌ಪಾಂಡರ್ ಸಾಮರ್ಥ್ಯವನ್ನು (70 MHz of S-band spectrum) ದೇವಾಸ್ ಸಂಸ್ಥೆಗೆ, 12 ವರ್ಷಗಳ ಅವಧಿಗೆ, 167 ಕೋಟಿ ರೂ.ಗಳಿಗೆ ಗುತ್ತಿಗೆ ನೀಡಲು ನಿರ್ಧರಿಸುತ್ತದೆ. ಈ ದೇವಾಸ್ ಸಂಸ್ಥೆಯ ಉನ್ನತ ಮ್ಯಾನೇಜ್‌ಮೆಂಟ್‌ನಲ್ಲಿದ್ದ ಹಲವರು, ಇಸ್ರೋದಲ್ಲಿ ದುಡಿಯುತ್ತಿದ್ದ ವಿಜ್ಞಾನಿಗಳು. ಈ ಒಪ್ಪಂದ ಹಲವು ಗಂಭೀರ ವಿವಾದಗಳಿಗೆ ಒಳಗಾಯಿತು. ತಮ್ಮ ಅವಗಾಹನೆಗೆ ಬಂದ ಒಳಕೋಣೆಯ ಮಾಹಿತಿಗೆ ಸೂಕ್ತವೆನ್ನಿಸುವ ಕಂಪೆನಿ ರಚಿಸಿಕೊಂಡದ್ದು, ಪಾರದರ್ಶಕ ಬಿಡ್ಡಿಂಗ್ ಇಲ್ಲದೆ ವ್ಯವಹಾರ ಕುದುರಿಸಿಕೊಂಡದ್ದು ಸೇರಿದಂತೆ ಹಲವು ಸಂಗತಿಗಳು ಈ ಪ್ರಕರಣದಲ್ಲಿ ಬೆಳಕಿಗೆ ಬಂದವು. 2011ರಲ್ಲಿ ಮನಮೋಹನ್ ಸಿಂಗ್ ಸರಕಾರವು ಈ ಒಪ್ಪಂದವನ್ನು ಭದ್ರತಾ ಕಾರಣಗಳನ್ನು ಮುಂದಿಟ್ಟು ರದ್ದುಪಡಿಸಿತ್ತು. ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಈ ಕುರಿತ ಆರ್ಬಿಟರೇಷನ್ ಪ್ರಕರಣಗಳು ಈವತ್ತಿಗೂ ಪೂರ್ಣಗೊಂಡಿಲ್ಲ. ಈಗ ಅಧಿಕಾರದಲ್ಲಿರುವ ಎನ್‌ಡಿಎ, ಆಗ ವಿರೋಧಪಕ್ಷವಾಗಿ ಈ ಒಪ್ಪಂದವನ್ನು ಸಾರಾಸಗಟು ವಿರೋಧಿಸಿತ್ತು. ಭ್ರಷ್ಟಾಚಾರ, ಮೂರುಕಾಸಿನ ದರಕ್ಕೆ ಅಮೂಲ್ಯ ಸರಕಾರಿ ಆಸ್ತಿ ಪರಾಭಾರೆ, ಸರಕಾರಿ ಬೊಕ್ಕಸಕ್ಕೆ ನಷ್ಟ... ಎಂಬೆಲ್ಲ ಆಪಾದನೆಗಳ ಸರಮಾಲೆಯನ್ನೇ ಹರಿಸಿದ್ದ ಎನ್‌ಡಿಎ, ಈ ಬೆಳವಣಿಗೆ ದೇಶದ ಭದ್ರತೆಗೇ ಅಪಾಯಕಾರಿ ಎಂದಿತ್ತು.

ಇದಾಗಿ, 2014ರಲ್ಲಿ ಅಧಿಕಾರಕ್ಕೆ ಬಂದ ಎನ್‌ಡಿಎ ಸರಕಾರ, ತನ್ನ ಎರಡನೇ ಅವಧಿಗೆ ಬರುತ್ತಲೇ, 2020ರಲ್ಲಿ ಬಾಹ್ಯಾಕಾಶ ಕ್ಷೇತ್ರವನ್ನು ಖಾಸಗಿಯವರಿಗೆ ತೆರೆಯಿತು ಮತ್ತು 2023ರಲ್ಲಿ ಬಾಹ್ಯಾಕಾಶ ವಲಯದ ಖಾಸಗೀಕರಣ ನೀತಿಯನ್ನು ಪ್ರಕಟಿಸಿತು. ‘‘‘There should be no ‘space’ between common man and space technology’’ ಎಂದು ಘೋಷಿಸಿದ ಪ್ರಧಾನಮಂತ್ರಿ ಮೋದಿಯವರು, ಈ ಹೊಸ ಬಾಹ್ಯಾಕಾಶ ನೀತಿಯ ಮೂಲಕ ಇಸ್ರೋ ಸವಲತ್ತುಗಳನ್ನೆಲ್ಲ ಖಾಸಗಿಯವರಿಗೆ ಬಿಚ್ಚಿಟ್ಟರು. ಖಾಸಗಿ ವಲಯಕ್ಕೆ ತಂತ್ರಜ್ಞಾನ ವರ್ಗಾವಣೆ, ಇಸ್ರೋ ಮೂಲಸೌಕರ್ಯಗಳ (ಟೆಸ್ಟಿಂಗ್, ಟ್ರ್ಯಾಕಿಂಗ್, ಟೆಲೆಮೆಟ್ರಿ, ಲಾಂಚ್‌ಪ್ಯಾಡ್, ಲ್ಯಾಬ್) ಬಳಕೆಗೆ ಅವಕಾಶಗಳೆಲ್ಲ ಮುಕ್ತವಾದವು. ಇದೆಲ್ಲದರ ನಿಯಂತ್ರಣಕ್ಕೆಂದು Indian National Space Promotion and Authorization Centre (IN-SPACe) ಸ್ಥಾಪನೆಗೊಂಡಿತು. (PIB Release ID: 148560) ಇಷ್ಟು ಮಾತ್ರವಲ್ಲ. ಈ ಉದ್ಯಮಕ್ಷೇತ್ರಕ್ಕೆ ಬರುವ ಹೊಸ ಸ್ಟಾರ್ಟಪ್‌ಗಳಿಗೆಂದು 1,000 ಕೋಟಿ ರೂ.ಗಳ ವೆಂಚರ್ ಕ್ಯಾಪಿಟಲ್ ಫಂಡ್, 500 ಕೋಟಿ ರೂ.ಗಳ ಟೆಕ್ನಾಲಜಿ ಅಡಾಪ್ಷನ್ ಫಂಡ್‌ಗಳನ್ನು ಕೂಡ ಭಾರತ ಸರಕಾರ ಸ್ಥಾಪಿಸಿದೆ. 2033ರ ಹೊತ್ತಿಗೆ ಈ ಬಾಹ್ಯಾಕಾಶ ವ್ಯವಹಾರ 3.40 ಲಕ್ಷ ಕೋಟಿ ರೂ.ಗಳಿಗೆ ತಲುಪಲಿದೆ ಮತ್ತು 2040ರ ಹೊತ್ತಿಗೆ ಅದು 9.65 ಲಕ್ಷ ಕೋಟಿ ರೂ.ಗಳ ಗಾತ್ರದ್ದಾಗಲಿದೆ ಎಂದು ಸರಕಾರ ಭಾವಿಸಿದೆ.

ಉಪಗ್ರಹ ಮೂಲಕ ದೂರಸಂಪರ್ಕ (SATCOM), ಜಿಯೊಸ್ಪಾಷಿಯಲ್ ಮತ್ತು ಪರಿಸರ ಸಂಬಂಧಿ ಡೇಟಾ ಸಂಗ್ರಹ ಉಪಗ್ರಹಗಳು, ಗುಪ್ತಚರ - ಭದ್ರತೆ - ಟ್ರ್ಯಾಕಿಂಗ್ ಉಪಗ್ರಹಗಳು, ಬಾಹ್ಯಾಕಾಶ ತ್ಯಾಜ್ಯಗಳನ್ನು ಸಂಗ್ರಹಿಸುವ ರೊಬೊಟಿಕ್ ಕೈಗಳು... ಇತ್ಯಾದಿಗಳ ಮಾರುಕಟ್ಟೆ ಇಂದು ತೇಜಿಯಲ್ಲಿದೆ. ಭೂಮಿಯಿಂದ 160-2,000 ಕಿ.ಮೀ. ದೂರವ್ಯಾಪ್ತಿಯೊಳಗೆ ಕಕ್ಷೆಯಲ್ಲಿರಿಸಬಹುದಾದ ಭೂಮಿಯ ಕೆಳಕಕ್ಷೆಯ ಉಪಗ್ರಹಗಳಿಗೆ (Low Earth Orbit - LEO) ಈಗ ಬಹಳ ಬೇಡಿಕೆ ಇದೆ. ಈ ಮಾರುಕಟ್ಟೆಯ ಬಹುಪಾಲು (ಶೇ.56) ಅಮೆರಿಕದ ಕೈಯಲ್ಲಿದೆ. ಅದು ವಾರ್ಷಿಕ 100-165 LEO ಉಪಗ್ರಹಗಳನ್ನು ಉಡ್ಡಯನ ಮಾಡುತ್ತಿದ್ದು, ಈಗಾಗಲೇ 10,000ಕ್ಕೂ ಮಿಕ್ಕಿ ಸಕ್ರಿಯ ಉಪಗ್ರಹಗಳನ್ನು ಹೊಂದಿದೆ. ಚೀನಾ ಎರಡನೇ ಸ್ಥಾನದಲ್ಲಿದ್ದು, ವಾರ್ಷಿಕ 40-90 ಅಂತಹ ಉಪಗ್ರಹಗಳನ್ನು ಉಡ್ಡಯನ ಮಾಡುತ್ತಿದೆ. ಅವರ ಬಳಿ ಅಂತಹ 1,200 ಸಕ್ರಿಯ ಉಪಗ್ರಹಗಳಿವೆ. ಭಾರತದ ಉದ್ದೇಶ ಈಗ ಈ ಹೊಸ ಮಾರುಕಟ್ಟೆಯ ಲಾಭ ಎತ್ತುವುದು.

ಸರಕಾರವು ಬಾಹ್ಯಾಕಾಶ ವಲಯವನ್ನು ಖಾಸಗಿಗೆ ತೆರೆದ ಬಳಿಕ, 2026 ಜೂನ್ ವೇಳೆಗೆ IN-SPACeಯು 118 ತಂತ್ರಜ್ಞಾನ ವರ್ಗಾವಣೆ ಒಪ್ಪಂದಗಳು, 189 ಜಂಟಿ ಅನುಷ್ಠಾನ ಯೋಜನೆಗಳು, ತಂತ್ರಜ್ಞಾನ ವರ್ಗಾವಣೆ ಒಪ್ಪಂದಗಳು ಮತ್ತು ವ್ಯವಹಾರ ಪಾಲುಗಾರಿಕೆ ಒಪ್ಪಂದಗಳಿಗೆ ತಲುಪಿದೆ. ಇಸ್ರೋದ ಹೊಸ ವಾಣಿಜ್ಯ-ಮಾರ್ಕೆಟಿಂಗ್ ಘಟಕವಾದ ನ್ಯೂಸ್ಪೇಸ್ ಇಂಡಿಯಾ ಲಿಮಿಟೆಡ್ (NSIL) ಈಗಾಗಲೇ 141 ಉಪಗ್ರಹಗಳನ್ನು (ಅದರಲ್ಲಿ 138 ವಿದೇಶೀ ಮತ್ತು 3 ಭಾರತೀಯ) ಯಶಸ್ವಿಯಾಗಿ ಉಡ್ಡಯಿಸಿದೆ. (PIB Explainer ID: 159250)

ಇವಿಷ್ಟು ಹಿನ್ನೆಲೆ ಮಾಹಿತಿಗಳನ್ನು ತಿಳಿದ ಬಳಿಕ, ರಂಗೋಲಿ ಚುಕ್ಕೆಗಳನ್ನು ಒಟ್ಟು ಸೇರಿಸಿದರೆ ಕಾಣಿಸುವ ಚಿತ್ರ ಸ್ಪಷ್ಟ.

ಪೂರ್ಣಚಿತ್ರ

ಯುಪಿಎ ಸರಕಾರ ಇರುವಾಗ ನಡೆದ ಖಾಸಗೀಕರಣದ ಬೆಳವಣಿಗೆಗಳನ್ನು ದೇಶದ ಭದ್ರತೆಗೆ ಧಕ್ಕೆ ಎಂದು ಎನ್‌ಡಿಎ ವಿರೋಧಿಸಿತ್ತು. ಈಗ ತಾನು ಅಧಿಕಾರಕ್ಕೆ ಬಂದ ಬಳಿಕ ಅದು, ಬಾಹ್ಯಾಕಾಶ ಕ್ಷೇತ್ರವನ್ನು ಬಾಜಾ ಭಜಂತ್ರಿ ಸಹಿತ ಪೂರ್ಣ ಪ್ರಮಾಣದಲ್ಲಿ ಖಾಸಗೀಕರಣಕ್ಕೆ ತೆರೆದಿದೆ. ಖಾಸಗಿಯವರಿಗೆ, ವಿದೇಶೀ ಹೂಡಿಕೆದಾರರಿಗೆ ಎಲ್ಲರಿಗೂ ಈಗ ಇಸ್ರೋಗೆ ಮುಕ್ತ ಪ್ರವೇಶ! ಈಗ ದೇಶದ ಭದ್ರತೆಯ ಪ್ರಶ್ನೆಯೇ ಚರ್ಚೆಯಲ್ಲಿಲ್ಲ. ಏಕೆಂದರೆ, ಅದೀಗ ಕಾಸು ತರುವ ವ್ಯವಹಾರ.

ದೇಶದ ಒಳಗೇ ಖಾಸಗಿ ಸ್ಟಾರ್ಟಪ್‌ಗಳು ಬಾಹ್ಯಾಕಾಶ ವ್ಯವಹಾರದ ಅಂಗಡಿ ತೆರೆದಿರುವುದರಿಂದ, ಅಲ್ಲಿಗೆ ಪರಿಣತರ ನೇಮಕ ಮಾಡಿಕೊಳ್ಳಲು ಸಹಜವಾಗಿಯೇ ಅವು ಇಸ್ರೋದ ಉದ್ಯೋಗಿಗಳನ್ನು ಹೆಚ್ಚಿನ ಸಂಬಳ, ಅವಕಾಶ, ಸವಲತ್ತುಗಳ ಆಸೆ ಹುಟ್ಟಿಸಿ ತಮ್ಮೆಡೆಗೆ ಸೆಳೆಯುತ್ತಿವೆ. ಇದರ ಪರಿಣಾಮವಾಗಿ ಇಸ್ರೋದ ಒಳಗೆ ಪರಿಣತಿ ಅಲಭ್ಯ ಆಗುತ್ತಿದೆ ಮತ್ತು ಆ ಸಂಕಟ ವ್ಯಕ್ತಪಡಿಸುವುದಕ್ಕಾಗಿಯೇ ಬಾಹ್ಯಾಕಾಶ ಇಲಾಖೆ ತನ್ನ (ಮೇಲೆ ವಿವರಿಸಿದ) ಆಫೀಸ್ ಮೆಮೊ ಹೊಡಿಸಿದೆ. BSNL, DISCOMs ಸಹಿತ ದೇಶದ ಎಲ್ಲ ಸರಕಾರಿ ಸ್ವತ್ತುಗಳನ್ನು ಆನಿಗಳ ಬಾಯಿಗೆ ಅರ್ಪಿಸುವ ಮುನ್ನ ಹೂಡಲಾದ ತಂತ್ರದ ಮಾದರಿಯನ್ನೇ ಇಸ್ರೋ ವಿಚಾರದಲ್ಲೂ ಹೂಡಲಾಗಿದೆ. ಚಂದ್ರಯಾನ್-4, ಶುಕ್ರಯಾನ್, ಗಗನಯಾನ್ ಮತ್ತಿತರ ಸರಕಾರಿ ಯೋಜನೆಗಳ ಮೇಲೆ ಇದರಿಂದ ನೇರ ಪರಿಣಾಮ ಉಂಟಾಗಲಿದೆ.

ಇಷ್ಟು ಮಾತ್ರವಲ್ಲ. ಇಸ್ರೋದಂತಹ ದೇಶದ ಭದ್ರತಾವಲಯದ ಉದ್ಯೋಗಗಳಿಗೆ ನೇಮಕಾತಿ ಮಾಡುವಾಗ, ಭಾರತ ಸರಕಾರದ RAW ಮತ್ತಿತರ ಗುಪ್ತಚರ ವಿಭಾಗಗಳು ಅಂತಹ ಉದ್ಯೋಗಿಗಳನ್ನು ಕೂಲಂಕಷ ಪರಿಶೀಲಿಸಿದ ಬಳಿಕವೇ ನೇಮಕ ಮಾಡಿಕೊಳ್ಳುತ್ತಾರೆ. ಏಕೆಂದರೆ, ಅಲ್ಲಿ ದೇಶದ ಭದ್ರತೆಗೆ ಸಂಬಂಧಿಸಿದ ಅಸಂಖ್ಯ ಸಂಗತಿಗಳು ಆ ಉದ್ಯೋಗಿಗಳ ಅವಗಾಹನೆಗೆ ಬರುತ್ತಿರುತ್ತವೆ. ಈಗ ಅವರೆಲ್ಲ ಸಾರಾಸಗಟು ಖಾಸಗಿ ವಲಯಗಳಿಗೆ ಗುಳೆ ಹೋಗಿರುವಾಗ, ಸರಕಾರದ ಗೌಪ್ಯತೆಗಳು ಬಹಿರಂಗವಾಗುವುದಿಲ್ಲವೇ ಎಂಬ ಪ್ರಶ್ನೆ ಸಹಜವಾಗಿಯೇ ಏಳುತ್ತದೆ. ಇದಲ್ಲದೆ, ಖಾಸಗಿ ವಲಯದ ಉಪಗ್ರಹಗಳು (ಕಾರ್ಪೊರೇಟ್ ಮೂಲದವು) ಬಾಹ್ಯಾಕಾಶದಲ್ಲಿ ನಿಂತು ದೇಶದ ಬಗ್ಗೆ ಏನೆಲ್ಲ ಮಾಹಿತಿಗಳನ್ನು ಸಂಗ್ರಹಿಸಲಿವೆ? ಅದನ್ನು ಯಾರ ಜೊತೆ ಹಂಚಿಕೊಳ್ಳಲಿವೆ? ಅದಕ್ಕೆ ಸರಕಾರದ ಕಡೆಯಿಂದ ಏನು ನಿಯಂತ್ರಣ ಇದೆ? ದೇಶದ ಭದ್ರತೆಗೆ ಧಕ್ಕೆ ಆದರೆ ಅದಕ್ಕೆ ಯಾರು ಉತ್ತರದಾಯಿ? ಈ ಎಲ್ಲ ಪ್ರಶ್ನೆಗಳೂ ಈಗ ಏಳಬೇಕಿವೆ.

Tags

AntarikshDevas
share
ರಾಜಾರಾಂ ತಲ್ಲೂರು
ರಾಜಾರಾಂ ತಲ್ಲೂರು
Next Story
X