Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಪಿಟ್ಕಾಯಣ
  5. ನ್ಯಾಯಮೂರ್ತಿಗಳ ವರ್ಗಾವಣೆಯಲ್ಲಿ...

ನ್ಯಾಯಮೂರ್ತಿಗಳ ವರ್ಗಾವಣೆಯಲ್ಲಿ ಸರಕಾರದ್ದೇನು ಉಸಾಬರಿ?

ರಾಜಾರಾಂ ತಲ್ಲೂರುರಾಜಾರಾಂ ತಲ್ಲೂರು31 Jan 2026 10:05 AM IST
share
ನ್ಯಾಯಮೂರ್ತಿಗಳ ವರ್ಗಾವಣೆಯಲ್ಲಿ ಸರಕಾರದ್ದೇನು ಉಸಾಬರಿ?

ನ್ಯಾ. ಅತುಲ್ ಶ್ರೀಧರನ್ ಪ್ರಕರಣದಲ್ಲಿ ಕೊಲಿಜಿಯಂ ಲಿಖಿತವಾಗಿಯೇ ಭಾರತ ಸರಕಾರವು ನ್ಯಾಯಮೂರ್ತಿಗಳ ನೇಮಕಾತಿಯಲ್ಲಿ ಹಸ್ತಕ್ಷೇಪ ಮಾಡಿರುವುದನ್ನು ದಾಖಲಿಸಿದೆ. ಸರಕಾರವೊಂದು ತನ್ನ ಸಾಂವಿಧಾನಿಕ ಹೊಣೆಗಾರಿಕೆಯ ಹದ್ದುಮೀರಿ ಹೀಗೆ ವರ್ತಿಸಿರುವುದರ ಹೊರತಾಗಿಯೂ ಅದು ಗಮನಾರ್ಹ ಸುದ್ದಿ ಆಗಿಲ್ಲ ಎಂಬುದು, ದೇಶ ಆತಂಕ ಪಡಬೇಕಾದ ಸಂಗತಿ. ನ್ಯಾಯಾಂಗವನ್ನು ಸ್ವತಂತ್ರವಾಗಿರಲು ಅವಕಾಶ ಮಾಡಿಕೊಡಬೇಕಾದುದು ಸರಕಾರವೊಂದರ ಸಾಂವಿಧಾನಿಕ ಬದ್ಧತೆ.

‘‘ಒಬ್ಬರು ನಿರ್ದಿಷ್ಟ ನ್ಯಾಯಮೂರ್ತಿಗಳ ಅಥವಾ ನ್ಯಾಯಪೀಠದ ಎದುರು ಒಂದು ಪ್ರಕರಣ ಲಿಸ್ಟ್ ಆದ ತಕ್ಷಣ, ಅದರ ತೀರ್ಪು ಹೀಗೇ ಇರಲಿದೆ ಎಂಬ ತೀರ್ಮಾನಕ್ಕೆ ಜನರು ಬರಲು ಸಾಧ್ಯವಾಗುತ್ತದೆ ಎಂದರೆ, ಅದು ನ್ಯಾಯಾಂಗಕ್ಕೆ ಮತ್ತು ಆ ಮೂಲಕ ಪ್ರಜಾತಂತ್ರ ವ್ಯವಸ್ಥೆಗೆ ದುಃಖಕರವಾದ ದಿನ.’’

‘‘ನಮ್ಮ ನ್ಯಾಯಾಲಯಗಳನ್ನು ಅಪಾಯದಿಂದ ರಕ್ಷಿಸಲು ಅರೆಸೈನಿಕ ಪಡೆಗಳನ್ನು ನೇಮಿಸಬೇಕಾಗಿಲ್ಲ. ನ್ಯಾಯಾಂಗದ ಸ್ವಾತಂತ್ರ್ಯಕ್ಕೆ ಅಪಾಯ ಇರುವುದು ನ್ಯಾಯಾಂಗದ ಒಳಗಿನಿಂದಲೇ.’’

‘‘ನ್ಯಾಯಮೂರ್ತಿಯೊಬ್ಬರು ಸರಕಾರಕ್ಕೆ ಅವಗುಣವಾಗಬಲ್ಲ ತೀರ್ಪು ನೀಡಿದ್ದಾರೆ ಎಂಬ ಒಂದೇ ಕಾರಣಕ್ಕೆ, ಆ ನ್ಯಾಯಮೂರ್ತಿಯವರ ವರ್ಗಾವಣೆಯನ್ನು ಒಕ್ಕೂಟ ಸರಕಾರವು ಮರುಪರಿಶೀಲಿಸಲು ಕೋರಿಕೊಂಡ ಮೇರೆಗೆ ಕೊಲೀಜಿಯಂ ಒಂದು ಹೈಕೋರ್ಟ್‌ನಿಂದ ಇನ್ನೊಂದು ಹೈಕೋರ್ಟ್‌ಗೆ ಯಾಕೆ ವರ್ಗಾಯಿಸಬೇಕು? ಇದು ನ್ಯಾಯಾಂಗದ ಸ್ವಾತಂತ್ರ್ಯದ ಮೇಲೆ ಪರಿಣಾಮ ಬೀರುವುದಿಲ್ಲವೆ?’’

***

ಇಂತಹ ಸಿಡಿಗುಂಡಿನಂತಹ ಪ್ರಶ್ನೆಗಳನ್ನು ಕೇಳಿರುವುದು ಯಾರೋ ಹಾದಿಬೀದಿಯಲ್ಲಿ ನಿಂತು ಕಟ್ಟೆಪಂಚಾಯ್ತಿಕೆ ಮಾಡುತ್ತಿರುವವರಲ್ಲ. ಭಾರತದ ಸುಪ್ರೀಂ ಕೋರ್ಟ್‌ನ ಹಾಲಿ ನ್ಯಾಯಮೂರ್ತಿ ಉಜ್ಜಾಲ್ ಭುಯಾನ್ ಅವರ ಪ್ರಶ್ನೆಗಳಿವು. ಜನವರಿ 24ರಂದು ಪುಣೆಯ ILS ಕಾನೂನು ಕಾಲೇಜಿನಲ್ಲಿ ‘‘ಸಾಂವಿಧಾನಿಕ ನೈತಿಕತೆ ಮತ್ತು ಪ್ರಜಾತಾಂತ್ರಿಕ ಆಡಳಿತ’’ ಎಂಬ ವಿಚಾರದಲ್ಲಿ ದತ್ತಿನಿಧಿ ಉಪನ್ಯಾಸದ ವೇಳೆ ಅವರು ಆಡಿದ ಮಾತುಗಳಿವು.

ಆರೋಗ್ಯವಂತ ಮಾಧ್ಯಮಗಳಿರುವ ಯಾವುದೇ ನಾಡಿನಲ್ಲಿ ಆದ್ಯತೆಯ ಸುದ್ದಿಯಾಗಿ, ದೇಶದಾದ್ಯಂತ ಚರ್ಚೆ ಆಗಬೇಕಾಗಿದ್ದಂತಹ ಗಂಭೀರ ಸಂಗತಿ ಇದು. ಆದರೆ, ಈ ಸುದ್ದಿಯನ್ನು ಭಕ್ತಿ-ಭುಕ್ತಿಗಳ ಮಹಾರಾಶಿಯಲ್ಲಿ ಹುದುಗಿಸಿಟ್ಟು ‘ಸಬ್ ಚೆಂಗಾಸಿ’ ಎಂದು ಷರಾ ಬರೆಯಲಾಗಿದೆ.

ನ್ಯಾ. ಭುಯಾನ್ ಅವರು 34 ನ್ಯಾಯಮೂರ್ತಿಗಳಿರುವ ಭಾರತದ ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳ ಹಿರಿತನದ ಪಟ್ಟಿಯಲ್ಲಿ 18ನೇ ಸ್ಥಾನದಲ್ಲಿರುವವರು. 2023 ಜುಲೈ 14ರಂದು ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ ಆಗಿ ನೇಮಕಗೊಂಡಿರುವ ಅವರು, 2029ರ ಆಗಸ್ಟ್ ಒಂದರಂದು ನಿವೃತ್ತರಾಗಲಿದ್ದಾರೆ. ದುರದೃಷ್ಟವಶಾತ್, ಅವರು ಹಿರಿತನದ ಪಟ್ಟಿಯ ಆಧಾರದಲ್ಲಿ ಭಾರತದ ಮುಖ್ಯ ನ್ಯಾಯಮೂರ್ತಿ ಆಗುವ ಸಾಧ್ಯತೆಗಳು ಇಲ್ಲ.

***

2014ರಿಂದ ಈಚೆಗೆ, ಭಾರತದ ನ್ಯಾಯಾಂಗ ವ್ಯವಸ್ಥೆಯ ಒಳಗಿನಿಂದ ಸಂವಿಧಾನ ಪರ ಚಡಪಡಿಕೆಗಳು ಹಲವು ಬಾರಿ ತಲೆಯೆತ್ತಿವೆಯಾದರೂ, ಅವು ಯಾವುವೂ ಜನಸಾಮಾನ್ಯರ ಮನಸ್ಸಿಗೆ ನಾಟದಂತೆ ಆರ್ಕೆಸ್ಟ್ರೇಟೆಡ್ ಪ್ರಯತ್ನಗಳ ಮೂಲಕ ಶ್ರಮಿಸಲಾಗಿದೆ. ನ್ಯಾಯಾಧೀಶರ ನೇಮಕದ ಹೊಣೆ ಹೊತ್ತಿರುವ ಕೊಲಿಜಿಯಂ ಅಪಾರದರ್ಶಕವಾಗಿರುವುದು ಮತ್ತು ಅದರ ಮೇಲೆ ರಾಜಕೀಯಸ್ಥರ ಪ್ರಭಾವ ಹೆಚ್ಚುತ್ತಿರುವ ಕುರಿತು ಈಗಾಗಲೇ ಹಲವು ಪ್ರಶ್ನೆಗಳು ಎದ್ದದ್ದಿದೆ. ಅಂತಹ ಕೆಲವು ಸನ್ನಿವೇಶಗಳನ್ನು ಗಮನಿಸೋಣ.

2014ರಲ್ಲಿ ಭಾರತ ಸರಕಾರವು ಸಂವಿಧಾನಕ್ಕೆ 99ನೇ ತಿದ್ದುಪಡಿ (124 ಎ,ಬಿ,ಸಿ ವಿಧಿಗಳಿಗೆ) ಮಾಡಿ ರಾಷ್ಟ್ರೀಯ ನ್ಯಾಯಾಂಗ ನೇಮಕಾತಿ ಆಯೋಗ (NJAC) ಸ್ಥಾಪನೆಗೆ ಮುಂದಾದಾಗ, ಅದನ್ನು ಸುಪ್ರೀಂ ಕೋರ್ಟ್ ‘ಅಸಾಂವಿಧಾನಿಕ’ ಎಂದು ಘೋಷಿಸಿ, 2015ರ ಅಕ್ಟೋಬರ್ 16ರಂದು ವಜಾಗೊಳಿಸಿತ್ತು. ಆ ನ್ಯಾಯಪೀಠದ ಭಾಗವಾಗಿದ್ದ ನ್ಯಾ. ಜುಸ್ತಿ ಚಲಮೇಶ್ವರ ಅವರು, ನ್ಯಾಯಾಧೀಶರ ನೇಮಕ ಪ್ರಕ್ರಿಯೆ ನಡೆಸುವ ಕೊಲಿಜಿಯಂ ಸಭೆಗಳಲ್ಲಿ ನಡೆಯುವ ಚರ್ಚೆಗಳನ್ನು ಲಿಖಿತವಾಗಿ ದಾಖಲಿಸದಿದ್ದರೆ, ತಾನು ಆ ಸಭೆಗಳಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಹೇಳಿದ್ದರು.

2018ರಲ್ಲಿ, ನ್ಯಾ. ಮದನ್ ಲೊಕೂರ್ ಅವರು ಕೊಲಿಜಿಯಂ ಸದಸ್ಯರಾಗಿದ್ದಾಗ, ಇಬ್ಬರು ನ್ಯಾಯಮೂರ್ತಿಗಳನ್ನು (ನ್ಯಾ.ಪ್ರದೀಪ್ ನಂದ್ರಜೋಗ್, ನ್ಯಾ. ರಾಜೇಂದ್ರ ಮೆನನ್) ಸುಪ್ರೀಂ ಕೋರ್ಟ್ ಗೆ ನೇಮಿಸಲು ಶಿಫಾರಸು ಮಾಡಲಾಗಿತ್ತು. ಆದರೆ ಆ ನಿರ್ಣಯ ಸಾರ್ವಜನಿಕಗೊಳ್ಳದೆ ನನೆಗುದಿಗೆ ಬಿದ್ದಿತ್ತು, ಕಡೆಗೆ ನ್ಯಾ.ಲೊಕೂರ್ ಅವರು ನಿವೃತ್ತರಾದ ಬಳಿಕ, ನ್ಯಾ. ದಿನೇಶ್ ಮಾಹೇಶ್ವರಿ ಮತ್ತು ನ್ಯಾ. ಸಂಜೀವ್ ಖನ್ನಾ ಅವರನ್ನು ಸುಪ್ರೀಂ ಕೋರ್ಟ್‌ಗೆ ನೇಮಿಸಲಾಗಿತ್ತು. ನ್ಯಾ. ಲೊಕೂರ್ ಅವರು ಈ ಬಗ್ಗೆ ನಿರಾಶೆ ವ್ಯಕ್ತಪಡಿಸಿದ್ದರು.

ನ್ಯಾ. ಆರ್.ಎಫ್. ನಾರಿಮನ್ ಅವರು ಕೊಲೀಜಿಯಂ ಸದಸ್ಯರಾಗಿದ್ದಾಗ, ನ್ಯಾ. ಅಖಿಲ್ ಖುರೇಷಿ ಅವರಿಗಿಂತ ಕಿರಿಯ ನ್ಯಾಯಮೂರ್ತಿಗಳನ್ನು ಹಿರಿತನಕ್ಕೆ ಪರಿಗಣಿಸಿದ ಬಗ್ಗೆ ಆಕ್ಷೇಪ ಎತ್ತಿದ್ದರು. ಈ ಪ್ರಕರಣದಲ್ಲೂ ಕೊಲಿಜಿಯಂ ಸುದೀರ್ಘ ವಿಳಂಬನೀತಿ ಅನುಸರಿಸಿತ್ತು. ಒಡಿಶಾ ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಆಗಿದ್ದ ನ್ಯಾ. ಎಸ್. ಮುರಳೀಧರ್ ಅವರನ್ನು ಅವರ ಹಿರಿತನದ ಹೊರತಾಗಿಯೂ ಸುಪ್ರೀಂ ಕೋರ್ಟ್‌ಗೆ ನೇಮಕ ಮಾಡಲು ನಿರ್ಲಕ್ಷ್ಯ ತೋರಲಾಗಿತ್ತು.

ಇಂತಹ ಬೆಳಕಿಗೆ ಬಂದ, ಬರದ ಹತ್ತಾರು ಪ್ರಕರಣಗಳಿವೆ.

ತೀರಾ ಇತ್ತೀಚೆಗಿನ ಎರಡು ಘಟನೆಗಳು ನ್ಯಾಯಾಂಗದಲ್ಲಿ ಶಾಸಕಾಂಗದ ಸಂವಿಧಾನಬಾಹಿರ ಹಸ್ತಕ್ಷೇಪದ ಸನ್ನಿವೇಶವನ್ನು ಇನ್ನಷ್ಟು ಗಂಭೀರಗೊಳಿಸಿವೆ. ಕಳೆದ ವರ್ಷ (2025) ಆಗಸ್ಟ್ 29ರಂದು, ನ್ಯಾ. ಅಲೋಕ್ ಆರಾಧೆ ಮತ್ತು ನ್ಯಾ. ವಿ.ಎಂ. ಪಾಂಚೋಲಿ ಅವರನ್ನು ಸುಪ್ರೀಂ ಕೋರ್ಟ್‌ಗೆ ಅಸಹಜವೆನ್ನಿಸುವಷ್ಟು ವೇಗದಲ್ಲಿ (ನಾಲ್ಕೇ ದಿನಗಳಲ್ಲಿ) ನೇಮಕ ಮಾಡಲಾಗಿತ್ತು. ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ನ್ಯಾ. ಬಿ. ಆರ್. ಗವಾಯಿ ಅವರ ಅಧ್ಯಕ್ಷತೆಯ ಕೊಲಿಜಿಯಂನ ಈ ತೀರ್ಮಾನಕ್ಕೆ, ಕರ್ನಾಟಕ ಮೂಲದ ಮತ್ತು ಶೀಘ್ರವೇ ಸ್ವತಃ ಮುಖ್ಯ ನ್ಯಾಯಮೂರ್ತಿ ಆಗಲಿರುವ ನಾ. ಬಿ.ವಿ. ನಾಗರತ್ನ ಅವರು ಭಿನ್ನಮತವನ್ನು ಪ್ರಕಟಿಸಿರುವುದು ಬೆಳಕಿಗೆ ಬಂದಿದೆ. ಅವರ ಈ ಭಿನ್ನಮತ ಸಾರ್ವಜನಿಕವಾಗಿ ಪ್ರಕಟಗೊಂಡಿಲ್ಲವಾದರೂ, ಮಾಧ್ಯಮಗಳಲ್ಲಿ ಪ್ರಕಟಗೊಂಡಿರುವ ವಿಚಾರಗಳು ಸುಪ್ರೀಂ ಕೋರ್ಟ್ ನ ನೇಮಕಾತಿ ಪ್ರಕ್ರಿಯೆಯಲ್ಲಿ ಶಾಸಕಾಂಗದ ಹಸ್ತಕ್ಷೇಪದ ಬಗ್ಗೆ ಬೊಟ್ಟು ಮಾಡಿವೆ. ಗುಜರಾತ್ ಮೂಲದ ನ್ಯಾಯಮೂರ್ತಿಗಳಿಗೆ (ನ್ಯಾ.ಜೆ.ಬಿ. ಪರ್ದಿವಾಲಾ ಮತ್ತು ನ್ಯಾ. ಎನ್. ವಿ. ಅಂಜಾರಿಯಾ) ಹೆಚ್ಚಿನ ಮಣೆ, ಬೆನ್ನುಬೆನ್ನಿಗೆ ಇಬ್ಬರು ಗುಜರಾತ್ ಮೂಲದ ನ್ಯಾಯಾಧೀಶರೇ ಮುಖ್ಯ ನ್ಯಾಯಮೂರ್ತಿಗಳಾಗಲಿರುವುದು, ಮಹಿಳಾ ನ್ಯಾಯಮೂರ್ತಿಗಳ ಹಿರಿತನ ಕಡೆಗಣಿಸಿರುವುದು ಮತ್ತಿತರ ಐದು ಕಾರಣಗಳನ್ನು ಮುಂದಿಟ್ಟಿವೆ. ಹಾಲಿ ಶಾಸಕಾಂಗದ ಮುಖ್ಯಸ್ಥರ ಗುಜರಾತ್ ಮೂಲವನ್ನು ಗಮನಿಸಿದರೆ, ಈ ಹಸ್ತಕ್ಷೇಪಗಳು ಗಂಭೀರ ಸ್ವರೂಪದವು ಅನ್ನಿಸದಿರುವುದಿಲ್ಲ. ಆದರೆ, ನ್ಯಾ. ನಾಗರತ್ನ ಅವರ ಕಳವಳಗಳಿಗೆ ಉತ್ತರ ದೊರೆತಿಲ್ಲ. (ಆಧಾರ: Supreme Court Observer)

ಕಳೆದ ವಾರ ನ್ಯಾ. ಭುಯಾನ್ ಅವರು ಸಾರ್ವಜನಿಕವಾಗಿ ಎತ್ತಿರುವ ಪ್ರಶ್ನೆಯೂ ಗಂಭೀರ ಸ್ವರೂಪದ್ದು. 2025ರ ಆಗಸ್ಟ್ 25-26ರ ಸಭೆಯಲ್ಲಿ ಕೊಲಿಜಿಯಂ, 14 ಮಂದಿ ಹೈಕೋರ್ಟ್ ನ್ಯಾಯಮೂರ್ತಿಗಳ ವರ್ಗಾವಣೆಯ ಬಗ್ಗೆ ನಿರ್ಣಯವನ್ನು ಪ್ರಕಟಿಸಿತ್ತು. ಅದರಲ್ಲಿ, ಹೈಕೋರ್ಟ್ ನ್ಯಾಯಮೂರ್ತಿ ನ್ಯಾ. ಅತುಲ್ ಶ್ರೀಧರನ್ ಅವರನ್ನು ಮಧ್ಯಪ್ರದೇಶದಿಂದ ಛತ್ತೀಸ್‌ಗಡಕ್ಕೆ ವರ್ಗಾಯಿಸಲಾಗಿತ್ತು. ಆದರೆ, ಈ ಹಿಂದೆ ಜಮ್ಮು-ಕಾಶ್ಮೀರದ ಹೈಕೋರ್ಟ್ ನ್ಯಾಯಮೂರ್ತಿ ಆಗಿದ್ದಾಗ, ಕೆಲವು ತೀರ್ಪುಗಳ ಮೂಲಕ ಶಾಸಕಾಂಗದ ಅಸಂತೋಷಕ್ಕೆ ಗುರಿ ಆಗಿದ್ದ ಅವರ ವರ್ಗಾವಣೆಯನ್ನು ಶಾಸಕಾಂಗ ತಡೆಹಿಡಿದಿತ್ತು ಮತ್ತು 2025ರ ಅಕ್ಟೋಬರ್ 14ರಂದು ಕೊಲಿಜಿಯಂ ಸಭೆಯಲ್ಲಿ ಅವರ ವರ್ಗಾವಣೆಯ ನಿರ್ಣಯವನ್ನು ಬದಲಿಸಿ, ಅವರನ್ನು ಅಲಹಾಬಾದ್ ಹೈಕೋರ್ಟ್‌ಗೆ ವರ್ಗಾಯಿಸಲಾಯಿತು. ಈ ಕುರಿತ ಪ್ರಕಟಣೆಯಲ್ಲಿ ‘ಸರಕಾರದ ಮರುಪರಿಶೀಲನೆ ಕೋರಿಕೆಯ ಮೇರೆಗೆ’ (On reconsideration sought by the Government) ಎಂದು ದಾಖಲಿಸಲಾಗಿದೆ. ಈ ವಿಚಾರವನ್ನೇ ನ್ಯಾ. ಭುಯಾನ್ ತನ್ನ ಉಪನ್ಯಾಸದಲ್ಲಿ ಎತ್ತಿರುವುದು.

ನ್ಯಾ. ಅತುಲ್ ಶ್ರೀಧರನ್ ಪ್ರಕರಣದಲ್ಲಿ ಕೊಲಿಜಿಯಂ ಲಿಖಿತವಾಗಿಯೇ ಭಾರತ ಸರಕಾರವು ನ್ಯಾಯಮೂರ್ತಿಗಳ ನೇಮಕಾತಿಯಲ್ಲಿ ಹಸ್ತಕ್ಷೇಪ ಮಾಡಿರುವುದನ್ನು ದಾಖಲಿಸಿದೆ (ಚಿತ್ರ ನೋಡಿ). ಸರಕಾರವೊಂದು ತನ್ನ ಸಾಂವಿಧಾನಿಕ ಹೊಣೆಗಾರಿಕೆಯ ಹದ್ದುಮೀರಿ ಹೀಗೆ ವರ್ತಿಸಿರುವುದರ ಹೊರತಾಗಿಯೂ ಅದು ಗಮನಾರ್ಹ ಸುದ್ದಿ ಆಗಿಲ್ಲ ಎಂಬುದು ದೇಶ ಆತಂಕ ಪಡಬೇಕಾದ ಸಂಗತಿ. ನ್ಯಾಯಾಂಗವನ್ನು ಸ್ವತಂತ್ರವಾಗಿರಲು ಅವಕಾಶ ಮಾಡಿಕೊಡಬೇಕಾದುದು ಸರಕಾರವೊಂದರ ಸಾಂವಿಧಾನಿಕ ಬದ್ಧತೆ.

ನ್ಯಾ. ಭುಯಾನ್ ಅವರು ತಮ್ಮ ಪ್ರಖರ ಮಾತುಗಳಲ್ಲಿ, ‘‘ನ್ಯಾಯಾಧೀಶರಾಗಿ ನಾವು ಯಾವುದೇ ಭಯ, ಪಕ್ಷಪಾತ, ರಾಗ-ದ್ವೇಷಗಳಿಲ್ಲದೆ ಕಾರ್ಯಾಚರಿಸುವ ಪ್ರತಿಜ್ಞೆ ಸ್ವೀಕರಿಸಿರುತ್ತೇವೆ. ಅದನ್ನು ಪಾಲಿಸುವುದು ನಮ್ಮ ಕರ್ತವ್ಯ. ನ್ಯಾಯಾಂಗ ತನ್ನ ನಂಬಿಗಸ್ಥಿಕೆಯನ್ನು ಕಳೆದುಕೊಂಡರೆ, ಪ್ರಜಾತಂತ್ರದಲ್ಲಿ ಏನೂ ಉಳಿದಿರುವುದಿಲ್ಲ. ನ್ಯಾಯಮೂರ್ತಿಗಳು ಉಳಿದುಕೊಂಡಿರಬಹುದು, ತೀರ್ಪುಗಳು ಬರಬಹುದು ಆದರೆ, ನ್ಯಾಯಾಂಗದ ಆತ್ಮವೇ ಉಳಿದಿರುವುದಿಲ್ಲ. ನಮ್ಮ ದೇಶದಲ್ಲಿ ಸಂವಿಧಾನವೇ ಪರಮೋಚ್ಚ. ಪಾರ್ಲಿಮೆಂಟು ಸಾರ್ವಭೌಮ ಅಲ್ಲ ಎಂಬ ವಾಸ್ತವವೇ ಪ್ರಜಾತಾಂತ್ರಿಕ ಆಡಳಿತ ವ್ಯವಸ್ಥೆಯ ಮೂಲ ತಿರುಳು. ನಿಯಂತ್ರಣ ಮತ್ತು ಸಂತುಲನಗಳಿದ್ದಾಗ ಮಾತ್ರ ಪ್ರಜಾತಾಂತ್ರಿಕ ಸಂಸ್ಥೆಗಳು ಸಾಂವಿಧಾನಿಕ ಮೌಲ್ಯಗಳಿಗೆ ಅನುಗುಣವಾಗಿ ನಡೆಯುವುದು ಸಾಧ್ಯವಾಗುತ್ತದೆ. ಸಂಖ್ಯಾಬಲ, ಬಹುಮತ, ಅಧಿಕಾರಗಳ ಬಲದಿಂದ ಪ್ರಜಾತಂತ್ರ ವ್ಯವಸ್ಥೆಯನ್ನು ಬುಲ್ಡೋಜ್ ಮಾಡಿಕೊಂಡು ಹೋಗುವ ಅಪಾಯ ತಪ್ಪುತ್ತದೆ.’’ ಎಂದು ಪುಣೆಯ ಉಪನ್ಯಾಸದಲ್ಲಿ ಹೇಳಿದ್ದರು. ಆಸಕ್ತರು ಅವರ ಪೂರ್ಣ ಉಪನ್ಯಾಸವನ್ನು ಇಲ್ಲಿ ಕೇಳಬಹುದು: https://www.youtube.com/watch?v=TSvJFZ873Fw

Tags

government
share
ರಾಜಾರಾಂ ತಲ್ಲೂರು
ರಾಜಾರಾಂ ತಲ್ಲೂರು
Next Story
X