Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಪಿಟ್ಕಾಯಣ
  5. ಅಮೆರಿಕದ ಎದೆಯುರಿಗೆ ಭಾರತದಲ್ಲೇಕೆ...

ಅಮೆರಿಕದ ಎದೆಯುರಿಗೆ ಭಾರತದಲ್ಲೇಕೆ ಹೊಟ್ಟೆನೋವು?

ರಾಜಾರಾಂ ತಲ್ಲೂರುರಾಜಾರಾಂ ತಲ್ಲೂರು4 Jan 2025 11:14 AM IST
share
ಅಮೆರಿಕದ ಎದೆಯುರಿಗೆ ಭಾರತದಲ್ಲೇಕೆ ಹೊಟ್ಟೆನೋವು?

ಅಮೆರಿಕದ ಎದೆಯುರಿಗೆ ಭಾರತದಲ್ಲಿ ಏಕೆ ಹೊಟ್ಟೆನೋವು? ಈ ಪ್ರಶ್ನೆ ಕಳೆದ ಹದಿನೈದು ದಿನಗಳಿಂದೀಚೆಗೆ ಉತ್ತರಕ್ಕಾಗಿ ಹುಡುಕಾಟದಲ್ಲಿದೆ. H-1B ವೀಸಾ ಕುರಿತಂತೆ ತನ್ನ ನಿಲುವು ಏನಿರಬೇಕೆಂದು ಅಮೆರಿಕದ ಭಾವಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗೊಂದಲದಲ್ಲಿದ್ದಾರೆ. ಚುನಾವಣಾ ಪ್ರಚಾರದ ಉದ್ದಕ್ಕೂ ತಾನು ಹೇಳುತ್ತಾ ಬಂದಿದ್ದ ‘ಅಮೆರಿಕ ಫರ್ಸ್ಟ್’ ನೀತಿಗೆ ತದ್ವಿರುದ್ಧವಾದ ನಿಲುವು ತಳೆದಿರುವ ತನ್ನ ಯುದ್ಧ ಸಂಗಾತಿ ಎಲಾನ್ ಮಸ್ಕ್ ಹಾಗೂ ಅವರೊಂದಿಗೆ ಅಮೆರಿಕ ಸರಕಾರದ ಖರ್ಚು ಕಡಿಮೆ ಮಾಡಿಕೊಳ್ಳಲು ತಾನು ರಚಿಸಿರುವ ಆಔಉಇನ ಸಹನಾವಿಕ ವಿವೇಕ್ ರಾಮಸ್ವಾಮಿ ಅವರ ನಿಲುವನ್ನು ಅತ್ತ ನಿರಾಕರಿಸಲೂ ಆಗದೆ, ಇತ್ತ ನೇರವಾಗಿ ಸ್ವೀಕರಿಸಲೂ ಆಗದೆ ಟ್ರಂಪ್ ಎದೆಯುರಿ ಅನುಭವಿಸುತ್ತಿದ್ದಾರೆ, ಅವರ ಎದೆಯುರಿ ಭಾರತದ ಮಾಹಿತಿ ತಂತ್ರಜ್ಞಾನ (ಐಟಿ) ಕ್ಷೇತ್ರದಲ್ಲಿ ಹೊಟ್ಟೆ ನೋವು ತಂದಿದೆ. ಈ ಎದೆಯುರಿ-ಹೊಟ್ಟೆನೋವುಗಳ ನಡುವಣ ಸಂಬಂಧಗಳನ್ನು ಪರಿಶೀಲಿಸಿದರೆ ನಡೆದಿರುವುದೇನು ಎಂಬುದು ಸ್ಪಷ್ಟವಾದೀತು.

70ರ ದಶಕದ ತನಕವೂ ‘ಹಿಂದೂ ಗ್ರೋತ್ ರೇಟ್’ ಹೊಂದಿದ್ದ ಭಾರತ ಉದಾರೀಕರಣಕ್ಕೆ ತೆರೆದುಕೊಂಡಾಗ, ಅದರ ಉದ್ದೇಶವು ಕೈಗಾರಿಕೆ ಮತ್ತು ಸೇವಾಕ್ಷೇತ್ರಗಳೆರಡರಲ್ಲೂ ಭಾರತ ಮುಂಚೂಣಿಯಲ್ಲಿ ಇರಬೇಕು ಎಂಬುದಾಗಿತ್ತಾದರೂ, ಉದಾರೀಕರಣದ ಲಾಭವನ್ನು ಮೊದಲು ಪಡೆದದ್ದು, ಆಗಷ್ಟೇ ಚಿಗುರುತ್ತಿದ್ದ ‘ಸಾಫ್ಟ್‌ವೇರ್ ಸೇವೋದ್ಯಮ’. ಅಲ್ಲಿಂದಿಲ್ಲಿಯ ತನಕವೂ, ತೆರಿಗೆ ರಜೆ, ಸಬ್ಸಿಡಿ, ಕಡಿಮೆ ಬಡ್ಡಿಯ ಸಾಲ, ಚಿಕ್ಕಾಸು ದರಕ್ಕೆ ನೆಲ... ಹೀಗೆ ಏನೇನು ಸಾಧ್ಯವೋ ಎಲ್ಲ ವಿಧದ ಸರಕಾರಿ ಸವಲತ್ತುಗಳನ್ನೂ ಕಬಳಿಸಿದ ಐಟಿ ಉದ್ಯಮಗಳ ಸೇವೆಗೆ ಸರಕಾರಗಳು ಹೇಗೆ ಕಾಲ ಬುಡದಲ್ಲಿ ನಿಂತಿದ್ದವೆಂಬುದಕ್ಕೆ ಒಂದು ಉದಾಹರಣೆ ಬೇಕೆಂದರೆ: ಆಂಧ್ರ-ಕರ್ನಾಟಕ ಸರಕಾರಗಳ ನಡುವೆ ಐಟಿ ಕಂಪೆನಿಗಳಿಗೆ ಸವಲತ್ತು ಒದಗಿಸಲು ಸ್ಪರ್ಧೆಯೇ ನಡೆದಿತ್ತು. ಆದರೆ, ಈ ಐಟಿ ಕಂಪೆನಿಗಳು, ತಾವು ದೇಶಕ್ಕೆ ‘ವಿದೇಶಿ ವಿನಿಮಯ ಸಂಗ್ರಹ’ಕ್ಕೆ ಸಹಾಯ ನೀಡುವ ಮೂಲಕ ದೊಡ್ಡದೇನೋ ದೇಶಸೇವೆ ಮಾಡುತ್ತೇವೆ ಎಂದು ಪೋಸ್ ಕೊಡುತ್ತಲೇ, ಮಾಡಿದ್ದು ಮಾತ್ರ ‘ಬಾಡೀ ಶಾಪಿಂಗ್’ ಅರ್ಥಾತ್, ಭಾರತದ ಮಿಲ್ಲೆನಿಯಲ್‌ಗಳನ್ನು H-1B ವೀಸಾ ಅವಕಾಶದ ಮೂಲಕ ಅಮೆರಿಕಕ್ಕೆ ಕರೆದೊಯ್ದು, ಅಲ್ಲಿ ಅಮೆರಿಕನ್ ಕಂಪೆನಿಗಳಲ್ಲಿ ಕೂಲಿಗೆ ಇರಿಸಲಾಯಿತು. ದುಡಿದ ಹುಡುಗರಿಗೆ ಚಿಕ್ಕಾಸು ನೀಡಿ, ಈ ಐಟಿ ದೊರೆಗಳು ಭರ್ಜರಿ ಕಾಸು ಮಾಡಿಕೊಂಡು, ದೇಶಕ್ಕೆ ಬುದ್ಧಿವಾದ ಬೋಧನೆಯಲ್ಲಿ ತೊಡಗಿಕೊಂಡರು. ‘ಅಮೆರಿಕಕ್ಕೆ ಸಸ್ತಾ ಕೂಲಿಗಳು; ಭಾರತಕ್ಕೆ ವಿದೇಶಿ ವಿನಿಮಯ’ - ಈ ವ್ಯವಸ್ಥೆಯಿಂದಾದ ಒಟ್ಟು ಲಾಭ. ಅಂದು ಅನಿವಾರ್ಯ ಎಂಬ ಕಾರಣಕ್ಕೆ ಭಾರತ ಸರಕಾರ ಇವರ ಈ ‘ಸೇವೆ’ಯನ್ನೇ ದೊಡ್ಡದಾಗಿ ಬಿಂಬಿಸುತ್ತಾ, ಅವರಿಗೆ ಕೇಳಿದ್ದನ್ನೆಲ್ಲ ಕರುಣಿಸುತ್ತಾ, ತನ್ನ ಕೈಗಾರಿಕಾ ಉತ್ಪಾದನೆ ಕ್ಷೇತ್ರವನ್ನು ಮರೆತೇ ಬಿಟ್ಟಿತು.

ಬರಬರುತ್ತಾ, ಈ H-1B ವೀಸಾದ ಪರಿಸ್ಥಿತಿ ಎಲ್ಲಿಗೆ ಮುಟ್ಟಿದೆ ಎಂದರೆ, ಯುಎಸ್ ಸಿಟಿಜನ್‌ಷಿಪ್ ಆ್ಯಂಡ್ ಇಮಿಗ್ರೇಷನ್ ಸರ್ವೀಸಸ್ (USCIS) ಡೇಟಾಗಳ ಅನ್ವಯ, 2015ರಿಂದೀಚೆಗೆ, ಜಗತ್ತಿನಾದ್ಯಂತ ಆ ವೀಸಾ ಮೂಲಕ ತೆರಳಿ, ಅಮೆರಿಕದಲ್ಲಿ ಕೆಲಸ ಮಾಡುತ್ತಿರುವವರಲ್ಲಿ ಶೇ. 70ಕ್ಕೂ ಹೆಚ್ಚು ಮಂದಿ ಭಾರತೀಯ ಐಟಿ ಕೂಲಿಗಳು. ಈ ವ್ಯವಸ್ಥೆಯ ಗಾತ್ರದ ಸಣ್ಣ ಉದಾಹರಣೆ ಬೇಕೆಂದರೆ, 2023ರಲ್ಲಿ ಅಮೆರಿಕ ನೀಡಿದ 2,65,777 H-1B ವೀಸಾಗಳ ಪೈಕಿ 2,06,591 ವೀಸಾಗಳನ್ನು ಪಡೆದವರು ಭಾರತೀಯರು!

ಡೊನಾಲ್ಡ್ ಟ್ರಂಪ್ ಅವರ ಎದೆಯುರಿ

ತನ್ನ ಮೊದಲ ಅವಧಿಯ ಆರಂಭದಲ್ಲೇ, (2017 ಎಪ್ರಿಲ್ 18) ಒಂದು ಅಧ್ಯಕ್ಷೀಯ ಆದೇಶ ಹೊರಡಿಸಿದ್ದ ಡೊನಾಲ್ಡ್ ಟ್ರಂಪ್ ‘Be American; Hire American’ ಎಂದು ಘೋಷಿಸಿದ್ದರು. H-1B ವೀಸಾ ವ್ಯವಸ್ಥೆಯನ್ನು ಮರುಪರಿಶೀಲಿಸಲಾಗುವುದು ಎಂದು ಪ್ರಕಟಿಸಿದ್ದರು. ಈ H-1B ವೀಸಾ ವ್ಯವಸ್ಥೆಯ ಮೂಲಕ ಅಲ್ಲಿನ ಕಂಪೆನಿಗಳು ಅಮೆರಿಕನ್ನರ ಉದ್ಯೋಗಗಳನ್ನು ಕಿತ್ತುಕೊಂಡು ‘ಸಸ್ತಾ ಕೂಲಿಗೆ ಬರುವ’ ವಿದೇಶಿಯರಿಗೆ ಕೊಡುತ್ತಿವೆ ಎಂಬ ಸಂಕಟ ಅಲ್ಲಿ ಲಗಾಯ್ತಿನಿಂದಲೂ ಇದೆ. ಈ ಸಂಕಟವು ಡೊನಾಲ್ಡ್ ಟ್ರಂಪ್ ಅವರ ಮತಬ್ಯಾಂಕ್ ಕೂಡ ಹೌದು.

ಅದೇ ಮಂತ್ರವನ್ನು (Make America Great Again-MAGA) ತನ್ನ ಈ ಎರಡನೇ ಅವಧಿಯ ಚುನಾವಣಾ ಪ್ರಚಾರದ ಉದ್ದಕ್ಕೂ ಪಠಿಸಿದ್ದ ಟ್ರಂಪ್ ಅವರಿಗೆ, ಈಗ ಗೆದ್ದ ಬಳಿಕ ಅಡಕತ್ತರಿಗೆ ಸಿಲುಕಿಕೊಂಡಂತಾಗಿದೆ. ಅವರ ಚುನಾವಣೆಗೆ ದೊಡ್ಡ ಪ್ರಮಾಣದಲ್ಲಿ ಖರ್ಚು ಮಾಡಿರುವ ಉದ್ಯಮಿ ಎಲಾನ್ ಮಸ್ಕ್ ಅವರ ಕಂಪೆನಿಗಳು ಕೂಡ H-1B ವೀಸಾದ ಫಲಾನುಭವಿಗಳು. ಅಮೆರಿಕ ಸರಕಾರದ ಖರ್ಚು ಕಡಿಮೆ ಮಾಡುವುದಕ್ಕೆ ಸಲಹೆ ನೀಡಲು Department of Government Efficiency (DOGE) ಎಂಬ ವ್ಯವಸ್ಥೆಯನ್ನು ಹುಟ್ಟುಹಾಕಿರುವ ಟ್ರಂಪ್, ಅದಕ್ಕೆ ಸ್ವತಃ ಗೆಳೆಯ ಮಸ್ಕ್ ಅವರನ್ನೂ, ಅವರ ಜೊತೆ ಮತ್ತೊಬ್ಬ ಭಾರತೀಯ ಮೂಲದ ವಿವೇಕ್ ರಾಮಸ್ವಾಮಿ ಅವರನ್ನೂ ಮುಖ್ಯಸ್ಥರಾಗಿ ನೇಮಿಸಿದ್ದಾರೆ. ಸಹಜವಾಗಿಯೇ ಅವರಿಬ್ಬರು, H-1B ವೀಸಾಗಳು ಅಮೆರಿಕಕ್ಕೆ ಸಸ್ತಾ ಕೂಲಿಗಳನ್ನು ಒದಗಿಸುವುದರಿಂದ, ಅದರ ಪರವಾಗಿ ನಿಲುವು ತಳೆದಿದ್ದಾರೆ. ಇದನ್ನು ಅತ್ತ ಒಪ್ಪಲೂ ಆಗದೆ, ಇತ್ತ ತಿರಸ್ಕರಿಸಲೂ ಆಗದೆ ಟ್ರಂಪ್ ಎದೆಯುರಿ ಅನುಭವಿಸುತ್ತಿದ್ದಾರೆ.

ಭಾರತ ತಪ್ಪಿಬಿದ್ದಿರುವುದೆಲ್ಲಿ?

ಭಾರತ ಸರಕಾರದ ‘ಬಿಟ್ಟಿ ಭಾಗ್ಯ’ಗಳ ನೆರಳಲ್ಲಿ ಕೈಹಿಡಿದು ನಡೆಯುವುದು ಜೀವನಪೂರ್ತಿ ಅಭ್ಯಾಸ ಆಗಿರುವ ಐಟಿ ಕಂಪೆನಿಗಳಿಗೆ ಈಗ, H-1B ವೀಸಾ ಪದ್ಧತಿಯಲ್ಲಿ ಬದಲಾವಣೆಗಳಾಗಬಹುದೆಂಬ ಭಯ ಹತ್ತಿದೆ. ಈಗಾಗಲೇ ಸ್ಪರ್ಧೆಯ ಕಾರಣದಿಂದಾಗಿ ಲಾಭದ ಮಾರ್ಜಿನ್ ಬಹುಮಟ್ಟಿಗೆ ಕಳೆದುಕೊಂಡು ಏದುಸಿರು ಬಿಡುತ್ತಿರುವ ಐಟಿ ರಂಗಕ್ಕೆ ಈ ಬೆಳವಣಿಗೆ ಹೊಟ್ಟೆನೋವು ತಂದಿದೆ. ನಡು ವಯಸ್ಸಿಗೆ ಬಂದರೂ ಕೈಹಿಡಿದೇ ನಡೆಯುವುದು ಅಭ್ಯಾಸ ಆಗಿಬಿಟ್ಟಿರುವ ಐಟಿ ರಂಗ, ಈಗ ಭಾರತ ಸರಕಾರದತ್ತ ಆಸೆಕಣ್ಣುಗಳಿಂದ ನೋಡುತ್ತಿದೆ. ತನ್ನ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿರುವ ಟೆಕ್ಕಿಗಳನ್ನು ಬಿಡಲಾರದ ಸಂಕಷ್ಟಕ್ಕೆ ಸಿಲುಕಿರುವ ಭಾರತ ಸರಕಾರವು: ಈ ಕುರಿತು ತಮ್ಮ ಸರಕಾರ ಅಮೆರಿಕ ಸರಕಾರದ ಜೊತೆ ದ್ವಿಪಕ್ಷೀಯ ಮಾತುಕತೆಗಳಲ್ಲಿ ನಿರತವಾಗಿದೆ. ಪ್ರಧಾನಿ ಮೋದಿಯವರು 2023 ಜೂನ್ ತಿಂಗಳಿನಲ್ಲಿ ಅಮೆರಿಕಕ್ಕೆ ಭೇಟಿ ನೀಡಿದಾಗಲೂ ಈ ಬಗ್ಗೆ ಚರ್ಚಿಸಿದ್ದಾರೆ, ಐಟಿ ಉದ್ದಿಮೆಯ ಹಿತಾಸಕ್ತಿಗಳನ್ನು ಕಾಪಾಡಲು ಪ್ರಯತ್ನಿಸಲಾಗುವುದು-ಎಂದು ಸಂಸತ್ತಿನಲ್ಲಿ ಹೇಳಿಕೆ ನೀಡಿದೆ (ಲೋಕಸಭೆಯ ಚುಕ್ಕೆ ಗುರುತಿಲ್ಲದ ಪ್ರಶ್ನೆ 770, ದಿನಾಂಕ 26-07-2024).

‘ಡಿಜಿಟಲ್ ಇಂಡಿಯಾ’ ಕಾರ್ಯಕ್ರಮವನ್ನು 2015ರಲ್ಲಿ ಪ್ರಕಟಿಸಿರುವ ಭಾರತ ಸರಕಾರ, ಮೇಕ್ ಇನ್ ಇಂಡಿಯಾ ಹೆಸರಿನಲ್ಲಿ ಸ್ಕ್ರೂ ಡ್ರೈವರ್ ತಂತ್ರಜ್ಞಾನ ಬಳಸಿಕೊಂಡು, ಆಮದು ಮಾಡಿಕೊಂಡ ಬಿಡಿಭಾಗಗಳನ್ನು ಜೋಡಿಸಿ ರಫ್ತು ಮಾಡುವ ‘ರೀ-ಎಕ್ಸ್‌ಪೋರ್ಟರ್’ ಆಗಿ ಸೋಮಾರಿತನ ಬೆಳೆಸಿಕೊಳ್ಳುತ್ತಿದೆ. ಭಾರತಕ್ಕೆ ಇಂದು ನಿಜಕ್ಕೂ ಬೇಕಿರುವುದು ಭಾರತದಲ್ಲೇ ಉತ್ಪಾದನೆಗಳನ್ನು ಮಾಡಲು ಸಾಧ್ಯವಾಗುವ ‘ಮೇಕ್ ಪ್ರಾಡಕ್ಟ್ಸ್ ಇನ್ ಇಂಡಿಯಾ’ ಯೋಜನೆ. ತನ್ನದೇ ಸಂಶೋಧಿತ ಬೌದ್ಧಿಕ ಆಸ್ತಿ (Intellectual properties) ಮತ್ತು ತಂತ್ರಜ್ಞಾನ (IP&T)ಹೊಂದಿರದೆ, ಇಂಟೆಲ್, ಸ್ಯಾಮ್‌ಸಂಗ್, ಆ್ಯಪಲ್, ಮೆಟಾ, ಮೈಕ್ರೋಸಾಫ್ಟ್ ಇತ್ಯಾದಿ ಜಾಗತಿಕ ಟೆಕ್ ದೈತ್ಯರ ಎದುರು ಸ್ಪರ್ಧೆಗೆ ಇಳಿಯುವುದು ಸಾಧ್ಯವೇ ಇಲ್ಲ. ಹಾಗಾಗಿ, H-1B ವೀಸಾದ ಸವಾಲನ್ನೇ ಅವಕಾಶವಾಗಿ ಪರಿವರ್ತಿಸಿಕೊಂಡು, ವಿದೇಶಗಳಲ್ಲಿ ಬಿಟ್ಟಿ ಕೂಲಿ ಮಾಡಿಕೊಂಡಿರುವ ಭಾರತೀಯ ಟೆಕ್ ಪ್ರತಿಭೆಗಳನ್ನು ಭಾರತಕ್ಕೆ ವಾಪಸ್ ಕರೆಸಿಕೊಂಡು, ಇಲ್ಲಿಯೇ ‘ಐಟಿ ಉತ್ಪನ್ನಗಳ ಉತ್ಪಾದನೆ’ಗೆ ಪ್ರೋತ್ಸಾಹ ನೀಡಬೇಕು.

ಇಂದು ವ್ಯಾಪಕವಾಗಿ ಚರ್ಚೆ ಆಗುತ್ತಿರುವ ಮಧ್ಯಮ ಆದಾಯದವರ ಪಂಜರ (middle income trap)ದಿಂದ ಹೊರಬರಲು ಇದೂ ಒಂದು ಹಾದಿ. ಈಗ ನಾವು ಹೇಳುತ್ತಿರುವ ಡೆಮೊಗ್ರಾಫಿಕ್ ಡಿವೈಡೆಂಡ್ (ಭಾರತದಲ್ಲಿರುವ ಅಪಾರ ಮಾನವ ಸಂಪನ್ಮೂಲ) ಮುದಿತನದತ್ತ ತಿರುಗುವ ಮುನ್ನ ಇದು ಆಗದೇ ಹೋದರೆ, ಮುಂದೆ ಎಂದೂ ಸಾಧ್ಯವಾಗದು. 70 ಗಂಟೆ ದುಡಿದು ನಮಗೆ ಕಾಸು ಗಳಿಸಿಕೊಡಿ ಎಂದು ಅಲವತ್ತುಕೊಳ್ಳುವ ಮುದಿ ಬಾಡೀ ಶಾಪಿಂಗ್ ಕಂಪೆನಿಗಳನ್ನು ಬದಿಗೆ ಸರಿಸಿ, ಮುಂದಿನ ಐದು ವರ್ಷಗಳಲ್ಲಿ ಕನಿಷ್ಠ ಒಂದೆರಡು ಜಾಗತಿಕ ದರ್ಜೆಯ ಐಟಿ ದೈತ್ಯ ಕಂಪೆನಿಗಳನ್ನು ಸ್ಥಾಪಿಸುವುದು ಭಾರತ ಸರಕಾರದ ಗುರಿ ಆಗಬೇಕು.

share
ರಾಜಾರಾಂ ತಲ್ಲೂರು
ರಾಜಾರಾಂ ತಲ್ಲೂರು
Next Story
X