Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಬಹುವಚನ
  5. ಸಂವಿಧಾನ ಉಳಿದಿರುವುದು, ಉಳಿಯಬೇಕಿರುವುದು...

ಸಂವಿಧಾನ ಉಳಿದಿರುವುದು, ಉಳಿಯಬೇಕಿರುವುದು ಜನರಿಂದ

ಋತಋತ21 Jun 2024 10:28 AM IST
share
ಸಂವಿಧಾನ ಉಳಿದಿರುವುದು, ಉಳಿಯಬೇಕಿರುವುದು ಜನರಿಂದ
ಮತದಾರರು ಪ್ರಬಲ ಸಂರಕ್ಷಕನ ಪರಿಕಲ್ಪನೆಯನ್ನು ತಿರಸ್ಕರಿಸಿದ್ದಾರೆ; ಆದರೆ, ಬಹುತೇಕರು ಜಾತಿ-ಧರ್ಮವನ್ನು ಮೀರಿ ಮತ ಚಲಾಯಿಸಿಲ್ಲ. ಸಂವಿಧಾನಕ್ಕೆ ಸಿಕ್ಕ ಪ್ರಾಮುಖ್ಯತೆಯು ಪ್ರಜಾಸತ್ತಾತ್ಮಕ ಪ್ರವೃತ್ತಿಯನ್ನು ಬಲ ಪಡಿಸಲು ನೆರವಾಗಲಿದೆ. ಆದರೆ, ರಾಜಕೀಯ ಕೇವಲ ಅಮೂರ್ತ ವಿಚಾರಗಳಿಂದ ಬೆಳೆಯುವುದಿಲ್ಲ. ವಾಸ್ತವಿಕ ಸಮಸ್ಯೆಗಳ ಬಗ್ಗೆ ಜನರನ್ನು ಸಜ್ಜುಗೊಳಿಸಬೇಕು. ಇದನ್ನು ಮಾಡಬೇಕಿರುವುದು ನಾಗರಿಕ ಸಮಾಜ ಮತ್ತು ಅವು ಕಟ್ಟುವ ಜನಾಂದೋಲನಗಳು. ನಿತೀಶ್ ಇಲ್ಲವೇ ನಾಯ್ಡು ಅಥವಾ ಚಿರಾಗ್ ಪಾಸ್ವಾನ್ ಅವರಿಂದ ಸಂವಿಧಾನದ ರಕ್ಷಣೆ ಅಗುತ್ತದೆ ಎನ್ನುವುದು ಭ್ರಮೆ.

ಸಾಮಾಜಿಕ ಮಾಧ್ಯಮಗಳಲ್ಲಿ ಒಕ್ಕೂಟ ಸರಕಾರವನ್ನು ಮೋದಿ 3.0 ಎಂದು ಕರೆಯಬಾರದು: ಬದಲಾಗಿ ಎನ್‌ಡಿಎ 3.0 ಎಂದು ಕರೆಯಬೇಕು ಎಂಬ ಮಾತುಗಳು ಸುಳಿದಾಡಿದ್ದವು. ಬಿಜೆಪಿ ಬಹುಮತ ಗಳಿಸಿಲ್ಲ; ಬದಲಾಗಿ ಬಹುಮತಕ್ಕಾಗಿ ಜೆಡಿ(ಯು) ಹಾಗೂ ತೆಲುಗು ದೇಶಂ ಪಕ್ಷವನ್ನು ಅವಲಂಬಿಸಿದೆ. ಮಿತ್ರ ಪಕ್ಷಗಳ ನೆರವಿಲ್ಲದೆ ಕಾನೂನು ರಚನೆ, ಕಾರ್ಯನೀತಿಗಳು-ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು ಸಾಧ್ಯವಾಗದು ಎಂಬುದು ಆ ವಾದದ ತಿರುಳು. ಆದರೆ, ಸಂಪುಟ ರಚನೆ ಮೂಲಕ ಈ ಆಶಾವಾದ ಒಂದು ಮಟ್ಟಕ್ಕೆ ಛಿದ್ರವಾಗಿದೆ. ಜನ ಮತ ನೀಡಿದ್ದು ಬದಲಾವಣೆಗೆ: ಬದಲಾಗಿ, ಮೋದಿ 2.0 ತಂಡ ಅಂತೆಯೇ ಉಳಿದುಕೊಂಡಿದೆ. ಬಿಜೆಪಿ ಗೃಹ, ರಕ್ಷಣೆ, ಹಣಕಾಸು, ವಿದೇಶಾಂಗ, ರಸ್ತೆ ಸಾರಿಗೆ ಮತ್ತು ಹೆದ್ದಾರಿ ಖಾತೆಗಳನ್ನು ಮಾತ್ರವಲ್ಲದೆ, ಅದೇ ಸಚಿವರನ್ನೂ ಉಳಿಸಿಕೊಂಡಿದೆ. ಸರಕಾರ ಅಥವಾ ಪ್ರಧಾನಿ ಯಾರೇ ಇರಲಿ, ವಿದೇಶಾಂಗ ಮತ್ತು ರಕ್ಷಣೆ ಖಾತೆಯಲ್ಲಿ ಕಾರ್ಯನೀತಿ ಬದಲಾವಣೆಗೆ ಹೆಚ್ಚು ಅವಕಾಶವಿರುವುದಿಲ್ಲ. ಆದರೆ, ಈ ಮಾತು ಗೃಹ ಮತ್ತು ವಿತ್ತ ಖಾತೆಗೆ ಅನ್ವಯಿಸುವುದಿಲ್ಲ. ಮೋದಿ 2.0 ಸರಕಾರದಲ್ಲಿ ಅತ್ಯಂತ ಅಧಿಕ ಅಧಿಕಾರ ದುರುಪಯೋಗ ಆಗಿರುವುದು ಈ ಖಾತೆಗಳಲ್ಲಿ. ಗೃಹ ಸಚಿವಾಲಯವು ಸಿಬಿಐ,ಈ.ಡಿ., ಐಟಿ ಇಲಾಖೆಯನ್ನು ದುರುಪಯೋಗಪಡಿಸಿಕೊಂಡು, ಪ್ರತಿಪಕ್ಷಗಳು ಹಾಗೂ ಧ್ವನಿಯೆತ್ತಿದವರನ್ನು ಹಣಿದಿದೆ.

ಮಣಿಪುರದಲ್ಲಿ ಒಂದು ವರ್ಷ ಕಾಲ ನಿರಂತರ ಗಲಭೆ ನಡೆದರೂ, ಯಾರೂ ತಲೆ ಕೆಡಿಸಿಕೊಳ್ಳಲಿಲ್ಲ. ಪ್ರಧಾನಿ ಮತ್ತು ಕೇಂದ್ರ ಸಚಿವರ ಹೇಳಿಕೆಗಳು, ನಿರ್ಧಾರ ಹಾಗೂ ಕ್ರಿಯೆಗಳು ದ್ವೇಷ ಹಾಗೂ ಧ್ರುವೀಕರಣಕ್ಕೆ ಸೂಕ್ತ ಸನ್ನಿವೇಶವನ್ನು ಸೃಷ್ಟಿಸಿದವು. ಅಗ್ನಿವೀರ್ ಯೋಜನೆ ಬಗ್ಗೆ ತೀವ್ರ ಅಸಮಾಧಾನ ಇದ್ದಿತ್ತು. ಈ ಎಲ್ಲವೂ ಬದಲಾಗಬೇಕಿತ್ತು; ಬದಲಿಗೆ, ಅದೇ ಸಚಿವರನ್ನು ಅವವೇ ಖಾತೆಗಳಲ್ಲಿ ಉಳಿಸಿಕೊಳ್ಳಲಾಗಿದೆ. ಟಿಡಿಪಿ ಮತ್ತು ಜೆಡಿ(ಯು)ಗೆ ಪ್ರಮುಖ ಅನ್ನಬಹುದಾದ ಖಾತೆಗಳು ಸಿಕ್ಕಿಲ್ಲ. ಜೊತೆಗೆ, ಮೈತ್ರಿ ಸರಕಾರದಲ್ಲಿ ಒಂದು ವೇಳೆ ಸಂಸದರ ಖರೀದಿ ಇಲ್ಲವೇ ಪಕ್ಷಾಂತರ ನಡೆದಲ್ಲಿ, ನಿರ್ಣಾಯಕ ನಿರ್ಧಾರ ತೆಗೆದುಕೊಳ್ಳುವ ಸಭಾಧ್ಯಕ್ಷರ ಸ್ಥಾನ ಕೂಡ ಬಿಜೆಪಿ ಪಾಲಾಗುವ ಸಾಧ್ಯತೆ ಇದೆ. ಈ ಸ್ಥಾನಕ್ಕೆ ಟಿಡಿಪಿ ಒತ್ತಾಯಿಸುತ್ತಿದೆ ಎಂದು ವ್ಯಾಪಕವಾಗಿ ವರದಿಯಾಗಿದೆ. ಆದರೆ, ಆಂಧ್ರಪ್ರದೇಶ ಬಿಜೆಪಿ ಅಧ್ಯಕ್ಷೆ ಡಿ. ಪುರಂದೇಶ್ವರಿ(ಇವರು ಚಂದ್ರಬಾಬು ನಾಯ್ಡು ಅವರ ಸೊಸೆ) ಇಲ್ಲವೇ ಚುನಾವಣೆಗೆ ಮುನ್ನ ಮಾರ್ಚ್ 28, 2024ರಲ್ಲಿ ಬಿಜೆಡಿ ಸೇರಿದ ಒಡಿಶಾದ ಭರ್ತೃಹರಿ ಮಹತಾಬ್(ಕಟಕ್ ಲೋಕಸಭೆ ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ) ಅವರು ಸ್ಪೀಕರ್ ಆಗಿ ಆಯ್ಕೆಯಾಗುವ ಸಾಧ್ಯತೆಯಿದೆ. ಇಲ್ಲಿ ಕೂಡ ಟಿಡಿಪಿ ಇಲ್ಲವೇ ಜೆಡಿಯುಗೆ ಪ್ರಯೋಜನ ಆಗುವ ಸಾಧ್ಯತೆಯಿಲ್ಲ. ಸಂಪುಟದ ಕೆಳ ಹಂತದಲ್ಲಿ ಮಾತ್ರ ಮೈತ್ರಿ ಪಕ್ಷಗಳಿಗೆ ಸ್ಥಳಾವಕಾಶ ಮಾಡಿಕೊಡಲು, ಒಂದೆರಡು ಬದಲಾವಣೆ ಮಾಡಲಾಗಿದೆ.

ನಿರಂತರತೆ ಮತ್ತು ಸ್ಥಿರತೆಯನ್ನು ಕಾಯ್ದುಕೊಳ್ಳಲು ಮೋದಿ 2.0 ಸಂಪುಟವನ್ನೇ ಉಳಿಸಿಕೊಳ್ಳಲಾಗಿದೆ ಎಂದು ಸಮರ್ಥಿಸಿಕೊಳ್ಳಬಹುದು. ಏಕನಾಥ ಶಿಂದೆ ಅವರ ಶಿವಸೇನೆ(7 ಸಂಸದರಿದ್ದಾರೆ)ಗೆ ಒಂದು ಕಿರಿಯ ಸಚಿವ ಸ್ಥಾನ ನೀಡಿರುವುದರಿಂದ ಪಕ್ಷ ಅಸಮಾಧಾನಗೊಂಡಿದೆ. ಅಜಿತ್ ಪವಾರ್ ಅವರ ಎನ್‌ಸಿಪಿ ಹೆಚ್ಚಿನ ಸಾಧನೆ ಮಾಡದಿದ್ದರೂ, ಆ ಪಕ್ಷ ಕೂಡ ಖುಷಿಯಾಗಿಲ್ಲ. ರಾಜ್ಯಗಳ ವಿಧಾನಸಭೆ ನಂತರ ಇಲ್ಲವೇ ಇನ್ನಿತರ ಪರಿಗಣನೆಗಳಿಂದ ಸಂಪುಟದಲ್ಲಿ ಕೆಲವು ಬದಲಾವಣೆಯನ್ನು ನಿರೀಕ್ಷಿಸಬಹುದು. ಆದರೆ, ಸಂಪುಟದಲ್ಲಿ ಈಗಾಗಲೇ 72 ಸಚಿವರು ಇದ್ದಾರೆ ಎಂಬುದನ್ನು ಮರೆಯಬಾರದು.

ಬದಲಾವಣೆಯ ನಿರೀಕ್ಷೆ ಬೇಡ:

ಮೋದಿ 3.0 ಸರಕಾರದಲ್ಲಿ ಪೋಷಕ ಪಾತ್ರ ವಹಿಸಿರುವ ನಿತೀಶ್ ಕುಮಾರ್ ಮತ್ತು ಚಂದ್ರಬಾಬು ನಾಯ್ಡು ಇಬ್ಬರೂ ಅನುಭವಿ, ವೃತ್ತಿಪರ ರಾಜಕಾರಣಿಗಳು. ಅವರು ತಮ್ಮ ಸ್ವಂತ ಲಾಭ ನೋಡಿಕೊಳ್ಳುತ್ತಾರೆಯೇ ಹೊರತು, ಪ್ರಜಾಪ್ರಭುತ್ವದ ಮಾನದಂಡಗಳನ್ನು ಎತ್ತಿಹಿಡಿಯುತ್ತಾರೆ; ಉದಾರವಾದಿ ಪ್ರಜಾಪ್ರಭುತ್ವವನ್ನು ಉಳಿಸಲು ಕೆಲಸ ಮಾಡುತ್ತಾರೆ ಎಂದು ಆಶಿಸಬಾರದು. ನಾಯ್ಡು ಮತ್ತು ನಿತೀಶ್ ಯಾವತ್ತೂ ಜಾತ್ಯತೀತತೆ ಇಲ್ಲವೇ ಸಂವಿಧಾನವನ್ನು ಉಳಿಸಲು ಕೆಲಸ ಮಾಡಿಲ್ಲ. ಛತ್ತೀಸ್‌ಗಡದಲ್ಲಿ ಟ್ರಕ್‌ನಲ್ಲಿ ದನಗಳನ್ನು ಸಾಗಿಸುತ್ತಿದ್ದ ಇಬ್ಬರನ್ನು ಹತ್ಯೆ ಮಾಡಿದ ಬಗ್ಗೆ ಅವರಿಬ್ಬರು ಏನೂ ಹೇಳಲಿಲ್ಲ. ಕೇಜ್ರಿವಾಲ್, ಹೇಮಂತ್ ಸೊರೇನ್ ಸೇರಿದಂತೆ ಪ್ರತಿಪಕ್ಷಗಳ ಮುಖ್ಯಮಂತ್ರಿಗಳು, ಸಚಿವರನ್ನು ಬಂಧಿಸಿದಾಗ ಅಥವಾ ಕೇಂದ್ರೀಯ ಸಂಸ್ಥೆಗಳ ದುರುಪಯೋಗದ ವಿರುದ್ಧ ಅವರು ಸಾರ್ವಜನಿಕವಾಗಿ ಏನೂ ಮಾತನಾಡಿಲ್ಲ. ಮೋದಿಯವರು ಕತ್ತು ಹಿಸುಕಿರುವ ಉದಾರವಾದಿ ಆಕಾಂಕ್ಷೆಗಳನ್ನು ಉಳಿಸಿಕೊಳ್ಳಲು ಬೇರೆ ದಾರಿ ಕಂಡುಕೊಂಡಿಲ್ಲ.

2002ರ ಗುಜರಾತ್ ಗಲಭೆ ಸಮಯದಲ್ಲಿ ವಾಜಪೇಯಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ(ಎನ್‌ಡಿಎ) ಸರಕಾರವನ್ನು ತ್ಯಜಿಸಿದ ರಾಮ್‌ವಿಲಾಸ್ ಪಾಸ್ವಾನ್, ತಮ್ಮ ಪ್ರತಿಭಟನೆಯನ್ನು ದಾಖಲಿಸಿದ್ದರು. ಆನಂತರ ಅವರ ಪಕ್ಷ ಮತ್ತೆ ಎನ್‌ಡಿಎ ತೆಕ್ಕೆಗೆ ಬಂದಿದೆ. ನಿತೀಶ್ ಕುಮಾರ್ ಕೂಡ ಪಾಸ್ವಾನ್ ಅವರಂತೆಯೇ ಜನತಾ ಪರಿವಾರದಲ್ಲಿ ನಾಯಕರಾಗಿ ವಿಕಸನಗೊಂಡವರು. ನಿತೀಶ್ ಕೂಡ ವಾಜಪೇಯಿ ಸಂಪುಟದಲ್ಲಿ ರೈಲ್ವೆ ಸೇರಿದಂತೆ ವಿವಿಧ ಸಚಿವಾಲಯಗಳ ಕ್ಯಾಬಿನೆಟ್ ಸಚಿವರಾಗಿದ್ದರು. ಆದರೆ, ಅವರು ತಮ್ಮ ತವರು ರಾಜ್ಯವಾದ ಬಿಹಾರದಲ್ಲಿ ಕೋಮುಸೌಹಾರ್ದವನ್ನು ಕಾಪಾಡುವ ಬಗ್ಗೆ ತಲೆಕೆಡಿಸಿಕೊಂಡರೇ ಹೊರತು ಗುಜರಾತಿನಲ್ಲಿ ಹತ್ಯಾಕಾಂಡವನ್ನು ಪ್ರತಿಭಟಿಸಿ, ಸರಕಾರದಿಂದ ಹೊರಬರಲಿಲ್ಲ.

ಚಂದ್ರಬಾಬು ನಾಯ್ಡು ಅವರದ್ದು ಕೂಡ ಇದೇ ಚರಿತ್ರೆ. ಅವರು 1996-98ರಲ್ಲಿ ಎರಡು ವರ್ಷ ಕಾಲ ಕಾಂಗ್ರೆಸೇತರ, ಬಿಜೆಪಿಯೇತರ ಪಕ್ಷಗಳ ಸಂಯುಕ್ತ ರಂಗದ ಸಂಚಾಲಕರಾಗಿದ್ದರು. ಅವರ ಪಕ್ಷ ವಾಜಪೇಯಿ ನೇತೃತ್ವದ ಸರಕಾರಕ್ಕೆ ಸೇರದಿದ್ದರೂ, 1998ರಿಂದ 2004 ರವರೆಗೆ ಎನ್‌ಡಿಎಯೊಂದಿಗೆ ಮೈತ್ರಿ ಮಾಡಿಕೊಂಡಿತು. 2019ರ ವಿಧಾನಸಭೆ ಚುನಾವಣೆಯಲ್ಲಿ ಸೋಲಿನ ಬಳಿಕ ಜನಸೇವಾ ಮುಖ್ಯಸ್ಥ ಪವನ್ ಕಲ್ಯಾಣ್ ಜೊತೆ ಸೇರಿ ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಂಡರು. ವಿಧಾನಸಭೆಯಲ್ಲಿ ಬಹುಮತ ಗಳಿಸಿ ಮುಖ್ಯಮಂತ್ರಿಯಾದರು ಹಾಗೂ ಕೇಂದ್ರ ಸರಕಾರದ ಭಾಗವಾದರು.

ದೇಶದ ಬಹುತೇಕ ಪಕ್ಷಗಳು ಒಂದಲ್ಲ ಒಂದು ಘಟ್ಟದಲ್ಲಿ ಬಿಜೆಪಿಯೊಂದಿಗೆ ನಿಕಟವಾಗಿ ಕೆಲಸ ಮಾಡಿವೆ ಎಂಬುದು ವಾಸ್ತವ. ತಮಿಳುನಾಡಿನ ದ್ರಾವಿಡ ಮುನ್ನೇತ್ರ ಕಳಗವು ವಾಜಪೇಯಿ ಸರಕಾರದ ಭಾಗವಾಗಿತ್ತು. ಪಕ್ಷದ ನಾಯಕರಾದ ಮುರಸೋಳಿ ಮಾರನ್ ಅವರು ವಾಣಿಜ್ಯ ಸಚಿವರಾಗಿ ವಿಶ್ವ ವ್ಯಾಪಾರ ಸಂಸ್ಥೆಯಲ್ಲಿ ಧ್ವನಿಯೆತ್ತಿ ಮಾತನ್ನಾಡಿದ್ದರು. ವಾಜಪೇಯಿ ನೇತೃತ್ವದ 1998ರ ಎನ್‌ಡಿಎ ಸರಕಾರದಲ್ಲಿದ್ದ ಎಐಎಡಿಎಂಕೆ, ಕಳೆದ 10 ವರ್ಷದಿಂದ ಬಿಜೆಪಿಯ ತಾತ್ಕಾಲಿಕ ಪಾಲುದಾರನಾಗಿತ್ತು. ಆನಂತರ ಹೊರಬಂದಿತು.

ತೃಣಮೂಲ ಕಾಂಗ್ರೆಸ್ ಕೂಡ ವಾಜಪೇಯಿ ಸರಕಾರದ ಭಾಗವಾಗಿದ್ದು, ಮಮತಾ ಬ್ಯಾನರ್ಜಿ ಸಚಿವೆಯಾಗಿದ್ದರು. ರಾಮ ಜನ್ಮಭೂಮಿ ಅಭಿಯಾನವು ಉತ್ತರ ಭಾರತದಾದ್ಯಂತ ಹರಡಿ, ಕೋಮುಗಲಭೆಯನ್ನು ಹುಟ್ಟು ಹಾಕಿತು; ಇದರಿಂದ ಬಿಜೆಪಿ ರಾಜಕೀಯ ಶಕ್ತಿಯಾಗಿ ಬೆಳೆಯಿತು. ಹೀಗಿದ್ದರೂ, ಎಡ ಪಕ್ಷಗಳು ಬಿಜೆಪಿಯೊಂದಿಗೆ ವಿ.ಪಿ. ಸಿಂಗ್ ಸರಕಾರವನ್ನು ಬೆಂಬಲಿಸಿದವು. ಉತ್ತರ ಪ್ರದೇಶದಲ್ಲಿ ಬಹುಜನ ಸಮಾಜ ಪಕ್ಷವು ಬಿಜೆಪಿ ಜತೆ ಸೇರಿ ಸರಕಾರ ರಚಿಸಿತ್ತು. ಆನಂತರ ಹಾವು ಏಣಿಯಾಟದಲ್ಲಿ ಸಮಾಜವಾದಿ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡಿತು. 2024ರಲ್ಲಿ ಉತ್ತರಪ್ರದೇಶದ ಎಲ್ಲ ಸ್ಥಾನಗಳಲ್ಲಿ ಸ್ಪರ್ಧಿಸಿ ಶೂನ್ಯ ಸಂಪಾದನೆ ಮಾಡಿತು. ಆದರೆ, ಮತಗಳನ್ನು ವಿಭಜಿಸುವ ಮೂಲಕ ಬಿಜೆಪಿಗೆ ನೆರವಾಯಿತು. ಒಡಿಶಾದ ಬಿಜು ಜನತಾ ದಳ(ಬಿಜೆಡಿ) ವಾಜಪೇಯಿ ನೇತೃತ್ವದ ಎನ್‌ಡಿಎ ಭಾಗವಾಗಿತ್ತು ಮತ್ತು ಒಡಿಶಾದಲ್ಲಿ ಕಳೆದ 10 ವರ್ಷದಿಂದ ಬಿಜೆಪಿಯ ಮಿತ್ರ ಪಕ್ಷವಾಗಿತ್ತು. ಆದರೆ, 2024ರ ವಿಧಾನಸಭೆ ಚುನಾವಣೆಯಲ್ಲಿ ನವೀನ್ ಪಟ್ನಾಯಕ್ ಅವರನ್ನು 24 ವರ್ಷಗಳ ಬಳಿಕ ಪದಚ್ಯುತಗೊಳಿಸಿ, ಅಧಿಕಾರ ಹಿಡಿದಿದೆ. ಪಟ್ನಾಯಕ್ ಅವರ ಜಾಗಕ್ಕೆ ಬಂದಿರುವವರು ಪಾದ್ರಿ ಗ್ರಹಾಂ ಸ್ಟೇನ್ ಹತ್ಯೆ ಪ್ರಕರಣದ ಆರೋಪಿ ಬಜರಂಗ ದಳದ ದಾರಾ ಸಿಂಗ್ ಬಿಡುಗಡೆ ಆಗ್ರಹಿಸಿ, ಸುದರ್ಶನ್ ಟಿವಿಯ ಸಂಪಾದಕ ಸುರೇಶ್ ಚವಂಕೆ ಒಟ್ಟಿಗೆ ಪ್ರತಿಭಟನೆ ನಡೆಸಿದ್ದರು ಎನ್ನಲಾದ ಮೋಹನ್‌ಚರಣ್ ಮಾಝಿ ಆರೆಸ್ಸೆಸ್ ಕಾಲಾಳು.

ಕರ್ನಾಟಕದಲ್ಲಿ ಜನತಾ ದಳ (ಎಸ್), ಬಿಜೆಪಿ ಸರಕಾರದ ಪಾಲುದಾರನಾಗಿತ್ತು. ವಿಶ್ವಾಸದ್ರೋಹದ ಆರೋಪ ಹೊತ್ತು, ಬಿಜೆಪಿಯನ್ನು ತೊರೆದು 2019ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿ ಕೊಂಡು, 1 ಸ್ಥಾನದಲ್ಲಿ ಮಾತ್ರ ಜಯಿಸಿತ್ತು. ಮೈತ್ರಿ ಪಾಲುದಾರ ಕಾಂಗ್ರೆಸ್‌ಗೆ ಸಿಕ್ಕಿದ್ದು ಕೂಡ ಒಂದೇ ಸೀಟು. 2024ರ ಚುನಾವಣೆಯಲ್ಲಿ ಬಿಜೆಪಿ ಜೊತೆ ಪಾಲುದಾರಿಕೆ ಮಾಡಿಕೊಂಡು, 2 ಸ್ಥಾನ ಗಳಿಸಿದೆ. ಮೈತ್ರಿಯಿಂದ ಬಿಜೆಪಿಗೆ ಲಾಭವಾಗಿದೆ. ಪಕ್ಷದ ಮಂಡ್ಯ ಸಂಸದ ಎಚ್.ಡಿ. ಕುಮಾರಸ್ವಾಮಿ ಅವರು ಕೇಂದ್ರ ಸಂಪುಟದಲ್ಲಿ ಭಾರೀ ಉದ್ಯಮ ಹಾಗೂ ಉಕ್ಕು ಖಾತೆಯ ಸಚಿವರಾಗಿದ್ದಾರೆ.

ಸೇರದ ಪಕ್ಷಗಳು:

ಪ್ರಮುಖ ರಾಜಕೀಯ ಪಕ್ಷಗಳ ಪೈಕಿ ಲಾಲು ಪ್ರಸಾದ್ ಯಾದವ್ ನೇತೃತ್ವದ ರಾಷ್ಟ್ರೀಯ ಜನತಾ ದಳ(ಆರ್‌ಜೆಡಿ) ಮತ್ತು ಮುಲಾಯಂ ಸಿಂಗ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷಗಳು ಮಾತ್ರ ಬಿಜೆಪಿ ಜೊತೆಗೆ ಕೈಜೋಡಿಸಿಲ್ಲ. 2024ರ ಚುನಾವಣೆಯಲ್ಲಿ ಉತ್ತರಪ್ರದೇಶದಲ್ಲಿ ಎಸ್‌ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ರೂಪಿಸಿದ ಕಾರ್ಯತಂತ್ರದಿಂದಾಗಿ, ಎಸ್‌ಪಿ ಮತ್ತು ಕಾಂಗ್ರೆಸ್ ಎರಡಕ್ಕೂ ಉತ್ತಮ ಫಸಲು ಸಿಕ್ಕಿದೆ. ರಾಜ್ಯದಲ್ಲಿ ಎಲ್ಲ ಸ್ಥಾನಗಳಲ್ಲೂ ಗೆಲ್ಲುವುದಾಗಿ ಹೇಳಿಕೊಳ್ಳುತ್ತಿದ್ದ ಎನ್‌ಡಿಎ ಮುಖಭಂಗ ಅನುಭವಿಸಿದೆ. ಉತ್ತರಪ್ರದೇಶ ಹಾಗೂ ಮಹಾರಾಷ್ಟ್ರದಲ್ಲಿ ವೈಫಲ್ಯ ಬಿಜೆಪಿ 300 ಸ್ಥಾನಗಳನ್ನು ದಾಟುವಲ್ಲಿ ಅಡ್ಡಿಯೊಡ್ಡಿದವು.

ಕಾಂಗ್ರೆಸ್‌ನ ಅಸಂಖ್ಯಾತ ಮುಖಂಡರು ಬಿಜೆಪಿ ಸೇರಿದ್ದಾರೆ. ಈ ಪಟ್ಟಿ ಬಹಳ ದೊಡ್ಡದಿದೆ. ನೆಹರೂ ಅವರ ಸಮಗ್ರತೆಯ ಜಾತ್ಯತೀತ ಭಾರತದ ಪರಿಕಲ್ಪನೆಯಿಂದ ಧಾರ್ಮಿಕ ಅಲ್ಪಸಂಖ್ಯಾತರು ಹಿಂದೂಗಳ ಶ್ರೇಷ್ಠತೆಯನ್ನು ಒಪ್ಪಿಕೊಂಡು, ಎರಡನೇ ದರ್ಜೆಯ ನಾಗರಿಕರಂತೆ ಬದುಕಬೇಕು ಎನ್ನುವ ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿಂದೂ ರಾಷ್ಟ್ರದ ಪರಿಕಲ್ಪನೆಗೆ ತಮ್ಮ ನಿಷ್ಠೆಯನ್ನು ಬದಲಿಸಲು ಅವರಿಗೆ ಯಾವುದೇ ಸಮಸ್ಯೆ ಆಗಲಿಲ್ಲ.

ಹೆಚ್ಚಿನ ರಾಷ್ಟ್ರೀಯ ಪಕ್ಷಗಳು ವಾಜಪೇಯಿ ನೇತೃತ್ವದ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿ ದ್ದವು. ಮೋದಿ ನೇತೃತ್ವದ ಬಿಜೆಪಿಯೊಂದಿಗೆ ಮೈತ್ರಿಗೆ ಹೋಲಿಸಿದರೆ, ವಾಜಪೇಯಿ ಅವರೊಟ್ಟಿಗಿನ ಕೂಡಾವಳಿಯಿಂದ ಸಾಂವಿಧಾನಿಕ ಮೌಲ್ಯಗಳಿಗೆ ಕಡಿಮೆ ಧಕ್ಕೆಯಾಗಲಿದೆ ಎಂದು ವಾದಿಸಬಹುದೇ? ಹಾವಿನ ಮರಿಗೆ ಹಾಲೂಡಿಸಿದೆ; ಅದು ವಿಷ ಕಕ್ಕುತ್ತದೆ ಎಂದು ಗೊತ್ತಿರಲಿಲ್ಲ ಎಂದು ಹೇಳಬಹುದೇ?

ಅವಾಸ್ತವಿಕ ನಂಬಿಕೆ:

ಇಂತಹ ರಾಜಕೀಯ ಸಂಸ್ಕೃತಿ ಇರುವಾಗ, ಬಿಜೆಪಿಯ ಇಬ್ಬರು ದೀರ್ಘಕಾಲದ ಮಿತ್ರ ಪಕ್ಷಗಳು(ಟಿಡಿಪಿ-ಜೆಡಿಯು) ತಮ್ಮ ಹಿರಿಯ ರಾಜಕೀಯ ಪಾಲುದಾರರನ್ನು ಹಿಡಿತದಲ್ಲಿಟ್ಟುಕೊಳ್ಳುತ್ತವೆ ಎಂದು ನಿರೀಕ್ಷಿಸುವುದು ಅಸಂಭವ. ನಾಯ್ಡು ಅವರು ಪೊಲಾವರಂ ಯೋಜನೆ, ಅಮರಾವತಿ ನಿರ್ಮಾಣ ಹಾಗೂ ರಾಜ್ಯಕ್ಕೆ ವಿಶೇಷ ಸ್ಥಾನಮಾನಕ್ಕಾಗಿ ಬೇಡಿಕೆ ಇರಿಸಬಹುದು. ಅದು ಬಿಟ್ಟು, ಅವರು ಬಿಜೆಪಿ ಸಾಂವಿಧಾನಾತ್ಮಕ ದಾರಿಯನ್ನು ತೊರೆಯದಂತೆ ನೋಡಿಕೊಳ್ಳುತ್ತಾರೆ ಎಂದು ಭಾವಿಸುವುದು ವಾಸ್ತವಿಕವಲ್ಲ. ಆಂಧ್ರಪ್ರದೇಶದಲ್ಲಿ ಮುಸ್ಲಿಮರಿಗೆ ಮೀಸಲು ಮುಂದುವರಿಯಲಿದೆ ಎಂದ ಟಿಡಿಪಿ ಹೇಳಿಕೆ ಬಗ್ಗೆ ಮುಂದೇನು? ಮೀಸಲು ಕುರಿತ ಸಾಂವಿಧಾನಿಕ ನಿಲುವು ಸ್ಪಷ್ಟವಾಗಿದೆ: ಸಾಮಾಜಿಕ ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗಗಳು ಮೀಸಲಿಗೆ ಅರ್ಹರು. ಕೆಲವು ಮುಸ್ಲಿಮ್ ಸಮುದಾಯಗಳು ಆ ವಿವರಣೆಗೆ ಸರಿಹೊಂದುತ್ತವೆ. ಹೀಗಾಗಿ, ಅವರಿಗೆ ಮೀಸಲು ನಿರಾಕರಿಸಲು ಆಗುವುದಿಲ್ಲ. ಟಿಡಿಪಿ ಸಾಮಾಜಿಕ-ಆರ್ಥಿಕ ಹಿಂದುಳಿದಿರುವಿಕೆಯನ್ನು ಪರಿಗಣಿಸದೆ ಮುಸ್ಲಿಮರಿಗೆ ಮೀಸಲು ನೀಡಲು ಮುಂದಾದರೆ ಇಲ್ಲವೇ ಆಂಧ್ರಪ್ರದೇಶದಲ್ಲಿ ಬಿಜೆಪಿ ಆಕ್ರಮಣಕಾರಿಯಾಗಿ ಬೆಳೆಯಲು ಪ್ರಯತ್ನಿಸಿ, ತೆಲುಗುದೇಶಂನ ರಾಜಕೀಯ ನೆಲೆಯನ್ನು ಕಸಿಯಲು ಮುಂದಾದರೆ ಮಾತ್ರ ಟಿಡಿಪಿ-ಬಿಜೆಪಿ ಸಂಬಂಧದ ಮೇಲೆ ಒತ್ತಡ ಉಂಟಾಗಬಹುದು. ಟಿಡಿಪಿಯು ಅಸದುದ್ದೀನ್ ಉವೈಸಿ ಮತ್ತು ಅವರ ಗಣ್ಯ ಸಂಬಂಧಿಕರಿಗೆ ಖಂಡಿತವಾಗಿಯೂ ಮೀಸಲು ನೀಡುವುದಿಲ್ಲ!

ಬಿಹಾರದಲ್ಲಿ ಜೆಡಿಯು ದುರ್ಬಲಗೊಂಡಿರುವುದು ಕಣ್ಣಿಗೆ ಗೋಚರಿಸುತ್ತದೆ. ರಾಜ್ಯದಲ್ಲಿ ಅಲ್ಪಸಂಖ್ಯಾತರು ಜೆಡಿಯು ವೋಟ್ ಬ್ಯಾಂಕ್. ಮುಸ್ಲಿಮ್ ಮೀಸಲು ಬಗ್ಗೆ ನಿತೀಶ್ ಕುಮಾರ್ ನಿಲುವೇನು? ಮೋದಿ ಅವರೊಟ್ಟಿಗೆ ಪ್ರಚಾರದಲ್ಲಿ ಪಾಲ್ಗೊಳ್ಳುವುದಿರಲಿ, ಪೋಸ್ಟರ್‌ಗಳಲ್ಲಿ ಕೂಡ ಜೊತೆಯಾಗಿರುವುದನ್ನು ವಿರೋಧಿಸುತ್ತಿದ್ದ ನಿತೀಶ್ ಕುಮಾರ್ ಅವರ ಈಗಿನ ವರ್ತನೆಗೆ ವಿವರಣೆ ಏನಿದೆ? ರಾಜಕೀಯದಲ್ಲಿ ಉಳಿವು ಮಾತ್ರ ಮುಖ್ಯವಾಗುತ್ತದೆ.

ಲೋಕಸಭೆ ಚುನಾವಣೆ ಫಲಿತಾಂಶವು ಮೋದಿ ಅಜೇಯರೆಂಬ ಮಿಥ್ಯೆಯನ್ನು ಮುರಿದಿದೆ. ಉತ್ತರ ಪ್ರದೇಶದಲ್ಲಿ ದಲಿತರು ಮಾಯಾವತಿಯವರ ದಬ್ಬಾಳಿಕೆಯಿಂದ ಮುಕ್ತರಾಗಿದ್ದಾರೆ; ಯಾದವರ ಪ್ರಾಬಲ್ಯದ ಸಮಾಜವಾದಿ ಪಕ್ಷಕ್ಕೆ ಮತ ಹಾಕಿದ್ದಾರೆ. ಆದರೆ, ಅವರಿಗೆ ಯಾದವರ ದಬ್ಬಾಳಿಕೆಯಿಂದ ಮುಕ್ತಿ ಸಿಗುತ್ತದೆಯೇ? ಖಾತ್ರಿಯಿಲ್ಲ. ದಲಿತರು ಜಾತಿಯನ್ನು ತೊರೆದು, ರಾಜಕೀಯವಾಗಿ ಮತ ಚಲಾಯಿಸಿದ್ದಾರೆ ಎನ್ನುವುದು ಸ್ಪಷ್ಟವಾಗಿದೆ. ಚುನಾವಣೆಯಲ್ಲಿ ಸಂವಿಧಾನ ಪ್ರಚಾರದ ಪ್ರಮುಖ ಬಿಂದುವಾಯಿತು. ಮೋದಿ ಅವರ ಆಡಳಿತ ಸಾಂವಿಧಾನಿಕ ಮೌಲ್ಯಗಳನ್ನು ಧಿಕ್ಕರಿಸಿತ್ತು. 1950 ರಲ್ಲಿ ಅಂಗೀಕಾರಗೊಂಡ ಸಂವಿಧಾನ, ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧದ ಆಂದೋಲನದ ಸಮಯದಲ್ಲಿ ರಾಜಕೀಯ ಭಾಷಣದಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡಿತು.

ಮತದಾರರು ಪ್ರಬಲ ಸಂರಕ್ಷಕನ ಪರಿಕಲ್ಪನೆಯನ್ನು ತಿರಸ್ಕರಿಸಿದ್ದಾರೆ; ಆದರೆ, ಬಹುತೇಕರು ಜಾತಿ-ಧರ್ಮವನ್ನು ಮೀರಿ ಮತ ಚಲಾಯಿಸಿಲ್ಲ. ಸಂವಿಧಾನಕ್ಕೆ ಸಿಕ್ಕ ಪ್ರಾಮುಖ್ಯತೆಯು ಪ್ರಜಾಸತ್ತಾತ್ಮಕ ಪ್ರವೃತ್ತಿಯನ್ನು ಬಲ ಪಡಿಸಲು ನೆರವಾಗಲಿದೆ. ಆದರೆ, ರಾಜಕೀಯ ಕೇವಲ ಅಮೂರ್ತ ವಿಚಾರಗಳಿಂದ ಬೆಳೆಯುವುದಿಲ್ಲ. ವಾಸ್ತವಿಕ ಸಮಸ್ಯೆಗಳ ಬಗ್ಗೆ ಜನರನ್ನು ಸಜ್ಜುಗೊಳಿಸಬೇಕು. ಇದನ್ನು ಮಾಡಬೇಕಿರುವುದು ನಾಗರಿಕ ಸಮಾಜ ಮತ್ತು ಅವು ಕಟ್ಟುವ ಜನಾಂದೋಲನಗಳು. ನಿತೀಶ್ ಇಲ್ಲವೇ ನಾಯ್ಡು ಅಥವಾ ಚಿರಾಗ್ ಪಾಸ್ವಾನ್ ಅವರಿಂದ ಸಂವಿಧಾನದ ರಕ್ಷಣೆ ಅಗುತ್ತದೆ ಎನ್ನುವುದು ಭ್ರಮೆ.

share
ಋತ
ಋತ
Next Story
X