Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ನೆಲದನಿ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಲಂಡನ್ ಡೈರಿ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಮಾಹಿತಿ ಮಾರ್ಗದರ್ಶನ
    • ಆರೋಗ್ಯ
    • ಓ ಮೆಣಸೇ
    • ಕೃತಿ ಪರಿಚಯ
    • ಝಲಕ್
    • ಬುಡಬುಡಿಕೆ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಬಹುವಚನ
  5. ಕಟ್ಟು ಜಾಣ್ಮೆ ಕ್ಷೇತ್ರದಲ್ಲಿ...

ಕಟ್ಟು ಜಾಣ್ಮೆ ಕ್ಷೇತ್ರದಲ್ಲಿ ಅನಿಶ್ಚಿತತೆ : ಜೆನ್ಸೆನ್ ಪ್ರಣಯ ಪ್ರಸಂಗ

ಮಾಧವ ಐತಾಳ್ಮಾಧವ ಐತಾಳ್20 Nov 2026 12:08 PM IST
share
ಕಟ್ಟು ಜಾಣ್ಮೆ ಕ್ಷೇತ್ರದಲ್ಲಿ ಅನಿಶ್ಚಿತತೆ : ಜೆನ್ಸೆನ್ ಪ್ರಣಯ ಪ್ರಸಂಗ

ಜೆನ್ಸೆನ್ ವಿವಾಹೇತರ ಸಂಬಂಧದಲ್ಲಿ ಸಿಲುಕಿದ ಮೊದಲನೆಯವರಲ್ಲ; ಕೊನೆಯವರೂ ಅಲ್ಲ. ಇಂಥ ಪ್ರಕರಣಗಳಲ್ಲಿ ಕೆಲವರು ಕೆಲಸ ತೊರೆದಿದ್ದಾರೆ; ಇನ್ನು ಕೆಲವರು ಉಳಿದುಕೊಂಡಿದ್ದಾರೆ. ಆದರೆ, ಜೆನ್ಸೆನ್ ಪ್ರಕರಣ ವಿಭಿನ್ನವಾದುದು. ಕಂಪೆನಿಯ ಗಾತ್ರ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಅವರ ಸ್ಥಾನವನ್ನು ಪರಿಗಣಿಸಿದರೆ, ಅವರ ರಾಜೀನಾಮೆಯಿಂದ ಕಟ್ಟು ಜಾಣ್ಮೆ ಕ್ಷೇತ್ರ ಹಿಂಜರಿತ ಕಾಣಲಿದೆ. ಪ್ರಣಯ ಸಂಬಂಧ, ವೈಯಕ್ತಿಕ ಅವಿವೇಕ, ವೃತ್ತಿಪರ ತಪ್ಪು ನಡವಳಿಕೆ, ಕೆಲಸದ ಸ್ಥಳದಲ್ಲಿ ಅನೈತಿಕ ಚಟುವಟಿಕೆ, ಹಣ ದುರುಪಯೋಗ, ಅಂತರ್‌ರಾಷ್ಟ್ರೀಯ ಗೂಢಚರ್ಯೆ ಮತ್ತು ರಾಷ್ಟ್ರೀಯ ಸುರಕ್ಷೆಯನ್ನು ಒಳಗೊಂಡಿರುವ ಸಮಸ್ಯೆ ಇದು.

ಕಟ್ಟು ಜಾಣ್ಮೆ(ಎಐ) ಕಟ್ಟಡದ ತಳಪಾಯ ಹಾಕಿದ್ದ, ಸಿಲಿಕಾನ್ ವ್ಯಾಲಿಯ ಭಾರೀ ಟೆಕ್ ಕಂಪೆನಿಗಳ ಮುಖ್ಯಸ್ಥರೊಂದಿಗೆ ಗಾಢ ಸಂಬಂಧ ಹೊಂದಿದ್ದ ಮತ್ತು ಕಟ್ಟು ಜಾಣ್ಮೆ ಕಟ್ಟಡದ ಪ್ರತೀ ಹಂತದಲ್ಲೂ ಎನ್‌ವಿಡಿಯಾದ ಹೆಜ್ಜೆ ಗುರುತು ಇರುವಂತೆ ಮಾಡಿದ್ದ ಸಂಸ್ಥೆಯ ಮುಖ್ಯಸ್ಥ ಜೆನ್ಸೆನ್ ಹುವಾಂಗ್ ರಾಜೀನಾಮೆ ಅಲ್ಲೋಲಕಲ್ಲೋಲ ಸೃಷ್ಟಿಸಿದೆ. ಜಾಗತಿಕ ಸೆಮಿಕಂಡಕ್ಟರ್ ಅಲಯನ್ಸ್ ಸಹಸಂಸ್ಥಾಪಕಿ ಜೋಡಿ ಶೆಲ್ಟನ್ ಅವರು ಜನವರಿ 2026ರಲ್ಲಿ ನಡೆಸಿದ ಸಂದರ್ಶನದಲ್ಲಿ ಹಿರಿಯ ಅಧಿಕಾರಿಗಳ ಆಯ್ಕೆಗೆ ಸಂಬಂಧಿಸಿದ ಪ್ರಶ್ನೆಗೆ ‘ಸೂಕ್ತವಲ್ಲದ ವ್ಯಕ್ತಿ ಕುರ್ಚಿ ಮೇಲೆ ಕೂರುವ ಬದಲು ಕುರ್ಚಿ ಖಾಲಿ ಇರುವುದೇ ಸೂಕ್ತ’ ಎಂದು ಜೆನ್ಸೆನ್ ಪ್ರತಿಕ್ರಿಯಿಸಿದ್ದರು. 10 ತಿಂಗಳ ಬಳಿಕ ಚಕ್ರ ಒಂದು ಸುತ್ತು ಬಂದು, ಅವರೇ ಕುರ್ಚಿ ಖಾಲಿ ಮಾಡಬೇಕಾಗಿ ಬಂದಿದೆ. ಇದರಿಂದ ಎನ್‌ವಿಡಿಯಾ ಮಾತ್ರವಲ್ಲದೆ ಎಐ ಕ್ಷೇತ್ರಕ್ಕೆ ಹಿನ್ನಡೆ ಆಗಲಿದೆ. ಭಾರತ ಚಿಪ್‌ಗಳಿಗೆ ಎನ್‌ವಿಡಿಯಾ ಆಧರಿಸಿದ್ದರಿಂದ, ದೇಶದ ಎಐ ಉಪಕ್ರಮಗಳಿಗೆ ತೊಂದರೆ ಆಗಲಿದೆ.

ಸ್ಯಾನ್ ಹೂಸೆಯ ಡೆನ್ನಿ’ಸ್ ಡೈನರ್‌ನಲ್ಲಿ ಮೂಡಿದ ಆಲೋಚನೆಗೆ ಹೂಡಿದ ಆರಂಭಿಕ ಬಂಡವಾಳ 40,000 ಡಾಲರ್. ಜೆನ್ಸೆನ್ ಎಎಂಡಿ ಮತ್ತು ಎಲ್‌ಎಸ್‌ಐ ಲಾಗಿಕ್‌ನಲ್ಲಿ ಚಿಪ್ ವಿನ್ಯಾಸಕಾರನಾಗಿ ಹಾಗೂ ಪಾಲುದಾರರಾದ ಕ್ರಿಸ್ ಮಲಾಚೋವ್‌ಸ್ಕಿ ಮತ್ತು ಕರ್ಟಿಸ್ ಪ್ರಿಯೆಮ್ ಸನ್ ಮೈಕ್ರೋಸಿಸ್ಟಮ್ಸ್‌ನಲ್ಲಿ ಇಂಜಿನಿಯರ್ ಆಗಿ ಸೇವೆ ಸಲ್ಲಿಸಿದ್ದರು. ಎಪ್ರಿಲ್ 5,1993ರಂದು ಸನ್ನಿವೇಲ್‌ನಲ್ಲಿ ಆರಂಭ ವಾದ ಎನ್‌ವಿಡಿಯಾದ ಮೊದಲ ಉತ್ಪನ್ನ ಎನ್‌ವಿ1, 1995ರಲ್ಲಿ ಮಾರುಕಟ್ಟೆಗೆ ಬಂದಿತು. ಅಭೂತಪೂರ್ವವಾಗಿ ಬೆಳೆದ ಕಂಪೆನಿಯ ಆರ್ಥಿಕ ಹಾಗೂ ತಂತ್ರಜ್ಞಾನದ ಬಾಹುಳ್ಯ ಅಪಾರವಾದುದು. ಕ್ಯಾಲಿಫೋರ್ನಿಯಾದಲ್ಲಿ ಕೇಂದ್ರ ಕಚೇರಿ ಇರುವ ಸಂಸ್ಥೆಯ ಮಾರುಕಟ್ಟೆ ಮೌಲ್ಯ 4 ಟ್ರಿಲಿಯನ್ ಡಾಲರ್(377 ಲಕ್ಷ ಕೋಟಿ ರೂ.); ಈ ಮೈಲಿಗಲ್ಲು ಮುಟ್ಟಿದ ಮೊದಲ ಸಂಸ್ಥೆ. 38 ರಾಷ್ಟ್ರಗಳಲ್ಲಿ 42,000 ಉದ್ಯೋಗಿಗಳು ಕಾರ್ಯನಿರ್ವಹಿಸುತ್ತಿದ್ದು, 2025-26ರ ವಾರ್ಷಿಕ ವರಮಾನ 29,590 ಕೋಟಿ ಡಾಲರ್(20.35 ಲಕ್ಷ ಕೋಟಿ ರೂ.). ಜಾಗತಿಕ ಚಿಪ್ ಮಾರುಕಟ್ಟೆಯಲ್ಲಿ ಶೇ.75-80 ಪಾಲು ಹೊಂದಿದ್ದು, 40 ಸಾವಿರ ಕಂಪೆನಿಗಳ 75 ಲಕ್ಷ ಡೆವಲಪರ್‌ಗಳು ಸಂಸ್ಥೆಯ ತಂತ್ರಜ್ಞಾನ ಬಳಸುತ್ತಿದ್ದಾರೆ.

ಎನ್‌ವಿಡಿಯಾ ಮೂರು ಆಯಾಮದ ಸಂಯೋಜಿತ ದತ್ತಾಂಶವನ್ನು 2 ಆಯಾಮದ ಪಿಕ್ಸೆಲ್ ಆಗಿ ಪರಿವರ್ತಿಸುವ ಗ್ರಾಫಿಕ್ ಕಾರ್ಡ್ ಹಾಗೂ ಗೇಮಿಂಗ್ ಸಮುದಾಯಗಳಲ್ಲಿ ಜನಪ್ರಿಯವಾಗಿದ್ದ ಚಿಪ್(ಜಿಪಿಯು, ಗ್ರಾಫಿಕ್ ಪ್ರಾಸೆಸಿಂಗ್ ಯುನಿಟ್)ಗಳ ಬಳಿಕ 2006ರಲ್ಲಿ ಕಂಪ್ಯೂಟರ್ ಯೂನಿಫೈಡ್ ಡಿವೈಸ್ ಆರ್ಕಿಟೆಕ್ಚರ್(ಸಿಯುಡಿಎ) ಮೂಲಕ ಸಾಮಾನ್ಯ ಉದ್ದೇಶದ ಕಂಪ್ಯೂಟಿಂಗ್ ಕಡೆಗೆ ಹೊರಳಿತು. ಕಟ್ಟು ಜಾಣ್ಮೆಯ ಬೆಳವಣಿಗೆಯಲ್ಲಿ ಕೇಂದ್ರ ಸ್ಥಾನ ಪಡೆದ ಈ ಚಿಪ್‌ಗಳು, ವೀಡಿಯೊ ಆಟ ಮಾತ್ರವಲ್ಲದೆ, ಬಿಂಬ ಪರಿಷ್ಕರಣೆ ಮತ್ತು ಮ್ಯಾಟ್ರಿಕ್ಸ್‌ನ ಗುಣಿಸುವಿಕೆಯಲ್ಲೂ ಸಮರ್ಥವಾಗಿದ್ದವು. 2016ರಲ್ಲಿ ಓಪನ್‌ಎಐಗೆ ಮೊದಲ ಎಐ ಸೂಪರ್ ಕಂಪ್ಯೂಟರ್, ಡಿಜಿಎಕ್ಸ್ ಸಿಸ್ಟಂ ನೀಡಲಾಯಿತು. 2020ರಲ್ಲಿ ಇಸ್ರೇಲ್-ಅಮೆರಿಕದ ಅಧಿಕ ವೇಗದ ಕಂಪ್ಯೂಟರ್ ಕಾರ್ಯಜಾಲ ಕಂಪೆನಿ ಮೆಲನಾಕ್ಸ್‌ನ್ನು 6.9 ಶತಕೋಟಿ ಡಾಲರ್‌ಗೆ ಖರೀದಿಸಲಾಯಿತು. ಚೀನಾದ ಮಾರುಕಟ್ಟೆ ನಿಯಂತ್ರಕ ಒಂದು ಷರತ್ತಿನ ಮೇಲೆ ಈ ಖರೀದಿಗೆ ಸಮ್ಮತಿಸಿತು; ಮೆಲನಾಕ್ಸ್ ಉತ್ಪನ್ನಗಳನ್ನು ನ್ಯಾಯಸಮ್ಮತ, ತಾರ್ಕಿಕ ಹಾಗೂ ತಾರತಮ್ಯವಿಲ್ಲದೆ ಮಾರಬೇಕು. ಮೆಲನಾಕ್ಸ್ ಜೊತೆಗಿನ ಒಪ್ಪಂದದಿಂದ ಎನ್‌ವಿಡಿಯಾ ದತ್ತಾಂಶ ಉಗ್ರಾಣ(ಡೇಟಾ ಸೆಂಟರ್) ಕ್ಷೇತ್ರದ ಮುಖಂಡ ಆಯಿತು. ಆನಂತರ ಓಪನ್‌ಎಐ ಜೊತೆಗೆ ಎನ್‌ವಿಡಿಯಾ ಬಹು ವರ್ಷಾವಧಿಯ ಹಲವು ಒಪ್ಪಂದ ಮಾಡಿಕೊಂಡಿದೆ. ಆಂಥ್ರೋಪಿಕ್, ಗೂಗಲ್, ಮೆಟಾ, ಎಕ್ಸ್‌ಎಐ ಮತ್ತು ಇನ್ನಿತರ ಕಂಪೆನಿಗಳು ತಮ್ಮ ಎಐ ಮಾದರಿಗಳಲ್ಲಿ ಎನ್‌ವಿಡಿಯಾದ ಚಿಪ್ ಬಳಸಿಕೊಂಡಿವೆ. ಎನ್‌ವಿಡಿಯಾದ ಆದಾಯದಲ್ಲಿ ಅಮೆಝಾನ್ ವೆಬ್ ಸರ್ವೀಸಸ್(ಎಡಬ್ಲ್ಯುಎಸ್), ಗೂಗಲ್ ಕ್ಲೌಡ್, ಮೆಟಾ ಮತ್ತು ಮೈಕ್ರೋಸಾಫ್ಟ್‌ನ ಅಜೂರ್ ಪಾಲು ಶೇ.60. ಕಂಪೆನಿಯ ದತ್ತಾಂಶ ಉಗ್ರಾಣಗಳ ಆದಾಯ ಜುಲೈ 2026ರಲ್ಲಿ 89 ಬಿಲಿಯನ್ ಡಾಲರ್(ಕಂಪೆನಿಯ ತ್ರೈಮಾಸಿಕ ಆದಾಯ 96.2 ಬಿಲಿಯನ್ ಡಾಲರ್). ಚಾಟ್ ಜಿಪಿಟಿ ಪರಿಚಯಿಸಿದ ಬಳಿಕ ಕಂಪೆನಿಯ ಒಟ್ಟು ಮೌಲ್ಯ 4 ಟ್ರಿಲಿಯನ್ ಡಾಲರಿಗೆ ಹೆಚ್ಚಿತು.

ಅಲೀಸ್ ಹುವಾಂಗ್ ಅಲಿಯಾಸ್ ಹುವಾಂಗ್ ಲೀ ಮತ್ತು ಜೆನ್ಸೆನ್ ಅವರ ವಿವಾಹೇತರ ಸಂಬಂಧ ಕುರಿತು ಅಕ್ಟೋಬರ್ 2026ರಲ್ಲಿ ‘ದ ನ್ಯೂಯಾರ್ಕ್ ಟೈಮ್ಸ್’ ವರದಿ ಮಾಡಿತು. ವಿಷಯ ಹೊರಬಿದ್ದ ಕೆಲವೇ ದಿನಗಳೊಳಗೆ ಕಂಪೆನಿಯ ಆರೋಗ್ಯ ರಕ್ಷಣೆ ವಿಭಾಗದ ಮುಖ್ಯಸ್ಥೆ ಕಿಂಬರ್ಲಿ ಪೊವೆಲ್ ಜೊತೆಗೆ ಸಂಬಂಧ ಹೊಂದಿದ್ದರು ಎಂದು ‘ದ ನ್ಯೂಯಾರ್ಕ್ ಟೈಮ್ಸ್’ ಹೇಳಿತು. ಪೊವೆಲ್ ನೇರವಾಗಿ ಸಿಇಒಗೆ ವರದಿ ಮಾಡುತ್ತಿದ್ದರು. ನವೆಂಬರ್ 12, 2026ರಂದು ಜೆನ್ಸೆನ್ ರಾಜೀನಾಮೆ ನೀಡಿದರು. ಕೆಲವು ಗಂಟೆಗಳ ಬಳಿಕ 3ನೇ ವಿವಾಹೇತರ ಸಂಬಂಧ ಹೊಂದಿದ್ದಾರೆ ಎಂದು ರಾಯ್ಟರ್ಸ್ ಪ್ರಕಟಿಸಿತು. ಜೆನ್ಸೆನ್ ಈಗ ಸರಕಾರ ಹಾಗೂ ಎನ್‌ವಿಡಿಯಾದ ಆಂತರಿಕ ತನಿಖೆ ಎದುರಿಸಬೇಕಿದೆ. ಜೊತೆಗೆ, ಮುಚ್ಚಿದ ಬಾಗಿಲಿನ ಸಭೆಯಲ್ಲಿ ಅಮೆರಿಕದ ಕಾಂಗ್ರೆಸ್ ಸಮಿತಿಗೆ ವಿವರಣೆ ನೀಡಬೇಕಿದೆ.

ಅಲೀಸ್ ಹುವಾಂಗ್ ಯಾರು?

ಚೀನಾ ಸೆಂಟ್ರಲ್ ಟೆಲಿವಿಷನ್(ಸಿಸಿಟಿವಿ) ಹಾಗೂ ಹ್ಯೂಮನ್ ಟಿವಿಯಲ್ಲಿ ಕಾರ್ಯನಿರ್ವಹಿಸಿದ್ದ ಅಲೀಸ್, ಬಳಿಕ ಶಾಂಘೈನ ಹಣಕಾಸು ಕ್ಷೇತ್ರದಲ್ಲಿ ಸಕ್ರಿಯರಾಗಿದ್ದರು; 2023ರಲ್ಲಿ ಸಿಂಗಾಪುರದಲ್ಲಿ ನೋಂದಾಯಿತ ಕಂಪೆನಿ 7ರೋಡ್ ಇಂಟರ್‌ನ್ಯಾಷನಲ್‌ನ್ನು ಖರೀದಿಸಿ ಮೆಗಾಸ್ಪೀಡ್ ಎಂದು ಮರುನಾಮಕರಣ ಮಾಡಿದರು. ಅವರಿಗೆ ಎಐ ಇಲ್ಲವೇ ಸೆಮಿಕಂಡಕ್ಟರ್ ಕ್ಷೇತ್ರದ ಹಿನ್ನೆಲೆ ಇರಲಿಲ್ಲ. ಹೀಗಿದ್ದರೂ, ಚೀನಾದ ಟೆಕ್ ಕಂಪೆನಿಗಳು ಮತ್ತು ಎನ್‌ವಿಡಿಯಾದ ನಡುವಿನ ಸಂಪರ್ಕ ಸೇತುವೆಯಾಗಿ, ಕೆಲವೇ ತಿಂಗಳುಗಳಲ್ಲಿ ಏಶ್ಯದ ಸೆಮಿಕಂಡಕ್ಟರ್/ಡೇಟಾ ಸೆಂಟರ್ ವಹಿವಾಟಿನ ಕೀಲಿಕೈ ಆದರು. ಡಿಸೆಂಬರ್ 2023ರಲ್ಲಿ ಇಬ್ಬರೂ ಸಿಂಗಾಪುರದ ರೆಸ್ಟೋರೆಂಟ್‌ನಲ್ಲಿ ಹಾಗೂ ಮೇ 2025ರಲ್ಲಿ ತೈಪೆಯಲ್ಲಿ ಕಾಣಿಸಿಕೊಂಡಿದ್ದರು. ನವೆಂಬರ್ 2025ರಲ್ಲಿ ಅಲೀಸ್, ಎನ್‌ವಿಡಿಯಾದ ಕೇಂದ್ರ ಕಚೇರಿಗೆ ಭೇಟಿ ಕೊಟ್ಟಿದ್ದರು. ಜೂನ್ 2024-25ರ ಅವಧಿಯಲ್ಲಿ ಮೆಗಾಸ್ಪೀಡ್‌ನ ಉಪಸಂಸ್ಥೆಗೆ 200ಕ್ಕೂ ಅಧಿಕ ಎಐ ಚಿಪ್‌ಗಳು ರವಾನೆಯಾದವು. 2025ರ ಆರಂಭದಲ್ಲಿ ಜೆನ್ಸೆನ್ ಶ್ವೇತಭವನದಲ್ಲಿ ಅಧ್ಯಕ್ಷ ಟ್ರಂಪ್ ಅವರನ್ನು ಭೇಟಿಯಾಗಿದ್ದರು. ಚಿಪ್ ರಫ್ತಿಗೆ ನಿಯಂತ್ರಣ ಹೇರಿರುವುದರಿಂದ ಚೀನಾದ ಹುವಾವೆ ಸೇರಿದಂತೆ ಇನ್ನಿತರ ಚಿಪ್ ಉತ್ಪಾದಕರನ್ನು ಬಲಗೊಳಿಸಿದಂತೆ ಆಗಲಿದೆ. ಬದಲಾಗಿ ರಫ್ತಿಗೆ ಅವಕಾಶ ನೀಡಿ, ಅವರೆಲ್ಲರೂ ಅಮೆರಿಕದ ಚಿಪ್‌ಗಳನ್ನು ಅವಲಂಬಿಸುವಂತೆ ಮಾಡುವುದು ಲಾಭದಾಯಕ ಎಂಬ ಅವರ ಜೆನ್ಸೆನ್ ವಾದವನ್ನು ಟ್ರಂಪ್ ಒಪ್ಪಿದ್ದರು. ನಿರ್ಬಂಧ ಹೇರಿದ್ದ ಜೋ ಬೈಡನ್ ಕಾಲದ ನಿಯಮಗಳನ್ನು ತಿದ್ದಿ, ಎ100, ಎಚ್‌100 ಚಿಪ್‌ಗಳನ್ನು ಮಾರಲಾಯಿತು. ಆದರೆ, ಸಂಸ್ಥೆಯ ಅತ್ಯಂತ ಉನ್ನತ ಸ್ತ್ಥರದ ಚಿಪ್, ಬ್ಲ್ಯಾಕ್‌ವಾಲ್ ಮಾರಾಟಕ್ಕೆ ನಿರ್ಬಂಧ ತೆರವಾಗಲಿಲ್ಲ. ಆದರೆ, ಈ ಚಿಪ್‌ನ್ನು ಮೆಗಾಸ್ಪೀಡ್‌ಗೆ ಮಾರಾಟ ಮಾಡಲಾಯಿತು. ಚಿಪ್‌ಗಳು ಚೀನಾಕ್ಕೆ ರವಾನೆಯಾಗಿವೆ ಎಂಬ ದೂರಿನ ಹಿನ್ನೆಲೆಯಲ್ಲಿ ತನಿಖೆ ನಡೆಸಿದ ಅಮೆರಿಕದ ಇಂಟೆಲಿಜೆನ್ಸ್ ಅಧಿಕಾರಿಗಳು, ಅಲೀಸ್ ಅವರು ಚೀನಾ ಇಂಟೆಲಿಜೆನ್ಸ್ ಜೊತೆ ಸಂಪರ್ಕ ಹೊಂದಿದ್ದಾರೆ ಎಂಬ ಆರೋಪವನ್ನು ಸೆಪ್ಟಂಬರ್ 2025ರಲ್ಲಿ ತಳ್ಳಿಹಾಕಿದರು.

ಎನ್‌ವಿಡಿಯಾ ಚೀನಾದ ಕಂಪೆನಿಗಳಿಗೆ ನೇರವಾಗಿ ಚಿಪ್ ಮಾರುವುದನ್ನು ಅಮೆರಿಕದ ರಫ್ತು ನಿಯಂತ್ರಣ ನೀತಿ ನಿರ್ಬಂಧಿಸುತ್ತದೆ. ಇದರಿಂದ ತಪ್ಪಿಸಿಕೊಳ್ಳಲು ಸಿಂಗಾಪುರ/ಆಗ್ನೇಯ ಏಶ್ಯದಲ್ಲಿ ನೋಂದಣಿಯಾದ ಕಂಪೆನಿಗಳು ಅಮೆರಿಕದಿಂದ ಚಿಪ್ ಖರೀದಿಸಿ, ಮಲೇಶ್ಯ/ಇಂಡೋನೇಶ್ಯದ ದತ್ತಾಂಶ ಉಗ್ರಾಣಗಳಿಗೆ ಮಾರುತ್ತಿದ್ದವು. ಮೆಗಾಸ್ಪೀಡ್‌ನ ಗ್ರಾಹಕರಲ್ಲಿ ಆಲಿಬಾಬಾ ಕೂಡ ಒಂದು. ಫೆಬ್ರವರಿ 2025ರಲ್ಲಿ ಮೆಗಾಸ್ಪೀಡ್ ಸೇರಿದಂತೆ ಹಲವು ಕಂಪೆನಿಗಳು ಮತ್ತು ಅವುಗಳ ಪ್ರಮುಖ ಅಧಿಕಾರಿಗಳನ್ನು ಸಿಂಗಾಪುರ ಪೊಲೀಸ್ ಹಾಗೂ ಕಸ್ಟಮ್ಸ್ ಇಲಾಖೆ ತನಿಖೆಗೆ ಒಳಪಡಿಸಿತ್ತು. ಅಲೀಸ್ ಅವರ ಪಾಸ್‌ಪೋರ್ಟ್ ವಶಪಡಿಸಿಕೊಳ್ಳಲಾಗಿತ್ತು; ಆಕೆ ಯಾವುದೇ ಅಪರಾಧ ಎಸಗಿಲ್ಲ ಎಂದು ಪೊಲೀಸರು ಹೇಳಿದ್ದರು. ಅಲೀಸ್ ಚೀನಾದ ರಾಜ್ಯ ಸುರಕ್ಷತೆ ಮಂತ್ರಾಲಯ(ಎಂಎಸ್‌ಎಸ್) ಪರ ಗೂಢಚರ್ಯೆ ನಡೆಸಿದ್ದಾರೆ ಎನ್ನಲು ಯಾವುದೇ ಸಾಕ್ಷ್ಯಾಧಾರವಿಲ್ಲ ಎಂದು ಅಮೆರಿಕ ಅಧಿಕಾರಿಗಳು ಹೇಳಿದ್ದಾರೆ. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡ ತಮಗೆ ಈ ಬಗ್ಗೆ ಸ್ಪಷ್ಟತೆ ಇಲ್ಲ ಎಂದಿದ್ದಾರೆ. ಸಾಮಾನ್ಯ ಪತ್ರಕರ್ತೆ ಕೋಟ್ಯಂತರ ಡಾಲರ್ ವಹಿವಾಟು ನಡೆಸುವ ಕಂಪೆನಿಯ ಸಿಇಒ ಆಗಿದ್ದು ಹಲವರ ಕಣ್ಣು ಕುಕ್ಕಿತ್ತು. ಆದರೆ, ಚೀನಾದ ಶೀಘ್ರ ವೇಗದ ತಂತ್ರಜ್ಞಾನ-ಆರ್ಥಿಕ ಕ್ಷೇತ್ರದಲ್ಲಿ ಇದು ಅಸಂಭವವೇನಲ್ಲ. ಆಕೆ ಎರಡು ಬಲಿಷ್ಠ ಆಸಕ್ತಿಗಳನ್ನು ಸಂಪರ್ಕಿಸುವ ದಲ್ಲಾಳಿ ಎಂಬ ಅಭಿಪ್ರಾಯವೂ ಇದೆ. ಜತೆಗೆ, ಹುವಾಂಗ್ ವಿರುದ್ಧ ನಡೆದ ಪಿತೂರಿಯಲ್ಲಿ ಆಕೆಯನ್ನು ಬಳಸಿಕೊಳ್ಳಲಾಗಿದೆ ಎಂಬ ವದಂತಿಯೂ ಇದೆ.

ಮುನ್ನಡೆಸುವವರ ಕೊರತೆ

ಕ್ರೆಸ್ ಕೊಲೆಟ್ ಅವರನ್ನು ಎನ್‌ವಿಡಿಯಾ ಹಂಗಾಮಿ ಸಿಇಒ ಆಗಿ ನೇಮಿಸಲಾಗಿದೆ. ಆಡಳಿತ ಜೆನ್ಸೆನ್ ಕೇಂದ್ರಿತವಾಗಿದ್ದು, 60 ಮಂದಿ ಅವರಿಗೆ ನೇರವಾಗಿ ವರದಿ ಮಾಡಿ ಕೊಳ್ಳುತ್ತಿದ್ದರು. 2ನೇ ಹಂತದ ನಾಯಕರನ್ನು ಬೆಳೆಸಿಲ್ಲ. ಈ ಮಾದರಿಯು ಆಡಳಿತಶಾಹಿಯನ್ನು ಕಡಿಮೆಗೊಳಿಸಿ, ಶೀಘ್ರ ಬೆಳವಣಿಗೆಗೆ ಕಾರಣವಾಗುತ್ತದೆ. ಆದರೆ, ಚುಕ್ಕಾಣಿ ಮುರಿದರೆ ಇಡೀ ವ್ಯವಸ್ಥೆ ಕುಸಿಯುವ ಸಾಧ್ಯತೆ ಹೆಚ್ಚು ಇರುತ್ತದೆ. ಸಂಸ್ಥೆ ಹಲವು ಎಐ ಕಂಪೆನಿಗಳು ಹಾಗೂ ದತ್ತಾಂಶ ಉಗ್ರಾಣಗಳಲ್ಲಿ ಹೂಡಿಕೆ ಮಾಡಿದ್ದು, ಸಂಸ್ಥೆಯ ಭವಿಷ್ಯ ಎಐ ಮೂಲಸೌಲಭ್ಯಗಳು/ಸೇವೆಗಳು ಹೇಗೆ ಬೆಳವಣಿಗೆ ಆಗುತ್ತವೆ ಎಂಬುದನ್ನು ಆಧರಿಸಿದೆ. ಚಿಪ್ ಮಾರುಕಟ್ಟೆಯಲ್ಲಿ ಮೊದಲ ಸ್ಥಾನ ಹೊಂದಿದೆ; ಆದರೆ, ಗೂಗಲ್‌ನ ಟೆನ್ಸರ್ ಪ್ರಾಸೆಸಿಂಗ್ ಘಟಕ(ಟಿಪಿಯು)ಗಳು ಮತ್ತು ಎಐ ಕಂಪ್ಯೂಟಿಂಗ್ ಕ್ಷೇತ್ರದಲ್ಲಿ ಗೂಗಲ್, ಎಎಂಡಿ(ಅಡ್ವಾನ್ಸ್ಡ್ ಮೈಕ್ರೋ ಡಿವೈಸಸ್), ಅಮೆಝಾನ್, ಹುವಾವೆ-ಕ್ಯಾಂಬ್ರಿಕಾನ್(ಚೀನಾ) ಮತ್ತು ಬ್ರಾಡ್‌ಕಾಂ ಪೈಪೋಟಿ ನೀಡುತ್ತಿವೆ.

ಖಂಡಾಂತರ ಬಹುರಾಷ್ಟ್ರೀಯ ಕಂಪೆನಿಗಳಲ್ಲಿ ಷಡ್ಯಂತ್ರ, ವಂಚನೆ, ಪೇಟೆಂಟ್/ವ್ಯಾಪಾರ ರಹಸ್ಯ ಕಳವು, ಗೂಢಚರ್ಯೆ ಇತ್ಯಾದಿ ಸರ್ವೇಸಾಮಾನ್ಯ. ಇದನ್ನು ತಪ್ಪಿಸಲು ಕಂಪೆನಿಗಳು ಪರಿಣತರನ್ನು ನೇಮಿಸಿಕೊಂಡಿರುತ್ತವೆ. ಜೆನ್ಸೆನ್ ಪ್ರಕರಣಕ್ಕೆ ಮುನ್ನವೇ ಆಂಥ್ರೋಪಿಕ್, ಓಪನ್ ಎಐ ಸೇರಿದಂತೆ ಹಲವು ಎಐ ಕಂಪೆನಿಗಳಲ್ಲಿ ಕೌಂಟರ್ ಇಂಟೆಲಿಜೆನ್ಸ್ ಪರಿಣತರ ನೇಮಕ ನಡೆದಿದೆ. ಓಪನ್ ಎಐ ಅಕ್ಟೋಬರ್ 2025ರಲ್ಲಿ ಸಮಾಲೋಚನಾ ಕೊಠಡಿಯಲ್ಲಿ ಕದ್ದಾಲಿಕೆ ಉಪಕರಣ ಅಳವಡಿಸಿದ್ದ ಇಂಜಿನಿಯರ್‌ನ್ನು ಕೆಲಸದಿಂದ ತೆಗೆದುಹಾಕಿತ್ತು. ಬಳಿಕ ಅಮೆರಿಕದ ರಾಷ್ಟ್ರೀಯ ಭದ್ರತಾ ಏಜೆನ್ಸಿ(ಎನ್‌ಐಎ) ಮಾಜಿ ನಿರ್ದೇಶಕ ಪಾಲ್ ನಕಸೋನೆ ಅವರನ್ನು ಜೂನ್ 2024ರಲ್ಲಿ ತನ್ನ ಸುರಕ್ಷತೆ ಮತ್ತು ಭದ್ರತೆ ಸಮಿತಿಗೆ ನೇಮಿಸಿಕೊಂಡಿತು. ಆಂಥ್ರೋಪಿಕ್ ಸಿಐಎ ಮಾಜಿ ಉಪ ನಿರ್ದೇಶಕ ಡೇವಿಡ್ ಕೋಹೆನ್ ಮತ್ತು ಎನ್‌ಎಸ್‌ಎ ಸೈಬರ್ ಸುರಕ್ಷತೆ ವಿಭಾಗದ ಮಾಜಿ ನಿರ್ದೇಶಕ ಡೇವ್ ಲೂಬರ್ ಅವರನ್ನು ಆಗಸ್ಟ್ 2025ರಲ್ಲಿ ನೇಮಿಸಿಕೊಂಡಿದೆ. ಆದರೆ, ಇದ್ಯಾವುದೂ ವೈಯಕ್ತಿಕ ದೌರ್ಬಲ್ಯಗಳು, ಮಾನುಷ ಲೋಪದೋಷಗಳನ್ನು ತಡೆಯುವುದಿಲ್ಲ ಎನ್ನುವುದು ವಾಸ್ತವ.

ಜೆನ್ಸೆನ್ ವಿವಾಹೇತರ ಸಂಬಂಧದಲ್ಲಿ ಸಿಲುಕಿದ ಮೊದಲನೆಯವರಲ್ಲ; ಕೊನೆಯವರೂ ಅಲ್ಲ. ಇಂಥ ಪ್ರಕರಣಗಳಲ್ಲಿ ಕೆಲವರು ಕೆಲಸ ತೊರೆದಿದ್ದಾರೆ; ಇನ್ನು ಕೆಲವರು ಉಳಿದುಕೊಂಡಿದ್ದಾರೆ. ಆದರೆ, ಜೆನ್ಸೆನ್ ಪ್ರಕರಣ ವಿಭಿನ್ನವಾದುದು. ಕಂಪೆನಿಯ ಗಾತ್ರ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಅವರ ಸ್ಥಾನವನ್ನು ಪರಿಗಣಿಸಿದರೆ, ಅವರ ರಾಜೀನಾಮೆಯಿಂದ ಕಟ್ಟು ಜಾಣ್ಮೆ ಕ್ಷೇತ್ರ ಹಿಂಜರಿತ ಕಾಣಲಿದೆ. ಪ್ರಣಯ ಸಂಬಂಧ, ವೈಯಕ್ತಿಕ ಅವಿವೇಕ, ವೃತ್ತಿಪರ ತಪ್ಪು ನಡವಳಿಕೆ, ಕೆಲಸದ ಸ್ಥಳದಲ್ಲಿ ಅನೈತಿಕ ಚಟುವಟಿಕೆ, ಹಣ ದುರುಪಯೋಗ, ಅಂತರ್‌ರಾಷ್ಟ್ರೀಯ ಗೂಢಚರ್ಯೆ ಮತ್ತು ರಾಷ್ಟ್ರೀಯ ಸುರಕ್ಷೆಯನ್ನು ಒಳಗೊಂಡಿರುವ ಸಮಸ್ಯೆ ಇದು.

ಹಾಲಿ ಜಗತ್ತಿನಲ್ಲಿ ವಂಚಿಸಲು ವ್ಯಕ್ತಿಗತ ಪರಿಚಯ ಇರಬೇಕೆಂದಿಲ್ಲ; ಫೇಸ್‌ಬುಕ್/ವಾಟ್ಸ್‌ಆ್ಯಪ್/ಇನ್‌ಸ್ಟಾಗ್ರಾಂನಲ್ಲಿ ನಕಲಿ ಹೆಸರಿನಲ್ಲಿ ಖಾತೆ ತೆರೆದು, ಬೇರೆ ಫೋಟೋ ಬಳಸಿ ಸಂಪರ್ಕ ಬೆಳೆಸಿಕೊಳ್ಳಬಹುದು. ಫೋಟೋ ಇಷ್ಟಬಂದಂತೆ ತಿದ್ದಿ, ತಿರುಚಿ ಇಲ್ಲವೇ ಎಐ ಮೂಲಕ ಬಿಂಬವನ್ನು ಸೃಷ್ಟಿಸಿ ಬಲಿಪಶುಗಳನ್ನು ಸೆಳೆಯಬಹುದು. ನಾವು ಅತ್ಯಂತ ಸಂಕೀರ್ಣ ಕೆಲಸ ನಿರ್ವಹಿಸುವ ಯಂತ್ರಗಳನ್ನು ಕಂಡುಹಿಡಿದಿದ್ದೇವೆ; ಆದರೆ, ವ್ಯಕ್ತಿಯೊಬ್ಬ ಬಳಸುವ ಫೋನ್, ಒಂದು ಫೋನ್ ಕರೆ ಇಡೀ ವ್ಯವಸ್ಥೆಯನ್ನು ಕುಸಿಯುವಂತೆ ಮಾಡುವ ಸಾಧ್ಯತೆ ಸದಾಕಾಲ ಇರುತ್ತದೆ.

(ಅಂಕಣಕಾರರು ಪತ್ರಕರ್ತ ಮತ್ತು ಅನುವಾದಕ www.ruthamedia.com)

Tags

artificial intelligence
share
ಮಾಧವ ಐತಾಳ್
ಮಾಧವ ಐತಾಳ್
Next Story
X