Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ನೆಲದನಿ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಮಾಹಿತಿ ಮಾರ್ಗದರ್ಶನ
    • ಆರೋಗ್ಯ
    • ಓ ಮೆಣಸೇ
    • ಕೃತಿ ಪರಿಚಯ
    • ಝಲಕ್
    • ಬುಡಬುಡಿಕೆ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಬಹುವಚನ
  5. ವೇಮುಲಾ, ತಡ್ವಿ, ಸಾಹಿಲ್; ಸಾಂಸ್ಥಿಕ...

ವೇಮುಲಾ, ತಡ್ವಿ, ಸಾಹಿಲ್; ಸಾಂಸ್ಥಿಕ ಹತ್ಯೆಗಳ ಮುಂದುವರಿಕೆ

ಮಾಧವ ಐತಾಳ್ಮಾಧವ ಐತಾಳ್2 Oct 2026 9:50 AM IST
share
ವೇಮುಲಾ, ತಡ್ವಿ, ಸಾಹಿಲ್; ಸಾಂಸ್ಥಿಕ ಹತ್ಯೆಗಳ ಮುಂದುವರಿಕೆ

ದಲಿತ ಹಾಗೂ ಅಲ್ಪಸಂಖ್ಯಾತ ವಿದ್ಯಾರ್ಥಿಗಳು ಕ್ಯಾಂಪಸ್‌ಗೆ ಕಾಲಿಟ್ಟ ತಕ್ಷಣ ಜಾತಿ, ಆರ್ಥಿಕ ಪರಿಸ್ಥಿತಿ ಹಾಗೂ ಮೈ ಬಣ್ಣ ಆಧರಿತ ‘ಗೆಟ್ಟೋಕರಣ’ ಆರಂಭವಾಗುತ್ತದೆ. ಇಂಥವರಿಗೆ ಬೆಂಬಲ ವ್ಯವಸ್ಥೆ ಇಲ್ಲದೆ ಇರುವುದರಿಂದ ಅಥವಾ ಒಂದುವೇಳೆ ಇದ್ದರೂ ದುರ್ಬಲವಾಗಿರುವುದರಿಂದ ಒಂಟಿತನ, ಮಾನಸಿಕ ಕ್ಲೇಶ, ಸಹಪಾಠಿಗಳ ಒತ್ತಡ ಇತ್ಯಾದಿಯಿಂದ ಪರೀಕ್ಷೆಗಳಲ್ಲಿ ವೈಫಲ್ಯ ಶುರುವಾಗುತ್ತದೆ; ಇದು ಆತ್ಮಹತ್ಯೆಗೂ ದಾರಿ ಮಾಡಿಕೊಡಬಹುದು. 2018-23ರ ಅವಧಿಯಲ್ಲಿ 39 ಹಾಗೂ ಜನವರಿ-ಸೆಪ್ಟಂಬರ್ 2026ರವರೆಗೆ 10 ಐಐಟಿ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದರಲ್ಲಿ ಶೇ.82ರಷ್ಟು ಆತ್ಮಹತ್ಯೆಗಳು ಕ್ಯಾಂಪಸ್‌ನಲ್ಲಿ ನಡೆದಿವೆ.

ಐಐಟಿ ಬಾಂಬೆಯ ಎನರ್ಜಿ ಸೈನ್ಸ್ ಮತ್ತು ಇಂಜಿನಿಯರಿಂಗ್ ವಿಭಾಗದ 2ನೇ ವರ್ಷದ ವಿದ್ಯಾರ್ಥಿ ಸಾಹಿಲ್ ವಾಕೋಡೆ ಸೆಪ್ಟಂಬರ್ 18, 2026ರಂದು ವಿದ್ಯಾರ್ಥಿ ನಿಲಯದ ಕೊಠಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡರು. ತಕ್ಷಣ ಕಣಕ್ಕಿಳಿದ ಕೆಸರು ಎರಚುವ ಪಡೆ, ‘ಸಾಹಿಲ್ ಪರೀಕ್ಷೆಯಲ್ಲಿ ನಕಲು ಮಾಡುತ್ತಿದ್ದಾಗ ಸಿಕ್ಕಿಬಿದ್ದರು’ ಎಂದು ಮಿಥ್ಯಾರೋಪ ಹೊರಿಸಿ, ವೀಡಿಯೊ ಬಿಡುಗಡೆ ಮಾಡಿತು. ಅಂಬೇಡ್ಕರ್, ಪೆರಿಯಾರ್, ಫುಲೆ ಸ್ಟಡಿ ಸರ್ಕಲ್ ಪ್ರತಿಭಟನೆ ಹಿನ್ನೆಲೆಯಲ್ಲಿ ಐಐಟಿ ತನ್ನ ಹಿಂದಿನ ಹೇಳಿಕೆ ಹಿಂಪಡೆಯಿತು. ಆದರೆ, ಅಷ್ಟರಲ್ಲಿ ‘ಪರೀಕ್ಷೆಯಲ್ಲಿ ನಕಲು’ ನರೇಟಿವ್ ವ್ಯಾಪಕವಾಗಿ ಹರಡಿತ್ತು. ಇದೊಂದು ಸಾಂಸ್ಥಿಕ ಹತ್ಯೆಯಾಗಿದ್ದು, ನಿರಂತರವಾಗಿ ಮುಂದುವರಿದಿದೆ.

ಸಾಹಿಲ್ ಪೋಷಕರಾದ ರವೀಂದ್ರ ವಾಕೋಡೆ ಮತ್ತು ತಾಯಿ ಸೋನಾಲಿ, ಪರಿಶಿಷ್ಟ ಜಾತಿ ಮತ್ತು ವರ್ಗಗಳು(ದೌರ್ಜನ್ಯ ತಡೆ) ಕಾಯ್ದೆಯಡಿ ದೂರು ನೀಡಿದ್ದು, ಪ್ರೊ. ಸತ್ಯನಾರಾಯಣ ದುಲ್ಲಾ ಮೇಲೆ ಆತ್ಮಹತ್ಯೆಗೆ ಪ್ರಚೋದನೆ ಮತ್ತು ಜಾತಿ ತಾರತಮ್ಯದ ಆರೋಪ ಹೊರಿಸಿದ್ದಾರೆ. ಮುಂಬೈ ಅಪರಾಧ ವಿಭಾಗ ತನಿಖೆ ನಡೆಸುತ್ತಿದೆ. ‘ಪರೀಕ್ಷೆಯಲ್ಲಿ ನಕಲು ಮಾಡುವಾಗ ಸಿಕ್ಕಿಬಿದ್ದಿದ್ದರು’ ಎಂದು ಹೇಳಿದ್ದ ಐಐಟಿ ಬಾಂಬೆ, ಆನಂತರ ‘ತನಿಖೆಗೆ ಮುನ್ನವೇ ಹೇಳಿಕೆ ನೀಡಿದ್ದು ತಪ್ಪು’ ಎಂದು ಕ್ಷಮೆಯಾಚನೆ ಮಾಡಿತು. ಬಳಿಕ ಸೆ.23ರಂದು ತನಿಖೆಗೆ 10 ಜನರ ಸಮಿತಿ ನೇಮಿಸಿ, ಪ್ರೊ.ಸತ್ಯನಾರಾಯಣ ದುಲ್ಲಾ ಅವರಿಗೆ ರಜೆ ಮೇಲೆ ತೆರಳಲು ಸೂಚಿಸಿತು. ಸಾಹಿಲ್ ಪೋಷಕರು ದೋಷಾರೋಪ ಪಟ್ಟಿಯಲ್ಲಿರುವ ದುಲ್ಲಾ ಅವರನ್ನು ತಕ್ಷಣ ಬಂಧಿಸಬೇಕು ಎಂದು ಆಗ್ರಹಿಸಿದ್ದು, ದಲಿತ ವಿದ್ಯಾರ್ಥಿಗಳು ಮಾತ್ರ ಏಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದು ಪ್ರಶ್ನಿಸಿದ್ದಾರೆ. ಬಾಂಬೆ ಐಐಟಿ ನಿರ್ದೇಶಕ ಶಿರೀಶ್ ಕೇದಾರೆ ಮತ್ತು ಪ್ರೊ. ದುಲ್ಲಾ ಬಂಧನಕ್ಕೆ ಆಗ್ರಹಿಸಿ, ಮುಂಬೈಯ ಆಝಾದ್ ಮೈದಾನದಲ್ಲಿ ಸೆ.24ರಿಂದ ನಿರಶನ ಆರಂಭಿಸಿದ್ದಾರೆ. ಇದಕ್ಕೆ ಮುನ್ನ ರಾಷ್ಟ್ರೀಯ ಪರಿಶಿಷ್ಟ ಜಾತಿ ಆಯೋಗದ ಅಧ್ಯಕ್ಷರನ್ನು ಭೇಟಿಯಾಗಿ, ಶೀಘ್ರ ತನಿಖೆಗೆ ಆಗ್ರಹಿಸಿ ಮನವಿ ಸಲ್ಲಿಸಿದ್ದಾರೆ. ಐಐಟಿ ಕ್ಯಾಂಪಸ್ ಎದುರು ನಿರಶನಕ್ಕೆ ಪೊಲೀಸರು ಅನುಮತಿ ನೀಡಲಿಲ್ಲ. ವಾಕೋಡೆ ಅವರ ವಕೀಲ ಸಿದ್ಧಾರ್ಥ ಇಂಗ್ಲೆ, ‘ಸಾಹಿಲ್ ಚಾರಿತ್ರ್ಯ ವಧೆ ಮಾಡಲಾಗಿದೆ. ಉದ್ದೇಶಪೂರ್ವಕವಾಗಿ ವೀಡಿಯೊ ಸೋರಿಕೆ ಮಾಡಿದ್ದು, ಅದರ ಮೂಲ ಪತ್ತೆಹಚ್ಚಬೇಕು’ ಎಂದು ಆಗ್ರಹಿಸಿದ್ದಾರೆ.

‘ಸಂಸ್ಥೆಯಿಂದ ಯಾವ ಮಾಹಿತಿ ಹೊರಹೋಗಬೇಕು ಎನ್ನುವುದನ್ನು ಆಡಳಿತ ಮಂಡಳಿ ನಿರ್ಧರಿಸುತ್ತದೆ. ಮಾರ್ಗದರ್ಶಿ ಸೂತ್ರ, ನಿಯಮಾವಳಿ ಹಾಗೂ ನೀತಿಗಳನ್ನು ಸಂಸ್ಥೆಯ ಹಿತಾಸಕ್ತಿ ರಕ್ಷಣೆಗೆ ಬಳಸಲಾಗುತ್ತಿದೆ. ಪ್ರೊ.ದುಲ್ಲಾ ಅವರಿಗೆ ಆಡಳಿತ ಮಂಡಳಿ ಮತ್ತು ಕೆಲವು ಪ್ರಾಧ್ಯಾಪಕರು ಬೆಂಬಲ ಘೋಷಿಸಿದ್ದು, ಇದು ಪ್ರಕರಣದ ನಿಷ್ಪಕ್ಷ ತನಿಖೆ ಮೇಲೆ ಪರಿಣಾಮ ಬೀರುತ್ತದೆ’ ಎಂದು ಅಂಬೇಡ್ಕರ್, ಪೆರಿಯಾರ್, ಫುಲೆ ಸ್ಟಡಿ ಸರ್ಕಲ್ ಹೇಳಿದೆ. ವಂಚಿತ ಬಹುಜನ ಅಘಾಡಿ(ವಿಬಿಎ)ಯ ಸಮ್ಯಕ್ ವಿದ್ಯಾರ್ಥಿ ಆಂದೋಲನ ಪ್ರತಿಭಟನೆ ನಡೆಸಿದ್ದು, ‘ಆತ್ಮಹತ್ಯೆಯಲ್ಲಿ ಜಾತಿ ತಾರತಮ್ಯದ ಪಾಲು ಇದ್ದು, ಅದು ಸಾಂಸ್ಥಿಕ ಹತ್ಯೆ’ ಎಂದು ಮುಖಂಡ ಸುಜತ್ ಅಂಬೇಡ್ಕರ್ ಹೇಳಿದ್ದಾರೆ. ಪ್ರಕರಣದ ತನಿಖೆಗೆ ನೇಮಿಸಿದ್ದ ಸಮಿತಿಗೆ ವಿದ್ಯಾರ್ಥಿಗಳು 18 ಬೇಡಿಕೆ ಇರಿಸಿದ್ದಾರೆ.

ಬೇಡಿಕೆಗಳೇನು?

ಆತ್ಮಹತ್ಯೆಗೆ ಕಾರಣರಾದವರ ಮೇಲೆ ಕ್ರಮ, ಸಾಹಿಲ್ ಮೇಲೆ ಮಿಥ್ಯಾರೋಪಕ್ಕೆ ಕ್ಷಮೆಯಾಚನೆ, ಎಲ್ಲ ಪಾಲುದಾರರೊಂದಿಗೆ ಮುಕ್ತ ಮಾತುಕತೆ, ಆತ್ಮಹತ್ಯೆ ಕುರಿತು ಸ್ವತಂತ್ರ ತನಿಖೆ, ಬೇಡಿಕೆಗಳ ಅನುಷ್ಠಾನದ ಹೊಣೆಗಾರಿಕೆ ಹೊರುವುದು, ಪ್ರಾಧ್ಯಾಪಕರಿಗೆ ನೀತಿಸಂಹಿತೆ, ಶೈಕ್ಷಣಿಕ/ಶೈಕ್ಷಣಿಕ ಅಲ್ಲದ ಸಮಿತಿಗಳಲ್ಲಿ ವಿದ್ಯಾರ್ಥಿ ಪ್ರತಿನಿಧಿಗಳಿಗೆ ಅವಕಾಶ, ವಿದ್ಯಾರ್ಥಿಗಳ ಯೋಗಕ್ಷೇಮಕ್ಕೆ ಕಾರ್ಯಪಡೆ ನೇಮಕ, ಪರೀಕ್ಷೆಯಲ್ಲಿ ನಕಲು ಪ್ರಕರಣಗಳ ನಿರ್ವಹಣೆಗೆ ಸಮರ್ಪಕ ನೀತಿ, ದಿನದ 24 ಗಂಟೆಯೂ ಮನಶಾಸ್ತ್ರಜ್ಞರು ಲಭ್ಯವಿರುವಂತೆ ನೋಡಿಕೊಳ್ಳುವುದು, ವಿದ್ಯಾರ್ಥಿಗಳು-ಶಿಕ್ಷಕರಲ್ಲಿ ಮಾನಸಿಕ ಆರೋಗ್ಯ ಕುರಿತು ಸೂಕ್ಷ್ಮತೆ ಬೆಳೆಸುವುದು, ವಿದ್ಯಾರ್ಥಿಗಳು ತಮ್ಮ ಸಮಸ್ಯೆ ಹೇಳಿಕೊಳ್ಳಲು ಪೋರ್ಟಲ್ ಆರಂಭಿಸುವುದು, 250 ವಿದ್ಯಾರ್ಥಿಗಳಿಗೆ ಕನಿಷ್ಠ ಒಬ್ಬರು ಸಮಾಲೋಚಕರನ್ನು ನೇಮಿಸುವ ಮೂಲಕ ಕಾಯುವಿಕೆ ಸಮಯ ಕಡಿತಗೊಳಿಸುವುದು, ವಿದ್ಯಾರ್ಥಿ ಯೋಗಕ್ಷೇಮ ಕೇಂದ್ರಗಳ ಸ್ವತಂತ್ರ ಆಡಿಟ್, ವಿದ್ಯಾರ್ಥಿಗಳ ಆತಂಕ ನಿವಾರಿಸಲು ಡೀನ್ ಭೇಟಿಗೆ ಸಮಯ ನಿಗದಿ ಮತ್ತು ಪ್ರತಿಯೊಂದು ಹಾಸ್ಟೆಲ್‌ನಲ್ಲೂ ಕನಿಷ್ಠ ಒಬ್ಬರು ಸಮಾಲೋಚಕರನ್ನು ನೇಮಕ ಮಾಡಬೇಕು ಎಂದು ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.

ಬಾಂಬೆ ಐಐಟಿ ಪ್ರೊ. ದುಲ್ಲಾ ಅವರನ್ನು ಆಡಳಿತ ವ್ಯವಹಾರಗಳ ಡೀನ್ ಹುದ್ದೆಯಿಂದ ಅಮಾನತುಗೊಳಿಸಿದೆ ಮತ್ತು ಪರೀಕ್ಷೆಯಲ್ಲಿ ನಕಲು ಹೇಳಿಕೆಗೆ ಕ್ಷಮೆಯಾಚನೆ ಮಾಡಿದೆ. ಆದರೆ, ಅಂಬೇಡ್ಕರ್, ಪೆರಿಯಾರ್, ಫುಲೆ ಸ್ಟಡಿ ಸರ್ಕಲ್, ‘ಕ್ಷಮೆಯಾಚನೆ ಒಂದು ನಗೆಚಾಟಿಕೆ. ಐಐಟಿ ವಿದ್ಯಾರ್ಥಿಯ ಚಾರಿತ್ರ್ಯಹರಣದ ಜವಾಬ್ದಾರಿ ಹೊರಬೇಕಿತ್ತು. ಬದಲಿಗೆ ಆತನ ಚಾರಿತ್ರ್ಯ ಕುರಿತ ಸಂಶಯ ಹುಟ್ಟಿಸುವ ನರೇಟಿವ್‌ಗಳು ದ್ವಿಗುಣಗೊಂಡಿವೆ. ಹಾಲಿ ನಿರ್ದೇಶಕರ ಅಧಿಕಾರಾವಧಿಯಲ್ಲಿ 4 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದು, ಅವರು ರಾಜೀನಾಮೆ ನೀಡಬೇಕು ಮತ್ತು ಪ್ರೊ. ದುಲ್ಲಾ ಹುದ್ದೆ ತೊರೆಯಬೇಕು’ ಎಂದು ಆಗ್ರಹಿಸಿದೆ. ಶಿಕ್ಷಕ ವರ್ಗ ಎರಡು ಭಾಗವಾಗಿದ್ದು, ಬೋಧಕರ ವೇದಿಕೆ ಪ್ರೊ. ದುಲ್ಲಾ ಅವರನ್ನು ಬೆಂಬಲಿಸಿದೆ. ಆದರೆ, ಇನ್ನೊಂದು ಗುಂಪು ‘ಬೋಧಕರ ವೇದಿಕೆ ಶಿಕ್ಷಕರ ಅಧಿಕೃತ ವಕ್ತಾರ ಅಲ್ಲ. ತನಿಖೆ ನಡೆಯುತ್ತಿರುವಾಗ ಬೋಧಕರೊಬ್ಬರನ್ನು ಬೆಂಬಲಿಸುವ ಹೇಳಿಕೆಯನ್ನು ವೇದಿಕೆ ಹೇಗೆ ನೀಡಿತು?’ ಎಂದು ಪ್ರಶ್ನಿಸಿದೆ.

ಜಾತಿ ತಾರತಮ್ಯ, ಸಾಂಸ್ಥಿಕ ವೈಫಲ್ಯ

ದಲಿತ ಹಾಗೂ ಅಲ್ಪಸಂಖ್ಯಾತ ವಿದ್ಯಾರ್ಥಿಗಳು ಕ್ಯಾಂಪಸ್‌ಗೆ ಕಾಲಿಟ್ಟ ತಕ್ಷಣ ಜಾತಿ, ಆರ್ಥಿಕ ಪರಿಸ್ಥಿತಿ ಹಾಗೂ ಮೈ ಬಣ್ಣ ಆಧರಿತ ‘ಗೆಟ್ಟೋಕರಣ’ ಆರಂಭವಾಗುತ್ತದೆ. ಇಂಥವರಿಗೆ ಬೆಂಬಲ ವ್ಯವಸ್ಥೆ ಇಲ್ಲದೆ ಇರುವುದರಿಂದ ಅಥವಾ ಒಂದುವೇಳೆ ಇದ್ದರೂ ದುರ್ಬಲವಾಗಿರುವುದರಿಂದ ಒಂಟಿತನ, ಮಾನಸಿಕ ಕ್ಲೇಶ, ಸಹಪಾಠಿಗಳ ಒತ್ತಡ ಇತ್ಯಾದಿಯಿಂದ ಪರೀಕ್ಷೆಗಳಲ್ಲಿ ವೈಫಲ್ಯ ಶುರುವಾಗುತ್ತದೆ; ಇದು ಆತ್ಮಹತ್ಯೆಗೂ ದಾರಿ ಮಾಡಿಕೊಡಬಹುದು. 2018-23ರ ಅವಧಿಯಲ್ಲಿ 39 ಹಾಗೂ ಜನವರಿ-ಸೆಪ್ಟಂಬರ್ 2026ರವರೆಗೆ 10 ಐಐಟಿ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದರಲ್ಲಿ ಶೇ.82ರಷ್ಟು ಆತ್ಮಹತ್ಯೆಗಳು ಕ್ಯಾಂಪಸ್‌ನಲ್ಲಿ ನಡೆದಿವೆ. ಕಳೆದ 20 ವರ್ಷಗಳಲ್ಲಿ 171 ಅಸ್ವಾಭಾವಿಕ ಮರಣಗಳು ಸಂಭವಿಸಿವೆ ಎಂದು ಗ್ಲೋಬಲ್ ಐಐಟಿ ಅಲುಮ್ನಿ ಬೆಂಬಲ ಗುಂಪು ಹೇಳಿದೆ. ಸುಪ್ರೀಂ ಕೋರ್ಟ್‌ನ ಉನ್ನತ ಶಿಕ್ಷಣ ವಿದ್ಯಾನಿಲಯಗಳಲ್ಲಿ ವಿದ್ಯಾರ್ಥಿಗಳ ಮಾನಸಿಕ ಆರೋಗ್ಯ ಮತ್ತು ಆತ್ಮಹತ್ಯೆ ತಡೆ ಕುರಿತ ರಾಷ್ಟ್ರೀಯ ಕಾರ್ಯಪಡೆಯು ಸೆಪ್ಟಂಬರ್‌ನಲ್ಲಿ ಬಿಡುಗಡೆಗೊಳಿಸಿದ ವರದಿ ಪ್ರಕಾರ, ಶೈಕ್ಷಣಿಕ ಒತ್ತಡ, ಜಾತಿ ಆಧರಿತ ತಾರತಮ್ಯ, ಆರ್ಥಿಕ ಸಮಸ್ಯೆ, ಲೈಂಗಿಕ ಕಿರುಕುಳ ಮತ್ತು ಪರೀಕ್ಷೆಯಲ್ಲಿ ವೈಫಲ್ಯ ಆತ್ಮಹತ್ಯೆಗೆ ಕಾರಣಗಳು. 2018-23ರ ಅವಧಿಯಲ್ಲಿ ಈ ವಿದ್ಯಾಸಂಸ್ಥೆಗಳಿಂದ ದುರ್ಬಲ ಸಮುದಾಯಗಳ 13,600 ವಿದ್ಯಾರ್ಥಿಗಳು ಹೊರಹೋಗಿದ್ದಾರೆ. ಇದರಲ್ಲಿ ಒಬಿಸಿ 4,596, ಪರಿಶಿಷ್ಟ ಜಾತಿಗಳ 2,424 ಹಾಗೂ ಪರಿಶಿಷ್ಟ ವರ್ಗಗಳ 2,622 ವಿದ್ಯಾರ್ಥಿಗಳು ಇದ್ದಾರೆ; ಐಐಟಿ ತೊರೆದವರಲ್ಲಿ ಒಬಿಸಿ 2,066, ಎಸ್‌ಸಿ 1,068 ಹಾಗೂ 91 ಎಸ್‌ಟಿ ವಿದ್ಯಾರ್ಥಿಗಳು ಇದ್ದಾರೆ. ಶುಲ್ಕ ಮನ್ನಾ, ಶಿಷ್ಯವೇತನ ಮತ್ತಿತರ ಸರಕಾರಿ ನೆರವು ಇದ್ದರೂ ತೊರೆಯುವಿಕೆ ನಿಂತಿಲ್ಲ. ಈ ಅಂಕಿಅಂಶಗಳು ವಿದ್ಯಾರ್ಥಿಗಳು ಎದುರಿಸುತ್ತಿರುವ ಶೈಕ್ಷಣಿಕ ಮತ್ತು ಇನ್ನಿತರ ಒತ್ತಡಗಳನ್ನು ವಿವರಿಸುತ್ತವೆ ಎಂದು ವರದಿ ಹೇಳಿದೆ. ವಿದ್ಯಾರ್ಥಿಗಳ ಸಂಕಷ್ಟದ ಸಾಂಸ್ಥಿಕ ಆಯಾಮಗಳ ಕಡೆಗೆ ಗಮನ ಸೆಳೆದಿದೆ. ಆತ್ಮಹತ್ಯೆ ಪಿಡುಗು ಬೆಂಗಳೂರಿನ ಐಐಎಸ್‌ಸಿ(ಭಾರತೀಯ ವಿಜ್ಞಾನ ಮಂದಿರ)ಗೂ ಕಾಲಿರಿಸಿದೆ. ಆಗಸ್ಟ್ 6ರಂದು ಬಿಟೆಕ್ 2ನೇ ವರ್ಷದ ವಿದ್ಯಾರ್ಥಿ ಚಿಕ್ಕಬಳ್ಳಾಪುರದ ರಕ್ಷಣ್ ಹಾಗೂ ಪಶ್ಚಿಮ ಬಂಗಾಳದ ಎಂಟೆಕ್ ವಿದ್ಯಾರ್ಥಿ ಗೋಪಾಲ್ ಮಂಡಲ್ ಆತ್ಮಹತ್ಯೆ ಮಾಡಿಕೊಂಡರು.

23 ಐಐಟಿ ಸೇರಿದಂತೆ 31 ಕೇಂದ್ರೀಯ ಅನುದಾನಿತ ಸಂಸ್ಥೆಗಳಲ್ಲಿ ನಡೆದ ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದ ಬೋಧಕರಲ್ಲಿ ಶೇ. 90 ಮಂದಿ ತಮಗೆ ಮಾನಸಿಕ ಆರೋಗ್ಯ ಸಮಸ್ಯೆ ಎದುರಿಸುತ್ತಿರುವ ವಿದ್ಯಾರ್ಥಿಗಳನ್ನು ಬೆಂಬಲಿಸಲು ಅಗತ್ಯವಿರುವ ಕೌಶಲ ಇಲ್ಲ ಎಂದು ಹೇಳಿದ್ದರು. 18 ಸಂಸ್ಥೆಗಳಲ್ಲಿ ಒಬ್ಬರೇ ಮಾನಸಿಕ ಆರೋಗ್ಯ ತಜ್ಞ ಇದ್ದರು. ಐಐಟಿಗಳು ಸಮೀಕ್ಷೆಗೆ ಪ್ರತಿಕ್ರಿಯೆಯಾಗಿ ಕೆಲವು ಕ್ರಮ ತೆಗೆದುಕೊಂಡಿದ್ದವು; ಖರಗ್ಪುರ ಐಐಟಿಯಲ್ಲಿ ಸಂಜೆ ವೇಳೆ ವಿದ್ಯುತ್ ಕಡಿತಗೊಳಿಸಿ, ವಿದ್ಯಾರ್ಥಿಗಳು ಮುಖಾಮುಖಿಯಾಗುವಂತೆ ಮಾಡಲಾಯಿತು. ಗುವಾಹಟಿ ಐಐಟಿಯಲ್ಲಿ ವಿದ್ಯಾರ್ಥಿಗಳ ನಡುವೆ ಸಂಬಂಧ ಬಲಪಡಿಸಲು ‘ನಿಮ್ಮ ನೆರೆಹೊರೆ ಬಗ್ಗೆ ತಿಳಿದುಕೊಳ್ಳಿ’ ಉಪಕ್ರಮ ಆರಂಭಿಸಲಾಯಿತು. ಶಿಕ್ಷಣ ಇಲಾಖೆಯು ಮಾಳವೀಯ ಶಿಕ್ಷಕ ತರಬೇತಿ ಮಿಷನ್ ಅಡಿ ‘ಇಂಟಿಗ್ರೇಟೆಡ್ ಅಪ್ರೋಚ್ ಫಾರ್ ಪ್ರಮೋಟಿಂಗ್ ಮೆಂಟಲ್ ಹೆಲ್ತ್, ರಿಸಿಲಿಯನ್ಸ್ ಆಂಡ್ ವೆಲ್ ಬೀಯಿಂಗ್’ ಪರಿಚಯಿಸಿ, ಶಿಕ್ಷಕರಿಗೆ ವಿದ್ಯಾರ್ಥಿಗಳ ಮಾನಸಿಕ ಆರೋಗ್ಯ ಸ್ಥಿತಿಯನ್ನು ಗುರುತಿಸಿ ನೆರವಾಗಲು 15 ದಿನಕ್ಕೊಮ್ಮೆ ಸಲಹಾ ಶಿಬಿರ ಆರಂಭಿಸಿತು. ಆದರೆ, ಸಮಸ್ಯೆಯ ಅಗಾಧತೆ ಪರಿಗಣಿಸಿದರೆ ಈ ಕ್ರಮಗಳೆಲ್ಲವೂ ಕ್ಷುಲ್ಲಕ.

ಕುರಿ ಕಾಯಲು ತೋಳ ನೇಮಕ

‘ಚೆನ್ನಾಗಿ ಓದು, ಕಷ್ಟಪಟ್ಟು ದುಡಿ ಮತ್ತು ನೀತಿನಿಯಮ ಮೀರಬೇಡ; ನಿನ್ನ ಬದುಕು ಪೋಷಕರಿಗಿಂತ ಉತ್ತಮವಾಗುತ್ತದೆ’ ಎಂಬ ಮಾತು ಮತ್ತು ಪ್ರಯತ್ನಕ್ಕೆ ಫಲ ಸಿಗುತ್ತದೆ ಎಂಬ ನಂಬಿಕೆ ಅರ್ಥ ಕಳೆದುಕೊಳ್ಳುತ್ತಿದೆ. ಈ ದೇಶ ಯಾವತ್ತೂ ಅಸಮಾನತೆಯ ಕೂಪ ಮತ್ತು ಇಲ್ಲಿ ವ್ಯಕ್ತಿಯ ಜಾತಿ/ಸಾಮಾಜಿಕ ಅಂತಸ್ತು ಮುಖ್ಯವಾಗುತ್ತದೆ. ಶಿಕ್ಷಣ ಎನ್ನುವುದು ಪದವಿ ಗಳಿಕೆಯನ್ನು ಮೀರಿದ, ಚಲನಶೀಲತೆ, ಘನತೆ ಮತ್ತು ಸಾಧ್ಯತೆಗಳ ಅನಾವರಣ. ಈ ಹಿನ್ನೆಲೆಯಲ್ಲಿ ಐಐಟಿ/ಐಐಎಸ್‌ಸಿ ವಿದ್ಯಾರ್ಥಿಗಳ ಆತ್ಮಹತ್ಯೆ ಕಳವಳಕರ. ಇಂಥ ಘಟನೆ ನಡೆದಾಗ, ವಿದ್ಯಾಸಂಸ್ಥೆಗಳಿಗೆ ಈ ಸಮಸ್ಯೆ ಏಕೆ ಕಾಣಿಸಲಿಲ್ಲ ಎಂಬ ಪ್ರಶ್ನೆ ಏಳುತ್ತದೆ. ಮಾನಸಿಕ ಸಮಸ್ಯೆ ಈ ದೇಶದಲ್ಲಿ ನಿಷಿದ್ಧ ವಿಷಯ. ವಿದ್ಯಾರ್ಥಿಗಳು ತಮ್ಮ ಸಮಸ್ಯೆ ಬಹಿರಂಗಗೊಳ್ಳುತ್ತದೆ ಎಂಬ ಆತಂಕದಿಂದ ಇಲ್ಲವೇ ಸಹಾಯ ಕೇಳುವುದು ಸೋಲು ಒಪ್ಪಿಕೊಂಡಂತೆ ಎಂದುಕೊಳ್ಳುವ ಸಾಧ್ಯತೆ ಇರುವುದರಿಂದ, ಅವರು ಸಮಾಲೋಚಕರ ನೆರವು ಕೇಳಲು ಹಿಂಜರಿಯಬಹುದು. ಪ್ರಾಧ್ಯಾಪಕರು, ವಾರ್ಡನ್‌ಗಳು ಮತ್ತಿತರರಲ್ಲೇ ತೋಳಗಳು ಇರುವ ಸಾಧ್ಯತೆಯಿದ್ದು, ಈ ಬೆಂಬಲ ವ್ಯವಸ್ಥೆಗಳು ಸುರಕ್ಷಿತ ಎಂಬ ಭಾವನೆ ಮೂಡುವುದಿಲ್ಲ. ಇದೊಂದು ವಿಷ ವೃತ್ತ. ಇದರಿಂದ, ಶೈಕ್ಷಣಿಕ ಕ್ಷೇತ್ರದಲ್ಲಿ ದಲಿತ-ಅಲ್ಪಸಂಖ್ಯಾತ ವರ್ಗಗಳಿಗೆ ತಾವೇ ಇಲ್ಲದಂತೆ ಆಗಿದೆ; ಎಲ್ಲೆಲ್ಲೂ ಮೇಲ್ಜಾತಿ-ಮೇಲ್ವರ್ಗದ್ದೇ ಹಿಡಿತ.

ವಿದ್ಯಾಸಂಸ್ಥೆಗಳಲ್ಲಿ ದಲಿತ/ಅಲ್ಪಸಂಖ್ಯಾತ ಸಮುದಾಯದ ಶಿಕ್ಷಕರು ಕಡಿಮೆ ಸಂಖ್ಯೆಯಲ್ಲಿರುವುದು ಸಮಸ್ಯೆಯನ್ನು ತೀವ್ರಗೊಳಿಸಿದೆ. 45 ಕೇಂದ್ರೀಯ ವಿಶ್ವವಿದ್ಯಾನಿಲಯಗಳಲ್ಲಿ 2ರಲ್ಲಿ ಮಾತ್ರ ಎಸ್‌ಸಿ/ಎಸ್‌ಟಿ ಕುಲಪತಿ ಇದ್ದಾರೆ ಎಂದು ಲೋಕಸಭೆಯಲ್ಲಿ ಶಿಕ್ಷಣ ರಾಜ್ಯ ಸಚಿವ ಸುಭಾಷ್ ಸರಕಾರ್ 2023ರಲ್ಲಿ ಹೇಳಿದ್ದರು. ಈಗಲೂ ಪರಿಸ್ಥಿತಿ ಬದಲಾಗಿಲ್ಲ. 23 ಐಐಟಿಗಳಿಗೆ ಮಂಜೂರಾದ 12,498 ಹುದ್ದೆಗಳಲ್ಲಿ 4,804 ಖಾಲಿ ಇವೆ(ಶೇ.38.4 ಕೊರತೆ). ಪಟಣಾ/ಖರಗಪುರ ಐಐಟಿಯಲ್ಲಿ ಶೇ.60ರಷ್ಟು ಹುದ್ದೆಗಳು ಭರ್ತಿಯಾಗಿಲ್ಲ. ಹಿಂದೂಸ್ತಾನ್ ಟೈಮ್ಸ್ ವರದಿ ಪ್ರಕಾರ, 9 ಐಐಟಿಗಳಲ್ಲಿ ಎಸ್‌ಸಿ/ಎಸ್‌ಟಿ/ಒಬಿಸಿಗಳಿಗೆ ಮೀಸಲಾದ ಶೇ.60ರಷ್ಟು ಹುದ್ದೆಗಳು ಖಾಲಿ ಇದ್ದವು(1,501ರಲ್ಲಿ 888 ಹುದ್ದೆಗಳು ಭರ್ತಿಯಾಗಿರಲಿಲ್ಲ; 1/3ರಷ್ಟು ಒಬಿಸಿ, ಎಸ್‌ಸಿ 261 ಹಾಗೂ ಎಸ್‌ಟಿ 150 ಹುದ್ದೆಗಳು ಖಾಲಿ ಉಳಿದಿದ್ದವು). ಸಮರ್ಥ ಹಾಗೂ ಸೂಕ್ತ ಶೈಕ್ಷಣಿಕ ಅರ್ಹತೆ ಇರುವವರು ಲಭ್ಯವಿಲ್ಲದೆ ಇರುವುದು ಕೊರತೆಗೆ ಒಂದು ಕಾರಣ: ಇದಲ್ಲದೆ, ಶಿಕ್ಷಣ ಕ್ಷೇತ್ರ ಹಣದ ಕೊರತೆಯಿಂದ ಬಳಲುತ್ತಿದೆ. ಒಟ್ಟು ದೇಶಿ ಉತ್ಪನ್ನ 4.15 ಲಕ್ಷ ಕೋಟಿ(ಜಿಡಿಪಿ); ಇದರಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಶೇ.4.1 ಮೊತ್ತ ನೀಡಲಾಗುತ್ತಿದೆ. ಜಾಗತಿಕವಾಗಿ ಈ ಮೊತ್ತ ಶೇ.3.6ರಿಂದ ಶೇ.4.9. ನಾರ್ವೆ, ದಕ್ಷಿಣ ಆಫ್ರಿಕಾ, ಬ್ರೆಝಿಲ್ ಅತಿ ಹೆಚ್ಚು ಅಂದರೆ, ಶೇ.5.6ರಿಂದ ಶೇ.6.6 ಮೊತ್ತ ವೆಚ್ಚಿಸುತ್ತವೆ. ಒಟ್ಟು ಆಯವ್ಯಯ(53.5 ಲಕ್ಷ ಕೋಟಿ ರೂ.)ದಲ್ಲಿ ಉನ್ನತ ಶಿಕ್ಷಣಕ್ಕೆ ಮೀಸಲಿಟ್ಟ ಮೊತ್ತ 55,727.22 ಕೋಟಿ ರೂ.(ಐಐಟಿಗಳಿಗೆ 12,130 ಕೋಟಿ ಹಾಗೂ ಕೇಂದ್ರೀಯ ವಿಶ್ವವಿದ್ಯಾನಿಲಯಗಳಿಗೆ 17,444 ಕೋಟಿ ರೂ.); ಅಂದರೆ ಶೇ.1.04. ಇದರಿಂದ ಬೋಧಕರು ಮತ್ತು ಅಗತ್ಯ ಸಿಬ್ಬಂದಿ ನೇಮಕ ಆಗುತ್ತಿಲ್ಲ; ಮೂಲಸೌಲಭ್ಯ ನಿರ್ಮಾಣವಾಗುತ್ತಿಲ್ಲ. ಇಡೀ ಶಿಕ್ಷಣ ವ್ಯವಸ್ಥೆ ಅತಿಥಿ ಶಿಕ್ಷಕರಿಂದ ನಡೆಯುತ್ತಿದೆ. ಸಂಶೋಧನೆ ಕ್ಷೇತ್ರದ ವ್ಯಥೆ ಹೇಳುವುದೇ ಬೇಡ; ಗೋಮೂತ್ರ, ಸೆಗಣಿ ಇತ್ಯಾದಿ ಬಗ್ಗೆ ಸಂಶೋಧನೆ ಎಗ್ಗಿಲ್ಲದೆ ನಡೆದಿದೆ.

ನಾವು ಬದುಕುತ್ತಿರುವ ಜಗತ್ತಿನಲ್ಲಿ ಹೆಚ್ಚು ಅಂಕ ಗಳಿಕೆ ಬುದ್ಧಿವಂತಿಕೆಯ ಲಕ್ಷಣ; ಪರೀಕ್ಷೆಯಲ್ಲಿ ವೈಫಲ್ಯ ಬದುಕಿನ ಅಂತ್ಯ ಎಂಬಂತೆ ಆಗಿಬಿಟ್ಟಿದೆ. ಇದು ಮಕ್ಕಳ ಮೇಲೆ ಅಪಾರ ಮಾನಸಿಕ ಒತ್ತಡ ಹೇರುತ್ತಿದೆ. ತೆರೆದ ಪುಸ್ತಕ/ಎಐ ಬೆಂಬಲಿತ ಪರೀಕ್ಷೆ, ಮೌಖಿಕ ಪರೀಕ್ಷೆ, ಪ್ರಾಜೆಕ್ಟ್‌ಗಳು ಮತ್ತು ಮರುಪರೀಕ್ಷೆಗೆ ಅವಕಾಶ ನೀಡಿ, ಒತ್ತಡ ಕಡಿಮೆ ಮಾಡಬಹುದು. ಇದರಿಂದ ಶೈಕ್ಷಣಿಕ ಗುಣಮಟ್ಟ ಕಡಿಮೆಯಾಗುವುದಿಲ್ಲ; ಆದರೆ, ಶಿಕ್ಷಣ ಕ್ಷೇತ್ರ ಕೇಂದ್ರೀಕರಣಗೊಂಡು ನೀಟ್‌ನಂಥ ಪರೀಕ್ಷೆಗಳು ಮೇಲುಗೈ ಸಾಧಿಸಿರುವಾಗ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಜಾತಿವಾದಿಗಳು ತುಂಬಿಕೊಂಡಿರುವಾಗ ಇದು ಸಾಧ್ಯವಾಗುವುದಿಲ್ಲ.

ಆತ್ಮಹತ್ಯೆಗಳ ಬಳಿಕ ಐಐಎಸ್‌ಸಿ ವಿದ್ಯಾರ್ಥಿ ಮಂಡಳಿ ನಡೆಸಿದ ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದ ಶೇ.82ರಷ್ಟು ಮಂದಿ ಯೋಗಕ್ಷೇಮ ಸಮಿತಿಯಲ್ಲಿ ವಿದ್ಯಾರ್ಥಿಗಳಿಗೆ ಪ್ರಾತಿನಿಧ್ಯ ಇರಬೇಕು ಎಂದು ಹೇಳಿದ್ದರು; ಶೇ.59ರಷ್ಟು ಮಂದಿ ಶೈಕ್ಷಣಿಕ ಹೊರೆ ಮಾನಸಿಕ ಸಂಕಷ್ಟಕ್ಕೆ ಕಾರಣ ಎಂದಿದ್ದರು. ಇದು ಸಮಾಲೋಚಕರ ಸಂಖ್ಯೆ ಹೆಚ್ಚಳವನ್ನು ಮೀರಿದ ಸಮಸ್ಯೆ. ತಮ್ಮನ್ನು ಬೆಂಬಲಿಸಲು ರೂಪಿಸುವ ವ್ಯವಸ್ಥೆಯಲ್ಲಿ ತಮ್ಮ ಧ್ವನಿ ಇರಬೇಕು ಎಂಬ ವಿದ್ಯಾರ್ಥಿಗಳ ಬೇಡಿಕೆ ಈಡೇರಿಸುವುದು ಕಷ್ಟವೇನಲ್ಲ. ವಿದ್ಯಾಸಂಸ್ಥೆಗಳಲ್ಲಿ ಕಿರುಕುಳ, ತಾರತಮ್ಯ, ಶೈಕ್ಷಣಿಕ ವಿವಾದ ಇತ್ಯಾದಿ ದೂರು ನಿವಾರಣೆಗೆ ಇರುವ ಔಪಚಾರಿಕ ವ್ಯವಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ನಂಬಿಕೆ ಮೂಡಿಸಬೇಕು. ಸಮಸ್ಯೆ ಹೇಳಿಕೊಂಡರೆ, ಪ್ರತೀಕಾರ, ಅಪನಿಂದೆ ಇಲ್ಲವೇ ಇನ್ನಷ್ಟು ಪ್ರತಿಕೂಲ ಪರಿಣಾಮದ ಸಾಧ್ಯತೆ ಇದ್ದರೆ, ಯಾರೂ ದೂರು ನೀಡಲು ಮುಂದಾಗುವುದಿಲ್ಲ. ಕಲಿಸುವಲ್ಲಿ ಸಮಸ್ಯೆ ಏನಿದೆ? ಬಗೆಹರಿಯದೆ ಉಳಿದ ಸಮಸ್ಯೆಗಳಿವೆಯೇ? ನೆರವು ಕೇಳಲು ಇರುವ ಅಡ್ಡಿ-ಆತಂಕಗಳೇನು? ವಿದ್ಯಾರ್ಥಿಗಳಲ್ಲಿ ಒಂಟಿತನ-ಆತಂಕದ ಭಾವನೆ ಬರಲು ಕಾರಣಗಳೇನು? ಈ ಹಿಂದಿನ ಪ್ರಕರಣದ ಬಳಿಕ ಏನು ಕ್ರಮ ಕೈಗೊಳ್ಳಲಾಗಿದೆ? ಕೊನೆಯ ಪ್ರಶ್ನೆ ಮುಖ್ಯ; ಏಕೆಂದರೆ, ಇಂಥ ಘಟನೆ ನಡೆದಾಗ ತನಿಖೆ ಸಂಪ್ರದಾಯ ಆಗಿಬಿಟ್ಟಿದೆ. ಆದರೆ, ಆನಂತರ ಏನು ಬದಲಾವಣೆ ಆಗಿದೆ? ಪ್ರಕರಣಕ್ಕೆ ಜವಾಬ್ದಾರಿ ಯಾರು? ಅವರ ಮೇಲೆ ಆಡಳಿತ ಮಂಡಳಿ ಯಾವ ಮತ್ತು ಯಾವಾಗ ಕ್ರಮ ಕೈಗೊಳ್ಳುತ್ತದೆ ಎಂಬುದು ಮುಖ್ಯವಾಗುತ್ತದೆ. ಇಂಥ ದುರಂತಕ್ಕೆ ಇರಬಹುದಾದ ಕಾರಣಗಳನ್ನು ನಿವಾರಿಸದೆ ಇದ್ದರೆ, ಪ್ರಕರಣಗಳು ಮರುಕಳಿಸಲಿದೆ.

ರೋಹಿತ್ ವೇಮುಲಾ, ಪಾಯಲ್ ತಡ್ವಿ ಪ್ರಕರಣ ಜನರ ಮನಸ್ಸಿನಿಂದ ಮರೆಯಾಗಿದೆ. ರಾಜ್ಯ ರೋಹಿತ್ ವೇಮುಲಾ ಮಸೂದೆ 2026ನ್ನು ಅಂಗೀಕರಿಸಿದೆ. ಆದರೆ, ತಾರತಮ್ಯ ನಿವಾರಿಸುವಲ್ಲಿ, ಶಿಕ್ಷಣ ವ್ಯವಸ್ಥೆಯನ್ನು ಮಾನವೀಯಗೊಳಿಸುವಲ್ಲಿ ಹಾಗೂ ಸಾಂಸ್ಥಿಕ ಹತ್ಯೆಗಳನ್ನು ತಡೆಯುವಲ್ಲಿ ಸೋತಿದ್ದೇವೆ. ಇದು ವಿಷಾದಕರ.

(ಮಾನಸಿಕ ಕ್ಲೇಶದ ಸಂದರ್ಭದಲ್ಲಿ ನೆರವಿಗೆ ಸಹಾಯವಾಣಿ: ಕಿರಣ್ 1800 599 0019/ಆರೋಗ್ಯ ಸಹಾಯವಾಣಿ 104).

(ಅಂಕಣಕಾರರು ಪತ್ರಕರ್ತ ಮತ್ತು ಅನುವಾದಕ

www.ruthamedia.com)

Tags

Rohit VemulaSahilTadviDalitminority
share
ಮಾಧವ ಐತಾಳ್
ಮಾಧವ ಐತಾಳ್
Next Story
X