Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಪ್ರಚಲಿತ
  5. ಅಂಬೇಡ್ಕರ್ ಜಯಂತಿ, ವಿನೂತನ ಆಚರಣೆ

ಅಂಬೇಡ್ಕರ್ ಜಯಂತಿ, ವಿನೂತನ ಆಚರಣೆ

ಸನತ್ ಕುಮಾರ ಬೆಳಗಲಿಸನತ್ ಕುಮಾರ ಬೆಳಗಲಿ20 April 2026 9:30 AM IST
share
ಅಂಬೇಡ್ಕರ್ ಜಯಂತಿ, ವಿನೂತನ ಆಚರಣೆ

ಬಿಜಾಪುರ ಮಾತ್ರವಲ್ಲ ಕರ್ನಾಟಕದ ಇತಿಹಾಸದಲ್ಲೇ ಇದೊಂದು ಅಪರೂಪದ ಕಾರ್ಯಕ್ರಮ. ಅಂಬೇಡ್ಕರ್ ಜಯಂತಿಯ ದಿನ ಪುಸ್ತಕ ಮೇಳ ಏರ್ಪಡಿಸಿರುವುದು ಹೊಸ ಪರಂಪರೆಯ ಆರಂಭಕ್ಕೆ ನಾಂದಿಯಾಯಿತು. 41 ಡಿಗ್ರಿ ಉರಿ ಬಿಸಿಲಿನಲ್ಲಿ ಐದೂ ದಿನ ಪುಸ್ತಕ ಮೇಳಕ್ಕೆ ಜನ ಬರುತ್ತಲೇ ಇದ್ದರು. ಇದರ ಜೊತೆಗೆ ವೇದಿಕೆಯಲ್ಲಿ ವಿಚಾರ ಮಂಡನೆ, ಸಂವಾದ,ಉಪನ್ಯಾಸ, ಹಾಡು ಇವೆಲ್ಲ ಸೇರಿ ಹೊಸ ವಾತಾವರಣ ನಿರ್ಮಾಣವಾಗಿತ್ತು.

ಬಾಬಾಸಾಹೇಬರು ವರ್ಷದಿಂದ ವರ್ಷಕ್ಕೆ, ದಿನದಿಂದ ದಿನಕ್ಕೆ ಹೆಚ್ಚು ಪ್ರಸ್ತುತರಾಗುತ್ತಿರುವ ದಿನಗಳಿವು. ಡಾ.ಬಾಬಾಸಾಹೇಬ್ ಅಂಬೇಡ್ಕರ್ ಪ್ರತಿಮೆಗಳಿಲ್ಲದ ಊರಿಲ್ಲ. ಪ್ರತಿವರ್ಷ ಅವರ ಜಯಂತಿಯನ್ನು ಆಚರಿಸದ ತಾಣ ಇಲ್ಲ. ಅವರವರಿಗೆ ತೋಚಿದಂತೆ ಮತ್ತೆ ಮತ್ತೆ ಈ ಭಾರತ ಭಾಗ್ಯವಿಧಾತನನ್ನು ಸ್ಮರಿಸಿಕೊಳ್ಳುತ್ತಾರೆೆ. ಕೆಲವು ಹಳ್ಳಿಗಳಲ್ಲಿ ಮುಗ್ಧ್ದ ಜನ ತೊಟ್ಟಿಲಲ್ಲಿ ತೂಗಿ ಗೌರವಿಸುತ್ತಾರೆ. ಆದರೆ ಅವರ ಜನ್ಮದಿನವನ್ನು ಹೇಗೆ ಆಚರಿಸಬೇಕೆಂಬುದನ್ನು ಬಿಜಾಪುರದ ಗೆಳೆಯರು ಈ ಸಲ ತೋರಿಸಿಕೊಟ್ಟರು.

ಆದರೆ ನಿಜವಾಗಿ ಅಂಬೇಡ್ಕರ್ ಅವರ ಜಯಂತಿಯನ್ನು ಹೇಗೆ ಆಚರಿಸಬೇಕು? ‘ನಾನು ಪ್ರತಿಮೆಗಳಲ್ಲಿ ಇಲ್ಲ, ಪುಸ್ತಕಗಳಲ್ಲಿ ಇದ್ದೇನೆ’ ಎಂಬ ಅವರ ಈ ಮಾತನ್ನು ಸಂಕೇತಿಸುವ ಬಾಬಾಸಾಹೇಬರ ಜನ್ಮದಿನವನ್ನು ಈ ಬಾರಿ ಬಿಜಾಪುರದ ಮಿತ್ರರು ಆಚರಿಸಿದರು. ಬಿಜಾಪುರದ ಮೇ ಸಾಹಿತ್ಯ ಬಳಗ ಹಾಗೂ ಸ್ಥಳೀಯ ಪ್ರಗತಿಪರ ಸಂಘಟನೆಗಳು ಸೇರಿ ಎಪ್ರಿಲ್ 10ರಿಂದ 14ರವರೆಗೆ ಬುದ್ಧ್ದ, ಬಸವ, ಬಾಬಾಸಾಹೇಬರ ಪುಸ್ತಕ ಮೇಳವನ್ನು ಏರ್ಪಡಿಸಿದ್ದರು. ಮನ ಮತ್ತು ಮನೆಯ ತುಂಬೆಲ್ಲ ಅಂಬೇಡ್ಕರ್ ಅವರನ್ನೇ ತುಂಬಿ ಕೊಂಡು ಉಸಿರಾಡುವ ಅನಿಲ ಹೊಸಮನಿಯವರು ಮತ್ತು ಉತ್ತರ ಕರ್ನಾಟಕದಲ್ಲಿ ಕೋಮುವಾದಿ ಮತ್ತು ಮನುವಾದಿ ಶಕ್ತಿಗಳ ವಿರುದ್ಧ ನಿರಂತರ ಸಂಘರ್ಷವನ್ನು ನಡೆಸುತ್ತಿರುವ ಲಡಾಯಿ ಪ್ರಕಾಶನದ ಬಸವರಾಜ ಸೂಳಿಬಾವಿ ಅವರು ಮಹಾ ನಾಯಕನ ಜಯಂತಿಯ ಸಂದರ್ಭದಲ್ಲಿ ಪುಸ್ತಕೋತ್ಸವವನ್ನು ಏರ್ಪಡಿಸುವ ವಿಷಯ ಮುಂದಿಟ್ಟರು. ಅನಿಲ ಹೊಸಮನಿ ಸೇರಿದಂತೆ ಬಿಜಾಪುರದ ಗೆಳೆಯರು ವಿನೂತನವಾಗಿ ಆಚರಿಸಲು ಒಪ್ಪಿಕೊಂಡರು. ಬುದ್ಧ, ಬಸವ, ಬಾಬಾಸಾಹೇಬರ ಸಾಹಿತ್ಯವನ್ನು ಜನರಿಗೆ ತಲುಪಿಸಲು ಹಮ್ಮಿಕೊಂಡ ಕಾರ್ಯಕ್ರಮವಿದು.

ಬಾಬಾಸಾಹೇಬರು ಉಳಿದೆಲ್ಲವುಗಳಿಗಿಂತ ಪುಸ್ತಕಗಳನ್ನು ಹೆಚ್ಚು ಪ್ರೀತಿಸುತ್ತಿದ್ದರು. ವ್ಯಾಸಂಗ ಮಾಡಲು ಇಂಗ್ಲೆಂಡ್‌ಗೆ ಹೋಗಿ ವಾಪಸ್ ಬರುವಾಗ ಹಡಗಿನಲ್ಲಿ ಸಾವಿರಾರು ಪುಸ್ತಕಗಳನ್ನು ಹೊತ್ತು ತಂದರು. ಮುಂಬೈನಲ್ಲಿ ಅವರು ಕಟ್ಟಿಸಿರುವ ಮನೆ ರಾಜಗೃಹ ಸುಮಾರು 50 ಸಾವಿರ ಪುಸ್ತಕಗಳಿಗೆ ಆಸರೆಯಾಗಿತ್ತು.

ಈ ಎಲ್ಲ ಪುಸ್ತಕಗಳನ್ನು ಅವರು ಚಂದಕ್ಕೆ ಇಟ್ಟಿರಲಿಲ್ಲ. ಎಲ್ಲ ಪುಸ್ತಕಗಳನ್ನು ಓದಿ ಮನದೊಳಗೆ ಇಳಿಸಿಕೊಂಡಿದ್ದರು.ಅರ್ಥಶಾಸ್ತ್ರ, ಸಮಾಜಶಾಸ್ತ್ರ, ರಾಜ್ಯಶಾಸ್ತ್ರ, ಸಾಹಿತ್ಯ, ಕಲೆ, ವಿಜ್ಞಾನ ಹೀಗೆ ಹಲವಾರು ವಿಷಯಗಳನ್ನು ಒಳಗೊಂಡ ಪುಸ್ತಕಗಳು ಅವರ ಬಳಿ ಇದ್ದವು. ಇಡೀ ಜಗತ್ತಿನ ಕೆಲವೇ ಕೆಲವು ಬಹುದೊಡ್ಡ ಖಾಸಗಿ ಗ್ರಂಥಾಲಯಗಳಲ್ಲಿ ಅಂಬೇಡ್ಕರ್ ಮನೆಯಲ್ಲಿನ ಗ್ರಂಥಾಲಯವೂ ಒಂದಾಗಿತ್ತು.ಈ ಐವತ್ತು ಸಾವಿರ ಪುಸ್ತಕಗಳಲ್ಲಿ ಯಾವುದು, ಎಲ್ಲಿದೆ ಎಂಬುದು ಬಾಬಾಸಾಹೇಬರಿಗೆ ಗೊತ್ತಿರುತ್ತಿತ್ತು.ಅವಿಭಜಿತ ಬಿಜಾಪುರ (ಈಗ ವಿಜಯಪುರ) ನನ್ನ ಜಿಲ್ಲೆ. ಅದು ಒಂದಾಗಿ ಇದ್ದಾಗ 1974ರಲ್ಲಿ ಐವತ್ತು ವರ್ಷಗಳ ಹಿಂದೆ ನಾನು ಊರು ಬಿಟ್ಟು ಹುಬ್ಬಳ್ಳಿ ನಂತರ ಬೆಂಗಳೂರನ್ನು ಸೇರಿದವನು. ಸರಕಾರ ಏನೇ ಹೆಸರು ಬದಲಿಸಲಿ ನನಗದು ಈಗಲೂ ಬಿಜಾಪುರ ಜಿಲ್ಲೆ. ನನ್ನ ಮನದಾಳದಲ್ಲಿ ಇಂದಿಗೂ ಬಿಜಾಪುರದಂತೆ ಯಾವ ಊರೂ ಉಳಿದಿಲ್ಲ. ಅಂತಲೇ ಅಲ್ಲಿ ಹೋಗುವ ಯಾವ ಅವಕಾಶವನ್ನೂ ನಾನು ಕಳೆದುಕೊಳ್ಳುವುದಿಲ್ಲ. ಆದರೆ ಬೇಸಿಗೆಯ ಬಿಸಿಲಿನಲ್ಲಿ ಹೋಗುವದು ತುಂಬಾ ವಿರಳ. ಬಿಸಿಲೆಂದು ಅಂಬೇಡ್ಕರ್ ಜಯಂತಿಯನ್ನು ಆಚರಿಸದಿರಲಾಗುವುದಿಲ್ಲ. ಅಂತಲೇ 41 ಡಿಗ್ರಿ ಉರಿ ಬಿಸಿಲಿನಲ್ಲಿ ಮೇ ಸಾಹಿತ್ಯ ಮೇಳದ ಪುಸ್ತಕೋತ್ಸವದಲ್ಲಿ ಪಾಲ್ಗೊಳ್ಳಲು ಮೊದಲು ಹಿಂಜರಿಕೆಯಾಯಿತು. ಆದರೆ ಆದದ್ದಾಗಲಿ ಎಂದು ಬಿಜಾಪುರಕ್ಕೆ ಹೊರಟೆ. ಹುಬ್ಬಳ್ಳಿಯಲ್ಲಿ 10:30ಕ್ಕೆ ಸಾರಿಗೆ ಸಂಸ್ಥೆಯ ಬಸ್‌ನಲ್ಲಿ ಕುಳಿತು ಮಧ್ಯಾಹ್ನ 2_:30 ಕ್ಕೆ ಬಿಜಾಪುರ ತಲುಪಿದಾಗ ದೇಹಕ್ಕೆ ಕೆಂಡದಂಥ ಬಿಸಿಲು. ಆದರೂ ಮನಸ್ಸಿಗೆ ಬೆಳದಿಂಗಳು.ಅಲ್ಲಿ ಇದ್ದ ಮೂರು ದಿನವೂ ಸಮಯ ಕಳೆದದ್ದೇ ಗೊತ್ತಾಗಲಿಲ್ಲ.

ಬಿಜಾಪುರ ಮಾತ್ರವಲ್ಲ ಕರ್ನಾಟಕದ ಇತಿಹಾಸದಲ್ಲೇ ಇದೊಂದು ಅಪರೂಪದ ಕಾರ್ಯಕ್ರಮ. ಅಂಬೇಡ್ಕರ್ ಜಯಂತಿಯ ದಿನ ಪುಸ್ತಕ ಮೇಳ ಏರ್ಪಡಿಸಿರುವುದು ಹೊಸ ಪರಂಪರೆಯ ಆರಂಭಕ್ಕೆ ನಾಂದಿಯಾಯಿತು.41 ಡಿಗ್ರಿ ಉರಿ ಬಿಸಿಲಿನಲ್ಲಿ ಐದೂ ದಿನ ಪುಸ್ತಕ ಮೇಳಕ್ಕೆ ಜನ ಬರುತ್ತಲೇ ಇದ್ದರು.ಇದರ ಜೊತೆಗೆ ವೇದಿಕೆಯಲ್ಲಿ ವಿಚಾರ ಮಂಡನೆ,ಸಂವಾದ,ಉಪನ್ಯಾಸ, ಹಾಡು ಇವೆಲ್ಲ ಸೇರಿ ಹೊಸ ವಾತಾವರಣ ನಿರ್ಮಾಣವಾಗಿತ್ತು.ಪುಸ್ತಕ ಮೇಳಕ್ಕೆ 15ಕ್ಕೂ ಹೆಚ್ಚು ಪುಸ್ತಕ ಅಂಗಡಿಗಳು ಬಂದಿದ್ದವು. ಒಂದೇ ಜಾಗದಲ್ಲಿ ಬುದ್ಧ್ದ, ಬಸವಣ್ಣ ಮತ್ತು ಬಾಬಾಸಾಹೇಬರು ಸಿಗುತ್ತಿದ್ದರು. ಹಾಗೆ ನೋಡಿದರೆ ಸಾಹಿತ್ಯ ಕೃತಿಗಳನ್ನು ಮಾರಾಟ ಮಾಡುವ ಪುಸ್ತಕದ ಅಂಗಡಿ ಬಿಜಾಪುರದಲ್ಲಿ ಇಲ್ಲ. ಆದರೆ ಜನರಿಗೆ ಓದುವ ಹಸಿವು ಇದೆ ಎಂಬುದಕ್ಕೆ ಈ ಪುಸ್ತಕ ಮೇಳ ಸಾಕ್ಷಿಯಾಗಿತ್ತು.

ಕರ್ನಾಟಕ ರಾಜ್ಯ ನಿರ್ಮಾಣಕ್ಕೆ ಮುನ್ನ ಮುಂಬೈ ಪ್ರಾಂತಕ್ಕೆ ಸೇರಿದ್ದ ಬಿಜಾಪುರ, ಧಾರವಾಡ, ಬೆಳಗಾವಿ, ಕಾರವಾರ, ಮೊದಲಾದ ಜಿಲ್ಲೆಗಳನ್ನು ಮುಂಬೈ ಕರ್ನಾಟಕ ಎಂದು ಜನ ಕರೆಯುತ್ತ ಬಂದಿದ್ದಾರೆ. ಸರಕಾರ ಅದಕ್ಕೆ ಕಿತ್ತೂರು ಕರ್ನಾಟಕ ಎಂದು ಮರು ನಾಮಕರಣ ಮಾಡಿದೆ. ಛೋಟಾ ಮುಂಬೈ ಎಂದು ಕರೆಯಲ್ಪಡುವ ಹುಬ್ಬಳ್ಳಿ ಈ ಉತ್ತರ ಕರ್ನಾಟಕದ ಭಾಗವಾದ ಕಿತ್ತೂರು ಕರ್ನಾಟಕದ ಕೇಂದ್ರ.

ಹಿಂದೆ ಸ್ವಾತಂತ್ರ್ಯ ಹೋರಾಟ, ಕರ್ನಾಟಕ ಏಕೀಕರಣ ಹೋರಾಟಗಳ ಕೇಂದ್ರವಾಗಿದ್ದ ಹುಬ್ಬಳ್ಳಿ ಈಗ ಕೋಮುವಾದಿ ಮತ್ತು ಮನುವಾದಿ ಶಕ್ತಿಗಳ ಕೇಂದ್ರ ವಾಗಿದೆ.ಹುಬ್ಬಳ್ಳಿ ಮಾತ್ರವಲ್ಲ ಮುಂಬೈ ಕರ್ನಾಟಕದ ಬಹುತೇಕ ಭಾಗದಲ್ಲಿ ಬಿಜೆಪಿ ನೆಲೆಯೂರಿದೆ. ಈ ಕೋಮು ಶಕ್ತಿಗಳಿಗೆ ಪ್ರತಿರೋಧವೇ ಇಲ್ಲದ ಪರಿಸ್ಥಿತಿ ಇಲ್ಲಿದೆ. ಕಾಂಗ್ರೆಸ್ ರಾಜಕೀಯವಾಗಿ ಸೋಲು, ಗೆಲುವು ಗಳನ್ನು ಅನುಭವಿಸುತ್ತ ಬಂದಿದೆ. ಆದರೆ ಸೈದ್ಧಾಂತಿಕವಾಗಿ ಕೋಮುವಾದಿಗಳನ್ನು ಎದುರಿಸಿ ಹೋರಾಡುತ್ತಿರುವುದು ಮೇ ಸಾಹಿತ್ಯ ಬಳಗ. ಬಸವರಾಜ ಸೂಳಿಬಾವಿ ಅವರ ನೇತೃತ್ವದಲ್ಲಿ ಪುಟ್ಟದಾಗಿ ಆರಂಭವಾದ ಮೇ ಬಳಗ ಈಗ ವ್ಯಾಪಕವಾಗಿ ಬೆಳೆದಿದೆ. ಈ ಸಲ ಹುಬ್ಬಳ್ಳಿಯಲ್ಲಿ ಮೇ 16,17 ರಂದು ಮೇ ಸಾಹಿತ್ಯ ಸಮ್ಮೇಳನ ನಡೆಯಲಿದೆ.

ಈಗ ಓದುವ ಸಂಸ್ಕೃತಿ ಮಾಯವಾಗಿದೆ. ಮೊಬೈಲ್, ಇಂಟರ್ನೆಟ್, ಫೇಸ್ಬುಕ್, ವ್ಯಾಟ್ಸ್

ಆ್ಯಪ್, ಇಮೇಲ್‌ಗಳ ಅಬ್ಬರದ ಕಾಲ ಇದು. ಈಗ ಯಾವುದೇ ಊರಿಗೆ ಹೋದರೂ ಎಲ್ಲೂ ನಿಮಗೆ ದಿನಪತ್ರಿಕೆ ಮತ್ತು ವಾರಪತ್ರಿಕೆ ಗಳನ್ನು ಮಾರಾಟ ಮಾಡುವ ಅಂಗಡಿಗಳು ಸಿಗುವುದಿಲ್ಲ. ಈಗಿನ ಹುಡುಗರು ಪತ್ರಿಕೆ ಓದುವುದು ಕಡಿಮೆ. ಮೊಬೈಲ್‌ನಲ್ಲೇ ಎಲ್ಲವನ್ನೂ ನೋಡುತ್ತಾರೆ ಎಂದು ಮುಚ್ಚಿದ ಪತ್ರಿಕೆಗಳ ಅಂಗಡಿಯವರು ಹೇಳುತ್ತಾರೆ. ಇದರಲ್ಲಿ ಒಂದಿಷ್ಟು ನಿಜವೂ ಇದೆ. ಈಗ ಯೂ ಟ್ಯೂಬ್ ಚಾನೆಲ್‌ಗಳೇ ಮಾಧ್ಯಮಗಳಾಗಿವೆ.

ಆದರೂ ಕನ್ನಡ ಪುಸ್ತಕಗಳು ಮಾರಾಟವಾಗುತ್ತಲೇ ಇವೆ. ಆದರೆ ಮೇ ಸಾಹಿತ್ಯ ಬಳಗದದಂತೆ ಪುಸ್ತಕಗಳನ್ನು ಜನರ ಬಳಿ ಕೊಂಡೊಯ್ಯಬೇಕು. ಬಿಜಾಪುರದ ಪುಸ್ತಕ ಮೇಳ ಅಂಥದೊಂದು ಪ್ರಯೋಗ ಅಂದರೆ ಅತಿಶಯೋಕ್ತಿಯಲ್ಲ.

ಬಾಬಾಸಾಹೇಬರ ಜಯಂತಿ ಅಂದರೆ ಅಬ್ಬರದ ಮೆರವಣಿಗೆ, ಡಿಜೆ ಹಾಕಿ ಕುಣಿದಾಡುವುದು ಈಗ ಸಾಮಾನ್ಯವಾಗಿದೆ.

ಆದರೆ ಇಂಥದಕ್ಕೆ ಪರ್ಯಾಯವಾಗಿ ಬಾಬಾಸಾಹೇಬರ ಸಿದ್ಧಾಂತ ಹಾಗೂ ವಿಚಾರಗಳನ್ನು ಜನರ ಬಳಿ ಅದರಲ್ಲೂ ಯುವಕರ ಬಳಿ ತೆಗೆದುಕೊಂಡು ಹೋಗುವ ಕಾರ್ಯಕ್ರಮ ವಿಭಿನ್ನ.

ಪ್ರತಿವರ್ಷ ಡಿಸೆಂಬರ್ 6ನೇ ತಾರೀಕು ಅವರ ಪರಿನಿರ್ವಾಣ ದಿನ ಮುಂಬೈನ ಆಝದ್ ಮೈದಾನದಲ್ಲಿ ದೇಶದ ನಾನಾ ಕಡೆಗಳಿಂದ ಬಂದ ಐದು ನೂರಕ್ಕೂ ಹೆಚ್ಚು ಪುಸ್ತಕ ಮಳಿಗೆಗಳಿರುತ್ತವೆ. ಆದರೆ ಬಿಜಾಪುರದ್ದು ಆ ರೀತಿ ಅಲ್ಲ.

ಬಿಜಾಪುರದ ದರ್ಬಾರ್ ಹೈಸ್ಕೂಲ್ ಮೈದಾನದಲ್ಲಿ ನಡೆದದ್ದು ಪುಸ್ತಕೋತ್ಸವ. ಇದು ಬಿಜಾಪುರದ ಜನತೆಗೆ ಹೊಸದು. ಬಿಜಾಪುರ ನಗರದ ಮಾತ್ರವಲ್ಲ, ಕೆಲವು ತಾಲೂಕುಗಳಿಂದಲೂ ಪತ್ರಿಕೆಗಳಲ್ಲಿ ಸುದ್ದಿ ಓದಿ ಈ ಮೇಳಕ್ಕೆ ಜನರು ಬಂದಿದ್ದರು. ಪುಸ್ತಕ ಮಾರಾಟದ ಜೊತೆಗೆ ಏರ್ಪಡಿಸಿದ ಗೋಷ್ಠಿಗಳು ತುಂಬಾ ಚೆನ್ನಾಗಿದ್ದವು. ಬಿಜಾಪುರ ಅಂದಾಗ ಇನ್ನೊಂದು ಮಹತ್ವದ ಸಂಗತಿ ನೆನಪಿಗೆ ಬರುತ್ತದೆ.

ಬಾಬಾಸಾಹೇಬರು ಮುಂಬೈನಲ್ಲಿ ವಕೀಲ ವೃತ್ತಿ ಮಾಡುವಾಗ ಪ್ರಕರಣವೊಂದರ ವಕಾಲತ್‌ಗಾಗಿ ಬಿಜಾಪುರಕ್ಕೆ ಬಂದಿದ್ದರು. ಬಹುಶಃ 1936 ಇರಬಹುದು. ಬೀಳಗಿ ತಾಲೂಕಿನ ಸಂಗನಗೌಡ ಪಾಟೀಲ್ ಎಂಬವರು ಕೊಲೆ ಪ್ರಕರಣವೊಂದರಲ್ಲಿ ಸಿಕ್ಕ್ಕಿಗ ಹಾಕಿಕೊಂಡ ಬಿಜಾಪುರ ಕೋರ್ಟ್

ನಲ್ಲಿ ಅವರ ಪರವಾಗಿ ವಕಾಲತ್ತು ವಹಿಸಲು ಯಾರೂ ಮುಂದೆ ಬರಲಿಲ್ಲ. ಕೊನೆಗೆ ಆಗಿನ ಬಿಜಾಪುರದ ಪ್ರಸಿದ್ಧ್ದ ವಕೀಲರಾದ ಅಂಗಡಿಯವರು ಸಂಗನಗೌಡರನ್ನು ಮುಂಬೈಗೆ ಕರೆದುಕೊಂಡು ಹೋಗಿ ಅಂಬೇಡ್ಕರ್ ಅವರನ್ನು ಒಪ್ಪಿಸಿ ಕರೆದುಕೊಂಡು ಬಂದಿದ್ದರು. ಆ ಪ್ರಕರಣದಲ್ಲಿ ಸಂಗನಗೌಡರ ಬಿಡುಗಡೆಯಾಯಿತು.

ಈ ಕಾರ್ಯಕ್ರಮದ ಐದು ದಿನ ನಾಡಿನ ಹಲವಾರು ಚಿಂತಕರು ಬಂದು ಉಪನ್ಯಾಸ ಮಾಡಿದರು.ಭಾರತದ ಸ್ವಾತಂತ್ರ್ಯದ ಕ್ಕಿಂತ ಮೊದಲು ಮತ್ತು ನಂತರ. ಹೆಸರಾಂತ ಗಾಂಧಿವಾದಿ ಕಾಕಾ ಕಾರ್ಖಾನಿಸ್ ಅವರು ಬಿಜಾಪುರಕ್ಕೆ ಬಂದು ದಲಿತ ವಿದ್ಯಾರ್ಥಿಗಳಿಗಾಗಿ ವಸತಿ ನಿಲಯ ಮಾಡಿದ್ದರು. ಅವರದು ಸರಳ ಸಜ್ಜನಿಕೆಯ ವ್ಯಕ್ತಿತ್ವ.

ಅವರ ಬಗ್ಗೆ ಖ್ಯಾತ ಸಂಶೋಧಕ, ಕೃಷ್ಣ ಕೊಲ್ಹಾರ ಕುಲಕರ್ಣಿ ಕೊನೆಯ ದಿನ ತುಂಬಾ ಚೆನ್ನಾಗಿ ಮಾತಾಡಿದರು. ಉಳಿದಂತೆ ಲೇಖಕಿ ಡಾ.ಎಚ್.ಎಸ್.ಅನುಪಮಾ, ಶಿವಸುಂದರ್, ಪತ್ರಕರ್ತ ರಿಷಿಕೇಶ ಬಹದ್ದೂರ್ ದೇಸಾಯಿ ಮೊದಲಾದವರು ವಿವಿಧ ವಿಷಯಗಳ ಬಗ್ಗೆ ಉಪನ್ಯಾಸಗಳನ್ನು ನೀಡಿದರು.

Tags

Ambedkar JayantiCelebration
share
ಸನತ್ ಕುಮಾರ ಬೆಳಗಲಿ
ಸನತ್ ಕುಮಾರ ಬೆಳಗಲಿ
Next Story
X