Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಪ್ರಚಲಿತ
  5. ರಾಹುಲ್‌ ಗಾಂಧಿಗೆ ಇರುವ ಸವಾಲು, ಅವಕಾಶ

ರಾಹುಲ್‌ ಗಾಂಧಿಗೆ ಇರುವ ಸವಾಲು, ಅವಕಾಶ

ಸನತ್‌ಕುಮಾರ್ ಬೆಳಗಲಿಸನತ್‌ಕುಮಾರ್ ಬೆಳಗಲಿ1 July 2024 9:35 AM IST
share
ರಾಹುಲ್‌ ಗಾಂಧಿಗೆ ಇರುವ ಸವಾಲು, ಅವಕಾಶ
ಹಿಂದಿನ ಕಾಲಾವಧಿಯಲ್ಲಿ ಸಂಸತ್ತಿನಲ್ಲಿ ಚರ್ಚೆಯಾಗದೆ ಅನೇಕ ಮಸೂದೆಗಳನ್ನು ಪಾಸು ಮಾಡಿಕೊಳ್ಳಲಾಯಿತು. ಈಗ ಹಾಗೆ ಆಗಲು ಬಿಡಬಾರದು. ಈ ನಿಟ್ಟಿನಲ್ಲಿ ರಾಹುಲ್ ಗಾಂಧಿಯವರ ಮೇಲೆ ಮಹತ್ತರ ಹೊಣೆಗಾರಿಕೆ ಇದೆ. ಸಂಸತ್ತಿನ ನಿಯಮಾವಳಿಗಳನ್ನು ಅಧ್ಯಯನ ಮಾಡಿ ತಿಳಿದುಕೊಂಡು, ಬಿಕ್ಕಟ್ಟಿನ ಸಂದರ್ಭದಲ್ಲಿ ಸಮಯಸ್ಫೂರ್ತಿಯಿಂದ ಮಾತಾಡಿ ಸರಕಾರವನ್ನು ತುದಿಗಾಲ ಮೇಲೆ ನಿಲ್ಲಿಸುವ ಅವಕಾಶ ರಾಹುಲ್ ಗಾಂಧಿಯವರಿಗೆ ದೊರಕಿದೆ. ಕಾಂಗ್ರೆಸ್ ಪಕ್ಷ ಎಲ್ಲೂ ದೊಡ್ಡಣ್ಣನ ಧೋರಣೆ ತಾಳದೆ ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗಬೇಕು.

ಕಳೆದ 10 ವರ್ಷಗಳಿಂದ ಪಪ್ಪು ಎಂದು ನಿರಂತರ ಅಪಪ್ರಚಾರ ಮಾಡಲಾಯಿತು. ಮಾಧ್ಯಮಗಳನ್ನು ಬಳಸಿಕೊಂಡು ನಿತ್ಯ ತೇಜೋವಧೆ ನಡೆಯಿತು. ಕೊನೆಗೆ ಲೋಕಸಭಾ ಸದಸ್ಯತ್ವವನ್ನೂ ರದ್ದು ಮಾಡಿದ್ದಾಯ್ತು. ಅದೂ ಸಾಲದು ಎಂಬಂತೆ ಸಂಸದರಿಗೆಂದು ಒದಗಿಸಿದ್ದ ಮನೆಯನ್ನೂ ಖಾಲಿ ಮಾಡಿಸಿದ್ದಾಯ್ತು. ಈ ಅಮಾನವೀಯ ದ್ವೇಷದ ನಂಜನ್ನು ಈ ದೇಶದ ಜನ ಎಂದೂ ಕಂಡಿರಲಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯ ರಾಜಕಾರಣದಲ್ಲಿ ಭಿನ್ನಾಭಿಪ್ರಾಯಗಳು ಇರುತ್ತವೆ. ಈ ಭಿನ್ನಾಭಿಪ್ರಾಯಗಳು ದ್ವೇಷದ ರೂಪವನ್ನು ತಾಳಬಾರದು.

ಭಾರತಕ್ಕೆ ಹೊಸದಾಗಿದ್ದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ದೇಶದ ಮೊದಲ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರೂ ಅವರು ಅತ್ಯಂತ ಜೋಪಾನವಾಗಿ ಬೆಳೆಸಿಕೊಂಡು ಬಂದರು. ಸಂಸತ್ತಿನ ಉಭಯ ಸದನಗಳಲ್ಲಿ ಬಲಿಷ್ಠ ವಿರೋಧ ಪಕ್ಷ ಇರಬೇಕೆಂದು ನೆಹರೂ ಬಯಸುತ್ತಿದ್ದರು. ತಮ್ಮ ಕಟು ಟೀಕಾಕಾರರಾಗಿದ್ದ ಸೋಷಲಿಸ್ಟ್ ನಾಯಕ ಡಾ. ರಾಮ ಮನೋಹರ ಲೋಹಿಯಾ ಲೋಕಸಭೆಗೆ ಗೆದ್ದು ಬರಬೇಕೆಂದು ಬಯಸುತ್ತಿದ್ದರು. ಅವರ ವಿರುದ್ಧ ಕಾಂಗ್ರೆಸ್ ನಿಂದ ದುರ್ಬಲ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತಿದ್ದರು.

ಕಮ್ಯುನಿಸ್ಟ್ ನಾಯಕ ಭೂಪೇಶ್ ಗುಪ್ತಾ ಮಾತನಾಡುತ್ತಾರೆಂದರೆ ಆ ದಿನ ಸದನಕ್ಕೆ ಬಂದು ಅವರ ಭಾಷಣದ ಅಂಶಗಳನ್ನು ತಮ್ಮ ನೋಟ್ ಬುಕ್‌ನಲ್ಲಿ ಬರೆದುಕೊಳ್ಳುತ್ತಿದ್ದರು. ಇದು ಭಾರತದ ಪ್ರಜಾಪ್ರಭುತ್ವ. ಇಂಗ್ಲೆಂಡ್‌ನ ವೆಸ್ಟ್ ಮಿನಿಸ್ಟರ್ ಪದ್ಧತಿ ಮಾದರಿಯಾಗಿ ಇಟ್ಟುಕೊಂಡು ರೂಪುಗೊಂಡ ಭಾರತದ ಪ್ರಜಾಪ್ರಭುತ್ವ ಅನೇಕ ಏಳು ಬೀಳು ಕಂಡು ಉಳಿದುಕೊಂಡು ಬಂದಿದೆ. ಶತಮಾನಗಳ ಕಾಲ ರಾಜ ಪ್ರಭುತ್ವದ ಅಡಿಯಲ್ಲಿ ನಲುಗಿದ ಭಾರತದಂಥ ಪಾಳೇಗಾರಿ, ಸಾಮಂತಶಾಹಿ ಭೂ ಪ್ರದೇಶದಲ್ಲಿ ಪ್ರಜಾಪ್ರಭುತ್ವದ ಪ್ರಯೋಗ ಯಶಸ್ವಿಯಾಗುವುದು ಸುಲಭದ ಸಂಗತಿಯಲ್ಲ.

ಸಂವಿಧಾನದ ನಿರ್ಮಾಪಕ ಬಾಬಾಸಾಹೇಬರು ಯಾವಾಗಲೂ ಒಂದು ಮಾತನ್ನು ಹೇಳುತ್ತಿದ್ದರು. ‘ಭಾರತೀಯ ಸಮಾಜವು ಪ್ರಜಾಪ್ರಭುತ್ವೀಕರಣಗೊಳ್ಳದೆ ರಾಜಕೀಯ ಪ್ರಜಾಪ್ರಭುತ್ವ ಯಶಸ್ವಿ ಆಗುವುದಿಲ್ಲ’ ಎನ್ನುತ್ತಿದ್ದರು. ಇದು ಕಳೆದ ಎರಡೂವರೆ ದಶಕಗಳಿಂದ ಅದರಲ್ಲೂ ಕಳೆದ ಹತ್ತು ವರ್ಷಗಳಿಂದ ಸಾಬೀತಾಗುತ್ತಲೇ ಇದೆ. ಆದರೂ ಅಧಿಕಾರದ ಅಹಂಕಾರವನ್ನು ತಲೆಗೇರಿಸಿಕೊಂಡವರಿಗೆ ಮೊಟಕಿ ಬುದ್ಧಿ ಕಲಿಸುವ ಶಕ್ತಿ ಪ್ರಜಾಪ್ರಭುತ್ವಕ್ಕೆ ಇದೆ. ಅದಕ್ಕೆ ರಾಹುಲ್ ಗಾಂಧಿಯವರನ್ನು ದೇಶದಿಂದಲೇ ಹೊರ ದಬ್ಬಬೇಕೆಂದವರೇ ಅವರನ್ನು ಲೋಕಸಭಾ ಅಧಿವೇಶನದಲ್ಲಿ ಕೈ ಕುಲುಕಿ ಸ್ವಾಗತಿಸಬೇಕಾಯಿತು. ಇದು ಬಾಬಾಸಾಹೇಬರ ಸಂವಿಧಾನದ ತಾಕತ್ತು.

ಕಳೆದ 20 ವರ್ಷಗಳಿಂದ ರಾಜಕೀಯದಲ್ಲಿ ಇದ್ದರೂ ಹೊಣೆ ಹೊತ್ತುಕೊಳ್ಳಲು ನಿರಾಕರಿಸುತ್ತಿದ್ದ ರಾಹುಲ್ ಗಾಂಧಿ ಈ ಬಿಕ್ಕಟ್ಟಿನ ಕಾಲದಲ್ಲಿ ಲೋಕಸಭೆಯ ಪ್ರತಿಪಕ್ಷ ನಾಯಕನ ಸ್ಥಾನವನ್ನು ವಹಿಸಿಕೊಂಡಿದ್ದಾರೆ. ಇದು ರಾಹುಲ್ ಅವರಿಗೆ ದೊರೆತ ಮೊದಲ ಸಾಂವಿಧಾನಿಕ ಸ್ಥಾನ. ಹಿಂದಿನ ಲೋಕಸಭೆಯಲ್ಲಿ ಸದಾ ಪ್ರತಿಪಕ್ಷಗಳ ಬಾಯಿ ಮುಚ್ಚಿಸುತ್ತ ಅಮಾನತು ಮಾಡುತ್ತಾ ಬಂದ ಬಿಜೆಪಿಯ ಓಂ ಬಿರ್ಲಾ ಸ್ಪೀಕರ್ ಆಗಿರುವುದರಿಂದ ಪ್ರತಿಪಕ್ಷ ನಾಯಕನ ಸ್ಥಾನ ಅತ್ಯಂತ ಜವಾಬ್ದಾರಿಯುತ ಆಗಿದೆ.

ಸಂಸತ್ತಿನಲ್ಲಿ ಪ್ರತಿಪಕ್ಷ ನಾಯಕನ ಸ್ಥಾನವೆಂದರೆ ಬರೀ ಸರಕಾರದ ಲೋಪದೋಷಗಳನ್ನು ಪ್ರಶ್ನಿಸುವುದು ಮಾತ್ರವಲ್ಲ. ಪ್ರತಿಪಕ್ಷ ನಾಯಕನೆಂದರೆ ಛಾಯಾ ಪ್ರಧಾನ ಮಂತ್ರಿ ಇದ್ದಂತೆ. ಚುನಾವಣಾ ಆಯೋಗದ ಆಯುಕ್ತರು, ಸಿಬಿಐ, ಜಾರಿ ನಿರ್ದೇಶನಾಲಯ (ಈ.ಡಿ.) ಮುಂತಾದ ಸಾಂವಿಧಾನಿಕ ಹುದ್ದೆಗಳ ನೇಮಕಾತಿಯ ಮೂವರು ಸದಸ್ಯರ ಸಮಿತಿಯಲ್ಲಿ ಸದನದ ಪ್ರತಿಪಕ್ಷ ನಾಯಕರೂ ಇರುತ್ತಾರೆ. ಪ್ರಧಾನ ಮಂತ್ರಿಗೆ ಸಮನ್ಸ್ ನೀಡುವ ಜಂಟಿ ಸದನ ಸಮಿತಿಗೂ ರಾಹುಲ್ ಗಾಂಧಿ ಸದಸ್ಯರಾಗಿರುತ್ತಾರೆ.

ಕಳೆದ 10 ವರ್ಷಗಳಿಂದ ಸಂಸತ್ತಿನಲ್ಲಿ ಅದರಲ್ಲೂ ಲೋಕಸಭೆಯಲ್ಲಿ ಪ್ರಬಲ ಪ್ರತಿಪಕ್ಷವಿರಲಿಲ್ಲ. ಕಾಂಗ್ರೆಸ್ ಎರಡಂಕಿ ದಾಟಿರಲಿಲ್ಲ.ಎಲ್ಲ ಪ್ರತಿಪಕ್ಷಗಳು ಸೇರಿದರೂ ಅಧಿಕಾರದಲ್ಲಿರುವ ಪಕ್ಷವನ್ನು ಜನ ಅಲುಗಾಡಿಸಲು ಆಗುತ್ತಿರಲಿಲ್ಲ. ಇದರಿಂದ ಖುಷಿ ಪಟ್ಟ ಮಹಾಪ್ರಭುಗಳು ಸಂಸತ್ತಿನಲ್ಲಿ ಮಾತ್ರವಲ್ಲ ಭಾರತದಲ್ಲೇ ಪ್ರತಿಪಕ್ಷ ಇರಬಾರದೆಂದು ಕಾಂಗ್ರೆಸ್ ಮುಕ್ತ ಭಾರತದ ಹೆಸರಿನಲ್ಲಿ ಪ್ರತಿಪಕ್ಷ ಮುಕ್ತ ಭಾರತವನ್ನು ನಿರ್ಮಿಸಲು ಹೊರಟರು. ಅದಕ್ಕೆ ಅವರು ಆಯ್ದುಕೊಂಡ ಮಾರ್ಗ ಅತ್ಯಂತ ಸರಳವಾದುದು. ಯಾವುದೇ ರಾಜ್ಯದ ಚುನಾವಣೆಯಲ್ಲಿ ಪ್ರತಿಪಕ್ಷಗಳು ಜಯ ಗಳಿಸಿದರೆ ಮೊದಲು ಕುದುರೆ ವ್ಯಾಪಾರ ಚಾಲೂ ಮಾಡುತ್ತಿದ್ದರು. ಅದಕ್ಕೂ ಮಣಿಯದಿದ್ದರೆ ಸಿಬಿಐ, ಈ.ಡಿ., ಐಟಿಗಳೆಂಬ ಬ್ರಹ್ಮಾಸ್ತ್ರಗಳನ್ನು ಬಿಟ್ಟು ಶಾಸಕರನ್ನು ಸಾರಾ ಸಗಟು ಬುಟ್ಟಿಗೆ ಹಾಕಿಕೊಳ್ಳುತ್ತಿದ್ದರು.

ಯಾವುದಕ್ಕೂ ಮಣಿಯದ ಕೇರಳದಂಥ ರಾಜ್ಯದಲ್ಲಿ ಮುಸ್ಲಿಮ್ ಮತ್ತು ಕ್ರೈಸ್ತ ಅಲ್ಪಸಂಖ್ಯಾತರ ನಡುವೆ ಕಲಹದ ಕಿಡಿ ಹೊತ್ತಿಸಿ ಕಾಲೂರಲು ಯತ್ನಿಸುತ್ತ ಬಂದರು. ಪ್ರತಿರೋಧದ ಧ್ವನಿಯಾಗಿದ್ದ ಆನಂದ ತೇಲ್ತುಂಬ್ಡೆ, ಗೌತಮ್ ನವ್ಲಾಖಾ, ವರವರರಾವ್ ಅಂಥವರು ಮಾತ್ರವಲ್ಲ ಅರವಿಂದ ಕೇಜ್ರಿವಾಲ್, ಸೂರೇನ್‌ರಂಥ ಮುಖ್ಯಮಂತ್ರಿಗಳನ್ನೇ ಜೈಲಿಗೆ ದಬ್ಬಿದರು.

ಇಂತಹ ಸನ್ನಿವೇಶದಲ್ಲಿ ರಾಹುಲ್ ಗಾಂಧಿ ಎದೆಗುಂದದೆ ‘ಭಾರತ ಜೋಡೊ’ ಪಾದಯಾತ್ರೆಯ ಮೂಲಕ ಇಡೀ ಭಾರತವನ್ನು ಸುತ್ತಾಡಿ ಜನರ ನಾಡಿಮಿಡಿತವನ್ನು ಅರಿತರು. ಕೋಮು ಹಿಂಸಾಚಾರದ ವಿರುದ್ಧ ಧ್ವನಿ ಎತ್ತಿದರು.

ಅವರ ಪಕ್ಷದ ಉಳಿದ ನಾಯಕರು ಮಾತಾಡಲು ಹಿಂಜರಿಯುವ ಅಂಬಾನಿ, ಅದಾನಿಯಂಥ ಕಾರ್ಪೊರೇಟ್ ಬಂಡವಾಳಶಾಹಿಗಳ ವಿರುದ್ಧ ಮಾತನಾಡಿದರು. ಆಪ್ತ ಗೆಳೆಯರಾಗಿದ್ದ ಜ್ಯೊತಿರಾದಿತ್ಯ ಸಿಂಧಿಯಾರಂಥವರು ಕೈ ಕೊಟ್ಟು ಹೋದರೂ ಹಿಂಜರಿಯದ ರಾಹುಲ್ ಬಹುತ್ವ ಭಾರತದ ಬಗ್ಗೆ ಎಲ್ಲೆಡೆ ಜನ ಜಾಗೃತಿ ಮೂಡಿಸಿದರು. ಹೀಗಾಗಿ ಇತ್ತೀಚಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿನ ಬಹುತೇಕ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ. ಎಐಸಿಸಿ ಅಧ್ಯಕ್ಷರಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರ ನೇತೃತ್ವದಲ್ಲಿ ಪ್ರತಿಪಕ್ಷಗಳನ್ನು ‘ಇಂಡಿಯಾ’ ಒಕ್ಕೂಟದ ಹೆಸರಿನಲ್ಲಿ ಒಂದುಗೂಡಿಸಿದ್ದು ಸಾರ್ಥಕವಾಯಿತು.

ಸದನದ ಕಲಾಪಗಳು ಸರಿಯಾಗಿ ನಡೆಯಬೇಕೆಂದರೆ ಆಡಳಿತ ಪಕ್ಷ ಮತ್ತು ಸ್ಪೀಕರ್ ಸಕಾರಾತ್ಮಕವಾಗಿ ವರ್ತಿಸಬೇಕು. ಬಲರಾಮ ಜಾಖಡ್, ಸೋಮನಾಥ ಚಟರ್ಜಿಯವರಂಥ ಲೋಕಸಭಾಧ್ಯಕ್ಷರನ್ನು ಭಾರತ ನೋಡಿದೆ. ಪ್ರತಿಪಕ್ಷ ಸದಸ್ಯರನ್ನು ಸಸ್ಪೆಂಡ್ ಮಾಡುವ, ಅವರು ಮಾತಾಡುವಾಗ ಧ್ವನಿವರ್ಧಕ ಬಂದ್ ಮಾಡಿಸುವ ಸ್ಪೀಕರ್‌ಗಳನ್ನು ನೋಡಿದ್ದೇವೆ, ನೋಡುತ್ತಿದ್ದೇವೆ. ಇನ್ನು ಮುಂದೆ ಹಾಗಾಗದಂತೆ ನೋಡಿಕೊಳ್ಳಬೇಕಾಗಿದೆ.

ಹಿಂದಿನ ಕಾಲಾವಧಿಯಲ್ಲಿ ಸಂಸತ್ತಿನಲ್ಲಿ ಚರ್ಚೆಯಾಗದೆ ಅನೇಕ ಮಸೂದೆಗಳನ್ನು ಪಾಸು ಮಾಡಿಕೊಳ್ಳಲಾಯಿತು. ಈಗ ಹಾಗೆ ಆಗಲು ಬಿಡಬಾರದು. ಈ ನಿಟ್ಟಿನಲ್ಲಿ ರಾಹುಲ್ ಗಾಂಧಿಯವರ ಮೇಲೆ ಮಹತ್ತರ ಹೊಣೆಗಾರಿಕೆ ಇದೆ. ಸಂಸತ್ತಿನ ನಿಯಮಾವಳಿಗಳನ್ನು ಅಧ್ಯಯನ ಮಾಡಿ ತಿಳಿದುಕೊಂಡು, ಬಿಕ್ಕಟ್ಟಿನ ಸಂದರ್ಭದಲ್ಲಿ ಸಮಯಸ್ಫೂರ್ತಿಯಿಂದ ಮಾತಾಡಿ ಸರಕಾರವನ್ನು ತುದಿಗಾಲ ಮೇಲೆ ನಿಲ್ಲಿಸುವ ಅವಕಾಶ ರಾಹುಲ್ ಗಾಂಧಿಯವರಿಗೆ ದೊರಕಿದೆ. ಕಾಂಗ್ರೆಸ್ ಪಕ್ಷ ಎಲ್ಲೂ ದೊಡ್ಡಣ್ಣನ ಧೋರಣೆ ತಾಳದೆ ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗಬೇಕು.

ನಾಗಪುರ ನಿಯಂತ್ರಿತ ಮೋದಿ ನೇತೃತ್ವದ ಎನ್‌ಡಿಎ ಸರಕಾರ ಚುನಾವಣೆಯ ಫಲಿತಾಂಶದಿಂದ ಪಾಠ ಕಲಿತ ಸೂಚನೆಗಳು ಕಾಣುತ್ತಿಲ್ಲ. ನರೇಂದ್ರ ಮೋದಿಯವರ ನುಡಿ ಮತ್ತು ನಡೆಗಳಲ್ಲಿ ಈ ಧೋರಣೆ ಎದ್ದು ಕಾಣುತ್ತದೆ. ಜಾತ್ಯತೀತ ಭಾರತವನ್ನು ಕೋಮುವಾದಿ ಹಿಂದೂ ರಾಷ್ಟ್ರವನ್ನಾಗಿ ಮಾಡುವ ಕಾರ್ಯಸೂಚಿಯನ್ನು ಜಾರಿಗೆ ತರಲು ಅದು ಯತ್ನಿಸುತ್ತದೆ. ಒಂದು ದೇಶ ಒಂದು ಚುನಾವಣೆಯ ಮಸಲತ್ತನ್ನು ಅದು ನಡೆಸುತ್ತದೆ. ಅದನ್ನು ತಡೆಯಲು ರಾಹುಲ್ ಗಾಂಧಿ ಇತರ ಪ್ರತಿಪಕ್ಷ ಗಳ ಜೊತೆಗೆ ಸೇರಿ ಕಾರ್ಯ ತಂತ್ರವನ್ನು ರೂಪಿಸಬೇಕಾಗಿದೆ.

ಸದನದಲ್ಲಿ ರಾಹುಲ್ ಗಾಂಧಿಯವರ ಆರಂಭ ಚೆನ್ನಾಗಿದೆ. ಇಡೀ ಸದನವೇ ಹಿಂದಿಮಯವಾಗಿರುವಾಗ ರಾಹುಲ್ ಗಾಂಧಿ ಇಂಗ್ಲಿಷ್‌ನಲ್ಲಿ ಮಾತಾಡಿದ್ದಾರೆ. ಒಂದೇ ರಾಷ್ಟ್ರ, ಒಂದೇ ಭಾಷೆ, ಒಂದೇ ಧರ್ಮದ ಹೆಸರಿನಲ್ಲಿ ಕೇವಲ 4 ಅಥವಾ 5 ರಾಜ್ಯಗಳ ಜನ ಮಾತಾಡುವ ಹಿಂದಿಯನ್ನು ದೇಶದ ಮೇಲೆ ಹೇರಲು ಹೊರಟಿರುವ ಈ ದಿನಗಳಲ್ಲಿ ರಾಹುಲ್ ಗಾಂಧಿ ಅವರ ಇಂಗ್ಲಿಷ್ ಭಾಷಣ ದಕ್ಷಿಣ ಭಾರತೀಯರು ಸೇರಿದಂತೆ ಹಿಂದಿಯೇತರ ರಾಜ್ಯಗಳ ಭಾವನೆಯನ್ನು ಗೌರವಿಸಿದಂತಾಗಿದೆ.

ರಾಹುಲ್ ಗಾಂಧಿಯವರ ಮೇಲೆ ಇನ್ನೊಂದು ದೊಡ್ಡ ಜವಾಬ್ದಾರಿ ಇದೆ. ಪಂಡಿತ ನೆಹರೂ ಕಾಲದ ಜನಮುಖಿ ಆರ್ಥಿಕ ನೀತಿಗೆ ಪಿ.ವಿ. ನರಸಿಂಹರಾವ್ ಕಾಲದಲ್ಲಿ ಎಳ್ಳು ನೀರು ಬಿಡಲಾಯಿತು. ಅದೇ ಸಂದರ್ಭದಲ್ಲಿ ಅಯೋಧ್ಯೆಯ ಬಾಬರಿ ಮಸೀದಿಯನ್ನು ನೆಲಕ್ಕುರುಳಿಸಲಾಯಿತು. ಆಗ ಹಳಿ ತಪ್ಪಿದ ಕಾಂಗ್ರೆಸನ್ನು ಮತ್ತೆ ಹಳಿಯ ಮೇಲೆ ತರಬೇಕಾಗಿದೆ. ಮಾರುಕಟ್ಟೆ ಆರ್ಥಿಕತೆಯ ನವ ಉದಾರವಾದಿ ನೀತಿ ಧೋರಣೆಗಳ ದುಷ್ಪರಿಣಾಮ ವನ್ನು ಭಾರತ ಈಗಾಗಲೇ ಅನುಭವಿಸುತ್ತಿದೆ. ರಾಹುಲ್ ಗಾಂಧಿಯವರು ಈ ಬಗ್ಗೆ ಸೂಚ್ಯವಾಗಿ ಅನೇಕ ಬಾರಿ ಮಾತಾಡಿದ್ದಾರೆ. ಪ್ರತಿಪಕ್ಷ ನಾಯಕರಾಗಿರುವ ಅವರು ಈಗ ಧ್ವನಿಯೆತ್ತಿ ಮಾತಾಡಬೇಕಾಗಿದೆ.

ಚುನಾವಣೆಯ ನಂತರ ಲೋಕಸಭೆಯ ಮೊದಲ ಅಧಿವೇಶನದಲ್ಲಿ ಸಂವಿಧಾನದ ಪ್ರತಿಯನ್ನು ಕೈಯಲ್ಲಿ ಹಿಡಿದು ಪ್ರಮಾಣ ವಚನವನ್ನು ಸ್ವೀಕರಿಸಿರುವ ರಾಹುಲ್ ಗಾಂಧಿಯವರು ಸಂಸತ್ತಿನಲ್ಲಿ ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿದು ಅದರ ಮೇಲೆ ನಡೆಯುತ್ತಿರುವ ದಾಳಿಯ ವಿರುದ್ಧ ಧ್ವನಿ ಎತ್ತುವರು ಎಂಬ ನಿರೀಕ್ಷೆ ಹುಸಿಯಾಗುವುದಿಲ್ಲ ಎಂಬ ಭರವಸೆ ಇದೆ.

share
ಸನತ್‌ಕುಮಾರ್ ಬೆಳಗಲಿ
ಸನತ್‌ಕುಮಾರ್ ಬೆಳಗಲಿ
Next Story
X