Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಪ್ರಚಲಿತ
  5. ಜನತಂತ್ರ ಸುರಕ್ಷಿತ, ಆತಂಕ ನಿರಂತರ

ಜನತಂತ್ರ ಸುರಕ್ಷಿತ, ಆತಂಕ ನಿರಂತರ

ಸನತ್ ಕುಮಾರ ಬೆಳಗಲಿಸನತ್ ಕುಮಾರ ಬೆಳಗಲಿ10 Jun 2024 9:49 AM IST
share
ಜನತಂತ್ರ ಸುರಕ್ಷಿತ, ಆತಂಕ ನಿರಂತರ
ಒಟ್ಟಾರೆ ಭಾರತ ಸದ್ಯದ ಮಟ್ಟಿಗೆ ಮನುವಾದಿ, ಕೋಮುವಾದಿ ಫ್ಯಾಶಿಸ್ಟ್ ಶಕ್ತಿಗಳ ಅಪಾಯದಿಂದ ಪಾರಾಗಿದೆ.ಆದರೆ ಹಾಗೆಂದು ಮೈ ಮರೆಯಬಾರದು. ಫ್ಯಾಶಿಸಂ ಜರ್ಮನಿ ಮತ್ತು ಇಟಲಿಗಳಲ್ಲಿ ಚುನಾವಣೆಯ ಮೂಲಕ ಅಧಿಕಾರಕ್ಕೆ ಬಂದರೂ ಅದರ ಸೋಲು ಚುನಾವಣೆಯಿಂದ ಆಗಲಿಲ್ಲ. ಜನತೆಯ ಪ್ರತಿರೋಧ ಮತ್ತು ಆಗ ಪ್ರಬಲವಾಗಿದ್ದ ಸಮಾಜವಾದಿ ಸೋವಿಯತ್ ರಶ್ಯ ಮತ್ತು ಸ್ಟಾಲಿನ್ ಅವರಂಥ ಜನ ನಾಯಕರಿಂದಾಗಿ ಜರ್ಮನಿಯಲ್ಲಿ ಹಿಟ್ಲರ್ , ಇಟಲಿಯಲ್ಲಿ ಮುಸ್ಸೋಲಿನಿ ಮಣ್ಣು ಮುಕ್ಕಿದರು.

ಲೋಕಸಭಾ ಚುನಾವಣೆಯ ಫಲಿತಾಂಶಗಳು ಪ್ರಕಟವಾಗಿ ಒಂದು ವಾರವಾಯಿತು. ಕುಲದ ಮದ ಮತ್ತು ಜನಾಂಗ ದ್ವೇಷದ ದುರಹಂಕಾರದಿಂದ ಹೂಂಕರಿಸುತ್ತಿದ್ದವರಿಗೆ ಜನ ಸರಿಯಾದ ಪಾಠ ಕಲಿಸಿದ್ದಾರೆ. ಈ ಚುನಾವಣೆಯಲ್ಲಿ ಸಂವಿಧಾನ ಮತ್ತು ಪ್ರಜಾಪ್ರಭುತ್ವಕ್ಕೆ ಎದುರಾದ ಅಪಾಯವನ್ನು ಅರಿತ ಭಾರತೀಯರು ತಮ್ಮ ಪರಮಾಧಿಕಾರದ ಮೂಲಕ ಸದ್ಯಕ್ಕೆ ದೇಶವನ್ನು ಅಪಾಯದಿಂದ ಪಾರು ಮಾಡಿದರು. ಚುನಾವಣಾ ಆಯೋಗ ಕಟ್ಟುನಿಟ್ಟಾಗಿ ಕಾರ್ಯ ನಿರ್ವಹಿಸಿದ್ದರೆ ಬಿಜೆಪಿ ಈಗ ಗೆದ್ದಷ್ಟು ಸ್ಥಾನಗಳನ್ನೂ ಗೆಲ್ಲುತ್ತಿರಲಿಲ್ಲ. ಆದರೆ, ಎಲ್ಲ ಅಕ್ರಮ ಮಾರ್ಗಗಳನ್ನು ಬಳಸಿಕೊಂಡ ನಂತರವೂ ಬಿಜೆಪಿಯೊಂದೇ ಸ್ವತಂತ್ರವಾಗಿ ಅಧಿಕಾರಕ್ಕೆ ಬರಲು ಬೇಕಾದ 272 ಸ್ಥಾನಗಳನ್ನು ಪಡೆಯಲು ಸಾಧ್ಯವಾಗಲಿಲ್ಲ. ಈಗ ಹೆಸರಿಗೆ ಮೋದಿ ಪ್ರಧಾನಿಯಾಗಿದ್ದರೂ ತೆಲುಗು ದೇಶಂನ ಚಂದ್ರಬಾಬು ನಾಯ್ಡು ಮತ್ತು ಸಂಯುಕ್ತ ಜನತಾ ದಳದ ನಿತೀಶ್ ಕುಮಾರ್ ಅವರು ಹಾಕಿದ ಗೆರೆಯನ್ನು ದಾಟುವುದು ಸುಲಭವಲ್ಲ. ಆದರೂ ಮೈ ಮರೆತು ಇರುವಂತಿಲ್ಲ.

ಈ ಚುನಾವಣೆಯಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಮಾತ್ರವಲ್ಲ ನೈತಿಕವಾಗಿ ದಿವಾಳಿಯಾದ ಭಾರತದ ಮಾಧ್ಯಮಗಳು ವಿಶೇಷವಾಗಿ ಟೀವಿ ವಾಹಿನಿಗಳು ವಿಶ್ವಾಸಾರ್ಹತೆ ಕಳೆದುಕೊಂಡವು. ಅವುಗಳ ಮತದಾನೋತ್ತರ ಸಮೀಕ್ಷೆಗಳು ನೆಗೆದು ಬಿದ್ದವು.

ಈ ಚುನಾವಣೆಯಲ್ಲಿ ಮೋದಿ ಮತ್ತು ಕೋಮು ವಾದಿಗಳಿಗಾದ ಮುಖಭಂಗವನ್ನು ಮರೆ ಮಾಚಿ, ಯಾರಿಗೂ ಬಹುಮತ ಬಂದಿಲ್ಲ ಎಂಬಂಥ ತಿಪ್ಪೆ ಸಾರಿಸುವ ವಿಶ್ಲೇಷಣೆಗಳೂ ನಡೆದಿವೆ.

ಆದರೆ,ವಾಸ್ತವವಾಗಿ ಜನ ನೇರವಾಗಿ ಮೋದಿ ನೇತೃತ್ವದ ಬಿಜೆಪಿಯನ್ನು ತಿರಸ್ಕರಿಸಿದ್ದಾರೆ. ಈ ಚುನಾವಣೆಯಲ್ಲಿ ಬಿಜೆಪಿ ಅಥವಾ ಎನ್‌ಡಿಎ ಆಗಲಿ ತಮ್ಮ 14 ವರ್ಷಗಳ ಸರಕಾರದ ಸಾಧನೆಯ ಮೇಲೆ ಮತ ಯಾಚಿಸಲಿಲ್ಲ. ಬರೀ ಮೋದಿಯವರ ಹೆಸರು ಹೇಳಿ ಅವರಿಗೆ ಮತ ನೀಡುವಂತೆ ಪ್ರಚಾರ ನಡೆಸಿದವು. ಆದರೆ, ವಾಸ್ತವವಾಗಿ ಕಳೆದ 14 ವರ್ಷಗಳ ಇವರ ದುರಾಡಳಿತ, ಸಾಂವಿಧಾನಿಕ ಸಂಸ್ಥೆಗಳ ನಾಶ, ಪ್ರತಿಪಕ್ಷ ನಾಯಕರ ಮನೆಗೆ ಸಿಬಿಐ, ಐಟಿ, ಈ.ಡಿ. ಕಳಿಸಿ ದಾಳಿ, ಬಿಜೆಪಿ ಸೇರಿದವರಿಗೆ ರಕ್ಷಣೆ, ಚುನಾಯಿತ ಸರಕಾರಗಳನ್ನು ಉರುಳಿಸಿದ್ದು,ಮುಖ್ಯಮಂತ್ರಿಗಳನ್ನೇ ಜೈಲಿಗೆ ಹಾಕಿದ್ದು, ಏಕ ವ್ಯಕ್ತಿ ನಾಯಕತ್ವದ ನಿರಂಕುಶ ಆಡಳಿತ, ಸಾಂವಿಧಾನ ನಾಶಕ್ಕೆ ಮಸಲತ್ತು, ಒಂದೇ ದೇಶ, ಒಂದೇ ಧರ್ಮ, ಒಂದೇ ಭಾಷೆ ಹೆಸರಿನಲ್ಲಿ ಬಹುತ್ವ ಭಾರತದ ಮೇಲೆ ಹಲ್ಲೆ, ಮನುವಾದಿ ಹಿಂದೂರಾಷ್ಟ್ರ ಸ್ಥಾಪನೆಯ ಕುತಂತ್ರ ಎಲ್ಲವನ್ನೂ ಜನ ತಿರಸ್ಕರಿಸಿದರು.

ಅಂಕಿ ಅಂಶಗಳು ಸತ್ಯ ಹೇಳುತ್ತವೆ. ಬಿಜೆಪಿ ಸ್ವತಂತ್ರ ವಾಗಿ ಗೆದ್ದಿದ್ದು ಬರೀ 226 ಸ್ಥಾನ ಮಾತ್ರ. ಮೋದಿ ಸೋಲಿನ ಹೊಣೆ ಹೊತ್ತು ಬಹಿರಂಗವಾಗಿ ಕ್ಷಮೆ ಯಾಚಿಸಿ ರಾಜಕೀಯ ನಿವೃತ್ತಿ ಪಡೆದು ಅಡ್ವಾಣಿಯವರ ಜೊತೆ ಮಾರ್ಗದರ್ಶಕ ಮಂಡಳಿ ಸೇರಬೇಕಿತ್ತು. ಅಧಿಕಾರ ದಾಹವು ನಾಯ್ಡು, ನಿತೀಶ್ ಸೇರಿ ಮಿತ್ರ ಪಕ್ಷಗಳ ಕಾಲು ಹಿಡಿಯುವಂಥ ಸ್ಥಿತಿಗೆ ನೂಕಿತು. ಅವರಿಬ್ಬರೂ ಸುಮ್ಮನೆ ಬೆಂಬಲ ಕೊಡುವುದಿಲ್ಲ. ನೂರೆಂಟು ಷರತ್ತುಗಳನ್ನು ಹಾಕುತ್ತಾರೆ.ಈಗ ಏನಿದ್ದರೂ ಬಾಲ ಮುದುಡಿಕೊಂಡಿರಬೇಕು.ಅಮಿತ್‌ಶಾ ಆಟವಂತೂ ನಡೆಯುವುದಿಲ್ಲ. ಹಾವಿನಪುರದ ಗುರುಗಳ ಹಸ್ತಕ್ಷೇಪವೂ ಸುಲಭವಲ್ಲ.

ಜನಾಂಗ ದ್ವೇಷದ ಕೋಮುವಾದಿ ಕಾರ್ಯಸೂಚಿಗಳಿಗೆ ಆಯುಷ್ಯ ಕಡಿಮೆ ಎಂಬುದು ಈ ಚುನಾವಣೆಯಲ್ಲಿ ಸ್ಪಷ್ಟವಾಯಿತು. ಅಯೋಧ್ಯೆಯ ರಾಮ ಮಂದಿರದ ವಿಷಯವನ್ನು ಕ್ಷುಲ್ಲಕ ರಾಜಕೀಯಕ್ಕೆ ಬಳಸಿಕೊಂಡ ಬಿಜೆಪಿಯನ್ನು ಅಯೋಧ್ಯೆ ಸೇರಿದಂತೆ ಉತ್ತರ ಪ್ರದೇಶ ಜನ ಸೋಲಿಸಿದರು. ಯೋಗಿ ಎಂದು ಕರೆಯಲ್ಪಡುವ ಅವಿವೇಕಿ ಆದಿತ್ಯನಾಥನ ಮಾದರಿಯನ್ನು ದೇಶವೇ ಅನುಸರಿಸಬೇಕೆಂದು ಪ್ರಚಾರ ಮಾಡಿ ಹುಸಿ ಇಮೇಜನ್ನು ಸೃಷ್ಟಿಸಲಾಗಿತ್ತು.ಆತನ ಬುಲ್ಡೋ

ಜರ್ ಕ್ರೌರ್ಯವನ್ನು ಮಹಾ ಪರಾಕ್ರಮ ಎಂಬಂತೆ ಬಿಂಬಿಸಲಾಗಿತ್ತು.ಅದೆಲ್ಲ ಟೊಳ್ಳೆಂದು ಸಾಬೀತಾಯಿತು. ಸ್ವತಃ ನರೇಂದ್ರ ಮೋದಿಯವರೇ ವಾರಣಾಸಿಯಲ್ಲಿ ಕಡಿಮೆ ಅಂತರದಲ್ಲಿ ಏದುಸಿರು ಬಿಡುತ್ತ ಗೆದ್ದು ಬಂದರು.

ಆದರೆ, ಈ ಫಲಿತಾಂಶದಿಂದ ಮರೆತು ಕುಳಿತು ಕೊಳ್ಳುವಂತಿಲ್ಲ. ಉತ್ತರ ಪ್ರದೇಶ, ಮಹಾರಾಷ್ಟ್ರ ಮತ್ತು ಹರ್ಯಾಣದಲ್ಲಿ ಏಟು ತಿಂದ ಕೋಮುವಾದಿ ವಿಷಸರ್ಪ ಅಲ್ಲಿಂದ ತಪ್ಪಿಸಿಕೊಂಡು ಒಡಿಶಾ ಮತ್ತು ಕರ್ನಾಟಕ ಪ್ರವೇಶಿಸಿದೆ. ಹೊಸ ನೆಲೆಗಳನ್ನು ಕಂಡುಕೊಳ್ಳಲು ಯತ್ನಿಸುತ್ತಿದೆ.ನಾರಾಯಣ ಗುರುಗಳು ಮತ್ತು ಎಡಪಂಥೀಯರ ಕೇರಳದಲ್ಲಿ ಅದರ ಮತ ಗಳಿಕೆ ಪ್ರಮಾಣ ಹೆಚ್ಚಿದೆ. ಆದರೆ ಪೆರಿಯಾರರ ತಮಿಳುನಾಡಿನಲ್ಲಿ ಅದರ ಬಾಲವನ್ನು ಮತದಾರರು ಕತ್ತರಿಸಿದ್ದಾರೆ.

ಕಳೆದ ಲೋಕಸಭಾ ಚುನಾವಣೆಗೆ ಹೋಲಿಸಿದರೆ ಬಿಜೆಪಿ ಹಿಂದೆ ಗೆದ್ದಿದ್ದ 303 ಲೋಕಸಭಾ ಕ್ಷೇತ್ರಗಳ ಪೈಕಿ 92 ಕ್ಷೇತ್ರಗಳನ್ನು ಕಳೆದುಕೊಂಡಿದೆ. 208 ಕ್ಷೇತ್ರಗಳನ್ನು ಉಳಿಸಿಕೊಂಡಿದೆ.ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ 29 ಕ್ಷೇತ್ರಗಳನ್ನು ಬಿಜೆಪಿ ಕಳೆದುಕೊಂಡಿದೆ.ಸೋತ ಬಹುತೇಕ ಮತಕ್ಷೇತ್ರಗಳು ಗ್ರಾಮೀಣ ಪ್ರದೇಶದಲ್ಲಿವೆ. ಇದರಲ್ಲಿ 43 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಜಯಶಾಲಿಯಾಗಿದೆ. ಮಹಾರಾಷ್ಟ್ರದ 9, ಕರ್ನಾಟಕದ 8 ಹಾಗೂ ರಾಜಸ್ಥಾನದ 8 ಕ್ಷೇತ್ರಗಳು ಸೇರಿವೆ. ಬಿಜೆಪಿಗೆ ಬಹುದೊಡ್ಡ ಮುಖಭಂಗವಾಗಿದ್ದು ಉತ್ತರ ಪ್ರದೇಶದಲ್ಲಿ. ಈ ರಾಜ್ಯದಲ್ಲಿ 29 ಕ್ಷೇತ್ರಗಳನ್ನು ಅದು ಕಳೆದುಕೊಂಡಿದೆ. ಬಿಜೆಪಿ ಹೊಸದಾಗಿ ನೆಲೆ ಕಂಡುಕೊಂಡಿದ್ದು ಒಡಿಶಾದಲ್ಲಿ 12, ತೆಲಂಗಾಣದಲ್ಲಿ 4, ಆಂಧ್ರಪ್ರದೇಶದಲ್ಲಿ 3 ಮತ್ತು ಪಶ್ಚಿಮ ಬಂಗಾಳದಲ್ಲಿ 2ಸ್ಥಾನಗಳನ್ನು ಅದು ಗೆದ್ದಿದೆ.

ಬಿಜೆಪಿ ಜಯಶಾಲಿಯಾದ ಮತಕ್ಷೇತ್ರಗಳನ್ನು ಗಮನಿಸಿದರೆ ಮೊದಲ ಮೂರು ಹಂತದ ಚುನಾವಣೆಯಲ್ಲಿ ಅದು ಬಹುತೇಕ ಸೋತಿದೆ.ಇದನ್ನು ಗಮನಿಸಿದ ನರೇಂದ್ರ ಮೋದಿಯವರು ಅತ್ಯಂತ ಜನಾಂಗ ದ್ವೇಷದ ಮುಸ್ಲಿಮ್ ವಿರೋಧಿ ಭಾಷಣಗಳನ್ನು ಮಾಡತೊಡಗಿದರು. ಅಲ್ಲಿ ಕೋಮು ಧ್ರುವೀಕರಣ ಬಿಜೆಪಿಗೆ ಅನುಕೂಲ ವಾಗಿದೆ.

ಈ ಚುನಾವಣೆಯಲ್ಲಿ ಅತ್ಯಂತ ಚಿಂತಾಜನಕ ಸ್ಥಿತಿಯಲ್ಲಿ ಪರಾಭವಗೊಂಡಿದ್ದು ಮಾಯಾವತಿಯವರ ಬಹುಜನ ಸಮಾಜ ಪಕ್ಷ. ಮನುವಾದಿ ಫ್ಯಾಶಿಸ್ಟ್ ಶಕ್ತಿಯ ವಿರುದ್ಧ ಎಲ್ಲಾ ಪ್ರಗತಿಪರ ಶಕ್ತಿಗಳು ಒಂದುಗೂಡಿ ಹೋರಾಟಕ್ಕಿಳಿದರೆ ಬಿಎಸ್ಪಿ ಪ್ರತ್ಯೇಕವಾಗಿ ಸ್ಪರ್ಧಿಸಿ ಪರೋಕ್ಷವಾಗಿ ಮನುವಾದಿ, ಕೋಮುವಾದಿ ಬಿಜೆಪಿ ಗೆಲುವಿಗೆ ನೆರವಾಯಿತು ಎಂಬ ಆರೋಪದಲ್ಲಿ ಹುರುಳಿಲ್ಲದಿಲ್ಲ. ಬಾಬಾಸಾಹೇಬರ ನಂತರ ಈ ದೇಶ ಕಂಡ ಮಹಾನಾಯಕ ಕಾನ್ಶಿರಾಮ್ ಸೈಕಲ್ ಮೇಲೆ ಹಳ್ಳಿ ,ಹಳ್ಳಿ ಸುತ್ತಾಡಿ ಬೆವರು ಸುರಿಸಿ ಕಟ್ಟಿದ ಬಿಎಸ್ಪಿ ಪರಾಭವ ಕಳವಳ ಪಡಬೇಕಾದ ಸಂಗತಿ. ದಮನಿತ ಸಮುದಾಯದ ಭವಿಷ್ಯದ ದೃಷ್ಟಿಯಿಂದ ಬಿಎಸ್ಪಿ ಮತ್ತೆ ಚೇತರಿಸಬೇಕಾಗಿದೆ.

ಉಳಿದಂತೆ ಎಡಪಂಥೀಯ ಪಕ್ಷಗಳು ಈ ಸಲ ಕೊಂಚ ಚೇತರಿಸಿವೆ.ಕಳೆದ ಬಾರಿ ಕೇವಲ 4 ಸ್ಥಾನಗಳನ್ನು ಗೆದ್ದಿದ್ದ ಕಮ್ಯುನಿಸ್ಟ್ ಪಕ್ಷಗಳು ಈ ಸಲ ಎಂಟು ಸ್ಥಾನಗಳನ್ನು ಗೆದ್ದಿವೆ.ಆದರೆ ಭಾರತದ ಮೊದಲ ಲೋಕಸಭೆಯಲ್ಲಿ ಕಾಂಗ್ರೆಸ್ ನಂತರ ಅತ್ಯಂತ ಹೆಚ್ಚು ಸ್ಥಾನ ಗೆದ್ದು ಪ್ರತಿಪಕ್ಷದ ಸ್ಥಾನಮಾನ ಗಳಿಸಿದ ಕಮ್ಯುನಿಸ್ಟ್ ಪಕ್ಷಗಳ ಈ ಗೆಲುವು ಆತ್ಮಾವಲೋಕನಕ್ಕೆ ಸಕಾಲ.ಕಮ್ಯುನಿಸ್ಟರ ಕೋಟೆಗಳಾಗಿದ್ದ ಪಶ್ಚಿಮ ಬಂಗಾಳ ಮತ್ತು ತ್ರಿಪುರಾಗಳು ಯಾಕೆ ಕೈ ತಪ್ಪಿದವು.ಕೇರಳದಲ್ಲಿ ಕೋಮುವಾದಿ ಪಕ್ಷ ಚಿಗುರಲು ಹೇಗೆ ಸಾಧ್ಯವಾಯಿತು. ಆಂಧ್ರ ಪ್ರದೇಶದಲ್ಲಿ ಐವತ್ತರ ದಶಕದಲ್ಲಿ ವಿಧಾನಸಭೆಯ ನಲವತ್ತೆಂಟು ಕ್ಷೇತ್ರಗಳನ್ನು ಗೆಲ್ಲುವ ಮೂಲಕ ಕಮ್ಯುನಿಸ್ಟ್ ಪಕ್ಷ ಮುಖ್ಯ ವಿರೋಧ ಪಕ್ಷವಾಗಿತ್ತು.ತರಿಮಲ ನಾಗಿರೆಡ್ಡಿ ಪ್ರತಿಪಕ್ಷ ನಾಯಕರಾಗಿದ್ದರು.ಆದರೆ ಇಬ್ಭ್ಬಾಗಗೊಂಡ ಆಂಧ್ರಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ ಕಮ್ಯುನಿಸ್ಟ್ ಪಕ್ಷ ಜಯಶಾಲಿಯಾಗಿಲ್ಲ.ಬಹಳ ಹಿಂದೆ ಅಲ್ಲ 2004 ರಲ್ಲಿ ಲೋಕಸಭೆಯ 62 ಸ್ಥಾನಗಳನ್ನು ಗೆದ್ದಿದ್ದ ಕಮ್ಯುನಿಸ್ಟ್ ಪಕ್ಷಗಳು ಬದಲಾದ ರಾಜಕೀಯ ಪರಿಸ್ಥಿತಿ ಯಲ್ಲಿ ಕ್ಷೀಣಿಸುತ್ತ ಬಂದವು. ಆದರೆ, ಸಂಪೂರ್ಣ ನೆಲ ಕಚ್ಚಿಲ್ಲ. ಇವತ್ತಿನ ನವ ಉದಾರವಾದಿ ಆರ್ಥಿಕ ನೀತಿಗೆ ನೈಜ ಪರ್ಯಾಯದ ಪರಿಕಲ್ಪನೆ ಯನ್ನು ಹೊಂದಿರುವ ಕಮ್ಯುನಿಸ್ಟ್ ಪಕ್ಷಗಳು ಸ್ವಯಂ ವಿಮರ್ಶೆ ಮಾಡಿಕೊಂಡು ಹೊರ ಹೊಮ್ಮಿದರೆ ಇನ್ನೂ ಅವಕಾಶವಿದೆ.

ಈ ಚುನಾವಣೆಯಲ್ಲಿ ಬಹುಮತ ಗಳಿಸದ ಬಿಜೆಪಿಯ ಶೋಚನೀಯ ಸ್ಥಿತಿಯಿಂದ ಅದು ಸಂಪೂರ್ಣ ನೆಲೆ ಕಳೆದುಕೊಂಡಿದೆಯೆಂದಲ್ಲ. ಕೋಮುವಾದಿ ಹಿಂದುತ್ವದ ಬೇರುಗಳನ್ನು ಬರೀ ಒಂದು ಚುನಾವಣೆಯಿಂದ ಅಳಿಸಿ ಹಾಕಲು ಆಗುವುದಿಲ್ಲ. ಅಮಾಯಕ ಜನರ ಮನಸ್ಸಿನಾಳದಲ್ಲಿ ನೆಲೆ ಕಂಡುಕೊಂಡಿರುವ ಮುಸ್ಲಿಂ ಮತ್ತು ದಲಿತ ವಿರೋಧಿ ದ್ವೇಷ ಹಿಂದುತ್ವದ ಮೂಲ. ಸೈದ್ಧಾಂತಿಕವಾಗಿ ಅದರ ವಿರುದ್ಧ ನಿರಂತರ ಹೋರಾಟ ತುರ್ತು ಅಗತ್ಯವಾಗಿದೆ.

ಕರ್ನಾಟಕದ ಮಟ್ಟಿಗೆ ಹೇಳಬೇಕೆಂದರೆ ಇಲ್ಲಿ ಪ್ರಬಲ ಫ್ಯೂಡಲ್ ವರ್ಗಗಳ ಮತ್ತು ಜಾತಿಗಳ ನಡುವೆ ಕೋಮುವಾದ ನೆಲೆಯೂರುತ್ತಿದೆ.ಜೆಡಿಎಸ್ ಜೊತೆಗೆ ಮಾಡಿಕೊಂಡ ಮೈತ್ರಿ ದಕ್ಷಿಣ ಕರ್ನಾಟಕದ ಲ್ಲಿ ಬಿಜೆಪಿ ನೆಲೆ ವಿಸ್ತರಿಸಿಕೊಳ್ಳಲು ನೆರವಾಯಿತು. ಉತ್ತರ ಕರ್ನಾಟಕದಲ್ಲಿ ಹಿಂದೆ ಮುಂಬೈ ಪ್ರಾಂತಕ್ಕೆ ಸೇರಿದ ಈಗ ಕಿತ್ತೂರು ಕರ್ನಾಟಕ ಎಂದು ಕರೆಯಲ್ಪಡುವ ಧಾರವಾಡ, ಹಾವೇರಿ, ಬೆಳಗಾವಿ, ಬಿಜಾಪುರ, ಬಾಗಲಕೋಟೆ, ಕಾರವಾರ ಕ್ಷೇತ್ರಗಳಲ್ಲಿ ಬಿಜೆಪಿ ವೀರಶೈವ ಲಿಂಗಾಯತರು ಮಾತ್ರವಲ್ಲ ಕೆಲವು ಹಿಂದುಳಿದ ವರ್ಗಗಳ ನೆರವಿನಿಂದ ಜಯಶಾಲಿಯಾಗಿದೆ. ಚಿಕ್ಕೋಡಿ ಕ್ಷೇತ್ರದಲ್ಲಿ ಮಾತ್ರ ಸಚಿವ ಸತೀಶ ಜಾರಕಿಹೊಳಿ ಅವರು ಅಪಾರ ಪರಿಶ್ರಮ ಪಟ್ಟು ಕೋಮುವಾದಿ ಶಕ್ತಿಗಳ ವಿರುದ್ಧ ಸಮರ ಸಾರಿ ತಮ್ಮ ಪುತ್ರಿ ಪ್ರಿಯಾಂಕಾ ಅವರನ್ನು ಗೆಲ್ಲಿಸಿದ್ದಾರೆ.

ಇನ್ನು ಕರ್ನಾಟಕದ ಸೌಹಾರ್ದ ಸಂಸ್ಕೃತಿಯ ಮಾನ, ಮರ್ಯಾದೆಯನ್ನು ಕಾಪಾಡಿದವರು ಮಲ್ಲಿಕಾರ್ಜುನ ಖರ್ಗೆಯವರ ಕಲ್ಯಾಣ ಕರ್ನಾಟಕದ ಜನ ಎಂದು ಹೇಳಿದರೆ ತಪ್ಪಿಲ್ಲ. ಹಿಂದೆ ಹೈದರಾಬಾದ್ ಪ್ರಾಂತಕ್ಕೆ ಸೇರಿದ ಕಲಬುರಗಿ, ಬೀದರ್,ರಾಯಚೂರು, ಕೊಪ್ಪಳ ಹಾಗೂ ಹಿಂದೆ ಮದ್ರಾಸ್ ಪ್ರಾಂತದಲ್ಲಿ ಇದ್ದ ಬಳ್ಳಾರಿ ಕ್ಷೇತ್ರಗಳಲ್ಲಿ ಕೋಮುವಾದಿ ಬಿಜೆಪಿಯನ್ನು ಜನತೆ ತಿರಸ್ಕರಿಸಿದ್ದಾರೆ.ಬಸವಣ್ಣನವರು ಮತ್ತು ಬಾಬಾಸಾಹೇಬರು ನಡೆದಾಡಿದ ಕಲ್ಯಾಣ ಕರ್ನಾಟಕದ ಜನತೆಯ ತೀರ್ಪು ಪ್ರಜಾಪ್ರಭುತ್ವ ಮತ್ತು ಸಂವಿಧಾನದ ರಕ್ಷಣೆಗೆ ಶಕ್ತಿಯನ್ನೊದಗಿಸಿದೆ.

ಒಟ್ಟಾರೆ ಭಾರತ ಸದ್ಯದ ಮಟ್ಟಿಗೆ ಮನುವಾದಿ, ಕೋಮುವಾದಿ ಫ್ಯಾಶಿಸ್ಟ್ ಶಕ್ತಿಗಳ ಅಪಾಯದಿಂದ ಪಾರಾಗಿದೆ.ಆದರೆ ಹಾಗೆಂದು ಮೈ ಮರೆಯಬಾರದು. ಫ್ಯಾಶಿಸಂ ಜರ್ಮನಿ ಮತ್ತು ಇಟಲಿಗಳಲ್ಲಿ ಚುನಾವಣೆಯ ಮೂಲಕ ಅಧಿಕಾರಕ್ಕೆ ಬಂದರೂ ಅದರ ಸೋಲು ಚುನಾವಣೆಯಿಂದ ಆಗಲಿಲ್ಲ. ಜನತೆಯ ಪ್ರತಿರೋಧ ಮತ್ತು ಆಗ ಪ್ರಬಲವಾಗಿದ್ದ ಸಮಾಜವಾದಿ ಸೋವಿಯತ್ ರಶ್ಯ ಮತ್ತು ಸ್ಟಾಲಿನ್ ಅವರಂಥ ಜನ ನಾಯಕರಿಂದಾಗಿ ಜರ್ಮನಿಯಲ್ಲಿ ಹಿಟ್ಲರ್ , ಇಟಲಿಯಲ್ಲಿ ಮುಸ್ಸೋಲಿನಿ ಮಣ್ಣು ಮುಕ್ಕಿದರು ಸೋವಿಯತ್ ರಶ್ಯದ ಕೆಂಪುಸೇನೆ ಜಗತ್ತನ್ನು ಫ್ಯಾಶಿಸ್ಟ್ ಅಪಾಯದಿಂದ ಪಾರು ಮಾಡಿತು. ಆದರೆ ಅಂದಿನ ಮತ್ತು ಇಂದಿನ ಜಾಗತಿಕ ಪರಿಸ್ಥಿತಿಯಲ್ಲಿ ಸಾಕಷ್ಟು ಬದಲಾವಣೆಯಾಗಿದೆ.ರಶ್ಯ ಈಗ ಸಮಾಜವಾದಿ ರಾಷ್ಟ್ರ ವಾಗಿ ಉಳಿದಿಲ್ಲ. ಇಂಥ ಸನ್ನಿವೇಶದಲ್ಲಿ ಭಾರತದಲ್ಲಿ ತಲೆ ಯೆತ್ತಿದ ಹಿಂದುತ್ವವಾದಿ ಫ್ಯಾಶಿಸಸಂನ್ನು ಹಿಮ್ಮೆಟ್ಟಿಸಲು ನಿರಂತರ ಜನ ಹೋರಾಟಗಳು ಅನಿವಾರ್ಯ. ಇಲ್ಲಿ ಎಂಥ ಬಿಕ್ಕಟ್ಟಿನ ಕಾಲದಲ್ಲೂ ಬಹುತ್ವ ಭಾರತವನ್ನು ಕಾಪಾಡಬಲ್ಲ ಬಾಬಾಸಾಹೇಬರ ಸಂವಿಧಾನವಿದೆ .ಸಂವಿಧಾನದ ತಂಟೆಗೆ ಬಂದರೆ ಸುಮ್ಮನಿರುವುದಿಲ್ಲವೆಂದು ಭಾರತದ ದಲಿತ, ದಮನಿತ,ಅಲ್ಪಸಂಖ್ಯಾತ ಮತ್ತು ಎಲ್ಲಾ ಜಾತಿಗಳ ಶ್ರಮಿಕ ಸಮುದಾಯಗಳು ಈ ಚುನಾವಣೆಯಲ್ಲಿ ಎಚ್ಚರಿಕೆ ನೀಡಿವೆ.ಈ ಹಿನ್ನೆಲೆಯಲ್ಲಿ ‘ಇಂಡಿಯಾ’ ಎಂಬ ಸಮಾನ ಮನಸ್ಕರ ಒಕ್ಕೂಟ ನಿರಂತರವಾದ ಜಾಗ್ರತಿ ಮೂಲಕ ಭಾರತದ ಜನತೆ ಕಾಪಾಡಿದ ಸಂವಿಧಾನ ಮತ್ತು ಪ್ರಜಾಪ್ರಭುತ್ವ ಮೌಲ್ಯಗಳನ್ನು ಉಳಿಸಿಕೊಳ್ಳಬೇಕಾಗಿದೆ.

ತಾನು ಪ್ರಧಾನಿಯಾಗಲು ತೆಲುಗು ದೇಶಂನ ಚಂದ್ರಬಾಬು ನಾಯ್ಡು ಮತ್ತು ಸಂಯುಕ್ತ ಜನತಾದಳದ ನಿತೀಶ್ ಕುಮಾರ್ ಅವರನ್ನು ಅವಲಂಬಿಸಿರುವ ಮೋದಿಯವರು ಮತ್ತು ಅವರ ನಾಗಪುರದ ಗುರುಗಳು ಇಷ್ಟಕ್ಕೆ ತಮ್ಮ ಕಾರ್ಯಸೂಚಿಯನ್ನು ಕೈ ಬಿಡುತ್ತಾರೆಂದು ನಂಬಿದರೆ ಅದು ಮೂರ್ಖತನವಾಗುತ್ತದೆ. ಮುಂದಿನ ದಿನಗಳಲ್ಲಿ ಬೆಂಬಲ ನೀಡಿರುವ ಪಕ್ಷಗಳನ್ನೇ ಒಡೆದು ಮುಳುಗಿಸುವ ದಗಾಕೋರರನ್ನು ನಂಬಲು ಆಗುವುದಿಲ್ಲ.

ಅಷ್ಟೇ ಅಲ್ಲ, ಇಂಡಿಯಾ ಕೂಟದ ಸಣ್ಣಪುಟ್ಟ ಪಕ್ಷಗಳನ್ನು, ಸಂಸದರನ್ನು ಆಮಿಷವೊಡ್ಡಿ ಒಳಗೆ ಹಾಕಿಕೊಳ್ಳಬಹುದು. ಇನ್ನು ಮೋದಿಯವರಿಗೆ ಬೆಂಬಲ ನೀಡಿರುವ ಪಕ್ಷಗಳಿಂದ ಹೆಚ್ಚಿನ ನಿರೀಕ್ಷೆ ಇಟ್ಟುಕೊಳ್ಳುವಂತಿಲ್ಲ. ಬಹಿರಂಗವಾಗಿ ತನ್ನದೇ ವಯಸ್ಸಿನ ನರೇಂದ್ರ ಮೋದಿಯವರ ಕಾಲಿಗೆ ಬೀಳುವ ನಿತೀಶ್ ಕುಮಾರ್ ಅವರಂಥ ಕೊಡಂಗಿಗಳು ಇರುವಾಗ ಬಿಜೆಪಿ ಇಂದಲ್ಲ ನಾಳೆ ತನ್ನ ಅಜೆಂಡಾ ಜಾರಿಗೆ ಮತ್ತೆ ಯತ್ನಿಸಬಹುದು. ಆದ್ದರಿಂದ ನಿರಂತರ ಎಚ್ಚರಿಕೆಯಿಂದ ಭಾರತದ ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ಕಾಪಾಡಿಕೊಳ್ಳಬೇಕಾಗಿದೆ.

share
ಸನತ್ ಕುಮಾರ ಬೆಳಗಲಿ
ಸನತ್ ಕುಮಾರ ಬೆಳಗಲಿ
Next Story
X